ಪ್ರಚಲಿತ

ಟಿಪ್ಪುವನ್ನು ಓಲೈಸುವ ಮತಾಂಧ ಸಿದ್ಧರಾಮಯ್ಯನ ಸರಕಾರಕ್ಕೆ ಅನಂತ್ ಕುಮಾರ ಹೆಗಡೆ ಚಾಟಿ ಬೀಸಿದ್ದು ಹೇಗೆ ಗೊತ್ತೇ?!

ಟಿಪ್ಪು ಒಬ್ಬ ಮತಾಂಧ ಕ್ರೂರಿ!! ಸಾಮೂಹಿಕ ಅತ್ಯಾಚಾರಿ!!

ಸತ್ಯದ ಮಾತುಗಳನ್ನಾಡಲೂ ಸಹ ತಾಕತ್ತು ಬೇಕು ಸ್ವಾಮಿ! ಕೇಂದ್ರ ಕೌಶಲಾಭಿವೃದ್ಧಿ ಸಚಿವ ಅನಂತಕುಮಾರ್ ಹೆಗಡೆ ಅವರು ವಿವಾದಾತ್ಮಕ ಟ್ವೀಟ್ ಮಾಡಿದ್ದಾರಷ್ಟೇ!

ತಮ್ಮ ಟ್ವೀಟ್ ನಲ್ಲಿ ಕರ್ನಾಟಕ ಸರಕಾರವನ್ನೂ ಹ್ಯಾಷ್ ಟ್ಯಾಗ್ ಮಾಡಿರುವ ಹೆಗಡೆ, “ಟಿಪ್ಪು ಜಯಂತಿಯನ್ನು ವೈಭವೀಕರಣ ಮಾಡುವುದು ನಾಚಿಕೆಗೇಡಿನ ಸಂಗತಿ ಎಂದಿರುವ ಅನಂತ್ ಕುಮಾರ್ ಹೆಗಡೆ ಟಿಪ್ಪು ಜಯಂತಿ ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಹಾಕದಂತೆ ಹೇಳಿದ್ದಾರೆ!

ಐವಾನ್ ಡಿಸೋಜಾ ಎಂಬ ಊಸರವಳ್ಳಿ!!!

ಈ ವಿಚಾರವಾಗಿ ಕಾಂಗ್ರೆಸ್ ಮುಖಂಡ ಐವಾನ್ ಡಿಸೋಜಾ,”ದೇಶದಲ್ಲಿ ಶಾಂತಿ ಸುವ್ಯವಸ್ಥೆ ಕೆಡಿಸುವುದೇ ಅವರ ಉದ್ದೇಶ” ಎಂದಿದ್ದಾರೆ! “ಜೊತೆಗೆ ರಾಜಕೀಯಕ್ಕಾಗಿ ಈ ತರಹ ಹೇಳುವುದು ಸರಿಯಲ್ಲ” ಎಂದಿರುವac ಡಿಸೋಜಾರಿಗೆ ರಾಜಕೀಯಕ್ಕಾಗಿ ತಾವೇನೇನೆಲ್ಲ ಮಾಡಿದ್ದಾರೆಂಬ ಅರಿವಿಲ್ಲ!

“ಇಂತಹ ಟ್ವೀಟ್ ಸಮಾಜಕ್ಕೆ ಕೆಟ್ಟ ಸಂದೇಶವನ್ನು ರವಾನಿಸುವುದಲ್ಲದೇ, ಕೂಡಲೇ ಅವರನ್ನು ಸಚಿವ ಸ್ಥಾನದಿಂದ ತೆಗೆದು ಹಾಕಬೇಕು” ಎಂದು ಒತ್ತಾಯಿಸಿದ್ದಾರೆ!

ಹಾಗಾದರೆ ಟಿಪ್ಪು ಎಂಬುವವನು ಸ್ವಾತಂತ್ರ್ಯ ಹೋರಾಟಗಾರನೇ?!

