ಅಂಕಣದೇಶಪ್ರಚಲಿತ

ಚೀನಾವನ್ನು ಮರೆತು ನಿಮ್ಮ ವಿಮಾನನಿಲ್ದಾಣವನ್ನು ಅಭಿವೃದ್ಧಿಪಡಿಸಿ ಎಂದು ಶ್ರೀಲಂಕಾಗೆ ಸೂಚಿಸಿದ ಭಾರತ!!!

ಶ್ರೀಲಂಕಾದ ಮಟ್ಟಾಳ ರಾಜಪಕ್ಷ ಅಂತರಾಷ್ಟ್ರೀಯ ವಿಮಾನನಿಲ್ದಾಣವನ್ನು ಭಾರತದ ಕಂಪೆನಿಯೊಂದು ಖರೀದಿಸುವುದು ಬಹುತೇಕ ಖಚಿತವಾಗಿದೆ. ಭಾರತೀಯ‌ ಕಂಪೆನಿಯೊಂದು ವಿಮಾನನಿಲ್ದಾಣಕ್ಕೆ 70% ಪಾಲನ್ನು 210 ಮಿಲಿಯನ್ ಡೋಲರಿನಷ್ಟು ಹೂಡಿಕೆ ಮಾಡಿ 40 ವರ್ಷಗಳ ವರೆಗೆ ನೋಡಿಕೊಳ್ಳಲಿದೆ.

 

ಈ ಪ್ರಸ್ತಾಪವನ್ನು ಶ್ರೀಲಂಕಾದ ಸಿವಿಲ್ ಏವಿಯೇಷನ್ ಮಂತ್ರಿಯಾಗಿರುವ ನಿಮಲ್ ಸಿರಿಪಾಲಾ ಡಿ ಸಿಲ್ವಾ ಅಂಗೀಕರಿಸಿದ್ದು, ಅದರ ಪರಿಶೀಲನೆಗೆ ದೇಶದ ಕ್ಯಾಬಿನೆಟ್ಗೆ ಕಳುಹಿಸಿದ್ದಾರೆ. ಇದೇ ವಿಚಾರದ ಕುರಿತಾಗಿ ವಿಶ್ವದ ಹಲವು ರಾಷ್ಟ್ರಗಳಿಂದ 8 ಪ್ರಸ್ತಾಪಗಳನ್ನು ಬಂದಿದ್ದು, ಅವುಗಳಲ್ಲಿ ಭಾರತ ಮಾಡಿದ ಪ್ರಸ್ತಾಪವನ್ನು ಪ್ರತ್ಯೇಕವಾಗಿ ವಿಮರ್ಶಿಸಲಾಗುತ್ತಿರುವುದು ಭಾರತದ ಪಾಲಿಗೆ ವರದಾನವಾಗುತ್ತಿದೆ.

ಮಟಲಾ ವಿಮಾನನಿಲ್ದಾಣವು ಭಾರೀ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಇದು ಶ್ರೀಲಂಕಾದ ಅಭಿವೃದ್ಧಿ ಹೊಂದಿದ ಪಟ್ಟಣಗಳಿಂದ‌ ಬಹಳ ದೂರವಿದ್ದು, ಪ್ರಯಾಣಿಕರನ್ನು ಅಷ್ಟೇ ಅಲ್ಲದೇ ವಿಮಾನಯಾನಗಳನ್ನು ಆಕರ್ಷಿಸುವಲ್ಲಿಯೂ ವಿಫಲವಾಗಿದೆ. ದಿನಕ್ಕೆ ಕೇವಲ ಒಂದು ಅಥವಾ ಎರಡು ವಿಮಾನ ಗಳು ಮಾತ್ರ ನಿಲ್ಲುತ್ತವೆ ಮತ್ತು 2014 ರಲ್ಲಿ ಕೇವಲ 21,000 ಪ್ರಯಾಣಿಕರಿಗೆ ವಿಮಾನ ನಿಲ್ದಾಣವು ಸೇವೆಯನ್ನು ಒದಗಿಸಿದೆ. ಅಂದರೆ ಪ್ರತಿ ಸ್ಥಳಕ್ಕೆ ಏಳು ಪ್ರಯಾಣಿಕರನ್ನು ಮಾತ್ರ ಹೊಂದಿದಂತಾಗುತ್ತದೆ. ಇದರ ಫಲವಾಗಿ, MRIA ಅನ್ನು ‘ವಿಶ್ವದ ಅತೀ ಶೂನ್ಯ ವಿಮಾನ ನಿಲ್ದಾಣ’ ಎಂದು ಕರೆಯಲಾಗುತ್ತದೆ.

