ಪ್ರಚಲಿತ

ಗುಜರಾತ್‍ನಲ್ಲಿ ಮೋದಿ ಗೆಲುವಿಗೆ ಹಾದಿ ಮಾಡಿದ ಮಣಿಶಂಕರ್ ಅಯ್ಯರ್ ಮಾತಿನ ಮರ್ಮವೇನು?

ಅದ್ಯಾಕೋ ಈ ಮಣಿಶಂಕರ್ ಅಯ್ಯರ್ ಎಂಬ ದೂರ್ತನಿಗೆ ಪ್ರಚಾರದ ಬಯಕೆಯೋ ಅಥವಾ ಉತ್ತಮ, ವ್ಯಕ್ತಿಗಳನ್ನು ದೂಷಿಸುವ ಚಪಲವೋ ಅಥವಾ ಬಿಜೆಪಿಯನ್ನು ಹೋದಲ್ಲಿ ಬಂದಲ್ಲಿ ಗೆಲ್ಲಿಸಬೇಕೆಂಬ ಹಂಬಲವೋ ಗೊತ್ತಿಲ್ಲ…

ಕೆಲವರಿಗೆ ತಾನೊಬ್ಬ ನಿರಂತರವಾಗಿ ಪ್ರಚಾರದಲ್ಲಿರಬೇಕೆಂಬ ಹಂಬಲ ಇದ್ದೇ ಇರುತ್ತದೆ. ಅದೇನೇನೋ ಸರ್ಕಸ್ ಮಾಡಿದರೂ ಒಮ್ಮೊಮ್ಮೆ ವರ್ಕೌಟ್ ಆಗೋದಿಲ್ಲ. ಹೀಗಾದಾಗ ಸಮಾಜದಲ್ಲಿರುವ ಉತ್ತಮ ವ್ಯಕ್ತಿಗಳನ್ನು ಮನಬಂದಂತೆ ಅಸಭ್ಯ ಮಾತುಗಳಿಂದ ನಿಂದಿಸಿ, ಕೆಟ್ಟವನಾದರೂ ಪರವಾಗಿಲ್ಲ ಫೇಮಸ್ ಆದರೆ ಸಾಕು ಎಂಬ ಚಪಲವನ್ನು ಇಟ್ಟುಕೊಂಡು ಬಾಯಿಗೆ ಬಂದ ಹಾಗೆ ಮಾತನಾಡುತ್ತಾರೆ.

ನೋಡಲಾಗುತ್ತಿಲ್ಲ ಮೋದಿಯ ಖದರ್-ಧ್ವೇಷ ಕಾರುತ್ತಲೇ ಇರುತ್ತಾನೆ ಮಣಿಶಂಕರ್ ಅಯ್ಯರ್..!!!

ಮಣಿಶಂಕರ್ ಅಯ್ಯರ್. ದೇಶ ಕಂಡ ಅತ್ಯಂತ ಕೀಳು ಮಟ್ಟದ ಮನುಷ್ಯ. ತನ್ನ ಮನಸ್ಸನ್ನೇ ಕೊಳಚೆಯಲ್ಲಿ ಬಿದ್ದ ಪ್ರಾಣಿಗಳ ರೀತಿಯಲ್ಲಿ ವರ್ತಿಸುವ ಈತ ದೇಶಸೇವೆ ಮಾಡುವ ವ್ಯಕ್ತಿಗಳನ್ನು ಕಂಡರೆ ಕೆಂಡ ಕಾರುತ್ತಿರುತ್ತಾನೆ. ಈತನಿಗೆ ಹಾಗೂ ಈತನ ಪಕ್ಷಗಳಿಗೆ ಕಂಟಕವಾಗುತ್ತಿರುವ ವ್ಯಕ್ತಿಗಳನ್ನು ಬಾಯಿಗೆ ಬಂದ ಹಾಗೆ ಅಸಂಭದ್ದ ಪದಗಳನ್ನು ಪ್ರಯೋಗ ಮಾಡುವ ಮೂಲಕ ಪ್ರಚಾರದಲ್ಲಿ ಇದ್ದೇ ಇರುತ್ತಾನೆ. ತಾನು ಪ್ರಚಾರದಲ್ಲಿ ಇರಬೇಕಾದರೆ ಅದ್ಯಾವ ಮಟ್ಟಕ್ಕೂ ಇಳಿಯಲು ಸಿದ್ದನಿದ್ದಾನೆ ಈ ಮೂರ್ಖ.