ಇದೊಂದೇ ನೋಡಿ! ನಮ್ಮ ದೇಶದ ದುರಂತವಾದ ಹಾಸ್ಯ!! ಮತ್ತದೇ ಮತಾಂಧ ಹಿಂದೂಗಳನ್ನು ಗುರಿಯಾಗಿಸಿಕೊಂಡು ವಿಶ್ವ ವಿದ್ಯಾನಿಲಯವನ್ನು ಸುಟ್ಟರೂ, ಕೇವಲ ಬ್ರಿಟಿಷರ ವಿರುದ್ಧ ಹೋರಾಡಿದನೆಂಬ ಕಥೆ ಕಟ್ಟಿ ಸ್ವಾತಂತ್ರ್ಯ ಹೋರಾಟಗಾರನೆಂದು ಹೇಳುವುದು ಎಷ್ಟು ಸರಿ?!

ಜೊತೆಗೆ ಶೋಭಾ ಕರಂದ್ಲಾಜೆಯೂ ಸಹ ತಮ್ಮ ಹೆಸರನ್ನು ತೆಗೆಯುವಂತೆ ಹೇಳಿದ್ದಾರೆ! ಬಿಜೆಪಿ ನಾಯಕರ ನಡೆಗೆ ಕಾರ್ಯಕರ್ತರು ಬೆಂಬಲ ನೀಡಿದ್ದು, ಜೊತೆಗೆ
ಅನಂತ್ ಕುಮಾರ್ ಹೆಗಡೆ, “ಇಷ್ಟಾದರೂ ನನ್ನ ಹೆಸರು ಹಾಕಿದರೆ ವೇದಿಕೆಯಲ್ಲಿಯೇ ಟಿಪ್ಪು ಬಣ್ಣವನ್ನು ಬಯಲು ಮಾಡುವೆ” ಎಂದು ಗುಡುಗಿದ್ದಾರೆ!

ಏನೇ ವಿವಾದವಾದರೂ ಸಹ ಕಾಂಗ್ರೆಸ್ ನ ರಾಮಲಿಂಗ ರೆಡ್ಡಿ ಮಾತ್ರ ಕಾಂಗ್ರೆಸ್ ಪರ ವಹಿಸಿ ಒಂದಷ್ಟು ಹೇಳಿಕೆಯನ್ನು ಬೇಡವೆಂದರೂ ಕೊಡುತ್ತಾರಷ್ಟೇ!
“ಬರಬೇಕೆಂದಿದ್ದವರು ಬರಲಿ! ಬೇಡವಾದವರು ಬಿಡಲಿ! ಅಲ್ಲದೇ, ಬಿಜೆಪಿ ನಾಯಕರಿಗೆ ಟಿಪ್ಪುವನ್ನು ಕಂಡರೆ ಆಗುವುದಿಲ್ಲ” ಎಂದಿರುವ ರಾಮಲಿಂಗಾರೆಡ್ಡಿಗೆ ಬಹುಷಃ ಮಂತ್ರಿಗಿರಿಯ ಉದ್ಧಟತನದಿಂದ ಹೇಳಿಕೆ ಕೊಡುವುದರಲ್ಲಿಯೇ ಕಾರ್ಯನಿರತರಾಗಬಹುದೇನೋ!

ಸಿದ್ಧರಾಮಯ್ಯನ ಸರಕಾರದ ಹುಚ್ಚಾಟ!

ಟಿಪ್ಪುವನ್ನು ಆರಾಧಿಸುವ ಸಿದ್ಧರಾಮಯ್ಯನ ಸರಕಾರಕ್ಕೆ ಮಾತ್ರ ಟಿಪ್ಪು ಹುಟ್ಟಿದ್ದು ನವೆಂಬೃ 19 ನೇ ತಾರೀಕಾದರೂ ಸಹ ನವೆಂಬರ್ 10 ಕ್ಕೆ ಟಿಪ್ಪು ಜಯಂತಿ ಮಾಡಿದ ಸಿದ್ಧರಾಮಯ್ಯನ ಸರಕಾರಕ್ಕೆ ದಸರಾ ವಿರೋಧಿಸುವ ಉದ್ದೇಶ ಮಾತ್ರವೇ ಇತ್ತೇ ಹೊರತು ಬೇರಿನ್ನೇನಲ್ಲ!

