ಪ್ರಚಲಿತ

ಗುಜರಾತ್ ನ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಾಹುಲ್ ಗಾಂಧಿ ಮಹಿಳೆಯರ ಶೌಚಾಲಯಕ್ಕೆ ನುಗ್ಗಿದ್ದಾರೆ! ಈ ಪ್ರಮಾದದ ನಂತರ ಗುಜರಾತ್ ನ ಜನರು ಏನು ಮಾಡಿದ್ದಾರೆ ಗೊತ್ತೇ?

ಸದಾ ಒಂದಲ್ಲಾ ಒಂದು ಎಡವಟ್ಟುಗಳಿಂದ ಸುದ್ದಿಯಾಗುತ್ತಲೇ ಇರುವ ಕಾಂಗ್ರೆಸ್‍ನ ಉಪಾಧ್ಯಕ್ಷ ಈ ಬಾರಿ ಮಾಡಿದ ಎಡವಟ್ಟನ್ನು ನೋಡಿದರೆ ಖಂಡಿತಾ ನೀವು ಹೊಟ್ಟೆ ಹುಣ್ಣಾಗುವಂತೆ ನಗುತ್ತೀರಿ… ರಾಹುಲ್ ಈ ಕೆಲಸವನ್ನು ಅಚಾತುರ್ಯದಿಂದ ಮಾಡಿದರೋ ಅಥವಾ ಬೇಕೆಂದೇ ಮಾಡಿದರೋ ಗೊತ್ತಿಲ್ಲ. ಅಷ್ಟಕ್ಕೂ ಅವರು ಲೇಡೀಸ್ ಟಾಯ್ಲೆಟ್‍ಗೆ ನುಗ್ಗಿದ್ದಾದರೂ ಯಾಕೆ? ರಾಹುಲ್‍ರ ಈ ಕಾರ್ಯ ದೇಶಾದ್ಯಂತ ಜನರು ಮುಸಿ ಮುಸಿ ನಗುವಂತೆ ಮಾಡಿದೆ.

ರಾಹುಲ್ ಗಾಂಧಿ ಅವರು ಗುಜರಾತ್‍ನ ಛೋಟಾ ಉದಯಪುರ ಎಂಬ ಜಿಲ್ಲೆಯಲ್ಲಿ ಯುವಕರೊಂದಿಗೆ ಸಂವಾದ ಕಾರ್ಯಕ್ರಮವನ್ನು ನಡೆಸಿದ್ದಾರೆ. ಈ ಸಂವಾದ
ಕಾರ್ಯಕ್ರಮವನ್ನೂ ಅವರು ಮೋದಿಯವರ ಟೀಕೆಗಳಿಗೆಂದೇ ಬಳಸಿಕೊಂಡರು. ಮೋದಿಯನ್ನು ಟೀಕಿಸಿ ಟೀಕಿಸಿ ಸಾಕಾಗಿದ್ದ ರಾಹುಲ್‍ಗೆ ದೇಹಬಾಧೆ ಉಂಟಾಗಿ ಅವಸರ ಪಡುವಂತಾಯಿತು. ಸಂವಾದ ಮುಗಿಸಿ ವೇಗವಾಗಿ ಟೌನ್‍ಹಾಲ್ ಕಡೆಗೆ ಹೆಜ್ಜೆ ಹಾಕತೊಡಗಿದ ರಾಹುಲ್ ಗಾಂಧಿ ಅಚಾತುರ್ಯದಿಂದಲೋ ಅಥವಾ
ಉದ್ದೇಶಪೂರ್ವಕವಾಗಿಯೋ ಗೊತ್ತಿಲ್ಲ, ಅವಸವರಸವಾಗಿ ಮಹಿಳೆಯರ ಶೌಚಾಲಯದತ್ತ ನುಗ್ಗಿ ಎಡವಟ್ಟು ಮಾಡಿಕೊಂಡಿದ್ದಾರೆ! ಗೊತ್ತಿದ್ದೂ, ಗೊತ್ತಿಲ್ಲದೆಯೋ ಮಾಡಿದ ಎಡವಟ್ಟಿನಿಂದಾಗಿ ರಾಹುಲ್ ಇದೀಗ ನಗೆಪಾಟೀಲಿಗೆ ಗುರಿಯಾಗಿದ್ದಾರೆ

