ಪ್ರಚಲಿತ

ಗುಜರಾತಿನ ಮುಸಲ್ಮಾನರು ರಾಹುಲ್ ಗಾಂಧಿ ಮಾಡಿದ ಈ ಮಹಾ ಪ್ರಮಾದಿಂದಾಗಿ ಪ್ರಾಣ ಹೋದರೂ ಕಾಂಗ್ರೆಸ್ಸಿಗೆ ಮತ ನೀಡಲಾರರು!!

ಮುಸ್ಲಿಮರು ಕಾಂಗ‌್ರೆಸ್ ನನ್ನು ತೊರೆದು ದ್ರೋಹ ಬಗೆದರು ಎನ್ನುವ ಮಾತಿಗಿಂತ ಬಹುಷಃ ಕಾಂಗ್ರೆಸ್ ಗುಜರಾತಿನ ಮುಸಲ್ಮಾನರನ್ನು ತುಳಿದು ಬದಿಗೆ ಸರಿಸಿತು
ಎನ್ನುವುದು ಹೆಚ್ಚು ಸೂಕ್ತವಾಗುತ್ತದೆ! 2002 ರ ಗೋಧ್ರಾ ಗಲಭೆಯಾದ ನಂತರ, ಪ್ರತಿಯೊಬ್ಬ ಮುಸಲ್ಮಾನ ಪ್ರಜೆಯನ್ನೂ ಪ್ರೀತು ಗೌರವಾದರಗಳಿಂದಲೇ ಮೋದಿ ಕಂಡಿದ್ದರೂ ಸಹ, ಬಿಳಿಗೋಡೆಯಲ್ಲೊಂದು.ಕಪ್ಪು ಚುಕ್ಕೆ ಇರುವ ಹಾಗೆ, ಗುಜರಾತ್ ಎಂದರೆ ಗೋಧ್ರಾ ಗಲಭೆ ಎನ್ನುವ ಪರ್ಯಾಯ ಪದವೊಂದು ಸಂದಿತ್ತು. ಅದನ್ನೇ ಬಂಡವಾಳವಾಗಿಸಿಕೊಂಡ ಕಾಂಗ್ರೆಸ್ ಗುಜರಾತಿನಲ್ಲಿ ಮುಸಲ್ಮಾನರು ಸುರಕ್ಷಿತವಲ್ಲ ಎಂಬ ಮಿಥ್ಯವೊಂದನ್ನೇ ನಂಬುವಂತೆ ಮಾಡಿದ್ದರಾದರೂ, ಈ ಸಲ ಕಾಂಗ್ರೆಸ್ ನ ಪ್ರತಿ ಸುಳ್ಳುಗಳೂ ಬಯಲಾಗಿದ್ದಲ್ಲದೇ, ಪಕ್ಷವೇ ಮಕಾಡೆ ಮಲಗುವ ಸ್ಥಿತಿ ಬಂದಿದೆ!

ಮುಸಲ್ಮಾನರು ಕಾಂಗ‌್ರೆಸ್ ನನ್ನು ದ್ವೇಷಿಸಲು ಪ್ರಾರಂಭಿಸಿದ್ದು ಯಾಕೆ ಗೊತ್ತೇ?!

