ಅಂಕಣ

ಟಿಪ್ಪು ಸುಲ್ತಾನ್ ! ರಕ್ಷಕನೋ ಅಥವಾ ಭಕ್ಷಕನೋ?! ಕರ್ನಾಟಕಕ್ಕೆ ಶಾಪವಾಗಿ ಪರಿಣಮಿಸಿದ್ದ ಸುಲ್ತಾನ!!!

ಭಾರತ ಕಂಡ ಅಭೂತಪೂರ್ವ, ಸ್ವಾತಂತ್ರ್ಯ ವೀರ ಟಿಪ್ಪು. ಇಂತಹ ಮಾತುಗಳಿಂದ ಭಾರತೀಯರು ಆತನನ್ನು ಅಪಾರವಾಗಿ ನಂಬಿದ್ದರು.!! ಐತಿಹಾಸಿಕ ಕಾದಂಬರಿಗಳು ಸಾಮಾನ್ಯವಾಗಿ ಐತಿಹಾಸಿಯ ಸತ್ಯ ಮತ್ತು ಕಲ್ಪನೆಯ ಒಂದು ಮಿಶ್ರಣವಾಗಿದೆ. ಹಾಗಾಗಿ ಅವರು ಎಲ್ಲಾ ಐತಿಹಾಸಿಕ ಘಟನೆಗಳನ್ನು ಸತ್ಯವಾಗಿ ಚಿತ್ರಿಸಲು ನಿರೀಕ್ಷಿಸುವುದಿಲ್ಲ. ಆದಾಗ್ಯೂ ಐತಿಹಾಸಿಕ ಕಾದಂಬರಿಗಳ ಲೇಖಕರು ಐತಿಹಾಸಿಕ ಸತ್ಯಗಳನ್ನು ಪ್ರಸ್ತುತಪಡಿಸಲು ನೈತಿಕ ಜವಬ್ಥಾರಿಗಳನ್ನು ಹೊಂದಿತ್ತಾರೆ. ಕೆಲವು ಕಾದಂಬರಿಗಳು ತಮ್ಮ ಲಾಭಕ್ಕಾಗಿ ಟಿವಿ ಸೀರಿಯಲ್‍ಗಳಲ್ಲಿ ಇತಿಹಾಸವನ್ನೇ ತಿರುಚಿ ಹಾಕಿದ್ದಾರೆ. ವಿಲನ್‍ಗಳನ್ನು ಹೀರೋ ಮಾಡಲು ತಯಾರಿರುತ್ತಾರೆ!! ಆದರೆ ಇತಿಹಾಸವನ್ನು ನಾವು ಆಳವಾಗಿ ಅಧ್ಯಯನ ಮಾಡಿದಾಗ ಯಾರು ಹೀರೋ ಯಾರು ವಿಲನ್ ಎಂದು ತಿಳಿಯುತ್ತದೆ.!!

ಪ್ರಾಥಮಿಕ ಶಾಲೆಯಿಂದಲೂ ನಾವು ಟಿಪ್ಪುವನ್ನು ಮೈಸೂರಿನ ಹುಲಿ, ಬ್ರಿಟಿಷರೊಂದಿಗೆ ಹೋರಾಟ ಮಾಡಿದ ದೇಶ ಪ್ರೇಮಿ ಎಂದೆಲ್ಲಾ ಬಿಂಬಿಸಿದ್ದೆವು. ಆದರೆ ಟಿಪ್ಪು
ಲಕ್ಷಾಂತರ ಜನರ ರಕ್ತ ಕುಡಿದ ನರಹಂತಕ ಎಂದು ಎಂದಾದರೂ ಇತಿಹಾಸಗಾರರು ಕಾಣಿಸಿದ್ದಾರಾ? ಮಂಗಳೂರಿನಿಂದ ಶ್ರೀರಂಗಪಟ್ಟಣದವರೆಗೆ ಸಾವಿರಾರು ಕ್ರೈಸ್ತರನ್ನು ಎಳೆದುಕೊಂಡು ಹೋಗಿ ಮಾರಣ ಹೋಮ ನಡೆಸಿದನಲ್ಲ ಅವನನ್ನು ಎಂದಾದರೂ ಸಾವಿನ ವ್ಯಾಪಾರಿ ಎಂದು ಜಡಿದಿದ್ದಾರಾ??? ನೂರಾರು ದೇವಸ್ಥಾನಗಳನ್ನು ಮತ್ತು ಕ್ರೈಸ್ತ ಮಂದಿರಗಳನ್ನು ದ್ವಂಸಗೊಳಿಸಿದನಲ್ಲಾ ಅವನನ್ನು ಎಂದಾದರೂ ಮತಾಂಧ ಎಂದು ಚಿತ್ರೀಕರಿಸಿದ್ದಾರಾ?

