ಅಂಕಣ

ಗುರುತ್ವಾಕರ್ಷಣ ಶಕ್ತಿಯನ್ನು ನ್ಯೂಟನ್ ಗಿಂತ ಅನೇಕ ವರ್ಷಗಳ ಹಿಂದೆಯೇ ಕಂಡುಹಿಡಿದಿದ್ದ ಭಾರತೀಯ!! ಆದರೆ…

ಒಂದು ಮಾತು. ಒಂದೇ ಒಂದು ವಿಚಾರದ ಕುರಿತಾಗಿ ಚಿಕ್ಕಂದಿನಿಂದ ಕಲಿಯುತ್ತಾ ಬಂದಿದ್ದೇವೆ. ಇಂಗ್ಲಿಷ್ ಗಣಿತಶಾಸ್ತ್ರಜ್ಞ ಮತ್ತು ಭೌತವಿಜ್ಞಾನಿ ಸರ್ ಐಸಾಕ್ ನ್ಯೂಟನ್ ಅವರು ಪ್ರಕೃತಿಯ ಶಕ್ತಿಯ ಕುರಿತಾಗಿ ಯೋಚಿಸುತ್ತಿರುವಾಗ ಸೇಬು ತನ್ನ ತಲೆಗೆ ಬಿತ್ತು. ಗುರುತ್ವಾಕರ್ಷಣ ಶಕ್ತಿಯನ್ನು ಕಂಡುಹಿಡಿಯುವುದಕ್ಕೆ ಅದು ಪ್ರೇರಣೆಯನ್ನು ನೀಡಿತು ಎಂಬುದಾಗಿ. ಆದರೆ‌ ನೆನಪಿರಲಿ. ನ್ಯೂಟನ್ಗೆ ಮುಂಚೆಯೇ ಗುರುತ್ವವನ್ನು ತಿಳಿದಿದ್ದ ಓರ್ವ ಭಾರತೀಯ!!! ನ್ಯೂಟನ್ ಓರ್ವ ಶ್ರೇಷ್ಠ‌ವಿಜ್ಞಾನಿ ಎಂಬುದು ನಿಸ್ಸಂಶಯ‌. ಆದರೆ ನೈಜ ಇತಿಹಾಸವನ್ನು ಎಲ್ಲರೂ ತಿಳಿಯಬೇಕೆಂಬುದು ನಮ್ಮ ಆಶಯವಷ್ಟೇ.!! ಅದಕ್ಕೆ ತಕ್ಕ ಆಧಾರವನ್ನೂ ಈ ಲೇಖನದ ಅಂತಿಮ ಭಾಗದಲ್ಲಿ ಉಲ್ಲೇಖಿಸಲಾಗಿದೆ. ನೈಜ ಇತಿಹಾಸವನ್ನು ಪರಿಶೀಲಿಸಬಯಸುವವರು ಅವುಗಳು ಅವಲೋಕಿಸಬೇಕೆಂದೇ ನನ್ನ ಆಶಯ..

