ಪ್ರಚಲಿತ

ಜಯಲಲಿತಾ ಸಾವಿಗೆ ಆಘಾತಕರ ಟ್ವಿಸ್ಟ್! ವೈದ್ಯಕೀಯ ವರದಿ ಸ್ಫೋಟಕಗೊಳಿಸಿದ ಸತ್ಯವೇನು ಗೊತ್ತೇ?

ತಮಿಳುನಾಡಿನ “ಅಮ್ಮ” ಮಾಜಿ ಮುಖ್ಯಮಂತ್ರಿ ಜಯಲಲಿತಾ ಸಾವಿಗೆ ಸಂಬಂಧಿಸಿದ ಕುರಿತಂತೆ ಹಲವಾರು ಅನುಮಾನಗಳ ಹುತ್ತ ಬೆಳೆಯುತ್ತಲೇ ಇದ್ದು ಇದೀಗ ಈ ಒಂದು ವಿಚಾರದಲ್ಲಿ ಮಾಧ್ಯಮಗಳ ಕೈಗೆ ಕೆಲವೊಂದು ದಾಖಲೆಗಳು ಸಿಕ್ಕಿವೆ!! ಹಾಗಾದರೆ ಈ ದಾಖಲೆಗಳಲ್ಲಿ ಇರುವುದಾದರೂ ಏನು ಗೊತ್ತಾ?? ಗೊತ್ತಾದರೇ ಒಂದು ಕ್ಷಣ ಆಶ್ಚರ್ಯ ಆಗಬಹುದು. ಯಾಕಂದರೆ ತಮಿಳುನಾಡಿನ ಪ್ರಭಾವಿ ರಾಜಕಾರಣಿ ಎಂದೆನಿಸಿದ ಜಯಲಲಿತಾ ಅವರ ಸಾವಿನಲ್ಲಿ ಇಷ್ಟು ಅಂಶಗಳು ಇದ್ದರೂ ಆರೋಪಿಗಳ ಪತ್ತೆ ಹಚ್ಚುವಲ್ಲಿ ತನಿಖಾ ತಂಡ ವಿಫಲವಾಗಿದೆಯಾ ಎನ್ನುವ ಅಂಶವೂ ಕಂಡು ಬರುತ್ತೆ!!

ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಸಾವಿಗೆ ಸಂಬಂಧಿಸಿದ ಅನುಮಾನಗಳು ಮುಂದುವರೆದಿರುವ ನಡುವೆ ವೈದ್ಯಕೀಯ ದಾಖಲೆಗಳು ಮಾಧ್ಯಮಗಳ ಕೈಗೆ ಸಿಕ್ಕಿವೆ. ತನಗೆ ವೈದ್ಯಕೀಯ ದಾಖಲೆಗಳು ಸಿಕ್ಕಿದ್ದು, ಆಕೆಯನ್ನು ಆಸ್ಪತ್ರೆಗೆ ಕರೆ ತರುವಾಗ ಪ್ರಜ್ಞೆ ಇರಲಿಲ್ಲ ಎನ್ನುವ ಅಂಶಗಳನ್ನು ‘ಇಂಡಿಯಾ ಟುಡೇ’ ವರದಿ ಮಾಡಿದೆ!! ಹಾಗಾದರೆ ಜಯಲಲಿತಾ ಪ್ರಜ್ಞಾ ಹೀನಾರಾಗಿರಲು ಕಾರಣವಾದರೂ ಏನು ಎನ್ನುವ ಅಂಶಗಳು ಇಲ್ಲಿ ಕಂಡು ಬರುವುದು ನಿಜ!!

ಇದನ್ನು ಪುಷ್ಟೀಕರಿಸಿರುವ ಎನ್‍ಡಿಟಿವಿ, ‘ತಮಿಳುನಾಡಿನ ಅಮ್ಮ, ಜಯಲಲಿತಾ ಅವರನ್ನು ಸೆಪ್ಟೆಂಬರ್ 22, 2016ರಂದು ಆಸ್ಪತ್ರೆಗೆ ಕರೆ ತಂದಾಗ ಉಸಿರಾಟ
ಸಮಸ್ಯೆಯಿಂದ ಬಳಲುತ್ತಿದ್ದರು. ಆದರೆ ಆಕೆ ಅಲ್ಪಸ್ವಲ್ಪ ಮಾತನಾಡುತ್ತಿದ್ದರು ಎಂದು ಮೊದಲ ವೈದ್ಯಕೀಯ ವರದಿ ಹೇಳುತ್ತಿದೆ,’ ಎಂದು ವರದಿ ಮಾಡಿದೆ. ಆದರೆ,
ವೈದ್ಯಕೀಯ ದಾಖಲೆ ಪ್ರಕಾರ ಆಕೆಯ ದೇಹದ ಮೇಲೆ ಯಾವುದೇ ಗುರುತುಗಳಿರಲಿಲ್ಲ ಮತ್ತು ಆಕೆಯ ರಕ್ತದಲ್ಲಿನ ಸಕ್ಕರೆ ಅಂಶ 508ಮಿಗ್ರಾಂ/ಡಿಎಲ್ ಆಗಿತ್ತು.
ನ್ಯುಮೋನಿಯಾ ಜ್ವರ, ರಕ್ತದೊತ್ತಡ ಮತ್ತು ಗಂಟಲು ಅಲರ್ಜಿಯಿಂದ ಜಯಲಲಿತಾ ಬಳಲುತ್ತಿದ್ದರು ಎಂದು ‘ಇಂಡಿಯಾ ಟುಡೇ’ ವರದಿ ಮಾಡಿದೆ.

