ಅಂಕಣದೇಶಪ್ರಚಲಿತ

ಜನರಲ್ ತಿಮ್ಮಯ್ಯ! ದೇಶ ಕಂಡ ಅತ್ಯದ್ಭುತ ವೀರ ಸೇನಾನಿಯ ಅರಿವಿದೆಯೇ?!

ದಂತಕಥೆಗಳಾಗಿ ಉಳಿದುಕೊಳ್ಳುವ ಅತ್ಯಪರೂಪದ ವ್ಯಕ್ತಿಗಳನ್ನು ನಾವು ಸ್ಮರಿಸಲೇಬೇಕು. ಆಧುನಿಕ ಇತಿಹಾಸದ ವೀರಸೇನಾನಿ ಎಂದಿನೆಸಿರುವ ಜನರಲ್ ಕೊಡಂದೆರ ಸುಬ್ಬಯ್ಯ ತಿಮ್ಮಯ್ಯ ಯಾವಾಗಲೂ ನೆನಪಿನಲ್ಲೇ ಉಳಿದಿರುವಂತಹ ಭಾರತೀಯ ಯೋಧ!! ಭಾರತೀಯರಾದ ನಾವು ವೀರಸೇನಾನಿ  ದೇಶಕ್ಕೆ ಕೊಟ್ಟ ಕೊಡುಗೆಯನ್ನು ಇಂದು ಸ್ಮರಿಸಲೇಬೇಕು.

ಜನರಲ್ ಅವರ ಜೀವನ ತುಂಬಾ ಉತ್ಸಾಹಕತೆಯಿಂದ ತುಂಬಿದ್ದು, ತನ್ನ ದೇಶಕ್ಕಾಗಿ ಮತ್ತು ಸೈನಿಕನಾಗಿದ್ದಾಗ ತಾಔಉ ತೋರಿಸಿದ ಕರ್ತವ್ಯ ನಿಷ್ಠೆ ಹಾಗೂ ತನ್ನ ಬದ್ಧತೆ ಶ್ಲಾಘನೀಯವಾದದ್ದು. ಸೆಪ್ಟೆಂಬರ್ 1947ರಲ್ಲಿ ಅಂದರೆ ಸ್ವಾತಂತ್ರ್ಯ ಸಿಕ್ಕ ಕೆಲವೇ ಸಮಯಗಳಲ್ಲಿ ಮೇಜರ್ ಜನರಲ್ ಆಗಿ ಬಡ್ತಿ ಪಡೆದುಕೊಂಡರು. ದೇಶಕ್ಕಾಗಿ ಹೋರಾಡಿ ತಮ್ಮ ಹೆಸರನ್ನು ವಿಶ್ವದೆಲ್ಲೆಡೆ ಪಸರಿಸಿದ ಯೋಧ, ಜವಹರಲಾಲ್ ನಂತರದಲ್ಲಿ ಜನರಲ್ ತಿಮ್ಮಯ್ಯ ಭಾರತದ ಎರಡನೇಯ ಪ್ರಬಲ ವ್ಯಕ್ತಿ ಎಂದೆನಿಸಿಕೊಂಡಿದ್ದಾರೆ.

