ಅಂಕಣಇತಿಹಾಸ

ಜಗತ್ತಿನ ಮಹಾರಹಸ್ಯವನ್ನೇ ಬಚ್ಚಿಟ್ಟುಕೊಂಡಿರುವ ಈ ದೇವಾಲಯದ ನಿಗೂಢತೆಯ ಬಗ್ಗೆ ಇತಿಹಾಸಕಾರ ಆತನ ಗ್ರಂಥದ ಮೂಲಕ ಜಗತ್ತಿನ ಮುಂದಿಟ್ಟಿದ್ದಾರೆ…

ಇದು ದಕ್ಷಿಣದ ವಿದ್ಯಾಕಾಶಿ. ಒಂದು ಕಾಲಕ್ಕೆ ನಲಂದಾ, ತಕ್ಷಶಿಲಾದ ರೀತಿಯೇ ಇದು ಕೂಡಾ ಜ್ಞಾನಾರ್ಜನೆಯ ತಾಣವಾಗಿತ್ತು. ಇಲ್ಲಿರುವ ಈ ದೇವಾಲಯ ಪಂಚಭೂತ ತತ್ವಗಳಿಂದ ಆಧಾರಿತವಾದ ದೇವಾಲಯ. ಶಿವನಿಗಾಗಿ ನಿರ್ಮಾಣವಾದ ಐದು ದೇವಾಲಯಗಳಲ್ಲಿ ಇದು ಕೂಡಾ ಒಂದು. ಇಲ್ಲಿರುವ ಶಿವ ಭೂ ತತ್ವದ ಪ್ರತೀಕ. ಈ ದೇವಾಲಯವನ್ನು ಏಕಾಂಬರೇಶ್ವರ ಅಂತಾ ಕರೆಯುತ್ತಾರೆ. 50 ಸಾವಿರ ವರ್ಷಗಳ ಹಿಂದೆ ಅತ್ಯದ್ಭುತ ನಾಗರಿಕತೆ ಇತ್ತು ಎನ್ನುವುದಕ್ಕೆ ಈ ದೇವಾಲಯವೇ ಸಾಕ್ಷಿ. ಈ ದೇವಾಲಯ ಇರೋದು ತಮಿಳು ನಾಡಿನ ಕಾಂಚೀಪುರಂನಲ್ಲಿ. ಈ ದೇವಾಲಯದ ನೆಲಮಮಾಳಿಗೆಯಲ್ಲಿ ಲಕ್ಷಾಂತರ ವರ್ಷದ ಇತಿಹಾಸದ ದಾಖಲೆಯನ್ನು ಇದೆ ಎಂದು ಸ್ವತಃ ಜರ್ಮನಿ ಲೇಖಕರು ಹೇಳಿದ್ದಾರೆ. ಸಿಟಿ ಆಫ್ ಸಿಲ್ಕ್ ಎಂದೇ ಪ್ರಸಿದ್ದಿ ಹೊಂದಿರುವ ಈ ನಗರಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕೇವಲ “ಸಿಟಿ ಆಫ್ ಸಿಲ್ಕ್” ಎಂದು ಮಾತ್ರ ಕರೆಯಲ್ಪಡದೆ “ಸಿಟಿ ಆಫ್ ಟೆಂಪಲ್” ಎಂದೂ ಪ್ರಸಿದ್ಧಿಯನ್ನು ಹೊಂದಿದೆ. ದೇಶದೆಲ್ಲೆಡೆ ಶಿವನಿಗೆ ಅಭಿಷೇಕ ಮಾಡುವುದಂಟು. ಆದರೆ ಇಲ್ಲಿ ಮಾತ್ರ ಶಿವನಿಗೆ ಅಭಿಷೇಕವಿಲ್ಲ. ಇಡೀ ದೇಶಲ್ಲಿ ಅಭಿಷೇಕ ನಡೆಯದ ಏಕೈಕ ಶಿವ ದೇವಾಲಯ ಅಂದರೆ ಅದು ಏಕಾಂಬರೇಶ್ವರ ಸನ್ನಿಧಿ ಮಾತ್ರ. ಕಂಚಿಯ ಪೃಥ್ವಿ ಲಿಂಗಕ್ಕೆ ಏಕಾಂಬರೇಶ್ವರ ಎಂದು ಹೆಸರು