ಪ್ರಚಲಿತ

ಡಿಕೆಶಿ ಸಾಹೇಬ್ರೇ… ಕರ್ನಾಟಕ ಸರಕಾರಕ್ಕೆ ವಿದ್ಯುತ್ ಉತ್ಪಾದಿಸಿ ಮಾರಲು ಅವಕಾಶವಿದ್ದರೂ ಖರೀದಿಸುವಂತಹ ಹೀನಾಯ ಸ್ಥಿತಿ ಬಂದಿದ್ದು ಯಾಕೆ ?

ಸದ್ಯ ರಾಜ್ಯದಲ್ಲಿ ಈಗ ವಿದ್ಯುತ್ ಕಣ್ಣಾ ಮುಚ್ಚಾಲೆಯಾಟ! ಕಲ್ಲಿದ್ದಲು ಕೊರತೆ , ತಾಂತ್ರಿಕ ದೋಷ ಮತ್ತು ನಿರ್ವಹಣೆಯಲ್ಲಿನ ಕಾರಣಗಳಿಂದಾಗಿ ಉಷ್ಣ ಉತ್ಪಾದನೆ ದಿಢೀರ್ ಆಗಿ 1,500 ಮೆಗಾ ವ್ಯಾಟ್‍ನಷ್ಟು ಇಳಿಕೆಯಾಗಿದೆ.. ಈ ಹಿನ್ನೆಲೆಯಲ್ಲಿ ಮಂಗಳವಾರ ಮಧ್ಯರಾತ್ರಿಯಿಂದಲೇ 500 ಮೆಗಾವ್ಯಾಟ್ ಅಲ್ಪಾವಧಿ ವಿದ್ಯುತ್ ಖರೀದಿ ಆರಂಭವಾಗಿದ್ದು ಇಂಡಿಯನ್ ಎನರ್ಜಿ ಎಕ್ಸ್‍ಚೇಂಜ್‍ನಿಂದಲೂ (ಐಇಎಕ್ಸ್) ವಿದ್ಯುತ್ ಖರೀದಿಸಿ ಪರಿಸ್ಥಿತಿ ನಿಭಾಯಿಸಲು ಇಂಧನ ಇಲಾಖೆ ಮುಂದಾಗಿದೆ. ಇಷ್ಟಾದರು 1000 ಮೆಗಾವ್ಯಾಟ್ ಕೊರತೆ ತಲೆ ತೋರಿರುವುದರಿಂದ ವಿದ್ಯುತ್ ಕಡಿತ ಮುಂದುವರಿದಿದೆ.

ಶಹಬ್ಬಾಸ್ ಡಿಕೆಶಿ ಸಾಹೇಬ್ರೇ… ಅಂತೂ ಇಂದು ಈ ಬಾರಿಯೂ ಬೇಸಿಗೆ ಕಾಲದಲ್ಲಿ ಕತ್ತಲಭಾಗ್ಯ ಅಂತ ಖಾತ್ರಿಯಾಯಿತು ಬಿಡಿ…

ಮುಂಗಾರು ಆರಂಭದಲ್ಲಿ ಮಳೆರಾಯ ಕೈಕೊಟ್ಟರೂ ಜುಲೈ ಮಧ್ಯಭಾಗದಿಂದ ಎರಡು ತಿಂಗಳಿಗೂ ಹೆಚ್ಚು ಕಾಲ ನಿರಂತರವಾಗಿ ಮಳೆ ಸುರಿದ ಪರಿಣಾಮ ವಿದ್ಯುತ್ ಬೇಡಿಕೆ ತೀವ್ರ ಇಳಿಕೆಯಾಗಿತ್ತು. ಜತೆಗೆ ಕೃಷಿ ಚಟುವಟಿಕೆಯು ಬಿರುಸುಗೊಂಡಿತ್ತು. ಈಗ ಮಳೆ ನಿಂತಿದ್ದು, ವಿದ್ಯುತ್ ಬೇಡಿಕೆಯ ಏರುಮುಖವಾಗಿದೆ. ಈ ಹೊತ್ತಿನಲ್ಲಿ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಉತ್ಪಾದನೆ ಕುಸಿದಿರುವುದರಿಂದ ಸಮಸ್ಯೆ ತಲೆದೋರಿದೆ.