ಪಾಕಿಸ್ತಾನ ಮತ್ತು ಭಾರತದದಲ್ಲಿ ಪ್ರಕ್ಷುಬ್ದತೆಯ ವಾತಾವರಣ ತುಂಬಿದ್ದಾಗ, ಭಾರತೀಯರು ಭಾರತ ವಿಂಗಡಣೆಗೊಂಡು ಎರಡು ಭಾಗಗಳಾಗಿದೆ ಎಂದು ಜೀರ್ಣ
ಮಾಡುವ ವೇಳೆ ಪಾಕಿಸ್ತಾನದ ಸೇನೆ ಕೆಳಗಿಳಿಯಿತು. ಗಲಭೆ ನಿಯಂತ್ರಣವನ್ನು ತೆಗೆದುಕೊಳ್ಳುವ ವೇಳೆ ಜಿನ್ನಾ ಮರಣವಾಯಿತಾದರೂ ಭಾರತದಲ್ಲಿ ಪರಿಸ್ಥಿತಿ ಮಾತ್ರ ಭಿನ್ನವಾಗಿರಲಿಲ್ಲ. ದೇಶ ಸಂಪೂರ್ಣವಾಗಿ ನೀತಿ ಮತ್ತು ನಿಯಮದ ದೌರ್ಜನ್ಯದಿಂದ ತುಂಬಿದ್ದರೂ ಕೂಡ ಆ ಸಂದರ್ಭದಲ್ಲಿ ಜನರಲ್ ಈ ದೌರ್ಜನ್ಯವನ್ನು
ನಿಯಂತ್ರಿಸಿದ್ದಲ್ಲದೇ ಪ್ರಸ್ತುತ ಸ್ಥಿತಿಯನ್ನು ಹತೋಟಿಗೆ ತಂದಲ್ಲಿ ಐಶಸ್ವಿಯಾದರೂ ಈ ಬಗ್ಗೆ ಇವರ ಪರ ಆಗಲಿ ವಿರುದ್ಧವಾಗಲಿ ಯಾವುದೇ ರೀತಿಯಾದ ಪ್ರಶ್ನೆಯೂ ಅಲ್ಲಿ ಸೃಷ್ಟಿಯಾಗಲಿಲ್ಲ.
ಭಾರತದ ವಿಭಜನೆಯ ಸಂದರ್ಭದಲ್ಲಿ ಪಾಕಿಸ್ತಾನದೊಂದಿಗೆ ಸೈನ್ಯದ ಮತ್ತು ಆಯುಧಗಳ ವಿಲೇವಾರಿ ಕುರಿತು ರಚಿಸಿದ ಸಮಿತಿಯ ಸದಸ್ಯರನ್ನಾಗಿ ತಿಮ್ಮಯ್ಯ
ಅವರನ್ನು ನೇಮಿಸಲಾಗಿತ್ತು. ಮತೀಯ ಗಲಭೆಗಳಿಂದ ಹೊತ್ತಿ ಉರಿಯತ್ತಿದ್ದ ಭಾರತ ಪಾಕಿಸ್ತಾನದ ಗಡಿಯ ಸುತ್ತಮುತ್ತಲ ಪ್ರದೇಶಗಳಲ್ಲಿ ಸುಮಾರು ಒಂದು ಕೋಟಿ ಜನರ ರಕ್ಷಣೆಯ ಭಾರ ಅವರ ಮೇಲಿತ್ತಾದರೂ ಆ ರಣರಂಗದಲ್ಲಿ ಇವರ ಪ್ರವೇಶದಿಂದ ಸಾವಿರಾರು ಮಂದಿ ಹಿಂದೂಗಳನ್ನೂ ಸಿಕ್ಖರನ್ನೂ ಕಾಪಾಡಿ ಅವರೆಲ್ಲ ನೆಚ್ಚಿನ ಧೀರಾ ನಾಯಕನೆನಿಸಿಕೊಂಡಂತಹ ಶ್ರೇಷ್ಠ ವೀರಾಸೇನಾನಿ.
ಪ್ರಜಾಪ್ರಭುತ್ವ ಭಾರತವನ್ನು ಭಾರತೀಯರ ಪಾಲಿಕೆಗೆ ನೀಡಿದಂತಹ ಜನರಲ್ ತಿಮ್ಮಯ್ಯ ಅವರಿಗೆ ಧನ್ಯವಾದಗಳನ್ನು ಹೇಳುವುದು ಬಹು ಮುಖ್ಯ. ಭಾರತೀಯ
ಇತಿಹಾಸದ ಪಠ್ಯಪುಸ್ತಕದಲ್ಲಿ ಪ್ರಜಾಪ್ರಭುತ್ವಕ್ಕೆ ಸಂಬಂಧಿಸಿದಂತೆ ಕೆಲವೊಂದು ರಾಜಕಾರಣೀಗಳನ್ನು ಹೀರೋಗಳೆಂದು ಎಂದು ಬಿಂಬಿಸಿರುವಾಗ ಇಂತಹ ಮಹಾನ್ ವೀರಾಸೇನಾನಿಯ ಬಗ್ಗೆ ಕಿಂಚಿತ್ತೂ ಮಾಹಿತಿಯನ್ನು ನೀಡದಿರುವುದೇ ವಿಪರ್ಯಾಸ.
