ಅಂಕಣಪ್ರಚಲಿತ

ಗೋಮಾಂಸ ಭಕ್ಷಿಸುವುದರಲ್ಲಿ ಹಿಂದೂ ಸಮುದಾಯಕ್ಕೆ ನಾಲ್ಕನೇ ಸ್ಥಾನ!! ಹಿಂದೂಸ್ಥಾನ್ ಟೈಮ್ಸ್ ನ ಈ ಸ್ಫೋಟಕ ಮಾಹಿತಿಯನ್ನು ಪೋಸ್ಟ್ ಕಾರ್ಡ್ ಹೇಗೆ ಬೆತ್ತಲೆಗೊಳಿಸಿತು ಗೊತ್ತೇ?!

ಬಹುಷಃ ಹಿಂದೂಗಳೆನ್ನಿಸಿಕೊಂಡವರಿಗೆ ಈ ಪತ್ರಿಕಾ ಸಮೀಕ್ಷೆಯ ವರದಿಯೊಂದನ್ನು ಕೇಳಿದರೆ ನಾಚಿಕೆಯಾಗಬಹುದು! “ಗೋ ಮಾಂಸ ತಿನ್ನುವ ಜಗತ್ತಿನ ನಾಲ್ಕನೇ ದೊಡ್ಡ ಪಂಗಡವೆಂದರೆ ಹಿಂದೂ” ಎಂಬ Hindusthan Times ಎಂಬ ಪತ್ರಿಕಾ ವರದಿ ನೀಡಿದ್ದು ಹಿಂದೂಗಳಿಗೆ ನಾಚಿಕೆಯಾಗಲೆಂದೇ ಅನ್ನುವುದೂ ಅಷ್ಟೇ ಸತ್ಯ!

ಮೊದಲನೇ ಸಲ ನೋಡುವಾಗ, 96.60 ಕೋಟಿ ಜನರಲ್ಲಿ, 1.39%, ಅಂದರೆ 1.34 ಕೋಟಿ ಜನರು ಗೋಮಾಂಸವನ್ನು ತಿನ್ನುತ್ತಾರೆ ಎಂದೆನ್ನಿಸಿದಾಗ,
ಹಿಂದೂಗಳ ಧರ್ಮಶ್ರದ್ಧೆಯ ಬಗ್ಗೆಯೇ ಪ್ರಶ್ನೆಗಳೆದ್ದವು! “ಬೇರೆ ಮತದವರು ಗೋ ಮಾಂಸ ತಿನ್ನುವುದನ್ನು ವಿರೋಧಿಸುವ ಹಿಂದೂಗಳಲ್ಲೇ, ಕೋಟ್ಯಾಂತರ ಮಂದಿ ಗೋಮಾಂಸವನ್ನು ತಿನ್ನುತ್ತಾರೆ.”

“ನಾವು ಗೋವನ್ನು ಪೂಜಿಸುತ್ತೇವೆ! ಅಮ್ಮಾ ಎಂದೇ ಸಂಭೋಧಿಸುತ್ತೇವಾದರೂ, ನಮ್ಮದೇ ಮಂದಿ ಗೋ ಮಾಂಸ ಭಕ್ಷಣೆ ಮಾಡುತ್ತಾರೆ.”

ಇಂತಹ ಪ್ರಶ್ನೆಗಳೆಲ್ಲ ಎದ್ದಾಗ, ಸಹಜವಾಗಿಯೇ ಅನ್ಯಮತದವರು ಮತ್ತೆ ತಗಾದೆ ತೆಗೆದರು! ಮತ್ತೆ ಗೋ ಹತ್ಯೆಯನ್ನು ವಿರೋಧಿಸುವ ಸ್ವರಗಳು ಅಸಹಾಯಕವಾಗಿ ಕೂರುವಂತಾಯಿತು!

ಆದರೆ, ಪ್ರಶ್ನೆ ಇದ್ದದ್ದು ಭಾರತದ ಇಡೀ ಹಿಂದೂಗಳ ಸಂಖ್ಯೆಯಲ್ಲಲ್ಲ, ಬದಲಾಗಿ ಎಷ್ಟು ಜನ ಗೋಮಾಂಸ ಭಕ್ಷಕರಿದ್ದಾರೆ ಎಂದಷ್ಟೇ!

