ಭಾರತ 1962ರ ನಂತರ ಚೀನಾವನ್ನು ತನ್ನ ಪ್ರತಿಸ್ಪರ್ಧಿ ಎಂಬಂತೆ ವರ್ತಿಸುತ್ತಿದ್ದು, ಎರಡೂ ದೇಶಗಳು ಹಲವು ವಿಚಾರಗಳಲ್ಲಿ ಸಾಮ್ಯತೆಯನ್ನು ಹೊಂದಿದ್ದಲ್ಲದೇ ಅಧಿಕ ಜನಸಂಖ್ಯೆಯ ಜತೆಗೆ ಅಭಿವೃದ್ಧಿಯತ್ತ ಸಾಗುತ್ತಿರುವ ವಿಚಾರ ಗೊತ್ತೇ ಇದೆ!! ಆದರೆ ಇದೀಗ ಉತ್ತರಾಖಂಡದಲ್ಲಿ “ಆಲ್-ವೆದರ್ ರೋಡ್ಸ್ ಪ್ರಾಜೆಕ್ಟ್”ನಡಿ 150 ಕಿಲೊಮೀಟರ್ ತನಕ್ಪುರ್-ಪಿಥೋರಘರ್ ವಿಸ್ತರಣೆಯ ನಿರ್ಮಾಣ ಕಾರ್ಯಆರಂಭವಾಗಿರುವುದು ಹೆಮ್ಮೆಯ ವಿಚಾರವಾಗಿದೆ!!
ಈ ಹಿಂದೆ ಅರುಣಾಚಲ ಪ್ರದೇಶದಲ್ಲಿ 4170 ಮೀಟರ್ ಎತ್ತರದಲ್ಲಿರುವ ಸೆಲಾ ಪಾಸ್‍ನಲ್ಲಿ 2 ಸುರಂಗ ಮಾರ್ಗ ನಿರ್ಮಾಣಕ್ಕೆ ಗಡಿ ರಸ್ತೆ ನಿರ್ಮಾಣ ಸಂಸ್ಥೆ(ಬಿಆರ್‍ಒ) ನಿರ್ಧರಿಸಿದ್ದು, ಇದು ಚೀನಾದ ಗಡಿಯೊಂದಿಗಿನ ದೂರವನ್ನು 10 ಕಿ.ಮೀ ಕಡಿಮೆಗೊಳಿಸುತ್ತದೆ ಎನ್ನಲಾಗಿತ್ತು. ಅಷ್ಟೇ ಅಲ್ಲದೇ, ‘ಈ ಸುರಂಗಗಳು ತೇಜ್‍ಪುರ್ ಹಾಗೂ ತವಾಂಗ್‍ನಲ್ಲಿರುವ ಸೇನೆಯ 4 ಕಾರ್ಫ್ಸ್ ಪ್ರಧಾನ ಕಚೇರಿಯಿಂದ ಚೀನಾದ ಬಾರ್ಡರ್‍ಗೆ ಒಂದು ಗಂಟೆಯ ಪ್ರಯಾಣದ ಅವಧಿಯನ್ನು ಕಡಿಮೆಗೊಳಿಸುತ್ತದೆ. ಸುರಂಗಗಳಿಂದ ಬೊಮ್ಡಿಲಾ ಮತ್ತು ತವಾಂಗ್ ನಡುವಿನ 171 ಕಿ.ಮೀ ದೂರದ ಎನ್.ಎಚ್ 13 ಎಲ್ಲಾ ಋತುಗಳಲ್ಲೂ ಸಂಚಾರ ಯೋಗ್ಯವಾಗಲಿದೆ,’ ಎಂದು ಬಿಆರ್‍ಒ ತಿಳಿಸಿತ್ತು. ರಾಜ್ಯದ ಗುಡ್ಡಗಾಡು ಪ್ರದೇಶವನ್ನು ಸುಲಭವಾಗಿ ದಾಟಿ ವೇಗವಾಗಿ ಟಿಬೆಟ್ ಗಡಿಯನ್ನು ತಲುಪಲು ಈ ಸುರಂಗಗಳು ನೆರವಾಗಲಿದ್ದು, ಇದೀಗ ಸೇನೆಯ ಬಹುದಿನದ ಕನಸಾದ ಚೀನಾದ ಗಡಿ ತಲುಪಲು ಸುಲಭವಾಗುವ 150 ಕಿಲೊಮೀಟರ್ ರಸ್ತೆ ನಿರ್ಮಾಣ ಆರಂಭವಾಗಿದೆ!!
