ಪ್ರಚಲಿತ

ಗುರುತ್ವಾಕರ್ಷಣಾ ಶಕ್ತಿ ಕಂಡುಹಿಡಿದದ್ದು ನ್ಯೂಟನ್ ಅಲ್ಲ! ಅದರ ಹಿಂದಿದ್ದಾರೆ ಪ್ರಾಚೀನ ಹಿಂದೂ ಋಷಿಗಳು! -ಮ್ಯಾಂಚಿಸ್ಟರ್ ವಿಶ್ವ ವಿದ್ಯಾನಿಲಯ

ನ್ಯೂಟನ್‍ನ ಚಲನೆಯ ನಿಯಮಗಳು ಮೂರು ಭೌತಿಕ ನಿಯಮಗಳಾಗಿದ್ದು ಇವು ಒಟ್ಟಿಗೆ ಶಾಸ್ತ್ರೀಯ ಯಂತ್ರಶಾಸ್ತ್ರಕ್ಕೆ ಅಡಿಪಾಯ ಹಾಕಿವೆ. ಅವು ಕಾಯ ಮತ್ತು ಅದರ ಮೇಲೆ ವರ್ತಿಸುತ್ತಿರುವ ಶಕ್ತಿ ಮತ್ತು ಶಕ್ತಿಗನುಗುಣವಾಗಿ ಅದರ ಚಲನೆ ಇವುಗಳ ನಡುವಿನ ಸಂಬಂಧವನ್ನು ವಿವರಿಸುತ್ತವೆ.
ಸುಮಾರು ಶತಮಾನಗಳ, ಹಿಂದೆ ಅವರು ಇದನ್ನು ಅನೇಕ ವಿಧಗಳಲ್ಲಿ ವಿವರಿಸಿದರು..ಈ ಮಾತುಗಳನ್ನೆಲ್ಲಾ ನಾವು ಅದೆಷ್ಟೋ ವರ್ಷಗಳಿಂದ ಕೇಳಿಕೊಂಡು ಬರುತ್ತಿದ್ದೇವೆ…ಇಡೀ ಜಗತ್ತಿಗೆ ಐಸಾಕ್ ನ್ಯೂಟನ್ ಹಾಗೂ ಆತನ ಸಿದ್ಧಾಂತ ಚಿರಪರಿಚಿತವಾಗಿದೆ… ಆದರೆ ಆತನ ಗುರುತ್ವಾಕರ್ಷಣ ಶಕ್ತಿಯ ಸಿದ್ಧಾಂತವನ್ನು ಪ್ರತಿಪಾದಿಸಲು ಭಾರತದಿಂದ ಗುರುತ್ವ ಸಿದ್ಧಾಂತದ ಜ್ಞಾನವನ್ನೆಲ್ಲಾ ಕೊಳ್ಳೆಹೊಡೆದಿರುವ ಮಾಹಿತಿ ದೊರಕಿದೆ.
ಭಾರತೀಯರು ಮೊದಲು ವಿಮಾನವನ್ನು ಕಂಡುಹಿಡಿದಿದ್ದು ನಾವೇ ಎಂದು ಹೇಳಿದಾಗ ಎಲ್ಲರೂ ಬಾಯಿ ಬಾಯಿ ಬಿಟ್ಟು ನಗಲು ಆರಂಭಿಸಿದ್ದರು…. ನಾವು ಯಾವ ವಿಷಯನ್ನಾದರೂ ಸಮರ್ಥಿಸಲು ಹೋದಾಗ ಭಾರತವನ್ನು ಪ್ರೋತ್ಸಾಹಿಸುವ ಬದಲು ಕೀಳಾಗಿ ಕಂಡಿದ್ದೇ ಜಾಸ್ತಿ.. ಆದರೆ ಇಂದು ಐಸಾಕ್ ನ್ಯೂಟನ್ ಮಾಡಿದ ಸಿದ್ಧಾಂತ ಭಾರತೀಯರಿಂದ ಗುರುತ್ವ ಸಿದ್ಧಾಂತದ ಮಾಹಿತಿಯನ್ನು ಪಡೆದು ಮುಂದೆ ಐಸಾಕ್ ನ್ಯೂಟನ್ ಗುರುತ್ವ ಸಿದ್ಧಾಂತ ಪ್ರತಿಪಾದಿಸುತ್ತಾನೆ.
