ರಾಜ್ಯ

ಗೋವಿನ ಚಿತ್ರ ಮಾಯವಾಯಿತು, ವಿಷ್ಣು ಅನ್ನೋ ಹೆಸರು ನಸ್ರೀನ್ ಆಯ್ತು. ಕರ್ನಾಟಕ ಕಾಂಗ್ರೆಸ್ ಸರ್ಕಾರದ ಢೋಂಗಿ ‘ಸೆಕ್ಯೂಲರ್’ ಮುಖವಾಡ ಬಯಲು!!

ಕರ್ನಾಟಕ ಸರ್ಕಾರ ಶಾಲಾ ಪಠ್ಯಪುಸ್ತಕಗಳನ್ನು ಪರಿಷ್ಕರಿಸಿ(revised) ಶಾಲಾ ವಿದ್ಯಾರ್ಥಿಗಳ ತಲೆಯಲ್ಲೂ ತಮ್ಮ ಹೊಲಸ್ಸು ಸೆಕ್ಯೂಲರಿಸಂ ಬಿತ್ತೋಕೆ ಹೊರಟಿದೆ.

ಏನೂ ಅರಿಯದ ಮುಗ್ಧ ಮನಸ್ಸಿನ ಮಕ್ಕಳಲ್ಲಿ ನಮ್ಮ ಸಂಸ್ಕೃತಿಯ ಬಗ್ಗೆ ತಿಳಿಸುವುದನ್ನ ಬಿಟ್ಟು ಮೊದಲಿದ್ದ ಪಾಠಗಳನ್ನು ತೆಗೆದು ಅಥವ ಪರಿಷ್ಕರಿಸಿ ಸೆಕ್ಯೂಲರಿಸಮ್ಮಿನ ಪರಾಕಾಷ್ಠೆ ಮೆರೆಯುತ್ತಿದೆ ಕರ್ನಾಟಕದ ಸಿದ್ದರಾಮಯ್ಯನ ಸರ್ಕಾರ.

ಪಠ್ಯ ಪುಸ್ತಕ ಪರಿಷ್ಕರಣೆಯಾದ ನಂತರ ಹಲವಾರು ತಪ್ಪುಗಳು ಕಂಡುಬಂದಿವೆ, ಪೇಜ್’ಗಳು ಮೇಲು ಕೆಳಗಾಗಿವೆ, ವಿಷಯಗಳನ್ನ ತಪ್ಪಾಗಿ ಬರೆಯಲಾಗಿದೆ, ಪಾಠದ ಮಧ್ಯೆ ಮಧ್ಯೆ ಖಾಲಿ ಪೇಜುಗಳು ಬಂದಿವೆ, ಹೀಗೆ ಇನ್ನೂ ಹಲವಾರು ತಪ್ಪುಗಳು ಪಠ್ಯಪುಸ್ತಕದಲ್ಲಿ ರಾರಾಜಿಸುತ್ತಿವೆ.

ಅಂಥ ತಪ್ಪುಗಳೇನಿವೆ ಅನ್ನೋದು ನೀವೇ ನೋಡಿ…

ಪರ್ಷಿಯನ್ ಗಲ್ಫ್(Persian Gulf) ಅನ್ನೋದು ‘ಪ್ರೆಸಿಯನ್’ ಗಲ್ಫ್ (‘Presian’ Gulf), Philippines ದೇಶದ ಹೆಸರಿನ ಜಾಗದಲ್ಲಿ Philipens ಎಂದು,ಸೈನಾ ನೆಹವಾಲ್ (Saina Nehwal) ಹೆಸರು ತಪ್ಪಾಗಿ ಸಾನಿಯಾ ನೆಹವಾಲ್ (‘Sania’ Nehwal) , 2001 ರ ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ವಿಜೇತರಾದ ಪುಲ್ಲೇಲಾ ಗೋಪಿಚಂದರ ಹೆಸರು ‘ಪಲ್ಲೇಲ’ ಗೋಪೀಚಂದ್(‘Pallela’ Gopichand)ಅಂತ ಮಿಸ್ ಸ್ಪೆಲ್ ಆಗಿ ಮುದ್ರಿತವಾಗಿವೆ.

