ಅಂಕಣದೇಶಪ್ರಚಲಿತ

ಜಿಪಿಎಸ್ ತಂತ್ರಜ್ಞಾನದ ಮೂಲಕ ಮದ್ರಸಾಗಳಿಗೆ ಕಣ್ಗಾವಲು!!! ಭಯೋತ್ಪಾದನೆ ಮಟ್ಟ ಹಾಕಲು ಯೋಗೀಜಿ ದಿಟ್ಟ ಹೆಜ್ಜೆ!!

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ದೇಶದಲ್ಲಿ ಭಯೋತ್ಪಾದನೆಯನ್ನು ಮಟ್ಟ ಹಾಕಲು ಹೊಸತೊಂದು ಕಾರ್ಯಕ್ಕೆ ಮುಂದಾಗಿದ್ದಾರೆ. ಮದರಸಾಗಳಲ್ಲಿ ಏನೆಲ್ಲಾ ಚಟುವಟಿಕೆ ನಡೆಯುತ್ತದೆ ಎಂದು ಯಾರಿಗೂ ಗೊತ್ತಿರುವುದಿಲ್ಲ. ಅದಕ್ಕಾಗಿಯೇ ಅವರು ಈ ಬಾರಿ ಉತ್ತರ ಪ್ರದೇಶ ಸರಕಾರದ ಎಲ್ಲಾ ಮದ್ರಸಾಗಳ ಮೇಲೆ ಕಣ್ಗಾವಲು ಇಡಲು ನಿರ್ಧರಿಸಿದ್ದಾರೆ.
ಜಿಪಿಎಸ್ ತಂತ್ರಜ್ಞಾನದ ಮೂಲಕ ರಾಜ್ಯದ 16,000  ಮದರಸಾಗಳ ಮೇಲೆ ಕಣ್ಗಾವಲು ಇಡಲಾಗುತ್ತದೆ. 
ಮದರಸಾದ ಶಿಕ್ಷಣದ ಗುಣಮಟ್ಟ ಕಾಪಾಡಲು, ಮದರಸಾಗಳಲ್ಲಿ ನಡೆಯುವ ಕಾರ್ಯಚಟುವಟಿಕೆಗಳು ಪಾರದರ್ಶಕವಾಗಿರಬೇಕು ಹಾಗೂ ಶಿಕ್ಷಣದ ಹೆಸರಲ್ಲಿ ಕೆಲವು ನಕಲಿ ವಿದ್ಯಾರ್ಥಿಗಳು ವಾಸ್ತವ್ಯ ಹೂಡಿರುವುದನ್ನು ತಪ್ಪಿಸಲು ಈ ಕೆಲಸವನ್ನು ನಿರ್ವಹಿಸಲಾಗುತ್ತದೆ ಎಂದು ಯೋಗೀಜಿ ವಿವರಿಸಿದ್ದಾರೆ. 
ದೇಶದಲ್ಲಿ ಹಲವಾರು ವಿಧ್ವಂಸಕ ಕೃತ್ಯಗಳು ನಡೆಯುತ್ತಿದೆ. ಹಲವಾರು ಸ್ಫೋಟಗಳು ಸಂಭವಿಸಿ ಹಲವರ ಪ್ರಾಣ ಹರಣವಾಗಿದೆ. ಉಗ್ರವಾದದ ಕಾರಯೋಜನೆಗಳು, ಕಾರ್ಯನಿರ್ವಹಣೆ ಎಲ್ಲಿ ನಡೆಯುತ್ತದೆ ಎಂದು ಸ್ಪಷ್ಟವಾಗಿ ಗೊತ್ತಿರಲಿಲ್ಲ. ಈ ಎಲ್ಲಾ ಕಾರ್ಯಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಡುವ ಸಲುವಾಗಿ ಮದ್ರಸಾಗಳ ಕಣ್ಗಾವಲು ನಡೆಸಿ, ಯೋಗಿ ಆದಿತ್ಯನಾಥ್ ಸರಕಾರ ಮಹತ್ತರ ಹೆಜ್ಜೆ ಇಟ್ಟಿದೆ ಎಂದೇ ಹೇಳಬಹುದು.
