ಕರ್ನಾಟಕದಲ್ಲಿ ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿರುವ ಕುಮಾರಸ್ವಾಮಿ ಬಿಜೆಪಿಯ ಪರಿವರ್ತನಾ ಯಾತ್ರೆಗೆ ಪ್ರತಿಯಾಗಿ ಜೆಡಿಎಸ್‍ನಿಂದ ಸ್ವಾಭಿಮಾನ ಯಾತ್ರೆ ಕೈಗೊಂಡಿದ್ದರು. ಆದರೆ ಸ್ವಾಭಿಮಾನ ಯಾತ್ರೆಗೆ ಜನಸೇರಿಸಲು ಪರದಾಟ ನಡೆಸುತ್ತಿರುವ ಕುಮಾರ ಸ್ವಾಮಿ ಮಾಡಿದ್ದೇನು ಗೊತ್ತೇ… ಇದು ಗೊತ್ತಾದರೆ ಖಂಡಿತಾ ಜೆಡಿಎಸ್‍ಗೆ ಯಾವ ಸ್ಥಿತಿ ಬಂದೊದಗಿದೆ ಎಂದು ಸುಲಭದಲ್ಲಿ ಅರ್ಥ ಮಾಡಿಕೊಳ್ಳಬಹುದು..
ಹೌದು, ಯಾತ್ರೆಗೆ ಬಂದವರಿಗೆ ಜೆಡಿಎಸ್ ವತಿಯಿಂದ 100 ರೂ. ಬೆಲೆಯ ಪೆಟ್ರೋಲ್‍ನ ಕೂಪನ್ ನೀಡಲಾಗಿದೆ. ಆದರೆ ಈ ಕೂಪನ್ ಪಡೆದು ಪೆಟ್ರೋಲ್
ತುಂಬಿಸುವ ಬದಲು ಜೆಡಿಎಸ್ ಕಾರ್ಯಕರ್ತರು ಬೀದಿರಂಪಾಟದದಲ್ಲಿ ತೊಡಗಿಕೊಂಡು ತಮ್ಮ ಘನತೆಯನ್ನು ಬೀದಿಪಾಲು ಮಾಡಿದ್ದಾರೆ. ಪೆಟ್ರೋಲ್ ತುಂಬಿಸಲು ಬಂಕಿಗೆ ಹೋದ ಕಾರ್ಯಕರ್ತರು ತನಗೆ ಹಾಕಿ ತನಗೆ ಹಾಕಿ ಎಂದು ಬೀದಿರಂಪಾಟ ಮಾಡತೊಡಗಿದರು. ಆಮಿಷದ ಮೂಲಕ ಜನರನ್ನು ಒಟ್ಟುಸೇರಿಸುವ ಜೆಡಿಎಸ್‍ನ ಕಾರ್ಯವೈಖರಿ ನಗೆಪಾಟಲಿಗೀಡಾಗಿದ್ದಷ್ಟೇ ಅಲ್ಲದೆ ಸರ್ವತ್ರ ಖಂಡನೆ ಒಳಗಾಗಿದೆ.
ಜೆಡಿಎಸ್ ಉತ್ತರ ಕರ್ನಾಟಕದದಲ್ಲಿ ಸ್ವಾಭಿಮಾನ ಯಾತ್ರೆ ಕೈಗೊಂಡಿದೆ. ಆದರೆ ಏನೇ ಮಾಡಿದರೂ ಜನ ಬರುತ್ತಿರುವುದು ಕಾಣುತ್ತಿರಲಿಲ್ಲ. ಜನ ಬರದಿದ್ದರೆ
ಮರ್ಯಾದೆಯ ಪ್ರಶ್ನೆ ಎಂದು ಭಾವಿಸಿದ ಕಾಂಗ್ರೆಸ್ ನಿಂದ ಉಚ್ಛಾಟಿಸಲ್ಪಟ್ಟ ಶಾಸಕ ಎಎಸ್ ಪಾಟೀಲ್ ನಡಹಳ್ಳಿ ಬೈಕ್ ಯಾತ್ರೆ ಗಾಗಿ ಬಂದವರಿಗೆ ನೂರು ರೂ. ಪೆಟ್ರೋಲ್ ಹಾಕಿಸುವ ಆಮಿಷ ಒಡ್ಡಿದ್ದಾರೆ. ನೂರು ರೂ ಬೆಲೆಯ, ಕುಮಾರ ಸ್ವಾಮಿ ಭಾವಚಿತ್ರ ಇರುವ ಕೂಪನ್ ಅನ್ನು ಕಾರ್ಯಕರ್ತರಿಗೆ ನೀಡಿದ ಜೆಡಿಎಸ್ ನಾಯಕರು ಇದನ್ನು ತೋರಿಸಿ ನಗರದ ರೂಗಿ ಎಂಬ ಪೆಟ್ರೋಲ್ ಬಂಕ್‍ನಲ್ಲಿ ಹಾಕಿಸುವಂತೆ ತಿಳಿಸಿದರು. ನಗರದ ರೂಗಿ ಎಂಬ ಪೆಟ್ರೋಲ್ ಬಂಕ್‍ಗೆ ತೆರಳಿದ ಕಾರ್ಯಕರ್ತರು ಪೆಟ್ರೋಲ್ ಹಾಕಿಸುವಂತೆ ಅರ್ಜೆಂಟ್ ಮಾಡಿದ್ದಾರೆ. ಜೊತೆಗೆ ಎಲ್ಲರಿಗೂ ಪೆಟ್ರೋಲ್ ಹಾಕಿಸುವಂತೆ ಒತ್ತಡ ಹೇರಿದ್ದಾರೆ. ಇದಕ್ಕೆ ಒಪ್ಪದಿದ್ದಾಗ ಜೆಡಿಎಸ್ ಕಾರ್ಯಕರ್ತರು ಪೆಟ್ರೋಲ್ ಬಂಕ್ ಬಳಿಯೇ ಜೋರಾಗಿ ಗಲಾಟೆ ನಡೆಸಿದ್ದಾರೆ.
