ಅಂಕಣ

ಜರ್ಮನಿಯ ಮರಿಯಾ ವ್ರಿಥ್ ಎಂಬುವವರಿಂದ ಮನಮೋಹಕ ವಿಮರ್ಶೆ !!! ಭಾರತಕ್ಕೆ ಬ್ರಾಹ್ಮಣರ ಅಗಾಧ ಕೊಡುಗೆಗಳೇನು ಗೊತ್ತೇ?!

ನನಗೆ ಯಾವಾಗಲೂ ಕಾಡುವ ಪ್ರಶ್ನೆಯಿದು. ಬ್ರಾಹ್ಮಣರು ಅಪರಾಧಿ ಭಾವನೆಯಲ್ಲಿಯೇಕೆ ಸದಾ ಬದುಕುತ್ತಿರಬೇಕು? ವಾಸ್ತವವಾಗಿ ಅವರು ಹೆಮ್ಮೆ ಪಡಬೇಕು. ಭಾರತ ಹಾಗೂ ವಿಶ್ವವೇ ಇವತ್ತು ಅಗಾಧ ಜ್ಞಾನವನ್ನು ಹೊಂದಿದ ವೇದವನ್ನು ಉಳಿಸಿದೆಯೆಂದರೆ ಅದಕ್ಕೆ ಕಾರಣ ಇದೇ ಬ್ರಾಹ್ಮಣರು. ಸಾವಿರಾರು ವರ್ಷಗಳಿಂದ ಕೇವಲ ಉಪದೇಶಗಳಿಂದಲೇ ಇವತ್ತಿನ ವರೆಗೂ ಉಳಿಸಿಕೊಂಡು ಬಂದ ಜನಾಂಗ ಅವರದ್ದು ಎಂಬ ಕಾರಣಕ್ಕೆ.

ಜಾತಿ ವ್ಯವಸ್ಥೆಯನ್ನು ಪರಿಗಣಿಸಿಯೇ ಇಂತಹದ್ದೊಂದು ಪ್ರಶ್ನೆಯನ್ನು ಟೀಕಾಕಾರರು ಕೇಳುತ್ತಿದ್ದಾರೆಂಬ ಚಿಂತನೆ ನನ್ನದು. ಈ ವ್ಯವಸ್ಥೆಯ ಕುರಿತಾಗಿ ಇಡೀ ಪ್ರಪಂಚವೇ ತಿಳಿದಿದೆ ಅನ್ನುವುದೂ ನನಗೆ ಗೊತ್ತಿದೆ. ಈ ವಿಚಾರಗಳನ್ನೆಲ್ಲಾ ಪ್ರಾಥಮಿಕ ಶಾಲೆಯಲ್ಲಿಯೇ ನಾವೆಲ್ಲಾ ಕಲಿತಿದ್ದೇವೆ, ಆದರೆ ಕೆಲವೇ ವರ್ಷಗಳ ಹಿಂದೆ ಜರ್ಮನಿನ ನಾಝಿಗಳು ಗುಲಾಮಗಿರಿಯ ದೌರ್ಜನ್ಯಗಳನ್ನು, ಅವರ ವಸಾಹತುಶಾಹಿತ್ವವನ್ನು ನಮ್ಮ ಪಠ್ಯಗಳು ಬೋಧಿಸಲೇ ಇಲ್ಲ. ಆದರೆ ಭಾರತದಲ್ಲಿನ ಜಾತಿ ವ್ಯವಸ್ಥೆಯ ಕುರಿತಾಗಿ ಜರ್ಮನಿನ ಮಕ್ಕಳಿಗೆ ಚೆನ್ನಾಗಿಯೇ ಬೋಧಿಸಲಾಗುತ್ತಿತ್ತು. ಬಡವರ, ಅಸ್ಪøಶ್ಯರ ಚಿತ್ರಗಳನ್ನು ತೋರಿಸಲಾಗುತ್ತಿತ್ತು. ಸಹಜವಾಗಿ ಅದು ಮುಗ್ಧ ಮಕ್ಕಳ ಮೇಲೆ ಬೀರಿದ ಪರಿಣಾಮ ಮಾತ್ರ ಅಗಾಧವಾಗಿತ್ತು. ಒಫ್ ಕೋರ್ಸ್, ಅದು ನಕರಾತ್ಮಕ ಚಿಂತನೆಗಳೇ ಬೀರುತ್ತವೆ. ಇದು ತಪ್ಪು ಮಾತ್ರವಲ್ಲ ಬದಲಾಗಿ ಅದರ ಹಿಂದಿದೆ ಬಹಳ ದೊಡ್ಡ ದುರುದ್ದೇಶವೇ ಅಡಗಿದೆ ಅನ್ನುವುದು ಸ್ಪಷ್ಟ.!!

