ಅಂಕಣಇತಿಹಾಸದೇಶಪ್ರಚಲಿತ

ಜಗದ ಮೊದಲ ವಿಶ್ವ ವಿದ್ಯಾನಿಲಯವಾದ ನಳಂದಾ, ಮುಸ್ಲಿಂ ಆಕ್ರಮಣಕಾರರ ಕ್ರೂರತೆಗೆ ಬಲಿಯಾದ ರೀತಿ ಹೇಗಿದೆ ಗೊತ್ತೇ?

ಭಾರತದ ಗತವೈಭವ ಎಷ್ಟೊಂದು ವೈಭವೋಪೇತವಾಗಿತ್ತೆಂದರೆ 800 ವರ್ಷ ಹಿಂದೆ ಇಡೀ ಜಗತ್ತಿಗೆ ಜ್ಞಾನದ ಬೆಳಕನ್ನು ನೀಡುತ್ತಿದ್ದ ನಳಂದಾ ವಿಶ್ವವಿದ್ಯಾಲಯವೇ ಸಾಕ್ಷಿ. ಇಡೀ ಜಗತ್ತಿನ ವಿದ್ಯಾರ್ಥಿಗಳು ನಳಂದಾ ವಿದ್ಯಾಲಯಕ್ಕೆ ಸೇರಲು ಹಾತೊರೆಯುತ್ತಿದ್ದರು. ಇಲ್ಲಿ ಕಲಿಯುವುದೆಂದರೆ ಅದೊಂದು ಪ್ರತಿಷ್ಠೆಯ ವಿಷಯ. ಇಡೀ ಜಗತ್ತಿನ ಅತ್ಯಂತ ಶ್ರೇಷ್ಠ ವಿಶ್ವವಿದ್ಯಾಲಯ ಎಂದು ಹೆಸರು ಪಡೆದಿದ್ದ ನಳಂದಾ ವಿಶ್ವವಿದ್ಯಾಲಯದಲ್ಲಿ ಜ್ಞಾನಾರ್ಜನೆ ಪಡೆದವರೆಲ್ಲಾ ಅತ್ಯಂತ ಮಹಾಪುರುಷರಾಗಿ ಹೆಸರನ್ನು ಪಡೆದರು ಎಂದು ಇತಿಹಾಸ ತಿಳಿಸುತ್ತದೆ.

ಇಂತಹಾ ಸರ್ವಶ್ರೇಷ್ಠ ವಿಶ್ವವಿದ್ಯಾಲಯವನ್ನು ಮುಸ್ಲಿಂ ದಾಳಿಕೋರರು ಯಾವ ರೀತಿ ನಾಶ ಮಾಡಿದರೆಂದು ತಿಳಿದರೆ ನಮ್ಮ ರಕ್ತ ಕೊತ ಕೊತ ಎಂದು ಕುದಿಯುವುದು ಖಂಡಿತಾ. ಅದಕ್ಕಿಂತ ಮೊದಲು ನಳಂದ ವಿಶ್ವವಿದ್ಯಾಲಯದ ವೈಭವ ಹೇಗಿತ್ತು ಎಂಬುವುದನ್ನು ತಿಳಿಯಬೇಕು.

ನಳಂದಾ ವಿಶ್ವವಿದ್ಯಾಲಯದಲ್ಲಿ ಮುಖ್ಯವಾಗಿ ಮೂರು ಭವನಗಳಿದ್ದವು. ಅದರ ಹೆಸರುಗಳು ಇಂತಿವೆ, ರತ್ನಸಾಗರ, ರತ್ನದಾಧಿ ಮತ್ತು ರತ್ನರಂಜಕಾ. ಈ ಮೂರೂ ಭವನಗಳು ಬೇರೆ ಬೇರೆ ವಿಶೇಷ ಗುಣಲಕ್ಷಣಗಳನ್ನು ಹೊಂದಿತ್ತು. ಅಲ್ಲದೆ ಅಷ್ಟೇ ವಿಶಾಲವಾಗಿತ್ತು. ನಳಂದಾ ವಿಶ್ವವಿದ್ಯಾಲಯದಲ್ಲಿ ಕೇವಲ ಶಾಸ್ತ್ರಗಳನ್ನು ಕಲಿಸುತ್ತಿರಲಿಲ್ಲ, ಜೊತೆಗೆ ಲಲಿತ ಕಲೆ, ಔಷಧಿಶಾಸ್ತ್ರ, ಲೆಕ್ಕಶಾಸ್ತ್ರ, ಖಗೋಳಶಾಸ್ತ್ರ, ರಾಜನೀತಿ, ಜ್ಯೋತಿಷ್ಯ ಹಾಗೂ ಯುದ್ಧ ಕಲೆಗಳನ್ನು ಕಲಿಸಲಾಗಿತ್ತು.