ಒಂದೊಂದು ಕೂಪನ್ ಗೂ ನೂರು ರೂ. ಪೆಟ್ರೋಲ್ ಹಾಕುವಂತೆ ಸೂಚನೆ ನೀಡಲಾಗಿದ್ದು, ಇದರಲ್ಲಿ ಸ್ವತಃ ಜೆಡಿಎಸ್ ಮುಖಂಡ ಕುಮಾರಸ್ವಾಮಿ ಅವರದ್ದೇ ಫೋಟೋವನ್ನು ಕೂಪನ್ ನಲ್ಲಿ ಅಂಟಿಸಿರುವುದು ಸಾಕಷ್ಟು ಖಂಡನೆಗೆ ಪಾತ್ರವಾಗಿದೆ. ಕರ್ನಾಟಕದಲ್ಲಿ ಮುಖ್ಯಮಂತ್ರಿ ಆಗಲು ಕನಸು ಕಾಣುತ್ತಿರುವ ಕುಮಾರ ಸ್ವಾಮಿಯವರು ಸ್ವತಃ ಜನ ಒಟ್ಟು ಸೇರಿಸಲು ಆಮಿಷ ಒಡ್ಡುವ ಸ್ಥಿತಿಗೆ ತಲುಪಿದ್ದಾರೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಜೆಡಿಎಸ್ ಸೋಲು ಖಚಿತ ಎನ್ನುವುದನ್ನು ಸಾಬೀತುಪಡಿಸಿದೆ. ಯಾತ್ರೆ ಗಾಗಿಯೇ ಇಷ್ಟೊಂದು ಹಣ ಖರ್ಚು ಮಾಡುತ್ತಿರುವ ಜೆಡಿಎಸ್‍ನವರು ಚುನಾವಣೆ ಸಂದರ್ಭವೂ ಸಾಕಷ್ಟು ಹಣ ಖರ್ಚು ಮಾಡಿ ಜನರಿಗೆ ಆಸೆ ಆಮಿಷದ ಪ್ರಲೋಭನೆ ತೋರಿಸುವ ಸಾಧ್ಯತೆ ಇದೆ. ಆದ್ದರಿಂದ ಈ ಬಗ್ಗೆ ಚುನಾವಣಾ ಆಯೋಗ ಜೆಡಿಎಸ್ ಮೇಲೆ ಹದ್ದಿನ ಕಣ್ಣಿಡಬೇಕಾಗಿದೆ.
ಶಾಸಕ ಎ.ಎಸ್. ಪಾಟೀಲ್ ನಡಹಳ್ಳಿ ಅವರು ಯಾತ್ರೆಗೆ ಸ್ವಯಂಪ್ರೇರಿತರಾಗಿ ಜನ ಸೇರುತ್ತಿದ್ದಾರೆ ಎಂದು ಬೋಂಗು ಬಿಟ್ಟಿದ್ದರು. ಆದರೆ ಬೇರೆ ಪಕ್ಷದವರು ಹಣ
ಕೊಟ್ಟು ಜನ ಸೇರಿಸ್ತಾರೆ ಎಂದು ಇದೇ ಜೆಡಿಎಸ್‍ನವರು ಆರೋಪಿಸಿದ್ದರು. ಆದರೆ ಇದೀಗ ತಾವೇ ಕೂಪನ್ ಕೊಟ್ಟು ಆಮಿಷ ಒಡ್ಡಿರುವುದನ್ನು ದಿಗ್ವಿಜಯ
ನ್ಯೂಸ್‍ನವರು ಬಟಾಬಯಲು ಮಾಡಿದ್ದಾರೆ. ಸಮಾವೇಶಕ್ಕೆ ಜನ ಸೇರಿಸಲು ಆಗದೇ ಇರುವುದನ್ನು ಮನಗಂಡ ಪಕ್ಷದವರು ಈ ರೀತಿ ವಾಮ ಮಾರ್ಗದ ಮೂಲಕ ಜನಸೇರಿಸಿ ಪ್ರಚಾರ ಪಡೆಯಲು ಹಾತೊರೆಯುತ್ತಿದ್ದಾರೆ. ಆದರೆ ಇವೆಲ್ಲವೂ ದಿಗ್ವಿಜಯ ಚಾನೆಲ್‍ನಲ್ಲಿ ಬಹಿರಂಗಗೊಂಡಿದೆ.
-ಚೇಕಿತಾನ