ನಾನೀಗ ಆಪತ್ತಿನಲ್ಲಿ ಸಿಕ್ಕಿಹಾಕಿಕೊಂಡಿದ್ದೇನೆಂಬುದೂ ನನಗೆ ಅರಿವಿದೆ. ಯಾಕೆ ಗೊತ್ತಾ?? ಕೆಲವು ಬ್ರಾಹ್ಮಣ ಹೆಸರಿನವರು ಓರ್ವ ವಿದೇಶಿ ಮಹಿಳೆ ಭಾರತದಲ್ಲಿನ ವಾಸ್ತವ ಸಂಗತಿಯನ್ನು ಅರಿಯದೇ ಮಾತನಾಡುತ್ತಿದ್ದಾಳೆಂದು ದಾಳಿ ಮಾಡಬಹುದು. ಬ್ರಾಹ್ಮಣರ ವಿರೋಧಿ ಚಿಂತನೆಗಳು ವಿಶ್ವದಲ್ಲಿ ಬಹಳಷ್ಟು ಇರುವುದೂ ಇದಕ್ಕೆ ಒಂದು ಕಾರಣವಿಬಹುದೇನೋ..

ನಿಜ. ಜಾತಿ ವ್ಯವಸ್ಥೆ ವ್ಯವಸ್ಥೆ ಹಾಗೂ ಅಸ್ಪøಶ್ಯತೆ ಅಸ್ತಿತ್ವದಲ್ಲಿದೆ. ಪ್ರಪಂಚದಾದ್ಯಂತವಿದೆ. ಅದರ ಮೂಲವನ್ನು ಕೆದುಕಲು ನಾನು ಹೋಗುವುದಿಲ್ಲ. ಆದರೆ ವರ್ಣಾಶ್ರಮ ಪದ್ಧತಿ ಜನ್ಮಾಧಾರಿತವಾದುದಲ್ಲವೆಂಬುದೂ ಅಷ್ಟೇ ಸತ್ಯ. ಶುದ್ಧತೆಯನ್ನು ಕಾಯ್ದುಕೊಳ್ಳಲು ಉಳಿದ ಜಾತಿಗಳಿಗಿಂತ ಅಧಿಕವಾಗಿಯೇ ನಿಯಮಗಳನ್ನು ಪಾಲಸುತ್ತಿದ್ದಾರೆ ಬ್ರಾಹ್ಮಣರು. ಅಡಿಗೆ ಕೋಣೆಗೆ ಪ್ರವೇಶಿಸುವ ಮುಂಚೆ ಸ್ನಾನ ಮಾಡುವ ಬ್ರಾಹ್ಮಣ ಮಹಿಳೆಯೋರ್ವಳ ಪರಿಚಯವೂ ನನಗಿದೆ. ವೇದಗಳ ಪರಿಶುದ್ಧತೆಯ ಸಂರಕ್ಷಕರು ಬ್ರಾಹ್ಮಣರು. ಆದ್ದರಿಂದ ಚರಂಡಿ ಸ್ವಚ್ಛ ಮಾಡುವವರನ್ನೂ, ಪ್ರಾಣಿಗಳ ಶವವನ್ನು ಹೊತ್ತೊಯ್ಯುವವರನ್ನು ಬ್ರಾಹ್ಮಣರು ಸ್ಪರ್ಶಿಸದಿರುವುದರ ಹಿಂದಿನ ನಿಗೂಢತೆ ಅರ್ಥವಾಗುವಂತಹದ್ದೇ, ಸಮಾಜಕ್ಕೆ ಅವರ ಅಗತ್ಯತೆ ಇದ್ದರೂ. ಪಾಶ್ಚಾತ್ಯ ರಾಷ್ಟ್ರಗಳಲ್ಲಿಯೂ ಅವರ ಕೈಕುಲುಕದ ಅನೇಕ ಮಂದಿಗಳಿದ್ದಾರೆ, ಆದರೆ ಇದೇ ವಿಚಾರವನ್ನು ಸಮಸ್ಯೆಯಾಗಿ ಅವರು ಪರಿಗಣಿಸಿಲ್ಲ.

