ಪ್ರಚಲಿತ

ಚೀನಾಕೆ ಮತ್ತೆ ಹೃದಯಾಘಾತ! ಏಷಿಯಾನ್ ಶೃಂಗಸಭೆಯಲ್ಲಿ ಮೋದಿ ರೂಪಿಸಿದರು ರಣತಂತ್ರ! ಮೋದಿ ಅಲೆಯಲ್ಲಿ ಕೊಚ್ಚಿಹೋದ ಫಿಲಿಫೈನ್ಸ್ ನಲ್ಲಿರುವ ಭಾರತೀಯರು !!

ಏಷಿಯನ್ – ಇಂಡೋ ಸಮಿತ್ ನಲ್ಲಿ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರನ್ನು ಭೇಟಿಯಾದ ಮೇಲೆ ಫಿಲಿಪೈನ್ಸ್ ನಲ್ಿ ಮತ್ತೆ ಮಾತಿಗಿಳಿದಿದ್ದಾರೆ ಭಾರತದ ಪ್ರಧಾನ ಮಂತ್ರಿ ಮೋದಿ!! ಭಾನುವಾರದಂದು ಪಿಲಿಫೈನ್ಸ್ ನ ಅಧ್ಯಕ್ಷರಾದ ರೋಡ್ರಿಗೋ ಏರ್ಪಡಿಸಿದ್ದ ಔತಣಕೂಟದಲ್ಲಿ ಭಾಗವಹಿಸಿದ್ದ ಟ್ರಂಪ್ ಹಾಗೂ ಚೈನಾದ ಲಿ ಕೆಕಿಯಾಂಗ್ ಜೊತೆ ಚರ್ಚೆ ನಡೆಸಿದ್ದು, ಮೂರು ದಿವಸದ ಮನಿಲಾ ಪ್ರವಾಸವನ್ನು ಕೈಗೊಂಡಿರುವ ಮೋದಿ ASEAN India ಮತ್ತು East Asia ಸಮಿತ್ ನಲ್ಲಿ ಭಾಗವಹಿಸಲಿದ್ದಾರೆ.

ದಕ್ಷಿಣ ಚೀನಾ ಸಮುದ್ರದ ಮೇಲೆ ಹೈಡ್ರೋಕಾರ್ಬನ್ ಗಳ ದೊಡ್ಡ ಮೊತ್ತದ ಸಾರ್ವಭೌಮತ್ವವನ್ನು ಹೊಂದಿರುವ ಚೀನಾಕೆ ASEAN ನ ಉಳಿದ
ಸದಸ್ಯರಾಷ್ಟ್ರವಾಗಿರುವ ವಿಯೆಟ್ನಾಂ,.ಪಿಲಿಫೈನ್ಸ್ ಮತ್ತು ಬ್ರೂನಿ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದೆ. ಭಾರತದ 1982 ರ UN convention on the
law of sea ಯ ಪ್ರಕಾರ ಹಾಗೂ ಅಂತರಾಷ್ಟ್ರೀಯ ಕಾನೂನು ತತ್ವಗಳ ಅನುಸಾರ, ಭಾರತ ದಕ್ಷಿಣ ಚೀನಾ ಸಮುದ್ರದ ಸಂಚಾರ ಹಾಗೂ ಸಂಪನ್ಮೂಲಗಳಿಗೆ
ಬೆಂಬಲಿಸುತ್ತಿದ್ದು, ದ್ವಿಪಕ್ಷೀಯ ಕಾರ್ಯವಿಧಾನದ ಅಡಿಯಲ್ಲಿ ಬೀಜಿಂಗ್ ವಿರೋಧಿಸುತ್ತಿದೆ.

ಪ್ರಧಾನಿ ಮೋದಿ ಮನಿಲಾದ ಅಂತರಾಷ್ಡ್ರೀಯ ರೈಸ್ ರಿಸರ್ಚ್ ಇನ್ಸ್ಟಿಟ್ಯೂಟ್ ಗೆ ಭೇಟಿ ನೀಡಿದ ಮೋದಿ, ” ರೈತರ ಕೌಶಲ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ರೈತರ ಆದಾಯವನ್ನೂ ಹೆಚ್ಚಿಸಬಹುದಾಗಿದೆ. ಅದಕ್ಕೆ ವಾರಣಾಸಿಯ ಕೇಂದ್ರವು ಬೆಂಬಲಿಸುತ್ತಿದೆ. ಜುಲೈ 2017 ರಂದು ವಾರಣಾಸಿಯ ದಕ್ಷಿಣ ಏಷ್ಯಾ ಪ್ರಾದೇಶಿಕ ಕೇಂದ್ರವನ್ನು ಸ್ಥಾಪಿಸಲು IRRI ಗೆ ಪ್ರಸ್ತಾಪವನ್ನು ನೀಡಿದ್ದು, ಅಕ್ಕಿ ಬೆಳೆಗಾರರಿಗೆ ಉನ್ನತ ಮಟ್ಟದಲ್ಲಿ ಸಹಕಾರ ನೀಡಲಿದೆ!‘ ಎಂದು ಹೇಳಿದ್ದಾರೆ.