ಈ ವರ್ಷದ ಆರಂಭದಲ್ಲಿ ರಾಜ್ಯ ವಿಧಾನಸಭೆಯ ಚುನಾವಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪ್ರಾರಂಭಿಸಿದ “ಆಲ್-ವೆದರ್ ರೋಡ್ಸ್ ಪ್ರಾಜೆಕ್ಟ್” ನ ಭಾಗ ಇದಾಗಿದ್ದು, ಉತ್ತರಾಖಂಡದ ಎಲ್ಲಾ ಹವಾಮಾನದ ರಸ್ತೆಗಳ ನಿರ್ಮಾಣದ ದೂರದೃಷ್ಟಿ ಯೋಜನೆ 150 ಕಿಲೊಮೀಟರ್ ತನಕ್ಪುರ್-ಪಿಥೋರಘರ್ ವಿಸ್ತರಣೆಯ ನಿರ್ಮಾಣದೊಂದಿಗೆ ಆರಂಭವಾಗಿದೆ ಇದು ಭಾರತ-ಚೀನಾ ಗಡಿಗೆ ಸೈನಿಕರು ಮತ್ತು ಶಸ್ತ್ರಾಸ್ತ್ರಗಳನ್ನು ಸಜ್ಜಿತಗೊಳಿಸಲು ಸುಲಭವಾಗಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಯೋಜನೆಯು 2019ರ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆಯಿದ್ದು, 150 ಕಿಲೊಮೀಟರ್ ವಿಸ್ತಾರವು ಪೂರ್ಣಗೊಂಡ ನಂತರ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಭಾರತ-ಚೀನಾ ಗಡಿಯಲ್ಲಿರುವ ಕೊನೆಯ ಪೆÇೀಸ್ಟ್ ಗಳಿಗೆ ಪಡೆಗಳು ಮತ್ತು ಅವರ ಶಸ್ತ್ರಾಸ್ತ್ರಗಳನ್ನು ಒಟ್ಟುಗೂಡಿಸುವುದು ಭಾರಿ ಪ್ರಮಾಣದಲ್ಲಿ ಸುಲಭವಾಗಿರುತ್ತದೆ ಎಂದು ಹೇಳಲಾಗಿದೆ!! ಇನ್ನು ಈ ಬಗ್ಗೆ ರಾಷ್ಟ್ರಿಯ ಹೆದ್ದಾರಿ-125 ರ ಕಾರ್ಯನಿರ್ವಾಹಕ ಎಂಜಿನಿಯರ್ ಮ್ಯಾಥೇಲಾ ಹೇಳಿರುವ ಪ್ರಕಾರ, “150 ಕಿಲೊಮೀಟರ್ ಉದ್ದದ ತನಕ್ಪುರದ ಪಿಥೋರಘರ್ ರಸ್ತೆಗೆ 2019 ರ ಗಡುವಿನ ಸಮಯವನ್ನು ಪೂರೈಸಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಇನ್ನು ಇದಕ್ಕೆ ಪ್ರತಿಯಾಗಿ ಮಾರ್ಗವು ಸೇತುವೆಗಳು ಅಥವಾ ಸುರಂಗ ಮಾರ್ಗಗಳನ್ನು ಒಳಗೊಳ್ಳದೆ ಇರುವುದರಿಂದ ಯೋಜನೆ ನಿಗದಿತ ಅವಧಿಗೆ ಪೂರ್ಣಗೊಳ್ಳಲಿದೆ” ಎಂದು ಹೇಳಿದ್ದಾರೆ.
ರಸ್ತೆಯ ವೆಚ್ಚ ಎಷ್ಟು ಗೊತ್ತೇ??