ಇಂತಹ ಜ್ಞಾನವನ್ನು ಪಾಶ್ಚಿಮಾತ್ಯರು ಕೊಳ್ಳೆ ಹೊಡೆದಿದ್ದಾರೆ ಎಂದರೆ ನಂಬಲು ಸಾಧ್ಯವೇ? ಹೌದು ಇದನ್ನು ನಾವು ನಂಬಲೇ ಬೇಕು..ಈ ವಿಷಯವನ್ನು ಕೇಳಿ ಯಾವ ಪಾಶ್ಚಿಮಾತ್ಯನೂ ನಗುವ ಅಗತ್ಯವಿಲ್ಲ..ಯಾಕೆಂದರೆ ಇದಕ್ಕೆ ತಕ್ಕುದಾದ ಪುರಾವೆಗಳು ನಮಗೆ ದೊರಕಿವೆ.
ಅಂದು ಭಾರತೀಯರನ್ನು ನೋಡಿ ನಕ್ಕಿದ ಜನರು ಇಂದು ಭಾರತವನ್ನು ಜ್ಞಾನದ ಭಂಡಾರ ಎಂದೆಲ್ಲಾ ಹೊಗಳುತ್ತಾರೆ. ಹೌದು ಮ್ಯಾಂಚಿಸ್ಟರ್ ವಿಶ್ವವಿದ್ಯಾನಿಲಯದ ಡಾ.ಜಾರ್ಜ್ ಘೇವರ್ಗಿಸ್ ಜೋಸೆಫ್ ಅವರು ಹಿಂದೂಗಳ ಕೃತಿಯಾಗಿರುವ ಹಲವಾರು ಆವಿಷ್ಕಾರಗಳನ್ನು ಮಾಡಿದ್ದಾರೆ. ಭಾರತದ ಕೆಲ ಮಾಹಿತಿಗಳನ್ನು ಕೊಳ್ಳೆ ಹೊಡೆದು ಅದನ್ನು ವಿದೇಶಿಯರು ಮಾಡಿರುವ ಆವಿಷ್ಕಾರ, ಸಿದ್ಧಾಂತ ಎಂದೆಲ್ಲಾ ಬೊಗಳೆ ಬಿಡುತ್ತಾರೆ.
ಮ್ಯಾಂಚೆಸ್ಟರ್ ಮತ್ತು ಎಕ್ಸೆಟರ್ ವಿಶ್ವವಿದ್ಯಾನಿಲಯಗಳ ತಂಡವು ಸಂಶೋಧನೆಯನ್ನು ನಡೆಸಿದ ಪ್ರಕಾರ ಹದಿನೈದನೇ ಶತಮಾನದ ಅವಧಿಯಲ್ಲಿ ಜೆಸ್ಯೂಟ್ ಮಿಷನರಿಗಳು  ಭಾರತಕ್ಕೆ ಭೇಟಿ ನೀಡಿದ್ದರು…ಆ ಸಮಯದಲ್ಲಿ ಭಾರತದ ಜ್ಞಾನವನ್ನೆಲ್ಲಾ ಕೊಳ್ಳೆ ಹೊಡೆದು ಮುಂದೆ ತಮ್ಮ ದೇಶಕ್ಕೆ ಮರಳುತ್ತಾರೆ..
ಅಂತಿಮವಾಗಿ ಅವರು ಆ ಜ್ಞಾನವನ್ನು ಐಸಾಕ್ ನ್ಯೂಟನ್‍ಗೆ ಧಾರೆ ಎರೆದು ಕೊಡುತ್ತಾರೆ.! ನಮ್ಮ ದಡ್ಡ ತನಕ್ಕೆ ವಿಶ್ವದಾದ್ಯಂತ ಪರಿವಾಗಿದ್ದು ಮಾತ್ರ ಪಾಶ್ಚಿಮಾತ್ಯರು. ಅಂದು ಬಾಯಿ ಬಾಯಿ ಬಿಟ್ಟು ನಗುತ್ತಿದ್ದ ಜನ ಈಗ ಹೇಳಿ ಭಾರತೀಯರಾಗಿ ನಾವು ಯಾರಿಗೆ ನಗಬೇಕು? ಅತ್ಯಮೂಲ್ಯ ಮಾಹಿತಿಯನ್ನು ನಮ್ಮಿಂದ ಪಡೆದು ನೀವು ಶ್ಲಾಘನೆಯನ್ನು ಪಡೆದುಕೊಂಡಿರಿ ಅಷ್ಟೆ!