ಮಹಿಳಾ ಶೌಚಾಲಯದ ಮುಂದೆ ಗುಜರಾತಿ ಭಾಷೆಯಲ್ಲಿ Mahilao Mate Shauchalya ಎಂದು ಬರೆಯಲಾಗಿತ್ತು. ಆದರೆ ಏನ್ ಮಾಡೋದು ಪಾಪ
ರಾಹುಲ್‍ಗೆ ಗುಜರಾತಿ ಭಾಷೆ ಬರೋದಿಲ್ಲ ತಾನೆ. ಅಥವಾ ಅವಸರದಲ್ಲಿ ಪುರ್ಸೊತ್ತು ಸಿಗದ ಕಾರಣ ಒಮ್ಮೆಲೆ ನುಗ್ಗಿಬಿಟ್ಟಿದ್ದಾರೋ ಏನೋ? ಆದರೆ ಇದೆಲ್ಲಾ
ಸುದ್ದಿಯಾಗಲು ಸಾಧ್ಯವೇ ಇರಲಿಲ್ಲ. ರಾಹುಲ್ ಲೇಡೀಸ್ ಟಾಯ್ಲೆಟ್‍ಗೆ ನುಗ್ಗಿದ್ದಾರೆಂದು ಈ ಮೀಡಿಯಾದವರಿಗೆ ಯಾರು ಸುದ್ದಿ ಮುಟ್ಟಿಸಿದರೋ ಗೊತ್ತಿಲ್ಲ. ಒಂದಷ್ಟು ಮಂದಿ ಮಾಧ್ಯಮದವರು ದೌಢಾಯಿಸಿ ರಾಹುಲ್ ಶವಚಾಲಯದಿಂದ ಹೊರಬರುತ್ತಿರುವ ದೃಶ್ಯವನ್ನು ತನ್ನ ಕೆಮರಾದಲ್ಲಿ ಸೆರೆ ಹಿಡಿದಿದ್ದಾರೆ. ಪಾಪ ರಾಹುಲ್‍ನ ಮರ್ಯಾದೆ ಉಳಿಸಲು ಅವರ ಬೆಂಗಾವಲು ಪಡೆ ಸಾಕಷ್ಟು ತಡೆಗೋಡೆಯಾಗಿ ನಿಂತಲೂ ರಾಹುಲ್ ಲೇಡೀಸ್ ಟಾಯ್ಲೆಟ್‍ಗೆ ನುಗ್ಗಿರುವುದು ಸೆರೆಯಾಗಿದೆ. ರಾಹುಲ್ ಗಾಂಧಿಯ ಅವತಾರವನ್ನು ನೋಡಿ ಇಡೀ ದೇಶದ ಜನರು ಬಿದ್ದು ಬಿದ್ದು ನಗುತ್ತಿದ್ದಾರೆ.

ಈ ಮುಂಚೆ ಆರ್‍ಎಸ್‍ಎಸ್‍ನ ಮಹಿಳಾ ಸ್ವಯಂಸೇವಕರ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದ ರಾಹುಲ್ ಗಾಂಧಿ ದೇಶಾದ್ಯಂತ ಸಾಕಷ್ಟು ಟೀಕೆಗೆ
ಗುರಿಯಾಗಿದ್ದರು. ಆದರೆ ಇದಾದ ಎರಡು ದಿನಗಳಾಗುವಷ್ಟರಲ್ಲೇ ಲೇಡೀಸ್ ಟಾಯ್ಲೆಟ್‍ಗೆ ನುಗ್ಗುವ ಮೂಲಕ ಮಹಾನ್ ಎಡವಟ್ಟು ಮಾಡಿಕೊಂಡಿದ್ದಾರೆ.

-ಚೇಕಿತಾನ

Tags

Related Articles

Close