ಜಮ್ಮು ಮತ್ತು ಕಾಶ್ಮೀರದಲ್ಲಿ ಇನ್ನು ಮುಂದೆ ಕಲ್ಲು ತೂರಾಟ ನಡೆಯಲು ಖಂಡಿತಾ ಸಾಧ್ಯವಿಲ್ಲ. ಕಲ್ಲು ತೂರಾಟ ನಡೆದರೆ ಕಲ್ಲುತೂರುವವರಿಗೆ ಉಳಿಗಾಲವೂ ಇಲ್ಲ.ಜಮ್ಮುಕಾಶ್ಮೀರದ ಶಾಂತಿ ಸಾಮರಸ್ಯ ಖಂಡಿತಾ ಮರೀಚಿಕೆಯಲ್ಲ.. ಈ ಕೆಲಸ ಎಂದೋ ನಡೆಯಬೇಕಿತ್ತು. ಆದರೆ ಹಿಂದಿನ ಸರಕಾರ ಈ ಕೆಲಸವನ್ನು ನಡೆಸದ ಕಾರಣಇಲ್ಲಿ ಕಲ್ಲು ತೂರಾಟ ನಿರಂತರವಾಗಿ ನಡೆಯುತ್ತಲೇ ಇತ್ತು. ಆದರೆ ಇದೆಲ್ಲದಕ್ಕೆ ಮುಂದೆ ಬ್ರೇಕ್ ಬೀಳಲಿದೆ.
ಹೌದು, ಕಣಿವೆ ರಾಜ್ಯದಲ್ಲಿ ಇನ್ನು ಮುಂದೆ ಭದ್ರತಾ ಪಡೆಗಳು ಮತ್ತು ಸೇನೆಯತ್ತ ಕಲ್ಲು ತೂರುವ ಯುವಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು
ಜಮ್ಮು-ಕಾಶ್ಮೀರ ಸರ್ಕಾರ ಮುಂದಾಗಿದೆ. ಸರ್ಕಾರದ ಹೊಸ ಕಾನೂನಿನ ಅನ್ವಯ ಕಲ್ಲು ತೂರುವ ಮತ್ತು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವವರ ವಿರುದ್ಧ ಕಾನೂನು ಕ್ರಮಜರುಗಿಸಿ ಅವರಿಗೆ ದಂಡ ಮತ್ತು 5 ವರ್ಷಗಳವರೆಗೂ ಜೈಲು ಶಿಕ್ಷೆ ವಿಧಿಸುವಂತಹ ಕಾನೂನು ರಚಿಸಲಾಗುತ್ತಿದೆ. ಈಗಾಗಲೇ ಕಾಶ್ಮೀರ ಸರ್ಕಾರ ಈ ಸಂಬಂಧಸುಗ್ರೀವಾಜ್ಞೆ ಹೊರಡಿಸಿದ್ದು, ಕಾಶ್ಮೀರ ರಾಜ್ಯಪಾಲ ಎನ್.ಎನ್. ವೋಹ್ರಾ ಅವರು ಅನುಮೋದನೆ ಕೂಡ ನೀಡಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಸಾರ್ವಜನಿಕ ಆಸ್ತಿತಿದ್ದುಪಡಿ ಸುಗ್ರೀವಾಜ್ಞೆ-2017ಕ್ಕೆ ರಾಜ್ಯಪಾಲರು ಸಹಿ ಹಾಕಿದ್ದಾರೆ. ಈ ಕಾನೂನಿ ಅನ್ವಯ ಪ್ರತಿಭಟನೆ ಹೆಸರಲ್ಲಿ ಸಾರ್ವಜನಿಕರ ಆಸ್ತಿ-ಪಾಸ್ತಿಗೆ ಹಾನಿ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಅಧಿಕಾರ ಪೆÇಲೀಸರಿಗೆ ದೊರೆಯಲಿದೆ.