Dighvijay News | 11 AM NEWS

تم النشر بواسطة ‏‎Dighvijay News – ದಿಗ್ವಿಜಯ ನ್ಯೂಸ್‎‏ في 20 أكتوبر، 2017

ಮತಿಗೆಟ್ಟ ಸರಕಾರಕ್ಕೆ ಈಗ ಅನಂತ್ ಕುಮಾರ್ ಹೆಗಡೆ ಯೆಂಬ ಕಟ್ಟರ್ ಹಿಂದೂ ಸಿದ್ಧಾಂತವನ್ನು ಅಪ್ಪಿಕೊಂಡು ಮುಸಲ್ಮಾನರ ಮತ ಅಗತ್ಯವಿಲ್ಲವೆಂದು ಹೇಳಿ, ಕೇವಲ ಹಿಂದುತ್ವವೊಂದನ್ನೇ ಇಟ್ಟುಕೊಂಡು ಸಾಧನೆ ಮಾಡುತ್ತಿರುವಾಗ ಉರಿ ತಾಗದಿರಲು ಸಾಧ್ಯವೇ ಇಲ್ಲ ಬಿಡಿ!

ಈ ಹಿಂದೆಯೂ ಅನಂತ್ ಕುಮಾರ್ ಹೆಗಡೆ “ನನಗೆ ಮುಸಲ್ಮಾನರ ಮತದ ಅವಶ್ಯಕತೆ ಇಲ್ಲ ಎಂದಿದ್ದರಷ್ಟೇ! ಅದನ್ನೂ ಸಹ ಮಾಧ್ಯಮಗಳು ‘ನಾಲಿಗೆ ಹರಿಬಿಟ್ಟ
ಅನಂತ್ ಕುಮಾರ್ ಹೆಗಡೆ’ ಎಂದು ಅವಹೇಳನ ಮಾಡಿದ್ದರು! ಆದರೆ, ಅದಕ್ಯಾವುದಕ್ಕೂ ಜಗ್ಗದ ಅನಂತ್ ಕುಮಾರ್ ಹೆಗಡೆ ಮಾತ್ರ ಹಿಂದುತ್ವಕ್ಕೆ ಕಟಿ ಬದ್ಧರಾಗಿಯೇ ನಡೆದಿದ್ದಾರೆ!

ತಾಜ್ ಮಹಲ್ ವಿವಾದವಷ್ಟೇ ಪ್ರಾರಂಭವಾಗಿದೆ! ಅದಕ್ಕೆ ಸರಿಯಾಗಿ ಟಿಪ್ಪು ಜಯಂತಿಯನ್ನು ವಿರೋಧಿಸಿರುವ ಅನಂತ್ ಕುಮಾರ್ ರವರ ದಿಟ್ಟ
ನಡೆಯೊಂದು ಬಹುಷಃ ಎಡಪಂಥೀಯರಿಗೆಲ್ಲ ದೀಪಾವಳಿಯ ಬೆಂಕಿಯೊಂದು ತಗುಲಿದೆಯಷ್ಟೇ!

ಏನೇ ಹೇಳಿ! ಅನಂತ್ ಕುಮಾರ್ ಹೆಗಡೆಯೆಂಬ ಹಿಂದೂ ಹುಲಿ ರಾಜಕೀಯ ಪ್ರವೇಶ ಮಾಡಿದ್ದನ್ನು ಅರಗಿಸಿಕೊಳ್ಳಲಾಗದ ಕಾಂಗಿಗಳಿಗೆ ಸರಿಯಾಗಿಯೇ ಮಿರ್ಚಿ
ಮೆಣಸಿನಕಾಯಿ ತಿನ್ನಿಸುತ್ತಿರುವ ಅದ್ಭುತ ಗಳಿಗೆಗಳಿಗೆ ಈ ವರ್ಷ ಸಾಕ್ಷಿಯಾಗಿದೆ!!

– ಪೃಥು ಅಗ್ನಿಹೋತ್ರಿ

Tags

Related Articles

Close