ಪ್ರಚಲಿತ

ಟಿಪ್ಪೂ ಜಯಂತಿಯನ್ನು ಮಾಡಿ ಹಿಂದೂ ಕ್ರೈಸ್ತರಿಗೆ ಮಾತ್ರವಲ್ಲ, ಮುಸಲ್ಮಾನರಿಗೂ ಅವಮಾನ ಮಾಡುತ್ತಿದ್ದೀರಲ್ಲ ಮುಖ್ಯಮಂತ್ರಿಗಳೇ?! : ಅಶ್ರಫ್ ಅಬ್ಬಾಸ್

ಸಲಾಂ ಅಲೈಕುಂ!!

ಕರ್ನಾಟಕದ ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯರವರೇ! ಒಬ್ಬ ಜವಾಬ್ದಾರಿಯುತ ಪ್ರಜೆಯಾಗಿ ನಿಮಗೊಂದು ಅರಿಕೆಯನ್ನು ಮಾಡಿಸಲೇಬೇಕಿದೆ!
ಯಾಕೆಂದರೆ, ನವೆಂಬರ್ ಮತ್ತೆ ಬಂದಿದೆ! ಮುಂಚಿನ ವರ್ಷಗಳಲ್ಲೆಲ್ಲ ನವೆಂಬರ್ ಬಂತೆಂದರೆ ಇಡೀ ತಿಂಗಳೂ ಸಹ ಅದೇನೋ ಹಬ್ಬದ ಸಡಗರವಿತ್ತು ನೋಡಿ!
ನವೆಂಬರ್ 1 ಕ್ಕೆ ಕರ್ನಾಟಕ ರಾಜ್ಯೋತ್ಸವ ಪ್ರಾರಂಭವಾದರೆ ಇಡೀ ತಿಂಗಳೂ ಸಹ ಕನ್ನಡ ನಾಡಿನ ತಿಂಗಳು ಎಂದೇ ಬಿಂಬಿಸಿಕೊಂಡು ಬಿಡುತ್ತಿತ್ತು! ಆದರೆ, ನಿಮ್ಮ ಈ ಟಿಪ್ಪುವಿನ ವ್ಯಾಮೋಹವೆಂಬುದು ನವೆಂಬರ್ ಬಂತೆಂದರೆ ಸಾಕಪ್ಪಾ ಸಾಕು ಎನ್ನುವಷ್ಟು ಮಾಡಿಬಿಟ್ಟಿದೆಯೆಂದರೆ?!

ಯಾಕೆ ಮುಖ್ಯಮಂತ್ರಿಗಳೇ?!

ಮರೆತುಬಿಟ್ಟಿರಾ ನಿಮ್ಮ ಕುಲವನ್ನು?! ನಾನಿದನ್ನ ಕೇಳಲೇಬೇಕಿದೆ! ಯಾಕೆ ಗೊತ್ತೇ?! ಎಂತಹ ಅನಾಗರಿಕನೆನ್ನಿಸಿಕೊಂಡವನಿಗೂ ತನ್ನ ಪೂರ್ವಜರನ್ನು ನಟ್ಟ ನಡು ಬೀದಿಯಲ್ಲಿ ಹತ್ಯೆಗೈದಿದ್ದರು, ಮಾತೆಯರ ಮಾನಭಂಗ ಮಾಡಿದ್ದರು ಅಥವಾ ತಮ್ಮ ಲೈಂಗಿಕ ವಿಕೃತ ಕಾಮಕ್ಕೀಡು ಮಾಡಿದ್ದರು ಎನ್ನುವಿಷ್ಟೇ ಇತಿಹಾಸ ಸಾಕು! ಎಂತಹವನನ್ನೂ ಸಿಟ್ಟಿಗೇಳಿಸುತ್ತದೆ! ‘ಯಾರು ಸತ್ತರೆ ನನಗೇನು?! ಇತಿಹಾಸದಲ್ಲಿ ನಾನಿರಲಿಲ್ಲವಲ್ಲ’ ಎಂಬ ತುಕ್ಕು ಹಿಡಿದ ಸಮರ್ಥನೆ ಒಬ್ಬನ ನೈತಿಕತೆಯನ್ನೇ ಪ್ರಶ್ನಿಸುವಾಗ ಮುಖ್ಯ ಮಂತ್ರಿಗಳೇ? ನಿಮಗೆ ನಾನು ಪ್ರಶ್ನೆಯನ್ನು ಮಾಡಲೇಬೇಕಿದೆ!