ವಿಷಯಕ್ಕಾಗಿ ಹೇಳುತ್ತೇನೆ! ಭಾರತದಲ್ಲಿ 2.78 ಕೋಟಿ ಜನ ಕ್ಯಾಥೋಲಿಕ್ ಗಳಿ‌ದ್ದಾರೆ! ಅವರೆಲ್ಲರೂ ಗೋಮಾಂಸವನ್ನು ತಿನ್ನುತ್ತಾರೆಂದೇ ಭಾವಿಸಿಕೊಳ್ಳೋಣ! ಪಾಶ್ಚಾತ್ಯ ಕ್ರಮದ ಗಣಿತದ ಥಿಯರಿಗಳನ್ನೇ ಇಟ್ಟು ನೋಡೋಣ! (ಆರ್ಯಭಟನ ಗಣಿತವೆಂದರೆ ಮತ್ತೆ ಉಳಿದೆಲ್ಲ ಸೆಕ್ಯುಲರ್ಸ್ ಗಳಿಗೆ ಆರ್ಯಭಟನ ಗಣಿತ ಹಿಂದುತ್ವದ ಪರವಿದೆ ಎಂದು ಬೊಬ್ಬರಿಯಬಹುದು.)

ಪಾಶ್ಚಾತ್ಯ ಗಣಿತದ ಲೆಕ್ಕಾಚಾರದ ಪ್ರಕಾರ, ಕ್ರಾಸ್ ಮಲ್ಟಿಪ್ಲೈ ಮಾಡಿದರೆ, ಈ ಕೆಳಗಿನ ಸಮೀಕ್ಷಾ ವರದಿ ಪ್ರಕಾರ, 10.48 ಕೋಟಿ ಕ್ಯಾಥೋಲಿಕ್ ಜನರು ಸಿಗುತ್ತಾರೆ. ಅದೂ, 2011 ರ ಸಮೀಕ್ಷೆಯ ಪ್ರಕಾರ, 2.78 ಕೋಟಿ ಕ್ಯಾಥೋಲಿಕ್ ಗೋಮಾಂಸ ತಿನ್ನುತ್ತಾರೆ ಎಂಬುದನ್ನಿಟ್ಟು ನೋಡಿದರೆ, 26.51% ಕ್ಯಾಥೋಲಿಕ್ ಗೋಮಾಂಸಾರಾಧಕರು ಎಂಬ ಲೆಕ್ಕ ಸಿಗುತ್ತದೆ. ಹಾಗಾದಲ್ಲಿ, ಹಿಂದೂಗಳು ಕೇವಲ 14.50 % ನಷ್ಟು ಮಾತ್ರ ಅಥವಾ ಅದಕ್ಕಿಂತ ಕಡಿಮೆ ಗೋಮಾಂಸವನ್ನು ತಿನ್ನುತ್ತಾರೆ!

ಹಾಗಾದರೆ, 96.62 ಕೋಟಿ ಹಿಂದೂ ಜನಸಂಖ್ಯೆಯಲ್ಲಿ 14.50 ಲಕ್ಷ ಹಿಂದೂಗಳು ಮಾತ್ರ ಗೋ ಮಾಂಸವನ್ನು ಭಕ್ಷಣೆ ಮಾಡುತ್ತಾರಷ್ಟೇ! ಇದು ವಾಸ್ತವ ಸಂಗತಿಯಾದರೂ ಸ್ವಲ್ಪ ಖುಷಿ ಪಡುವಂತಹುದ್ದೇ! ಯಾಕೆಂದರೆ, ಹಿಂದುತ್ವ ಎನ್ನುವುದು ಇದಮಿತ್ಥಂ ಎಂಬ ಸಿದ್ಧಾಂತದ ಮೇಲೆ ಬೆಳೆದು ಬಂದಿದ್ದಲ್ಲ. ನಾಸ್ತಿಕನಿಗೂ ಆಸ್ತಿಕನಿಗೂ ಸಮಾನವಾದ ಗೌರವವನ್ನೇ ಹಿಂದುತ್ವ ಪ್ರತಿಪಾದಿಸುವುದರಿಂದ, ಹಿಂದುತ್ವದ ಸಿದ್ಧಾಂತಗಳನ್ನು ಯಾಕೆ ಪಾಲಿಸುವುದಿಲ್ಲ ಎಂಬೆಲ್ಲ ಪ್ರಶ್ನೆಗಳನ್ನೂ ಮಾಡದ ಹಿಂದುತ್ವದಲ್ಲಿ ಅಕಸ್ಮಾತ್ ಪ್ರಶ್ನೆಗಳನ್ನು ಮಾಡಿದರೆ ಸೋ ಕಾಲ್ಡ್ ಬುದ್ಧಿಜೀವಿಗಳು, ಸ್ವೇಚ್ಛಾಚಾರಿಗಳು, ಎಡಪಂಥೀಯರುಗಳೆಲ್ಲ ಸಜೀವವಾಗಿಯೇ ಗೋವನ್ನು ನಟ್ಟ ನಡು ರಸ್ತೆಯಲ್ಲಿ ಹರಿದು ಹಸಿ ಮಾಂಸವನ್ನು ತಿನ್ನುತ್ತಾರೆ!