2016 ರಲ್ಲಿ ಒಲಿಂಪಿಕ್ ನಲ್ಲಿ ಬೆಳ್ಳಿ ಪದಕ ಗೆದ್ದ ಪಿ.ವಿ.ಸಿಂಧೂ ಕರ್ನಾಟಕ ಸರ್ಕಾರದ ಪಠ್ಯದ ಪ್ರಕಾರ ಆಕೆ ‘ಕಂಚು’ ಗೆದ್ದಿದ್ದಳಂತ ಮುದ್ರಣವಾಗಿದೆ, ‘won’ ಜಾಗದಲ್ಲಿ ‘wone’ ಎಂದು ಬರೆದಿದ್ದಾರೆ, ಕಂಚು ಅಂತ ಪ್ರಿಂಟ್ ಮಾಡಿಸಿ ಪಿವಿ ಸಿಂಧು ಬೆಳ್ಳಿ ಪದಕ ಹಿಡಿದ ಫೊಟೋವನ್ನ ಮುದ್ರಣ ಮಾಡಲಾಗಿದೆ.

ಇನ್ನು ಗ್ರಾಮರ್ ಕೇಳುವವರೇ ಇಲ್ಲ. ಪಠ್ಯ ಪುಸ್ತಕ ತಯಾರಿಸಿದವರು ಏಕವಚನ ಬಹುವಚನಕ್ಕೆ ವ್ಯತ್ಯಾಸವನ್ನೇ ತಿಳಿದಂತೆ ಕಾಣಿಸುತ್ತಿಲ್ಲ.

ದೈಹಿಕ ಶಿಕ್ಷಣದ ಪಾಠ ಪುಸ್ತಕಗಳಲ್ಲೂ ಗ್ರಾಮರ್ ಜತೆಗೆ ಸ್ಪೆಲ್ಲಿಂಗ್ ತಪ್ಪುಗಳಿವೆ. ಸ್ವರಕ್ಷಣೆಯ ಭಂಗಿಗಳನ್ನು ವಿವರಿಸುವಾಗ ಸೂಕ್ತವಲ್ಲದ ಶಬ್ದಗಳನ್ನು ಬಳಸಲಾಗಿದೆ. ಇಲ್ಲಿ ಚಿತ್ರಗಳನ್ನು ಬಳಸಿರುವುದರಿಂದ ಅಪಹಾಸ್ಯಕ್ಕೀಡಾಗುವುದು ತಪ್ಪಿದೆ.

ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿ ಈ ಪರಿಷ್ಕೃತ ಪಠ್ಯಪುಸ್ತಕಗಳನ್ನು ಹೊರ ತಂದಿದೆ.

Typo Error ಗಳನ್ನ Grammatical Error ಗಳನ್ನೇನೋ ಮನ್ನಿಸಬಹುದು ಆದರೆ ತಮ್ಮ ವಿಚಾರವಾದ, ಸಿದ್ಧಾಂತಗಳನ್ನ, ಮುಸ್ಲಿಂ ತುಷ್ಟೀಕರಣದ
ನೀತಿಯನ್ನ ಮಕ್ಕಳ ಮೇಲೆ ಹೇರಲು ಹೊರಟಿರೋ ಸಿದ್ದರಾಮಯ್ಯ ಸರ್ಕಾರ ಪಠ್ಯ ಪುಸ್ತಕದ ಮುಖಪುಟದ ಮೇಲಿದ್ದ ಗೋವಿನ ಚಿತ್ರವನ್ನು ತೆಗೆದು ಅಲ್ಲಿ ಬೇರೊಂದು ಚಿತ್ರ ಪ್ರಿಂಟ್ ಮಾಡಿಸಿದೆ.

ಒಂದು ಪಾಠದ ಕಥೆಯೊಂದರಲ್ಲಿ ‘ವಿಷ್ಣು'(Vishnu) ಅನ್ನೋ ಪಾತ್ರವನ್ನ ತೆಗೆದು ಅಲ್ಲಿ ‘ನಸ್ರೀನ್’ ಅನ್ನೋ ಹೆಸರನ್ನ replace ಮಾಡಲಾಗಿದೆ.