ಇತ್ತೀಚೆಗೆ ಮಾಜಿ ಇಸ್ರೋ ಮುಖ್ಯಸ್ಥ ಜಿ ಮಾಧವನ್ ನಾಯರ್ ವೇದಗಳಲ್ಲಿನ ಕೆಲವು ಶ್ಲೋಕಗಳು ಚಂದ್ರನಲ್ಲಿ ನೀರಿನ ಅಂಶ ಇರುವುದರ ಕುರಿತಾಗಿ ವರ್ಣಿಸಲಾಗಿದೆ ಹಾಗೂ ಖಗೋಳಶಾಸ್ತ್ರದ ಪರಿಣತರಾದ ಆರ್ಯಭಟ್ಟ ಐಸಾಕ್ ನ್ಯೂಟನ್ಗಿಂತ ಮುಂಚೆ ಗುರುತ್ವದ ಶಕ್ತಿಯ ಬಗ್ಗೆ ಜಗತ್ತಿಗೆ ತಿಳಿಸಿರುವುದನ್ನು ಉಲ್ಲೇಖಿಸಿರುವ ಕುರಿತಾಗಿ ಪ್ರತಿಪಾದಿಸಿದ್ದಾರೆ. ಭಾರತೀಯ ವೇದಗಳು ಮತ್ತು ಪ್ರಾಚೀನ ಗ್ರಂಥಗಳಲ್ಲಿ ಮೆಟಾಲರ್ಜಿ, ಬೀಜಗಣಿತ, ಖಗೋಳಶಾಸ್ತ್ರ, ವಾಸ್ತುಶಿಲ್ಪ, ಜ್ಯೋತಿಷ್ಯ ಮತ್ತು ಗಣಿತಶಾಸ್ತ್ರದ ಬಗ್ಗೆ ಮಾಹಿತಿಯನ್ನು ಹೊಂದಿದ್ದಾವೆ ಮತ್ತು ಪಾಶ್ಚಿಮಾತ್ಯ ನಾಗರೀಕತೆಗಳು ಉದಯವಾಗುವ ಮುಂಚೆಯೇ‌ ಇವು ಪ್ರಚಲಿತದಲ್ಲಿವು ಎಂಬುದಾಗಿ ಪದ್ಮವಿಭೂಷಣ ಪ್ರಶಸ್ತಿ ವಿಜೇತರುವ ಆಗಿರುವ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಸಂಸ್ಕೃತದಲ್ಲಿ ಭಾಷೆಯಲ್ಲಿ ಪ್ರಾವೀಣ್ಯತೆಯನ್ನು ಹೊಂದಿದವರು ಇಂಥಹ ವಿಚಾರಗಳನ್ನು ಅರಿಯಬಹುದಾಗಿದೆ. ಕಾರಣ ಅವುಗಳ ಗ್ರಂಥ ಆ ಭಾಷೆಯಲ್ಲಿವೆ. ಮಾಜಿ ISRO ಮುಖ್ಯಸ್ಥರು ಈ ಮಾಹಿತಿಯು “ಮಂದಗೊಳಿಸಿದ ಸ್ವರೂಪ” ದಲ್ಲಿದೆ ಮತ್ತು ಆಧುನಿಕ ವಿಜ್ಞಾನವು ಈ ವಿಚಾರಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟಕರವೆಂದು ಹೇಳುತ್ತಾರೆ. “ವೇದಗಳಲ್ಲಿ ಕೆಲವು ಶ್ಲೋಕಗಳು ಚಂದ್ರನ ಮೇಲೆ ನೀರಿನ ಉಪಸ್ಥಿತಿ ಇದೆ ಎಂದು ಹೇಳುತ್ತವೆ, ಆದರೆ ಯಾರೂ ಅದನ್ನು ನಂಬುವುದಿಲ್ಲ. ನಂಬಲಿಲ್ಲ ಕೂಡ. ಆದರೆ ಯಾವಾಗ ಚಂದ್ರಯಾನ್ ಮಿಷನ್ ಮೂಲಕ ನಾವು ಅದನ್ನು ಆ ವಿಚಾರ ಸತ್ಯವೆಂದು ಸಾಬೀತು ಮಾಡಿದೆವೋ , ಆವಾಗ ಜಗತ್ತು ಚಂದ್ರನಲ್ಲಿ ನೀರಿರುವುದು ಸತ್ಯವೆಂದು ನಂಬಿತು. ಇದನ್ನು ಸಾಧಿಸಿದ ಪ್ರಥಮರು ನಾವುಗಳೇ “ಎಂದು ನಾಯರ್ ಹೇಳಿದರು.
5ನೇ ಶತಮಾನದ ಖಗೋಳಶಾಸ್ತ್ರಜ್ಞ-ಗಣಿತಶಾಸ್ತ್ರಜ್ಞ ಆರ್ಯಭಟ್ಟರ ಕುರಿತು ಮಾತನಾಡಿದ ನಾಯರ್, “ಆರ್ಯಭಟ್ಟಾ ಮತ್ತು ಭಾಸ್ಕರರು ಬಾಹ್ಯಾಕಾಶ ಗ್ರಹಗಳು, ಗ್ರಹಗಳ ಕೆಲಸ ಮತ್ತು ಅದರ ಪರಿಶೋಧನೆಗೆ ವ್ಯಾಪಕ ಕೆಲಸ ಮಾಡಿದ್ದಾರೆ ಎಂಬುದಾಗಿ ಚಿಂತಿಸಿದಾಗಲೆಲ್ಲಾ ಹೆಮ್ಮೆಯಾಗುತ್ತದೆ. ಅದು ಸವಾಲಿನ ಕ್ಷೇತ್ರಗಳಲ್ಲಿ ಒಂದಾಗಿದೆ. ಚಂದ್ರಯಾನಕ್ಕೆ ಸಹ ಆರ್ಯಭಟ್ಟಾ ಸಮೀಕರಣವನ್ನು ಬಳಸಲಾಯಿತು. ವಾಸ್ತವವೇನಂದರೆ ನ್ಯೂಟನ್ರು ಸುಮಾರು 1500 ವರ್ಷಗಳ ನಂತರ ಇದನ್ನು ಕಂಡುಕೊಂಡಿದ್ದರು. ”