ಸತ್ಯವಾಗಿ ಹೇಳಬೇಕೆಂದರೆ, ಈ 14.50 ಲಕ್ಷ ಹಿಂದೂಗಳೆಲ್ಲ ಇದೇ ವರ್ಗಕ್ಕೆ ಸೇರಿದವರಷ್ಟೇ! ಹೆಸರಿಗೆ ಮಾತ್ರ ಹಿಂದೂವಾಗಿರುವ ಇವರೆಲ್ಲ ಯಾರೆಂದರೆ ಪಿಣರಾಯಿ, ಸಿದ್ಧರಾಮಯ್ಯ, ದೇವೇಗೌಡ ಹಾಗೂ ನೆಹರೂ ಗಾಂಧಿಯಂತಹವರ ಕಮ್ಮಿನಿಷ್ಟೆಯವರು ಹಾಗೂ ಅವರ ಬೆಂಬಲಿಗರಷ್ಟೇ!

ಹಿಂದೂಗಳನ್ನಷ್ಟೇ ವೈಭವೀಕರಿಸಿ ಪ್ರಕಟಿಸಿದ ಈ ಸಮೀಕ್ಷೆಯ ಹಿಂದೆ. . . . .

ಹಿಂದೂಸ್ಥಾನ್ ಟೈಮ್ಸ್ ಎಂಬ ಪತ್ರಿಕೆಗೂ ಸಹ ಬೇಕಿದ್ದದು ಅದೇ! ಹಿಂದೂ ವಿರೋಧಿಗಳು ಗೋರಕ್ಷಕರೂ ಗೋಮಾಂಸವನ್ನು ತಿನ್ನುತ್ತಾರೆಂಬುದನ್ನು ಬೊಗಳಲಿ ಎಂದು! ಬಿಜೆಪಿಯ ನಾಯಕರೂ ಗೋಮಾಂಸ ಭಕ್ಷಕರೆಂದು ಸುಳ್ಳು ಆರೋಪವನ್ನು ಮಾಡುವುದಕ್ಕೆ ಸುಲಭವಾಗಲಿ ಎಂದು! ಬಹುಷಃ ಪ್ರಕಟ ಪಡಿಸಿದ ನಕ್ಷೆಯೊಂದು ಲಕ್ಷಗಟ್ಟಲೇ ಜನರು ನೋಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದಾಗ, ಹಿಂದೂಗಳು ಅಸಹಾಯಕರಾಗಿಬಿಟ್ಟಿದ್ದರು!

ಆದರೂ, ಹಿಂದೂಗಳು ಸಂಭ್ರಮಿಸಬೇಕು! ಯಾಕೆ ಗೊತ್ತೇ?!