Image result for modi in manila

ಅಲ್ಲದೇ, ನಂತರ ಡೊನಾಲ್ಡ್ ಟ್ರಂಪ್ ರನ್ನು ಭೇಟಿಯಾದ ನರೇಂದ್ರ ಮೋದಿ, “ಭಾರತ ಮತ್ತು ಅಮೇರಿಕಾದ ಸಂಬಂಧ ಕೇವಲ ಪರಸ್ಪರ ರಾಜಕೀಯಾಸಕ್ತಿಗೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ, ಏಷ್ಯಾ ಹಾಗೂ ಮಾನವೀಯತೆಯ ತಳಹದಿಗೆ ಪೂರಕವಾದ ಬಂಧ. ಜಗತ್ತು ಹಾಗೂ ಅಮೇರಿಕಾ ಭಾರತದ ಮೇಲಿಟ್ಟಿರುವ ಭರವಸೆಯನ್ನು ಖಂಡಿತವಾಗಿಯೂ ಭಾರತ ಉಳಿಸಿಕೊಳ್ಳುತ್ತದೆ!” ಎಂದು ಹೇಳಿದ್ದಾರೆ.

ಮೋದಿ ನಮಗೆ ಆತ್ಮೀಯರಾಗಿದ್ದಾರೆ. ಅಲ್ಲದೇ, ರಾಷ್ಟ್ರಕ್ಕೋಸ್ಕರ ಉನ್ನತವಾದ ಕೆಲಸವನ್ನೂ ಮಾಡುತ್ತಿದ್ದಾರೆ. ಎರಡೂ ರಾಷ್ಟ್ರಗಳ ಅಭ್ಯುದಯಕ್ಕಾಗಿ ನಾವು ಜೊತೆಗೂಡಿ ಕೆಲಸ ಮಾಡುವಲ್ಲಿ ಉತ್ಸುಕರಾಗಿದ್ದು, ಭಾರತದ ಮಧ್ಯವಸ್ಥಿಕೆಯಿಂದ ಅದೆಷ್ಟೋ ಸಮಸ್ಯೆಗಳು ಪರಿಗಾರವಾಗಿದೆ!‘ ಎಂದು ಮೋದಿಯನ್ನು ಟ್ರಂಪ್ ಹೊಗಳಿದ್ದಾರೆ.

ಮನಿಲಾದಲ್ಲಿ ನಡೆಯುತ್ತಿರುವ ASEAN ಶೃಂಗ ಸಭೆಯಲ್ಲಿ ಪ್ರಧಾನಿ ಮೋದಿ ಹಾಗೂ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭದ್ರತೆ ಮತ್ತು ರಕ್ಷಣೆ ಸಂಬಂಧಿಸಿದಂತೆ ಹಲವು ಮಹತ್ವದ ವಿಷಯಗಳನ್ನು ಕುರಿತು ಚರ್ಚೆ ನಡೆಸಿದ್ದಾರೆ.

ಭಾರತ, ಅಮೇರಿಕಾ, ಜಪಾನ್ ಮತ್ತು ಆಸ್ಟ್ರೇಲಿಯಾದ ಅಧಿಕಾರಿಗಳು ಇಂಡೋ ಪೆಸಿಫಿಕ್ ಪ್ರದೇಶವನ್ನು ಮುಕ್ತವನ್ನಾಗಿಸಲು ಹಾಗೂ ಅಂತರ್ಗತ ಪ್ರದೇಶವನ್ನುಳಿಸಿಕೊಳ್ಳುವ ಸಲುವಾಗಿ ಚತುರ್ಭುಜ ಮೈತ್ರಿಯ ಬಗ್ಗೆ ಚರ್ಚಿಸಿದ್ದರೆನ್ನಲಾಗಿದೆ. ಈ ನಡೆ ವ್ಯಾಪಾರ ಹಾಗೂ ವಾಣಿಜ್ಯ ಕ್ಷೇತ್ರದಲ್ಲಿ ಹೆಚ್ಚು ಸಹಾಯಕವಾಗಲಿದ್ದು, ನಂತರ ನಡೆದ ಭಾರತ- ಅಮೇರಿಕಾದ ದ್ವಿಪಕ್ಷೀಯ ಮಾತುಕಥೆಯಲ್ಲಿ ಭದ್ರತಾ ವ್ಯವಸ್ಥೆಯ ಕುರಿತು ಗಂಭೀರವಾಗಿ ಚರ್ಚೆ ನಡೆಸಿದ್ದಾರೆ ಮೋದಿ!