ಏನೆಂದು ವ್ಯಾಖ್ಯಾನಿಸಿದಿರಿ? ಟಿಪ್ಪು ಸುಲ್ತಾನನೆಂಬುವವನು ಬ್ರಿಟಿಷರ ಜೊತೆ ಹೋರಾಡಿದ್ದನಲ್ಲದೇ, ಸ್ವತಃ ತನ್ನ ಮಕ್ಕಳನ್ನೂ ಅಡವಿಟ್ಟಿದ್ದಂತಹ ಮಹಾಪುರುಷ ಎಂದಿರಲ್ಲವೇ?! ಇದು ಇತಿಹಾಸವನ್ನರಿಯದ ಮಂದಬುದ್ಧಿಯ ಕಲ್ಪನೆಯೋ ಅಥವಾ ಅರಿತೂ ಇತಿಹಾಸವನ್ನು ತಿರುಚಿದಂತಹ ಚಾಣಾಕ್ಷತೆಯೋ?! ತನ್ನ ರಾಜ್ಯವನ್ನುಳಿಸಿಕೊಳ್ಳುವುದಕ್ಕಾಗಿ, ತನ್ನ ಸ್ಥಾನವನ್ನುಳಿಸಿಕೊಳ್ಳುವುದಕ್ಕಾಗಿ ಬ್ರಿಟಿಷರಿಗೆ ತನ್ನ ಹೆತ್ತ ಮಕ್ಕಳನ್ನೇ ಅಡವಿಟ್ಟವನು ನೇರ ಹೋರಾಟದಲ್ಲಿ ಸೋತಿದ್ದನೆಂಬ ಇತಿಹಾಸ ನಿಮಗೆ ಕಾಣಲೇ ಇಲ್ಲವೇ?!

ಕುರಾನ್ – ಕತ್ತಿ ಸಮಾಗಮದ ನಡುವೆಯೇ ಜನಿಸಿದ ಟಿಪ್ಪುವೆಂಬವನ ಇತಿಹಾಸದಲ್ಲಿ ದೇವಟ್ಟಿಪರಂಬು ಹತ್ಯಾಕಾಂಡವಿದೆ! ಸಾವಿರಾರು ಹಿಂದೂಗಳ ರಕ್ತಪಾತ ಮಾಡಿದ ಕುರುಹಿದೆ! ಛೇ! ಅಂತಹವನನ್ನು ನೀವು ಸ್ವಾತಂತ್ರ್ಯ ಹೋರಾಟಗಾರರೆಂದಿರೇ?! ಅದೆಷ್ಟೋ ಸಾಸಿರ ಮಹಿಳೆಯರನ್ನು ಕಾಮಕ್ಕೆ ಬಳಸಿ ಬಿಸುಟಿದವನು ನಿಮ್ಮ ಆದರ್ಶವೇ?!

ಟಿಪ್ಪೂ ನಿಜವಾಗಿಯೂ ಸ್ವಾತಂತ್ರ್ಯ ಹೋರಾಟಗಾರನಾಗಿದ್ದರೆ, ಧರ್ಮ-ಭೇದಗಳನ್ನು ಮರೆತು ಹೋರಾಡುತ್ತಿದ್ದನಷ್ಟೇ! ದೇವಾಲಯಗಳನ್ನು ಧ್ವಂಸ ಮಾಡಿ, ಕೇವಲ ತನ್ನ ಆಸ್ಥಾನವನ್ನು ಕಾಪಾಡಲು ಆಂಗ್ಲರ ವಿರುದ್ಧ ಹೋರಾಡಿದವನು ಸ್ವಾತಂತ್ರ್ಯ ಹೋರಾಟಗಾರನಾಗಲು ಹೇಗೆ ಸಾಧ್ಯ ಮುಖ್ಯಮಂತ್ರಿಗಳೇ?!