1. ಮೊದಲನೆಯದಾಗಿ, ‘ಬಿಜೆಪಿ ಆಡಳಿತದಲ್ಲಿ ಮುಸಲ್ಮಾನರು ಸುರಕ್ಷಿತವಲ್ಲ’ ಎಂಬ ಸುಳ್ಳು ಸಿದ್ಧಾಂತವನ್ನು ಸಮಾಜದಲ್ಲಿ ಹರಡಿದ್ದಲ್ಲದೇ, ಕೇವಲ ಮತಗಳಿಗೋಸ್ಕರ ಥರಾವರಿಯಾಗಿ ಸವಲತ್ತುಗಳನ್ನು ನೀಡಿದ್ದು ಇದೇ ಕಾಂಗ್ರೆಸ್ ಆದರೂ, ಮುಸಲ್ಮಾನ ಸಮಾಜ ಯಾವುದೇ ರೀತಿಯಾಗಿಯೂ ಅಭಿವೃದ್ಧಿ ಹೊಂದಲಿಲ್ಲ. ಪ್ರತಿಯಾಗಿ, ಹಿಂದೂ ಸಮಾಜವನ್ನು ಅಡವಿಟ್ಟು ಮುಸಲ್ಮಾನರ ತುಷ್ಟೀಕರಣ ಮಾಡಿದ ಪರಿಣಾಮ ಮುಸ್ಲಿಂ ಸಮಾಜಕ್ಕೆ ಕಷ್ಟಗಳೇ ಎದುರಾದವು!

2. ಮೊನ್ನೆ ಮೊನ್ನೆಯವರೆಗೆ ಟೋಪಿ ಹಾಕುತ್ತಿದ್ದ ರಾಹುಲ್ ಗಾಂಧಿ ಇದ್ದಕ್ಕಿದ್ದ ಹಾಗೆ, ‘ತಾನೊಬ್ಬ ಹಿಂದೂ’ ಎಂದು ಕರೆದುಕೊಂಡಿದ್ದಲ್ಲದೇ, ‘ಜನಿವಾರಧಾರಿ ಹಿಂದೂ’ ಎಂದು ಬಿಂಬಿಸಿಕೊಂಡಿದ್ದು! ಅಲ್ಲದೇ, ತಿಲಕವನ್ನಿಡಲು ಪ್ರಾರಂಭಿಸಿದ ರಾಹುಲ್ ಗಾಂಧಿ ಒಬ್ಬ ಶಿವ ಭಕ್ತ ಎಂದು ಕಾಂಗ‌್ರೆಸ್ ಹೇಳಿದ್ದಲ್ಲದೇ, ಜೊತೆಗೆ ದಿವಂಗತ ಇಂದಿರಾ ಗಾಂಧಿಯನ್ನೂ ಶಿವಭಕ್ತೆ ಎಂದು ಬಿಂಬಿಸಲು ಹೊರಟಿದ್ದು! ‘ಕೇವಲ ಮತಕ್ಕೋಸ್ಕರ ಧರ್ಮವನ್ನೇ ಬದಲಿಸುವುದನ್ನು ಮುಸಲ್ಮಾನ ಸಮಾಜ ಒಪ್ಪುವುದೇ ಇಲ್ಲ!’

3. ರಾಹುಲ್ ಗಾಂಧಿ ತಿಲಕವನ್ನಿಟ್ಟಿದ್ದಕ್ಕಾಗಲಿ, ಜನಿವಾರ ಹಾಕಿದ್ದಕ್ಕಾಗಲಿ, ಅಥವಾ ಹಿಂದೂ, ಶಿವಭಕ್ತ ಎಂದಿದ್ದಕ್ಕೆ ಮುಸಲ್ಮಾನರಿಗೆ ಅಷ್ಟೇನೂ ಫರಕ್ಕು ಬೀಳೋದಿಲ್ಲವಾದರೂ, ಮುಸಲ್ಮಾನರು ಕೋಪಿಸಿಕೊಂಡಿರುವುದು ಕಾಂಗ‌್ರೆಸ್ ನ ತಿರಸ್ಕಾರ ಮನೋಭಾವಕ್ಕೆ!