ಕರ್ನಾಟಕದಲ್ಲಿ ಇನ್ನು ಮುಂದೆ ಕರೆಂಟ್ ಹೋಗುವ ಕೊರತೆ ಇಲ್ಲ ಎಂದು ನಾವೆಲ್ಲಾ ಖುಷಿ ಪಡುತ್ತಿದ್ದರೆ ಸುಖಾ ಸುಮ್ಮನೆ ಸುಳ್ಳು ಹೇಳಿದರಲ್ಲವೇ ? ಐದು ವರ್ಷದಲ್ಲಿ ವಿದ್ಯುತ್ ಸಮಸ್ಯೆಯನ್ನು ಸರಿದೂಗಿಸಲು ಆಗದವರು ನೀವು ಇಂಧನ ಸಚಿವರಾಗಿ ಆಯ್ಕೆ ಯಾಕಾದರೂ ಆಗಿರುವಿರಿ ಎಂದು ನಮಗೆ ಅರ್ಥವಾಗುತ್ತಿಲ್ಲ. ಶಾಖ ವಿದ್ಯತ್‍ಗೆ ಕಲ್ಲಿದ್ದಲು ಬರದೆ ಅದು ಕೂಡಾ ಮುಚ್ಚುವ ಸ್ಥಿತಿ ಬಂದಿರುವುದು ಎಷ್ಟರ ಮಟ್ಟಿಗೆ ಸರಿ? ಶಾಖ ವಿದ್ಯತ್‍ಗೆ ಕಲ್ಲಿದ್ದಲು ಪೂರೈಸಿದ್ದೇ ಆಗಿದ್ದರೆ ಕರ್ನಾಟಕದಿಂದ ಬೇರೆ ರಾಜ್ಯಗಳಿಗೆ ವಿದ್ಯುತ್ ಮಾರಾಟ ಮಾಡಬಹುದುದಿತ್ತು. ಹಾಗಾದರೆ ನಿಮಗೂ ಅದೇ ರೀತಿ ಮಾಡಬಹುದಿತ್ತಲ್ಲವೇ? ನೀವೊಬ್ಬ ಇಂಧನ ಸಚಿವರಾಗಿ ನಿಮಗೆ ಇದರ ಬಗ್ಗೆ ಕಾಳಜಿ ವಹಿಸಿಕೊಳ್ಳಬಹುದಲ್ಲವೇ?

ಕೇಂದ್ರ ಸರಕಾರದ ಹಂಚಿಕೆಯಲ್ಲೂ ಇಳಿಕೆ

ಇನ್ನೊಂದೆಡೆ ಕೇಂದ್ರ ಸರಕಾರದೊಂದಿಗಿನ ಒಡಂಬಡಿಕೆಯಂತೆ ಹಂಚಿಕೆಯಾದ ವಿದ್ಯುತ್‍ನಲ್ಲೂ 700 ಮೆಗಾವ್ಯಾಟ್ ಇಳಿಕೆಯಾಗಿದೆ. ಅಲ್ಲಿಂದ ಸುಮಾರು 3000 ಮೆಗಾವ್ಯಾಟ್ ಹಂಚಿಕೆಯಾಗಿದ್ದರೂ 2,300 ಮೆಗಾವ್ಯಾಟ್ ಪೂರೈಕೆಯಾಗುತ್ತಿದೆ. ದೇಶದ ಬಹುತೇಕ ಕಡೆಗಳಲ್ಲೂ ಕಲ್ಲಿದ್ದಲು ಕೊರತೆ ಗಣಿಗಾರಿಕೆಗೆ ಅಡಚಣೆ.. ಇತರೆ ಕಾರಣಗಳಿಂದ ಪೂರೈಕೆ ಇಳಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಕಲ್ಲಿದ್ದಲು ಖಾಲಿಯಾಗುವವರೆಗೆ ಯಾಕೆ ಸುಮ್ಮನಿದ್ದಿರಿ?

