ಅಂಕಣ

ಜೋಕೆ!!!! ಕಾಂಗ್ರೆಸ್ ನ ಬದಲಾಗದ ತಂತ್ರ! ಹಿಂದೂ ಮತಗಳನ್ನು ಗಳಿಸಲು ಹಿಂದುತ್ವದ ಆಮಿಷ! ಕೊನೆಗೆ ಹಿಂದೂ ವಿರೋಧಿ ಆಡಳಿತ!

ನಮ್ಮಲ್ಲಿ ಯಾವ ಯಾವ ತರದ ಮನುಷ್ಯರು ಇದ್ದಾರೆ ಎಂದು ಗೊತ್ತಾಗುತ್ತಿಲ್ಲ ಯಾಕೆಂದರೆ, ಮೂರ್ಖತನಕ್ಕೆ ಮಿತಿಗಳಿವೆ ಆದರೆ ಜನರನ್ನು ಮೋಸಗೊಳಿಸುವುದಕ್ಕೇ ಮಾತ್ರ ಮಿತಿಯೇ ಇಲ್ಲ!! ಹೌದು ಯಾಕೆಂದರೆ ಮನುಷ್ಯ ಮನುಷ್ಯನಿಗೆ ಮಾಡುವ ಮೋಸ ಎಲ್ಲಿ ತನಕ ಎಂದರೆ ಅದಕ್ಕೆ ಕೊನೆಯೇ ಇಲ್ಲ!! ಸಾಮಾನ್ಯ ಜನರನ್ನು ಪವಿತ್ರವಾದ ಹಿಂದೂ ಧರ್ಮವನ್ನು ಇಟ್ಟುಕೊಂಡು ಮೋಸ ಮಾಡ್ತಾರೆ ಎಂದರೆ ನೀವು ನಂಬ್ತೀರಾ?

ಹೌದು…ಆರು ದಶಕಗಳ ಕಾಲ ಭಾರತವನ್ನು ಲೂಟಿ ಮಾಡಿದ ನಂತರ ಅಲ್ಪಸಂಖ್ಯಾತರನ್ನು ಸಂತುಷ್ಟಗೊಳಿಸಿ ಅವರ ಮತವನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ಸಿಯಾಗಿದ್ದು ಎಲ್ಲರಿಗೂ ತಿಳಿದ ವಿಚಾರ. ಅಷ್ಟೇ ಅಲ್ಲದೇ ಕ್ರಿಶ್ಚಿಯನ್ ಮಿಶನರಿಗಳಿಗೆ ನಮ್ಮ ದೇಶದಲ್ಲಿ ಸಾಕಷ್ಟು ವ್ಯವಸ್ಥೆಯನ್ನು ಕಲ್ಪಿಸಿ, ಕೇವಲ ಮತಕ್ಕಾಗಿ ಅವರನ್ನು ತನ್ನ ತೊಳತೆಕ್ಕೆಯಲ್ಲಿ ಬಂದಿಸಲ್ಪಟ್ಟ ರಾಜಕೀಯ ಪಕ್ಷಗಳ ವಿಚಾರ ಗೊತ್ತಿದೆ. ಅಷ್ಟೇ ಅಲ್ಲದೇ ಇವೆಲ್ಲವೂ ಸಾಮಾಜಿಕ ಸೇವೆಯಿಂದ ತಮ್ಮ ಕಡೆ ಮತವನ್ನು ಎಳೆಯುವ ಹುನ್ನಾರ!!

ಆದರೆ ಈ ಒಂದು ಬ್ಯಾನರ್ ಕೆಲವು ವರ್ಷಗಳ ಹಿಂದೆ ನಡೆದಿರುವ ವಿಚಾರವಾದರೂ ಕೂಡ, ಇಂತಹ ವಿಚಾರಗಳು ಪ್ರತಿದಿನವೂ ತನ್ನ ರಾಜಕೀಯ ತಂತ್ರಗಳಿಗೆ ಬಳಸಿಕೊಂಡು ಸಾಮಾನ್ಯ ಜನರಿಗೆ ಮೋಸ ಮಾಡುತ್ತಿದ್ದಾರೆ. ಆದರೆ ಮೋಸ ಮಾಡುವ ಪ್ರವೃತಿ ಮಾತ್ರ ಇನ್ನೂ ಬದಲಾಗಿಲ್ಲ!!

