ಅಂಕಣಪ್ರಚಲಿತರಾಜ್ಯ

ಚುನಾವಣೆ ನಂತರ ಸಿಎಂ ನಾನೇ ಎಂದು ಸಿದ್ದರಾಮಯ್ಯನವರಿಗೆ ಸೆಡ್ಡು ಹೊಡೆದ ಡಿಕೆಶಿ !!!

ಸಿಂಗಾಪೂರ್ ನಲ್ಲಿ ಆಸ್ತಿ, ಬರ್ಮಿಂಗ್‍ಹಾಮಿನಲ್ಲಿ ಮನೆ, ಮುಂಬೈನಲ್ಲಿ 25 ಫ್ಲಾಟ್ ಹೊಂದಿದ ವ್ಯಕ್ತಿ ಕರುನಾಡಿನ ಮುಂದಿನ ಮುಖ್ಯಮಂತ್ರಿ. ಆಶ್ಚರ್ಯವಾಗುತ್ತಿದೆಯಾ?? ಹೌದು. ಅವರೇ ಶ್ರೀ ಡಿ.ಕೆ.ಶಿವಕುಮಾರ್ , ಕರ್ನಾಟಕ ಘನ ಸರಕಾರದ ಇಂಧನ ಸಚಿವ. ಇದು ಯಾವಾಗ ಘೋಣೆಣೆಯಾಯಿತೆಂದು ಹುಬ್ಬೇರಿಸಬೇಡಿ. ಈ ವಿಚಾರವನ್ನು ಹೇಳಿದವರು ಅವರೇ.

ನೆಲಮಂಗಲ ತಾಲೂಕಿನ ಹಾಲಿಡೇ ಹಾಮ್ಸ್ ಹೋಟೇಲಿನಲ್ಲಿ ನಡೆದ ಬೃಹತ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಡಿಕೆಶಿ,”ಮಾಗಡಿ ತಾಲೂಕಿನ ಜನರು ಆಸೆ ಪಟ್ಟರೆ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಮಾಗಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರನ್ನು ಗೆಲ್ಲಿಸಿದರೆ ಮುಂದಿನ ಮುಖ್ಯಮಂತ್ರಿ ನಾನೇ” ಎಂದು ಹೇಳಿ ಕಾಂಗ್ರೆಸ್ ಪಕ್ಷದಲ್ಲಿ ಸಂಚನ ಉಂಟಾಗುವಂತೆ ಮಾಡಿದ್ದಾರೆ.

ಕರ್ನಾಟಕದ ಅತೀ ಭ್ರಷ್ಟ ರಾಜಕಾರಣಿ ಮುಂದಿನ ಸಿಎಂ ಆಗುತ್ತಾರಾ ಎಂಬುದಾಗಿ ಕರುನಾಡಿನ ಜನತೆ ಈಗ ಪ್ರಶ್ನಿಸುತ್ತಿದ್ದಾರೆ. ಇತ್ತೀಚೆಗಷ್ಟೇ ತೆರಿಗೆ ಅಧಿಕಾರಿಗಳು ಡಿಕೆಶಿಯವರ ನಿವಾಸಗಳಿಗೆ ದಾಳಿ ಮಾಡಿ ಅವರ ಬಂಡವಾಳವನ್ನು ಜನತೆ ಮುಂದೆ ಬಟಾಬಯಲು ಮಾಡಿದ್ದಾರೆ. ದೇಶದ 2 ನೇ ಅತೀ ಭ್ರಷ್ಟ ರಾಜಕಾರಣಿ ಎಂಬ ಬಿರುದನ್ನೂ ಪಡೆದಿದ್ದಾರೆ ಡಿಕೆಶಿ. ನೆನಪಿರಲಿ. ಅದು ಕೇವಲ ಬಿರುದಲ್ಲ, ವಾಸ್ತವದ ಸಂಗತಿ. ಸತ್ಯ ಸಂಗತಿ.

