ಪ್ರಚಲಿತ

ಡಿಕೆಶಿಯ ಅಕ್ರಮ 400,00,00,000 ರೂ. ಆಸ್ತಿ ಖೋತಾ? ಪವರ್ ಮಿನಿಸ್ಟರ್ ಬ್ಯಾಟರಿ ವೀಕ್ ಆಯ್ತಾ?

ಆದಾಯ ತೆರಿಗೆ ಇಲಾಖೆ (ಐಟಿ) ದಾಳಿ ಸುಳಿಯಲ್ಲಿ  ಸಿಲುಕಿರುವ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಸಂಕಷ್ಟ ಸರಣಿ ಮುಗಿಯುವಂತೆ ಕಾಣುತ್ತಿಲ್ಲ. ದಾಳಿ ವೇಳೆ ಸಚಿವರ ಜತೆಗೆ ಅವರ ಕುಟುಂಬ ಸದಸ್ಯರು ಹಾಗೂ ಸಂಬಂಧಿಕರ ಬಳಿ ಸಿಕ್ಕ 400,00,00,000  ರೂ.ಮೌಲ್ಯದ ಆಸ್ತಿಗೆ ಯಾವುದೇ ದಾಖಲೆ ಒದಗಿಸದ ಹಿನ್ನಲೆಯಲ್ಲಿ ಅದನ್ನು ಅಕ್ರಮ ಸ್ವತ್ತೆಂದು ಪರಿಗಣಿಸಲು ಆದಾಯ ಇಲಾಖೆ ತೀರ್ಮಾನಿಸಿದೆ.

ಕುಟುಂಬ ಸಮೇತರಾಗಿ ಆದಾಯ ತೆರಿಗೆ ಇಲಾಖಾಧಿಕಾರಿಗಳ ಬರೋಬ್ಬರಿ 2.15 ಗಂಟೆಗಳ ಕಾಲ ವಿಚಾರಣೆ ಮುಗಿಸಿಕೊಂಡು ಬಂದಿರುವ ಡಿಕೆಶಿ ಒಳಗಡೆ ಯಾವ ವಿಚಾರಣೆ ನಡೆಯಿತು ಎನ್ನುವುದು ಎಲ್ಲವೂ ಗಪ್‍ಚುಪ್. ಒಟ್ಟಾರೆ ಪತ್ತೆಯಾದ 400,00,00,000 ರೂ. ಬೇನಾಮಿ ಆಸ್ತಿಯನ್ನು ಉಳಿಸಲು ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ. ಆದರೆ ಅದು ವಿಫಲವಾಗಿದ್ದೇ ಆದರೆ ಡಿಕೆಶಿಯ ಅಷ್ಟೂ ಆಸ್ತಿಗಳನ್ನು ಜಫ್ತಿ ಮಾಡಲಿದ್ದು, ಪವರ್ ಮಿನಿಸ್ಟರ್ ಒಬ್ಬರ ಬ್ಯಾಟ್ರಿ ವೀಕಾಗಲಿದೆ. ಇನ್ನು ಕೆಲವೇ ದಿನಗಳಲ್ಲಿ ಆದಾಯ ತೆರಿಗೆ ಇಲಾಖೆಯ ನಿರ್ಧಾರ ಹೊರಬಿದ್ದು, ಡಿಕೆಶಿಯ ಭವಿಷ್ಯವೂ ಇದರಲ್ಲಿ ನಿರ್ಧಾರವಾಗಲಿದೆ.