ಎಂದಿನಂತೆ ನಮ್ಮ ನೆಚ್ಚಿನ ಪ್ರಧಾನಿ ಮೋದೀಜಿಯನ್ನು ಕೆಳ ಮಟ್ಟದ ಪದಗಳನ್ನು ಪ್ರಯೋಗಿಸುವ ಮೂಲಕ ಟೀಕೆಗೆ ಗುರಿಯಾಗುತ್ತಿದ್ದ ಈ ಅಯ್ಯರ್ ಎಂಬ ಕಾಂಗ್ರೆಸ್ ನಾಯಕ ಇಂದು ಮತ್ತೆ ತಮ್ಮ ನಾಲಗೆಯನ್ನು ಉದ್ದ ಬಿಟ್ಟಿದ್ದಾನೆ. “ಮೋದಿ ಮೌಲ್ಯಗಳಿಲ್ಲದ ನೀಚ ವ್ಯಕ್ತಿ. ಆತ ಒಬ್ಬ ಕೀಳುವ್ಯಕ್ತಿ” ಎಂದು ಮತ್ತೆ ತನ್ನನ್ನು ತಾನು ಸುದ್ಧಿ ಮಾಡಿಕೊಂಡಿದ್ದಾನೆ.

ಮೋದಿ ಅಂದರೆ ಈಗ ಕೇವಲ ಗುಜರಾತ್ ಅಥವಾ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಅವರು ವಿಶ್ವನಾಯಕರಾಗಿದ್ದಾರೆ. ಅವರನ್ನು ಹೊಗಳಿದರೂ ತೆಗಳಿದರೂ ವಿಶ್ವ ಮಟ್ಟಿನಲ್ಲಿ ಸುದ್ಧಿಯಾಗುತ್ತದೆ. ಈ ಕಾರಣಕ್ಕಾಗಿಯೇ ಕೆಲವು ಪ್ರಚಾರ ಪ್ರಿಯರು ಮೋದಿಯ ಬಗ್ಗೆ ಬಾಯಿಗೆ ಬಂದ ಹಾಗೆ ಮಾತನಾಡುತ್ತಾರೆ. ಮಣಿಶಂಕರ್ ಅಯ್ಯರ್ ಕೂಡಾ ಇದೇ ಜಾತಿಗೆ ಸೇರಿದವನಾಗಿದ್ದಾನೆ.

ಗುಜರಾತ್ ಚುನಾವಣೆ ಹೊಸ್ತಿಲಲ್ಲಿ ಇಂತಹ ಹೇಳಿಕೆಗಳನ್ನು ನೀಡಿ ಕಾಂಗ್ರೆಸ್ ಕಾರ್ಯಕರ್ತರ ಪಾಲಿನ ಹೀರೋ ಆಗಲು ಹೊರಟಿದ್ದಾನೆ ಈ ಅಯ್ಯರ್. ಆದರೆ ಅದೆಷ್ಟೋ ಕೋಟಿ ಕೋಟಿ ಜನರ ಪಾಲಿಗೆ ತಾನೊಬ್ಬ ಖಳನಾಯಕನಾಗಿ ಗುರುತಿಸುತ್ತೇನೆ ಎಂಬ ವಿಚಾರ ತಿಳಿದಿದಿಯೋ ಇಲ್ಲವೋ ಏನೋ… ಮತ್ತೊಮ್ಮೆ ರಾಷ್ಟ್ರ ಮಟ್ಟದಲ್ಲಿ ಸುದ್ಧಿಯಾಗಲು ಈ ಖತರ್ನಾಕ್ ಪ್ಲಾನ್‍ಗಳನ್ನು ಹೂಡುತ್ತಾ ಹೋಗುತ್ತಾನೆ ಈ ಖಳನಯಕ.

