ಮೊನ್ನೆ ಗೌರಿ ಲಂಕೇಶರ ಹತ್ಯೆಯಾಯ್ತು, ಗೌರಿ ಲಂಕೇಶರ ಸಾವಿನ ಬಗ್ಗೆ ದುಃಖವಾಗಲಿ ಅಥವ ಬೇಜಾರಾಗಲಿ ಅವರ ಫಾಲೋವರ್’ಗಳಿಗಾಗಲಿ ಅಥವ ಅವರ
ಸಹವರ್ತಿಗಳಿಗಾಗಲಿ ಇರಲಿಲ್ಲ ಅನ್ನೋದು ಅವರಾಡೋ ಮಾತುಗಳಿಂದ ಸ್ಪಷ್ಟವಾಗಿ ಗೊತ್ತಾಗುತ್ತಿತ್ತು.
ಯಾಕೆ ಅಂತೀರಾ? ಅವರ ಸಾವಿಗೆ ಮರುಗುವ ಬದಲು ಪ್ರತಿಯೊಬ್ಬ ಪ್ರಗತಿಪರ, ಬುದ್ಧಿಜೀವಿಗಳು ಗೌರಿಯ ಸಾವು ದುರದೃಷ್ಟಕರ ಅನ್ನೋ ಬದಲು ಆ ಸಾವಿನ ಹಿಂದೆ ತಮ್ಮ ವಿಚಾರಧಾರೆ/ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕೆಲಸಕ್ಕೆ ಮುಂದಾಗಿ ಪೋಲಿಸ್ ತನಿಖೆಯ ಮುಂಚೆಯೇ ಆಕೆಯ ಸಾವನ್ನ ಬಲಪಂಥೀಯರ ತಲೆಗೆ ಕಟ್ಟಿ ಮೋದಿಗೆ ಧಿಕ್ಕಾರ, ಬಿಜೆಪಿಗೆ ಧಿಕ್ಕಾರ, ಆರೆಸ್ಸೆಸ್’ಗೆ ಧಿಕ್ಕಾರ ಕೂಗುತ್ತ ಗೌರಿ ಲಂಕೇಶರ ಫೋಟೋವನ್ನ ತಮ್ಮ ಫೇಸ್ಬುಕ್ ವಾಟ್ಸ್ಯಾಪ್’ಗಳ ಡಿಪಿ ಬದಲಿಸಿ ತಮ್ಮ ‘ಆಕ್ರೋಶ’ ತೋರಿಸಿದರೇ ಹೊರತು ಗೌರಿ ಲಂಕೇಶರ ಸಾವಿನ ತನಿಖೆ ನಡೆಸಿ ನೈಜ ಆರೋಪಿಗಳನ್ನ ಬಂಧಿಸಿ ಅನ್ನೋ ಮಾತು ಯಾವ ಪ್ರಗತಿಪರನಿಂದಲೂ ಕೇಳಲೇ ಇಲ್ಲ.
ಆ ವಿಷಯ ಒಂದೆಡೆ ಇರಲಿ, ಗೌರಿ ಲಂಕೇಶರ ಹತ್ಯೆಗೆ ಪ್ರಮುಖ ಕಾರಣ ನಕ್ಸಲರ ಕೈವಾಡವೇ ಇರಬಹುದು ಅನ್ನೋದನ್ನ ಸ್ವತಃ ತನಿಖಾ ತಂಡಗಳ ಪ್ರಾಥಮಿಕ
ವರದಿಯಲ್ಲಿ ಉಲ್ಲೇಖವಾಗುತ್ತಿದೆ, ನಕ್ಸಲರು ಬಳಸುವ ನಾಡ ಪಿಸ್ತೂಲು ಹಾಗು ಗೌರಿ ಲಂಕೇಶರ ಹತ್ಯೆಗೆ ಬಳಸಿದ್ದ ನಾಡ ಪಿಸ್ತೂಲು ಒಂದೇ ರೀತಿಯಲ್ಲಿವೆ ಅನ್ನೋದು ತನಿಖೆಗಳಿಂದ ತಿಳಿದು ಬರುತ್ತಿವೆ ಅನ್ನೋದು ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿವೆ.
