ಅಂಕಣಪ್ರಚಲಿತ

ಟ್ವಿಟ್ಟರ್ ನಲ್ಲಿ ದೇಶದಲ್ಲೆ ನಂ. 1 ಟ್ರೆಂಡಿಂಗ್ ಅಯ್ತು ಕಲ್ಲಡ್ಕದ ಶ್ರೀ ರಾಮ ವಿದ್ಯಾಕೇಂದ್ರ!!!

ಕಲ್ಲಡ್ಕ ಹಾಗೂ ಪುಣಚ ಶಾಲೆಗಳಿಗೆ ಕೊಲ್ಲೂರು ದೇವಾಲಯದಿಂದ ಅನುದಾನದ ಮೂಲಕ ವ್ವವಸ್ಥೆಯಾಗುತ್ತಿದ್ದ ಬಿಸಿಯೂಟಕ್ಕೆ ರಾಜ್ಯ ಸರಕಾರ ನಿರ್ಬಂಧ ಹೇರಿತ್ತು. ರಾಜ್ಯ ಸರಕಾರದ ದ್ವೇಷರಾಜಕಾರಣದಿಂದಾಗಿ ಮುಗ್ಧಮಕ್ಕಳು ಒಂದು ಹೊತ್ತಿನ ಊಟಕ್ಕಾಗಿ ಪರಿತಪಿಸುವ ಪರಿಸ್ಥಿತಿ ಒದಗಿ ಬಂದಿತ್ತು.

ಈ ಅನ್ಯಾಯದ ವಿರುದ್ಧ ಹೋರಾಡಿ ಮುಗ್ಧಮಕ್ಕಳಿಗೆ ನ್ಯಾಯ ಸಿಗಬೇಕೆಂಬ ಉದ್ದೇಶದಿಂದ ಪೋಸ್ಟ್ ಕಾರ್ಡ್ ತಂಡ ಅಭಿಯಾನವನ್ನು ಪ್ರಾರಂಭ ಮಾಡಿತ್ತು. ಒಂದು ಹುಡುಗನ ಊಟದ ಖರ್ಚು ದಿನಕ್ಕೆ 10 ರೂ ನಂತೆ ತಗಲುತ್ತಿತ್ತು. ಹೀಗೆ 3016 ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆಯನ್ನು 8 ತಿಂಗಳುಗಳ ಕಲ್ಪಿಸುವ ಚಿಂತನೆಯೊಂದಿಗೆ ನಾವು “ಭಿಕ್ಷಾಂ ದೇಹಿ” ಎಂಬ ಅಭಿಯಾನ ಪ್ರಾರಂಭಿಸಿದೆವು. ಸಮಾಜದಲ್ಲಿ ಯಾರಾದರೂ ಕಷ್ಟ ಎಂದು ನಮ್ಮ ಬಳಿ ಬಂದರೆ ಅವರಿಗೆ ಆಸರೆಯಾಗಬೇಕಾದ್ದು ಸಮಾಜದಲ್ಲಿ ಒಂದಾಗಿರುವ ನಮ್ಮ ಕರ್ತವ್ಯ ಎಂಬ ಆಶಯದೊಂದಿಗೆ ಪ್ರಾರಂಭವಾದ ಅಭಿಯಾನಕ್ಕೆ ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬಿಸಿರೋಡಿನಲ್ಲಿ ಮಕ್ಕಳು, ಪೋಷಕರು, ನಾಗರಿಕರು ಸೇರಿ ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಕಲ್ಲಡ್ಕ ಶಾಲೆಯ ಸಂಚಾಲಕರಾದ ಶ್ರೀ ಪ್ರಭಾಕರ ಭಟ್ ಅವರು, “ಕೊಲ್ಲೂರು ದೇವಳದಿಂದ ಮಕ್ಕಳ ಊಟಕ್ಕಾಗಿ ಅನುದಾನ ಕೊಡದಿದ್ದರೆ ನಾವು ಭಿಕ್ಷೆ ಬೇಡಿಯಾದರೂ ಮಕ್ಕಳಿಗೆ ಊಟ ಹಾಕಿಸುತ್ತೇನೆ” ಎಂದು ನುಡಿದಿದ್ದರು.

