ಪ್ರಚಲಿತ

ಜಮೀನು ಸರ್ವೆಗಾಗಿ ರೈತರು ಕಟ್ಟಿದ್ದ 136 ಕೋಟಿ ರೂ. ಹಣವೇ ಮಂಗಮಾಯ! ರೈತರ ಹಣವನ್ನೂ ಬಿಡಲಿಲ್ಲವೇ ಕರ್ನಾಟಕ ಸರಕಾರ?!

ಕರ್ನಾಟಕ ಸರಕಾರ ಅದೆಷ್ಟೂ ಎಡವಟ್ಟು ಮಾಡುತ್ತೆ ಅಂದರೆ, ಹಣವನ್ನು ಮಾಯಮಾಡುವ ತಂತ್ರಗಾರಿಕೆಯನ್ನು ಕಲಿತುಕೊಂಡಿದೇಯೋ ಏನೋ ಗೊತ್ತಿಲ್ಲ!!
ಯಾಕೆಂದರೆ, ಜಮೀನು ಸರ್ವೆಗಾಗಿ ರೈತರು ಕಟ್ಟಿದ್ದ ಹಣವೇ ಸರಕಾರದ ಖಜಾನೆಯಲ್ಲಿ ನಾಪತ್ತೆಯಾಗಿದೆ ಅಂದರೆ ಯಾರಾದರೂ ನಂಬುತ್ತಾರೆಯೇ?? ಆದರೆ ಅದನ್ನು ನಂಬಲೇಬೇಕು, ಯಾಕೆಂದರೆ, ಸಿದ್ದರಾಮಯ್ಯ ಸರಕಾರದಲ್ಲಿ ಜಮೀನು ಸರ್ವೆಗಾಗಿ ರೈತರು ಕಟ್ಟಿದ್ದ ಹಣವೇ ಸರಕಾರದ ಬೊಕ್ಕಸವನ್ನು ಸೇರಿಲ್ಲ ಎಂದರೆ ಆ ಹಣ ಎಲ್ಲಿಹೋಗಿದೆ ಎನ್ನುವ ಪ್ರಶ್ನೆಗಳು ಉದ್ಭವಿಸಿದೆ. ಆದರೆ ಇದೀಗ ಇಂಥದ್ದೊಂದು ಎಡವಟ್ಟಿನ ಮೂಲಕ ರಾಜ್ಯದ ಕಂದಾಯ ಇಲಾಖೆ ಸುದ್ದಿಯಲ್ಲಿದೆ.

ಸಿದ್ದರಾಮಯ್ಯ ಸರಕಾರದಲ್ಲಿ ರೈತರ ಕೃಷಿ ಸಾಲಮನ್ನಾ ಮಾಡಲು ಇವರ ಬೊಕ್ಕಸದಲ್ಲಿ ಹಣ ಇಲ್ಲ ಎಂದು ಹೇಳಿದವರು, ರೈತರೇ ಕಟ್ಟಿದ್ದ ಹಣ
ಮಂಗಮಾಯಾವಾಗಿದೆ ಎಂದರೆ ಇದಕ್ಕಿಂತ ದೊಡ್ಡ ಬೇಜವ್ದಾರಿ ಮತ್ತೊಂದಿಲ್ಲ!! ಕಲ್ಯಾಣ ಯೋಜನೆಗಳಿಗಾಗಿ ಮೀಸಲಿಡುವ ಸರಕಾರದ ಹಣ
ಮಂಗಮಾಯವಾಗುವುದನ್ನು ಕಂಡಿದ್ದೇವೆ, ಕೇಳಿದ್ದೇವೆ. ಆದರೆ ಜಮೀನು ಸರ್ವೆಗಾಗಿ ರೈತರು ಕಟ್ಟಿದ್ದ ಹಣವೇ ಸರಕಾರದ ಖಜಾನೆ ಸೇರದೆ ನಾಪತ್ತೆ ಆಗುವುದುಂಟಾ? ಎನ್ನುವ ಪ್ರಶ್ನೆ ಇದೀಗ ಎಲ್ಲರನ್ನೂ ಕಾಡುತ್ತಿದೆ!!