ಪ್ರತ್ಯೇಕತವಾದಿಗಳು ಹಾಗೂ ಪಾಕಿಸ್ತಾನ ಭಯೋತ್ಪಾಕ ಸಂಘಟನೆಯ ಕಮಾಂಡರ್‍ಗಳು ಜಮ್ಮು ಕಾಶ್ಮೀರದ ಸ್ಥಳೀಯ ಯುವಕರ ತಲೆಕೆಡಿಸಿ ಸೈನಿಕರತ್ತ ಕಲ್ಲು ತೂರಾಟನಡೆಸಲು ದುಷ್ಪ್ರೇರಣೆ ನೀಡುತ್ತಿದ್ದರು. ಇದಕ್ಕಾಗಿ ಯುವಕರಿಗೆ ಹಣಕಾಸು ನೆರವನ್ನೂ ನೀಡಲಾಗುತ್ತಿತ್ತು. ಸೇನಾಪಡೆ ಭಯೋತ್ಪಾದಕರ ವಿರುದ್ಧ ನಡೆಸುತ್ತಿದ್ದಕಾರ್ಯಾಚರಣೆಗೆ ಕಲ್ಲುತೂರಾಟಗಾರರು ಅಡ್ಡಿಪಡಿಸುತ್ತಿದ್ದರು. ಕಲ್ಲುತೂರಾಟಗಾರರಿಂದ ರಕ್ಷಿಸಿಕೊಳ್ಳಲು ಒಬ್ಬ ಕಲ್ಲು ತೂರಾಟಗಾರರನ್ನು ಸೇನಾಪಡೆಗುರಾಣಿಯನ್ನಾಗಿಸಿದ್ದಕ್ಕೆ ಅನೇಕ ಮಂದಿ ಆಕ್ಷೇಪ ವ್ಯಕ್ತಪಡಿಸಿದ್ದರು. ಒಟ್ಟಾರೆ ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಗೆ ಕಲ್ಲು ತೂರಾಟಗಾರರು ಅಡ್ಡಿಯಾಗಿದ್ದರು.ಈ ಹಿನ್ನೆಲೆಯಲ್ಲಿ ಜಮ್ಮು ಸರಕಾರ ಕಠಿಣ ಕಾನೂನು ರೂಪಿಸುವ ಮೂಲಕ ಕಲ್ಲುತೂರಾಟಗಾರರಿಗೆ ತಕ್ಕ ಪಾಠ ಕಲಿಸಿದೆ. ಜಮ್ಮು ಕಾಶ್ಮೀರದಲ್ಲಿ ಬ್ಯಾಂಕುಗಳ ಲೂಟಿ, ಕಲ್ಲುತೂರಾಟ, ಸೇನಾ ಪಡೆಗಳ ಮೇಲೆ ದಾಳಿ ಪ್ರಕರಣಗಳು ಹೆಚ್ಚಾಗಿದ್ದು, ಜಮ್ಮು ಕಾಶ್ಮೀರದಲ್ಲಿ ಉಗ್ರರು ಯಾರು, ನಾಗರೀಕರು ಯಾರು ಎಂದು ತಿಳಿಯದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೆಲವು ನಾಗರೀಕರು ಕಲ್ಲು ತೂರಾಟ ನಡೆಸಿರುವುದು, ನಾಗರೀಕರ ನಡುವೆ ಬ್ಯಾಂಕುಗಳಿಗೆ ನುಗ್ಗಿ ದೋಚಿರುವುದು ಕೆಲವು ಕಡೆಗಳಲ್ಲಿ ಭಯೋತ್ಪಾದಕರೂ ಕಲ್ಲುತೂರಾಟಗಾರರೊಂದಿಗೆ ಸೇರಿಕೊಂಡು ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸುತ್ತಿದ್ದರು.