ಟಿಪ್ಪು ಸ್ವಾತಂತ್ರ್ಯ ಹೋರಾಟಗಾರ ಮೊದಲು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಎನ್ನುವ ಎಡಚರರನ್ನು ನೋಡಿದಾಗ ಹಾಸ್ಯಾಸ್ಪದ ಎನಿಸುತ್ತೆ ಏಕೆ ಗೊತ್ತೇನು? ಟಿಪ್ಪು ಪದೇ ಪದೇ ಬ್ರಿಟಿಷರನ್ನು ಓಡಿಸಿ ಮುಸ್ಲಿಮ್ ಪ್ರಭುತ್ವ ಸಾಧಿಸಲು ಟಿಪ್ಪು ಪರ್ಷಿಯನ್ ತುರ್ಕಿ ಅಫ್ಘನ್ ಹಾಗೂ ಅರೇಬಿಯಾದ ಇಸ್ಲಾಂ ರಾಜರಿಗೆ ಪತ್ರ ಬರೆಯುತ್ತಿದ್ದ ಹಾಗಿದ್ದರೆ ಟಿಪ್ಪುವಿನ ಇರಾದೇ ಮುಸ್ಲಿಮ್ ರಾಷ್ಟ್ರ ನಿರ್ಮಾಣವೇ ಹೊರತು ಸ್ವಾತಂತ್ರ್ಯ ಎಂಬುವುದಲ್ಲ ಎಂಬುವುದು ಸಾಭೀತಾಯಿತು.!! ಟಿಪ್ಪು ಜಯಂತಿ ಒಂದಲ್ಲ ಒಂದು ವಿವಾದಕ್ಕೆ ಕಾರಣವಾಯಿತು. ಯಾವುದೇ ಒಂದು ವ್ಯಕ್ತಿಯ ಹುಟ್ಟುಹಬ್ಬದ ಆಚರಣೆಯ ವಿಷಯಕ್ಕೆ ಮೂರು ಹೆಣಗಳು ಉರುಳಿದ ಇತಿಹಾಸವೇ ಇಲ್ಲ!!! ಒಬ್ಬ ವ್ಯಕ್ತಿ ಸತ್ತು ಎರಡು ಶತಮಾನಗಳು ಕಳೆದರೂ ಜನರಲ್ಲಿ ಅದಮ್ಯವಾದ ಕೋಪವನ್ನು ಕಾಯ್ದಿಟ್ಟಿದ್ದಾನೆಂದರೆ ಆತ ಅದೆಷ್ಟು ದುಷ್ಟನಾಗಿರಲಿಕ್ಕಿಲ್ಲ?