ದಕ್ಷಿಣ ಚೀನಾ ಸಮುದ್ರದಲ್ಲಿ ಸಂಪನ್ಮೂಲಗಳ ಮೇಲೆ ಹೆಚ್ಚುತ್ತಿರುವ ಚೀನಾ ಪ್ರಾಬಲ್ಯವನ್ನು ತಡೆಗಟ್ಟುವ ಸಲುವಾಗಿ, ಚತುಷ್ಪಥ ಮೈತ್ರಿಯನ್ನು ಸ್ಥಾಪಿಸಲು ಭಾರತ ಮುಂದಾಗಿದ್ದು ಇಂಡೋ ಪೆಸಿಫಿಕ್ ಪ್ರದೇಶದಲ್ಲಿ ಅಧಿಪತ್ಯ ಸ್ಥಾಪಿಸಲು ಅಮೇರಿಕಾ ದೊಡ್ಡ ಮಟ್ಟದ ಬೆಂಬಲವನ್ನು ನೀಡುತ್ತಿರುವುದು ಚೀನಾಕೆ ಸವಾಲಾಗಿ ಪರಿಣಮಿಸಿದೆ!

ಪಿಲಿಫೈನ್ಸ್ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ, ” ಜನರನ್ನು ತಲುಪಲು ನಾವು ತಂತ್ರಜ್ಞಾನವನ್ನು ಬಳಸಿದ್ದೇವೆ. ಡಿಜಿಟಲ್ ವಹಿವಾಟುಗಳನ್ನು ಒಂದು ವರ್ಷದಲ್ಲಿ 34% ರಷ್ಟು ಹೆಚ್ಚಿಸಲಾಗಿದೆ. ಭಾರತ ಸರಕಾರ ಎರಡು ದಶಲಕ್ಷ ನಾಗರಿಕರಿಂದ ನೀತಿಗಳನ್ನು ಕಲ್ಪಿಸಿದ್ದು, ಸಲಹೆಗಳನ್ನು ಸ್ವೀಕರಿಸಿದೆ.

ನಾವು ಪ್ರಗತಿಯ ಹೊಸ ಚೌಕಟ್ಟನ್ನು ಪರಿಚಯಿಸಿದ್ದೇವೆ. ಭಾರತವು ಸಕ್ರಿಯವಾದ ಆಡಳಿತವನ್ನು ಕಂಡಿದೆ. ಕಳೆದ ಮೂರು ವರ್ಷಗಳಲ್ಲಿ 1200 ಹಳೆಯ ಕಾನೂನುಗಳನ್ನು ರದ್ದುಗೊಳಿಸಲಾಗಿದೆ. ಕನಿಷ್ಟ ಹಾಗೂ ಗರಿಷ್ಟ ಆಡಳಿತ ನಮ್ಮ ಗುರಿಯಾಗಿದೆ. ಕೈಗಾರಿಕಾ ಪರವಾನಗಿಯನ್ನು ಸರಳಗೊಳಿಸಿದ್ದು ಹೊಸ
ಉದ್ಯಮಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಹೊಸ ನೀತಿಗಳನ್ನು ಪರಿಚಯಿಸಿದ್ದೇವೆ.

ವ್ಯಾಪಾರದಲ್ಲಿ 30 ನೇ ಸ್ಥಾನಕ್ಕೇರಿದ್ದರೆ, ಗ್ಲೋಬಲ್ ಇನ್ನೋವೇಷನ್ ಇಂಡೆಕ್ಸ್ ನಲ್ಲಿ 21 ನೇ ಸ್ಥಾನಕ್ಕೇರಿದ್ದೇವೆ. ಆರ್ಥಿಕತೆಯ ಹೆಚ್ಚಿನ ವಲಯಗಳು FDI ಗೆ ಮುಕ್ತವಾಗಿದೆ. ಇದು 90% ಹೆಚ್ಚು ಸ್ವಯಂ ಚಾಲಿತ ಅನುಮೋದನೆಗೆ ಪೂರಕವಾಗಿದೆ.”