“ರೀ ನಾನ್ ಗೋಮಾಂಸ ತಿಂತೀನ್ರೀ ಅದನ್ ಕೇಳೋಕ್ ನೀವ್ಯಾರ್ರೀ?” ಅಂತ ಪ್ರಶ್ನೆ ಎಲ್ಲರ ಎದುರಲ್ಲೇ ಪ್ರಶ್ನೆ ಮಾಡಿದ್ದ ಸಿದ್ದರಾಮಯ್ಯನ ಸರ್ಕಾರದಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ?

ಕಳೆದ ವರ್ಷ ಕೆಲ ಮುಸಲ್ಮಾನರು ಪಠ್ಯದಲ್ಲಿ ಕನ್ನಡಾಂಬೆ ಭುವನೇಶ್ವರಿಯ ಚಿತ್ರ ಕೂಡ ಕೈ ಬಿಡಬೇಕು ಇದು ಇಸ್ಲಾಮಿನ ವಿರುದ್ಧ ಅಂತ ಹೇಳಿಕೆ
ಕೊಟ್ಟಿದ್ದರು.

ಇದನ್ನೂ ಪುರಸ್ಕರಿಸಿ ಮುಂದೆ ಪಠ್ಯ ಪುಸ್ತಕಗಳ ಜೊತೆ ಜೊತೆಗೆ ತಾಯಿ ಭುವನೇಶ್ವರಿಗೂ ಬುರ್ಖಾ ಹೊದಿಸಿದ ಚಿತ್ರ ಕೂಡ ಕರ್ನಾಟಕ ಕಾಣಬಹುದೇನೋ!!

ಇವರೋ ಇವರ ಪಕ್ಷವೋ, ಇವರ ಸಿದ್ಧಾಂತವೋ, ಇವರ ಮುಸ್ಲಿಂ ತುಷ್ಟೀಕರಣವೋ ಏನಾದರೂ ಮಾಡ್ಕೊಂಡು ಹಾಳಾಗೋಗ್ಲಿ ಅಂತ ಬಿಡಬಹುದು.

ಆದರೆ ತಮ್ಮ ಮುಸ್ಲಿಂ ತುಷ್ಟೀಕರಣದ ನೀತಿಯನ್ನು ಮಕ್ಕಳ ಮೇಲೆ ಹೇರುತ್ತಿರೋದ್ಯಾಕೆ?

ಬಿಳಿ ಹಾಳೆಯ ಮೇಲೆ ಏನು ಗೀಚಿದರೂ ಗೀಚಿದ್ದೇ ಮೂಡುತ್ತೆ, ಹಾಗೆಯೇ ಬಿಳಿಯ ಹಾಳೆಯಂತಿರುವ ಮಕ್ಕಳ ಮನಸ್ಸಿನಲ್ಲಿ ಸಿದ್ಧರಾಮಯ್ಯ ತನ್ನ ಸೆಕ್ಯೂಲರಿಸಂ,
ಮುಸ್ಲಿಂ ತುಷ್ಟೀಕರಣ ಅನ್ನೋದನ್ನ ಗೀಚಿ ಮಕ್ಕಳ ಮನಸ್ಸನ್ನ ಕಲುಷಿತ ಮಾಡುತ್ತಿದ್ದಾರೆ.

ಪೋಷಕರು ಎಚ್ಚೆತ್ತುಕೊಂಡು ಸರ್ಕಾರದ ವಿರುದ್ಧ ಧ್ವನಿಯೆತ್ತಬೇಕು, ಇಲ್ಲವಾದರೆ ಮಕ್ಕಳು ತಪ್ಪು ತಪ್ಪಾದ ಪಾಠಗಳನ್ನ ಓದಿ ಅವರೂ ರಾಹುಲ್ ಗಾಂಧಿಯಂತಾಗುತ್ತಾರಷ್ಟೇ!!!

– Vinod Hindu Nationalist

Tags

Related Articles

Close