ಯೋಗೀ ಆದೇಶದ ಬಗ್ಗೆ ಹೇಳುವುದಾದರೆ, ಎಲ್ಲಾ ಮದ್ರಸಾಗಳ ಹೆಸರುಗಳನ್ನು ಸ್ಪಷ್ಟವಾಗಿ ಹಿಂದಿಯಲ್ಲಿ ಬರೆಯಬೇಕು, ಮದ್ರಸಾಗಳನ್ನು ತೆರೆಯುವ ಸಮಯ, ಮುಚ್ಚುವ ಸಮಯಗಳನ್ನು ಸ್ಪಷ್ಟವಾಗಿ ಫಲಕಗಳಲ್ಲಿ ಬರೆಯಬೇಕು ಎಂದು ಯೋಗಿ ಸರಕಾರದ ಸಚಿವ ಬುಲ್ದೇವ್ ಸಿಂಗ್ ಓಲ್ಖ್ ತಿಳಿಸಿದ್ದಾರೆ. ಬುಲ್ದೇವ್ ಸಿಂಗ್ ವಿವರಿಸಿದ ಪ್ರಕಾರ, ಹೆಚ್ಚಿನ ಜನರಿಗೆ ಮದ್ರಸಾ ಎಂದರೆ ಏನೆಂದೇ ಗೊತ್ತಿಲ್ಲ. ಈ ಆದೇಶದಿಂದ ಮದ್ರಸಾ ಅಂದ್ರೆ ಏನೆಂದು ಎಲ್ಲರಿಗೂ ಸುಲಭವಾಗಿ ಗೊತ್ತಾಗುತ್ತದೆ. ಮದ್ರಸಾ ಆರಂಭ ಮತ್ತು ಮುಚ್ಚುವ ಸಮಯವನ್ನು ಸ್ಪಷ್ಟವಾಗಿ ತಿಳಿಸಬೇಕೆಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಇದುವರೆಗೆ ಮಸೀದಿಗಳಲ್ಲಿ ಏನನ್ನು ಕಲಿಸಲಾಗುತ್ತದೆ, ಮುಖ್ಯವಾಗಿ ಅಲ್ಲಿ ಕಲಿಸುವ ಮೌಲ್ವಿಗಳ್ಯಾರು, ಎಷ್ಟು ವಿದ್ಯಾರ್ಥಿಗಳಿದ್ದಾರೆ, ಯಾವ ವಿಷಯದ ಬಗ್ಗೆ ಕಲಿಸಲಾಗುತ್ತದೆ ಎಂದು ಒಂದೂ ಗೊತ್ತಾಗುತ್ತಿರಲಿಲ್ಲ. ಮದ್ರಸಾಗಳಲ್ಲಿ ಭಯೋತ್ಪಾದನೆಯ ವಿಷಬೀಜಗಳನ್ನು ಬಿತ್ತಲಾಗುತ್ತಿದೆ ಎಂಬ ಆರೋಪ ಈ ಹಿಂದಿನಿಂದಲೂ ಇತ್ತು. ಹಲವಾರು ಸ್ಫೋಟ ಸಂಭವಿಸಿದ ಮೇಲೆ ಅದರ ನಂಟು ಮದ್ರಸಾಗಳಲ್ಲಿ ಬೆಸೆದುಕೊಂಡಿರುವುದು ಕಂಡುಬಂದಿತ್ತು. ಆದ್ದರಿಂದ ಭಯೋತ್ಪಾದನೆಯನ್ನು ಮಟ್ಟ ಹಾಕಲು ಈ ಆದೇಶ ಉತ್ತಮವಾಗಿ ಕಾರ್ಯನಿರ್ವಹಿಸಬಲ್ಲುದು ಎಂದು ನಂಬಲಾಗಿದೆ. 
