ಪ್ರಚಲಿತ

ಗುಜರಾತ್ ಪ್ರಾಧ್ಯಾಪಕಿ ವೇತನ ಕಮ್ಮಿ ಎಂದು ರಾಹುಲ್ ಗಾಂಧಿಯನ್ನು ಅಪ್ಪಿ ಹಿಡಿದು ಗೋಳಾಡಿದುದರ ಅಸಲಿ ಸತ್ಯ ಇಲ್ಲಿದೆ!!

ಕಾಂಗ್ರೆಸ್ ನ ಚುನಾವಣಾ ಪ್ರಚಾರ ಜೋರಾಗಿಯೇ ನಡೆಯುತ್ತಿದ್ದು, ರಾಹುಲ್‍ಗಾಂಧಿ ದೇವಾಸ್ಥಾನಗಳಿಗೆ ಬೇಟಿ ನೀಡಿ ಹಿಂದೂಗಳ ಮನವೊಲೈಕೆಯಲ್ಲಿ ತೊಡಗಿರುವುದು ಗೊತ್ತೇ ಇದೆ!! ಇನ್ನು ಗುಜರಾತ್ ನಲ್ಲಿ ಚುನಾವಣಾ ಪ್ರಚಾರ ಜೋರಾಗಿಯೇ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಎರಡು ದಶಕಗಳ ಕಾಲ ಸೇವೆ ಸಲ್ಲಿಸಿದ್ದ ಬಿಜೆಪಿ ಸರಕಾರದೊಂದಿಗೆ ಅಸಮಾಧಾನ ವ್ಯಕ್ತಪಡಿಸಿದ್ದಲ್ಲದೇ, ದೊಡ್ಡ ಹೈ ಡ್ರಾಮವನ್ನೇ ರಚಿಸುವಲ್ಲಿ ಯಶಸ್ವಿಯಾಗಿದ್ದಾರೆ!!

ಹೌದು… ಅಹ್ಮದಾಬಾದ್ ನ ನಿಕೋಲ್ ನಲ್ಲಿ “ಗಯಾನ್ ಆದಿಕಾರ್ ಸಭಾ”ದಲ್ಲಿ ರಾಹುಲ್ ಅವರು ಮಾತನಾಡುತ್ತಾ, ಗುಜರಾತ್ ನಲ್ಲಿ ಅಧಿಕಾರವನ್ನು ಪಡೆದರೆ ಕಾಂಗ್ರೆಸ್ ತರುವಂತಹ ಶೈಕ್ಷಣಿಕ ಸುಧಾರಣೆಗಳ ಬಗ್ಗೆ ವಿವರಿಸಿದ್ದಾರೆ!! ಅಷ್ಟೇ ಅಲ್ಲದೇ, ಸಂಸ್ಕøತ ಶಿಕ್ಷಕಿಗೆ 22ವರ್ಷಗಳಿಂದ ವೇತನ ಕಡಿಮೆ ಇದೆ ಎಂದು ಗೋಳಾಡಿದ್ದು ಮಾತ್ರ ಇಲ್ಲಿ ವಿಪರ್ಯಾಸ!! ಯಾಕೆಂದರೆ ಯುಜಿಯ ಮೊತ್ತವೇ ಇವರಿಗೆ ಸಿಗುತ್ತಿಲ್ಲ ಎನ್ನುವುದೇ ಇವರ ಗೋಳಾಗಿದೆ!! ಆದರೆ 22 ವರ್ಷಗಳಿಂದಲೂ ಒಂದೇ ರೀತಿಯ ವೇತನಕ್ಕೆ ಇವರು ದುಡಿಯುತ್ತಿದ್ದಾರೆಯೇ ಎನ್ನುವ ಪ್ರಶ್ನೆ ಮೂಡುತ್ತೆ!!