ಜಮ್ಮು ಕಾಶ್ಮೀರದಲ್ಲಿ ಕಲ್ಲು ತೂರಾಟಗಾರರನ್ನು ನಿಯಂತ್ರಿಸುವುದೇ ಒಂದು ಸವಾಲಾಗಿತ್ತು. ಇದಕ್ಕಾಗಿ ಕೇಂದ್ರ ಸರಕಾರ ಕೋಟ್ಯಂತರ ರೂಗಳನ್ನು ಖರ್ಚು ಮಾಡಿದೆ.ಈ ಪ್ರದೇಶದಲ್ಲಿ ಪೆÇಲೀಸ್ ಹಾಗೂ ಸೇನಾ ಪಡೆಗಳ ಜಂಟಿ ರಕ್ಷಣಾ ಕಾರ್ಯ ಕಳೆದ 15 ವರ್ಷಗಳಲ್ಲೇ ದೊಡ್ಡ ಪ್ರಮಾಣದಲ್ಲಿ ನಡೆಸಲಾರಂಭಿಸಲಾಗಿತ್ತು. ಕಲ್ಲು ತೂರಾಟಗಾರರು ಸೇನೆಯ ಮೇಲೆ ದೊಡ್ಡ ಪ್ರಮಾಣದಲ್ಲಿ ದಾಳಿ ನಡೆಸುತ್ತಿದ್ದರು. ಈ ವೇಳೆ ಇವರನ್ನು ನಿಯಂತ್ರಿಸುವುದೇ ಒಂದು ಸೇನಾಪಡೆಗೆ ತಲೆನೋವಿನ ಕೆಲಸವಾಗಿತ್ತು. ಯಾಕೆಂದರೆ ಕಲ್ಲುತೂರಾಟಗಾರರ ಮೇಲೆ ಗುಂಡಿನ ಕಾರ್ಯಾಚರಣೆ ನಡೆಸಲು ಅಡ್ಡಿಯಾಗುವುದಲ್ಲದೆ, ಇವರ ಮೇಲೆ ಎಡಪಂಥೀಯರು ಬೆಂಬಲ ನೀಡಿ ಅವರದ್ದು ಸ್ವತಂತ್ರ್ಯ ಹೋರಾಟ ಎಂದು ಬಣ್ಣಿಸುತ್ತಿದ್ದರು. ಆದರೂ ಒಟ್ಟು 4000 ಸಿಬ್ಬಂದಿ, ರಾಷ್ಟ್ರೀಯ ರೈಫಲ್ ಪಡೆಯ 4 ಬೆಟಾಲಿಯನ್, ಸಿಆರ್‍ಪಿಎಫ್‍ನ 8 ಪಡೆಗಳು, ಜಮ್ಮು ಕಾಶ್ಮೀರ ಪೆÇಲೀಸ್ ಇಲಾಖೆಯ ಐದು ಪಡೆಗಳು, 30 ಮಹಿಳಾ ಕಾನ್ಸ್ ಸ್ಟೇಬಲ್‍ಗಳು ಹಾಗೂ ಭಾರತೀಯ ಮೀಸಲು ಪೆÇಲೀಸ್ ಪಡೆಯ ಸಿಬ್ಬಂದಿ ಶಸ್ತ್ರ ಎತ್ತದೆ ಕಲ್ಲುತೂರಾಟಗಾರರನ್ನು ನಿಯಂತ್ರಿಸಲು ಕಠಿಣವಾಗುತ್ತಿತ್ತು.