ಭಾರತದಲ್ಲಿನ ಸಮಾಜದಲ್ಲಿನ ಈ ವ್ಯವಸ್ಥೆಯ ಕುರಿತಾಗಿ ಮಾತ್ರ ಯಾಕೆ ವಿಶ್ವಾದ್ಯಂತ ಚರ್ಚೆಯಾಗುತ್ತಿದೆ ಎಂಬುದೂ ನನಗೆ ಅರ್ಥವಾಗುತ್ತಿಲ್ಲ. ಯುರೋಪ್ ರಾಷ್ಟ್ರಗಳಲ್ಲಿ ಅತ್ಯಧಿಕ ಜಾತಿ ವ್ಯವಸ್ಥೆಯಿದ್ದರೂ ಯಾರೂ ಮಾತನಾಡುತ್ತಿಲ್ಲ. ವಿಪರ್ಯಾಸದ ಸಂಗತಿಯೇನು ಗೊತ್ತಾ?? ಸ್ವತಂತ್ರ ಭಾರತದಲ್ಲಿ ಕೆಳ ವರ್ಗದ ಜನರಿಗೆ ಸಾಕಷ್ಟು ಯೋಜನೆಗಳನ್ನು ರೂಪಸಿದರೂ ಇವತ್ತು ಅನೇಕ ಸಮಸ್ಯೆಗಳನ್ನು ಎದುರುತ್ತಿರುವುದು ಮಾತ್ರ ಬ್ರಾಹ್ಮಣರು. ಅವರನ್ನು ಬಹಳ ಅನ್ಯಾಯದಿಂದ ನೋಡಿಕೊಳ್ಳಲಾಗುತ್ತಿರುವುದು ದುರಂತ.

ಕರ್ನಾಟಕದ ಮಡಿಕೇರಿಯ ಪಟ್ಟಣದಲ್ಲಿ “ಬಿಳಿಯರಿಗಾಗಿ ಮಾತ್ರ” ಅನ್ನುವ ಸಿದ್ದಾಂತವನ್ನು ಬ್ರಿಟಿಷರು ಮಾಡಿದ್ದರ ಕುರಿತಾಗಿ ಯಾರೂ ಚಿಂತಿಸಿಲ್ಲ. ಇದು ಬಹುಶಃ ಮಡಿಕೇರಿಯಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿತ್ತು. ಸ್ವತಃ ಭಾರತೀಯನೇ ತಿಳಿಸಿದ ಸಂಗತಿಯಿದು.

ಬ್ರಿಟಿಷರ ಹೊಸ ಕೃಷಿ ಪದ್ಧತಿಯಿಂದಾಗಿ ಸುಮಾರು 25 ಮಿಲಿಯನ್ ರೈತರು ಸಾವನ್ನಪ್ಪದರಲ್ಲಾ.. ಅದರ ಕುರಿತಾಗಿ ಯಾಕೆ ಯಾರೂ ಸೊಲ್ಲೆತ್ತಿಲ್ಲ?? ಅಕ್ಷರಶಃ ಚರ್ಮ ಹಾಗೂ ಎಲುಬುಗಳನ್ನು ಹೊಂದಿದ ಭಾರತೀಯರನ್ನು ಜೀವಂತವಾಗಿ ಸುಟ್ಟ ಚಿತ್ರಣವಾಗಿತ್ತದು. ಹಂತ ಹಂತವಾಗಿ ಪ್ರತಿಯೊಬ್ಬರೂ ಸಾಯುತ್ತಿದ್ದರು.

ಗುಲಾಮ ವ್ಯವಸ್ಥೆ ನಿರ್ಮೂಲನೆ ಆದ ಮೇಲೂ ಬ್ರಿಟಿಷರು ಲಕ್ಷಾಂತರ ಭಾರತೀಯನ್ನು ವಿದೇಶಕ್ಕೆ ರಫ್ತು ಮಾಡುತ್ತಿದ್ದರಲ್ಲಾ?? ಅದೂ ಹದಗೆಟ್ಟ ಹಡಗಿನಲ್ಲಿ. ಸ್ವತಃ ಪ್ರಯಾಣಿಸುವಾಗಲೇ ಅನೇಕರು ಅಸುನೀಗುತ್ತಿದ್ದರು. ಇದರ ಕುರಿತಾಗಿ ಕೂಡ ಯಾರೂ ಬಾಯಿ ಬಿಟ್ಟಿಲ್ಲ. ಅದಕ್ಕೆ ಕಾರಣವೂ ಅರಿಯದು.