ಕೆಲವು ಸಮಯಗಳ ಹಿಂದೆ ಮದರ್ ಸೋನಿಯಾ ಗಾಂಧಿ ವಲ್ರ್ಡ್ ವೆಲ್‍ಫೇರ್ ಕಮಿಟಿ ನಡೆಸಿರುವ ರಾಜಸೂ ಮಹಾ ಯಾಗ ಕೆಲವೊಂದು ಗೊಂದಲಗಳನ್ನು ಸೃಷ್ಟಿಸಿದೆ ಎಂದರೆ ತಪ್ಪಾಗಲಾರದು!! ಯಾಕೆಂದರೆ ದುರ್ಬಲ ಜನರನ್ನು ಹೆದರಿಸಿ, 3ನೇ ವಿಶ್ವ ಯುದ್ದವನ್ನು ಎದುರಿಸಲು ಮುಂದಾಗಿದ್ದು, ಶತ್ರುಗಳನ್ನು ಸದೆ ಬಡೆಯಲು ಯಾಗವನ್ನು ಮಾಡಲು ಹೋರಟಿದ್ದರು!! ಆದರೆ ಈ ಯಾಗವು ವಿಶ್ವಯುದ್ದವನ್ನು ಜಯಿಸಲು ಸಾಧ್ಯವಾಗುತ್ತದೆ ಎಂದು ಹೇಳುವುದು ಸಂಪೂರ್ಣವಾಗಿ ಅಸಂಬಧ್ಧವಾಗಿದೆ.

ಈ ಒಂದು ಬ್ಯಾನರ್ ಬಗ್ಗೆ ವಿಶ್ಲೇಷಣೆ ನೀಡುವುದಾದರೆ:

ಸೋನಿಯಾ ಗಾಂಧಿ ಕ್ರಿಶ್ಚಿಯನ್ ಮತ್ತು ಅವರು ಹಿಂದೂ ಧರ್ಮದ ಬೆಂಬಲಿಗರಲ್ಲ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ!!

ಆದರೆ ಹಿಂದೂಗಳು ಯಜ್ಞ ಯಾಗಾದಿಗಳ ಮೇಲೆ ಧಾರ್ಮಿಕ ಆಚರಣೆಗಳಲ್ಲಿ ಅಪೂರ್ವವಾದ ನಂಬಿಕೆಯನ್ನು ಇಟ್ಟಿದ್ದಾರೆ. ಮಹಾಭಾರತದಲ್ಲಿ ವಿವರಿಸಿದಂತೆ ರಾಜಸೂ ಮಹಾ ಯಾಗವನ್ನು ಒಬ್ಬ ಚರ್ಕವರ್ತಿ ಮಾಡುತ್ತಾನೆ ಯಾಕೆಂದರೆ ತನ್ನನ್ನು ತಾನು ಶಕ್ತಿಯುತ ಎಂದು ಪರಿಗಣಿಸುವ ಸಲುವಾಗಿ ಮಾಡುತ್ತಾನೆ ಎಂದು ಹೇಳಲಾಗಿದೆ.

ಆದರೆ ಈ ಬಗ್ಗೆ ಕಾಂಗ್ರೆಸ್ ಜನರ ಉಲ್ಲೇಖದ ಪ್ರಕಾರ, ಯಾಗವು 3ನೇ ವಿಶ್ವಯುದ್ದದಲ್ಲಿ ಬೃಹತ್‍ಮಟ್ಟದ ಪರಕೀಯ ಮಿಲಿಟರಿಯನ್ನು ಸದೆ ಬಡಿಯಲು ಮಾಡುವ ತಂತ್ರವಾಗಿದೆ. ಅಷ್ಟೇ ಅಲ್ಲದೇ ನ್ಯೂಕ್ಲಿಯರ್ ಯುದ್ದದಿಂದ ಜನರನ್ನು ರಕ್ಷಿಸುವ ಒಂದು ತಂತ್ರ ಎಂದು ಹೇಳಿದೆ. ಆದರೆ ಇದು ಹಿಂದೂ ಧರ್ಮವನ್ನು ಹಾಸ್ಯಾಸ್ಪದಗೊಳಿಸುವಲ್ಲಿ ಕಾರಣವಾಗಿದೆ ಮಾತ್ರವಲ್ಲದೇ ಪ್ರಪಂಚದ ಮುಂದೆ ಕಳಪೆ ಮಟ್ಟವನ್ನು ತೋರಿಸುವ ಪ್ರಯತ್ನ ಎಂದರೆ ತಪ್ಪಾಗಲಾರದು!!

