ಅಂಕಣದೇಶಪ್ರಚಲಿತ

ಚೀನಾ ಅಜಿತ್ ದೋವಲ್ ಗೆ ಕೇಳಿತು, “ದೋಕ್ಲಾಮ್ ನಿಮ್ಮ ಪ್ರದೇಶವೇ?!” ಅಜಿತ್ ದೋವಲ್ ರ ಉತ್ತರ ಚೀನಾದ ನಿಯೋಗಕ್ಕೆ ಹೃದಯಾಘಾತ ನೀಡಿತು! ಆ ಉತ್ತರವೇನು ಗೊತ್ತೇ?

ಭಾರತ ಹಾಗೂ ಚೀನಾದ ಗಡಿ ಭಾಗದ ವಿವಾದ ಮುಗಿದಿದೆಯಷ್ಟೇ!! ಅನೇಕ ಸುತ್ತಿನ ಮಾತುಕಥೆಗಳು ನಡೆದು, ಇನ್ನೊಂದಿಷ್ಟು ವಿವಾದಗಳು ನಡೆದು
ಇಡಿಯ ಭಾರತಕ್ಕೆ ಗೊತ್ತಾಗಿ ಹೋಗಿತ್ತು, ಚೀನಾ ಎಂತಹ ಅಧಿಕಪ್ರಸಂಗಿ ಎಂದು!! ಚೀನಾದ ತಾಕತ್ತಿಗೆ ಬೇರೆಲ್ಲ ದೇಶಗಳೂ ಒಮ್ಮೊಮ್ಮೆ ಮಕಾಡೆ ಮಲಗಿದ್ದು
ಸತ್ಯವಾದರೂ, ಅದೇ ಅಹಂಕಾರದಿಂದ ಭಾರತಕ್ಕೆ ಕಾಲಿಟ್ಟ ಗಳಿಗೆಯಲ್ಲಿಯೇ ಅದರ ಸೋಲೊಂದು ನಿಶ್ಚಿತವಾಗಿ ಹೋಗಿತ್ತು! ಭಾರತ ಕೊಬ್ಬಿದ ಚೀನಾದ ಕೊಂಬುಗಳ ಹಿಡಿದು ಮಣ್ಣು ಮುಕ್ಕಿಸಿತು!

ರಣ ತಂತ್ರಕ್ಕೆ ಯಾವಾಗಲೂ ಬೆನ್ನೆಲುಬಾಗಿದ್ದವರು ರಾಷ್ಟ್ರೀಯ ಭದ್ರತಾ ಸಲಹೆಗಾರ ಶ್ರೀ ಅಜಿತ್ ದೋವಲ್! ಚೀನಾದ ಈ ದೋಕ್ಲಾಮ್
ಗಡಿ ವಿವಾದದಲ್ಲಿ ಪ್ರತಿ ಎಚ್ಚರಿಕೆಯನ್ನೂ ಅಜಿತ್ ತೆಗೆದುಕೊಂಡಿದ್ದ ಅಜಿತ್ ದೋವಲ್ ಎಂತಹ ಸ್ವಾಭಿಮಾನಿ ಎನ್ನುವುದು ಅವರು ‘ಚೀನಾರ ಸ್ಟೇಟ್ ಕೌನ್ಸಿಲರ್’ ಗೆ ನೀಡಿದ ಪ್ರತ್ಯುತ್ತರವೇ ತೋರಿಸಿತ್ತು!

ಚೀನಾದ ಸ್ಟೇಟ್ ಕೌನ್ಸಿಲರ್ ಯಾಂಗ್ ಜೀಚಿ ಭಾರತದ ಭದ್ರತಾ ಸಲಹೆಗಾರರಾದ ಅಜಿತ್ ದೋವಲ್ ಗೆ ಕೇಳಿದ ಪ್ರಶ್ನೆಯಿಷ್ಟೇ!
“ದೋಕ್ಲಾಮ್ ನಿಮ್ಮ ಪ್ರದೇಶವೇನು?!”