ಇತಿಹಾಸದಲ್ಲಿ ನಾವು ಇವನ ಬಗ್ಗೆ ಓದಿದಾಗ ಈತ ಒಬ್ಬ ಸ್ವಾತಂತ್ರ್ಯ ಹೋರಾಟಗಾರ ಅತೀ ಶೂರ ಎಂಬ ಚಿತ್ರಣ ನಮ್ಮೆದುರಿಗೆ ಬರುತ್ತದೆ.!! ಇತಿಹಾಸವನ್ನು
ಕೆದಕಿದಾಗ ಆತ ಯಾವುದೇ ದೇಶಾಭಿಮಾನ ಇಟ್ಟುಕೊಂಡು ಬ್ರಿಟಿಷರ ಜೊತೆ ಹೋರಾಟ ಮಾಡಿರುವುದು ಕಾಣುವುದಿಲ್ಲ. ಕನ್ನಡ ನಾಡಿನ ಜನರ ರಕ್ಷಣೆ ಮಾಡುತ್ತಿದ್ದ ಮೈಸೂರಿನ ಒಡೆಯರಿಂದ ಅಧಿಕಾರ ಕಸಿದುಕೊಂಡು ದಕ್ಷಿಣ ಭಾರತದಲ್ಲಿ ಪ್ರಬಲನಾದ ಹೈದರಾಲಿಯ ಮಗ ಟಿಪ್ಪು ಬ್ರಿಟಿಷರ ವಿರುದ್ಧ ಹೋರಾಡಿದ್ದು ಅವರು ನಿಜಾಮ ಮತ್ತು ಮೈಸೂರಿನ ಒಡೆಯರ ಜೊತೆ ಹೊಂದಾಣಿಕೆ ಮಾಡಿಕೊಂಡು ತನ್ನ ವಿರುದ್ಧ ತಿರುಗಿ ಬಿದ್ದರು ಎಂಬ ಮಾತ್ರಕ್ಕೆ ಮಾತ್ರ. 1797ರ ಎಪ್ರಿಲ್ 21 ರಂದು ಫ್ರೆಂಚರಿಗೆ ಪತ್ರ ಬರೆಯುವ ಟಿಪ್ಪು ಅವರ ಬೆಂಬಲ ಸಿಕ್ಕರೆ ಬ್ರಿಟಿಷರನ್ನು ಓಡಿಸಿ ಇಡೀ ದೇಶವನ್ನು ಲೂಡಿ ಹೊಡೆಯಬಹುದು ಎಂಬ ಪ್ರಲೋಭವೇ ಒಡ್ಡುತ್ತಾನೆ. ಬ್ರಿಟಿಷರಿಂದ ಬಂಧನಕ್ಕೊಳಗಾಗಿ ಸೆರೆಮನೆಯಾಗಿದ್ದ ಫ್ರೆಂಚ್ ನಾಯಕನೆಪೋಲಿಯನ್ ಬೋನಾಪಾರ್ಟೆಯ ಜೊತೆ ಟಿಪ್ಪುವಿಗೆ ಪತ್ರ ವ್ಯವಹಾರ ಇತ್ತು. ಫ್ರೆಂಚರು ಟಿಪ್ಪುವಿನೊಡನೆ ಸೇರಿ ದಕ್ಷಿಣ ಭಾರತದ ನಿಜಾಮ ಮತ್ತು ಮರಾಠರನ್ನು ಸೋಲಿಸಿ ಇಲ್ಲಿ ಮೇಲುಗೈ ಸಾಧಿಸುವ ಕನಸು ಕಂಡನು. ಬ್ರಿಟಿಷರ ವಿರುದ್ಧ ಹೋರಾಡಲು ಫ್ರೆಂಚ್ ಸಹಾಯ ಬೇಡಿದವನು ಹೇಗೆ ದೇಶಪ್ರೇಮಿಯಾಗಲು ಸಾಧ್ಯ?? ಹೋಗಲೀ ಟಿಪ್ಪು ಸ್ವಾತಂತ್ರ್ಯ ಹೋರಾಟಗಾರ ಎಂಬುವುದನ್ನು ನಂಬುವುದಾದರೂ ಹೇಗೆ? ಅವನ ಹೆಚ್ಚಿನ ಎಲ್ಲಾ ಶ್ರಮಗಳನ್ನು ಸುತ್ತಲಿನ ರಾಜ್ಯಗಳ ಮೇಲೆ ದಂಡೆತ್ತಿ ಹೋಗುವುರಲ್ಲಿ ಮತ್ತು ಅಲ್ಲಿನ ಸಾವಿರಾರು ಪ್ರಜೆಗಳನ್ನು ಇಸ್ಲಾಮ್ ಧರ್ಮಕ್ಕೆ ಮತಾಂತರಿಸುವುದರಲ್ಲಿ ಮತ್ತು ತನ್ನ ಮಾತು ಕೆಳದವರಿಗೆ ಬಗೆಬಗೆಯ ಶಿಕ್ಷೆಗಳನ್ನು ಕೊಟ್ಟು ಜೀವ ತೆಗೆಯುವುದರಲ್ಲಿ ಕಳೆದಿದ್ದ… ಭಾರತ ಎಂಬ ಏಕರಾಷ್ಟ್ರದ ಕಲ್ಪನೆಯೇ ಇನ್ನೂ ಮೊಳೆತಿರದ ಕಾಲದಲ್ಲಿದ್ದ ಟಿಪ್ಪು ಸ್ವಾತಂತ್ರ್ಯ ಹೋರಾಟಗಾರ ಎಂದು ಕರೆಸಿಕೊಳ್ಳಲು ಹೇಗೆ ಯೋಗ್ಯನಾಗುತ್ತಾನೆ ಎಂಬುವುದು ನಮ್ಮೆಲ್ಲರ ಪ್ರಶ್ನೆ.