400,00,00,000 ರೂ. ಮೌಲ್ಯದ ಆಸ್ತಿಗೆ ಸಂಬಂಧಿಸಿದ ಯಾವುದೇ ದಾಖಲೆಗಳು ತಮ್ಮ ಬಳಿ ಇಲ್ಲ ಎಂದು ಡಿ.ಕೆ ಶಿವಕುಮಾರ್ ಅವರೇ ವಿಚಾರಣೆ ವೇಳೆ ಹೇಳಿಕೆ ಕೊಟ್ಟಿರುವುದರಿಂದ ಮುಂದೇನಾಗಬಹುದೆಂದು ಇಂದೇ ಸ್ಪಷ್ಟವಾಗಿ ಊಹಿಸಿಕೊಳ್ಳಬಹುದು. ಒಟ್ಟು 400,00,00,000  ರೂ. ಮೌಲ್ಯದ ಆಸ್ತಿಯಲ್ಲಿ 120 ಕೋಟಿ ರೂ. ಡಿಕೆಶಿ ಹೆಸರಲ್ಲಿದ್ದರೆ ಅವರು ಪಾಲದಾರರಾಗಿರುವ ಸಂಸ್ಥೆಗಳಲ್ಲಿ ಉಳಿದ 280 ಕೋಟಿ ರೂ ಹೂಡಿಕೆಯಾಗಿದೆ. ಇದು ಒಟ್ಟಾರೆ ಬೇನಾಮಿ ಆಸ್ತಿ ಮತ್ತು ಬೇರೆ ವ್ಯಾಪಾರ ವಹಿವಾಟಿನ ಸಂಪತ್ತಾಗಿರಬಹುದೆಂದು ಕೂಡಾ ಹಿರಿಯ ಐಟಿ ಅಧಿಕಾರಿಗಳು ತಿಳಿಸಿದ್ದಾರೆ.

ಘೋಷಿತಾ ಆಸ್ತಿ 251 ಕೋಟಿ ರೂ.

ಸಚಿವ ಡಿ.ಕೆ ಶಿವಕುಮಾರ್ 2013ರಲ್ಲಿ 251 ಕೋಟಿ ರೂ ಮೊತ್ತದ ಆಸ್ತಿಯನ್ನು 2013ರಲ್ಲಿ 251 ಕೋಟಿ ರೂ. ಮೊತ್ತದ ಆಸ್ತಿಯನ್ನು ಘೊಷಿಸಿಕೊಂಡಿದ್ದರು. ಕನಕಪುರ, ಸರ್ಜಾಪುರದಲ್ಲಿ 1 ಕೋಟಿ ರೂ . ಮೌಲ್ಯದ ಜಮೀನು, ಉತ್ತರಹಳ್ಳಿ ಹೋಬಳಿ, ಭೂಪಸಂದ್ರ , ಕೆ.ಆರ್‍ಪುರ, ಕನಕಪುರ ಮೈಸೂರು , ಗೋಪಾಲಪುರ , ಓಕಳಿಪುರ , ಮೈಸೂರಿನ ಮೂರು ಕಡೆ ಇರುವ ಕಟ್ಟಡ , ಕೆಂಗೇರಿ , ಇನ್‍ಫ್ಯಾಂಟ್ರಿ ರಸ್ತೆ ಮಡಿವಾಳದಲ್ಲಿರುವ ಐದು ಕಾಂಪ್ಲೆಕ್ಸ್ ಸೇರಿ 26 ಕೋಟಿ ರೂ ಮೌಲ್ಯದ ವಾಣಿಜ್ಯ ಕಟ್ಟಡಗಳನ್ನು ಹೊಂದಿದ್ದಾರೆ. ಕನಕಪುರ ಟೌನ್, ದೆಹಲಿ, ಕೃಷ್ಣನಗರ , ಮುಂಬೈನಲ್ಲಿ ಫ್ಲಾಟ್, ಸದಾಶಿವ ನಗರದ್ದು ಎಲ್ಲವೂ ಸೇರಿ 14 ಕೋಟಿ ರೂ ಬೆಲೆ ಬಾಳುವಂತಹದ್ದು. ಅವರ ಸ್ಥಿರಾಸ್ಥಿ ಮೌಲ್ಯ 191 ಕೋಟಿ ರೂ ಎಂದು ಮೂಲಗಳಿಂದ ತಿಳಿಸಿವೆ.

