ಅಂಕಣಪ್ರಚಲಿತ

ಚೀನಾಕ್ಕೊಂದು ಹೆದರಿಕೆಯುಳಿದುಬಿಟ್ಟಿದೆ! ಸದ್ಯಕ್ಕಿರುವ ಚೀನಾದ ಗುರಿಯೊಂದೇ – ಭಾರತ ದಮನ!!!

ಅದೊಂದು ಬಗೆ ಹರಿಯದ ಸಮಸ್ಯೆ! ಭಾರತ ಅದೆಷ್ಟು ದೇಶಗಳ ಜೊತೆ ಗಡಿ ಹಂಚಿಕೊಂಡಿಲ್ಲ?! ಬರೋಬ್ಬರಿ 9 ದೇಶಗಳ ಜೊತೆ ಗಡಿ ಹಂಚಿಕೊಂಂಡರೂ, ಮೂರು ದೇಶಗಳ ಜೊತೆ ಮಾತ್ರ ಗಡಿ ಸಮಸ್ಯೆಯೊಂದು ಉಲ್ಬಣಗೊಳ್ಳುತ್ತಲೇ ಇದೆ. ಪಾಕಿಸ್ಥಾನ, ಚೀನಾ ಹಾಗೂ ಬಾಂಗ್ಲಾ! ಈ ಮೂರು ದೇಶಗಳ ಚುಕ್ಕಾಣಿ ಹಿಡಿದ ಯಾವೊಬ್ಬ ನಾಯಕನೂ ಘನತೆಗೆ ತಕ್ಕ ಹಾಗೆ ನಡೆದುಕೊಂಡಿಲ್ಲ.

ಚೀನಾ!!!! ಡ್ರ್ಯಾಗನ್ನರ ದಮನ ನೀತಿ!!

ಏಷ್ಯಾ ಖಂಡದಲ್ಲಿ ಎರಡನೇ ಅತಿ ಪ್ರಬಲ ದೇಶವಾಗಿ ಬೆಳೆಯುತ್ತಿರುವ ಭಾರತದ ಬಗ್ಗೆ ಚೀನಾಕ್ಕೊಂದು ಸಣ್ಣ ಆತಂಕವಿದೆ! ತನ್ನೊಳಗೆ ಅದೊಂದು ತೆರನಾದ ‘ಕೀಳು’ ಹೆದರಿಕೆಯಿದೆ! ಎಲ್ಲಿ ಭಾರತ ಪ್ರಬಲವಾದಾಗ ತನ್ನ ಮೇಲೆ ಯುದ್ಧಕ್ಕೆ ಬರಬಹುದೋ ಅಥವಾ ಟಿಬೆಟ್ ನಮ್ಮ ಕೈ ತಪ್ಪಬಹುದೋ ಎಂಬೆಲ್ಲ ಹೆದರಿಕೆಯನ್ನಡಗಿಸಿಕೊಂಡ ಡ್ರ್ಯಾಗನ್ ಭಾರತದ ವಿರುದ್ಧ ತಿರುಗಿದೆ!

ಭಾರತದ ದಮನವೇ ಚೀನಾದ ನೀತಿಯಾದ್ದರಿಂದ ಮಿಲಿಟರಿ ಶಕ್ತಿಯ ಮೂಲಕ, ರಾಜತಾಂತ್ರಿಕ ವಿಧಾನದ ಮೂಲಕ, ಆರ್ಥಿಕತೆಯ ಮೂಲಕ ಭಾರತವನ್ನು ದಮನಗೊಳಿಸಬೇಕೆಂಬ ಅದರ ನೀತಿಗೆ ಸ್ವತಃ ಅದು ತನ್ನೊಳಗಿನ ಸಮಸ್ಯೆಯನ್ನೇ ಬಗೆ ಹರಿಸಲಾಗದಷ್ಟು ಮೂರ್ಖವೂ ಹೌದು!

ಭಾರತದ ನೆರೆಯ ರಾಷ್ಟ್ರಗಳಾದ ಪಾಕಿಸ್ಥಾನ ಹಾಗೂ ಬಾಂಗ್ಲಾದ ಜೊತೆ ಗೆಳೆತನ ಸಾಧಿಸಿ ತನ್ಮೂಲಕ ಗಡಿ ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸಿ, ಆ ದೇಶಗಳಲ್ಲಿ ತನ್ನ ಸೇನೆಯನ್ನು ಸ್ಥಾಪಿಸಿ ಹಿಡಿತಕ್ಕೆ ತೆಗೆದುಕೊಳ್ಳುತ್ತಿರುವ ಚೀನಾದ ಕುತಂತ್ರ ಬಹುತೇಕವಾಗಿ ಸಫಲವಾಗದಿದ್ದೇ ಹೆಚ್ಚು!