ಅನೇಕ ಹಿಂದೂ ದೇವಾಲಯಗಳ ನಾಶ!!

ಟಿಪ್ಪುವಿನ ಕೆಲ ಬಾಲಬುಡುಕ ಇತಿಹಾಸಕಾರರು ಅಂತೆ ಕಂತೆ ಹುಟ್ಟಿಸಿಬಿಟ್ಟರು!! ಅಖಿಲೇಶ್ ಮಿತ್ತಲ್ ಎಂಬ ಇತಿಹಾಸಕಾರರೊಬ್ಬರು ಟಿಪ್ಪುವಿನ ಕಾಲದಲ್ಲಿ ಶಿಕ್ಷಣ
ಉತ್ಕøಷ್ಟ ದರ್ಜೆಯದ್ದಾಗಿತ್ತು. ಎಂದೆಲ್ಲ ಉಲ್ಲೇಖ ಮಾಡಿದ್ದರು. ಆದರೆ ಟಿಪ್ಪು ಮತಾಂಧತೆಯ ಶಿಕ್ಷಣ ನೀಡುತ್ತಿದ್ದ ಇದರಿಂದ ಹೈದರ್ ಅಲಿ ಅಂದರೆ ಸ್ವತಃ ತಂದೆಗೆ
ಬೇಸರವಿತ್ತು ಎಂಬ ವಿಷಯ ಜಗತ್ತಿಗೆ ಗೊತ್ತಿರುವ ನಗ್ನ ಸತ್ಯ.!! ಟಿಪ್ಪು ಕೆಲ ದೇವಾಲಯಕ್ಕೆ ಕಾಣಿಕೆ ಕೊಟ್ಟ ಎಂಬ ಕಾರಣಕ್ಕೆ ಆತ ಸೌಹಾರ್ದ ಸಾರ್ವ ಭೌಮನಾಗಲಾರ, ಏಕೆಂದರೆ ದಕ್ಷಿಣ ಭಾರತದ ಸುಮಾರು 8000 ದೇವಾಲಯಗಳನ್ನು ನಾಶ ಮಾಡಿದ್ದ ಇದನ್ನು ಲೂಯಿ ರೈಸ್ ತನ್ನ ಮೈಸೂರ್ ಗಸೇಟೀರ್ ಎಂಬ ಪುಸ್ತಕದಲ್ಲಿ ಸವಿಸ್ತಾರವಾಗಿ ಉಲ್ಲೇಖ ಮಾಡಿದ್ದಾನೆ. ಟಿಪ್ಪು ಕಾಟ ತಡೆಯಲಾರದೆ ಗುರುವಾಯುರು ದೇಗುಲದ ಮೂರ್ತಿಗಳನ್ನು ಅಂಬಲಪ್ಪುರಕ್ಕೆ ಸಾಗಿಸಲಾಯ್ತು..!! ಈತ ಮುಸ್ಲಮ್ ಬುದ್ಧಿಯನ್ನು ತೋರಿಸಿಲ್ಲಾ ಎನ್ನುವುದಕ್ಕೆ ಬೇರೆ ಉದಾಹರಣೆ ಬೇಕೆ?