ಇಂತಹ ಆಚರಣೆಗಳನ್ನು ಹಿಂದುಗಳು ಯಾಕೆ ಮಾಡುತ್ತಿದ್ದರು ಎಂದು ಹಿಂದೂಗಳಿಗೆ ತಿಳಿದೆ ಆದರೆ ಹಿಂದೂ ಧರ್ಮದ ಹಾಗೂ ಆಚರಣೆಗಳ ಬಗ್ಗೆ ಪರಿಚಯವೇ ಇಲ್ಲದವರು ಅತಿರೇಕದ ಆಚರಣೆ ಎಂದು ಗೇಲಿ ಮಾಡುತ್ತಾರೆ. ಯಾಕೆಂದರೆ ಯಜ್ಷಯಾಗಾದಿ ಎಂದರೆ ಏನು ಅಂತಲೇ ತಿಳಿಯದವರು ಇದನ್ನು ಮಾಡಿದ್ದಾರೋ ಯಾಕೆ?

ಈ ಬ್ಯಾನರ್ ಕೆಲವು ಉದ್ದೇಶಗಳಿಗಾಗಿ ಕಾರ್ಯನಿರ್ವಹಿಸುತ್ತದೆ:

ಹಿಂದೂ ಧಾರ್ಮಿಕ ಆಚರಣೆಗಳ ಬಗ್ಗೆ ತಿಳಿದಿಲ್ಲದವರು ಇದನ್ನೆಲ್ಲಾ ಹೇಗೆ ನಿಜವೆಂದು ಒಪ್ಪಿಕೊಳ್ಳುತ್ತಾರೋ ಗೊತ್ತಿಲ್ಲ!! ಆದರೆ ಸೋನಿಯಾ ಗಾಂಧಿಯವರು ಹಿಂದೂ ಧರ್ಮದ ಬೆಂಬಲಿಗರಾಗಿದ್ದಾರೆ ಎನ್ನುವುದನ್ನು ನಂಬಿಸಲು ಇಂತಹ ಆಲೋಚನೆಗಳು ಇವರ ಮನಸ್ಸಿನಲ್ಲಿ ಓಡಾಡುತ್ತೆ!!. ಅಷ್ಟೇ ಅಲ್ಲದೇ ಭಾರತವನ್ನು ರಕ್ಷಿಸಲು ಹಿಂದೂ ಧರ್ಮದ ಬೆಂಬಲಿಗರು ಎನ್ನುವುದನ್ನು ತೋರ್ಪಡಿಸುವ ಯತ್ನಗಳು ನಡೆಯುತ್ತಿವೆ ಯಾಕೆಂದರೆ ಕೇವಲ ಓಟಿಗಾಗಿ !!!

ಮುಗ್ಧ ಜನರು ನಾವು ಮೂರನೇ ವಿಶ್ವಯುದ್ದದ ಅಂಚಿನಲ್ಲಿದ್ದೇವೆ ಎಂದು ನಂಬುತ್ತಾರೆ. ಭಯ ಮತ್ತು ಹತಾಶೆಯಿಂದ ಜನರು ಇಂತಹ ಕಲಾವಿದರನ್ನು ಉಳಿಸಲು ಜೀವನವನ್ನೇ ತ್ಯಾಗಮಾಡುತ್ತಾರೆ. ವಿಪರ್ಯಾಸ ಎಂದರೆ ಭಾರತದ ಕಾಂಗ್ರೆಸ್‍ನ ಗದ್ದುಗೆಯನ್ನು ಹಿಡಿದವರಿಗೆ ಹಿಂದೂ ಧರ್ಮದ ಬಗ್ಗೆ ಪರಿಚಯವೇ ಇಲ್ಲ ಎಂದ ಮೇಲೆ ಇದೊಂದು ಹಾಸ್ಯಾಸ್ಪದ ವಿಚಾರವಲ್ಲದೇ ಇನ್ನೇನು??