ಡಿ.ಕೆ ಶಿವಕುಮಾರ್ , ಸಹೋದರ ಡಿ.ಕೆ ಸುರೇಶ್, ಮಾವ ತಿಮ್ಮಯ್ಯ , ಸೋದರಿ ಪದ್ಮಾ , ಆಪ್ತ ಜ್ಯೋತಿಷಿ ದ್ವಾರಕಾನಾಥ್, ಉದ್ಯಮಿ ಸಚಿನ್ ನಾರಾಯಣ್ , ಸೋದರ ಸಂಬಂಧಿ ಎಸ್. ರವಿ ಕಾಂಗ್ರೆಸ್ ಮುಖಂಡ ವಿಜಯ್ ಮುಳಗಂದ, ಆಪ್ತ ಕಾರ್ಯದರ್ಶಿ ಬಿ.ಎಸ್.ಶ್ರೀಧರ್, ಲೆಕ್ಕ ಪರಿಶೋಧಕ ಸೊಮೇಶ್, ಶರ್ಮಾ ಟ್ರಾವೆಲ್ಸ್ ಸಂಸ್ಥೆ ಮಾಲೀಕ ಸುನೀಲ್ ಕುಮಾರ್ ಶರ್ವ , ಆಪ್ತ ಸಹಾಯಕ ಆಂಜನೇಯ, ವಾಯುಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷ್ಮಣ್ ಸೇರಿ ಶಿವಕುಮಾರ್ ಅವರ 50ಕ್ಕೂ ಅಧಿಕ ಮಂದಿ ಆಪ್ತರ ನಿವಾಸ ಮತ್ತು ಕಚೇರಿಗಳ ಮೇಲೆ ಐಟಿ ದಾಳಿ ನಡೆದಿತ್ತು.

ನೋಟು ಅಮಾನ್ಯೀಕರಣದ ನಂತರವೂ ಹಳೇ ನೋಟುಗಳ ಚಲಾವಣೆ ಮಾಡಿರುವ ಬಗ್ಗೆ ಜಾರಿ ನಿರ್ದೇಶಾನಲದಲ್ಲಿ ಸಚಿವರ ವಿರುದ್ಧ ಖಾಸಗಿ ದೂರು ದಾಖಲಾಗಿದೆ. ಈ ಬಗ್ಗೆ ಸಾಕ್ಷ್ಯ ಕಲೆ ಹಾಕಲು ಮುಂದಾಗಿದೆ. ಸಚಿವರು ಕನಕಪುರದಲ್ಲಿ ಕೆಲ ವ್ಯಕ್ತಿಗಳಿಗೆ ನಿಷೇಧಿತ ನೋಟುಗಳನ್ನು ನೀಡಿ ಹೊಸ ನೋಟುಗಳಾಗಿ ಪರಿವರ್ತಿಸಿ 2 ಸಾವಿರ ಕೋಟಿ ರೂ. ವ್ಯವಹಾರ ನಡೆಸಿರುವ ಆರೋಪದ ಬಗ್ಗೆ ಇ.ಡಿ ತನಿಖೆ ನಡೆಸಲಿದೆ. ಡಿಕೆಶಿ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ಇನ್ನೂ ಹಲವರ ಮೇಲೂ ಐಟಿ ಇಲಾಖೆ ಕಣ್ಣಿಟ್ಟಿದೆ. ಅಕ್ರಮ ವಹಿವಾಟಿಗೆ ಸಂಬಂಧಿಸಿದ ದಾಖಲೆ ಸಂಗ್ರಹಿಸುತ್ತಿರುವ ತಂಡ ಶೀಘ್ರದಲ್ಲೇ 2 ನೇ ಸುತ್ತಿನ ಕಾರ್ಯಾಚರಣೆ ಆರಂಭಿಸುವ ಸಾಧ್ಯತೆ ಇದೆ.