ಭಾರತದ Act Easy Policy ಯ ಪ್ರಕಾರ ASEAN ಪ್ರದೇಶವನ್ನು ನಾವು ಪರಿಗಣಿಸುತ್ತಿದ್ದೇವೆ. ನಾವು ಈಗ ಜಾಗತಿಕವಾಗಿ ಸಮಗ್ರ ಆರ್ಥಿಕ ವ್ಯವಸ್ಥೆಯನ್ನು ಹೊಂದಿದ್ದೇವೆ. ಜಿಎಸ್ ಟಿ ತೆರಿಗೆಯ ಮೂಲಕ, ಜನಧನ್ ಯೋಜನೆಯ ಮೂಲಕ ದಶಲಕ್ಷ ಜನರ ಜೀವನವನ್ನು ಮಾರ್ಪಡಿಸಿದ್ದು, ಭಾರತವನ್ನು ಪರಿವರ್ತಿಸುವ ಕಾರ್ಯವು ಅಭೂತಪೂರ್ವವಾಗಿ ಮುಂದುವರೆಯುತ್ತಿದೆ. ಸುಲಭವಾದ, ಪಾರದರ್ಶಕ ಆಡಳಿತದ ಕಡೆಗೆ ಹಗಲು ರಾತ್ರಿ ಕೆಲಸ ಮಾಡುತ್ತಿದ್ದೇನೆ.”

ಭಾರತವನ್ನು ಜಾಗತಿಕ ಉತ್ಪಾದನಾ ಕೇಂದ್ರವನ್ನಾಗಿ ಪರಿವರ್ತಿಸಲು ಬದ್ಧರಾಗಿದ್ದೇವೆ. ನಾವು ಭಾರತೀಯರನ್ನು ಉದ್ಯೋಗ ಕೊಡುವವರನ್ನಾಗಿ ರೂಪಿಸುತ್ತೇವೆಯೇ ಹೊರತು, ಉದ್ಯೋಗವನ್ನು ಹುಡುಕುವವರಾಗಿ ಅಲ್ಲ.”

ನಮ್ಮ ಪ್ರಯತ್ನಗಳು ಭಾರತವನ್ನು ರೂಪಾಂತರಿಸುವುದು ಮತ್ತು ರಾಷ್ಟ್ರದ ಎಲ್ಲ ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ ಖಾತರಿಪಡಿಸುವ ಗುರಿ ಹೊಂದಿದೆ.”

Image result for modi in manila

ಜಾಗತಿಕ ಶಾಂತಿಗೆ, ಸಾಮರಸ್ಯಕ್ಕೆ ನೆರವಾಗಿರುವ ಭಾರತ ಜಗತ್ತಿಗೆ ಕೊಡುಗೆಯನ್ನು ನೀಡಿದೆಯೇ ಹೊರತು, ಜಗತ್ತಿನಿಂದ ಯಾವುದನ್ನೂ ಬಯಸಲಿಲ್ಲ. ಅದು ಸ್ವಾಭಿಮಾನಿ ಭಾರತ!”

“ಶುಚಿತ್ವದಲ್ಲಿ ಕೂಡ ಭಾರತ ಮುಂದುವರೆಯುತ್ತಿದ್ದು, 21 ನೇ ಶತಮಾನವನ್ನು ಏಷ್ಯಾದ ಶತಮಾನವೆಂದು ಪರಿಗಣಿಸಲಾಗಿದೆ. ಹಾಗೂ, ಭಾರತ ಜಾಗತಿಕವಾಗಿ ಮುಂದುವರೆಯುತ್ತಿದ್ದು, ಇವತ್ತು ಭಾರತೀಯರು ತಮ್ಮ ರಾಷ್ಟ್ರೀಯತೆಯನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ.”

ವ್ಹಾ! ಕೊನೆಗೂ, ಮೂರು ದಿನದ ಪ್ರವಾಸದಲ್ಲಿ ಮೂರು ಹಕ್ಕಿಗಳನ್ನು ಮೋದಿ ಹೊಡೆದಿದ್ದಾರೆ! ಚೀನಾಕೆ ಸೆಡ್ಡು ಹೊಟೆಯುವಲ್ಲಿ ಮೈತ್ರಿ ಕೂಟ ನೆರವಾಗಿದ್ದರೆ, ಇನ್ನು ಜಾಗತಿಕವಾಗಿ ಭಾರತದ ತಾಕತ್ತನ್ನು ತೋರಿಸಿಕೊಟ್ಟ ಮೋದಿ, ವ್ಯಾಪಾರ ವಹಿವಾಟುಗಳಲ್ಲಿ ಹೆಚ್ಚಿನ ಪ್ರಗತಿಯನ್ನು ಸಾಧಿಸುವಲ್ಲಿ ಉತ್ಸುಕರಾಗಿದ್ದಾರೆ.

ಇಷ್ಟು ದಿನವೂ ದಕ್ಷಿಣ ಚೀನಾ ಸಮುದ್ರದಲ್ಲಿ ಅಟ್ಟಹಾಸ ಮಾಡುತ್ತಿದ್ದ ಚೀನಾಕೆ ಮತ್ತೆ ಹೃದಯಾಘಾತವಾಗಿದೆ!

– ಪೃಥು ಅಗ್ನಿಹೋತ್ರಿ

Tags

Related Articles

Close