ಈಗಾಗಲೇ ಗುಜರಾತ್ ಕೇವಲ ಉದ್ಯಮಿಗಳಿಗೆ ಸೇರಿದ್ದಲ್ಲ, ಅದು ಮೀನುಗಾರರು ಸೇರಿದಂತೆ ಎಲ್ಲರಿಗೂ ಸೇರಿದ್ದು ಎಂದು ಹೇಳಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಭಾಷಣದುದ್ದಕ್ಕೂ ಪ್ರಧಾನಿ ನರೇಂದ್ರ ಮೋದಿ ಸರಕಾರದ ಉದ್ಯಮ ಸ್ನೇಹಿ ನೀತಿಗಳ ವಿರುದ್ಧ ಕಿಡಿಕಾರಿದ್ದರು. ಅಷ್ಟೇ ಅಲ್ಲದೇ, ಕೇಂದ್ರ ಸರಕಾರ ಕೆಲವೇ ಕೆಲವು ಉದ್ಯಮಿಗಳ ಪರ ನೀತಿಗಳನ್ನು ಕೈಗೊಳ್ಳುತ್ತಿದ್ದು, ಇತರೆ ವರ್ಗವನ್ನು ನಿರ್ಲಕ್ಷಿಸಿದೆ ಎಂದು ವಾಗ್ದಾಳಿ ನಡೆಸಿದ್ದರು.

ಆದರೆ, ”ನೋಟು ಅಮಾನ್ಯೀಕರಣ, ಜಿಎಸ್‍ಟಿಯಂತ ರಾಷ್ಟ್ರೀಯ ಹಿತಾಸಕ್ತಿಯುಳ್ಳ ಆರ್ಥಿಕ ಸುಧಾರಣಾ ಕ್ರಮಗಳ ವಿರುದ್ಧ ಆಂದೋಲನ ನಡೆಸುವ ಮೂಲಕ ಪ್ರತಿಪಕ್ಷ ಕಾಂಗ್ರೆಸ್ ಮಹಾ ಎಡವಟ್ಟು ಮಾಡಿಕೊಂಡಿದೆ. ಅದರ ಬದಲು ಹಸ್ತ ಪಕ್ಷವು, ಮುಖ್ಯಮಂತ್ರಿ ವಿಜಯ್ ರೂಪಾನಿ ವಿರುದ್ಧದ ಆಡಳಿತ ವಿರೋಧಿ ಅಲೆಯನ್ನೇ ಅಸ್ತ್ರವಾಗಿಸಿಕೊಂಡು ಸ್ಥಳೀಯ ವಿಷಯಗಳನ್ನು ಆಧರಿಸಿ ಪ್ರಚಾರಾಂದೋಲನ ನಡೆಸಿದರೆ ಅದು ಲಾಭವಾಗಿ ಪರಿವರ್ತನೆಗೊಳ್ಳುವ ಸಾಧ್ಯತೆ ಇದೆ,” ಎಂದು ‘ಗ್ರೀಡ್ ಅಂಡ್ ಫಿಯರ್’ ವಾರಪತ್ರಿಕೆಯಲ್ಲಿ ಕ್ರಿಸ್ಟೋಫರ್ ವುಡ್ ವಿಶ್ಲೇಷಿಸಿದ್ದಾರೆ.
ಆದರೆ “ಗಯಾನ್ ಆದಿಕಾರ್ ಸಭಾ”ದಲ್ಲಿ ನಡೆದ ಸಂವಹನದ ಸಮಯದಲ್ಲಿ, ಸಂಸ್ಕೃತ ಪ್ರಾಧ್ಯಾಪಕಿ ರಂಜನಾ ಅವಸ್ತಿ ಅವರು ರಾಜ್ಯ ಸರಕಾರದೊಂದಿಗೆ ತನ್ನ ಅನುಭವಗಳನ್ನು ವಿವರಿಸುವಾಗ ಕಣ್ಣೀರು ಸುರಿಸಿದ್ದು, ಶಿಕ್ಷಕರಿಗೆ ನಿಶ್ಚಿತ ಆದಾಯವನ್ನು ಪರಿಚಯಿಸುವ ಮೂಲಕ ಬಿಜೆಪಿ ಸರ್ಕಾರ ತನ್ನನ್ನು ದುರ್ಬಳಕೆ ಮಾಡಿದೆ ಎಂದು ಅವಸ್ತಿ ಆರೋಪಿಸಿದ್ದಾರೆ. ಆದರೆ ಈಕೆಯ ಗೋಳನ್ನು ಕಂಡು ರಾಹುಲ್ ಗಾಂಧಿಯೇ ವೇದಿಕೆಯಿಂದ ಹೊರಬಂದು ಅವಸ್ತಿಯನ್ನು ತಬ್ಬಿಕೊಂಡರು!! ಈ ಒಂದು ಸಂದರ್ಭದಲ್ಲಿ ಅಹ್ಮದ್ ಪಟೇಲ್, ಅಶೋಕ್ ಗೆಹ್ಲೋಟ್ ಮತ್ತು ಭರತ್ಸಿಂಗ್ ಸಿಂಗ್ ಸೋಲಂಕಿ ಅವರು ಹಾಜರಿದ್ದರು. ಇನ್ನು ರಾಹುಲ್ ಗುಜರಾತ್ ನ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆಗಾಗಿ ಪ್ರೇಕ್ಷಕರನ್ನು ಇನ್ಪುಟ್ ಮಾಡಲು ಪ್ರಯತ್ನಿಸಿದ್ದಾರೆ!!