ಟಿಪ್ಪು ಮೈಸೂರು, ಕೊಡಗು, ಮಂಗಳೂರು ಮತ್ತು ಕೇರಳದಲ್ಲಿ ಹಿಂದೂ ದೇವಾಲಯದಲ್ಲಿ ತೋರಿದ ಕೌರ್ಯಕ್ಕೆ ಬೇರೊಂದು ನಿದರ್ಶನ ಬೇರೆ ಎಲ್ಲೂ ಸಿಗಲು ಸಾಧ್ಯವಿಲ್ಲ !! ಬೆಂಕಿ ಹಚ್ಚಿ ನೂರಾರು ದೇವಾಲಯಗಳನ್ನು ಧ್ವಂಸಗೊಳಿಸಲಾಯಿತು. ಟಿಪ್ಪುವಿನ ಕೈಯಲ್ಲಿ ದಕ್ಷಿಣ ಭಾರತದಲ್ಲಿ 8000ಕ್ಕೂ ಹೆಚ್ಚು ದೇವಾಲಯಗಳನ್ನು ನಾಶಮಾಡಿದ್ದಾನೆ. ಕೆಲವು ದೇವಾಲಯಗಳಲ್ಲಿ ಟಿಪ್ಪು ಮಾಡಿದ ಕತ್ತಿಯ ಗುರುತು ಇಂದಿಗೂ ಉಳಿದುಕೊಂಡಿದೆ. ಆರ್ಥಿಕ ನಷ್ಟವನ್ನು ಸರಿದೂಗಿಸಲು ಟಿಪ್ಪು ಮುಖ್ಯವಾಗಿ ದೇವಸ್ಥಾನಗಳ ಸಂಪತ್ತನ್ನೇ ಅವಲಂಬಿಸಿದ್ದ.

ಚಿರಕ್ಕಲ್ ರಾಜರು ಹಿಂದೂಗಳಿಗೆ ಕಾಟಕೊಡದಂತೆ ಆಗ್ರಹಿಸಿದರೆ ಟಿಪ್ಪು ಹೇಳಿದ ಮಾತುಗಳೇನು ಗೊತ್ತೇ? ಇಡೀ ಜಗತ್ತನ್ನೇ ನನಗೆ ಬಿಟ್ಟು ಕೊಟ್ಟರೂ ಹಿಂದೂ
ದೇವಾಲಯ ನಾಶ ಮಾಡುವುದನ್ನು ನಿಲ್ಲಿಸಲಾರೆ… ಪನಿಕ್ಕರ್ ಅವರ ಪ್ರೀಡಮ್ ಸ್ಟ್ರಗಲ್ ಎಂಬ ಪುಸ್ತಕದಲ್ಲಿ ಅದ್ಬುತವಾಗಿ ಉಲ್ಲೇಖಿಸಲಾಗಿದೆ. ಅಷ್ಟಕ್ಕೂ ಹೆಚ್ಚಾಗಿ
ಚಿರಕ್ಕಲ್ ರಾಜನನ್ನು ಕೊಂದು ಬಲವಂತವಾಗಿ ಆನೆಗಳ ಮೂಲಕ ಎಳೆದೊಯ್ದು ಶವಗಳನ್ನು ಮರದ ಮೇಲೆ ಮರದ ಮೇಲೆ ತೂಗಿ ಅದನ್ನು ನೋಡಿ ನಗೆ
ಬೀರಲಾಯ್ತು ಇಡೀ ಮಲಬಾರನ್ನು ಇಸ್ಲಾಮೀಕರಣಗೊಳಿಸಲು ಕುಟ್ಟಿಪುರಮ್‍ನ ನಾಯರ್ ಕುಟುಂಬಗಳಿಗೆ ಸುನ್ನತ್ ಮಾಡಿಸಲಾಯ್ತು. 1879ರಲ್ಲಿ ಅಸಂಖ್ಯ ಯುದ್ಧ ಖೈದಿಗಳನ್ನು ಟಿಪ್ಪು ಮತಾಂತರಿಸಿದ್ದ ಅದು ಕೂಡಾ ಬಲವಂತವಾಗಿ!! ಇದನ್ನು ಬುಖಾತಾನ್ ತನ್ನ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಹಲವಾರು ಪ್ರದೇಶಗಳಿಗೆ ಮುಸ್ಲಿಮ್ ರಾಜರುಗಳ ನಾಮಕರಣ!!