ಆದರೆ, ಇಷ್ಟೆಲ್ಲಾ ಯಡವಟ್ಟು ನಡೆದರೂ ಕೂಡ ಕಂದಾಯ ಇಲಾಖೆ ಗಪ್‍ಚುಪ್ ಆಗಿದ್ದು, ಈ ಹಣ ಏನಾಗಿದೆ ಎಂಬುವುದೇ ದೊಡ್ಡ ಪ್ರಶ್ನೆಯಾಗಿದೆ!! ಕೇಂದ್ರದಿಂದ
ಬರುವ ಹಣವನ್ನೇ ಗುಳುಂ ಮಾಡುವ ಅಧಿಕಾರಿಗಳು, ಇನ್ನೂ ಈ ರೈತರು ತಮ್ಮ ಜಮೀನು ಸರ್ವೆಗಾಗಿ ಕಟ್ಟಿದ್ದ ಹಣವನ್ನು ಕೂಡ ಗುಳುಂ ಮಾಡಿದ್ದಾರೆಯೇ ಎನ್ನುವ ಪ್ರಶ್ನೆಯೂ ಕಾಡುತ್ತಿದೆ. ಆದರೆ ಈ ಬಗ್ಗೆ, ಈ ಹಣವನ್ನು ಪತ್ತೆ ಮಾಡಿ, ಕರ್ತವ್ಯಲೋಪ ತೋರಿದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ಆದೇಶಿಸಿ ವರ್ಷ ಕಳೆದರೂ, ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಮತ್ತೊಂದು ಅಚ್ಚರಿ ವಿಷಯವಾಗಿದೆ!!

ಏನಿದು ಈ ಪ್ರಕರಣ?

ರೈತರ ಜಮೀನನ್ನು ಅಳತೆ ಮಾಡಿ, ಖಾತೆ ಮಾಡಿಕೊಡುವುದಕ್ಕೆಂದೇ ಕಂದಾಯ ಇಲಾಖೆ ಮೋಜಿಣಿ ತಂತ್ರಾಂಶವನ್ನು ಅಭಿವೃದ್ಧಿಪಡಿಸಿ ಬಳಸುತ್ತಿದೆ. ತಾಲೂಕು
ಕಚೇರಿಗಳಲ್ಲಿ ತಂತ್ರಾಂಶಕ್ಕೆ ರೈತರ ಜಮೀನು ಸೇರಿ ಎಲ್ಲ ಮಾಹಿತಿಯನ್ನು ಅಡಕಗೊಳಿಸಿ ಅರ್ಜಿ ಪಡೆಯುತ್ತಾರೆ. ನಂತರ ರೈತರಿಗೆ ಮಾಹಿತಿ ನೀಡಿ ಜಮೀನು ಅಳತೆ ಮಾಡಿ ಪೆÇೀಡಿ ಮಾಡುತ್ತಾರೆ. ಇದಕ್ಕಾಗಿ ಇಲಾಖೆ ಗ್ರಾಮೀಣ ಪ್ರದೇಶದ ರೈತರಿಂದ ಎಕರೆಗೆ 1,500 ರೂಪಾಯಿ ಹಾಗೂ ನಗರ ಪ್ರದೇಶದ ರೈತರಿಂದ 2,500 ರೂಪಾಯಿ ಪಡೆದು ರಶೀದಿ ನೀಡುತ್ತಾರೆ.