ಕನ್ನಡ ಕನ್ನಡವೆಂದು ಜಪಿಸುವ ನೀವು ನಿಜಕ್ಕೂ ಕನ್ನಡ ನಾಡಿಗೆ ಬದ್ಧರಾಗಿದ್ದೀರೇ? ಮೈಸೂರು ರಾಜರು ಕನ್ನಡ ಭಾಷೆಯನ್ನು ಶ್ರೀಮಂತವಾಗಿಸಿದರು. ಆದರೆ ಹೈದರಾಲಿ ಹಾಗೂ ಟಿಪ್ಪೂ ಸುಲ್ತಾನ್ ಕನ್ನಡದ ನಾಶಕ್ಕೆ ಮುನ್ನುಡಿಯಿಟ್ಟರೆಂಬ ಮಾಹಿತಿ ನಿಮಗಿಲ್ಲವೇ?! ದಿವಾನ, ಮಾಜಿಸ್ಟ್ರೇಟ್ ಮುಂತಾದ ಪದಗುಚ್ಛಗಳು ಪರಿಚಯವಾಗಿದ್ದು ಟಿಪ್ಪೂವಿನ ಕಾಲದಲ್ಲಿಯೇ! ಆತನಿಗಿದ್ದ ಪಾಶ್ಚಾತ್ಯ ಪ್ರೇಮ ಅದರಿಂದಲೇ ಸಾಬೀತಾಗುವುದಿಲ್ಲವೇ?! ಕನ್ನಡ ನಾಡಿಗೆ ಕನ್ನಡದ್ರೋಹಿಯ ಅಗತ್ಯವಿದೆಯಾ ಮುಖ್ಯಮಂತ್ರಿಗಳೇ?!

ಟಿಪ್ಪೂ ಸುಲ್ತಾನ ಜಯಂತಿಯನ್ನು ವಿರೋಧಿಸಿದವರಿಗೆಲ್ಲ ನೀವು ಕೋಮುವಾದಿ ಪಟ್ಟ ಕಟ್ಟುತ್ತಿದ್ದೀರಲ್ಲವೇ?! ಸ್ವತಃ ಮುಸಲ್ಮಾನರೇ, “ಹಿಂದೂ ಧರ್ಮದ ನಾಶಕ್ಕೆ ಕತ್ತಿ ಎತ್ತಿದ್ದ ಟಿಪ್ಪೂವಿನ ಜಯಂತಿಯನ್ನು ಕತ್ತು ಎತ್ತಿ ಆಚರಿಸುತ್ತಿದ್ದಾರಲ್ಲ” ಎಂದು ಉದ್ಗರಿಸುತ್ತಿದ್ದಾರಲ್ಲ?! ಅವರೆಲ್ಲ ಹಾಗಾದರೆ ನಿಮ್ಮ ಲೆಕ್ಕದಲ್ಲಿ ಕಾಫಿರ ರೆಂದು ಅರ್ಥವೇ?!

ಸರಿ! ನಿಮಗೆ ಕರ್ನಾಟಕದ ಮುಸಲ್ಮಾನರನ್ನು ಓಲೈಸುವ ಉದ್ದೇಶವಿದೆ ಎಂದೇ ತಿಳಿಯೋಣ! ಮಹಾತ್ಮ ಗಾಂಧಿಯ ಒಂದು ಕರೆಗೆ ಶ್ರೀಮಂತರಾಗಿದ್ದ ಹಾಜಿ ಇಸ್ಮೈಲ್ ಸೈಟ್, ತನ್ನೆಲ್ಲಾ ಆಸ್ತಿಗಳನ್ನು ತೊರೆದು , ಆಂಗ್ಲ ಶಿಕ್ಷಣ ಪದ್ಧತಿಯನ್ನು ನಿಷೇಧಿಸಿ, ತಮ್ಮದೇ ಆದ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿ ಎಲ್ಲಾ ಮುಸಲ್ಮಾನರಿಗೆ ಪ್ರೇರಣೆಯಾದರಲ್ಲಾ..? ಬಹುಶ: ಅವರ ಹೆಸರನ್ನೂ ನೀವು ಕೇಳಿರಲಿಕ್ಕಿಲ್ಲ!! ಇಂತಹವರ ಜಯಂತಿಯನ್ನು ನೀವು ಆಚರಿಸುತ್ತಿಲ್ಲವಲ್ಲ ಯಾಕೆ?!