ಇಷ್ಟೆಲ್ಲಾ ವಿಷಯಗಳನ್ನು ಕಲಿಸುವ ನಳಂದ ವಿಶ್ವವಿದ್ಯಾಲಯದ ಪ್ರವೇಶಾತಿ ಅಷ್ಟು ಸುಲಭವಾಗಿರಲಿಲ್ಲ. ಪ್ರವೇಶ ಬಯಸುವ ವಿದ್ಯಾರ್ಥಿಗಳು ಮೂರು ಪರೀಕ್ಷೆಯಲ್ಲಿ ಸಾಮಥ್ರ್ಯ ತೋರಿಸಿ ಉತ್ತೀರ್ಣವಾಗಬೇಕಿತ್ತು. ವಿಶ್ವವಿದ್ಯಾಲಯದಲ್ಲಿ ಕೆಲವೊಂದು ಶಿಸ್ತು, ನಿಯಮಗಳನ್ನು ಅಗತ್ಯವಾಗಿ ಪಾಲಿಸಬೇಕಿತ್ತು. ಕೆಲವೊಂದು ದಾಖಲೆಗಳ ಪ್ರಕಾರ ಖ್ಯಾತ ಖಗೋಳಶಾಸ್ತ್ರಜ್ಞ ಮತ್ತು ಲೆಕ್ಕಶಾಸ್ತ್ರಜ್ಞನಾಗಿದ್ದ ಆರ್ಯಭಟ ಈ ವಿಶ್ವವಿದ್ಯಾಲಯದ ಮುಖ್ಯಸ್ಥನಾಗಿದ್ದ ಎಂದು ತಿಳಿಸುತ್ತದೆ.

ಇಂಥಾ ನಳಂದ ವಿಶ್ವವಿದ್ಯಾಲಯ ಜಗತ್ತಿನ ಅನೇಕ ಸರ್ವಶ್ರೇಷ್ಠ ವಿದ್ವಾಂಸರನ್ನು, ಶಿಕ್ಷಕರನ್ನು ಸೃಷ್ಟಿಸಿತು. ಇಲ್ಲಿಗೆ ಕೊರಿಯಾ, ಜಪಾನ್, ಪೆರ್ಸಿಯಾ, ಟಿಬೆಟ್, ಚೀನಾ, ಗ್ರೀಸ್, ಇರಾನ್ ಸೇರಿ ಹಲವು ರಾಷ್ಟ್ರಗಳಿಂದ ವಿದ್ಯಾರ್ಥಿಗಳು ಬರುತ್ತಿದ್ದರು. ಭಾರತದ ಶ್ರೇಷ್ಠ ತತ್ವಜ್ಞಾನಿಗಳೆನಿಸಿದ ಹರ್ಷವರ್ಧನ, ವಸುಬಂಧು, ಧರ್ಮಪಾಲ, ಸುವಿಷ್ಣು, ಅಸಂಗ, ಧರ್ಮಕೀರ್ತಿ, ಶಾಂತರಕ್ಷಿತಾ, ನಾಗಾರ್ಜುನಾ, ಆರ್ಯವೇದಾ, ಪದ್ಮಸಂಭವ, ಕ್ಸುವಾಝಂಗ್ ಹಾಗೂ ಹ್ಯೂಲಿ ಮುಂತಾದವರು ನಳಂದ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಾಗಿದ್ದರು.