ಆತ ಕನ್ನಡದ ಕಂದನಾಗಿದ್ದ ಎಂಬುವುದಕ್ಕೆ ಇತಿಹಾಸಗಳಲ್ಲಿ ಯಾವುದೇ ಆಧಾರಗಳು ಸಿಗುವುದಿಲ್ಲ. ಟಿಪ್ಪು ತನ್ನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉರ್ದು ಮತ್ತು
ಪಾರಸಿ/ಪರ್ಶಿಯನ್ ಭಾಷೆಗಳನ್ನು ಖಾಯಂ ಮಾಡಿದ . ತನ್ನ ರಾಜ್ಯದ ವ್ಯವಹಾರಗಳು ಫಾರಸೀ ಭಾಷೆಗಳಲ್ಲೇ ಇರಬೇಕೆಂದು ಕಟ್ಟಪ್ಪಣೆ ಹೊರಡಿಸಿದ. ಅತ್ಯಂತ ಕಟ್ಟಾ ಮತೀಯನಾಗಿದ್ದ ಈತ ತನ್ನ ಆಡಳಿತ ಕಾಲದಲ್ಲಿ ಹಲವು ಊರುಗಳ ಹೆಸರನ್ನೇ ಬದಲಿಸಿದ. ಮಂಗಳೂರು ಜಲಲಾಬಾದ್, ಮೈಸೂರು-ನಝಾರಾಬಾದ್,
ಕಣ್ಣನೂರು-ಕುಸನಬಾದ್, ಗುಟ್ಟಿ-ಫೈಝ್ ಇಸ್ಸಾರ್ ಧಾರವಾಡ್-ಖುರ್ಷಿದ್ ಸವಾಡ್ ದಿಂಡಿಗಲ್-ಕಲಿಕಾಬಾದ್ ರತ್ನಗಿರಿ ಮುಸ್ತಫಾಬಾದ್ ಕಲ್ಲಿಕೋಟೆ-
ಇಸ್ಲಾಮಾಬಾದ್‍ಹೀಗೆ ಮೈಸೂರಿನ ಸುತ್ತಮುತ್ತಲಿನ ಭಾಗಗಳೆಲ್ಲಾ ಟಿಪ್ಪು ಮುಸ್ಲಿಮ್ ಹೆಸರುಗಳನ್ನು ಇಡುತ್ತಾ ಹೋದ. ಆದರೆ ಟಿಪ್ಪುವನ್ನು ದ್ವೇಷಿಸುತ್ತಿದ್ದ ಈ ಎಲ್ಲಾ ಊರುಗಳ ಜನರೂ ಅವನ ಮರಣಾನಂತರ ಹಳೆಯ ಹೆಸರುಗಳನ್ನೇ ಬಯಸಿದ್ದರು. ಅದಲ್ಲದೆ ಪ್ರವಾದಿ ಮಹಮ್ಮದ್ ಹುಟ್ಟಿದ ವರ್ಷದಿಂದ ಹೊಸ ಶಕೆಯೊಂದನ್ನು ಆರಂಭಿಸಿ ಹೊಸ ಬಗೆಯ ಪಂಚಾಂಗವನ್ನೇ ಆರಂಭಿಸಿದ ಈ ಕ್ರೂರಿ ಟಿಪ್ಪು!!..

ಅನೇಕ ಹಿಂದೂಗಳನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ!!