ಇಲ್ಲೊಂದು ಗಮ್ಮತ್ತಿನ ವಿಷಯ ನಡೆಯಿತು. ಮದ್ರಸಾಗಳ ಕಣ್ಗಾವಲು, ಅವುಗಳ ಆಧುನೀಕರಣ ಇತ್ಯಾದಿಗಳನ್ನು ಸ್ವಾಗತಿಸುವುದನ್ನು ಬಿಟ್ಟು ಕೆಲವು ಮುಸ್ಲಿಂ ಮೂಲಭೂತವಾದಿಗಳು ಸರಕಾರದ ನಿರ್ಧಾರವನ್ನು ಖಂಡಿಸಿದ್ದಾರೆ. ಅಲ್ಪಸಂಖ್ಯಾತ ಟ್ರಂಪ್ ಕಾರ್ಡನ್ನು ಪ್ರಯೋಗಿಸುವ ಮುಸ್ಲಿಂ ಮೂಲಭೂತವಾದಿಗಳು ಇದು ಅಲ್ಪಸಂಖ್ಯಾತರನ್ನು ನಿಗ್ರಹಿಸಲು ಸರಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಕೆಂಡಕಾರಿದ್ದಾರೆ. ಮುಂದಿನ ದಿನಗಳಲ್ಲಿ ಮದ್ರಸಾಗಳಲ್ಲಿ ಅಕ್ರಮ ಚಟುವಟಿಕೆಗಳನ್ನು ನಡೆಸಲಾಗುವುದಿಲ್ಲವಲ್ಲಾ ಅದಕ್ಕಾಗಿಯೇ ಈ ರೀತಿ ಅವರು ಖಂಡಿಸಿದ್ದಾರೆ ಎಂದು ಸ್ಪಷ್ಟವಾಗಿ ನಂಬಬಹುದಾಗಿದೆ.
ಉತ್ತರ ಪ್ರದೇಶ ಈ ಮುಂಚೆ ಒಂದು ಆದೇಶವನ್ನು ಹೊರಡಿಸಲಾಗಿತ್ತು. ಎಲ್ಲಾ ನೋಂದಾಯಿತ ಮದ್ರಸಾಗಳಲ್ಲಿ ಆಗಸ್ಟ್ 15ರಂದು ಕಡ್ಡಾಯವಾಗಿ ರಾಷ್ಟ್ರಹಾಡನ್ನು ಹಾಡಬೇಕು ಎಂದು ಆದೇಶಿಸಿದ್ದರು. ಅಲ್ಲದೆ ಅಲ್ಲಿ ದಿನವಿಡೀ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಿ, ಎಲ್ಲಾ ಕಾರ್ಯಕ್ರಮದ ವಿಡಿಯೋ ಚಿತ್ರೀಕರಣ ಮಾಡಬೇಕೆಂದು ಆದೇಶಿಸಿದ್ದರು. 
ಮದ್ರಸಾ ಕಣ್ಗಾವಲು ವ್ಯವಸ್ಥೆಯ ಬಗ್ಗೆ ಮಾತಾಡುವ ಬುಲ್ದೇವ್ ಸಿಂಗ್ ಬಿಜೆಪಿ ಸರಕಾರವು ಮುಸ್ಲಿಮರ ಕಲ್ಯಾಣಕ್ಕಾಗಿ ಕಟಿಬದ್ಧವಾಗಿದೆ.  ಈ ದಿಕ್ಕಿನಲ್ಲಿ ಮತ್ತಷ್ಟು ಬದಲಾವಣೆಗಳನ್ನು ಬಿಜೆಪಿ ಸರಕಾರ ಹಮ್ಮಿಕೊಳ್ಳಲಿದೆ. ಶಿಕ್ಷಣದಲ್ಲಿ ಇನ್ನಷ್ಟು ಪಠ್ಯವಿಷಯಗಳನ್ನು ಸೇರ್ಪಡೆಗೊಳಿಸಲಿದೆ. ಅಲ್ಲದೆ ಶಿಕ್ಷಣದ ಗುಣಮಟ್ಟದ ಸುಧಾರಣೆ ಕೈಗೊಳ್ಳಲಿದೆ ಎಂದು ಅವರು ವಿವರಿಸಿದ್ದಾರೆ. 