“ಆಲ್-ವೆದರ್ ರೋಡ್ಸ್ ಪ್ರಾಜೆಕ್ಟ್” ಯೋಜನೆಯಡಿ 150 ಕಿಲೊಮೀಟರ್ ತನಕ್ಪುರ್-ಪಿಥೋರಘರ್ ವಿಸ್ತರಣೆಯ ನಿರ್ಮಾಣದೊಂದಿಗೆ ಆರಂಭಗೊಂಡಿದ್ದು, ಮೂರು ಬೈಪಾಸ್ ಗಳ ವೆಚ್ಚವನ್ನು ಹೊರತುಪಡಿಸಿದರೆ, ರಸ್ತೆಯ ವೆಚ್ಚ ಬರೋಬ್ಬರಿ 1,065 ಕೋಟಿ ರೂಪಾಯಿಗಳಾಗಿದೆ ಎಂದು ಎಂಜಿನಿಯರ್ ಮ್ಯಾಥೇಲಾ ಹೇಳಿದ್ದಾರೆ. ಅಷ್ಟೇ ಅಲ್ಲದೇ, ಈ ಹಿಂದಿನ ಗಡಿ ರಸ್ತೆ ಯೋಜನೆಯಿಂದ ಇದು ವಿಭಿನ್ನವಾಗಿದ್ದು, ಕುಮಾವೂನ್ ಪ್ರದೇಶದಲ್ಲಿ ಮಣ್ಣಿನ ಸ್ವಭಾವ ಮತ್ತು ಅದರ ವೆಚ್ಚಗಳು ಸುರಂಗಗಳನ್ನು ನಿರ್ಮಿಸಲು ಮತ್ತು ಸೇತುವೆಗಳ ನಿರ್ಮಾಣಕ್ಕೆ ಸೂಕ್ತವಲ್ಲ ಎಂದು ಹೇಳಿದ್ದಾರೆ!!
ಈ ದಾರಿಯುದ್ದಕ್ಕೂ ಕಲ್ಲಿಲ್ಲದ ಬೆಟ್ಟದ ಭಾಗವು ಲಭ್ಯವಿಲ್ಲದಿರುವುದು ಕೂಡಾ ವಿಸ್ತಾರದಲ್ಲಿ ಯಾವುದೇ ಸುರಂಗಗಳು ಅಥವಾ ಸೇತುವೆಗಳನ್ನು ನಿರ್ಮಿಸದಿರುವ ನಿರ್ಧಾರದ ಕಾರಣವಾಗಿದೆ. ಅಷ್ಟೇ ಅಲ್ಲದೇ ನಾಲ್ಕು ಕಂಪನಿಗಳಿಗೆ ರಸ್ತೆಯನ್ನು ನಿರ್ಮಿಸುವ ಕಾರ್ಯವನ್ನು ನಿಗದಿಪಡಿಸಲಾಗಿದೆ. ಎಲ್ಲಾ ಹವಾಮಾನ ರಸ್ತೆಗಳನ್ನು ನಿರ್ಮಿಸುವಲ್ಲಿ ಅವರ ಅನುಭವವನ್ನು ಪರಿಶೀಲಿಸಿದ ನಂತರ ಈ ಕಂಪನಿಗಳನ್ನು ಸೇರಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ!!
ಈ ವರ್ಷದ ಆರಂಭದಲ್ಲಿ ರಾಜ್ಯ ಚುನಾವಣೆಯ ಸಂದರ್ಭದಲ್ಲಿ ಒಟ್ಟು 12000 ಕೋಟಿ ರೂಪಾಯಿಗಳ ಯೋಜನೆಗಳ ಅಡಿಪಾಯವನ್ನು ಪ್ರಧಾನಿ ಮೋದಿ ಸ್ಥಾಪಿಸಿದ್ದು, ಭಾರತದ ಮೇಲಾಗುತ್ತಿದ್ದ ವೈಮಾನಿಕ ದಾಳಿಗೆ ಇನ್ನು ಮುಂದೆ ಬ್ರೇಕ್ ಬೀಳಲಿದೆ!!
ಇನ್ನು ಸೇನೆಯ ಬಹುದಿನದ ಕನಸಾದ ಈ ಯೋಜನೆಯು 2019 ರ ಹೊತ್ತಿಗೆ 12 ಮೀಟರ್ ಅಗಲ ರಸ್ತೆ ನಿರ್ಮಾಣವಾಗಲಿದ್ದು, ಇದಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್.ಹೆಚ್.ಎ.ಐ) ಸಮಯ ಮತ್ತು ವೆಚ್ಚವನ್ನು ನಿಗದಿಪಡಿಸಿದೆ ಎಂದು ಮೂಲಗಳು ತಿಳಿಸಿವೆ!! “ನಿರ್ಮಾಣ ಕಂಪೆನಿಗಳು ಸಲ್ಲಿಸಿದ ವಿನ್ಯಾಸದ ಪ್ರಕಾರ, ರಸ್ತೆಯ ಸ್ಲೈಡಿಂಗ್ ಭಾಗಗಳ ರಕ್ಷಣೆಗೆ ಹವಾಮಾನ ನಿರೋಧಕತೆಯನ್ನು ಒದಗಿಸುವುದಕ್ಕೆ ಸಮಾನ ಪ್ರಾಮುಖ್ಯತೆ ನೀಡಲಾಗುವುದು” ಎಂದು ಮ್ಯಾಥೇಲಾ ತಿಳಿಸಿದ್ದಾರೆ!!