2003-09ರಲ್ಲಿ ಇಸ್ರೋ ಮುಖ್ಯಸ್ಥರಾಗಿದ್ದ ನಾಯರ್ , ಹರಪ್ಪ ನಾಗರಿಕತೆಯ ಸಮಯದಲ್ಲಿ ನಗರಗಳನ್ನು ನಿರ್ಮಿಸಲು ವಸ್ತುವಿಷ್ಠ ಲೆಕ್ಕಾಚಾರವನ್ನೇ ಬಳಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ವೇದ ಕಾಲದಲ್ಲಿ ಪೈಥಾಗರಸ್ ಪ್ರಮೇಯ ಕೂಡ ಅಸ್ತಿತ್ವದಲ್ಲಿತ್ತು. ಏರೋ-ಡೈನಮಿಕ್ಸ್ ಮತ್ತು ಪ್ಲ್ಯಾಸ್ಟಿಕ್ ಸರ್ಜರಿಯ ಬಗ್ಗೆ ವೈಜ್ಞಾನಿಕ ಮಾಹಿತಿಯನ್ನು ಹೊಂದಿರುವ ಪ್ರಾಚೀನ ಭಾರತೀಯ ಗ್ರಂಥಗಳ ಬಗ್ಗೆ ಬಿಜೆಪಿ ನಾಯಕರು ಮಾತನಾಡಿದಾಗ ಈ ಪ್ರತಿಕ್ರಿಯೆಯನ್ನು ಮಾಡಲಾಗಿತ್ತು.

ಬಹು ಹಂತದ ಉಪಗ್ರಹ ಉಡಾವಣಾ ವಾಹನಗಳ ಅಭಿವೃದ್ಧಿಗೆ ಇಸ್ರೊ ಅಧ್ಯಕ್ಷರಾಗಿದ್ದ ನಾಯರ್ ಗಮನಾರ್ಹ ಕೊಡುಗೆ ನೀಡಿದ್ದಾರೆ. ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, 2015 ರಲ್ಲಿ ಆರ್ಯಭಟ್ಟಾ ಬಗ್ಗೆ ಮಾತನಾಡುತ್ತಿದ್ದರು. “ವಿಜ್ಞಾನಿಯಾಗಿ ಹೇಳುತ್ತಿದ್ದೇನೆ, ಆ ದಿನಗಳು ಬಹಳವಾಗಿಯೇ ವಿಕಸನಗೊಂಡಿತು” ಇದು ಅವರ ಆ ಸಮ್ಮೇಳನದಲ್ಲಿ ಅಂತಿಮ ನುಡಿಯಾಗಿತ್ತು.

ಇಂತಹ ಅನೇಕ ಪ್ರತಿಕ್ರಿಯೆಗಳನ್ನು ಕೇಳಿದಾಗಲೆಲ್ಲಾ ನಮಗೆಲ್ಲಾ ಬಹಳ ಖುಷಿ. ಭಾರತವನ್ನು ಶ್ಲಾಘಿಸಿದರಲ್ಲಾ ಎಂಬುದಾಗಿ. ಆದರೆ ಅನೇಕರಿಗೆ ವಾಕರಿಕೆಯೂ ಪ್ರಾರಂಭವಾಗುತ್ತದೆ. ಸುಳ್ಳು ಇತಿಹಾಸವನ್ನೇ ಪ್ರತಿಪಾದಿಸುತ್ತಿದ್ದಾರೆ ಇವರೆಂಬುವ ಕಾರಣಕ್ಕೆ.. ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂಬ ಕೂಗು ಕೂಡ ಕೇಳಿಸುತ್ತಿರುತ್ತದೆ‌ ಅನೇಕ ಬಾರಿ. ಅವರೆಲ್ಲರೂ ಸಂಸ್ಕೃತ ಕಲಿತು ವೇದ-ಪುರಾಣಗಳಲ್ಲಿನ ಉಲ್ಲೇಖವನ್ನು ತಿಳಿಯಬೇಕೆಂಬುದು ನನ್ನ ಆಶಯ ಕೂಡ.

1. ಗ್ರಹಗಳ ಚಲನೆ

ಕಕ್ಷಾಪ್ರತಿಮಂಡಲಗಾ ಭ್ರಮಂತಿ ಸರ್ವೇ ಗ್ರಹಾ: ಸ್ವಚಾರೇಣ |
ಮಂದೋಚ್ಚಾದನುಲೋಮಂ ಪ್ರತಿಲೋಮಂ ಚೈವ ಶೀಘ್ರೋಚ್ಛಾತ್ ||
(ಆರ್ಯಭಟೀಯ, ಕಾಲಕ್ರಿಯಾಪಾದ -3.17)