1957ರಲ್ಲಿ ಜವಾಹರಲಾ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಜನರಲ್ ತಿಮ್ಮಯ್ಯ ಅವರ ಕಛೇರಿಗೆ ಭೇಟಿ ನೀಡಿದಾಗ ಇವರ ಹಿಂದಿರುವ ಸ್ಟೀಲ್ ಕ್ಯಾಬಿನೆಟ್ ಡೆಸ್ಕ್ನ್ನು ನೋಡಿ ಇದು ಯಾವ ಮಾಹಿತಿಗಳನ್ನು ಒಳಗೊಂಡಿದೆ ಎಂದು ಜನರಲ್ ಅವರಲ್ಲಿ ಪ್ರಶ್ನಿಸಿದರಂತೆ. ಈ ಬಗ್ಗೆ ಉತ್ತರಿಸಿದ ಜನರಲ್ ಮೊದಲನೇಯದು ಭಾರತೀಯ ರಕ್ಷಣಾ ಪಡೆಗೆ ಸಂಬಂಧಿಸಿದ ರಾಷ್ಟ್ರ ರಕ್ಷಣೆಯ ಯೋಜನೆಗಳು ಮತ್ತು ಶಸ್ತ್ರಾಸ್ತಕ್ಕೆ ಸಂಬಂಧಿಸಿದ ದಾಖಲೆಗಳು ಇವೆ. ಎರಡನೇಯದರಲ್ಲಿ ಸಮಗ್ರತೆ ಮತ್ತು ಭದ್ರತೆಗೆ ಸಂಬಂಧಿಸಿದ ದಾಖಲೆಗಳಿವೆ ಎಂದು ಹೇಳಿ ತಮ್ಮ ಮಾತನ್ನು ನಿಲ್ಲಿಸಿದರಂತೆ. ನಂತರ ಮೂರನೇಯದರಲ್ಲಿ ಏನಿದೆ ಎಂದು ನೆಹರು ಪ್ರಶ್ನಿಸಿದಾಗ, ಮಿಲಿಟರಿ ದಂಗೆಗೆ ಸಂಬಂಧಿಸಿದ ಗೌಪ್ಯ ಯೋಜನೆಯ ದಾಖಲೆಗಳು ನಿಮಗೆ ಹಾಗೂ ನಿಮ್ಮಂತಹ ರಾಜಕಾರಣಿಗಳಿಗೆ ಎಂದು ಉತ್ತರಿಸಿ ಮೌನ ಮುರಿದು ಮಂದಹಾಸ ಬೀರಿದರು. ಈ ಬಗ್ಗೆ ಸ್ವಲ್ಪ ಮೌನವರಿಸಿದ ನೆಹರೂ ಅವರು ಮಂದಹಾಸದ ನಗೆಯನ್ನು ತಾವು ಬೀರಿದ್ದಲ್ಲದೇ ಜನರಲ್ ತಿಮ್ಮಯ್ಯ ಅವರ ಉತ್ತರದಲ್ಲಿ ನಡುಕವು ಅವರಲಿತ್ತು. ಜನರಲ್ ಅವರ ಸಾಮಥ್ರ್ಯ ಏನು ಎಂಬುವುದನ್ನು ಆ ಸಂದರ್ಭದಲ್ಲಿ ನೆಹರು ಅರಿತರು.