ಹಿಂದೂಗಳ ಮೇಲೆ ಮುಸಲ್ಮಾನ ಆಕ್ರಮಣಕಾರರು ನಡೆಸಿದ ದೌರ್ಜನ್ಯದ ಕುರಿತಾಗಿ, ವಿಶೇಷವಾಗಿ ಬ್ರಾಹ್ಮಣರ ಮೇಲೆ ನಡೆಸಿದ ದಾಳಿಯ ಕುರಿತಾಗಿ ಯಾಕೆ ಎಲ್ಲ ಮೌನವಹಿಸಿದ್ದಾರೆ? ಅದೆಷ್ಟು ಹಿಂದೂಗಳನ್ನು ಹತ್ಯೆಗೈಯ್ಯಲಾಯಿತು ಹಾಗೂ ಗುಲಾಮಗಿರಿಗೆ ತಳ್ಳಳಾಯಿತು?? ಕೇವಲ ಮುಸಲ್ಮಾನರ ಕಪಿಮಿಷ್ಟಿಯಿಂದ ತಪ್ಪಿಸುವ ಸಲುವಾಗಿ ಎಷ್ಟು ಹಿಂದೂ ಮಹಿಳೆಯರು ಬೆಂಕಿಗೆ ಹಾರಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡರು?

ಆಶ್ಚರ್ಯಕರ ಸಂಗತಿಯೇನು ಗೊತ್ತಾ?? ಇವತ್ತು ಐಸಿಸ್ ಸಂಘಟನೆ ಮಾಡುತ್ತಿರುವುದು ಅಕ್ಷರಶಃ ಅದೇ ಚಟುವಟಿಕೆ. ಅವರಿಗೆ ಕೃತಜ್ಞತೆ ಸಲ್ಲಿಸಲೇ?? ಅರ್ಥವಾಗುತ್ತಿಲ್ಲ. ಯಾಕೆಂದರೆ ಹಿಂದೆ ಆಕ್ರಮಣಕಾರರು ಮಾಡಿ ಹೋದ ದುರಂತವನ್ನು ಇವತ್ತು ಇವರು ನೆನಪಿಸುತ್ತಿದ್ದಾರೆ. ಆದರೆ ಇದರ ಕುರಿತಾಗಿ ಎಡಪಂಥೀಯ ಹೋರಾಟಗಾರರೂ ಗೌರವಾನ್ವಿತ ಬ್ರಿಟಿಷ್ ರಾಜಕಾರಣಿಗಳೂ ಮೌನವಹಿಸಿದ್ದಾರೆ. ಅವರಿಗೆ ಇರುವುದು ಒಂದೇ ಚಿಂತೆ. ಭಾರತದಲ್ಲಿ ಭಯಾನಕ ಹಾಗೂ ಅಮಾನವೀಯ ಜಾತಿ ಪದ್ಧತಿಗಳು ಯಾಕಿವೆ?? ನೆನಪಿರಲಿ.. ಜಾತಿ ಅನ್ನುವುದು ಭಾರತೀಯ ಶಬ್ದವೇ ಅಲ್ಲ, ಅದೊಂದು ಪೋರ್ಚುಗೀಸ್‍ರ ಶಬ್ದ. ಆದರೆ ವಸಾಹತುಶಾಹಿಗಳು ಆ ಶಬ್ದವನ್ನು ಬಳಸಿ ಜಾತಿಗಳ ನಡುವೆ ವೈಮನಸ್ಸನ್ನು ಬೆಳೆಸಿ ಪರಸ್ಪರ ಜಗಳವಾಡಲು ಮುನ್ನುಡಿಯಿಟ್ಟರು. ಅವರ ಈ ನಡೆ ಅಕ್ಷರಶಃ ಯಶಸ್ವಿಯಾಯಿತು.