ಇದೇ ಸಂದರ್ಭದಲ್ಲಿ, ಕಳೆದ 22 ವರ್ಷಗಳಿಂದ ಗುಜರಾತ್ ನಲ್ಲಿ ಬಿಜೆಪಿ ಸರ್ಕಾರ ‘ಏಪ್ರಿಲ್ ಫೂಲ್’ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿರುವ ಮತ್ತೊಂದು ಪ್ರಾಧ್ಯಾಪಕನೊಂದಿಗೆ ರಾಹುಲ್ ಮತ್ತೊಂದು ವಿನೋದ ವಿನಿಮಯ ಮಾಡಿಕೊಂಡಿದ್ದರು. ಆದರೆ ರಾಹುಲ್ ತನ್ನ ಗಟ್ಟಿ ಧ್ವನಿಯಿಂದ ಎಲ್ಲಾ 12 ತಿಂಗಳ ಹೆಸರನ್ನು ಓದಿ ಪ್ರತಿ ತಿಂಗಳು ಮೊದಲು ‘ಮೂರ್ಖ’ ಎಂದು ಸೇರಿಸಿ ನೆರೆದಿರುವ ಸಭಿಕರಿಗೆ ಮನೋರಂಜನೆಯನ್ನು ನೀಡಿದ್ದಾರೆ!! ಆದರೆ ಇದೇ ಸಂದರ್ಭದಲ್ಲಿ ಪ್ರೇಕ್ಷಕನೊಬ್ಬನು, “ಕಮಲ್ ಕಾ ಫೂಲ್” ಎಂದು ಕೂಗಿಕೊಂಡಿದ್ದಾನೆ!! ಆದರೆ ಈ ಬುದ್ದಿಜೀವಿಗಳು ಎಷ್ಟೊಂದು ಅವಾಂತರಗಳನ್ನು ಸೃಷ್ಟಿಸುತ್ತಾರೆ ಎಂದರೆ ನಿಜವನ್ನೂ ಸುಳ್ಳು ಮಾಡಿ ಮೊಸಳೆ ಕಣ್ಣೀರನ್ನು ಸುರಿಸುವುದರಲ್ಲಿ ನಿಸ್ಸೀಮರು ಎನಿಸಿಕೊಂಡಿದ್ದಂತೂ ಅಕ್ಷರಶಃ ನಿಜ.


ಯುಜಿಸಿ ಸ್ಕೇಲ್ ಬಗ್ಗೆ ಸ್ವಲ್ಪ ತಿಳಿದುಕೊಳ್ಳಿ ಬುದ್ದಿಜೀವಿಗಳೇ…..!!!!