ಇಲ್ಲಿ ಒಮ್ಮೆಲೆ 10,000 ವಿದ್ಯಾರ್ಥಿಗಳು ಕಲಿಯುತ್ತಿದ್ದು ಸುಮಾರು 2000 ಶಿಕ್ಷಕರು ಪಾಠ ಮಾಡುತ್ತಿದ್ದರು. ವಿಶ್ವವಿದ್ಯಾಲಯ ವಾಸ್ತುಶಿಲ್ಪದಿಂದ ಕೂಡಿದ್ದು, ಗಟ್ಟಿಯಾದ ಬಾಗಿಲುಗಳನ್ನು ಹೊಂದಿತ್ತು. ವಿಶ್ವದಲ್ಲೇ ಮೇರುಸ್ಥಾನದಲ್ಲಿ ನಳಂದಾ ವಿಶ್ವವಿದ್ಯಾಲಯಕ್ಕೆ ಸರಿಸಮಾನವಾದ ಇನ್ನೊಂದು ವಿಶ್ವವಿದ್ಯಾಲಯ ಇರಲಿಲ್ಲ. ಇದರಿಂದ ಇಸ್ಲಾಂಗೆ ತೊಂದರೆಯಾಗಬಹುದೆಂದು ಊಹಿಸಿದ್ದ ಮುಸ್ಲಿಂ ದಾಳಿಕೋರರು ಅದನ್ನು ಹೇಗಾದರೂ ಮಾಡಿ ನಾಶ ಮಾಡಬೇಕೆಂದು
ಮೊದಲೇ ನಿರ್ಧರಿಸಿದ್ದರು.

ದಾಖಲೆಯ ಪ್ರಕಾರ ನಳಂದಾವನ್ನು ಮೂರು ಬಾರಿ ಕೆಡವಿ, ಎರಡು ಬಾರಿ ಮನುನಿರ್ಮಾಣ ಮಾಡಲಾಯಿತು. ಹೂಣ ದಾಳಿಕೋರ ಮಿಹಿರಾಕುಲ ಎಂಬಾತ ಎರಡು ಬಾರಿ ನಳಂದಾಕ್ಕೆ ದಾಳಿ ನಡೆಸಿ ಕೆಡವಿ ಹಾಕಿದ. ಆದರೆ ಸ್ಕಂದಗುಪ್ತನ(ಕ್ರಿ.ಶ. 455-467) ಕಾಲದಲ್ಲಿ ನಳಂದ ವಿಶ್ವವಿದ್ಯಾಲಯವನ್ನು ಮೊದಲಿಗಿಂತಲೂ ವಿಶಾಲವಾಗಿ, ಅತ್ಯಂತ ದೊಡ್ಡ ಭವನವನ್ನಾಗಿ ಪುನರ್ನವೀಕರಣ ಮಾಡಲಾಯಿತು.ನೆನಪಿರಲಿ, ನಳಂದಾ ವಿಶ್ವವಿದ್ಯಾಲಯವಿದ್ದ ಸಂದರ್ಭ ದೇಶವನ್ನು ಬೌಧ್ಧರಾಜರು ಆಳುತ್ತಿದ್ದರು. ಇವರೆಲ್ಲಾ ಯುದ್ಧ ಮಾಡುವ ಬದಲು ಶಾಂತಿ ಮಂತ್ರವನ್ನು ಜಪಿಸುವವಾಗಿದ್ದರು.

ನಳಂದ ವಿಶ್ವವಿದ್ಯಾಲಯವನ್ನು ನಾಶಮಾಡಬೇಕೆಂಬ ಹಠಕ್ಕೆ ಬಿದ್ದ ಇಸ್ಲಾಂ ದಾಳಿಕೋರರು ಮೂರನೇ ಬಾರಿ ಮತ್ತೊಮ್ಮೆ ದಾಳಿ ನಡೆಸಿದರು. ತುರ್ಕಿಯಾಗಿದ್ದ ಮತಾಂಧ ಭಕ್ತಿಯಾರ್ ಖಿಲ್ಜಿ ಎಂಬಾತ 1193ರಲ್ಲಿ ದಾಳಿ ನಡೆಸಿ ನಳಂದಾ ವಿಶ್ವವಿದ್ಯಾಲಯವನ್ನು ನಾಶ ಮಾಡಿದ. ಅಲ್ಲಿ ಸಿಕ್ಕ ವಿದ್ಯಾರ್ಥಿ, ಶಿಕ್ಷರನ್ನೆಲ್ಲಾ ಕೊಚ್ಚಿ ಕೊಂದು ಹಾಕಿದ. ಈತ ಯಾವುದೇ ಮುನ್ಸೂಚನೆ ನೀಡದೆ ಹಠಾತ್ ಆಗಿ ದಾಳಿ ನಡೆಸಿ ಅಪಾರ ಜನರ ಹತ್ಯೆಗೆ ಕಾರಣನಾದ. ಕಟ್ಟಡವನ್ನು ಧ್ವಂಸಗೊಳಿಸಿ ಪುಸ್ತಕಗಳಿಗೆ ಬೆಂಕಿ ಇಟ್ಟ. ಈ ಬೆಂಕಿ ಮೂರು ತಿಂಗಳ ಕಾಲ ಸುಡುತ್ತಲೇ ಇತ್ತು ಎಂದು ಇತಿಹಾಸಕಾರರು ವಿವರಿಸುತ್ತಾರೆ. ಸುಮಾರು 14 ಎಕ್ರೆಗಳಷ್ಟು ವ್ಯಾಪಿಸಿದ್ದ ನಳಂದಾ ನಾಶವಾಗಿದ್ದು ಭಾರತದ ಇತಿಹಾಸದ ಪಾಲಿನ ಕಪ್ಪು ಚುಕ್ಕೆ. ಇದಾದ ಮೇಲೆ ಅದನ್ನು ಯಾರೂ
ಪುನನಿರ್ಮಾಣಗೊಳಿಸಲು ಮುಂದಾಗಲೇ ಇಲ್ಲ. ನಳಂದಾ ವಿಶ್ವವಿದ್ಯಾಲಯವನ್ನು ಖಿಲ್ಜಿ ನಾಶ ಮಾಡಿದ್ದು ಯಾಕೆ ಎಂಬ ಬಗ್ಗೆ ಕುತೂಹಲಕಾರಿ ಕಥೆಯ ಬಗ್ಗೆ ಇಯಿಹಾಸಕಾರರು ಈ ಮಾಹಿತಿ ನೀಡುತ್ತಾರೆ.

ಭಕ್ತಿಯಾರ್ ಖಿಲ್ಜಿ ರೋಗವೊಂದಕ್ಕೆ ತುತ್ತಾದ. ಅವನ ರೋಗವನ್ನು ಗುಣಪಡಿಸಲು ಆತನ ಆಸ್ಥಾನದ ವೈದ್ಯರಿಗ್ಯಾರಿಗೂ ಸಾಧ್ಯವಾಗಲಿಲ್ಲ. ಈ ವೇಳೆ ಆತನಿಗೆ ನಳಂದಾದ ವೈದ್ಯರ ಸಹಾಯ ಪಡೆಯುವಂತೆ ಸೂಚಿಸಲಾಯಿತು. ಇದೇ ವೇಳೆ ನಳಂದಾ ವಿದ್ಯಾಯದ ಪ್ರಾಂಶುಪಾಲರಾಗಿ ರಾಹುಲ್ ಶ್ರೀಭದ್ರಾ ಎನ್ನುವವರು ಕರ್ತವ್ಯ ವಿರ್ವಹಿಸುತ್ತಿದ್ದರು. ಅವರು ವೈದ್ಯಕೀಯ ಲೋಕಕ್ಕೆ ಗಣನೀಯ ಕೊಡುಗೆ ನೀಡಿದ್ದರು.

ಖಿಲ್ಜಿ ತನ್ನ ಮತದ ಬಗ್ಗೆ ಎಷ್ಟೊಂದು ಮತಾಂಧನಾಗಿದ್ದನೆಂದರೆ ಕಾಫಿರ್(ಸತ್ಯ ನಿಷೇಧಿಗಳು) ಗಳಿಂದ ಚಿಕಿತ್ಸೆ ಪಡೆಯಲು ನಿರಾಕರಿಸಿದ. ಆದರೆ ದಿನೇ ದಿನೇ ಆತನ ರೋಗ ಉಲ್ಬಣಿಸುತ್ತಿದ್ದರಿಂದ ಕಾಫಿರ್ ವೈದ್ಯರಿಂದ ಚಿಕಿತ್ಸೆ ಪಡೆಯದೆ ವಿಧಿ ಇರಲಿಲ್ಲ. ಕೊನೆಗೆ ಒಂದು ಷರತ್ತಿನ ಮೇರೆಗೆ ರಾಹುಲ್ ಶ್ರೀಭದ್ರಾ ಅವರನ್ನು ಕರೆಸಿ ಚಿಕಿತ್ಸೆ ನೀಡುವಂತೆ ಸೂಚಿಸಿದ.