ಬರುವುದಕ್ಕೆ ಅಲ್ಲಿರುವ ಮಾವಿನ ಮರ ಕಾರಣ. ಯಾಕೆಂದರೆ ಏಕ ಎಂದರೆ ಒಂದು ಆಮ್ರ ಎಂದರೆ ಮಾವು. ಒಂದೇ ಒಂದು ಮಾವು ಬಿಡುವ ಕಾರಣ ಶಿವನನ್ನು ಇಲ್ಲಿ ಏಕಾಂಬರೇಶ್ವರ ಎಂದು ಕರೆಯುತ್ತಾರೆ. ವೇದವೃಕ್ಷ ಅಂತಾ ಕರೆಯಲ್ಪಡುವ ಈ ಮಾವಿನ ಮರಕ್ಕೆ ನಾಲ್ಕೇ ನಾಲ್ಕು ಕೊಂಬೆಗಳಿದ್ದು ನಾಲ್ಕು ವೇದಗಳನ್ನು ಸೂಚಿಸುತ್ತದೆ. ಇಲ್ಲಿಯ ಗುಡಿಗೋಪುರಗಳು ಬೃಹತ್ ಪ್ರಮಾಣದಲ್ಲಿದ್ದು ತಮ್ಮ ಶಿಲ್ಪಕಲೆಯ ಭವ್ಯತೆಯಿಂದ ಅದ್ಭುತ ಎನಿಸಿವೆ. ಶಿವಕಂಚಿ, ವಿಷ್ಣುಕಂಚಿ ಎಂದು ನಗರ ಎರಡು ವಿಭಾಗಗಳಾಗಿದೆ. ಶಿವಕಂಚಿಯಲ್ಲಿ ಸುಪ್ರಸಿದ್ಧ ಕಾಮಾಕ್ಷಿ, ಏಕಾಂಬರೇಶ್ವರ, ಕೈಲಾಸನಾಥ ದೇವಸ್ಥಾನಗಳಿವೆ. ಶಂಕರಾಚಾರ್ಯರ ಪೀಠಗಳಲ್ಲಿ ಒಂದಾದ ಕಾಮಕೋಟಿ ಪೀಠವಿರುವುದೂ ಇಲ್ಲೆ ಇದೆ. ವಿಷ್ಣುಕಂಚಿಯಲ್ಲಿ ವರದರಾಜಸ್ವಾಮಿ ದೇವಸ್ಥಾನವಿದೆ. ವರ್ಷಂಪ್ರತಿ ಇಲ್ಲಿ ನಡೆಯುವ ಉತ್ಸವಗಳಿಗೆ ದಕ್ಷಿಣ ಭಾರತದಿಂದಲೇ ಅಲ್ಲದೆ ಉತ್ತರ ಭಾರತದಿಂದಲೂ ಅಸಂಖ್ಯಾತ ಯಾತ್ರಾರ್ಥಿಗಳು ಆಗಮಿಸುತ್ತಾರೆ. ಈಗಲೂ ಕಂಚಿ ಪ್ರಸಿದ್ಧ ಯಾತ್ರಾಸ್ಥಳವೆನಿಸಿದೆ. ಅಲ್ಲಿನ ಏಕಾಂಬರೇಶ್ವರ ದೇವಸ್ಥಾನ ಇಡೀ ಭಾರತದಲ್ಲೇ ಅತ್ಯಂತ ದೊಡ್ಡ ದೇವಸ್ಥಾನ. ಅದರ ಗೋಪುರದ ಎತ್ತರ 57.24 ಮೀ. ಅದರ ಪೌಳಿಯ ಗೋಡೆ ಇಪ್ಪತ್ತೈದು ಎಕರೆ ಪ್ರದೇಶವನ್ನು ಒಳಗೊಂಡಿದೆ. ಕೇಂದ್ರ ದೇವಸ್ಥಾನದ ಸುತ್ತ ಅರುವತ್ತು ಮೂರು ಪುರಾತನ ವಿಗ್ರಹಗಳಿವೆ. ಈ ದೇವಾಲಯ ಒಳ ಪ್ರವೇಶಿಸುತ್ತಲೇ ನಮ್ಮ ಸ್ವಾಗತಿಸುವುದು ಅಲ್ಲಿ ಸಾವಿರ ಕಂಬಗಳ ಬೃಹತ್ ಮಂಟಪ. ಇದನ್ನು ಕಟ್ಟಿರುವುದು ವಿಜಯನಗರದ ಅರಸರು. ಈ ಸಾವಿರ ಕಂಬದ ಹಜಾರದ ಒಳ ಆವರಣದ ಗೋಡೆಯಲ್ಲಿರುವ 1,008 ಶಿವಲಿಂಗಗಳು ಕೈಲಾಶ ದರ್ಶನ ಮಾಡಿಸುತ್ತೆ! ಅಲ್ಲದೆ ಎಂಬುವುದು ತಮಿಳು ಸಾಹಿತಿ ಪ್ರಕಾರ ಈ ದೇವಾಲಯಕ್ಕೆ 2500 ಸಾವಿರ ವರ್ಷಗಳ ಇತಿಹಾಸವಿದೆ . ಈ ದೇವಾಲಯವನ್ನು ಪಲ್ಲವರು ಕಟ್ಟಿರುವುದಕ್ಕೆ ಪುರಾವೆಗಳೂ ದೊರಕಿವೆ. ಕಟ್ಟಡಗಳು ಹಾಗೂ ಕೆತ್ತನೆಗಳನ್ನು ಚೋಳರು ಹಾಗೂ ನಂತರ ಬಂದ ವಿಜಯ ನಗರದ ಅರಸಲು ಕಟ್ಟಿದ್ದಾರೆ. ಇಷ್ಟು ಪುರಾಣ ಪ್ರಸಿದ್ಧ ದೇವಾಲಯದಲ್ಲಿ ಮತ್ತೊಂದು ವಿಸ್ಮಯ ಕೂಡಾ ಅಡಗಿದೆ. ಅದು 50,000 ವರ್ಷಗಳ ಹಿಂದೆ ಮು ಅಂತಾ ಜನಾಂಗಕ್ಕೆ ಸೇರಿರುವ ಮಾಹಿತಿಯನ್ನು ಹೊರಗಿಡುತ್ತಿದೆ. ಹೌದು… ಇಷ್ಟು ವರ್ಷಗಳ ಹಿಂದೆ ಇಂತಹ ಜನಾಂಗ ಇತ್ತಾ ಎಂದು ಮೂಗಿನ ಮೇಲೆ ಬೆರಳಿಡುವುದು ಸಹಜ. ಆದರೆ ಈ ದೇವಾಲಯದಲ್ಲಿ ಈ ಮಾಹಿತಿ ಅಡಗಿದೆ ಅಂದ್ರೆ ನಿಜಕ್ಕೂ ಆಶ್ಚರ್ಯವಾಗುತ್ತೆ ಅಲ್ವಾ?! ಬ್ರಿಟಿಷ್ ಪತ್ತೆದಾರಿ ಲೇಖಕ ಹಾಗೂ ಖ್ಯಾತ ಇತಿಹಾಸ ಸಂಶೋಧನಾಕಾರ ಜೇಮ್ಸ್ ಚರ್ಚ್‍ವಾಡ್ ಈ ಬಗ್ಗೆ ಮಾಹಿತಿ ಜಗತ್ತಿನ ಮುಂದಿಟ್ಟಿದ್ದಾರೆ. ವಿಶ್ವದಲ್ಲೇ ಅಳಿದು ಹೋದ ನಾಗರಿಕತೆಯ ಬಗ್ಗೆ ಹಾಗೂ ಅಸ್ತಿತ್ವದ ಬಗ್ಗೆ ಈತ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. “ದಿ ಸಿಕ್ರೇಟ್ ಸಿಂಬಲ್ಸ್ ಆಫ್ ಮೂ” ಅನ್ನುವ ಪುಸ್ತಕದಲ್ಲಿ ಈ ಜನಾಂಗ ಹಾಗೂ ಈ ದೇವಾಲಯದ ಬಗ್ಗೆ ಬರೆದಿದ್ದಾರೆ. ಜಗತ್ತಿನ ಇತರ ಜನಾಂಗಗಳಿಗಿಂತ ಮುಂಚಿತವಾಗಿಯೇ ಮೂ ನಾಗರಿಕತೆ ಇತ್ತು ಎಂಬುವುದು ಈತನ ಪುಸ್ತಕದಲ್ಲಿ ಬಿಂಬಿತವಾಗಿದೆ. ಆದರೆ ಕೆಲವರು ಮಾತ್ರ ಮೂ ನಾಗರಿಕತೆಯ ಬಗ್ಗೆ ವಾದಿಸಿದ್ದಕ್ಕೆ ಹುಚ್ಚ ಅಂತಾ ಪಟ್ಟ ಕಟ್ಟಿ ಬಿಡುತ್ತಾರೆ. ಈತನ ಸಾವಿನ ನಂತರ ಆತನ ಮರಿ ಮೊಮ್ಮಗ ಈ ಬಗ್ಗೆ ಸಂಶೋಧನೆಯನ್ನು ಮಾಡೋಕೆ ಬಯಸುತ್ತಾನೆ. ಆತನ ಗ್ರಂಥವನ್ನು ಮರುಮುದ್ರಣ ಮಾಡುವ ಮುಂಚೆ ಜ್ಯಾಕ್ ಚರ್ಚ್‍ವಾಡ್ ಮತ್ತೆ ಮರು ಸಂಶೋಧನೆ ಮಾಡಬೇಕೆಂದು ಜರ್ಮುನಿಯ ಲೇಖಕ ಸಂಶೋಧಕ ಥಾಮಸ್ ರಿಟರ್ ಗೆ ಕೇಳಿಕೊಳ್ಳುತ್ತಾನೆ. ಆಗ ಥಾಮಸ್ ರಿಟರ್ ಬಂದಿದ್ದೇ ತಮಿಳುನಾಡಿನ ಕಾಂಚೀಪುರಕ್ಕೆ. 2010 ಜುಲೈ 23 ರಂದು ಕಂಚೀಪುರಕ್ಕೆ ಭೇಟಿ ಮಾಡಿದ ಈತ ಅಲ್ಲಿನ ನೆಲ ಮಾಳಿಗೆ ಗ್ರಂಥಾಲಯಕ್ಕೆ ಭೇಟಿ ಕೊಟ್ಟಿದ್ದಾಗಿ ಬರೆಯುತ್ತಾನೆ. ಈ ಗ್ರಂಥಾಲಯ ಸಾಮಾನ್ಯವಾಗಿರಲಿಲ್ಲ. ಇದು ಶತಮಾನಗಳ ಹಿಂದಿನ ಅತೀ ಪುರಾಣವಾದ ಹಾಗೂ ಹಲವಾರು ರಹಸ್ಯ ವಿಚಾರ ಅದರಲ್ಲಿ ಅಡಗಿತ್ತು. ಏಕಾಂಬೇಶ್ವರ ತಳ ಮಹಡಿಯಲ್ಲಿ 25 ಮಿಟರ್ ಉದ್ದ ಹಾಗು 15 ಮೀಟರ್ ಅಗಲದ 10 ಚೇಂಬರ್‍ಗಳಿದ್ದು ಅದರ ಸುತ್ತ 10ಸಾವಿರ ರಾಕ್ ಟ್ಯಾಬ್ಲೆಟ್‍ಗಳಿವೆ. ಮತ್ತೊಂದು ವಿಚಾರ ಏನೆಂದರೆ ಶಿಲಾಶಾಸನಗಳಿಂದ ತುಂಬಿಹೋಗಿದ್ದ ಇದನ್ನು “ಋಷಿ ಪುರಾಣ” ಅಂತಾನೇ ಸ್ಥಳಿಯರು ಹೇಳುವುದುಂಟು. ಇಲ್ಲಿ ಕೆತ್ತಲಾದ ಋಷಿ ಪುರಾಣದಲ್ಲಿ ಪ್ರಾಚೀನ ನಾಗರಿಕರ ಉಗಮಕ್ಕೆ ಕಾರಣರಾದ ಮೂಲ ಕತೃಗಳ ವಿವರಗಳಿವೆ ಎಂದು ಹೇಳಲಾಗುತ್ತಿದೆ. ಶಿವನ ದೇಗುಲದಲ್ಲಿ ಭೂ ಉಗಮದಿಂದ ಹಿಡಿದು ಇಲ್ಲಿನ ನಾಗರಿಕತೆಗಳ ಬಗ್ಗೆ ಭಾರತದ ಪರಂಪರೆಯ ಬಗ್ಗೆ ಹಾಗೂ ಭಾರತದ ಯಾವೆಲ್ಲಾ ನಾಗರಿಕತೆಗಳು ವಿಶ್ವದೆಲ್ಲೆಡೆ ವಲಸೆ ಹೋಗಿದೆ ಎಂಬುವುದರ ಬಗ್ಗೆಯೂ ಇಲ್ಲಿ ಮಾಹಿತಿ ದೊರಕುತ್ತದೆ ಎಂಬುವುದು ಜರ್ಮನಿಯ ಇತಿಹಾಸಕಾರ ರಿಟರ್ ಹೇಳಿದ್ದಾನೆ. ಹಲವಾರು ರಹಸ್ಯಗಳು ಈ ದೇವಾಲಯಲ್ಲಿ ಅಡಗಿದೆ. ಕಲ್ಲಿನ ಶಾಸನದ ಜೊತೆಗೆ ಚಿನ್ನದ ತಗಡುಗಳಲ್ಲಿ ಬರೆದ ಶಾಸನಗಳೂ ಇವೆ. 