20ವರ್ಷಗಳ ತನ್ನ ಪರಿಶ್ರಮಕ್ಕೆ 1926ರಲ್ಲಿ 19ನೇ ಹೈದಾರಾಬಾದ್ ರೆಜಿಮೆಂಟಲ್ ಸೆಂಟರ್ನವಲ್ಲಿ ಜನರಲ್ ಕೊಡಂದೆರ ಸುಬ್ಬಯ್ಯ ತಿಮ್ಮಯ್ಯ ದ್ವಿತೀಯ ಲೆಫ್ಟೆನೆಂಟ್ ಆಗಿ ನೇಮಿಸಲಾಯಿತು. 25 ಮಾರ್ಚ್ 1945ರ ಎರಡನೇ ವಿಶ್ವಯುದ್ದದಲ್ಲಿ ಜಪಾನೀ ಸೈನ್ಯವನ್ನು ಬರ್ಮಾದಲ್ಲಿ ಎದುರಿಸಲು ತಿಮ್ಮಯ್ಯನವರು ಅದ್ಭುತ ಜಯವನ್ನು ಸಾಧಿಸಿದ್ದು, ತಮ್ಮ ಕರ್ತವ್ಯ ಪ್ರಜ್ಞೆಯನ್ನು ಮೆರೆದರು.
ತಿಮ್ಮಯ್ಯ ಕೇವಲ ಭಾರತದಲ್ಲಿ ಮಾತ್ರವಲ್ಲದೇ ಯುನೈಟೆಡ್ ನೇಶನ್ನಿಲ್ಲಿ ಪ್ರಸಿದ್ಧಿಯನ್ನು ಹೊಂದಿರುವ ಸೈನಿಕ ಎನಿಸಿದ್ದಾರೆ. ನಂತರ ಜನರಲ್ ಎನ್ಎಯನ್ಆ್ರ್ಸಿ
(ನ್ಯೂಟ್ರಲ್ ನೇಶನ್ಸ್ ರೆಪಟ್ರೀಯೇಶನ್ ಕಮೀಷನ್) ಆಗಿ ಆಯ್ಕೆಯಾದರು. ಕಮ್ಯುನಿಸ್ಟ್ ಮತ್ತು ಪಶ್ಚಿಮ ದೇಶಗಳೊಡನೆ ನಿಷ್ಪಕ್ಷಪಾತದಿಂದ ವ್ಯವಹರಿಸಿ
ತಿಮ್ಮಯ್ಯನವರು ಎಲ್ಲರ ಮೆಚ್ಚಿಗೆಯನ್ನು ಪಡೆದರು. ಈ ಸಂದರ್ಭದಲ್ಲಿ ಅವರಿಗೆ ಲೆಫ್ಟಿನಂಟ್-ಜನರಲ್ ಪದವಿಯನ್ನೀಯಲಾಯಿತು. ಭಾರತ ಸರಕಾರವು ಅವರನ್ನು ಪದ್ಮವಿಭೂಷಣವನ್ನಿತ್ತು ಗೌರವಿಸಿತು.
1948ರಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡಿದ ನಂತರ ಪಾಕಿಸ್ತಾನ ಸೇನೆ ಲೇಹ್ ಲಡಕ್ ಹೈವೇಗೆ ನುಸುಳಿದಾಗ ಭಾರತದ ಸೇನೆ ಯಲ್ಲಿ ಮೇಜರ್ ಜನರಲ್ ತಿಮ್ಮಯ್ಯ ಅವರು ಮುಂಚೂಣಿಯಲ್ಲಿದ್ದು ಜಯ ಸಾಧಿಸಿದರು.