ತಾಂತ್ರಿಕ ದೋಷ

ಉಡುಪಿಯ ಯುಪಿಸಿಎಲ್ ಸ್ಥಾವರದ ಒಂದು ಘಟಕದಲ್ಲಿ ತಾಂತ್ರಿಕ ಸೋಷ ಕಾಣಿಸಿಕೊಂಡಿದ್ದು, 600 ಮೆಗಾವ್ಯಾಟ್ ಉತ್ಪಾದನೆ ಖೋತಾ ಆಗಿದೆ. ದುರಸ್ತಿ ಕಾರ್ಯ ಪೂರ್ಣಗೊಳ್ಳಲು ಇನ್ನೊಂದು ವಾರ ಕಾಲಾವಕಾಶ ಬೇಕಿದ್ದು, ಅಲ್ಲಿಯವರೆಗೆ ಒಂದು ಘಟಕವಷ್ಟೇ ಕಾರ್ಯ ನಿರ್ವಹಿಸಲಿದೆ. ರಾಯಚೂರಿನ ಆರ್ಟಿಪಿಎಸ್‍ನಲ್ಲಿ ತಾಂತ್ರಿಕ ದೋಷದಿ0ದ ಸ್ಥಗಿತಗೊಂಡಿದ್ದ ಎರಡು ಘಟಕಗಳು ಮಂಗಳವಾರ ರಾತ್ರಿಯಿಂದ ಕಾರ್ಯಾರಂಭವಾಗಿವೆ. ನಿರ್ವಹಣೆಗಾಗಿ ಒಂದು ಘಟಕ ಸ್ಥಗಿತಗೊಂಡಿದೆ. ಒಟ್ಟಾರೆ ಉಷ್ಣ ಪೂರೈಕೆಯಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ. 200 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ 13000 ಸೋಲಾರ್ ಪ್ಯಾನಲ್ ಬಳಸಲು ನಿರ್ಧರಿಸಿದ್ದೇನೆ ಎಂದು ಹೇಳಿದ್ದರಿ. ಆದರೆ ಆ ಯೋಜನೆ ಕೇಂದ್ರ ಸಬ್ಸಿಡಿಯಯಿಂದಾಗುವ ಯೋಜನೆಯಾಗಿದ್ದರೂ ತನ್ನ ಯೋಜನೆ ಎಂದು ಸುಳ್ಳು ಹೇಳಿ ಜನರ ಕಣ್ಣಿಗೆ ಮಣ್ಣೆರಚಿದಿರಿ ಅಲ್ಲವೇ?

ಹೆಚ್ಚಿದ ಬೇಡಿಕೆ 

ಜುಲೈ ಬಳಿಕ ಉತ್ತಮ ಮಳೆಯಿಂದಾಗಿ ರಾಜ್ಯಾದ್ಯಂತ ಕೃಷಿ ಪಂಪ್‍ಸೆಟ್ ಬಳಕೆ ಹೆಚ್ಚಾಗಿದ್ದು , ವಿದ್ಯುತ್ ಬೇಡಿಕೆಯೂ ತೀವ್ರವಾಗಿದೆ. ವಿದ್ಯತ್ ಇಲ್ಲದೆ ಜನರು ಪರದಾಡುವ ಸ್ಥಿತಿ ಬಂದೊದಗಿದೆ.

ವಿದ್ಯತ್ ಖರೀದಿ ಆರಂಭ

ಉತ್ಪಾದನೆ ಕುಸಿತ ಹಿನ್ನಲೆಯಲ್ಲಿ 500ನ ಮೆಗಾವ್ಯಾಟ್ ವಿದ್ಯುತ್ ಖರೀದಿ ಪ್ರಕ್ರಿಯೆ ಮಂಗಳವಾರ ಮಧ್ಯರಾತ್ರಿಯಿಂದಲೇ ಆರಂಭವಾಗಿದೆ. ಕೆಇಆರ್ಸಿ ಅನುಮೋದನೆ ಹಿನ್ನಲೆಯಲ್ಲಿ ಖರೀದಿ ಶುರುವಾಗಿದ್ದು , ಮೇ ಅಂತ್ಯದವರೆಗೆ ಮುಂದುವರಿಯಲಿದೆ, ಜತೆಗೆ ಬೆಸ್ಕಾಂಗೆ 300 ಮೆಗಾವ್ಯಾಟ್ ಹಾಗೂ ಹೆಸ್ಕಾಂಗೆ 100 ಮೆಗಾವ್ಯಾಟ್ ಐಇಎಕ್ಸ್ ನಿಂದ ಖರೀದಿಗೆ ಅವಕಾಶ ಕಲ್ಪಿಸಿರುವುದರಿಂದ ಪರಿಸ್ಥಿತಿ ಸುಧಾರಿಸುವ ನಿರೀಕ್ಷೆ ಇದೆ.

