ಇತ್ತೀಚೆಗೆ ಒಂದು ವಿಡಿಯೋ ತುಣುಕು ನೋಡ್ತಿದ್ದೆ. ಅದರಲ್ಲಿ ಗೌರಿ ಲಂಕೇಶ್ ಅವರು ಹಿಂದು ಧರ್ಮದ ಕುರಿತು ಅದ್ಯವಾ ಪರಿ ನಿಂದನೆ ಮಾಡಿದ್ರು. ಅಪ್ಪ,ಅಮ್ಮ ಇಲ್ಲದೇ ಇರುವ ಧರ್ಮ ಹಿಂದೂ ಧರ್ಮ. ಹಿಂದೂ ಧರ್ಮಕ್ಕೆ ಪವಿತ್ರ ಗ್ರಂಥವೇ ಇಲ್ಲ. ಹೀಗೇ ಬಾಯಿಗೆ ಏನ್ ಬರುತ್ತೋ ಹಾಗೆ ಮಾತಾಡಿದ್ರು. ಯಾಕಂದ್ರೆ ಹಿಂದುಗಳು ಸಹಿಷ್ಣುಗಳು ಏನು ಬೈದರೂ ಏನು ಮಾಡಲ್ಲ. ಈ ಗೌರಿ ಲಂಕೇಶ್ ಮಾಡಿದ ನಿಂದನೆ ಹೊಸತಲ್ಲ ಬಿಡಿ. ಇಂಥವರು ಯುಗ ಯುಗಗಳಿಂದಲೂ ನಮ್ಮ ಸನಾತನ ಧರ್ಮವನ್ನು ನಿಂದಿಸುತ್ತಲೇ ಬಂದಿದ್ದಾರೆ,ಇವಾಗಲೂ ನಿಂದಿಸುತ್ತಿದ್ದಾರೆ,ಮುಂದೆಯೂ ನಿಂದಿಸುವವರು ಇರ್ತಾರೆ. ಇಂಥವರ ಹೊಟ್ಟೆ ತುಂಬುವುದೇ ಹಿಂದೂ ಧರ್ಮದ ನಿಂದನೆಯಿಂದ. ಇಷ್ಟೆಲ್ಲಾ ತೆಗಳಿ,ನಿಂದಿಸಿ ಕೊನೆಗೆ ಸತ್ತಾಗ ಇವರಿಗೆ ಸನಾತನ ಹಿಂದೂ ಧರ್ಮದ ಪದ್ದತಿಯಲ್ಲೇ ಶವ ಸಂಸ್ಕಾರ ಮಾಡ್ತಾರೆ. ಅವರ ಕೊನೆ ಆಸೆಯೂ ಅದೇ ಆಗಿರುತ್ತೆ. ಅಂದ್ರೆ ಹಿಂದೂ ಧರ್ಮ ಅವರ ಮನಸ್ಸಿನಲ್ಲಿ ಇರುತ್ತದೆ ಆದರೆ ಅನ್ಯ ಧರ್ಮೀಯರ ಓಲೈಕೆಗಾಗಿ,ತಮ್ಮ ಹೊಟ್ಟೆಗಾಗಿ ಈ ಥರ ಮಣ್ಣು ತಿನ್ನೋ ಕೆಲಸ ಮಾಡುತ್ತಾರೆ.
ಹಾಗೆಯೇ ಗೌರಿ ಲಂಕೇಶ್ ಮುಂದುವರೆದು ಕೇಳ್ತಾರೆ.
ಹಿಂದು ಅಂದ್ರೆ ಯಾರು? ಹಿಂದು ಧರ್ಮದ ಏಕಮಾತ್ರ ಉದ್ಧಾರಕ ಮತ್ತು ಕೊನೆಯ ಪ್ರವಾದಿ(ಗುರು) ಯಾರು? ಹಿಂದೂ ಧರ್ಮದ ಪವಿತ್ರ ಗ್ರಂಥ ಯಾವುದು? ಈ ಪ್ರಶ್ನೆಗಳು ಸನಾತನಿಯರಿಗೆ ಹೊಸತಲ್ಲ ಬಿಡಿ. ಈ ಪ್ರಶ್ನೆಗಳಿಗೆಲ್ಲಾ ನಾನು ಉತ್ತರಿಸುತ್ತೇನೆ. ಇವಾಗ ಗೌರಿ ಲಂಕೇಶ್ ಇಲ್ಲದೇ ಇರಬಹುದು ಆದರೆ ಅವರ ಪಟಾಲಂಗಳು ಇವೆಯಲ್ಲ ಅವುಗಳಿಗೆ ಉತ್ತರ.