ಜಮ್ಮು-ಕಾಶ್ಮೀರದಲ್ಲಿದ್ದ ೧೯ನೇ ಇನ್ಫಂಟ್ರಿ ವಿಭಾಗದ ಆಧಿಪತ್ಯದಲ್ಲಿ ಅವರು ಕಾಶ್ಮೀರವನ್ನು ಆಕ್ರಮಿಸಲೆಸುತ್ತಿದ್ದ ಪಾಕಿಸ್ತಾನದ ಸೇನೆಯನ್ನು ತಡೆಹಿಡಿದು
ಹಿಮ್ಮೆಟ್ಟಿಸುವದರಲ್ಲಿ ಜಯಶೀಲರಾದರು. ೧೯೪೮ರ ನವೆಂಬರ್‌ನಲ್ಲಿ ತಾವೇ ಮುಂಚೂಣಿಯಲ್ಲಿದ್ದು ೧೨,೦೦೦ ಅಡಿ ಎತ್ತರದಲ್ಲಿರುವ ಜೊಜಿಲಾ ಕಣಿವೆಯ ಮೇಲೆ
ಹಠಾತ್ ಧಾಳಿ ನಡೆಸಿ ಪಾಕಿಸ್ತಾನಿ ಸೈನ್ಯವನ್ನು ಓಡಿಸಿ ದ್ರಾಸ್, ಕಾರ್ಗಿಲ್ ಮತ್ತು ಲೇಹ್ ಪ್ರದೇಶಗಳನ್ನು ಕೈವಶಮಾಡಿಕೊಂಡರು. ೧೦,೦೦೦ ಅಡಿಗಿಂತಲೂ ಎತ್ತರದ ಪ್ರದೇಶದಲ್ಲಿ ಜಗತ್ತಿನ ಯಾವದೇ ಸೈನ್ಯವು ಟ್ಯಾಂಕನ್ನು ಯುದ್ಧ ಕಾರ್ಯಾಚರಣೆಯಲ್ಲಿ ಬಳಸಿರುವದು ಇದೇ ಪ್ರಪ್ರಥಮವೆಂದು ದಾಖಲಾಗಿದೆ.
ತಿಮ್ಮಯ್ಯನವರು ಅಂದಿನ ಪ್ರಧಾನಿ ನೆಹರೂರವರನ್ನು ಮೂರು ತಿಂಗಳ ಅವಧಿಯಿತ್ತರೆ ಅತಿಕ್ರಮಣಕಾರರನ್ನು ಮುಜಾಫರಬಾದ್‌ವರೆಗೆ ಅಟ್ಟುವದಾಗಿ ಕೇಳಿಕೊಂಡರೂ, ಒಪ್ಪದೇ ಇದ್ದು ಅಕಾಲಿಕ ಶಾಂತಿಸಂಧಾನದಿಂದ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸದೇ ಉಳಿಸಿರುವದು ಇತಿಹಾಸ.
ತಿಮ್ಮಯ್ಯನವರು ಭಾರತೀಯ ಭೂಸೈನ್ಯದ ೬ನೇ ಮುಖ್ಯಸ್ಥನಾಗಿ ಅಧಿಕಾರವನ್ನು ವಹಿಸಿಕೊಂಕೊಂಡಿದ್ದ ಸಂದರ್ಭದಲ್ಲಿ ೧೯೫೯ರಲ್ಲೇ ಭಾರತ-ಚೀನಾ ಯುದ್ಧದ
ಮುನ್ಸೂಚನೆಯಿದ್ದು, ಅದಕ್ಕೆ ಭಾರತೀಯ ಸೈನ್ಯವನ್ನು ಸಜ್ಜುಗೊಳಿಸಬೇಕೆಂಬ ತಿಮ್ಮಯ್ಯನವರ ಸಲಹೆಯನ್ನು ಆಗಿನ ರಕ್ಷಣಾ ಮಂತ್ರಿ ವಿ ಕೆ ಕೃಷ್ಣ ಮೆನೊನ್
ತಳ್ಳಿಹಾಕಿದ್ದರಿಂದ ಅದನ್ನು ಪ್ರತಿಭಟಿಸಿ ತಿಮ್ಮಯ್ಯನವರು ತಮ್ಮ ರಾಜೀನಾಮೆಯನ್ನು ಪ್ರಧಾನಿಗಿತ್ತರು. ನೆಹ್ರೂ ತಿಮ್ಮಯ್ಯನವರ ಮನವೊಲಿಸಿ ರಾಜೀನಾಮೆಯನ್ನು ಹಿಂತೆಗೆಕೊಳ್ಳುವಂತೆ ಮಾಡಿದರು.