ಕಂದಾಯ ಇಲಾಖೆ 2013 ರಿಂದ 2016ರ ಡಿಸೆಂಬರ್‍ವರೆಗೆ ಈ ರೀತಿ ಪಾವತಿಯಾಗಿದ್ದ ಅಂದಾಜು 136 ಕೋಟಿ ರೂಪಾಯಿ ಹಣ ಇದುವರೆಗೆ ಸರಕಾರದ
ಖಜಾನೆ ಸೇರಿಲ್ಲ. ಹಾಗಾದರೆ ಈ ಹಣ ಎಲ್ಲಿದೆ ಎಂಬುದೇ ಸರಕಾರಕ್ಕೆ ಗೊತ್ತಿಲ್ಲ!! ಅಧಿಕಾರಿಗಳು ಬೊಕ್ಕಸಕ್ಕೆ ಹಣ ಪಾವತಿ ಮಾಡದಿರುವ ಬಗ್ಗೆ ಕಂದಾಯ ಸಚಿವ
ಕಾಗೋಡು ತಿಮ್ಮಪ್ಪ ಅವರ ಗಮನಕ್ಕೆ ಬಂದ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಸಿ, ಬಾಕಿ ಹಣವನ್ನು ಸರ್ಕಾರದ ಬೊಕ್ಕಸಕ್ಕೆ ಪಾವತಿ ಮಾಡುವಂತೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ, ಸಿಎಂ ಸೂಚನೆ ನೀಡಿ ವರ್ಷ ಕಳೆದರೂ ಕೂಡ ಈ ಹಣ ಮಾತ್ರ ಇನ್ನೂ ಬೊಕ್ಕಸಕ್ಕೆ ಸಂದಾಯವಾಗಿಲ್ಲ!! ಅಷ್ಟೇ ಅಲ್ಲದೇ, ಅಧಿಕಾರಿಗಳೇ ದುರ್ಬಳಕೆ ಮಾಡಿಕೊಂಡರೇ ಎಂಬ ಅನುಮಾನವೂ ಇದೀಗ ಹುಟ್ಟಿಕೊಂಡಿದೆ.

ಈಗಾಗಲೇ, 12 ಜಿಲ್ಲೆಗಳ ಕಂದಾಯ ಅಧಿಕಾರಿಗಳು 4 ವರ್ಷಗಳಿಂದ ಸಂಗ್ರಹವಾಗಿರುವ 136 ಕೋಟಿ ರೂಪಾಯಿ ಹಣವನ್ನು ಸರಕಾರದ ಬೊಕ್ಕಸಕ್ಕೆ ತುಂಬಬೇಕಾಗಿದೆ. ಆದರೆ, 2016ರ ಡಿಸೆಂಬರ್ 24ರಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ನೇತೃತ್ವದಲ್ಲಿ ನಡೆದ ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಾಪತ್ತೆಯಾಗಿರುವ ಹಣವನ್ನು ಪತ್ತೆ ಮಾಡಿ ಸರಕಾರಕ್ಕೆ ಪಾವತಿಸುವಂತೆ ಸೂಚಿಸಲಾಗಿತ್ತು. ಇದರ ಜತೆಗೆ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಆದೇಶಿಸಿದ್ದರು. ಆದರೆ, ಈವರೆಗೂ ಯಾವುದೇ ಪ್ರಗತಿ ಕಂಡಿಲ್ಲ ಎಂಬ ವಿಚಾರ ಮಾಹಿತಿ ಹಕ್ಕು ಕಾಯ್ದೆ ಅಡಿ ದೊರೆತಿರುವ ಮಾಹಿತಿಯಿಂದ ಬಹಿರಂಗವಾಗಿದೆ!!