ತನಿಖೆ ಪೂರ್ಣಗೊಳ್ಳುತ್ತಿದ್ದಂತೆಯೇ ಐಟಿ ಅಧಿಕಾರಿಗಳು ಸಮಗ್ರ ವರದಿಯನ್ನು ಸಿದ್ಧಪಡಿಸಲಿದ್ದಾರೆ. ಡಿಕೆಶಿ ಹೇಳಿಕೆ, ಅವರು ಒದಗಿಸಿರುವ ದಾಖಲೆ, ದಾಳಿಯ ವಿವರ ಹಾಗೂ ದಾಖಲೆಗಳಿಲ್ಲದ ಆಸ್ತಿ ಪ್ರಮಾಣದ ಒಟ್ಟಾರೆ ಮಾಹಿತಿ ಇರುವ ಈ ವರದಿಯನ್ನು ಅಧ್ಯಯನ ಮಾಡಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ. ಅಕ್ರಮ ಸಂಪಾದನೆ ಹಾಗೂ ಅಕ್ರಮ ಹಣಕಾಸಿನ ವಹಿವಾಟು ದೃಢಪಟ್ಟರೆ ಪ್ರಕರಣದ ತನಿಖೆ ಜಾರಿ ನಿರ್ದೇಶನಾಲಯಕ್ಕೆ ವರ್ಗಾವಣೆಯಾಗುವ ಸಾಧ್ಯತೆ ಇದೆ.

ಐದು ವರ್ಷ ಜೈಲು ಭೀತಿ

ಐಟಿ ಅಧಿಕಾರಿಗಳು ಆಸ್ತಿ ಮೌಲ್ಯಮಾಪನ ಮಾಡಿದ ಸಂದರ್ಭದಲ್ಲಿ ಸಚಿವರು ಬೇನಾಮಿ ಆಸ್ತಿ ಹೊಂದಿರುವ ಬಗ್ಗೆಯೂ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದು, ದೃಢಪಟ್ಟರೆ ಸಚಿವರ ವಿರುದ್ಧ ಬೇನಾಮಿ ವಹಿವಾಟು ನಿಯಂತ್ರಣ ಕಾಯ್ದೆ ಪ್ರಕಾರ ಕ್ರಮ ಕೈಗೊಳ್ಳುವ ಸಾಧ್ಯತೆಗಳಿವೆ. ಬೇನಾಮಿ ಆಸ್ತಿಯ ಪ್ರಸ್ತುತ ಇರುವ ಮೌಲ್ಯದ ಮೇಲೆ ಶೇಕಡಾ 10 ದಂಡ ವಿಧಿಸಿ, 5 ವರ್ಷಗಳವರೆಗೆ ಶಿಕ್ಷೆ ವಿಧಿಸಬಹುದು. ಕೇಂದ್ರ ಸರಕಾರ 2016ರಲ್ಲಿ ಬೇನಾಮಿ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ಜಾರಿಗೆ ತಂದಿದ್ದು, ಇದರ ಪ್ರಕಾರ ಬೇನಾಮಿ ಆಸ್ತಿ ಜಪ್ತಿ ಮಾಡುವ ಅಧಿಕಾರವೂ ಇ.ಡಿಗೆ ಇದೆ.

ಡಿ.ಕೆ ಶಿವಕುಮಾರ್ ಮತ್ತು ಅವರ ಕುಟುಂಬ ಸದಸ್ಯರಿಗೆ ಇಂದು ವಿಚಾರಣೆಗೆ ಹಾಜರಾಗುವಂತೆ ಐಟಿ ಅಧಿಕಾರಿಗಳು ನೋಟಿಸು ಜಾರಿ ಮಾಡಿದ್ದು  ಕ್ವೀನ್ಸ್ ರಸ್ತೆಯಲ್ಲಿರುವ ಕಚೇರಿಗೆ ವಿಚಾರಣೆಗೆ ಬರಲು ನೋಟಿಸ್ ನೀಡಿದ್ದು, ಲೆಕ್ಕ ಪರಿಶೋಧಕರನ್ನು ಜತೆಗೆ ಕರೆತರದಂತೆ ಸೂಚಿಸಲಾಗಿದೆ. ಪತ್ನಿ ಉಷಾ, ಮಗಳು , ತಾಯಿ ಗೌರಮ್ಮ , ಸೋದರಿ ಪದ್ಮಾ, ಸೋದರಿ ಡಿ.ಕೆ ಸುರೇಶ್ ಅವರಿಗೂ ವಿಚಾರಣೆಗೆ ಹಾಜರಾಗಲು ನೋಟಿಸ್‍ನಲ್ಲಿ ತಿಳಿಸಲಾಗಿದೆ.

 

-ಪವಿತ್ರ

 

Tags

Related Articles

Close