4. ರಾಜಕೀಯಕ್ಕೆ ಕಾಲಿಟ್ಟಾಗಿನಿಂದ ಮುಸಲ್ಮಾನರ ತುಷ್ಟೀಕರಣದಿಂದಲೇ ಗೆಲ್ಲುತ್ತಿದ್ದ ರಾಹುಲ್ ಗಾಂಧಿಯನ್ನು ಈಗ ಅದೇ ಸಮಾಜ ಪ್ರತಿಭಟಿಸುತ್ತಿದೆ! ‘ಜಾತ್ಯಾತೀತತೆ’ಯ ಘಮಲೂ ಗೊತ್ತಿಲ್ಲದ ರಾಹುಲ್ ಗಾಂಧಿ, ಈಗ ಕೇವಲ ಹಿಂದೂ ಸಮಾಜಕ್ಕೆ ಮಣೆ ಹಾಕುತ್ತಾ, ಮುಸಲ್ಮಾನರ ಕಡೆ ತಿರುಗಿಯೂ ನೋಡದಿರುವ ಪರಿ ಅಲ್ಪಸಂಖ್ಯಾತರಿಗೆ ದ್ರೋಹ ಬಗೆದಂತಾಗಿದೆ!

5. ಮತಕ್ಕೋಸ್ಕರ ಯಾವ ಧರ್ಮವನ್ನಾದರೂ ಹೊಗಳುವ ಅಥವಾ ತೆಗಳುವ ಕಾಂಗ್ರೆಸ್, ಜಾತ್ಯಾತೀತತೆಯ ಅರ್ಥ ಗೊತ್ತಿಲ್ಲದೆಯೇ, ಕೇವಲ ಗೆದ್ದೆತ್ತಿನ ಬಾಲ ಹಿಡಿಯುವ ಮನಃಸ್ಥಿತಿಯುಳ್ಳ ಕಾಂಗ್ರೆಸ್, ಅಧಿಕಾರದ ಅನಿವಾರ್ಯತೆಗೆ ನಂಬಿ ಬಂದವರನ್ನೇ ಅಡವಿಟ್ಟು ದಾಳ ಹಾಕುವ ಕಾಂಗ್ರೆಸ್ ನಿಂದ ಮುಸಲ್ಮಾನರು ಸೋತಿದ್ದಾರೆ! ಇದೇ ಕಾರಣಕ್ಕೆ, ಯಾವ ಗುಜರಾತಿ ಮುಸಲ್ಮಾನನೂ ಕಾಂಗ್ರೆಸ್ ಎಂದರೆ ಮೊದಲಿನಂತೆ ಹೊಗಳುತ್ತಿಲ್ಲ!

6. ಮುಸಲ್ಮಾನರಿಗೆ ಬೇಕಾಗಿರುವುದು ಜಾತ್ಯಾತೀತತೆಯ ಸಮಾಜ ಹಾಗೂ ಸಮಾಜದಲ್ಲಿ ಗೌರವ ಅಷ್ಟೇ! ‘ತುಷ್ಟೀಕರಣವಲ್ಲ!’ ಅದಕ್ಕೆ ಮುಸಲ್ಮಾನ ಸಮಾಜ ಆಯ್ದುಕೊಂಡಿರುವುದು ಭಾರತೀಯ ಜನತಾ ಪಕ್ಷವನ್ನು ಮಾತ್ರವೇ!

ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಮುಸಲ್ಮಾನರು ಬಿಜೆಪಿಗೇ ಮತ ನೀಡುವುದ್ಯಾಕೆ ಗೊತ್ತೆ?!

1. ಬಿಜೆಪಿ ‘ಕ್ರೂರ ಶಕ್ತಿಗಳಿಂದ ಹಿಂದುಗಳನ್ನು ಕಾಪಾಡುವುದೇ ನಮ್ಮ ಗುರಿ! ಹಿಂದುತ್ವವೇ ನಮ್ಮ ಶಕ್ತಿ! ಭಕ್ತಿ’ ಎಂದೇ ಅಧಿಕಾರದ ಗದ್ದುಗೆ ಹಿಡಿದರೂ, ಹಿಂದುತ್ವದ ನೆಪದಲ್ಲಿ ಬೇರಾವ ಧರ್ಮವನ್ನೂ ಸಹ ಅವಮಾನಿಸಲಿಲ್ಲ! ತುಳಿಯಲಿಲ್ಲ!