ಎಲ್ಲಾ ವಿಚಾರಗಳು ಸರಕಾರದ ಮುಂದೆ ಬಹಿರಂಗವಾದರೂ ಕೂಡ, ಈವರೆಗೆ ಯಾವುದೇ ಮಾಹಿತಿ ಹೊರಬರದೇ ಇರುವುದು ಅಚ್ಚರಿಯ ಸಂಗತಿಯಾಗಿದೆ!!
ಕಂದಾಯ ಇಲಾಖೆಯಿಂದ ಇಷ್ಟು ದೊಡ್ಡ ಹಗರಣ ಬಯಲಾದರೂ ಕೂಡ ಯಾವುದೇ ಮಾಧ್ಯಮಗಳಲ್ಲಿಯೂ ಕೂಡ ಈ ಬಗ್ಗೆ ಸುದ್ದಿಯಾಗದೇ ಇರುವುದು ಇನ್ನೂ ದೊಡ್ಡ ವಿಪರ್ಯಾಸವಾಗಿದೆ!! ಆದರೆ, ಈ ಕಂದಾಯ ಇಲಾಖೆಗೆ ರೈತರು ಪಾವತಿ ಮಾಡಿದ ಹಣ ಏನಾಯ್ತು? ಯಾವ ಜಿಲ್ಲೆಯಲ್ಲಿದೆ? ಯಾವಾಗ ಬೊಕ್ಕಸಕ್ಕೆ
ಸಂದಾಯವಾಗಲಿದೆ? ಮುಖ್ಯಮಂತ್ರಿ ಆದೇಶದಂತೆ ಯಾವ ಅಧಿಕಾರಿಗಳ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ ಎಂಬ ಬಗ್ಗೆ ಮಾಹಿತಿ ಹಕ್ಕು ಕಾಯ್ದೆ (ಆರ್?ಟಿಐ)ಯಡಿ ಕೇಳಿದ ಅರ್ಜಿಗೂ ಸ್ಪಷ್ಟ ಉತ್ತರ ನೀಡಿಲ್ಲದಿರುವುದು ಎಲ್ಲ ಅನುಮಾನಿಗಳಿಗೂ ಕಾರಣ ವಾಗಿದ್ದಲ್ಲದೇ, ಭ್ರಷ್ಟಾಚಾರ ನಡೆದಿರುವ ಶಂಕೆ ವ್ಯಕ್ತವಾಗಿದೆ..

ವಿಪರ್ಯಾಸವೆಂದರೆ, ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಮಹಾರಾಷ್ಟ್ರ ಸೇರಿ ದೇಶದ ಐದು ರಾಜ್ಯಗಳಲ್ಲಿ ಉಚಿತವಾಗಿ ಅಲ್ಲಿನ ಸರಕಾರಗಳು ರೈತರಿಗೆ ಜಮೀನು ಅಳತೆ, ಪೆÇೀಡಿ ಮಾಡಿ ಕೊಡುವ ವ್ಯವಸ್ಥೆ ಕಲ್ಪಿಸಿವೆ. ಆದರೆ ನಮ್ಮ ರಾಜ್ಯದಲ್ಲಿ ರೈತರಿಂದ ಹೆಚ್ಚು ಹಣ ಸುಲಿಗೆ ಮಾಡಲಾಗುತ್ತಿದ್ದು, ರೈತರಿಂದ ಕಟ್ಟಿಸಿಕೊಂಡ ಹಣವನ್ನು ದುರ್ಬಳಕೆ ಮಾಡಿಕೊಂಡಿರುವ ಸಾಧ್ಯತೆ ಬಗ್ಗೆ ಸಾರ್ವಜನಿಕರು ಈಗಾಗಲೇ ಆಕ್ರೋಶ ವ್ಯಕ್ತಪಡಿಸಿದ್ದಾರೆ!! ಆದರೆ ಈ ಬಗ್ಗೆ ಆರ್‍ಟಿಐ ಕಾರ್ಯಕರ್ತರಾದ ಎನ್.ನಾಗೇಶ್, ರೈತರು ತಮ್ಮ ಜಮೀನು ಅಳತೆಗೆ ಸರಕಾರಕ್ಕೆ ಪಾವತಿಸಿರುವ 136 ಕೋಟಿ ರೂಪಾಯಿ ಹಣ ಬೊಕ್ಕಸಕ್ಕೆ ಜಮೆ ಮಾಡುವುದರಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. ಹಾಗಾಗಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಹೇಳಿದ್ದಾರೆ!!