ಮ್ಯಾಂಚಿಸ್ಟರ್ ವಿಶ್ವ ವಿದ್ಯಾನಿಲಯದ ಡಾ.ಜಾರ್ಜ್ ಘೇವರ್ಗೀಸ್ ಜೋಸೆಫ್ ಬಹಿರಂಗ ಪಡಿಸಿದ ಮಾಹಿತಿ
ಆಧುನಿಕ ಗಣಿತದ ಪ್ರಾರಂಭವು ಸಾಮಾನ್ಯವಾಗಿ ಯುರೋಪಿಯನ್ ಸಾಧನೆಯಾಗಿ ಕಂಡುಬರುತ್ತದೆ.. ಆದರೆ ಅವರಿಗಿಂತ ಮುಂಚೆ ಸುಮಾರು ಮಧ್ಯಕಾಲೀನ ಭಾರತದಲ್ಲಿ ಹದಿನಾಲ್ಕರಿಂದ ಹದಿನಾರನೇ ಶಮಾನದಲ್ಲಿಯೇ ಭಾರತೀಯರು ಕೆಲ ಆವಿಷ್ಕಾರವನ್ನು ಮಾಡಿದ್ದರು ಆದರೆ ಇದರ ಬಗ್ಗೆ ಯಾರೂ ಎಲ್ಲಿಯೂ ಇದನ್ನು ಬಹಿರಂಗಪಡಿಸಲಿಲ್ಲ..
.ಭಾರತ ಮಾಡಿರುವ ಆವಿಷ್ಕಾರವನ್ನು ಮಾತ್ರ ಯಾರೂ ಪ್ರಾಮುಖ್ಯತೆಯನ್ನು ನೀಡದೆ  ಹದಿನೇಳನೇ ಶಮಾನದ ಅಂತ್ಯದಲ್ಲಿ ನ್ಯೂಟನ್ ಮಾಡಿದ ಸಿದ್ಧಾಂತಕ್ಕೆ ಪ್ರಾಮುಖ್ಯತೆಯನ್ನು ನೀಡಿ ಪ್ರಪಂಚಕ್ಕೆ ಆತನನ್ನು ಪರಿಚಯಿಸಿ ಕೊಟ್ಟರು…ಅದೇ ಭಾರತವನ್ನು ಅಂದಿನಿಂದಲೇ ಅಳಿವಿನ ಅಂಚಿನಲ್ಲಿಟ್ಟರು. ಎಂಬುವುದನ್ನು ಜಾರ್ಜ್ ಇದರ ಬಗ್ಗೆ ಹೇಳುತ್ತಾರೆ.
kanada rishi gravity newton
ಕೇವಲ ಪಾಶ್ಚಾತ್ಯರನ್ನು ಮಾತ್ರ ಕೇಂದ್ರೀಕರಿಸಿ ಐಸಾಕ್ ನ್ಯೂಟನ್‍ನನ್ನು ಜಗತ್ತಿಗೆ ಪರಿಚಯಿಸಿರು..ಐಸಾಕ್ ನ್ಯೂಟನ್‍ಗೆ ಹೇಗೆ ಜಗತ್ಪ್ರಸಿದ್ಧಿಯಾಗಿದಾರೋ ಹಾಗೇ ಕೇರಳದ ಮಾಧವ ಮತ್ತು ನೀಲಕಂಠರಿಗೂ ಅಷ್ಟೇ ಸಮಾನವಾದ ಗೌರವನ್ನು ನೀಡಬೇಕು..
ಕೇರಳದ ಶಾಲೆಯಲ್ಲಿ ಮಾಧವ ಮತ್ತು ನೀಲಕಂಠರು ಮಾಡಿದ ಸಿದ್ಧಾಂತಗಳ ಮಾಹಿತಿಗಳು ಇನ್ನೂ ಲಭ್ಯವಾಗಿವೆ.. ಕೇರಳ ಶಾಲೆ ಮಾತ್ರ ಇನ್ನೂ ಅಂಗೀಕಾರವಾಗಿಲ್ಲ ಎಂಬುವುದೇ ವಿಷಾದನೀಯ ಸಂಗತಿ.!! ಐಸಾಕ್ ನ್ಯೂಟನ್‍ನ ಸಿದ್ಧಾಂತದಲ್ಲಿ ಇರುವ ಎಲ್ಲಾ ಮಾಹಿತಿಯೂ ಕೇರಳದ ಶಾಲೆಯಲ್ಲಿ ದೊರಕಿದ ಮಾಹಿತಿಯೂ ಎಲ್ಲಾ ಸಮಾನವಾಗಿ ಕಂಡುಬರುತ್ತದೆ.