ಭಾರತದಲ್ಲಿ ಬಹುಸಂಖ್ಯೆಯಲ್ಲಿರುವುದು ಹಿಂದೂಗಳು! ಅದರಲ್ಲಿ ಕೇವಲ 14.50 ಲಕ್ಷ ಜನ ಹಿಂದೂಗಳಲ್ಲದ ಹಿಂದೂವೆನಿಸಿಕೊಂಡವರು ಗೋಮಾಂಸ ಭಕ್ಷಕರು! ಅದನ್ನು ವೈಭವೀಕರಿಸುವುದು ಬಿಟ್ಟು ಹಿಂದೂಸ್ಥಾನ್ ಟೈಮ್ಸ್ ಬೇರಾವುದನ್ನೋ ವೈಭವೀಕರಿಸಿತ್ತು! ಇದು ಹೇಗೆ ಸತ್ಯದ ತಲೆ ಮೇಲೆ ಹೊಡೆದಂತೆ ಮಾಧ್ಯಮಗಳು ಸುಳ್ಳು ಆರೋಪ ಮಾಡುತ್ತವೆಂಬುದಕ್ಕೆ ತಾಜಾ ಉದಾಹರಣೆ ಅಷ್ಟೇ! 14.50 ಲಕ್ಷ ಹಿಂದೂಗಳನ್ನು ಗಣನೆಗೆ ತೆಗೆದುಕೊಳ್ಳುವ ಅಗತ್ಯವೇ ಇಲ್ಲ! ಯಾಕೆ ಗೊತ್ತಾ?! ಈ ಗೋಮಾಂಸವನ್ನು ಚಪ್ಪರಿಸುತ್ತಿರುವವರು ಯಾರೆಂಬುದು ಪ್ರತಿಯೊಬ್ಬ ಹಿಂದುವಿಗೂ ಗೊತ್ತಿದೆ! ಆದ್ದರಿಂದ, ಇದರಿಂದ ನಾಚಿಕೆ ಪಡುವಂತಹದ್ದೇನೇನೂ ಇಲ್ಲ!

ಭಯೋತ್ಪಾದಕರಿಗೆ ಜನ್ಮ ನೀಡುವ ಧರ್ಮವನ್ನು ಯಾಕೆ ವೈಭವೀಕರಿಸಲಿಲ್ಲ ಗೊತ್ತೇ?!

ಹಿಂದೂಗಳು ಗೋಮಾಂಸ ತಿನ್ನುತ್ತಾರೆಂದು ಬೊಬ್ಬಿರಿಯುವ ಮಾಧ್ಯಮಗಳಿಗೆ, ಹಿಂದೂಗಳಿಗಿಂತ ದಲಿತರೆಂದು ಒಡೆದು ಆಳುವ ಮಾಧ್ಯಮಗಳಿಗೆ, ಮುಸ್ಲಿಂ ಎನ್ನುವ ಕಾರಣಕ್ಕೆ ಶಾರುಖ್ ಖಾನ್ ನನ್ನು ಅಮೇರಿಕಾ ಕೆಟ್ಟದಾಗಿ ನಡೆಸಿಕೊಂಡಿತೆನ್ನುವ ತೀರ್ಪು ಕೊಡುವ ಮಾಧ್ಯಮಗಳಿಗೆ, ಇಂತಹದ್ದೇ ಧರ್ಮದಿಂದ ಬಂದ ಒಬ್ಬ ಉಗ್ರನನ್ನು ಸೈನಿಕರು ಅಲ್ಲಾಹ್ ನ ಪಾದಕ್ಕೆ ಸೇರಿಸಿದ್ದಾರೆ ಎನ್ನುತ್ತವೆಯೇ?! ಇಲ್ಲ! ಅದವರಿಗೆ ಸಾಧ್ಯವೇ ಇಲ್ಲ! ಅದರ ಬದಲಿಗೆ, ಆ ಉಗ್ರ ಒಬ್ಬ ಶಾಲಾ ಮುಖ್ಯ ಮಾಸ್ತರರ ಮಗ, ಆತನಿಗೆ ಪ್ರೇಮ ವಿಫಲವಾಗಿ ಭಯೋತ್ಪಾದಕ ಸಂಘಟನೆಗೆ ಸೇರಿ ತನ್ನ ನೋವನ್ನು ಮರೆತ ಎಂದೆಲ್ಲ ಸಿಂಪಥಿ ಹುಟ್ಟಿಸಿಬಿಡುತ್ತವೆ ಹೊರತು, ಈ ಭಯೋತ್ಪಾದಕ ಇಸ್ಲಾಂ ಮತದವನೆಂದು ಅಪ್ಪಿ ತಪ್ಪಿಯೂ ಹೇಳುವುದೇ ಇಲ್ಲ!