2. ಬಿಜೆಪಿ ಪ್ರಜೆಗಳನ್ನು ಆಯಾ ರಾಜ್ಯದ ಪ್ರಜೆಗಳೆಂದಷ್ಟೇ ನೋಡಿ ‘ಐಕ್ಯತೆ’ ಎಂಬುದಕ್ಕೆ ಮಹತ್ವ ಕೊಟ್ಟಿದೆಯಷ್ಟೇ ಹೊರತು, ಕಾಂಗ್ರೆಸ್ ನ ಹಾಗೆ ‘ದಲಿತ,
ಅಲ್ಪಸಂಖ್ಯಾತ’ ಎಂಬುದಾಗಿ ವಿಂಗಡಿಸಿ ನೋಡಿಲ್ಲ. ಈ ವಾಸ್ತವ ಮುಸಲ್ಮಾನರನ್ನು ಹೆಚ್ಚು ಆಕರ್ಷಿಸಿದೆ!

3. ಗುಜರಾತಿನಲ್ಲಿ ನಡೆದ ಚರ್ಚಾ ಸಭೆಯೊಂದರಲ್ಲಿ, ವಿರೋಧ ಪಕ್ಷಗಳಿಗೆ ಮುಸಲ್ಮಾನ ಮಹಿಳೆಯೊಬ್ಬಳು ಹಿಗ್ಗಾ ಮುಗ್ಗಾ ಬೈದಿದ್ದಳು! ‘ಬಿಜೆಪಿಯ ಆಡಳಿತ ಕಾಲದಲ್ಲಿ ಮಧ್ಯರಾತ್ರಿಯಲ್ಲಿಯೂ ಹೆಂಗಸರು ರಸ್ತೆಯಲ್ಲಿ ಓಡಾಡಬಹುದು! ಆದರೆ, ವಿರೋಧ ಪಕ್ಷಗಳಿದ್ದಾಗ ಹಗಲಿನಲ್ಲಿಯೂ ಮನೆಯೊಳಗೆ ಬೀಗ ಹಾಕಿ ಕೂತಿರಬೇಕು.! ಎಂದಿದ್ದಳು! ಅಲ್ಲಿಗೆ ಅರ್ಥವಾಯಿತಾ?!

4. ಯಾವಾಗ ಮೋದಿ ಗುಜರಾತಿನ ಮುಖ್ಯಮಂತ್ರಿಯಾದರೋ, ಅದಾದ ನಂತರ ಕೋಮು ಗಲಭೆಯೆಂಬುದೇ ಮಾಯವಾಗಿ ಹೋಗಿತ್ತು. ಅದೇ, ಕಾಂಗ್ರೆಸ್ ಸರಕಾರದಲ್ಲಿ ಕೋಮು ಗಲಭೆಯಾದಷ್ಟು ಬೇರೆ ಯಾವಾಗಲೂ ಆಗಿಲ್ಲ!

ಪ್ರಧಾನ ಮೋದಿ ಹಾಗೂ ಅಮಿತ್ ಷಾ ರ ಧಾರ್ಮಿಕ ನಂಬಿಕೆಯನ್ನೇ ಪ್ರಶ್ನಿಸುವುದು ಕಾಂಗ್ರೆಸ್ ನ ಧ್ಯೇಯೋಧ್ದೇಶವಾಗಿದ್ದು ಯಾಕೆ ಗೊತ್ತೇ?!