ಟಿಪ್ಪು ಮೂಲತಃ ಒಬ್ಬ ಮತಾಂದನಾಗಿದ್ದ ಎನ್ನುವುದಕ್ಕೆ ಹಲವಾರು ನಿದರ್ಶನಗಳೂ ನಮಗೆ ಸಿಗುತ್ತದೆ. ಈತನ ಮೂಲ ಉದ್ಧೇಶವೇ ಜನರನ್ನು ಮತಾಂತರ
ಮಾಡುವುದು. ಸುಮಾರು 12,000 ಜನ ಹಿಂದೂಗಳನ್ನು ಇಸ್ಲಾಮ್ ಧರ್ಮಕ್ಕೆ ಮತಾಂತರ ಮಾಡಲಾಯಿತು. ಅದರಲ್ಲಿ ಹೆಚ್ಚಿನವರು ನಂಬೂದರಿ ಬ್ರಾಹ್ಮಣರು. ಈ ಮತಾಂತರ ಕಾರ್ಯವನ್ನು ದೊಡ್ಡ ಮಟ್ಟದಲ್ಲಿ ಯಶಸ್ವಿಗೊಳಿಸಬೇಕೆಂದು ಕಟ್ಟುನಿಟ್ಟಾಗಿ ಹೇಳುತ್ತಿದ್ದನಂತೆ. ಕಲ್ಲಿಕೋಟೆಯ ಎಲ್ಲಾ ಹಿಂದೂಗಳು ಇಸ್ಲಾಮ್ ಧರ್ಮಕ್ಕೆ ಪರಿವರ್ತನೆ ಮಾಡಲಾಯಿತು. ಇಷ್ಟು ದಿನ ಸ್ವಾತಂತ್ರ್ಯ ಹೋರಾಟ ಎಂದು ಯಾವುದೇ ಜಾತಿ ಧರ್ಮಗಳ ಭೇದವಿಲ್ಲದೆ ನಾವು ಇಂತಹ ಮನುಷ್ಯ ರಕ್ತವನ್ನು ಹೀರಿದ ನರಹಂತಕನನ್ನು ಪ್ರೀತಿಸಿದ್ದೇವಲ್ಲಾ..!! ಕೇವ ಮುಸ್ಲಿಮ್ ಧರ್ಮಕ್ಕೆ ಪರಿವರ್ತಿಸದ್ದಲ್ಲದೆ ಅವರಿಗೆ ಮುಂಜಿ ಮಾಡಿ ದನ್ ಮಾಂಸ ತಿನ್ನಿಸಿ ಧರ್ಮಭ್ರಷ್ಟಗೊಳಿಸಲಾಯಿತು. ತಮ್ಮ ಧರ್ಮದಿಂದ ಮತಾಂತರಗೊಂಡ ಮೇಲೆ ಆ ಜನರಿಗೆ ತಮ್ಮ ವೈರಿಯ ಮತವನ್ನು ಒಪ್ಪಿಕೊಂಡು ಜೀವ ಉಳಿಸಿಕೊಳ್ಳುವುದಕ್ಕಿಂತ ಬೇರೆ ಆಯ್ಕೆಗಳು ಇರಲಿಲ್ಲ. ಹೀಗೆ ಮತಾಂತರಗೊಂಡವರಿಗೆ ತೆರಿಗೆ ವಿನಾಯಿತಿ, ಸೇನೆಯಲ್ಲಿ ಕೆಲಸ ಮುಂತಾದ ಸೌಲಭ್ಯಗಳನ್ನು ಒದಗಿಸುತ್ತಿದ್ದ.

ಹೆಣ್ಣುಬಾಕ ಹುಲಿ ಟಿಪ್ಪುಮುಸ್ಲಿಮ್ ರಾಜರ ದೊಡ್ಡ ದೌರ್ಬಲ್ಯವೆಂದರೆ ಹೆಣ್ಣು. ಹೆಚ್ಚು ಹೆಣ್ಣನ್ನು ಮದುವೆಯಾದರೆ ದೇವರ ಕೆಲಸ ಮಾಡಿದಂತೆ ಎಂದು ನಂಬಿದ್ದರು ಮುಸ್ಲಿಮರು ಸಿಕ್ಕ ಸಿಕ್ಕ ಹೆಣ್ಣು ಮಕ್ಕಳನ್ನು ಮದುವೆಯಾಗುದೇ ಇವರ ಖಯಾಲಿ. ಅನೇಕ ಪ್ರದೇಶಗಳಿಂದ ಅಪಹರಿಸಿ ಅಥವಾ ದುಡ್ಡು ಕೊಟ್ಟು ತಂದ ಹೆಣ್ಣುಮಕ್ಕಳನ್ನು ಕೂಡಿಹಾಕಲಾಗುತ್ತಿತ್ತು. ಟಿಪ್ಪು ಅದೆಷ್ಟು ಹೆಣ್ಣುಮಕ್ಕಳನ್ನು ಮದುವೆಯಾಗಿದ್ದಾನೋ ಅದೆಷ್ಟು ಮಕ್ಕಳಾಗಿದೆಯೋ ಇಡೀ ಇತಿಹಾಸಕಾರರಿಗೆ ಪ್ರಶ್ನೆಯಾಗಿ ಉಳಿದಿದೆ.!! ಟಿಪ್ಪು ತನ್ನ ಹೆಚ್ಚಿನ ಸಮಯವನ್ನು ಜನಾನದಲ್ಲಿಯೇ ಕಳೆಯುತ್ತಿದ್ದ. ಗರ್ಭಧರಿಸದೇ ಇರುವ ಹೆಂಗಸರನ್ನು ಅತ್ಯಂತ ತುಚ್ಚವಾಗಿ ಕಾಣಿಸುತ್ತದೆ.