ದೇವರ ಹೆಸರು ಹೇಳಿಕೊಂಡು ರಾಷ್ಟ್ರ ರಕ್ಷಣೆಗೆ ಪಣ ತೊಟ್ಟು ಮಡಿದ ಅಶ್ಫಖುಲ್ಲಾ ಖಾನ್ ಗಿಂತ ಅದೇ ದೇವರ ಹೆಸರು ಹೇಳಿ ಮತಾಂಧ ಚಟುವಟಿಕೆ ಮಾಡುತ್ತಿದ್ದ ಟಿಪ್ಪೂ ನಿಮಗೆ ಆಪ್ತನೆನಿಸಿದನೇ?!

ಎಂತಹ ದುರಂತವಿದು ಮುಖ್ಯಮಂತ್ರಿಗಳೇ?!

ಬಲಪಂಥೀಯರಿಗೆ ಟಿಪ್ಪೂವನ್ನು ಕಂಡರೆ ಮಾತ್ರವಲ್ಲ, ಯಾವ ಮುಸಲ್ಮಾನನೂ ಆಗುವುದೇ ಇಲ್ಲ ಎಂಬ ನಿಮ್ಮ ಆರೋಪವಿದೆಯಲ್ಲ?! ಅದು ಶುದ್ಧ ಸುಳ್ಳು! ಅದು ನಿಮ್ಮ ಅವಿವೇಕತನ ಹಾಗೂ ಅಪ್ಪಟ ದುರ್ಬಲತೆ! ಯಾಕೆ ಗೊತ್ತೇನು?! ನಿಜ ಅರ್ಥದಲ್ಲಿ ಹೇಳಬೇಕೆಂದರೆ, ನಿಮ್ಮ ಈ ಜಾತ್ಯಾತೀತವಾದಿಗಳಿಗೆ ಬೇಕಿರುವುದು ಅಖಂಡ ಹಿಂದೂ ರಾಷ್ಟ್ರವಲ್ಲ! ಬದಲಿಗೆ, ಧರ್ಮದಾಧಾರದ ಅಂಧಕಾರದಲ್ಲಿಯೇ ಉಳಿದು ನಿಮ್ಮ ರಾಜಕೀಯ ಅಭಿವೃದ್ಧಿಗೆ ಕಾಲ ಧೂಳಾಗಿ ಕೊನೆಗೂ ಅಜ್ಞಾನದಲ್ಲಿಯೇ ಉಳಿಯಗೊಳಿಸುವ ಈ ಜಾತಿ ತೀತವಾದ ಕೊಳಕು ವ್ಯವಸ್ಥೆ! ಅದಕ್ಕೆ ಗುರಿಯಾಗುತ್ತಿರುವುದು ನನ್ನ ಮುಸಲ್ಮಾನ ಬಾಂಧವರು!

ಯಾಕೆಂದರೆ, ನಿಮಗೆ ಅತೀತವಾದ ಅರಿವನ್ನು ಸಹಿಸುವಷ್ಟು ತಾಕತ್ತೂ ಇಲ್ಲ! ಧರ್ಮಗಳ ಮೀರಿದ ಸಮಾಜವನ್ನು ಸ್ಥಾಪಿಸುವ ಆಸಕ್ತಿಯೂ ಇಲ್ಲ!

ನಿಮ್ಮ ಸರಕಾರಕ್ಕೆ ನಿಜವಾಗಿಯೂ ಪ್ರಜ್ಞಾವಂತ ಮುಸಲ್ಮಾನ ಸಮಾಜವನ್ನಾಗಲೀ, ಅಥವಾ ಜಾತ್ಯಾತೀತವಾದ ವ್ಯವಸ್ಥೆಯನ್ನು ತರಬೇಕೆಂಬ ಇಚ್ಛೆ ಇದ್ದದ್ದೇ ಆಗಿದ್ದಲ್ಲಿ, ಅಬ್ದುಲ್ ಕಲಾಂ ರಂತಹ ದೇಶ ಕಂಡ ಅಪರೂಪದ ದೇಶಭಕ್ತನನ್ನು ನೆನಪಿಸುವ ಪ್ರಯತ್ನ ಮಾಡುತ್ತಿದ್ದಿರಿ!