ವಿಮಾನ ನಿಲ್ದಾಣದ ಅವನತಿ ಪರಿಸ್ಥಿತಿಯು ಶ್ರೀಲಂಕಾದ ಸರ್ಕಾರವು ಕಳೆದ ವರ್ಷ ಅಂತ್ಯದ ವೇಳೆಗೆ $ 112.9 ಮಿಲಿಯನ್ ನಷ್ಟ ಅನುಭವಿಸಬೇಕಾಯಿತು. ವಿಮಾನನಿಲ್ದಾಣದ ಪ್ರಸಕ್ತ ಪರಿಸ್ಥಿತಿಯಿಂದಾಗಿ $ 190 ಮಿಲಿಯನ್ ಸಾಲಗಳನ್ನು ನೀಡಲು ಮುಂದಾಗಿರುವ ಚೀನಾದ ಎಕ್ಸಿಮ್ ಬ್ಯಾಂಕ್, ವಿಮಾನ ನಿಲ್ದಾಣವನ್ನು ನಿರ್ಮಿಸಲು ಒದಗಿಸುವ ಮೊತ್ತವನ್ನು ಹಿಂದುರಿಗಿಸಲು ತಾನು ಅಶಕ್ತರಾಗಿದ್ದೇವೆಂಬುದು ಶ್ರೀಲಂಕಾ ಗೆ ಸ್ಪಷ್ಟವಾಗಿದೆ.

ಇತ್ತೀಚಿಗೆ, ಚೀನಾ ಹ್ಯಾಂಬಂತೊಟ ಆಳ ಸಮುದ್ರದ ಬಂದರನ್ನು 99 ವರ್ಷಗಳ ಕಾಲ ವಹಿಸಿಕೊಂಡಿರುವುದು ನಮಗೆಲ್ಲಾ ಅರಿವಿದೆ. ಈ ಬಂದರು ಮತ್ತು MRIA ಗಳು ಪರಸ್ಪರ ಒಂದು ಗಂಟೆಯ ಹಾದಿಯ ಅಂತರದಲ್ಲಿದೆ. ಈ ದೃಷ್ಟಿಕೋನದಿಂದ ನೋಡಿದರೆ, ಭಾರತದಿಂದ ಈ ಪ್ರಸ್ತಾಪವು ಈ ಪ್ರದೇಶದಲ್ಲಿ ಚೀನಾದ ಬೆಳೆಯುತ್ತಿರುವ ಅಸ್ತಿತ್ವಕ್ಕೆ ಧಕ್ಕೆಯಾಗುವುದಂತೂ ಖಚಿತ.

ಚೀನಾಕ್ಕಿಂತ ಕಡಿಮೆ ಆರ್ಥಿಕತೆಯ ಶಕ್ತಿ ಹೊಂದಿದ್ದರೂ, ಭಾರತವು ಚೀನಾದ ಕುತಂತ್ರಗಳಿಗೆ ತನ್ನದೇ ಆದ‌ ರೀತಿಯಲ್ಲಿ ಉತ್ತರಿಸುತ್ತಿದೆ. ಮತ್ತು ಭೂ-ರಾಜಕೀಯ ಆಸಕ್ತಿಗಳನ್ನು ಕಾಪಾಡಿಕೊಳ್ಳಲು ನಿಂತಿದೆ. ವಿಶ್ವವು ಈಗ ಚೀನಾದ ವಿಸ್ತರಣಾ ತಂತ್ರದ ಬಗ್ಗೆ ಅರಿತಿದೆ., ಆದರೆ ಅವರ ವಿರುದ್ಧ ಯಾವುದೇ ನಿರ್ಬಂಧವನ್ನು‌ ಹೇರುತ್ತಿಲ್ಲ. ಗಡಿ ಮತ್ತು ಭೂ-ರಾಜಕೀಯ ವಿಚಾರದಲ್ಲಿ ಭಾರತವು ಚೀನಾವನ್ನು ನಿಯಂತ್ರಿಸಲು ಪ್ರಯತ್ನಿಸಿರುವುದು ಭಾರತದ‌ ಶಕ್ತಿಯ ಒಂದು ಉದಾಹರಣೆಯೆನ್ನಬಹುದು.

Tags

Related Articles

Close