ಆ ಷರತ್ತು ಹೀಗಿತ್ತು, `ಯಾವುದೇ ಔಷಧಿ ನೀಡದೆ ತನ್ನ ಗುಣಪಡಿಸಬೇಕು…’

ಈ ಷರತ್ತಿಗೆ ಒಪ್ಪಿದ ಭದ್ರಾ ಅವರು ಪ್ರಾಚೀನ ಸಂಸ್ಕøತ ಕಾಲಘಟ್ಟದ ಪುಸ್ತಕವೊಂದನ್ನು ನೀಡಿ, ಇದನ್ನು ಓದಿದರೆ ರೋಗ ಗುಣವಾಗುವುದಾಗಿ ತಿಳಿಸಿದರು. ಭದ್ರಾ ಅವರು ನೀಡಿದ ಪುಸ್ತಕದಿಂದಾಗಿ ಖಿಲ್ಜಿಯ ರೋಗ ವಾಸಿಯಾಯಿತು. ಇದರಿಂದ ಅಚ್ಚರಿಗೊಳಗಾದ ಭಕ್ತಿಯಾರ್ ಖಿಲ್ಜಿ, ನಳಂದಾ ವಿಶ್ವವಿದ್ಯಾಲಯಕ್ಕೆ ಕೃತಜ್ಞತೆ ಸಲ್ಲಿಸುವ ಬದಲು ನಾಶ ಮಾಡಲು ಮುಂದಾದ.

ಭಾರತೀಯ ವಿದ್ವಾಂಸರಿಗೆ ಅನೇಕ ನಿಗೂಢ ಜ್ಞಾನವಿದೆ. ಇವರನ್ನು ಸೋಲಿಸಲು ಸಾಧ್ಯವೇ ಇಲ್ಲ. ತನ್ನ ಆಸ್ಥಾನದ ವೈದ್ಯರಿಗೂ ಗೊತ್ತಿರದ ವಿಚಾರಗಳು ನಳಂದಾದ ವಿದ್ವಾಂಸರಿಗೆ ಗೊತ್ತಿದೆ ಎಂದು ತಿಳಿದು ನಳಂದಾವನ್ನು ನಾಶ ಮಾಡಲು ಪಣತೊಟ್ಟ.

ದಾಳಿಯೊಂದನ್ನು ಸಂಘಟಿಸಿದ ಭಕ್ತಿಯಾರ್ ಖಿಲ್ಜಿ ನಳಂದಾ ವಿಶ್ವವಿದ್ಯಾಲಯಕ್ಕೆ ದಾಳಿ ನಡೆಸಿ ನಾಶ ಮಾಡಲಾರಂಭಿಸಿದ. ಆದರೆ ನಳಂದಾದಲ್ಲಿದ್ದವರು ಯಾರೂ ಕೂಡಾ ಖಿಲ್ಜಿಯನ್ನು ತಡೆಯಲು ಹೋಗಿಲ್ಲ. ಬುದ್ಧಧರ್ಮದ ಪ್ರಭಾವದಿಂದ ಕ್ಷಾತ್ರವೃತ್ತಿಯನ್ನು ಕಳೆದುಕೊಂಡಿದ್ದ ಭಾರತೀಯರ ಕಣ್ಣೆದುರೇ ವಿಶ್ವವಿದ್ಯಾಲಯ ಧ್ವಂಸಗೊಂಡಿತು. ಜ್ಞಾನದ ಅಗಾಧ ಮೂಲವಾಗಿದ್ದ ಗ್ರಂಥಗಳು, ಆಯುರ್ವೇದ ಗ್ರಂಥಗಳು ಎಲ್ಲವೂ ಸರ್ವನಾಶಗೊಂಡಿತು.  ನಳಂದಾದಲ್ಲಿದ್ದ ಗ್ರಂಥಾಲಯಕ್ಕೆ ಬೆಂಕಿ ನೀಡಿ ನಾಶ ಮಾಡಿದ. ಇಲ್ಲಿದ್ದ 9 ಮಿಲಿಯನ್‍ಗೂ ಅಧಿಕ ಪುಸ್ತಕಗಳು ಬೆಂಕಿಯಿಂದ ಸುಟ್ಟುಹೋಗಿದೆ ಎಂದು
ಹೇಳಲಾಗಿದೆ. ಮೂರು ತಿಂಗಳ ಕಾಲ ಬೆಂಕಿ ಉರಿಯುತ್ತಲೇ ಇತ್ತು ಎಂದು ಇತಿಹಾಸಕಾರರು ಅಭಿಪ್ರಾಯಿಸುತ್ತಾರೆ. ಖಿಲ್ಕಿಯು ನಳಂದಾದ ಗುರುಗಳನ್ನು, ವಿದ್ವಾಂಸರನ್ನೂ ಕೊಚ್ಚಿ ಕೊಂದು ಹಾಕಿದ.