ನಿಮಗೆ ಶಿಶುನಾಳ ಶರೀಫ, ಕಬೀರ ರಂತಹ ಸಂತರು ಆದರ್ಶವ್ಯಕ್ತಿಗಳಾಗುತ್ತಿದ್ದರು! ಆದರೆ? ಹಾಗಾಗಲೇ ಇಲ್ಲವಲ್ಲ? ಯಾಕೆ? ನಿಮಗೆ ದ್ವೇಷ ಕ್ರೌರ್ಯ ಹಿಂಸೆಯನ್ನೇ ಧರಿಸಿ ನಿಂತಿದ್ದವನ ಜಯಂತಿಯ ಮೂಲಕ ಮತ್ತಷ್ಟು ಅಸಹನೆಯನ್ನು ಸೃ಼ಷ್ಟಿಸಬೇಕಿತ್ತೇ? ಅಂತಹವನ ಜಯಂತಿಯ ಮೂಲಕ ನೀವು ಒಬ್ಬ ಜವಾಬ್ದಾರಿಯುತ ನಾಯಕನಾಗಿ ನಿಮ್ಮ ನಂಬಿದವರಿಗೆ ಕೊಡುತ್ತಿರುವುದು ಅಜ್ಞಾನದ ಅಂಧಕಾರವನ್ನಷ್ಟೇ! ಸರಿಯೇ?

ಹೇಳಿ! ನಿಮಗೆ ಇಲ್ಲಿಯ ತನಕ ಸೈನ್ಯದಲ್ಲಿ ತಮ್ಮ ದೇಶಕ್ಕೆ ಮಡಿದವರ ಒಬ್ಬ ಮುಸಲ್ಮಾನನ ಹೆಸರೂ ಗೊತ್ತಿರಲಿಕ್ಕಿಲ್ಲವಲ್ಲವೇ?! ದೇಶಕ್ಕೋಸ್ಕರ ಮಡಿದವನು
ನಿಮ್ಮರ್ಥದಲ್ಲಿ ಕಾಫಿರನಾಗುತ್ತಾನೆ, ದೇಶವನ್ನು ತುಂಡರಿಸುತ್ತೇನೆಂದವನು ನಿಮಗೆ ಆದರ್ಶಪ್ರಾಯವಾಗುತ್ತಾನೆಂದರೆ ವ್ಹಾ! ಮುಖ್ಯಮಂತ್ರಿಗಳೇ! ವ್ಹಾ! ಮೆಚ್ಚಲೇಬೇಕು!

ಮುಖ್ಯಮಂತ್ರಿಗಳೇ! ನಿಮ್ಮ ‘ಅಹಿಂದ’ ‘ಜಾತ್ಯಾತೀತ’ ಅಥವಾ ಇನ್ನೇನೇ ಇರಲಿ! ಸುಖಾಸುಮ್ಮನೆ ನೆಪ ಹೇಳಿ ನಮ್ಮನ್ನು ಮತ್ತದೇ ಅಂಧಕಾರದೊಳ ಇಡಬೇಡಿ! ನೀವು ನಿಜವಾಗಲೂ ಜಾತ್ಯಾತೀತ ನಾಯಕರೇ ಆಗಿದ್ದಲ್ಲಿ, ಟಿಪ್ಪುವಿನಂತಹ ರಾಕ್ಷಸನನ್ನು ಸ್ಮರಿಸುವ ಬದಲು ದೇಶಕ್ಕೋಸ್ಕರ ಮಡಿದ ಅಸಂಖ್ಯ ಮುಸಲ್ಮಾನ ದೇಶಭಕ್ತರನ್ನು ಸ್ಮರಿಸಿ! ಆದರೆ,. ಮತ್ತೆ ಇಂತಹ ಹುಚ್ಚಾಟವನ್ನು ಮಾಡಿ ನನ್ನ ಭಾರತದ ಸೌಹಾರ್ದತೆಯನ್ನು ಹಾಳುಗೆಡವಬೇಡಿ.

– ಅಶ್ರಫ್ ಅಬ್ಬಾಸ್

Tags

Related Articles

Close