ಮೊದ ಮೊದಲು ಭಾರತದ ನೆರೆ ರಾಷ‌್ಟ್ರಗಳೊಡನೆ ರಾಜತಾಂತ್ರಿಕ ಸಂಬಂಧ ಹೊಂದಿದ್ದ ಚೀನಾ, ತದನಂತರ ಆರ್ಥಿಕತೆಗೆ ವಾಲಿತು. ಕೊನೆಗೆ ಸೇನಾ ನೆಲೆಯನ್ನೂ ಸ್ಥಾಪಿಸುವುದರ ಮೂಲಕ ಸದ್ದಿಲ್ಲದೇ ಭಾರತವನ್ನು ಸುತ್ತುವರೆಯತೊಡಗಿತು. ಅದಕ್ಕೆ ತಕ್ಕನಾಗಿ, ಚೀನಾ ಪರ ನಾಯಕರನ್ನು
ಪೋಷಿಸತೊಡಗಿತು ಚೀನಾ! ಶ್ರೀಲಂಕಾದ ನಿವೃತ್ತ ಫೀಲ್ಡ್ ಮಾರ್ಷಲ್, ಹಾಲಿ ರಾಜಕಾರಣಿ ಶರತ್ ಫೋನ್ಸೆಕಾ ಭಾರತವೆಂದರೆ ಉರಿದು ಬೀಳುತ್ತಾನೆ. ಇನ್ನು ನೇಪಾಳದೊಂದಿಗೆ ಗಡಿ ಸಮಸ್ಯೆ ಇಲ್ಲದಿದ್ದರೂ ಕೂಡ ಕಮ್ಯುನಿಸ್ಟ್ ಆಡಳಿತ ಹೆಚ್ಚು ಪ್ರಭಾವಿಯಾದ್ದರಿಂದ ಚೀನಾದೊಂದಿಗೆ ಒಲವು ತೋರಿತೆ ವಿನಃ ಭಾರತವನ್ನು ಆದಷ್ಟು ದೂರವಿಟ್ಟಿತು!

ಅದೂ ಹೋಗಲಿ, ತೀರಾ ಪುಟ್ಟ ರಾಷ್ಟ್ರವಾದ ಮಾಯನ್ಮಾರ್ ಸಂಪೂರ್ಣವಾಗಿ ಚೀನಾ ಬೆಂಬಲಿತ ದೇಶವೇ! ಅಲ್ಲಿನ ಜುಂಟಾ ಸರಕಾರಕ್ಕೂ ಚೀನಾದ ನೀತಿಗೂ ವ್ಯತ್ಯಾಸವೇ ಇಲ್ಲ! ಅಷ್ಟೇ ಅಲ್ಲ, ಅಲ್ಲಿನ ಗ್ರೇಟ್ ಕೋಕೋ ದ್ವೀಪವನ್ನು ಬಳಸಿ ಚೀನಾ ಭಾರತದ ಮೇಲೆ ಹದ್ದುಗಣ್ಣಿಟ್ಟಿತು. ಹಿಂದೂ ಮಹಾಸಾಗರದಲ್ಲಿ ಭಾರತದ ವಿರುದ್ಧವಾಗಿ ಕತ್ತಿ ಮಸೆಯಲು ಮಾಯನ್ಮಾರ್ ಅನಾಯಾಸವಾಗಿ ದಾಳವಾಯಿತು!

ಇನ್ನು ಪಾಕಿಸ್ಥಾನದ ಗ್ವಾದರ್ ನಲ್ಲಿ ಚೀನಾ ಆಳ ಸಮುದ್ರ ಬಂದರು ನಿರ್ಮಾಣ ಮಾಡಿದೆ! ತನ್ಮೂಲಕ ನೌಕಾ ನೆಲೆಯನ್ನು ಸ್ಥಾಪಿಸಲು ಇದೊಂದು ಮೆಟ್ಟಿಲಷ್ಟೇ! ಇದೀಗಷ್ಟೇ ಪ್ರಾರಂಭವಾಗಿರುವ ಚೀನಾ-ಪಾಕಿಸ್ಥಾನ ಕಾರಿಡಾರ್ ನ ಮೂಲಕ ಪಾಕ್ ಆಕ್ರಮಿತ ಕಾಶ್ಮೀರವೂ ಅದರ ನಕ್ಷೆಗೆ ಸೇರಿದ್ದು ಚಟುವಟಿಕೆ ಶುರುವಾದರೆ ಮತ್ತೆ ಕಾಶ್ಮೀರ ಕಾದ ಕೆಂಡವಾಗುತ್ತದೆ!