ಕೆಲವೊಂದು ಕಾರಣಗಳಿಂದ ಕೇರಳವನ್ನು ಪ್ರಪಂಚಕ್ಕೆ ತೋರಿಸಲೇ ಇಲ್ಲ… ಯುರೋಪಿಯನ್ ವಸಾಹತುಶಾಹಿ ಮತ್ತು ಆಚೆಗಿನ ಪರಂಪರೆ.. ಯುರೋಪಿಯನ್ ದೇಶದ ಜನರೆಲ್ಲಾ ಬುದ್ಧಿವಂತರು ಭಾರತದವರು ಮಾತ್ರ ಬುದ್ಧಿಯಿಲ್ಲದವರು ಎನ್ನುವ ಉದ್ಧೇಶವನ್ನಿಟ್ಟುಕೊಂಡು ಇಂದಿಗೂ ಕೇರಳದ ಶಾಲೆಯಲ್ಲಿ ದೊರಕಿದ ಸಿದ್ಧಾಂತವನ್ನು ಪ್ರಪಂಚದಿಂದ ದೂರನೇ ಇಟ್ಟಿದ್ದಾರೆ.
ಇನ್ನೊಂದು ಅಂಶವನ್ನು ನಾವು ಗಮನಿಸುವುದಾದರೆ ಕೇರಳದ ಮಲಯಾಲಂನ ಸ್ಥಳೀಯ ಭಾಷೆಯಲ್ಲಿ ಯುಕ್ತಾಭಾಸಾದಂತಹ ಮೂಲಭೂತ ಪಠ್ಯಪುಸ್ತಕದಲ್ಲಿ ಗಮನಾರ್ಹವಾದ ಗಣಿತಶಾಸ್ತ್ರದ ಹೆಚ್ಚಿನ ದಾಖಲೆಗಳು ಲಭ್ಯವಾಗಿದೆ. ಐಸಾಕ್ ನ್ಯೂಟನ್‍ನ ಸಿದ್ಧಾಂತದಲ್ಲಿ ಕೂಡಾ ಇದೇ ಮಾಹಿತಿಗಳು ಕಂಡುಬಂದಿದ್ದು, ಹಾಗಾಗಿ ನ್ಯೂಟನ್‍ಗಿಂತ ಮೊದಲೇ ಭಾರತೀಯ ಹಿಂದೂಗಳು ಸಿದ್ದಾಂತವನ್ನು ಮಾಡಿದ್ದಾರೆ ಎಂಬುವುದಕ್ಕೆ ತಕ್ಕ ಸಾಕ್ಷಿಯಾಹಗಿದೆ.
ಸುಮಾರು 500ವರ್ಷಗಳಿಂದ ಭಾರತದಿಂದ ಪುಸ್ತಕ ಆಮದು ಮಾಡಿಕೊಳ್ಳುತ್ತಿದ್ದ ಪಾಶ್ಚಿಮಾತ್ಯರು!!
ಪಾಶ್ವಿಮಾತ್ಯರು ಭಾರತಕ್ಕೆ ಬಂದು ನಮ್ಮ ವಿಧ್ಯೆಯನ್ನು ಕೊಳ್ಳೆ ಹೊಡೆದಿದ್ದಲ್ಲದೆ ಇಲ್ಲಿ ಸುಮಾರು 500 ವರ್ಷಗಳಿಂದ ಪುಸ್ತಕಗಳನ್ನು ಆಮದು ಮಾಡಿಕೊಳ್ಳುತ್ತಿದ್ದರು. ನ್ಯಾವಿಗೇಷನಲ್ ವಿಧಾನಗಳ ಮತ್ತು ಕೇರಳದ ಗಣಿತ ತಜ್ಞರಿಂದ ನಿಖರವಾದ ಸಮಯವನ್ನು ಲೆಕ್ಕಹಾಕಲು ಜೆಸ್ಯೂಟ್‍ಗಳು ಕಲಿತವು.