10-14 ಸೆಂಟಿಮೀಟರ್ ಚಿನ್ನದ ತಗಡುಗಳಲ್ಲಿ ಹಲವಾರು ರಹಸ್ಯಗಳನ್ನು ಬರೆಯಲಾಗಿದೆ. ಅಲ್ಲದೆ ಬೆಳ್ಳಿ ಹಾಗೂ ಕಂಚಿನಲ್ಲಿ ಜಗತ್ತಿನ ಬಗ್ಗೆ ಬರೆದ ರಹಸ್ಯಗಳು ಇದೆ. ಥಾಮಸ್ ರಿಟರ್ ಭಾರೀ ಉತ್ಸಾಸದಿಂದ ತಮಿಳುನಾಡಿನ ಕಂಚೀಪುರಂನಲ್ಲಿ ಸಂಶೋಧನೆಯನ್ನು ನಡೆಸಲು ಬಂದಾಗ ಆತನಿಗೆ ದೊರಕಿದ್ದು ಕೇವಲ ಮೂರು ಚೇಂಬರ್ ಮಾತ್ರ…ಕೆಲವು ಶಿಲಾ ಶಾಸನಗಳ ಬಗ್ಗೆ ಮಾತ್ರ ಫೋಟೋ ಕಾಪಿ ಮಾಡುವುದಕ್ಕೆ ಅವಕಾಶ ಸಿಕ್ಕಿತು. ಇದನ್ನೆ ಬಳಸಿ ಆಗಾಗಲೇ ಚರ್ಚ್‍ವಾಡ್ ಬರೆದಿದ್ದ ಗ್ರಂಥಕ್ಕೆ ಪುಷ್ಠಿ ನೀಡುತ್ತಾನೆ. ಎಲ್ಲಾ ನಾಗರಿಕತೆಗಳಿಗಿಂತನೂ ಮೂ ನಾಗರಿಕತೆಯೇ ಮೊದಲು ಎಂಬುವುದು ಜರ್ಮನಿಯ ಇತಿಹಾಸಕಾರನ ವಾದ. ಅದಲ್ಲದೆ ಸ್ಥಳೀಯರ ಪ್ರಕಾರ ಇಲ್ಲಿರುವ ಶಾಸನಗಳನ್ನು ಬರೆದಿರುವುದು 5 ಋಷಿ ಮುನಿಗಳು ಅದರಲ್ಲಿ ಅಗಸ್ತ್ಯ ಮುನಿಗಳ ಪಾತ್ರ ದೊಡ್ಡದು ಎಂಬುವುದು ಎಂದು ಹೇಳುತ್ತಾರೆ. ಭಾರತವೇ ರಹಸ್ಯಗಳ ಆಗರ. ಇಲ್ಲಿರುವ ಪ್ರತೀ ದೇವಾಲಯಗಳ ರಹಸ್ಯಗಳಿಂದ ಕೂಡಿದ್ದು ಅದನ್ನು ಬೇಧಿಸಲು ವಿಜ್ಞಾನಿಗಳಿಂದಲೂ ಅಸಾಧ್ಯ. ಸಂಶೋಧನೆ ಮಾಡಬೇಕೆಂದು ಬಂದವರಿಗೆ ಹಲವಾರು ರಹಸ್ಯ ವಿಚಾರಗಳು ದೊರಕ್ಕುತ್ತಿರುವುದು ಇಡೀ ವಿಶ್ವವನ್ನೇ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ. source: youtube meadia master
Tags

Related Articles

FOR DAILY ALERTS
Close