ಎಲ್ಲೆಲ್ಲಿ ಭಾರತ ಮಧ್ಯ ಪ್ರಾಚ್ಯ ದೇಶಗಳೊಡನೆ ಒಪ್ಪಂದ ಮಾಡಿಕೊಂಡಿದೆಯೋ ಅಲ್ಲೆಲ್ಲ ಚೀನಾವೊಂದು ಮೂಗು ತೂರಿಸಿದೆ! ಇರಾನ್, ಸೌದಿ ಹೀಗೆಲ್ಲವಕ್ಕೂ ಚೀನಾದ ಜೊತೆ ರಾಜತಾಂತ್ರಿಕ ಸಂಬಂಧವೊಂದು ಗಾಢವಾಗಿದೆ. ಡೋಕ್ಲಾಮ್ ನ ಗಡಿ ತಂಟೆ ತಕರಾರು ಮಾಡಿದ ಚೀನಾ ಸದ್ಯಕ್ಕೆ ಅಲ್ಲಿಂದಲೇ ಭಾರತಕ್ಕೆ ಒಳ ನುಸುಳುವ ಪ್ರಯತ್ನ ಮಾಡುತ್ತಿದೆ. ಗಡಿಯಲ್ಲಿ ಸೇನೆಯ ಜಮಾವಣೆ ಕೂಡ ಮಾಡುತ್ತಿರುವ ಚೀನಾ ಯುದ್ಧಕ್ಕೆ ಸಜ್ಜಾಗಿದೆ!

ದಕ್ಷಿಣ ಟಿಬೆಟ್ ನಲ್ಲಿ ಸರೋವರ ಹಾಗೂ ಅಣೆಕಟ್ಟುಗಳಿಂದ ಕೃತಕವಾಗಿ ನೀರನ್ನು ಉಕ್ಕೇರಿಸಿದ ಚೀನಾ ಹಿಮಾಚಲ ಹಾಗೂ ಅರುಣಾಚಲದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣ ಮಾಡುವ ಕೆಲಸವನ್ನೂ ಸದ್ದಿಲ್ಲದೇ ಮಾಡುತ್ತಿದೆಯೆಂದರೆ ನಂಬಲೇಬೇಕು. ಅಗ್ಗದ ಮಾಲುಗಳಿಂದ ಭಾರತದ ಆರ್ಥಿಕತೆಯನ್ನೂ ಕುಗ್ಗಿಸುವ ಕೆಲಸವನ್ನು ಯಶಸ್ವಿಯಾಗಿ ನಮ್ಮವರಿಂದಲೇ ಮಾಡಿಸುತ್ತಿದೆ!!!

ಇಷ್ಟಕ್ಕೇ ಸುಮ್ಮನಾಗದ ಚೀನಾ, ಭಾರತದ ಅನೇಕ ರಾಜ್ಯಗಳಲಿ ನಕ್ಸಲ್ ಚಟುವಟಿಕೆಗಳಿಗೆ ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಾ ನಕ್ಸಲಿಸಂ ಮೂಲಕ ಆಂಧ್ರ ಪ್ರದೇಶದ ತನಕ ಕೆಂಪು ಕಾರಿಡಾರ್ ನಿರ್ಮಿಸುತ್ತಿರುವುದು ಗುಟ್ಟೇನೂ ಅಲ್ಲ!

ಚೀನಾ ದ್ವೇಷದ ಕಾರಣಗಳೇನು ಗೊತ್ತಾ?!