ನಕ್ಸಲಿಸಂ ಬಿಡಿಸಿ ಕಾಡಿನಿಂದ ನಾಡಿಗೆ ನಕ್ಸಲರನ್ನ ಕರೆತಂದಿದ್ದಕ್ಕೆ ಗೌರಿ ಹಾಗು ನಕ್ಸಲರ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ನಕ್ಸಲರು ತಮ್ಮ ಹೋರಾಟಕ್ಕೆ ಹಿನ್ನಡೆ ಉಂಟುಮಾಡುತ್ತಿರೋ ಗೌರಿಯನ್ನ ಕೊಲ್ಲಬೇಕೆಂದು ಆಕೆಯನ್ನ ಕೊಂದಿರಬಹುದು ಅನ್ನೋದು ಗೌರಿ ಲಂಕೇಶ ಸಹೋದರ ಇಂದ್ರಜಿತ್ ಲಂಕೇಶರ ಅನುಮಾನ ವ್ಯಕ್ತಪಡಿಸಿದ್ದಾರೆ.
ಆದರೆ ಗೌರಿ ಲಂಕೇಶರ ಒಡನಾಡಿಗಳಾಗಿದ್ದ ಆಕೆಯ ಪ್ರಗತಿಪರ ಸ್ನೇಹಿತರು ಇದನ್ನ ಸಂಘಪರಿವಾರದ ತಲೆಗೆ ಕಟ್ಟಲು ಹೆಣಗಾಡುತ್ತಿದ್ದಾರೆ.
ಇನ್ನು ಆಕೆಯ ಅಭಿಮಾನಿಗಳಂತೂ ಫೇಸ್ಬುಕ್ ವಾಟ್ಸ್ಯಾಪ್ ಗಳಲ್ಲಿ ಆಕೆಯ ಫೋಟೋ ಡಿಪಿ ಯನ್ನಾಗಿಸಿ “ಮತ್ತೆ ಹುಟ್ಟಿ ಬನ್ನಿ” ಅನ್ನೋ ಮೆಸೇಜ್ ಹಾಕ್ತಿದಾರೆ. ಆದರೆ ನಕ್ಸಲರಿಂದ/ಎಡಪಂಥೀಯ ವಿಚಾರಧಾರೆಯಿಂದ ಮೃತರಾದ ನೂರಾರು ಪೋಲೀಸರು ಇವರ ಕಣ್ಣಿಗೆ ಮಾತ್ರ ಕಾಣಲೇ ಇಲ್ಲ.
ಇವರ ಕಣ್ಣಿಗೆ ಕಾಣುವುದಂತೂ ಬಿಡಿ ಆ ಪೋಲೀಸರ ಹತ್ಯೆಗಳಿಗೆ ಎಡಪಂಥೀಯರು ಖುಷಿಪಟ್ಟಿದ್ದಂತೂ ಸತ್ಯ.
ಇದಕ್ಕೆ ಉದಾಹರಣೆಯೆಂದರೆ 2010 ರಲ್ಲಿ ಛತ್ತಿಸಗಡದ ದಂತೇವಾಡಾದಲ್ಲಿ ನಕ್ಸಲರಿಂದ ಹತರಾದ 76 ಪೋಲೀಸರನ್ನ ನೆನೆದು ಶೋಕಾಚರಣೆ ಮಾಡಬೇಕಿದ್ದ ಗೌರಿ ಲಂಕೇಶರ ಮಾನಸಪುತ್ರರಾದ ಉಮರ್ ಖಾಲಿದ್, ಕನ್ಹಯ್ಯ ಕುಮಾರ್, ಸಹೆಲಾ ರಶ್ದಿ ಬೆಂಬಲಿತ DSU and AISA ಲೆಫ್ಟ್ ಸ್ಟೂಡೆಂಟ್ ಅಸೋಸಿಯೇಷನ್ ಗಳು ಜೆ.ಎನ್.ಯೂ ನಲ್ಲಿ ಸಂಭ್ರಮಾಚರಣೆ ನಡೆಸಿದ್ದು ಭಾರತೀಯರ ಮನಸ್ಸಿನಿಂದ ಇನ್ನು ಮಾಸಿಲ್ಲ.