ಗೌರಿ ಲಂಕೇಶ್ ಹಿಂದು ಅಂದ್ರೆಯಾರು ಅಂತ ಕೇಳಿದ್ರು. ಅವರಿಗೆ ಗೊತ್ತಿಲ್ದೆ ಕೇಳಿದ ಪ್ರಶ್ನೆಯಲ್ಲ,ಅನ್ಯಧರ್ಮೀಯರ ಓಲೈಕೆಗಾಗಿ ಕೇಳಿದ ಪ್ರಶ್ನೆ.
ಸಿಂಧೂ ಉಗಮಸ್ಥಾನದಿಂದ ಹಿಡಿದು ದಕ್ಷಿಣದ ಸಾಗರದವರೆಗಿನ ಭಾರತ ಭೂಮಿಯನ್ನು ಪಿತೃಭೂಮಿ ಹಾಗೂ ಪುಣ್ಯಭೂಮಿ ಎಂದು ಕಾಣುವವನೇ ಹಿಂದು.
ಗೌರಿ ಲಂಕೇಶರ ಎರಡನೇಯ ಪ್ರಶ್ನೆ!!
ಹಿಂದು ಧರ್ಮದ ಏಕಮಾತ್ರ ಉದ್ಧಾರಕ ಮತ್ತು ಕೊನೆಯ ಪ್ರವಾದಿ(ಗುರು) ಯಾರು? ಹಿಂದೂ ಧರ್ಮದ ಪವಿತ್ರ ಗ್ರಂಥ
ಯಾವುದು?
ಮಾನವ ಕಲ್ಯಾಣಕ್ಕಾಗಿ,ಇತಿಹಾಸ ಪುರುಷನೊಬ್ಬನು ಉದ್ಧಾರಕನಾಗಿ ಅಥವಾ ಪ್ರವಾದಿಯಾಗಿ ಬರಬೇಕು ಎಂಬ ಪರಿಕಲ್ಪನೆಯು ಸನಾತನ ಧರ್ಮಕ್ಕೆ
ದೂರವಾದುದು. ಅಂತಹ ಇತಿಹಾಸ ಪುರುಷನೊಬ್ಬನು ಎಷ್ಟೇ ಗೌರವನೀಯನಾದರೂ,ಎಂತಹ ಮಹಾನ್ ವ್ಯಕ್ತಿಯೇ ಆದರೂ,ಅವನು ಹೇಳಿದುದು ಮಾತ್ರವೇ
ಆಧ್ಯಾತ್ಮಿಕ ಸತ್ಯ,ಏಕೈಕ ಮುಕ್ತಿ ಮಾರ್ಗ,ಎಂಬುದನ್ನು ಒಪ್ಪಲಾಗುವುದಿಲ್ಲ. ಪ್ರತಿಯೋರ್ವ ವ್ಯಕ್ತಿ ತನಗೆ ತಾನೇ ಉದ್ಧಾರಕ,ತನಗೆ ತಾನೇ ಪ್ರವಾದಿ. ತನ್ನ ಜೀವನದ ಅರ್ಥ ಕಾಣಬೇಕಾದರೆ,ಮೌಲ್ಯ ವಿವೇಚನೆ ಮಾಡಿಕೊಳ್ಳಬೇಕೆಂದರೆ,ತಾನೇ ಸ್ವತಃ ಆಧ್ಯಾತ್ಮಿಕ ಮಾರ್ಗಗಳನ್ನು, ಮುಕ್ತಿ ಮಾರ್ಗವನ್ನು ಅನ್ವೇಷಿಸಿಕೊಳ್ಳಬೇಕು. ಬೇರೊಬ್ಬರು ಕಂಡುಕೊಂಡ ಸತ್ಯವು ನನಗೂ ಅನ್ವಯವಾಗ ಬೇಕೆಂದಿಲ್ಲ.
ನನ್ನ ಸತ್ಯವನ್ನು ನಾನೇ ಕಂಡುಕೊಳ್ಳಬೇಕು. ಆಧ್ಯಾತ್ಮಿಕ ಗುರುಗಳು ಮತ್ತು ಶಾಸ್ತ್ರ ಗ್ರಂಥಗಳು ಮಾರ್ಗದರ್ಶನ ಮಾಡಬಹುದು,ನೆರವಾಗಬಹುದು. ಆದರೆ ಶಾಸ್ತ್ರ ಗ್ರಂಥಗಳ ತತ್ವ ವಿಚಾರಗಳು ನನ್ನ ಪ್ರಜ್ಞೆಗೆ ಇಳಿಯದಿದ್ದರೆ,ನನ್ನ ಜೀವನದಲ್ಲಿ ಪರಿವರ್ತನೆ ಆಗದಿದ್ದರೆ,ಅವುಗಳು ಸತ್ಯವೆನಿಸಲಾರವು.
ಇತಿಹಾಸದಲ್ಲಿ ಯಾವುದು ಹುಟ್ಟುತ್ತದೆಯೋ,ಅದು ಇತಿಹಾಸದಲ್ಲಿಯೇ ಸಾವನ್ನಪ್ಪುತ್ತದೆ. ಯಾವುದು ಹೀಗೆ ಸತ್ತು ಹೋಗಿದಿಯೋ,ಹೊರಟೇ ಹೋಗಿದೆಯೋ
ಅಂತಹುದನ್ನು ಅನ್ಯ ಧರ್ಮೀಯರು ಆರಾಧಿಸುತ್ತಾರೆ. ನಮ್ಮ ಸನಾತನ ಧರ್ಮ ಇತಿಹಾಸದಲ್ಲಿ ಹುಟ್ಟಿದರ ಬಗ್ಗೆ ಯುಗ ಯುಗಗಳಿಂದ ಸಂಶೋಧನೆ ಮಾಡಿದರೂ
ಯಾರಿಗೂ ಬೇಧಿಸಲಾಗಿಲ್ಲ. ನನ್ನ ಸನಾತನ ಧರ್ಮಕ್ಕೆ ಹುಟ್ಟಿದ ದಿನವಿಲ್ಲ ಅಂದಮೇಲೆ ಅದು ಸಾಯುವುದೇ ಇಲ್ಲ.
ಗೌರಿ ಲಂಕೇಶರ ಮೂರನೇ ಪ್ರಶ್ನೆ!!
ಹಿಂದೂ ಧರ್ಮದ ಪವಿತ್ರ ಗ್ರಂಥ ಯಾವುದು?
ನಮಗೆ ನಿರ್ದಿಷ್ಟವಾದ ಗ್ರಂಥವೇ ಏಕೆ ಬೇಕು? ಆಧ್ಯಾತ್ಮಿಕ ಜ್ಞಾನದ ಅರಿವು,ಎಲ್ಲ ಶಾಸ್ತ್ರಗಳ ವಿಚಾರಗಳು ಮನುಷ್ಯನ ಒಳಗೇ ರಹಸ್ಯವಾಗಿ ಅಂತರ್ಗತವಾಗಿರುವಂತಹುವು. ಓರ್ವ ವ್ಯಕ್ತಿಯು ಪ್ರಾಮಾಣಿಕವಾಗಿ ಅಪೇಕ್ಷಿಸಿದರೆ ಅಪೇಕ್ಷಿಸಿದರೆ ಮತ್ತು ಅವನಲ್ಲಿ ಸೂಕ್ತ ಸಾಧನೆ-ಸಿದ್ಧತೆ ಇದ್ದರೆ,
ಅಂತಹ ದೈವಿಕ ಜಗತ್ತನ್ನು ಯಾವುದೇ ವ್ಯಕ್ತಿಯು,ಯಾವುದೇ ಸಮಯದಲ್ಲಿ,ಯಾವುದೇ ಸ್ಥಳದಲ್ಲಿ ಬೇಕಾದರೂ ಪ್ರವೇಶಿಸಬಹುದು. ಅನೇಕ ಋಷಮುನಿಗಳು ಇಂತಹ ದೈವಿಕ ಅರಿವನ್ನು ಅನೇಕ ವಿಧಗಳಲ್ಲಿ ಅರ್ಥೈಸಿದ್ದಾರೆ,ಅನೇಕ ಭಾಷೆಗಳಲ್ಲಿ, ಅನೇಕ ರೂಪಗಳಲ್ಲಿ ತಿಳಿಸಿದ್ದಾರೆ.
ವೇದಗಳು ತಿಳಿಸುವುದು ಒಂದು ವಿಚಾರವಾದರೆ,ಜೈನಾಗಮಗಳು-ತ್ರಿಪಿಟಕಗಳು ಇನ್ನೊಂದನ್ನು-ಮತ್ತೊಂದನ್ನು ತಿಳಿಸುತ್ತವೆ. ಹೀಗೆಯೇ ಪಥ ಸಾಗಿ ಬಂದಿದೆ.