ಅಕ್ಸಾಯ್ ಚಿನ್!
1962 ರ ಯುದ್ಧದ ನಂತರ ಭಾರತ ಲಡಾಕಿನ ಭಾಗವಾಗಿದ್ದ ಈ ಪ್ರದೇಶವನ್ನು ಕಳೆದುಕೊಂಡಿತು. ಅತ್ಯಂತ ವಿವಾದಿತ ಪ್ರದೇಶವಾದ ಅಕ್ಸಾಯ್ ಚಿನ್ ಅನ್ನು 1957 ರಲ್ಲಿ ಕ್ಸಿನ್ ಜಿಯಾಂಗ್ ಅನ್ನು ಟಿಬೆಟ್ ಗೆ ಬೆಸೆಯುವಲ್ಲಿ ಹೆದ್ದಾರಿ ನಿರ್ಮಿಸಿತು. ಭಾರತ ಇದನ್ನು ಆಕ್ಷೇಪಿಸಿದ್ದಕ್ಕಾಗಿ 1962 ರಲ್ಲಿ ಯುದ್ಧ ನಡೆಯಿತು. ನೆಹರೂವಿನ ಅತ್ಯಂತ ಹೀನಾಯ ಸ್ಥಿತಿಯಿಂದ ಭಾರತ ಸೋಲುಪ್ಪಿತು. ಆ ಹೆದ್ದಾರಿಯ ಮೂಲಕವೇ ಟಿಬೆಟ್ ಕೂಡ ಚೀನಾದ ವಶವಾಯಿತು.

ಅರುಣಾಚಲ!!!
ಅರುಣಾಚಲದ ಭೂಭಾಗ ದಕ್ಷಿಣ ಟಿಬೆಟ್ ಗೆ ಸೇರುತ್ತದೆ ಎಂಬ ತಕರಾರು ತೆಗೆದ ಚೀನಾ ಮೆಕ್ ಮೆಹನ್ ರೇಖೆಯೆಳೆದು ಹಕ್ಕು ಸಾಧಿಸುತ್ತಿದೆ! ಆದರೆ, 1914 ರಲ್ಲಿ ಶಿಮ್ಲಾ ಒಪ್ಪಂದದ ಪ್ರಕಾರ ಗಡಿರೇಖೆಯಲ್ಲಿ ಈ ಭೂಭಾಗದ ಪ್ರಸ್ತಾಪವೇ ಇರಲಿಲ್ಲ. 1962 ರ ನಂತರ ಗಡಿರೇಖೆಯಿಂದ ಚೀನಾ ಸೇನೆಯನ್ನು ಹಿಂತೆಗೆದುಕೊಂಡಿತಾದರೂ ಬೋಡೋ ಉಗ್ರರಿಗೆ ಬೇಕಾದಷ್ಟು ಸಹಾಯ ಮಾಡುತ್ತಲೇ ಪೋಷಿಸುತ್ತಿದೆ!

ದಲೈ ಲಾಮಾ!!!!
ಟಿಬೆಟ್ ನಿಂದ ಹೊರದೂಡಲ್ಪಟ್ಟ ಟಿಬೆಟಿಯನ್ನರಿಗೆ ಆಶ್ರಯ ಕೊಟ್ಟ ಕಾರಣ ಚೀನಾ ಸಂಘರ್ಷಕ್ಕಿಳಿದುಬಿಟ್ಟಿತು! ಬೌದ್ಧ ಧರ್ಮದ ಅನುಯಾಯಿಯರೆಲ್ಲರನ್ನೂ ಹೇಳ ಹೆಸರಿಲ್ಲದಂತೆ ಮಾಡ ಹೊರಟಿದ್ದ ಚೀನಾ ಭಾರತ ಆಶ್ರಯ ಒದಗಿಸಿದ್ದು ದೊಡ್ಡ ಪೆಟ್ಟು ಕೊಟ್ಟಿತು. ಚೀನಾದ ಆಕ್ರಮಣಕಾರಿ ನೀತಿ ಹಾಗೂ ಟಿಬೆಟ್ ನ ದುರ್ಬಲ ಆಡಳಿತವನ್ನು ಉಪಯೋಗಿಸಿ ಸಂಪೂರ್ಣ ಹಿಡಿತ ಸಾಧಿಸಿದ ಚೀನಾ ಧರ್ಮಗುರುವನ್ನೂ ಗಡೀಪಾರು ಮಾಡಿತು.

ಸಿಕ್ಕಿಂ!!!
ರಾಜಮನೆತನದ ಆಡಳಿತವಿದ್ದ ಸಿಕ್ಕಿಂ ಎಲ್ಲಿ ಭಾರತಕ್ಕೆ ಸೇರ್ಪಡೆಯಾಯಿತೋ, ಚೀನಾ ಅದರ ಮೇಲೂ ಹಕ್ಕು ಚಲಾಯಿಸತೊಡಗಿತು. ಇವತ್ತಿಗೂ ಚೀನಾ ನಕಾಶೆಯಲ್ಲಿ ಸಿಕ್ಕಿಂ ಸ್ವತಂತ್ರ ದೇಶವಾಗೇ ಉಳಿದುಕೊಂಡಿದೆ!