ಬಿಡಿ! ಚೀನಾದ ಅಧಿಕಪ್ರಸಂಗಿತನಕ್ಕೆ ಅವರ ಸೈನಿಕರು ಸತ್ತು ನೆಲಕ್ಕುರುಳಿದ್ದೇ ಜಾಸ್ತಿ! ಈಗಲೂ, ದೋಕ್ಲಾಮ್ ನಿಂದ ಸೇನೆಯನ್ನು ಹಿಂಪಡೆಯಲು ತಯಾರಾಗಿರಲಿಲ್ಲ ಚೀನಾ! ಭೂತಾನ್ ನ ವರೆಗೂ ರಸ್ತೆ ಕಲ್ಪಿಸಿ ತದನಂತರ ಭೂತಾನ್ ನನ್ನೂ ನುಂಗಲು ಹೊರಟಿದ್ದ ಚೀನಾದ ಕಂತ್ರಿ ಬುದ್ಧಿ ಅರಿವಾಗಿದ್ದು ಅಜಿತ್ ದೋವಲ್ ಎಂಬ ಚಾಣಾಕ್ಷನಿಗೆ! ಮುಂಚೆ ಇಂದಲೂ ದೋಕ್ಲಾಮ್ ಚೀನಾದ ಪ್ರದೇಶವಲ್ಲ ಎಂದು ಸಾಕ್ಷ್ಯಾಧರಿಸಿದ್ದ ಅಜಿತ್ ದೋವಲ್ ಮರುಪ್ರಶ್ನಿಸಿದರು! “ಪ್ರತಿ ವಿವಾದಾತ್ಮಕ ಪ್ರದೇಶವೂ ಚೀನಾದ ಅಧೀನಕ್ಕೊಳಪಡುತ್ತದೆಯೇ?!”

ಈ ಪ್ರತಿಪ್ರಶ್ನೆಯಿದೆಯಲ್ಲ, ಚೀನಾದ ಬುದ್ಧಿಯನ್ನು ಒಮ್ಮೆ ಜಗದ ಮುಂದೆ ಬಟಾಬಯಲಾಗಿಸಿದ್ದು ಸುಳ್ಳಲ್ಲ!!! ಇತ್ತೀಚೆಗಷ್ಟೇ ಭಾರತವನ್ನು ನಿಕೃಷ್ಟವಾಗಿ ಕಂಡಿದ್ದ ಚೀನಾಕೆ ತಾನು ಭಾರತದ ದೃಷ್ಟಿಯಲ್ಲೊಂದು ಕಾಲ ಧೂಳು ಎಂಬುದನ್ನೂ ಮನಗಂಡಿರಲಿಲ್ಲ ಪಾಪ! ಇದೊಂದೇ ಒಂದು ಪ್ರಶ್ನೆ ಇಡೀ ಚೀನಾವನ್ನು ಒಮ್ಮೆ ಕೋಮಾಕೆ ಕಳುಹಿಸಿ‌ದ್ದು ಸುಳ್ಳಲ್ಲ!

ಅಷ್ಟಕ್ಕೇ ಬಿಡದ ಅಜಿತ್ ಮತ್ತೊಮ್ಮೆ ಧ್ವನಿ ಎತ್ತಿದರು! ” ಭೂತಾನ್ ವಿವಾದಾತ್ಮಕ ಪ್ರದೇಶವಾಗಿದ್ದರೂ ಸಹ ಭೂತಾನ್ ಹಾಗೂ ಭಾರತಕ್ಕೊಂದು ಅವಿನಾಭಾವ ಬಂಧವಿದೆ. ಭೂತಾನ್ ಸಹಕಾರ ಕೇಳಿದಾಗ ಕೊಡುವುದು ಭಾರತದ ಧರ್ಮ! ಚೀನಾ ಹಾಗೂ ಭಾರತದ ನಡುವೆ ಇರುವ ಭೂತಾನ್ ನ ಸಮಸ್ಯೆ ಬಗೆಹರಿಸುವುದು ಈ ಎರಡೂ ದೇಶಗಳ ಕರ್ತವ್ಯ ಅಷ್ಟೇ! ಅಲ್ಲದೇ, ನೀವು ದೋಕ್ಲಾಮ್ ನನ್ನು ಪಡೆಯಲೇಬೇಕೆಂದಿದ್ದರೆ ಮೊದಲು ಭಾರತದ ಉತ್ತರ ಭಾಗದ 500 ಚದರ ಕಿಮೀ ಪ್ರದೇಶವನ್ನು ಮರ್ಯಾದೆಯಾಗಿ ಹಿಂತಿರುಗಿಸಿ!”