ಜಮ್ಮು-ಕಾಶ್ಮೀರದಲ್ಲಿ ಹಿಂಸಾಚಾರ ನಡೆಯಲು ಪ್ರತ್ಯೇಕತಾವಾದಿ ನಾಯಕರಿಗೆ ಪಾಕಿಸ್ತಾನದಿಂದ 1500 ಕೋಟಿ ರೂ. ಪೂರೈಕೆ ಮಾಡಿರುವುದನ್ನು ರಾಷ್ಟ್ರೀಯ
ತನಿಖಾ ದಳ (ಎನ್‍ಐಎ) ಬೆಳಕಿಗೆ ತಂದಿತ್ತು. ಪ್ರತ್ಯೇಕತಾವಾದಿ ನಾಯಕ ನಯೀಮ್ ಖಾನ್, ಘಾಜಿ ಜಾಯೆದ್ ಬಾಬಾ, ಫಾರೂಕ್ ಅಹಮದ್ ಪಾಕ್‍ನಿಂದ ಹಣ
ಪಡೆದಿರುವುದನ್ನು ಒಪ್ಪಿಕೊಂಡಿದ್ದರು. ಕಾಶ್ಮೀರ ಕಣಿವೆಯಲ್ಲಿ ಹಿಂಸಾಚಾರ ನಡೆಸಲು, ಭದ್ರತಾ ಸಿಬ್ಬಂದಿ ಮೇಲೆ ಕಲ್ಲುತೂರಾಟ ಮತ್ತಿತರ ಚಟುವಟಿಕೆ ಗಳನ್ನು ನಡೆಸಲು ಪಾಕಿಸ್ತಾನದಿಂದ ಹಣ ಪೂರೈಕೆ ಆಗುತ್ತಿದೆ. ಸ್ಥಳೀಯ ಕಾಶ್ಮೀರಿ ಯುವಕರಿಗೆ ಹಣದ ಆಮಿಷ ಒಡ್ಡಿ ಹಿಂಸಾಚಾರದಲ್ಲಿ ಭಾಗಿಯಾಗುವಂತೆ ಪ್ರೇರಿಪಿಸಲಾಗುತ್ತಿತ್ತು. ಪ್ರತ್ಯೇಕತಾವಾದಿ ಸಂಘಟನೆಗಳನ್ನು ಬಲ ಪಡಿಸಲು ಈ ಹಣ ಬಳಕೆ ಮಾಡಲಾಗುತ್ತಿತ್ತು. ಈ ಹಣದಿಂದ ಪ್ರತ್ಯೇಕತಾವಾದಿಗಳು ಐಷಾರಾಮಿ ಬದುಕು ನಡೆಸುತ್ತಿದ್ದರು. ಹಣದಲ್ಲಿ ಅರ್ಧ ಭಾಗವನ್ನು ಕಾಶ್ಮೀರದಲ್ಲಿ ಹಿಂಸಾಚಾರ ನಡೆಸಲು ಬಳಸುತ್ತಿದ್ದರು. ಕಾಶ್ಮೀರದ ಶಾಲೆ, ಕಾಲೇಜುಗಳಿಗೆ ಬೆಂಕಿ ಹಚ್ಚುವ ಕೆಲಸವನ್ನು ಕಲ್ಲುತೂರಾಟಗಾರರಮುಖಾಂತರ ನಡೆಸುತ್ತಿದ್ದರು.
ಲಷ್ಕರ್ ಕಮಾಂಡರ್ ಉಗ್ರ ಬುರ್ಹಾನ್ ವಾನಿ, ಲಷ್ಕರ್ ಇ ತೈಬಾ ಸಂಘಟನೆಯ ಕಮಾಂಡರ್ ಆಗಿದ್ದ ಅಬು ದುಜಾನಾ, ಬಷೀರ್ ಲಷ್ಕರಿ, ಮುಜಾಹಿದೀನ್
ಸಂಘಟನೆಯ ಕಮಾಂಡರ್ ಯಾಸೀನ್ ಯಾತೂ, ಅಖೀಬ್ ಮೋಲ್ವಿ, ಮುಝಾಫರ್ ಅಹ್ಮದ್ ನೈಕೂ ಅಲಿಯಾಸ್ ಮುಝ್ ಮೋಲ್ವಿ, ಅಬು ಮುಸೈಬ್, ಅಬು
ಇಸ್ಮಾಯಿಲ್ ಮುಂತಾದ ಉಗ್ರ ಕಮಾಂಡರ್‍ಗಳ ತಲೆ ಉರುಳಿಸಿದಾಗಲೂ ಕಲ್ಲುತೂರಾಟಗಾರರು ಅಡ್ಡಿಯಾಗಿದ್ದರು. ಕಲ್ಲುತೂರಾಟಗಾರರ ಮೇಲೆ ಕಲ್ಲು
ತೂರುವಂತೆಯೇ ಇರಲಿಲ್ಲ. ಆದರೆ ಸರಕಾರ ರೂಪಿಸಿದ ಹೊಸ ಕಾನೂನಿನಿಂದ ಎಲ್ಲದಕ್ಕೂ ಬ್ರೇಕ್ ಬೀಳಲಿದೆ.
-ಚೇಕಿತಾನ