ಇತ್ತೀಚೆಗಷ್ಟೇ, ತಮಿಳುನಾಡಿನ ಅರಣ್ಯ ಸಚಿವ ಸಿ. ಶ್ರೀನಿವಾಸನ್, ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ಆಸ್ಪತ್ರೆಗೆ ದಾಖಲಾಗಿದ್ದಾಗ ಅವರ ಬಗ್ಗೆ
ಎಐಎಡಿಎಂಕೆ ನಾಯಕರು ನೀಡುತ್ತಿದ್ದ ಹೇಳಿಕೆಗಳೆಲ್ಲವೂ ಸುಳ್ಳು ಹೇಳಿದ್ದಲ್ಲದೇ, ಇದಕ್ಕಾಗಿ ನಾನು ತಮಿಳುನಾಡಿನ ಜನತೆಯ ಕ್ಷಮೆ ಕೋರುತ್ತೇನೆ ಎಂದಿದ್ದಾರೆ. ಇದಷ್ಟೇ ಅಲ್ಲದೇ, ”ಜಯಲಿಲಿತಾ ಅವರು ಆಸ್ಪತ್ರೆಯಲ್ಲಿದ್ದಾಗ ಎಐಎಡಿಎಂಕೆ ನಾಯಕರು ಅವರ ಆರೋಗ್ಯದ ಬಗ್ಗೆ ನೀಡುತ್ತಿದ್ದ ಹೇಳಿಕೆಗಳೆಲ್ಲವೂ ಸುಳ್ಳು. ಜಯಲಲಿತಾ ಅವರು ಇಂದು ಇಡ್ಲಿ ಸೇವಿಸಿದರು. ಕಾಫಿ ಕುಡಿದರು. ತಮ್ಮನ್ನು ಭೇಟಿ ಮಾಡಲು ಬಂದಿದ್ದ ನಾಯಕರೊಡನೆ ಮಾತನಾಡಿದರು ಎಂಬುದೆಲ್ಲಾ ಸುಳ್ಳು. ಅಸಲಿನ ವಿಚಾರವೇನೆಂದರೆ, ಎಐಎಡಿಎಂಕೆಯ ಯಾವೊಬ್ಬ ನಾಯಕರೂ ಆ ಸಂದರ್ಭದಲ್ಲಿ ಜಯಲಲಿತಾ ಅವರನ್ನು ಭೇಟಿ ಆಗಿರಲೇ ಇಲ್ಲ” ಎನ್ನುವ ಅಂಶಗಳನ್ನು ಹೇಳಿದ್ದರು.

ಅಷ್ಟೇ ಅಲ್ಲದೇ, ಜಯಲಲಿತಾ ಅವರು ಆಸ್ಪತ್ರೆಗೆ ದಾಖಲಾಗಿದ್ದಾಗ ಎಐಎಡಿಎಂಕೆಯ ನಾಯಕರು ನೀಡಿದ ಎಲ್ಲಾ ಹೇಳಿಕೆಗಳೂ ಸುಳ್ಳೇ ಸುಳ್ಳು. ಸೆ. 22ರಂದು ಅವರು ಆಸ್ಪತ್ರೆಗೆ ದಾಖಲಾದಾಗಿನಿಂದ ಅವರು ಮೃತಪಟ್ಟರೆಂದು ವೈದ್ಯರು ಘೋಷಿಸಿದ 5ನೇ ಡಿಸೆಂಬರ್ 2016ರವರೆಗೆ ಯಾವ ಎಐಎಡಿಎಂಕೆ ನಾಯಕರೂ ಅವರನ್ನು ಭೇಟಿ ಆಗಿಯೇ ಇಲ್ಲ. ಜಯಲಲಿತಾ ಅವರು ದಾಖಲಾಗಿದ್ದ ವಾರ್ಡ್‍ಗೆ ನೇರವಾಗಿ ಪ್ರವೇಶ ಪಡೆಯುತ್ತಿದ್ದುದು ಶಶಿಕಲಾ ಮಾತ್ರ. ಆದರೆ, ಇದನ್ನು ಶಶಿಕಲಾ ಅವರ ಸಂಬಂಧಿ ಟಿಟಿವಿ ದಿನಕರನ್ ಅವರು ನಿರಾಕರಿಸಿದ್ದರು. ಆದರೆ, ಶಶಿಕಲಾ ಅವರಿಗೆ ಮಾತ್ರ ಜಯಲಲಿತಾ ಇದ್ದ ವಾರ್ಡ್‍ಗೆ ನೇರವಾಗಿ ಹೋಗಲು ಅವಕಾಶ ಇದ್ದಿದ್ದು ನಿಜ ಎಂದು ಅರಣ್ಯ ಸಚಿವ ಸಿ. ಶ್ರೀನಿವಾಸನ್ ಹೇಳಿದ್ದರು!!!