ಮೋದಿ ಫ್ಯಾನ್ಸ್ ಮಾಡಿದ ಮೋಡಿ-ಮಣಿಶಂಕರ್ ಅಯ್ಯರ್ ಕಥೆಯೇನಾಯ್ತು ನೋಡಿ…

ಮೋದಿಯನ್ನು ಯಾವ ಪರಿಯಾಗಿ ಈ ಕಾಂಗ್ರೆಸ್ ನಾಯಕ ತೆಗಳುತ್ತಾನೆ ಎಂದರೆ ಅದಕ್ಕೆ ಅರ್ಥ, ಆಗಮ ಯಾವುದೂ ಇರುವುದಿಲ್ಲ. ಆದರೆ ಅದೆಷ್ಟು ಬಾರಿ ಮೋದಿಯನ್ನು ತೆಗಳುತ್ತಾನೋ ಅಷ್ಟೇ ಬಾರಿ ಮೋದಿ ಎತ್ತರಕ್ಕೆ ಹೋಗಿ ಬಿಡುತ್ತಾರೆ. ಮೋದಿಯ ಬಗ್ಗೆ ಆತ ಏನಾದರೂ ಮಾತನಾಡಿದ್ದಾನೆ ಎಂದರೆ ಮತ್ತೊಮ್ಮೆ ಇತಿಹಾಸ ಸೃಷ್ಟಿಸುತ್ತೆ ಎಂದೇ ಅರ್ಥ. ಮೋದಿ ಬಗ್ಗೆ ಆತ ತನ್ನ ನಾಲಗೆಯನ್ನು ಹರಿಬಿಟ್ಟ ಕೂಡಲೇ “ಇವನಿಗೆ ಬೇಕಿತ್ತಾ ಇದೆಲ್ಲಾ” ಎಂದು ಹೇಳುವ ಕಾಂಗ್ರೆಸ್ಸಿಗರೇ ಹೆಚ್ಚು. ಆದರೂ ಆತನ ಬಾಯಿ ಮುಚ್ಚಿಸುವ ಪ್ರಯತ್ನವನ್ನು ಯಾರೂ ಮಾಡಲೇ ಇಲ್ಲ.ಇಂತಹ ವಿವಾದಗಳನ್ನು ಸೃಷ್ಟಿಸುವಾಗ ಕಾಂಗ್ರೆಸ್ ಈತನಿಂದ ಅಂತರ ಕಾಯ್ದುಕೊಳ್ಳುತ್ತದೇ ವಿನಹ ಖಂಡಿಸುವ ಸಾಹಸ ಮಾಡೋದೆ ಇಲ್ಲ.

ಅವನೊಬ್ಬ ಚಾಯ್ ವಾಲಾ-ಈ ಹಿಂದೆಯೂ ಬಿಚ್ಚಿದ್ದ ಬಾಲ..!!!

2014ರ ಲೋಕಸಭಾ ಚುನಾವಣಾ ಸಮಯದಲ್ಲಿ ಮೋದಿಯನ್ನು ಚಾಯ್‍ವಾಲಾ ಎಂದು ಕೇವಲವಾಗಿ ಟೀಕಿಸಿದ್ದನು ಈ ಅಯ್ಯರ್. “ಮೋದಿ ಕೇವಲ ಚಾಹಾ ಮಾರಲಷ್ಟೇ ಫಿಟ್. ಅವರು ಪ್ರಧಾನಿಯಾಗೋದೇ ಇಲ್ಲ. ಬೇಕಿದ್ದರೆ ನಮ್ಮ ಎಐಸಿಸಿ ಸಭೆಯಲ್ಲಿ ಬಂದು ಚಹಾ ಮಾರಲಿ. ನಾವು ಅವಕಾಶ ಮಾಡಿಕೊಡುತ್ತೇವೆ” ಎಂದು ಜರೆದಿದ್ದ. ಆದರೆ ಆ ಕೀಳು ವ್ಯಕ್ತಿ ಪ್ರಯೋಗಿಸಿದ ಕೀಳು ಮಟ್ಟದ ಪದಗಳೇ ಆತನ ಕಾಂಗ್ರೆಸ್ ಪಕ್ಷಕ್ಕೆ ಮುಳುವಾಗಿ ಹೋಗಿತ್ತು.