ಕರ್ನಾಟಕವು ಕಾಂಗ್ರೆಸ್ ಆಳ್ವಿಕೆಯ ರಾಜ್ಯವಾಗಿದ್ದು, ಈಗಾಗಲೇ ಅಲ್ಪಸಂಖ್ಯಾತರನ್ನು ಸಂತೃಪ್ತಿಪಡಿಸುವಲ್ಲಿ ಹೆಸರುವಾಸಿಯಾಗಿದೆ. ಇವರು ಹಿಂದೂ ದೇವಾಲಯಗಳಿಂದ ಮದ್ರಸಗಳಿಗೆ ಮತ್ತು ಕ್ರಿಶ್ಚಿಯನ್ ಮಿಶಿನರಿಗಳಿಗೆ ಸಕ್ರೀಯವಾಗಿ ಸಂಪತ್ತನ್ನು ನೀಡುವ ಉದಾರಿಗಳೆಂದೆನಿಸಿದ್ದಾರೆ. ಇಲ್ಲಿ ಹಿಂದೂ ಧರ್ಮವನ್ನು ಅಭ್ಯಾಸ ಮಾಡುವುದು ಬಹಳ ಕಳಪೆ ರೀತಿಯಲ್ಲಿ ಪರಿಗಣಿಸಲಾಗುತ್ತಿದೆ. ಹಾಗಾಗಿ ಇಂತಹ ಯಾಗಗಳನ್ನು ಹಿಂದೂ ಧರ್ಮದ ಗಂಧ ಗಾಳಿ ಇಲ್ಲದವರು ಮಾಡಿದರೆ ಇದನ್ನು ನಂಬುವುದಾದರೂ ಹೇಗೆ?

ಜನಸಾಮಾನ್ಯರಿಗೆ, ಕಾಂಗ್ರೆಸ್ ಈ ಮೂಲಕ ಮರಳು ಮಾಡುವ ಪ್ರಯತ್ನ ನಡೆಸಿದ್ದು, ಈ ಬಗ್ಗೆ ಕಾಂಗ್ರೆಸ್ ಕಲಾಕಾರರಿಗೆ ಹಿಂದೂ ಧರ್ಮದ ನೈಜ ಉದ್ದೇಶವನ್ನು ಅರ್ಥಮಾಡಿಸಿಕೊಳ್ಳುವುದು ಅತಿ ಮುಖ್ಯವಾಗಿದೆ. ಇಂತಹ ಪವಿತ್ರ ಧರ್ಮವನ್ನು ಅಪವಿತ್ರಗೊಳಿಸುವುದು ಸರಿಯಲ್ಲ ಯಾಕೆಂದರೆ ರಾಜಸೂ ಮಹಾ ಯಾಗ ಪವಿತ್ರವಾದ ಯಾಗವಾಗಿದ್ದು ತಮ್ಮ ಓಟಿಗೋಸ್ಕರ ಇಂತಹ ಅನೇಕ ಯಾಗಗಳನ್ನು ಮಾಡುವುದು ಸೂಕ್ತವಲ್ಲ. ಹಿಂದೂ ಧರ್ಮಕ್ಕೆ ಅದರದೇ ಆದ ಪುರಾತನ ತತ್ವಗಳಿವೆ ಅದನ್ನು ಕಾಪಾಡಿಕೊಳ್ಳಬೇಕಾದದ್ದು ಪ್ರತಿಯೊಬ್ಬನ ಕರ್ತವ್ಯ!!

– ಅಲೋಖಾ

Tags

Related Articles

Close