ತದನಂತರದಲ್ಲಿ ತಮ್ಮ 35 ವರ್ಷಗಳ ಕಾಲ ದೇಶಕ್ಕಾಗಿ ಸೇವೆಯನ್ನು ಸಲ್ಲಿಸಿದ ಜನರಲ್ ತಿಮ್ಮಯ್ಯ 1961ರಲ್ಲಿ ನಿವೃತ್ತರಾದರು. ಭಾರತೀಯ ಸೇನೆಯಿಂದ ನಿವೃತ್ತರಾದ ಕಲವೇ ತಿಂಗಳಲ್ಲಿ ಚೀನಾ ಭಾರತದ ಮೇಲೆ ಯುದ್ಧ ಸಾರಿತ್ತಾದರೂ ಭಾರತ ಯುದ್ಧದಿಂದ ಸೋಲನ್ನು ಅನುಭವಿಸಿತು. ಸಂಯುಕ್ತ ರಾಷ್ಟ್ರಗಳು ಜನರಲ್ ತಿಮ್ಮಯ್ಯ ಅವರ ಸೇವೆಯನ್ನುಬಯಸಿ ಸೈಪ್ರಸ್‌ನಲ್ಲಿ ಸಂಯುಕ್ತ ರಾಷ್ಟ್ರಗಳ ಸೇನೆಯ ಆಧಿಪತ್ಯವನ್ನು ಜುಲೈ ೧೯೬೪ರಲ್ಲಿ ನೀಡಿದರು. ಅಲ್ಲಿನ ಅತ್ಯಂತ ವಿಸ್ಪೋಟಕ ಪರಿಸ್ಥಿತಿಯನ್ನು ಸೂಕ್ತವಾಗಿ ಬಗೆಹರಿಸಿದ್ದಕ್ಕೆ ತುರ್ಕಿಯ ವಿದೇಶಾಂಗ ಸಚಿವರು , ‘ಅವರ ಬೌದ್ಧಿಕ ಪ್ರಾಮಾಣಿಕತೆ ಮತ್ತು ಅಚಲ ನಿಷ್ಪಕ್ಷಪಾತದಿಂದ ಶಾಂತಿಯನ್ನು ಸ್ಥಾಪಿಸಿದ ಅತಿಮಾನುಷ ಪ್ರಯತ್ನ’ವನ್ನು ಹೃತ್ಪೂರ್ವಕವಾಗಿ ಶ್ಲಾಘಿಸಿದ್ದರು. ಅಲ್ಲದೇ 1966ರಲ್ಲಿ ಸೈಪ್ರಸ್ ದೇಶವು ತನ್ನ ನೆಲದಲ್ಲಿ ಶಾಂತಿ ನೆಲೆಸುವಂತೆ ಮಾಡಿದ ವೀರನ ಸ್ಮರಣಾರ್ಥ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿತಲ್ಲದೆ, ಅವರು ವಾಸಿಸುತ್ತಿದ್ದ ನಿಕೋಸಿಯಾದ ಒಂದು ಮಾರ್ಗಕ್ಕೆ
ಅವರ ಹೆಸರನ್ನಿಟ್ಟಿತು.

ಅಲ್ಲ ಇಂತಹ ವೀರಾಸೇನಾನಿಯನ್ನು ಕೇವಲ ನಾವು ಮಾತ್ರವಲ್ಲದೇ ಸಿಂಗಾಪೂರ, ಜಪಾಣ್ ಮತ್ತು ಯುನೈಟೆಡ್ ನೇಶನ್ ಇವರನ್ನು ಅತ್ಯುತ್ತಮ ಯೋಧ ಎಂದು ಪರಿಗಣಿಸಿದೆ.

-ಸರಿತಾ

Tags

Related Articles

Close