ಈ ಚುನಾವಣಾ ಪ್ರಚಾರವನ್ನು ನೋಡಿದರೆ ಇಲ್ಲೇನು ನಾಟಕವಾಗುತ್ತಿದೆಯೇ ಎಂದೆನ್ನುಕೊಳ್ಳಬಹುದು!! ಆದರೆ ಇದು ನಡೆದಿದ್ದು ಮಾತ್ರ ನೂರಕ್ಕೆ ನೂರು ನಿಜ. ಅದರಲ್ಲೂ ಸಂವಹನದ ಸಮಯದಲ್ಲಿ, ಸಂಸ್ಕೃತ ಪ್ರಾಧ್ಯಾಪಕಿ ರಂಜನಾ ಅವಸ್ತಿ ಶಿಕ್ಷಕರಿಗೆ ನಿಶ್ಚಿತ ಆದಾಯವನ್ನು ಪರಿಚಯಿಸುವ ಮೂಲಕ ಬಿಜೆಪಿ ಸರ್ಕಾರ ತನ್ನನ್ನು ದುರ್ಬಳಕೆ ಮಾಡಿತು ಎಂದು ಅವಸ್ತಿ ಆರೋಪಿಸಿದ್ದಲ್ಲದೇ ಗೋಳೋ ಎಂದು ಅತ್ತೇ ಬಿಟ್ಟರು!! ಈಕೆಯ ಕಣ್ಣೀರಿಗೆ ಕರಗಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವೇದಿಕೆಯಿಂದ ಹೊರಬಂದು ಅವಸ್ತಿಯನ್ನು ತಬ್ಬಿಕೊಂಡು ಸಮಾಧಾನ ಮಾಡಿದ್ದನ್ನು ನೋಡಿದರೆ ನಾಟಕ ಪ್ರಿಯರು ಶಿಳ್ಳೆ ಹೊಡೆದು ಚಪ್ಪಾಳೆಯನ್ನು ಹೊಡೆಯುತ್ತಿದ್ದರೋ ಏನೋ??

ಆದರೆ ಗುಜರಾತ್ ನಲ್ಲಿ 22ವರ್ಷಗಳಿಂದ ಒಬ್ಬ ಪ್ರಾಧ್ಯಾಪಕಿಗೆ 12,000 ರೂಪಾಯಿ ವೇತನ ಪಡೆಯುತ್ತಿದ್ದೇವೆ ಎಂದು ಹೇಳಿದ್ದಾರಲ್ಲ ಅವರಿಗೆ ಏನು ಹೇಳಬೇಕೆಂದು ಗೊತ್ತಾಗುತ್ತಿಲ್ಲ!! ಯಾಕೆಂದರೆ ಯುಜಿಸಿಯ ಪ್ರಕಾರ, 67,000 + 10,000 ವೇತನವಿದೆ. ಆದರೆ ಈ ಡೊಂಗೀ ಬುದ್ದಿಜೀವಿಗಳು ಕೇವಲ 12,000 ರೂಪಾಯಿಯ ವೇತನ ಸಿಗುತ್ತಿದೆ ಎಂದು ಹೇಳಿ ಹೈ ಡ್ರಾಮಾವನ್ನು ಸೃಷ್ಟಿಸಿದ್ದಾರಲ್ಲ. ಹಾಗಾದರೆ 22 ವರ್ಷಗಳಿಂದ ಒಂದು ರೂಪಾಯಿಯ ಬಡ್ತಿಯೂ ಇಲ್ಲದೇ ಒಂದೇ ರೀತಿಯ ವೇತನ ಪಡೆಯುತ್ತಿದ್ದಾರೆ ಎಂದರೆ ಇವರಿಗೇನು ಹುಚ್ಚ ಎಂದು ಕೇಳಿದರೆ ತಪ್ಪಾಗಲಾರದು.

 

ಈ ಬುದ್ದಿಜೀವಿಗಳ ಪ್ರಕಾರ, ಯುಜಿಸಿ ರಾಜ್ಯ ಅಡಿ ಬರುವ ಸಂಸ್ಥೆಯಾಗಿರುವುದು ಗೊತ್ತೇ ಇದೆ. ಇನ್ನು ಕರ್ನಾಟಕದಲ್ಲಿ ಯುಜಿಸಿ ಸ್ಕೇಲ್ ಇದ್ದು, ಇನ್ನು ಗುಜರಾತ್ ನಲ್ಲಿ ಇಲ್ಲ ಎಂದು ಹೇಳುತ್ತಿದ್ದಾರಲ್ಲ ಇವರು ತಮ್ಮ ಮೆದುಳನ್ನು ಎಲ್ಲಿ ಅಡವಿಟ್ಟಿದ್ದಾರೋ ಗೊತ್ತಿಲ್ಲ!! ಅಂತೂ ಈ ಬುದ್ದಿಜೀವಿಗಳು ಹೈ ಡ್ರಾಮಾವನ್ನು ಸೃಷ್ಟಿಸಲು ನಾವು ಸೈ ಎಂದು ತೋರಿಸಿಕೊಟ್ಟಿರುವುದು ಮಾತ್ರ ಅಕ್ಷರಶಃ ನಿಜ!!
– ಅಲೋಖಾ

Tags

Related Articles

Close