ಯಾಂಗ್ ಚೀಜಿ ದಂಗಾಗಿ ಹೋಗಿದ್ದು ಸುಳ್ಳಲ್ಲ! ಎಲ್ಲಿಯ ದೋಕ್ಲಾಮ್! ಎಲ್ಲಿಯ ಭಾರತದ ಉತ್ತರ ಪ್ರದೇಶ!! ಎಲ್ಲಿಯ ಭೂತಾನ್!!!

“ದೋಕ್ಲಾಮ್ ವಿಚಾರದಲ್ಲಿ ಎರಡೂ ದೇಶಗಳೂ ಸಹ ಒಟ್ಟಿಗೇ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವುದು ಮಾತ್ರವಲ್ಲ, ಬದಲಾಗಿ ಮುಂಚಿನ ಶಾಂತಿಯುತ ಸ್ಥಿತಿಗೆ ಅದನ್ನು ಮರಳಿಸಬೇಕು.” ಎಂದ ಅಜಿತ್ ದೋವಲ್ ರವರ ಮಾತಿಗೆ ಯಾಂಗ್ ಚೀಜಿಯ ಮೌನವೊಂದೇ ಬಾಕಿ ಉಳಿದಿದ್ದು ಬಿಡಿ!

ಈ ಮಾತಿನ ಹೊಡೆತ ತಾಳಲಾರದೇ ಚೀನಾದವರು ಹೃದಯಾಘಾತವಾಗಿ ಬಿದ್ದರೆಂದು ಅರಿತ ವಿದೇಶಾಂಗ ಕಾರ್ಯದರ್ಶಿ ಎಸ್.ಜಯಶಂಕರ್ ಹಾಗೂ ಚೀನಾದ ಭಾರತದ ರಾಯಭಾರಿ ವಿಜಯ್ ಗೋಖಲೆ ವಿವಾದವನ್ನು ಅಲ್ಲಿಗೆ ತಣ್ಣಗಾಗಿಸಿದ್ದಾರೆ!

ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕ್ಸಿ ಜಿನ್ ಪಿಂಗ್ ಹ್ಯಾಂಬರ್ಗರ್ ನಲ್ಲಿ ಜಿ-20 ಸಮಿತಿಯ ಮಾತುಕಥೆಗೆ ಭೇಟಿಯಾಗಿದ್ದಾಗಲೇ ‘ದೋಕ್ಲಾಮ್’ ವಿಚಾರವಾಗಿ ಖಡಕ್ ಎಚ್ಚರಿಕೆ ಮೋದಿ ನೀಡಿದ್ದರಾದರೂ ಸಹ ‘ಚೀಜಿ’ ಗೆ ಬಹುಷಃ ಸಾಕಾಗಿರಲಿಲ್ಲವೇನೋ! ರಾಷ್ಟ್ರೀಯ ಭದ್ರತಾ ಸಲಹೆಗಾರರ ಉಪಸ್ಥಿಯಲ್ಲೇ ಚರ್ಚೆಯಾಗಬೇಕು ಎಂದಿದ್ದ ಮೋದಿ ಅವತ್ತೇ ನಗುನಗುತ್ತಾ ಚೀನಾದ ಮರ್ಯಾದೆಯನ್ನು ಹರಾಜು ಮಾಡಿದ್ದರು!