ಪ್ರಸ್ತುತ ದಿನಗಳಲ್ಲಿ….

ಅಂದಿನಿಂದ ಇಂದಿನ ತನಕ ನಾಶಗೊಂಡ ನಳಂದಾ ವಿಶ್ವವಿದ್ಯಾಲಯವನ್ನು ಪುನರುಜ್ಜೀವನಗೊಳಿಸಲು ಯಾರೂ ಮುಂದಾಗಲಿಲ್ಲ. ಮುಘಲ್ ಆಳ್ವಿಕೆಯ ಸಂದರ್ಭ ಅನೇಕ ಹಿಂದೂ ದೇಗುಲಗಳು ಸರ್ವನಾಶಗೊಂಡಿತ್ತಲ್ಲದೆ, ಚಿನ್ನಾಭರಣ, ವಜ್ರ-ವೈಢೂರ್ಯಗಳ ಲೂಟಿ ನಡೆಯಿತು. ಭಾರತ ಸ್ವತಂತ್ರಗೊಂಡ ನಂತರವೂ ನಳಂದಾದತ್ತ ಕಣ್ಣು ಹಾಯಿಸುವವರೂ ಇರಲಿಲ್ಲ.

ಆದರೆ ತೀರಾ ಇತ್ತೀಚೆಗೆ ಕೇಂದ್ರದಲ್ಲಿರುವ ಮೋದಿ ಸರಕಾರ ನಳಂದಾದ ನೆನಪಿಗಾಗಿ ಅದನ್ನು ಪುನರ್ನಿಮಾಣಗೊಳಿಸಲು ಮುಂದಾಗಿದೆ. ಗತಕಾಲದ ಶೈಕ್ಷಣಿಕ ಮೌಲ್ಯವನ್ನು ಎತ್ತಿಹಿಡಿಯಬೇಕು ಎಂಬ ಕಾಯಿದೆಯನ್ವಯ, ನಳಂದಾದ ಸವಿನೆನಪಿಗಾಗಿ ಅದನ್ನು ಪುನರುಜ್ಜೀವನಗೊಳಿಸಲು ನಿಧಿಯನ್ನು ಬಿಡುಗಡೆಗೊಳಿಸಲು ಮುಂದಾಗಿದೆ.

ಮುಘಲ್ ಆಳ್ವಿಕೆಯ ಕಾಲದಲ್ಲಿ ನಳಂದ ವಿಶ್ವವಿದ್ಯಾಲಯವನ್ನು ನಾಶ ಮಾಡಿದಕ್ಕಿಂತ ಹಲವು ಪಟ್ಟು ದೊಡ್ಡ ಮಟ್ಟದ ನಾಶ ನಡೆದಿದೆ. ಮೂರ್ತಿಪೂಜೆ ಮಾಡುವುದು ಖುರಾನ್‍ಗೆ ವಿರುದ್ಧ ಎಂಬ ಕಾರಣಕ್ಕೆ ಹಲವಾರು ದೇವಸ್ಥಾನಗಳು, ಗ್ರಂಥಗಳನ್ನು ನಾಶಮಾಡಲಾಯಿತು. ಇಂದೂ ಕೂಡಾ ಇಸ್ಲಾಂನ ಮತಾಂಧತೆ ಇಡೀ ಜಗತ್ತಿಗೇ ಸವಾಲಾಗಿ ಪರಿಣಮಿಸಿದೆ.

-ಚೇಕಿತಾನ

Tags

Related Articles

Close