ಅದೇ ರೀತಿ ಈ ಗಡಿ ರಸ್ತೆ ನಿರ್ಮಾಣಕ್ಕೆ 7,000 ಮರಗಳನ್ನು ಕೂಡ ಕಡಿಯಬೇಕಾಗಿದೆ ಎಂದು ಅಧಿಕೃತ ಮಾಹಿತಿ ತಿಳಿಸಿದ್ದು, ಆದರೆ ಈ ಯೋಜನೆ ದೇಶದ ಭದ್ರತಾ ರಕ್ಷಣೆಯ ದೃಷ್ಟಿಯಿಂದ ಅತ್ಯಗತ್ಯವಾಗಿದೆ.. ಯೋಜನೆ ಪೂರ್ಣಗೊಂಡ ನಂತರ ಪಿಥೋರಘರ್ ಪಟ್ಟಣದಲ್ಲಿನ ಎಲ್ಲಾ-ಹವಾಮಾನ ರಸ್ತೆಗಳ ಸಹಾಯದಿಂದ 200 ಕಿಲೊಮೀಟರ್ ವ್ಯಾಪ್ತಿಯಲ್ಲಿರುವ ಭಾರತ-ಚೀನಾ ಗಡಿಯುದ್ದಕ್ಕೂ ತುರ್ತು ಪರಿಸ್ಥಿತಿಯ ಸಮಯದಲ್ಲಿ ಅಗತ್ಯವಿರುವ ಎಲ್ಲ ರಕ್ಷಣಾ ಶಸ್ತ್ರಾಸ್ತ್ರಗಳ ವ್ಯಾಪಕ ತೂಕವನ್ನು ಸಾಗಿಸಲು ಸಾಧ್ಯವಾಗುತ್ತದೆ” ಎಂದು ಅವರು ಹೇಳಿದರು.
ಆಗಾಗ್ಗೆ ಗಡಿ ತಂಟೆಗಳನ್ನು ಚೀನಾ ಮಾಡುತ್ತಲೇ ಇದ್ದು ಸದ್ಯಕ್ಕೆ ದೋಕ್ಲಾಂನಲ್ಲಿ ಚೀನಾ ಸೇನೆ ಒಳಪ್ರವೇಶಿಸಿ ಹೀನಾಯವಾಗಿ ಸೋಲನ್ನನುಭವಿಸಿದ ನಂತರ ಒಂದಲ್ಲಾ ಒಂದು ಕುತಂತ್ರಗಳನ್ನು ನಡೆಸುತ್ತಲೇ ಇದೆ!! ಅಷ್ಟೇ ಅಲ್ಲದೇ, ದಕ್ಷಿಣ ಟಿಬೆಟ್‍ನಲ್ಲಿ ಸರೋವರಗಳು ಹಾಗೂ ಅಣೆಕಟ್ಟುಗಳಿಂದ ಕೃತಕವಾಗಿ ನೀರನ್ನು ಉಕ್ಕೇರಿಸಿ ಹಿಮಾಚಲಪ್ರದೇಶ ಹಾಗೂ ಅರುಣಾಚಲಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿಸುವ ಕುತ್ಸಿತ ಮನಸ್ಥಿತಿಯನ್ನು ಚೀನಾ ಪ್ರದರ್ಶಿಸುತ್ತಿದ್ದು, ಇದಕ್ಕೆಲ್ಲಾ ಇನ್ನು ಮುಂದೆ ಬ್ರೇಕ್ ಬೀಳಲಿದೆಯೇ ಎನ್ನುವುದನ್ನು ಕಾದು ನೋಡಬೇಕಾಗಿದೆ!!
-ಅಲೋಖಾ