ಕಾಂಗ‌್ರೆಸ್, ‘ಮೋದಿ ಒಬ್ಬ ಹಿಂದೂ! ಅದಕ್ಕಾಗಿ ಮತ ನೀಡಬೇಡಿ’ ಎಂದು ಬೊಬ್ಬರಿದಿತ್ತು ದುರದೃಷ್ಟವಶಾತ್, ಇವತ್ತು ಅದೇ ಕಾಂಗ್ರೆಸ್, ‘ಮೋದಿ ನಿಜವಾದ ಹಿಂದೂವಲ್ಲ’ ಎನ್ನುತ್ತಿದೆ! ಒಮ್ಮೆ, ಇದೇ ರಾಜಕೀಯ ಪಕ್ಷ ಕೇಸರೀ ಭಯೋತ್ಪಾದನೆಯಿದೆ ಎಂಬುದನ್ನು ಬಿಂಬಿಸಲು, ಅಮಾಯಕ ಹಿಂದೂಗಳನ್ನು ಬಂಧಿಸಿ ಚಿತ್ರ ಹಿಂಸೆ ನೀಡಿತ್ತು! ಆದರೆ, ಇದೇ ಕಾಂಗ್ರೆಸ್ ಈಗ ಉಲ್ಟಾ ಹೊಡೆದಿದೆ! ಮುಂದೊಂದು ದಿನ ಹಸಿರು ಭಯೋತ್ಪಾದನೆಯೆಂಬ ನೆಪದಲ್ಲಿ ಅಮಾಯಕ ಮುಸಲ್ಮಾನರನ್ನೂ ಬಂಧಿಸಿ ಹಿಂಸಿಸುವುದಿಲ್ಲ ಎಂಬುವುದಕ್ಕೆ ಸಾಕ್ಷಿ?!

ನರೇಂದ್ರ ಮೋದಿ ಈತನಿಗೆ ಅಡಾಲ್ಫ್ ಹಿಟ್ಲರ್! ಈಗ ಮತ್ತದೇ ರಾಜ್ ಬಬ್ಬರ್ ಅಮಿತ್ ಷಾ ಹಿಂದೂವೇ ಅಲ್ಲ ಎನ್ನುತ್ತಿದ್ದಾನೆ!

ಈತ ಅಮಿತ್ ಷಾ ಒಬ್ಬ ಹಿಂದೂವೇ ಅಲ್ಲ ಎಂದಿದ್ದಾನೆ! ಆದರೆ, ಗುಜರಾತ್ ಮುಖ್ಯಮಂತ್ರಿ ರಾಜ್ ಬಬ್ಬರ್ ನಿಗೆ ಬೊಬ್ಬೆ ಬರುವಂತೆ ಉತ್ತರ ಕೊಟ್ಟಿದ್ದಾರೆ! ‘ಬಬ್ಬರ್ ಹೇಳಿದ ಹಾಗೆ ಅಮಿತ್ ಷಾ ಜೈನರಲ್ಲ, ಬದಲಿಗೆ ವೈಷ್ಣವ ವಾಣಿಕ್ ಹಿಂದೂ!’

ಇದೇ ಬಬ್ಬರ್ ಹಿಂದೆ, ‘ ಒಬ್ಬ ಸಾಮಾನ್ಯ ಮನುಷ್ಯನಿಗೆ ಮುಂಬೈನಲ್ಲಿ ಊಟಕ್ಕೆ 12 ರೂ ಸಾಕು” ಎಂದು ಹೇಳಿ ಟೀಕೆಗೊಳಗಾಗಿದ್ದನಷ್ಟೆ!

ಇದಷ್ಟನ್ನೂ ನೋಡಿದರೆ, 100% ಪಕ್ಕಾ! ಮತ ಕ್ಕೋಸ್ಕರ ಮುಸಲ್ಮಾನರನ್ನೇ ಬದಿಗೆ ಸರಿಸಿದೆ ಕಾಂಗ್ರೆಸ್! ಪ್ರಜ್ಞಾವಂತ ಮುಸಲ್ಮಾನ ಖಂಡಿತವಾಗಿಯೂ ಬಿಜೆಪಿಯನ್ನೇ ಆಯ್ಕೆ ಮಾಡಿಕೊಂಡಿದ್ದಾನೆ!

– ಅಜೇಯ ಶರ್ಮ

Tags

Related Articles

Close