ಇದೇ ನಿಟ್ಟಿನಲ್ಲಿ ಪೋಸ್ಟ್ ಕಾರ್ಡ್ ಸಾಮಾಜಿಕ ಜಾಲತಾಣದಲ್ಲಿ “ಭಿಕ್ಷಾಂದೇಹಿ” ಎಂಬ ಆಂದೋಲನವನ್ನು ಪ್ರಾರಂಭಿಸಿತ್ತು. ಪ್ರಜ್ಞಾವಂತರಾದ, ಸಮಾಜಹಿತವನ್ನು ಬಯಸಿದ ಅನೇಕರು ಈ ಆಂದೋಲನದೊಂದಿಗೆ ಕೈಜೋಡಿಸಿ ಮುಗ್ಧಮಕ್ಕಳ ಪರವಾಗಿ ನಾವೆಲ್ಲ ಸದಾ ಇರುತ್ತೇವೆ ಎಂಬುದನ್ನು ಸಾಬೀತುಪಡಿಸಿದ್ದಾರೆ. ಟ್ವಿಟ್ಟರ್ ನಲ್ಲಿಯೂ ಕೂಡ #ಭಿಕ್ಷಾಂದೇಹಿ ಎಂಬ ಹ್ಯಾಶ್‍ಟ್ಯಾಗ್ ನೊಂದಿಗೆ ಪೋಸ್ಟ್ ಕಾರ್ಡ್ ಅಭಿಯಾನವನ್ನೂ ಪ್ರಾರಂಭಿಸಿತ್ತು. ಕೆಲವೇ ಕ್ಷಣಗಳಲ್ಲಿ ಅದು ಟ್ರೆಂಡಿಂಗ್ ಆದುದು ಜನರಲ್ಲಿರುವ ಕಾಳಜಿಗೆ ಒಂದು ಉದಾಹರಣೆಯೆಂದು ನಾವು ಭಾವಿಸುತ್ತೇವೆ. ಕಲ್ಲಡ್ಕ ಶಾಲೆಯ ಮಕ್ಕಳ ಪರವಾಗಿ ನಿಂತು ಟ್ವಿಟ್ಟರ್ ನಲ್ಲಿ ದೇಶದಲ್ಲಿಯೇ ನಂಬರ್ ವನ್ ಟ್ರೆಂಡಿಂಗ್ ಆಗುವ ರೀತಿಯಲ್ಲಿ ಪ್ರತಿಕ್ರಯಿಸಿದ್ದಾರೆ. ಆ ಮೂಲಕ ಸರಕಾರಕ್ಕೆ ಸ್ಪಷ್ಟವಾದ ಸಂದೇಶವನ್ನು ದೇಶದ ಜನತೆ ನೀಡಿದ್ದಾರೆ.

ಇಂತಹ ಸಮಾಜಹಿತ ಕಾರ್ಯದೊಂದಿಗೆ ಕೈಜೋಡಿಸಿದ ದೇಶದ ಎಲ್ಲಾ ಬಾಂಧವರಿಗೂ ನಾವು ಕೃತಜ್ಞತೆಯನ್ನು ಸಲ್ಲಿಸುತ್ತೇವೆ. ಇನ್ನು ಮುಂದೆಯೂ ಇದೇ ರೀತಿಯಾದ ಸ್ಪಂದನೆಯನ್ನು ನಾವು ನಿರೀಕ್ಷಿಸುತ್ತೇವೆ. ಇದು ಹೋರಾಟದ ಪ್ರಾರಂಭದ ಹಂತ. ಕಣ್ಣು ಮುಚ್ಚಿ ಕುಳಿತಿರುವ, ನಿದ್ರಿಸುತ್ತಿರುವ ಸರಕಾರನ್ನು ಎಚ್ಚರಿಸುವ ಕಾರ್ಯ ನಮ್ಮಿಂದಾಗಬೇಕು. ಮಕ್ಕಳ ಜೀವನಕ್ಕೆ ನಾವು ಆಶಾಕಿರಣಗಳಾಗಬೇಕು.

“ಯಾವಾಗ ನೂರಾರು ಜನ ಉದಾರಹೃದಯಿಗಳಾಗಿ ಬಡತನ ಮತ್ತು ಅಜ್ಞಾನ ಕೂಪದಲ್ಲಿ ದಿನೇದಿನೇ ಆಳ ಆಳಕ್ಕೆ ಮುಳುಗುತ್ತಿರುವ ನಮ್ಮ ನಾಡಿನ ಲಕ್ಷಾಂತರ ಜನರ ಹಿತಕ್ಕೋಸ್ಕರ, ಆತುರರಾಗಿ ಕೈಲಾದಮಟ್ಟಿಗೆ ಕಷ್ಟಪಡುವರೋ, ಆಗ ಮಾತ್ರ ಭರತಖಂಡ ಮೇಲೆ ಏಳುವುದು.”

ಇದು ರಾಷ್ಟ್ರಸಂತರಾಗಿರುವ ವಿವೇಕಾನಂದರ ನುಡಿಗಳು. ಈ ಚಿಂತನೆಯನ್ನು ನಮ್ಮ ಮನದಲ್ಲಿ ಮೂಡಿಸಿಕೊಂದು ಇನ್ನಷ್ಟು ಸಮಾಜಹಿತವಾದ ಕಾರ್ಯ ಮಾಡುವವರು ನಾವಾಗೋಣ.

 

 

 

 

 

 

 

 

 

 

 

 

 

 

 

 

 

 
– ಪೋಸ್ಟ್ ಕಾರ್ಡ್ ತಂಡ

 

 

Tags

Related Articles

Close