ಕ್ರೈಸ್ತ ವೈರಿಜನರನ್ನು ಇಸ್ಲಾಮ್ ಧರ್ಮಕ್ಕೆ ಮತಾಂತರಿಸುವುದೇ ತನ್ನ ಜೀವನದ ಪರಮೊದ್ಧೇಶವೆಂದು ಭಾವಿಸಿದ್ದ ಟಿಪ್ಪು ಮಂಗಳೂರಿನ್ನಲಿ ಅತ್ಯಂತ ಕ್ರೂರವಾಗಿ ಕ್ರಿಶ್ಚಿಯನರನ್ನು ನಡೆಸಿಕೊಂಡ. ಹಲವು ಶಿಕ್ಷೆ ಬೆದರಿಕೆಗಳನ್ನು ಹಾಕಿ ಕ್ರೈಸ್ತರನ್ನೂ ಮುಸ್ಲಿಮ್ ಧರ್ಮಕ್ಕೆ ಮತಾಂತರ ಮಾಡುತ್ತಿದ್ದ. ಮಂಗಳೂರಿನಲ್ಲಿ ಆತ ನಡೆಸಿದ ಅತ್ಯಾಚಾರಕ್ಕೆ ಅದೆಷ್ಟೋ ಸಾಕ್ಷಿಗಳು ಈಗಲೂ ದೊರಕುತ್ತದೆ. ಮಂಗಳೂರಿನಲ್ಲಿ ಹಿಡಿದು ಹಾಕಿಕೊಂಡು ಕೋಳ ಹಾಕಿಸಿ ನಡೆಸಲಾಗುತ್ತಿತ್ತು. ದಾರಿಯಲ್ಲೇ ಸುಮಾರು 4,000 ಜನರು ಅಸುನೀಗುತ್ತಾರೆ. ಉಳಿದವರನ್ನು ಶ್ರೀರಂಗಪಟ್ಟಣದಲ್ಲಿ ಸಾಮೂಹಿಕವಾಗಿ ಮುಂಜಿ ಮಾಡಿಸಿ ಜೈಲಿಗೆ ತಳ್ಳಲಾಗಿತ್ತು. ಬ್ರಿಟಿಷರ ಗೂಡಾಚಾರರು ಎಂಬ ಸಂಶಯಕ್ಕೆ 60,000 ಮಂಗಳೂರಿನ ಕ್ರಿಶ್ಚಿಯನ್ನರನ್ನು ಸೆರೆಹಾಕಿ ಕ್ರೂರಿ ಈತ.

ಇಂತಹ ಟಿಪ್ಪು ಹೇಗೆ ವೀರನಾದನೋ ದೇಶಪ್ರೇಮಿಯಾದನೋ ನಮಗೆ ಅರ್ಥವಾಗುತ್ತಿಲ್ಲ.!! ಬ್ರಿಟಿಷ್ ವಿರುದ್ಧ ಹೋರಾಡಿದ ಒಂದೇ ಕಾರಣಕ್ಕೆ ಟಿಪ್ಪು ಹೀರೋ ಆಗಲು ಸಾಧ್ಯವಿಲ್ಲ….ಇಂತಹ ನರಹಂತಕ, ಮತಾಂಧ ಎಂದಿಗೂ ವಿಲನ್….ವಿಲನ್…ವಿಲನ್..!!

Source :http://www.sanskritimagazine.com/history/tipu-sultan-a-hero-or-villain/

-ಶೃಜನ್ಯಾ

Tags

Related Articles

Close