ನನ್ನ ಅಭಿಪ್ರಾಯ ಇಷ್ಟೇ. ಕ್ರಿಶ್ಚಿಯನ್ ಹಾಗೂ ಮುಸಲ್ಮಾನ ಮತಾಂಧರು ಮಾಡಿದ ದುರಂತವನ್ನು ಬ್ರಾಹ್ಮಣರು ಮಾಡಿದರೇ?? ಅಥವಾ ಅವರಿಗಿಂತ ಹೆಚ್ಚಾದ ಕ್ರೌರ್ಯವನ್ನು ಮರೆದರೇ?? ಯಾಕೆ ಸಮಾಜದಲ್ಲಿ ಅವರು ಇಷ್ಟೊಂದು ನಗಣ್ಯವಾಗಿ ಹೋದರು. ಕೆಳ ಜಾತಿಯವರೆಂದು ಪರಿಗಣಿಸಲ್ಪಟ್ಟ ಅದೆಷ್ಟು ಮಂದಿಯನ್ನು ಬ್ರಾಹ್ಮಣರು ಹತ್ಯೆ ಮಾಡಿದ್ದಾರೆ?? ಬ್ರಾಹ್ಮಣರು ಇಂತಹದ್ದೊಂದು ಪ್ರಮಾದ ಮಾಡಿದ್ದೇ ಆದಲ್ಲಿ ವೇದಗಳ ರಕ್ಷಣೆ ಮಾಡುವ ಹೊಣೆಯನ್ನು ಅವರು ಕಳೆದುಕೊಳ್ಳುತ್ತಿದ್ದರು.

ಜಾತಿ ವ್ಯವಸ್ಥೆಗಳ ಮೇಲೆಯಾಗುತ್ತಿರುವ ಆಕ್ರಮಣಗಳಿವು ಎಂಬ ಚಿಂತನೆ ಯಾಕೆ ಸಮಾಜದಲ್ಲಿ ಅಧಿಕವಾಗಿ ಬೇರೂರಿವೆ?? ಯಾರು ನಿಜವಾಗಿಯೂ ಪ್ರಮಾದವನ್ನು ಮಾಡಿದ್ದಾರೋ, ಮಾಡುತ್ತಿದ್ದಾರೋ, ಸಮಾಜದಲ್ಲಿ ಅವರ ಸುಳಿವು ಸಿಗದಿರಲೆಂಬ ಉದ್ದೇಶದಿಂದಲೇ ಇಂತಹ ಪಿತೂರಿಗಳು ನಡೆಯುತ್ತಿದೆಯೆಂಬ ಭಾವನೆ ನನ್ನದು. ಆದರೆ ಬ್ರಾಹ್ಮಣರು ಅದರಲ್ಲಿ ಪಾಲುದಾರರು ಅಲ್ಲವೇ ಅಲ್ಲವೆಂಬುದು ನನಗೆ ಅರಿವಿದೆ. ಬ್ರಾಹ್ಮಣರು ಅದೆಷ್ಟು ಬಡತನದಲ್ಲಿದ್ದರೂ ಅವರಿಗೆ ಯಾವುದೇ ಸಹಕಾರಗಳು ದೊರೆಯುತ್ತಿಲ್ಲ. ಕಾರಣ, ಅವರು ಬ್ರಾಹ್ಮಣರು..!!
ಆದರೆ ಇದೊಂದೇ ಕಾರಣವಲ್ಲ. ಬ್ರಾಹ್ಮಣರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಬೇಕು ಹಾಗೂ ಅವರ ಮೂಲ ಧರ್ಮದಿಂದ ಬೇರ್ಪಡಿಸಿ ವೇದಗಳ ಉಪದೇಶದ
ಪದ್ಧತಿಯನ್ನೇ ಸ್ಥಗಿತವಾಗಿಸಬೇಕೆಂಬುದು ಇನ್ನೊಂದು ಕಾರಣ. ಭಾರತದಲ್ಲಿ ವೇದಗಳಿಗೆ ಸ್ಥಾನವೇ ಸಿಗಬಾರದೆಂಬ ಚಿಂತನೆಯುಳ್ಳವರು ಮಾಡಿರುವ ಪಿತೂರಿಗಳಿವು. ಯಾಕೆಂದರೆ ಇದು ಕ್ರಿಶ್ಚಿಯನ್ ಹಾಗೂ ಇಸ್ಲಾಂ ಮತಾಂತರದ ಚಟುವಟಿಕೆಗಳಿಗೆ ಮಾರಕವಾಗಿ ಪರಿಣಮಿಸಬಹುದು. ಅವರ “ಬಹಿರಂಗ ಸತ್ಯ” ವನ್ನು ನಗ್ನಮಾಡಿಸಬಹುದೆಂಬ ಭಯವೋ ಗೊತ್ತಿಲ್ಲ. ಆದರೆ ವೇದಗಳು ಅವರ ಧರ್ಮಗಳಿಗೆ ಬಹಳ ದೊಡ್ಡ ತೊಡಕು ಎಂಬುದನ್ನು ಮಾತ್ರ ಅವರು ಅರಿತಿದ್ದಾರೆ.