ಸರಕಾರ ಆದೇಶ ನೀಡಿದ್ದು, ಈ ಆದೇಶದ ಬಗ್ಗೆ ಈಗಾಗಲೇ ಮೌಖಿಕವಾಗಿ ತಿಳಿಸಲಾಗಿದೆ ಎಂದು ವಿವರಿಸಿದ್ದಾರೆ.  ಮದ್ರಸಾದ ಹೆಸರನ್ನು ಹಿಂದಿಯಲ್ಲಿ ಬರೆಯುವುದು, ಮದ್ರಸಾ ಮುಚ್ಚುವುದು, ತೆರೆಯುವುದು ಹಿಂದಿಯಲ್ಲಿ ಬರೆಯುವುದು ಇತ್ಯಾದಿಗಳನ್ನು ಈಗಾಗಲೇ ಆರಂಭಿಸಲಾಗಿದೆ. ಉರ್ದಿನಲ್ಲಿ ಬರೆದಿರುವುದನ್ನು ಅಳಸುವ ಕೆಲಸವೂ ನಡೆಯುತ್ತಿದೆ. 
ಇಡೀ ದೇಶದ ಮದ್ರಸಾಗಳ ಕಣ್ಗಾವಲು ಅವಶ್ಯಕ:
ಉತ್ತರಪ್ರದೇಶ ಆದೇಶಿಸಿದ ಈ ಆದೇಶ ಇಡೀ ಭಾರತದಲ್ಲೇ ಜಾರಿಗೊಳಿಸಬೇಕು. ಇದರಿಂದ ಮದ್ರಸಾಗಳಲ್ಲಿ ನಡೆಯವಂಥಾ ಅಕ್ರಮ ಚಟುವಟಿಕೆಗಳನ್ನು ಬೆಳಕಿಗೆ ತರಬಹುದಾಗಿದೆ. ಯಾಕೆಂದರೆ ಇಲ್ಲಿ ಹಲವಾರು ಮದ್ರಸಗಳಿದ್ದು ಅಲ್ಲಿ ಏನು ಕಲಿಸಲಾಗುತ್ತದೆ ಎಂದು ಯಾರಿಗೂ ಗೊತ್ತಿಲ್ಲ. ಮದ್ರಸಾಗಳ ಒಳಹೋಗುವುದೇ ಒಂದು ಅಪರಾಧ ಎಂದು ಮುಸ್ಲಿಂ ಮೂಲಭೂತವಾದಿಗಳು ವರ್ತಿಸುತ್ತಾರೆ. ಭಯೋತ್ಪಾದನೆಯನ್ನು ಮಟ್ಟಹಾಕಲು ಮದ್ರಸಾಗಳ ಮೇಲೆ ಕಣ್ಗಾವಲು ಇಡುವುದು ಅವಶ್ಯಕತೆಯಾಗಿದೆ. ಯೋಗೀಜಿಯವರ ಈ ಕಟ್ಟುನಿಟ್ಟಿನ ಆದೇಶವನ್ನು ದೇಶವ್ಯಾಪಿ ಜಾರಿಗೊಳಿಸುವುದು ಇಂದಿನ ಅವಶ್ಯಕತೆಗಳಲ್ಲಿ ಒಂದಾಗಿದೆ. 
– ಚೇಕಿತಾನ
Tags

Related Articles

Close