ದೇಶಕ್ಕೆ ದೇಶವೇ ಮೋದಿಯ ಬೆಂಬಲಕ್ಕೆ ನಿಂತಿತ್ತು. ಗಲ್ಲಿ ಗಲ್ಲಿಯಲ್ಲೂ, ಹಳ್ಳಿ ಹಳ್ಳಿಯಲ್ಲೂ “ನಮೋ” ಟೀ ಸ್ಟಾಲ್ ತಲೆಯೆತ್ತಿತ್ತು. ಮೋದಿ ಮೇನಿಯಾ ಹಬ್ಬಿದ್ದೇ ಅದೇ ಚಾಯಾ ಮಾರಾಟದಿಂದ. ಪ್ರತಿಯೊಬ್ಬ ಸಾಮಾನ್ಯ ವ್ಯಕ್ತಿಗೂ ಮೋದಿ ಬಗ್ಗೆ, ಅವರ ಸಾಧನೆಯ ಬಗ್ಗೆ ಅರಿವಾಗಿತ್ತು. ಇದಕ್ಕೆಲ್ಲಾ ಕಾರಣವಾಗಿದ್ದು ಅದೇ ಮಣಿಶಂಕರ್ ಅಯ್ಯರ್ ಎಂಬ ಕಾಂಗ್ರೆಸ್‍ನ ಸೋಗಲಾಡಿ ಖಳನಾಯಕ.

ಪಾಕ್ ಪ್ರೇಮದ ಕರಾಮತ್ತು-ಭಾರತಕ್ಕಿಲ್ಲ ಪ್ರೀತಿಯ ತುತ್ತು..!!!

ಈ ಹಿಂದೆ ಪಾಕ್‍ಗೆ ತೆರಳಿ ಅಲ್ಲಿ ಕೂಡಾ ತನ್ನ ಮಾನವನ್ನು ಹರಾಜು ಹಾಕಿಕೊಂಡು ಭಾರತೀಯ ಜನತೆಯ ಪಾಲಿಗೆ ಪಾಪಿಯಾಗಿದ್ದ ಈತ. ಇಂದು ಪಾಕ್ ಎಂಬ ರಾಷ್ಟ್ರವನ್ನು ಜಗತ್ತೇ ಪಾಪಿ ರಾಷ್ಟ್ರ ಎಂದು ದೂರುತ್ತಿದ್ದರೂ ಕಾಂಗ್ರೆಸ್ ಮಾತ್ರ ಅದನ್ನು ಸ್ವರ್ಗ ಎಂದು ಬಣ್ಣಿಸುತ್ತಿದೆ. ಅಂತೆಯೇ ಈ ಅಯ್ಯರ್ ಕೂಡಾ ಪಾಕ್‍ಗೆ ತೆರಳಿ ಪಾಕ್ ಪ್ರಜೆಗಳಲ್ಲಿ, “ಮೋದಿಯನ್ನು ಅಧಿಕಾದಿಂದ ಕೆಳಗಿಳಿಸಿ” ಎಂದು ಉಗ್ರರಿಗೆ ಬೆಂಬಲವಾಗಿ ನಿಂತಿದೆ.

ಮಾತ್ರವಲ್ಲದೆ ಈ ಹಿಂದೆ ಪ್ಯಾರಿಸ್ ಉಗ್ರರ ಮೇಲೂ ಸಹಾನುಭೂತಿಯನ್ನು ತೋರಿಸುತ್ತಿದ್ದ ಈ ಅಯ್ಯರ್. ಇದು ಕೂಡಾ ದೇಶವಾಸಿಗಳಲ್ಲಿ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲಿಯೇ ಅಯ್ಯರ್ ವಿರುದ್ಧ ಕೆಂಗಣ್ಣಿಗೆ ಕಾರಣವಾಗಿತ್ತು.