76 ಸಿ.ಆರ್.ಪಿ.ಎಫ್ ಯೋಧರ ಸಾವಿಗೆ ಸಂಭ್ರಮ ಆಚರಿಸಿದ ಈ ದೇಶದ್ರೋಹಿ ವಿದ್ಯಾರ್ಥಿಗಳು “ಇಂಡಿಯಾ ಮುರ್ದಾಬಾದ್, ಮಾವೋಯಿಸಂ ಜಿಂದಾಬಾದ್”
ಅನ್ನೋ ಘೋಷಣೆಗಳನ್ನ ಕೂಗಿದ್ದರು. ಇದನ್ನು ಎ.ಬಿ.ವಿ.ಪಿ ಯಾಗಲಿ ಬಿಜೆಪಿಯಾಗಲಿ ಹೇಳಿದ್ದಲ್ಲ, DSU & AISF ವಿರುದ್ಧ ಧ್ವನಿಯೆತ್ತಿದ್ದು ಕಾಂಗ್ರೆಸ್ ಪಕ್ಷದ
ವಿದ್ಯಾರ್ಥಿ ಘಟಕವಾದ NSUI.
ಸಂಸತ್ತಿನ ಮೇಲೆ ದಾಳಿ ನಡೆಸಿದ ಅಫ್ಜಲ್ ಗುರುವಿಗೆ ಗಲ್ಲು ಶಿಕ್ಷೆ ವಿಧಿಸಬೇಡಿ ಅಂತ ಮರುಗಿದ ಪುಣ್ಯಾತ್ಮರೇ ಈ ಎಡಪಂಥದವರಲ್ಲವೇ? ಇನ್ನು ಇವರಿಗೆ ಭಾರತದ ಪರವಾಗಿ ರಾಷ್ಟ್ರರಕ್ಷಣೆ ಮಾಡುತ್ತಿರೋ ಸೈನಿಕರು ನೆನಪಾಗುತ್ತಾರಾ?
ಅಫ್ಜಲ್ ಗುರುವನ್ನ ನೇಣಿಗೇರಿಸಿದ ಹಲವು ವರ್ಷಗಳ ನಂತರ ಆತನನ್ನ ಗಲ್ಲಿಗೇರಿಸಿದ ದಿನವನ್ನ ಶಹೀದ್ ದಿವಸ್ ರೀತಿಯಲ್ಲಿ ಕನ್ಹಯ್ಯ ಕುಮಾರ್, ಉಮರ್ ಖಾಲಿದ್ ಆಚರಿಸಿ “ಭಾರತ್ ತೇರೆ ತುಕಡೆ ಹೋಂಗೆ, ಇನ್ಷಾ ಅಲ್ಲಾ ಇನ್ಷಾ ಅಲ್ಲಾ” ಅಂದಿದ್ದೂ ಜನ ಮರೆತಿಲ್ಲ.
ದಸರಾ ಹಬ್ಬದಂದು ಇದೇ ಜೆಎನ್ಯೂ ನಲ್ಲಿ “ಮಹಿಷನ ಜಯಂತಿ” ಆಚರಿಸಿ ದುರ್ಗೆಯನ್ನ ಅಸಹ್ಯವಾಗಿ ಚಿತ್ರಿಸಿ ವಿಕೃತ ಮೆರೆದದ್ದೂ ಇದೇ ಗೌರಿ ಲಂಕೇಶರ
ಮಾನಸಪುತ್ರರೇ.
ಕಾಶ್ಮೀರ ಭಾರತಕ್ಕೆ ಸೇರಿದ್ದಲ್ಲ, ಹಮ್ ಚಾಹತೇ ಹೈ ಆಜಾದಿ(ನಮಗೆ ಬೇಕು ಸ್ವಾತಂತ್ರ್ಯ) ಅಂತ ಜೆಎನ್ಯೂ ನಲ್ಲಿ ಕೂಗಿದ್ದೂ ಇದೇ ಗೌರಿ ಲಂಕೇಶರ ಎಡಪಂಥೀಯ ವಿದ್ಯಾರ್ಥಿ ಸಂಘಟನೆಯ ಮಾನಸಪುತ್ರರೇ.
ಕಾಶ್ಮೀರ ಅಷ್ಟೇ ಯಾಕೆ ಅರುಣಾಚಲ ಪ್ರದೇಶ ನಮ್ಮ ದೇಶದ ಭಾಗವಲ್ಲ ಅನ್ನೋ ರೀತಿಯಲ್ಲಿ ವರ್ತಿಸಿ ತನ್ನ ಚೀನಾ ಚೇಲಾಗಿರಿ ತೋರಿಸಿದ್ದೂ ಇದೇ ಗೌರಿ ಲಂಕೇಶರ ಮಾನಸಪುತ್ರರ ಬೆಂಬಲಿಗರೇ.