ಹಾಗಾದರೆ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದ ರಾಜಕೀಯ ನಾಯಕರು, ವಿಐಪಿಗಳು ನೀಡುತ್ತಿದ್ದ ಮಾಹಿತಿಗಳು ಸುಳ್ಳು ಎಂದೆನಿಸುತ್ತೆ. ಅಷ್ಟೇ ಅಲ್ಲದೇ, ಇವರೆನೆಲ್ಲ
ಜಯಲಲಿತಾ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ಸ್ಪೆಷಲ್ ವಾರ್ಡ್‍ವರೆಗೆ ಹೋಗಲು ಅವಕಾಶ ನೀಡುತ್ತಿರಲಿಲ್ಲ ಎನ್ನುವುದು ತಿಳಿದು ಬರುತ್ತೆ. ಆದರೆ ಜಯಲಲಿತಾ ಅವರ
ಸಾವಿನ ವಿಚಾರವಾಗಿ ಅನುಮಾನಗಳು ಬೆಳೆಯುತ್ತಿರುವ ನಡುವೆ ವೈದ್ಯಕೀಯ ದಾಖಲೆಗಳು ಮಾಧ್ಯಮಗಳ ಕೈಗೆ ಸಿಕ್ಕಿದ್ದು, ಸದ್ಯದಲ್ಲಿಯೇ ಜಯಲಲಿತಾ ಇದ್ದ
ಆಸ್ಪತ್ರೆಯಲ್ಲಿ ಏನೆಲ್ಲಾ ನಡೆಯುತ್ತಿದ್ದವು ಎನ್ನುವ ಅಂಶಗಳು ಬೆಳಕಿಗೆ ಬರಲಿವೆ. ಅಲ್ಲದೇ, ತಮಿಳುನಾಡು ಸರ್ಕಾರ ಜಯಲಲಿತಾ ಅವರ ಸಾವಿನ ತನಿಖೆ ನಡೆಸಲು ಕೆಲವು ದಿನಗಳ ಹಿಂದೆ ತನಿಖಾ ಆಯೋಗವನ್ನು ರಚಿಸಿದೆ. ಆದರೂ ಕೂಡ ತನಿಖೆ ಇನ್ನು ಆರಂಭವಾಗಿಲ್ಲ ಎನ್ನುವುದು ಡಿಎಂಕೆ ನಾಯಕ ಸ್ಟಾಲಿನ್ ಈಗಾಗಲೇ ಈ ವಿಚಾರವನ್ನು ಟೀಕಿಸಿದ್ದರು.

‘ಇಂಡಿಯಾ ಟುಡೇ’ ವರದಿ ಮಾಡಿರುವ ಪ್ರಕಾರ ವೈದ್ಯಕೀಯ ದಾಖಲೆಗಳು ಈಗಾಗಲೇ ಸಿಕ್ಕಿದ್ದು, ಎಲೆಕ್ಷನ್ ಫಾರ್ಮ್‍ಗೆ ಜಯಲಲಿತಾರ ಬೆರಳಚ್ಚು ಪಡೆಯುವಾಗ ಆಕೆಗೆ ಪ್ರಜ್ಞೆಯೇ ಇರಲಿಲ್ಲ ಎಂಬ ವಾದಗಳಿದ್ದು ಈ ಸಂಬಂಧ ವಿವರಣೆ ನೀಡಲು ಅಕ್ಟೋಬರ್ 6ರಂದು ಹಾಜರಾಗುವಂತೆ ಮದ್ರಾಸ್ ಹೈಕೋರ್ಟ್ ಚುನಾವಣಾ ಆಯೋಗಕ್ಕೆ ಸಮನ್ಸ್ ನೀಡಿದೆ. ಇನ್ನು ಜಯಲಲಿತಾ ಸಾವಿಗೆ ಸಂಬಂಧಿಸಿದಂತೆ ತನಿಖೆ ನಡೆಸಿ ವರದಿ ನೀಡಲು ನ್ಯಾಯಾಂಗ ಆಯೋಗವನ್ನು ತಮಿಳುನಾಡು ಸರಕಾರ ರಚಿಸಿದ್ದು ಮೂರು ತಿಂಗಳಲ್ಲಿ ವರದಿ ನೀಡುವಂತೆ ಸೂಚಿಸಲಾಗಿದೆ!!

ಮೂಲ:Jayalalitha – Secret revealed

– ಅಲೋಖಾ

Tags

Related Articles

Close