ಈ ಹೇಳಿಕೆಯ ಮೂಲಕ ಸಿದ್ದರಾಮಯ್ಯನವರಿಗೆ ನೇರವಾಗಿ ಟಾಂಗ್ ಕೊಟ್ಟರು ಡಿಕೆಶಿ. ಜೆಡಿಎಸ್ ಪಕ್ಷದಿಂದ ಕಾಂಗ್ರೆಸ್ ಪಕ್ಷಕ್ಕೆ ಬಂದ ಸಿದ್ದರಾಮಯ್ಯನವರಿಗೆ 3 ತಿಂಗಳಲ್ಲಿ ಮಂತ್ರಿ ಸ್ಥಾನ ಸಿಕ್ಕಿತು. ಆದರೆ ಆ ಅವಕಾಶ ಇದುವರೆಗೂ ನನಗೆ ಒದಗಿ ಬಂದಿಲ್ಲ. ನಾನು ಮಂತ್ರಿ ಸ್ಥಾನವನ್ನು ಸಿಕ್ಕಿದ ಪ್ರಸಾದ ಎಂದು ಭಾವಿಸುತ್ತಿರಲಿಲ್ಲವಾ ಎಂಬುದಾಗಿ ಕಿಡಿಕಾರಿದರು.

ಕೆಲವು ವಾರಗಳ ಹಿಂದಷ್ಟೇ ಚಾಮುಂಡೇಶ್ವರಿ ವಿಧಾನಸಭಾ ವ್ಯಾಪ್ತಿಯಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮವೊಂದರಲ್ಲಿ , ನಾನೇ ಮುಂದಿನ ಮುಖ್ಯಮಂತ್ರಿ ಎಂದಿದ್ದರು ಪ್ರಸ್ತುತ ಸಿಎಂ ಸಿದ್ದರಾಮಯ್ಯನವರು. ಆದರೆ ಎಐಸಿಸಿ ಕರ್ನಾಟಕದ ಉಸ್ತುವಾರಿಯಾಗಿ ವೇಣುಗೋಪಾಲ್ ಅವರನ್ನು ನೇಮಕ ಮಾಡಿದ ಬಳಿಕ ಸಿದ್ದರಾಮಯ್ಯನವರು, ಮುಂದಿನ ಮುಖ್ಯಮಂತ್ರಿ ಯಾರಾಗುತ್ತಾರೆಂಬದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ ಎಂದಿದ್ದಾರೆ.

ತೆರೆಗೆ ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭದಲ್ಲಿ ಡಿಕೆಶಿಯವರ ತಾಯಿ ಸಿದ್ದರಾಮಯ್ಯನವರೇ ತನ್ನ ಮಗನ ಅವನತಿಗೆ ಕಾರಣ ಎಂದಿದ್ದರು. ಆದರೆ ಈಗ ತನಗೇ ಅಧಿಕಾರದ ಬಯಕೆ ಇರುವುದು ಅವರ ಮಾತುಗಳಿಂದ ಸ್ಪಷ್ಟವಾಗಿದೆ. ಇನ್ನೆಷ್ಟು ದಿನ ರಾಜಕೀಯ ಚದುರಂಗದಾಟ ನಡೆಯುತ್ತದೆ ಎಂದು ಕಾದು ನೋಡಬೇಕು.

ಒಟ್ಟಾರೆಯಾಗಿ ಕಾಂಗ್ರೆಸ್ ನ ಎಲ್ಲಾ ರಾಜಕಾರಣಿಗಳಿಗೆ ಅಧಿಕಾರದ ಮೇಲೆ ಆಸೆ ಇರುವುದೇ ಹೊರತು ಪ್ರಜಾಸೇವೆಯಲ್ಲಿ ಅಲ್ಲ ಎನ್ನುವುದು ಸ್ಪಷ್ಟವಾಯಿತು. ದ್ವೇಷ ರಾಜಕಾರಣ ಆ ಪಕ್ಷದ ಉಸಿರಾಗಿ ಬಿಟ್ಟಿದೆ. ಇನ್ನು ಮುಂದಿನ ತೀರ್ಮಾನ ಜನತೆಯದ್ದು. ಭ್ರಷ್ಟರು ನಮ್ಮ ನಾಡಿನ ಮುಖ್ಯಮಂತ್ರಿಯಾಗಬೇಕೆ?? ಮೋದಿಯ ಹಾಗೆ ಸರಳ ಸಜ್ಜನಿಕೆಯ ವ್ಯಕ್ತಿ ಆಡಳಿತ ನಡೆಸಬೇಕೆ ??

– ಆತ್ಮಿಕ

Tags

Related Articles

Close