ಈ ಎಲ್ಲಾ ರಾಷ್ಟ್ರವಿರೋಧಿ ಕೆಲಸಗಳನ್ನು ಯೂನಿವರ್ಸಿಟಿಯಲ್ಲಿ ಸುಸಜ್ಜಿತವಾಗಿ ಪೂರ್ವತಯಾರಿಯಿಂದಲೇ ನಡೆಸಿಕೊಂಡು ಬರುತ್ತಿರೋ ಈ ಎಡಪಂಥೀಯ ವಿದ್ಯಾರ್ಥಿಗಳಿಗೆ ಬೆಂಬಲ ಕೊಟ್ಟು ಕನ್ಹಯ್ಯ ಕುಮಾರ್, ಉಮರ್ ಖಾಲೀದ್ ನನ್ನ ಮಕ್ಕಳು ಅಂತ ಅದ್ಯಾವ ಬಾಯಲ್ಲಿ ಕರೆದಿದ್ದರೋ ಗೌರಿ ಲಂಕೇಶ್?
ಗೌರಿಯ ಹತ್ಯೆಗೆ ಮಿಡಿಯುವ ಮನಗಳು ಭಾರತವಿರೋಧಿ ಮಾನಸಿಕತೆ ಹೊಂದಿರುವ ಮನಸ್ಸುಗಳ ವಿರುದ್ಧ ಒಂದು ಪೋಸ್ಟೂ ಹಾಕಲಿಲ್ಲ, ಪೋಸ್ಟನ್ನ ಬಿಡಿ ಅಂತಹ ಘಟನೆಗಳನ್ನ ವಿರೋಧಿಸುವವರನ್ನೇ ಎಗ್ಗಾಮಗ್ಗಾ ತರಾಟೆಗೆ ತೆಗೆದುಕೊಂಡವರಿಗೆ ನಕ್ಸಲರಿಂದ ಹತ್ಯೆಗೀಡಾದ ಪೊಲೀಸರಿಗೆ ಮಿಡಿಯಲಿಲ್ಲ, ಆ ಪೋಲಿಸರ ಫೋಟೋಗಳು ಈ ಎಡಪಂಥದವರ ಡಿಪಿ ಗಳಾಗಿ ಬದಲಾಗಲಿಲ್ಲ.
ಈಗ ತನಿಖಾ ಸಂಸ್ಥೆಗಳ ಬಲವಾದ ಅನುಮಾನ ಹಾಗು ಇಂದ್ರಜಿತ್ ಲಂಕೇಶರ ಅನುಮಾನದ ಪ್ರಕಾರ ಎಡಪಂಥೀಯ ವಿಚಾರಧಾರೆಯಿರೋ ನಕ್ಸಲರಿಂದಲೇ ಗೌರಿ ಹತ್ಯೆಯಾಗಿರಬಹುದು.
ಇದೇನಾದರೂ ನಿಜವಾದರೆ ತಾನೇ ನಂಬಿದ ಸಿದ್ಧಾಂತ ತನ್ನನ್ನೇ ಬಲಿಪಡೆದುಕೊಂಡಿತಾ ಅಂತ ಗೌರಿ ಲಂಕೇಶರ ಆತ್ಮವಂತೂ ಕಣ್ಣೀರಿಡುತ್ತೆ
ಅನ್ಸತ್ತೆ.
ಒಂದು ವೇಳೆ ನಕ್ಸಲರೇ ಗೌರಿಯ ಹತ್ಯೆ ರೂವಾರಿಗಳಾಗಿದ್ದರೆ ಈ ಉಮರ್ ಖಾಲೀದ್, ಕನ್ಹಯ್ಯ ಕುಮಾರ್, ಪ್ರಗತಿಪರರು, ಎಡಪಂಥೀಯರು, ಬುದ್ಧಿಜೀವಿಗಳು,
ವಿಚಾರವಾದಿಗಳು ಯಾರ ವಿರುದ್ಧ ದಂಗೆಯೇಳಬಹುದು?
– Vinod Hindu Nationalist