14.50 ಲಕ್ಷ ಜನ ಹಿಂದೂಗಳನ್ನು ಪರಿಗಣಿಸುವ ಅವಶ್ಯಕತೆಯಿದೆಯೇ?!

ಇದೇ ಸಮೀಕ್ಷೆಯ ಆಧಾರದ ಮೇಲೆ ಹೇಳುವುದಾದರೆ, 2011 ರ ಅಷ್ಟೊತ್ತಿಗೆ ಗೋಮಾಂಸ ತಿನ್ನುವವರ ಸಂಖ್ಯೆ 1.79% ನಿಂದ 1.39% ಗೆ ಇಳಿದಿತ್ತು! ಅಂದರೆ, ಅದೆಷ್ಟೋ ಜನ ಗೋಮಾಂಸವನ್ನು ತ್ಯಜಿಸುತ್ತಿರುವುದು ಹಿಂದೂಗಳಿಗೆ ಸ್ವಾಗತಕರವೇ! ದುರಂತವೆಂದರೆ, ಗೋಮಾಂಸ ಭಕ್ಷಣೆಯಲ್ಲಿ ಹಿಂದೂಗಳ ಸಂಖ್ಯೆ ಇಳಿಕೆಯಾಗುತ್ತಿದೆ ಎಂಬುದನ್ನು ತೋರಿಸುವ ಬದಲು, ದೇಶದ ನಾಲ್ಕನೇ ಅತಿದೊಡ್ಡ ಗೋಮಾಂಸ ಭಕ್ಷಣೆಯ ಪಂಗಡ ಎಂದಿತು The Baqwas Hindustan Times!! ಭಾರತದಲ್ಲಿರುವುದು ಸದ್ಯಕ್ಕೆ ಹಿಂದೂ, ಕ್ರೈಸ್ತ ಹಾಗೂ ಇಸ್ಲಾಂ ಎಂಬ ಅತಿದೊಡ್ಡ ಧಾರ್ಮಿಕ ಪಂಗಡಗಳಷ್ಟೇ! ಜೈನ, ಸಿಖ್ಖ, ಬೌದ್ಧ ಮತವೆಲ್ಲ ಹಿಂದುತ್ವದ ಅವಿಭಾಜ್ಯ ಅಂಗಗಳು!

ಅದಲ್ಲದೇ, ಗೋಮಾಂಸವನ್ನು ತಿನ್ನುವವರ ಸಂಖ್ಯೆ ಕ್ರೈಸ್ತ ಹಾಗೂ ಇಸ್ಲಾಂ ಪಂಗಡದಲ್ಲಿಯೂ ಕಡಿಮೆಯಾಗಿದೆ ಎಂಬುದನ್ನು ತೋರಿಸಬೇಕಿತ್ತು ಇದೇ ಪತ್ರಿಕೆ!
ಆದರೆ, ಇಂತಹ ಯಾವುದೇ ಮಾಧ್ಯಮಗಳಿಗೆ ಸೌಹಾರ್ದತೆಯ ಅವಶ್ಯಕತೆಯೂ ಇಲ್ಲ, ಸತ್ಯವನ್ನು ಹೇಳುವಷ್ಟು ತಾಕತ್ತೂ ಇಲ್ಲ! ಟಿಆರ್ ಪಿ ಹೆಚ್ಚಳಕ್ಕೆ ಮತ್ತದೇ
ಹಿಂದೂಗಳನ್ನು ಗುರಿಯಾಗಿಸಿಬಿಡುವ ಮಾಧ್ಯಮಗಳಿಗೆ ಛೇ!

ಹಿಂದುತ್ವದ ಘನತೆಯನ್ನು ಕೆಳಗಿಳಿಸುವುದಕ್ಕೋಸ್ಕರ ಕಲಬೆರಕೆ ಸುದ್ದಿಯನ್ನಿಟ್ಟು ಮಿಥ್ಯಾರೋಪ ಮಾಡಿ ಸಮಾಜವನ್ನು ಕೆರಳಿಸುವ ಮಾಧ್ಯಮಗಳು ಇವೆಲ್ಲ!

ಗೋಮಾತಾ! ರಕ್ಷಿಸು! ರಕ್ಷಿಸು!

– ತಪಸ್ವಿ

Tags

Related Articles

Close