ಅರ್ಥ : ಮಧ್ಯಮಗ್ರಹಗಳ ಕಕ್ಷಾವೃತ್ತದಲ್ಲಿ (ಭೂಕೇಂದ್ರವೃತ್ತ)ಚಲಿಸುತ್ತವೆ ಹಾಗೂ ಸ್ಫುಟ ಗ್ರಹಗಳು ಪ್ರತಿವೃತ್ತದಲ್ಲಿ ಚಲಿಸುತ್ತದೆ. ಭೂಕೇಂದ್ರವೃತ್ತದಲ್ಲಿ ಹಾಗೂ ಪ್ರತಿವೃತ್ತದಲ್ಲಿ ಚಲಿಸುತ್ತಿರುವ ಎಲ್ಲಾ ಗ್ರಹಗಳು ತಮ್ಮದೇ ಆದ ಗತಿಯಲ್ಲಿ ಮಂದೋಚ್ಛದಿಂದ ಅನುಲೋನವಾಗಿಯೂ(ಪೂರ್ವಾಭಿಮುಖವಾಗಿ), ಶೀಘ್ರೋಚ್ಚದಿಂದ ಪ್ರತಿಲೋಮವಾಗಿಯೂ (ಪಶ್ಚಿಮಾಭಿಮುಖವಾಗಿ) ಚಲಿಸುತ್ತವೆ.

2. ಗ್ರಹಣಕ್ಕೆ ಕಾರಣ

ಛಾದಯತಿ ಶಶೀ ಸೂರ್ಯಂ ಶಶಿನಂ ಮಹತೀ ಚ‌ ಭೂಚ್ಛಾಯಾ |
( ಆರ್ಯಭಟೀಯ ಗೋಲಪಾದ -37)

ಅರ್ಥ : ಚಂದ್ರನು ಸೂರ್ಯನನ್ನು ಆವರಿಸುತ್ತಾನೆ ಹಾಗೂ ಭೂಮಿಯ ಮಹಾಚ್ಛಾಯೆಯು ಚಂದ್ರನನ್ನು ಆವರಿಸುತ್ತವೆ.

3. ಗುರುತ್ವಾಕರ್ಷಣೆಯ‌ ಪರಿಕಲ್ಪನೆ

ಆಕೃಷ್ಟಿಶಕ್ತಿಶ್ಚ ಮಹೀ ತಯಾ ಯತ್
ಖಸ್ಥಂ ಗುರು ಸ್ವಾಭಿಮುಖಂ ಸ್ವಶಕ್ತ್ಯಾ |
ಆಕೃಷ್ಯತೇ ತತ್ಪತತೀವ ಭಾತಿ
ಸಮೇ ಸಮಂತಾತ್ ಕ್ವ ಪತತ್ವಿಯಂ ಖೇ ||
( ಸಿದ್ಧಾಂತಶಿರೋಮಣಿ, ಭುವನಕೋಶ -6) (528. AD)

ಅರ್ಥ : ಭೂಮಿಯು ಆಕರ್ಷಣಶಕ್ತಿಯಿಂದ ಕೂಡಿದ್ದು ಅದರಿಂದ ಆಗಸದಲ್ಲಿರುವ ಪದಾರ್ಥಗಳು ಬಲವಾಗಿ ತನ್ನೆಡೆಗೆ ಆಕರ್ಷಿಸಲ್ಪಡುತ್ತವೆ. ಅವು ನಮಗೆ ಬೀಳುತ್ತಿವೆಯೆಂಬಂತೆ ಭಾಸವಾಗುತ್ತವೆ. ಆದರೆ ಎಲ್ಲೆಡೆಯೂ ನಿರಾಧಾರವಾಗಿ ಸಮವಾಗಿರುವ ಆಕಾಶದಲ್ಲಿ ಇದು ಎಲ್ಲಿ ತಾನೇ ಬೀಳಲು ಸಾಧ್ಯ?

ಇದೇ ಗುರುತ್ವಾಕರ್ಷಣ ಶಕ್ತಿಯ ಸಿದ್ಧಾಂತವನ್ನು ಪ್ರತಿಪಾದಿಸಿಯೇ ಆತ‌ ನ್ಯೂಟನ್ ಪ್ರಸಿದ್ಧಿಯಾಗಿದ್ದು. ಆರ್ಯಭಟ್ಟ ಹಾಗೂ ಇನ್ನಿತರೆ ಭಾರತೀಯ ವಿಜ್ಞಾನಿಗಳು ಸಾವಿರಾರು ವರ್ಷಗಳ ಹಿಂದೆಯೇ ಗರುತ್ವಾಕರ್ಷಣಶಕ್ತಿ, ಗ್ರಹಣದ ರಹಸ್ಯವನ್ನು ತೆರೆದು ತೋರಿಸಿದ್ದರಾದರೂ, ನಮ್ಮ ಬುದ್ಧಿಗೆ ಗ್ರಹಣ ಹಿಡಿದಿರುವುದರಿಂದ ನಾವಿಂದೂ ಮೂಢಮತಿಗಳಂತೆ ವರ್ತಿಸುತ್ತಿದ್ದೇವೆ ಅಷ್ಚೇ.. !!

– ವಸಿಷ್ಠ

Tags

Related Articles

Close