1000 ಮೆಗಾವ್ಯಾಟ್ ಕೊರತೆ

ಸದ್ಯ ರಾಜ್ಯಾದ್ಯಂತ ವಿದ್ಯುತ್ ಬೇಡಿಕೆ 9000 ಮೆಗಾ ವ್ಯಾಟಿನಷ್ಟಿದ್ದು,ಉತ್ಪಾದನೆ, ಖರೀದಿ ಎಲ್ಲ ಸೇರಿ 8,000 ಮೆಗಾವ್ಯಾಟ್ ಪೂರೈಕೆಯಾಗುತ್ತದೆ. ಇನ್ನೂ 1,000 ಮೆಗಾವ್ಯಾಟ್ ಕೊರತೆಯಿದ್ದು, ಅನಿಯಮಿತ ಲೋಡ್ ಶೆಡ್ಡಿಂಗ್‍ನಿಂದ ನಿಭಾಯಿಸಲಾಗುತ್ತಿದೆ. ಈ ನಡುವೆ ಯರಮರಸ್‍ನ ವೈಟಿಪಿಎಸ್ ಘಟಕದಿಂದ ವಿದ್ಯುತ್ ಉತ್ಪಾದನೆ ಶುರುವಾಗಿರುವುದು ಆಶಾಭಾವನೆ ಮೂಡಿಸಿದೆ. ಗುರುವಾರದಿಂದ ಪೂರೈಕೆ 500 ಮೆಗಾವ್ಯಾಟ್‍ಗೆ ಏರಿಕೆಯಾದರೆ ಸಮಸ್ಯೆ ಬಹುತೇಕ ಬಗೆಹರಿಯಲಿದೆ ಎಂದು ಇಂಧನ ಇಲಾಖೆ ಮೂಲಗಳು ತಿಳಿಸಿವೆ.

ಕಲ್ಲಿದ್ದಲು ಕೊರತೆ 

ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಸದ್ಯ ಒಂದು ದಿನಕ್ಕೆ ಸಾಕಾಗುವಷ್ಟು ಕಲ್ಲಿದ್ದಲನ್ನು ದಾಸ್ತಾನು ಮಾತ್ರ ಇದ್ದು ಸಂಕಷ್ಟದ ಸ್ಥಿತಿ ಎದುರಾಗಿದೆ ಈ ಹಿಂದೆ ನೀರಿನ ಕೊರತೆ ಕಾರಣಕ್ಕೆ ಬಳ್ಳಾರಿಯ ಬಿಟಿಪಿಎಸ್‍ನ ಸಂಕಷ್ಟದ ಸ್ಥಿತಿ ಎದುರಾಗಿದೆ. ಈ ಹಿಂದೆ ನೀರಿನ ಕೊರತೆ ಕಾರಣಕ್ಕಾಗಿ ಬಳ್ಳಾರಿಯ ಬಿಟಿಪಿಎಸ್‍ನ ಎರಡು ಘಟಕಗಳು ಸ್ಥಗಿತವಾಗಿವೆ. ರಾಯಚೂರಿನ ಆರ್ಟಿಪಿಎಸ್‍ನಲ್ಲೂ ಕಲ್ಲಿದ್ದಲು ಕೊರತೆಯಿಂದಾಗಿ ಉತ್ಪಾದನೆಯಲ್ಲಿ ಏರಿಳಿತವಾಗುತ್ತದೆ. ಎಲ್ಲಾ ಉಷ್ಣ ಸ್ಥಾವರಗಳೂ ಸೂಪರ್ ಕ್ರಿಟಿಕಲ್ ಕಂಡೀಷನ್‍ನಲ್ಲಿದ್ದು, ಕಲ್ಲಿದ್ದಲು ಪೂರೈಕೆಯಲ್ಲಿ ತುಸು ವ್ಯತ್ಯಯವಾದರೂ ಉತ್ಪಾದನೆ ಸಂಪೂರ್ಣ ಕುಸಿಯುವ ಭೀತಿ ಮೂಡಿದೆ.