ಐಸಾಕ್ ನ್ಯೂಟನ್ ಸಿದ್ಧಾಂತಕ್ಕಿಂತ ಮುಂಚೆ ನಮ್ಮ ಭಾರತೀಯರು ಆವಿಷ್ಕಾರವನ್ನು ಮಾಡಿದ್ದಾರೆ ಎಂಬುವುದಕ್ಕೆ ಈಗ ನಿಖರವಾದ ದಾಖಲೆಗಳನ್ನು ಕಂಡುಹಿಡಿದಿದ್ದಾರೆ….ಭಾರತದಲ್ಲಿ ಆವಿಷ್ಕಾರವನ್ನು ಮಾಡುವ ಸಮಯದಲ್ಲಿ ಜೆಸ್ಯುಟ್‍ಗಳು ಆ ಸಮಯದಲ್ಲಿ ಆ ಪ್ರದೇಶದಲ್ಲಿ ಇದ್ದರು ಎಂಬ ಸಾಕ್ಷಿ ಕೂಡಾ ದೊರಕಿದೆ. ಗಣಿತ ಶಾಸ್ತ್ರವನ್ನು ಇಲ್ಲಿ ಇದ್ದು ಚೆನ್ನಾಗಿ ಇದರಲ್ಲಿ ಪಾರಂಗತರಾದರು ಎಂಬುವುದಕ್ಕೆ ಬಲವಾಗಿ ಸಾಕ್ಷಿ ದೊರಕಿದೆ.
ಜೂಲಿಯನ್ ಕ್ಯಾಲೆಂಡರ್ ಅನ್ನು ಆಧುನೀಕರಣಗೊಳಿಸಲು ಪೋಪ್ ಗ್ರೆಗೊರಿ ಎಂಬಾತ ಸಮಿತಿಯನ್ನು ಸ್ಥಾಪಿಸಿದ್ದರು. ಈ ಸಮಿತಿಯು ಜರ್ಮನಿಯ ಜೆಸ್ಯುಟ್ ಖಗೋಳಶಾಸ್ತ್ರಜ್ಞ/ಗಣಿತ ಕ್ಲೇವಿಸ್ ಆಗಿದ್ದು, ಜನರು ಪ್ರಪಂಚದ ಇತರ ಭಾಗದಲ್ಲಿ ಹೇಗೆ ಕ್ಯಾಲೆಂಡರ್ ಅನ್ನು ನಿರ್ಮಿಸಿದರು ಎಂಬುವುದರ ಕುರಿತು ಆಳವಾಗಿ ಅಧ್ಯಯನ ನಡೆಸಿದ್ದರಂತೆ. ಹೀಗೆ ಅಧ್ಯಯನ ನಡೆಸಿದಾಗ ಕೇರಳ ಶಾಲೆಯು ಮೊದಲ ಸಾಲಿನಲ್ಲಿ ಇತ್ತೆಂದು ಮಾಹಿತಿಗಳಿಂದ ಲಭ್ಯವಾಗುತ್ತದೆ.
ಹೀಗೆ ಭಾರತವನ್ನು ಶತಮಾನಗಳ ಹಿಂದಿನಿಂದಲೇ ಕೀಳರಿಮೆಯಿಂದ ಕಂಡುಕೊಂಡು ಬಂದಿದ್ದಾರೆ. ಇದೇ ಗುರುತ್ವಾಕರ್ಷಣ ಶಕ್ತಿಯ ಸಿದ್ಧಾಂತವನ್ನು ಪ್ರತಿಪಾದಿಸಿಯೇ ನ್ಯೂಟನ್ ಪ್ರಸಿದ್ಧಿಯಾಗಿದ್ದು. ಆರ್ಯಭಟ ಹಾಗೂ ಇನ್ನಿತರ ಭಾರತೀಯ ವಿಜ್ಞಾನಿಗಳು ಸಾವಿರಾರು ವರ್ಷಗಳ ಹಿಂದೆಯೇ ಗುರುತ್ವಾಕರ್ಷಣಾ ಶಕ್ತಿ , ಗ್ರಹಣದ ರಹಸ್ಯವನ್ನು ತೆರೆದು ತೋರಿಸಿದ್ದಾದರೂ ನಮ್ಮ ಬುದ್ದಿಗೆ ಗ್ರಹಣ ಹಿಡಿದಿರುವುದರಿಂದ ನಾವಿಂದು ಮೂಢ ಮತಿಗಳಾಗಿದ್ದೇವೆ ಅಷ್ಟೇ!!.
-ಪವಿತ್ರ
Tags

Related Articles

Close