 

ಸಾವರ್ಕರ್ ಬಗ್ಗೆ ಬೊಗಳಿದ್ದ-ಬೊಗಳೆ ಬಿಡುವುದರಲ್ಲಿ ಸದಾ ಸಿದ್ಧ…

ಅಪ್ರತಿಮ ದೇಶಪ್ರೇಮಿ ಸ್ವಾತಂತ್ರ್ಯ ವೀರ ಸಾವರ್ಕರ್ ಬಗ್ಗೆ ಬಾಯಿಗೆ ಬಂದ ಹಾಗೆ ಮಾತನಾಡಿದ್ದ ಈ ಬೊಗಳೆ ನಾಯಕ. ದೇಶ ಮಾತ್ರವಲ್ಲದೇ ಅಂತರಾಷ್ಟ್ರೀಯ ಮಟ್ಟದಲ್ಲೂ ಸಾವರ್ಕರ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನೇ ಆಡುತ್ತಾರೆ. ಅವರೊಬ್ಬ ಕೆಚ್ಚೆದೆಯ ಸ್ವಾತಂತ್ರ್ಯ ಹೋರಾಟಗಾರ ಎಂದು ಬಣ್ಣಿಸುತ್ತಿದ್ದರು. ಆದರೆ ಮಣಿಶಂಕರ್ ಅಯ್ಯರ್ ಮಾತ್ರ ಅವರನ್ನು ತೆಗಳುತ್ತಲೇ ಕಾಲ ಕಳೆದವರು. “ಅಂಡಮಾನ್ ಜೈಲಿನಲ್ಲಿರುವ ಸಾವರ್ಕರ್ ಹೆಸರಿನ ನಾಮ ಫಲಕವನ್ನು ತೆರವುಗೊಳಿಸಬೇಕು” ಎಂದು ನಾಲಿಗೆ ಹರಿಯ ಬಿಟ್ಟಿದ್ದು ಇದೇ ನಾಯಕ.

ಏನೇ ಇರಲಿ ಮೋದಿಯನ್ನು ಆತ ಎಷ್ಟು ತೆಗಳುತ್ತಾನೋ ಅಷ್ಟೇ ವೇಗದಲ್ಲಿ ಮೋದಿ ಬೆಳೆಯುತ್ತಾರೆ ಎಂಬುವುದನ್ನು ಆತನೂ ನೆನಪಿನಲ್ಲಿಡಬೇಕಾಗುತ್ತದೆ. ಲೋಕಸಭೆ ಚುನಾವಣೆಯಲ್ಲಿ ಮೋದಿಯನ್ನು ಫೇಮಸ್ ಮಾಡಿದ್ದ ಅಯ್ಯರ್ ಈಗ ಗುಜರಾತ್ ಚುನಾವಣೆಯಲ್ಲೂ ತನ್ನ ಬಾಲ ಬಿಚ್ಚಿ ಕಾಂಗ್ರೆಸ್ ಸೋಲುವಂತೆ ಮಾಡುತ್ತಿದ್ದಾನೆ ಅಷ್ಟೇ…

ಏನೇ ಇರಲಿ ಓರ್ವ ಬ್ರಾಹ್ಮಣನಾಗಿ ಆಚಾರ ವಿಚಾರದಲ್ಲಿ ತಿಳಿದವನಾಗಿರಬೇಕಿತ್ತು. ಆದರೆ ಕಾಡುಮನುಷ್ಯರಿಗಿಂತಲೂ ಕಡೆ ಮಾತನಾಡುವ ಈ ವ್ಯಕ್ತಿ ಬ್ರಾಹ್ಮಣ ಕುಲಕ್ಕೂ ಕಳಂಕ ತಂದಿರುವುದೇ ವಿಪರ್ಯಾಸ…

-ಸುನಿಲ್ ಕಾರಂತ್

Tags

Related Articles

Close