” ಯಾವುದೇ ಪರಿಸ್ಥಿತಿಯೂ ಕೂಡ ಒತ್ತಡದಿಂದಾಗಲಿ ಬೆದರಿಕೆಯಿಂದಾಗಲೀ ಬದಲಾಗುವುದಿಲ್ಲ. ಭಾರತ ಇಂತಹ ಬೆದರಿಕೆಗಳಿಗೆ ಬಗ್ಗುವುದೂ ಇಲ್ಲ! ಯಾವುದೇ ಬದಲಾವಣೆ ಆಗುವುದಾದರೂ ಸಹ ಪರಸ್ಪರ ಹೊಂದಾಣಿಕೆಯಿಂದ ಅಥವಾ ಚರ್ಚೆಯಿಂದ ಮಾತ್ರವೇ ಸಾಧ್ಯ.” ಎಂದಿದ್ದರು ಮೋದಿ!

ಅದಾದ ನಂತರವೂ ಸಹ ಚೀನಾ ಅಧಿಕಪ್ರಸಂಗಿ ಹೇಳಿಕೆಗಳ ಮೂಲಕ, ಮಿಸ್ಸಿಲ್ಸ್ ಗಳನ್ನು ಚಲಿಸುವ ಮೂಲಕ, ಗಡಿ ಭಾಗದಲ್ಲಿ ಬಂಕರ್ ಗಳನ್ನು ಜಮಾಯಿಸುವ ಮೂಲಕ ಭಾರತದ ತಾಳ್ಮೆಯನ್ನು ಪರೀಕ್ಷಿಸುವ ವ್ಯರ್ಥ ಪ್ರಯತ್ನ ಮಾಡುತ್ತಲೇ ಇದ್ದರೂ, ಭಾರತೀಯ ಸೇನೆಗೆ ತಾಳ್ಮೆಯಿಂದಿರುವಂತೆ ಸೂಚಿಸಲಾಗಿತ್ತು!

ದೋಕ್ಲಾಮ್ ನ ಎರಡು ತಿಂಗಳ ತುರ್ತು ಪರಿಸ್ಥಿತಿ ಹೇಗಿತ್ತೆಂದರೆ ಎರಡು ದೇಶದ ಯಾವೊಬ್ಬ ಸೈನಿಕ ಅಕಸ್ಮಾತ್ ಆಗಿ ಗುಂಡು ಹಾರಿಸಿದ್ದರೂ ಸಹ ಯುದ್ಧಕ್ಕೆ ಆಹ್ವಾನ ಮಾಡಿದಂತಾಗುವಷ್ಟು ಭೀಕರ ಪರಿಸ್ಥಿತಿ ಅದು! ಆದರೆ, ಅಜಿತ್ ದೋವಲ್ ರವರ ಸೂಚನೆಯೊಂದು ಪ್ರತಿ ಸೈನಿಕನನ್ನೂ ಚೀನಾದ ಹುಚ್ಚಾಟಕ್ಕೆ ಬಲಿ ಬೀಳದಂತೆ ಎಚ್ಚರವಹಿಸಿತ್ತು!!!

ಕೊನೆಗೂ, ಭಾರತದ ರಣ ತಂತ್ರಕ್ಕೆ ಬಲಿಯಾದ ಚೀನಾ ಎಂಬ ನೂಡಲ್ಸ್ ಮಾರುವ ದೇಶವೊಂದು 1962ರ ಕನಸು ಕಂಡಿದ್ದಷ್ಟೇ! ಬಾಲ ಮುದುರಿಕೊಂಡು ಹೋಗುವ ಪರಿಸ್ಥಿತಿ ಬಂದಿದ್ದು ಮತ್ತೆ ಚೀನಾಕ್ಕೆ ಹೊರತು ಭಾರತಕ್ಕಲ್ಲ!

– ತಪಸ್ವಿ

Tags

Related Articles

Close