ಶ್ರೀರಾಮಕೃಷ್ಣ ಪರಮಹಂಸರು,ರಮಣ ಮಹರ್ಷಿಗಳು ಈ ಸಂತರ-ಈ ಋಷಿಗಳ ಸಾಲಿನಲ್ಲಿ ಇತ್ತೀಚಿನವರು. ಹಿಂದಿನಿಂದಲೂ ಸನಾತನ ಧರ್ಮದ ವಿಭಿನ್ನ
ಶಾಖೆಗಳು,ಈ ಋಷಿಮುನಿಗಳು ಹೇಳಿದುದನ್ನು ಹಾಡಿದುದನ್ನು ಅನೇಕ ಶಾಸ್ತ್ರ ಗ್ರಂಥಗಳಲ್ಲಿ ಸಂಗ್ರಹಿಸಿಕೊಂಡು ಬಂದಿವೆ.
ಆದರೆ ಈ ನಮ್ಮ ಗ್ರಂಥಗಳು ಅನ್ಯಧರ್ಮೀಯರ ಅಲ್-ಕಿತಾಬ್ ಮಾದರಿಯ ಪುಸ್ತಕಗಳಿಗೆ ಹೋಲಿಕೆಯೇ ಇಲ್ಲದಂತಹುವು. ಅಲ್-ಕಿತಾಬ್ ಬಗೆಯ ಗ್ರಂಥಗಳು ಕಳೆದುಹೋದರೆ ನಾಶವಾದರೆ ಅನ್ಯ ಧರ್ಮೀಯರ ಮತಗಳೇ ನಾಶವಾಗುತ್ತವೆ.
ಅಂತಹ ಅಲ್-ಕಿತಾಬ್ ಗ್ರಂಥದ ಕಾರಣಕರ್ತನೇ ಸತ್ತು ಹೋಗಿರುವುದರಿಂದ,ಮತ್ತೆ ಆ ಪುಸ್ತಕ ಕಾಣಸಿಕ್ಕದು.
ನಮ್ಮ ಶಾಸ್ತ್ರ ಗ್ರಂಥಗಳಿಗೆ ಅಂತಹ ಅಪಾಯವಿಲ್ಲ. ಅವೆಲ್ಲ ಗ್ರಂಥಗಳು ನಾಶವಾಗಿ ಹೋದರೂ ತೊಂದರೆಯಿಲ್ಲ. ಅವುಗಳ ಮೂಲವು ಮಾನವ ಅಂತರಂಗವೇ ಆಗಿದೆ. ಬೇಕೆನಿಸಿದಾಗ ಅವು ವ್ಯಕ್ತವಾಗುವಂತಹುವು, ಅಲ್ಲಿಂದಲೇ ಪ್ರಕಟವಾಗುವಂತಹುವು.
ಇನ್ನೊಂದು ಮಾತು ಇಲ್ಲಿ ಹೇಳಲೇಬೇಕು. ರಾತ್ರೋ ರಾತ್ರಿ ತಮ್ಮ ಪ್ರಚಾರಕ್ಕಾಗಿ ಹಿಂದೂ ಧರ್ಮವನ್ನು ನಿಂದಿಸುತ್ತಾರೆ. ಈ ಪ್ರೊಫೆಸರ್ ಭಗವಾನ್ ಇದಾನಲ್ಲ ಅವನೇ ನೇರ ಉದಾಹರಣೆ. ಒಟ್ಟಿನಲ್ಲಿ ಅವರಿಗೆ ಪ್ರಚಾರ ಬೇಕು. ಭಗವಾನ್ ಅಂತವರಿಂದ ನಮ್ಮ ಧರ್ಮಕ್ಕೆ ಯಾವುದೇ ಹಾನಿಯಾಗಲ್ಲ. ಇಂತಹ ನಾಯಿಗಳು ಹಿಂದೆಯೂ ಇದ್ದವು,ಇಂದಿಗೂ ಇದಾವೆ,ಮುಂದೆಯು ಇರುತ್ತವೆ. ಇಡೀ ಜಗತ್ತೇ ನಮ್ಮ ಧರ್ಮವನ್ನು ಗುರುವಿನ ತರ ನೋಡುತ್ತೆ. ಎಲ್ಲ ಧರ್ಮಗಳ ಮೂಲ ಧರ್ಮ ನಮ್ಮದೇ ಅನ್ನೋದು ಇಡೀ ಜಗತ್ತೇ ಒಪ್ಪುತ್ತದೆ.
-ಸುನೀಲ್ ಪಿಂಟೋ