ಸಾಗರದಲ್ಲೂ ಆಕ್ರಮಣ ನೀತಿ!
ಸಾಗರದಲ್ಲೂ ಕೋಕೋ ದ್ವೀಪಗಳಲಿ ತನ್ನ ನೌಕಾ ನೆಲೆ ಸ್ಥಾಪಿಸಿದ ಚೀನಾ ಹೆಜ್ಜೆ ಹೆಜ್ಜೆಗೂ ತಕರಾರು ಒಡ್ಡುತ್ತಲೇ ಇದೆ! ದಕ್ಷಿಣ ಚೀನಾ ಸಮುದ್ರದ ಗಡಿ ಹಂಚಿಕೆ ವಿಚಾರವಾಗಿ ಭಾರತ ನೇರವಾಗಿ ಭಾಗಿಯಾಗಿಲ್ಲವಾದರೂ ಚೀನಾದ ತಕರಾರು ಉಲ್ಬಣಗೊಂಡಿದೆ! ಅಂತರಾಷ್ಟ್ರೀಯ ಮಾರ್ಗವಾಗಿರುವ ಇದರಲ್ಲಿ ಭಾರತದ ನೌಕೆ ಸಂಚರಿಸಬಾರದು, ತೈಲ ಉತ್ಖನನ ಮಾಡಬಾರದು ಎಂಬೆಲ್ಲ ತಗಾದೆ ಚೀನಾದ್ದೊಂದೇ! ಅದಕ್ಕೆ ಸರಿಯಾಗಿ ಒಎನ್ ಜಿಸಿಯ ವಿದೇಶಿ ಹೂಡಿಕೆಯಲ್ಲಿ ಭಾರತ ವಿಯೆಟ್ನಾಂ ಜೊತೆ ಒಪ್ಪಂದ ಮಾಡಿಕೊಂಡಿದ್ದನ್ನೂ ವಿರೋಧಿಸಿದ್ದ ಚೀನಾಕ್ಕೆ ಬಲವಾದ ತಿರುಗೇಟು ನೀಡಿತು ಭಾರತ!

ಚೀನಾಗೊಂದು ಹೆದರಿಕೆಯುಳಿದುಬಿಟ್ಟಿದೆ! ಅದಕ್ಕೆ ಸರಿಯಾಗಿ ಭಾರತದ ಉಳಿದ ರಾಷ್ಟ್ರಗಳ ಮೇಲಿನ ರಾಜತಾಂತ್ರಿಕ ಸಂಬಂಧ, ಒಪ್ಪಂದಗಳು, ದಿನೇ ದಿನೇ ಬೆಳೆಯುತ್ತಿರುವ ತಂತ್ರಜ್ಞಾನ, ಸೇನೆಯ ವಿಸ್ತರಣೆ, ಗೆಲುವುಗಳು.. . ಹೀಗೇ! ಇದನ್ನೆಲ್ಲ ನೋಡುವ ಚೀನಾಕೊಂದು ಭಯ!

ಇವೆಲ್ಲದಕ್ಕೂ ಕೂಡ ತಕ್ಕನಾಗಿ ನಗುತ್ತಲೇ ತಿರುಗೇಟು ಕೊಟ್ಟಿರುವ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆಯೂ ಅಸಮಾಧಾನ ಹೊಂದಿರುವ ಚೀನಾದ ಕುಟಿಲ ರಾಜತಾಂತ್ರಿಕ ಸಂಬಂಧಕೊಂದು ಬಲವಾದ ಪೆಟ್ಟು ಕೊಡುತ್ತಿರುವುದಂತೂ ಸತ್ಯ! ತನ್ನ ದೇಶದ ಹಿತದೆಡೆಗೆ ಮಾತ್ರ ಗಮನ ಹರಿಸಿ ಬೆಳೆಯುತ್ತಿದ್ದ ಚೀನಾದಲ್ಲಿ ಇವತ್ತು ಅವರ ಸಂಸ್ಕ್ರತಿ ಹಾಗೂ ಆಧ್ಯಾತ್ಮಿಕ ಬೆಳವಣಿಗೆಯನ್ನೇ ಮರೆತು ನಡೆಯುತ್ತಿರುವ ಚೀನಾದ ನೀತಿ ಭಾರತದ ದಮನವೊಂದೇ!

ಕೃಪೆ – ವಿಜಯವಾಣಿ

– ಪೃಥು

Tags

Related Articles

Close