ಲೈನ್‍ಮ್ಯಾನ್ ಎಂಬ ಹೆಸರನ್ನು ಪವರ್ ಮ್ಯಾನ್ ಆಗಿ ಬದಲಾಯಿಸಿದಿರಿ. ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಲೈನ್‍ಮ್ಯಾನ್‍ಗಳನ್ನು ಪರೀಕ್ಷೆ ಬರೆಯುವಂತೆ ಮಾಡಿದಿರಿ. ಅದರಂತೆ ಎಸ್‍ಎಸ್‍ಎಲ್‍ಸಿ , ಐಟಿಐ ಆದವರು ಪರೀಕ್ಷೆಯನ್ನು ಬರೆಯಲು ಅರ್ಜಿಯನ್ನು ಸಲ್ಲಿಸಿದರು. ಅಲ್ಲಿ ನೋಡಿದರೆ ಅದರಲ್ಲೂ ಗೋಲ್ ಮಾಲ್!ಎಲ್ಲಿ ನೋಡಿದರೂ ಗೋಲ್ ಮಾಲ್! ಶೋಭಾ ಕರಂದ್ಲಾಜೆಯ ಕಾಲದ ಪವರ್ ಪೆÇ್ರೀಜೆಕ್ಟ್‍ಗಳನ್ನು ಮಾಡಿದ್ದರೂ ಯಾವುದನ್ನೂ ಲೆಕ್ಕಕ್ಕಿರಿಸದೆ ಇಡೀ ಕರ್ನಾಟಕವನ್ನು ಕತ್ತಲಲ್ಲಿರಿಸಿ ಅಲ್ಲವೇ? ನೀವು ಯಾವ ಸೀಮೆಯ ಇಂಧನ ಸಚಿವ ಎಂದು ಹೇಳಲು ಸಾಧ್ಯವಿಲ್ಲ.

ಕರ್ನಾಟಕದಲ್ಲಿ ದಕ್ಷ ರೀತಿಯಲ್ಲಿ ಕೆಲಸ ಮಾಡಿದ್ದೇ ಆಗಿದ್ದರೇ ಇಂದು ಕರ್ನಾಟಕ ವಿದ್ಯುತ್ ಸ್ವಾವಲಂಬಿ ಆಗಿರುತ್ತಿತ್ತು. ಒಂದು ವೇಳೆ ಇದೆಲ್ಲಾ ಆಗಿದಿದ್ದರೆ ಖಂಡಿತಾ ಹೆಚ್ಚುವರಿ ವಿದ್ಯುತ್ತನ್ನು ಕರ್ನಾಟಕದಿಂದ ಮಾರಬಹುದಿತ್ತು. ಆದರೆ ರಾಜ್ಯಸರಕಾರದ ತಪ್ಪು ನಿರ್ಧಾರ, ಸೋಮಾರಿತನದಿಂದಾಗಿ ಈ ಬಾರಿ ಮತ್ತೆ ಹಣ ಕೊಟ್ಟು ವಿದ್ಯುತ್ ಖರೀದಿಸುವಂತಾಗಿದೆ. ಹಾಗಾದರೆ ಈ ಬಾರಿಯೂ ಕತ್ತಲೆ ಭಾಗ್ಯ ಇದೆ ಎನ್ನುವುದನ್ನು ಸಾಬೀತುಪಡಿಸಿದಿರಿ… ಶಹಬ್ಬಾಸ್….

-ಪವಿತ್ರ

Tags

Related Articles

Close