ಈಗಾಗಲೇ ಬೆಂಗಳೂರು ನಗರ, ವಿಜಯಪುರ, ಕೋಲಾರ, ಬಳ್ಳಾರಿ, ಗದಗ, ರಾಯಚೂರು, ಕಲಬುರಗಿ, ಯಾದಗಿರಿ, ಚಿಕ್ಕಬಳ್ಳಾಪುರ, ಮಂಡ್ಯ, ತುಮಕೂರು ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಕಂದಾಯ ಇಲಾಖೆ ಅಧಿಕಾರಿಗಳು 136 ಕೋಟಿ 45 ಲಕ್ಷ ರೂಪಾಯಿ ಹಣವನ್ನು ಬೊಕ್ಕಸಕ್ಕೆ ಪಾವತಿ ಮಾಡಿಲ್ಲ ಎಂಬುದು ದಾಖಲೆಗಳಿಂದ ಪತ್ತೆಯಾಗಿದೆ. ಅಷ್ಟೇ ಅಲ್ಲದೇ ಈ ಬಗ್ಗೆ ಮಾತಾನಾಡಿದ, ಕಂದಾಯ ಇಲಾಖೆ ಆಯುಕ್ತರಾದ ಮನೀಶ್ ಮೌದ್ಗಿಲ್ ಹೇಳುವ ಪ್ರಕಾರ, 4 ತಿಂಗಳ ಹಿಂದೆ ಹಣ ನಾಪತ್ತೆ ಆರೋಪ ಕೇಳಿ ಬಂದಿದ್ದು, ಸಾರ್ವಜನಿಕರು ಕಟ್ಟಿದ ಹಣ ಎಲ್ಲಿಯೂ ಹೋಗಿಲ್ಲ ಮತ್ತು ಯಾರೂ ತೆಗೆದುಕೊಂಡಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ, ಈ ಹಣವೆಲ್ಲವೂ ಆಯಾ ಜಿಲ್ಲಾ ಕೇಂದ್ರಗಳಲ್ಲೇ ಇರುತ್ತದೆ. ಹಣ ಎಲ್ಲಿದೆ ಎಂಬುದರ ಪರಿಶೀಲನಾ ಕಾರ್ಯ ನಡೆಯುತ್ತಿದೆ ಎಂದು ಹೇಳಿದ್ದಾರೆ!!

ಸರಕಾರದಲ್ಲಿ ರೈತರ ಹಣ ಎಲ್ಲಿ ಹೋಗಿದೆ ಎನ್ನುವ ಪ್ರಶ್ನೆಗಳು ವ್ಯಾಪಕವಾಗಿ ಕಾಡುತ್ತಿದ್ದು, ಈ ಬಗ್ಗೆ ಆರೋಪಗಳ ಕೇಳಿಬಂದರೂ ಕೂಡ ಉನ್ನತ ಅಧಿಕಾರಿಗಳು
ಯಾವುದೇ ಕ್ರಮಕೈಗೊಳ್ಳದೇ ಇರುವುದು ಅಚ್ಚರಿಯ ವಿಷಯವಾಗಿದೆ!! ಆದರೆ, ನಮ್ಮ ದೇಶದಲ್ಲಿ ಈಗಾಗಲೇ ಕೆಲ ರಾಜ್ಯಗಳಲ್ಲಿ ಉಚಿತವಾಗಿ ಅಲ್ಲಿನ ಸರಕಾರಗಳು ರೈತರಿಗೆ ಜಮೀನು ಅಳತೆ, ಪೆÇೀಡಿ ಮಾಡಿ ಕೊಡುವ ವ್ಯವಸ್ಥೆ ಕಲ್ಪಿಸಿವೆ. ಆದರೆ ನಮ್ಮ ರಾಜ್ಯದಲ್ಲಿ ಹಣ ಕೊಟ್ಟು ಜಮೀನು ಅಳತೆ ಮಾಡಿದರೂ ಕೂಡ ಹಣವೇ ಮಂಗಮಾಯವಾಗುತ್ತಿದೆ ಅಂದರೆ ರೈತರ ಬಗ್ಗೆ ಎಷ್ಟೊಂದು ಕಾಳಜಿವಹಿಸುತ್ತೆ ಸಿದ್ದರಾಮಯ್ಯ ಸರಕಾರ!!!

ಮೂಲ:Original Link – Read Here

-ಅಲೋಖಾ

Tags

Related Articles

Close