ಬ್ರಾಹ್ಮಣರನ್ನು ಭೀತಿಗೊಳಿಸುವ ಚಟುವಟಿಕೆಯನ್ನು ನಿಲ್ಲಿಸಬೇಕಾದ ಅನಿವಾರ್ಯತೆ ಈಗ ಇದೆ. ಮುಸಲ್ಮಾನರ ಪರವಾಗಿ ಹೋರಾಡುತ್ತೇವೆಂದವರ ಕ್ರೌರ್ಯ ಹೇಗಿದೆ ಗೊತ್ತಾ?? ದಾಳಿಕಾರರ ಲೈಂಗಿಕ ಬಯಕೆಯನ್ನು ತೀರಿಸಲು ವಿಫಲವಾದ 19 ಯಾಝ್ದಿ ಮಹಿಳೆಯರನ್ನು ಕಬ್ಬಿಣದ ಪಂಜರದಲ್ಲಿ ಕೂಡು ಹಾಕಿ ಜೀವಂತವಾಗಿ ಸಮಾಧಿ ಮಾಡಿದ ಸಂಘಟನೆ ಐಸಿಸ್. ಅಲ್ಲಿಗೆ ಯಾವುದೇ ಭಾವನಾತ್ಮಕವಾದ ಬಣ್ಣಗಳನ್ನೂ ಹಚ್ಚಲಾಗಿಲ್ಲ. ದುರಂತವಲ್ಲವೇ ಇದು?

ಹಲವು ಸಮಯಗಳ ತರುವಾಯ ದಕ್ಷಿಣ ಭಾರತದ ಒಂದು ದೇವಾಲಯದಲ್ಲಿ ಬ್ರಾಹ್ಮಣ ದಂಪತಿಯನ್ನು ನಾನು ಭೇಟಿಯಾಗಿದ್ದೆ. ಅವರಿಗೆ ಘನತೆಯಿತ್ತು , ಆದರೆ ತೆಳ್ಳಗಿದ್ದರು. ಪ್ರಸಾದಗಳನ್ನು ಹಂಚುವ ಸಂದರ್ಭದಲ್ಲಿ ಅವರು ನನಗಿಂತ ಮುಂದೆ ಸಾಲಲ್ಲಿ ನಿಂತಿದ್ದರು. ಆದರೆ ಕೆಲವು ಸಮಯಗಳ ನಂತರ ಪುನಃ ಸಾಲಿನ ಹಿಂಬದಿಯಲ್ಲಿ ನಿಂತಿದ್ದರು. ಹಾ.. ಹಸಿವಿನ ಪ್ರಖರತೆಯದೆಂದು ನನಗೆ ಆಗ ಅರಿವಾಯಿತು.

ಬ್ರಾಹ್ಮಣರು ಯಾವುದೇ ರೀತಿಯಲ್ಲಿ ಅಪರಾಧ ಭಾವನೆಯಿಂದ ಬದುಕುವ ಅಗತ್ಯವಿಲ್ಲ. ಬದಲಾಗಿ ಹೆಮ್ಮೆಯಿಂದ ತಲೆಯೆತ್ತಿ ಜೀವನ ನಡೆಸಬೇಕು. ಆದರೆ ಲಜ್ಜೆಗೆಟ್ಟ ಇತರರು ಚಿಂತಿಸಬೇಕಾದ ಅನಿವಾರ್ಯತೆಯೂ ಇಲ್ಲ. ಎಡಪಂಥೀಯರ ಹೋರಾಟಗಾರರು ಅವರ ಕುರಿತಾಗಿ ಕಿಂಚಿತ್ತೂ ಚಿಂತಿಸಲ್ಲ ಬಿಡಿ!!

ಮೂಲ : ಮರಿಯಾ ವ್ರಿಥ್

ಅನುವಾದ : ವಸಿಷ್ಠ

Tags

Related Articles

Close