ಪ್ರಚಲಿತ

ಡಿಯರ್ ರಾಹುಲ್ ಗಾಂಧಿ ಅಂಕಲ್. . . ನಿಮಗೊಂದು ಬಹಿರಂಗ ಪತ್ರ! ಓದಿ, ಅಮ್ಮನಿಗೂ ಓದಲು ಕೊಡಿ! ಇಂತಿ ಕುಮಾರಿ ಪ್ರಣೀತಾ, 9 ನೇ ತರಗತಿ!

ರಾಹುಲ್ ಅಂಕಲ್ ನಿಮಗೆ ನನ್ನ ಪ್ರೀತಿಯ ನಮಸ್ಕಾರ…

ರಾಹುಲ್ ನಿಮ್ಮನ್ನು ಅಣ್ಣಾ ಅನ್ನಲೇ, ಮಾಮಾ ಅನ್ನಲೇ ಅಥವಾ ಅಂಕಲ್ ಎನ್ನಲೇ…? ಒಂದೂ ಗೊತ್ತಾಗ್ತಿಲ್ಲ. ನಾನು ನಿಮಗೊಂದು ಪತ್ರ ಬರೆಯಬೇಕೆಂದಿದ್ದೆ. ಆದರೆ ನಮ್ಮ ಮಿಸ್ಸು ಬಾರಿ ಜೋರು. ಪ್ರತೀದಿನ ಹೋಮ್‍ವರ್ಕ್ ಕೊಡೋದ್ರಿಂದ ನಿಮಗೆ ಪತ್ರ ಬರೆಯಲು ಟೈಮೇ ಸಿಗ್ತಿರಲಿಲ್ಲ. ಆದ್ರೆ ಇಂದು ಹೇಗಾದ್ರೂ ಅಜಸ್ಟ್ ಮಾಡಿ ಪತ್ರ ಬರೆಯುತ್ತಿದ್ದೇನೆ. ಅಂದಂಗೆ ರಾಹುಲ್ ಅಂಕಲ್ ಮನೆಯಲ್ಲಿ ಸೋನಿಯಾ ಅಜ್ಜಿ, ಪ್ರಿಯಾಂಕಾಂಟಿ ಎಲ್ಲರೂ ಕ್ಷೇಮ ತಾನೆ… ಸೋನಿಯಾ ಅಜ್ಜಿಯನ್ನು ಕೇಳಿದೆ ಅಂತ ಹೇಳಿ…

ರಾಹುಲ್ ಅಂಕಲ್ ಏಕೋ ಗೊತ್ತಿಲ್ಲ ನೀವು ನನಗೆ ಥೇಟ್ ಮಿಸ್ಟರ್ ಬೀನ್‍ನಂತೆ ಕಾಣ್ತೀರಿ. ನೀವು ಟಿ.ವಿ.ಯಲ್ಲಿ ಬರುವಾಗ, ನೀವು ಭಾಷಣ ಮಾಡುವಾಗ ನನಗೆ
ಜೋರು ನಗು ಬರುತ್ತದೆ. ರಾಹುಲ್ ಅಂಕಲ್ ನೀವು ಜಸ್ಟ್ ಅತ್ತಿಂದಿತ್ತ ಹೋದ್ರೂ ಸಾಕು… ನಾನು ನನ್ನ ಮಮ್ಮಿ, ಪಪ್ಪ ಎಲ್ಲರೂ ಬಿದ್ದು ಬಿದ್ದು ನಗ್ತಾರೆ. ಯಾಕೋ ಏನೋ ಕಾಮಿಡಿಪೀಸ್ ಆಗಿ ಹೋದಿರಲ್ಲ ಅಂಕಲ್ ನಿಮ್ಮ ಮುಖ ಟಿವಿಯಲ್ಲಿ ಕಾಣಿಸಿದಾಗ ತನ್ನಷ್ಟಕ್ಕೆ ಒಂದು ಸ್ಮೈಲ್ ಮುಖದ ಮೇಲೆ ಬರುತ್ತದೆ. ಪ್ಲೀಸ್ ಅಂಕಲ್ ನಿಮಗೆ ಟೈಂ ಇದ್ರೆ ನಮ್ಮ ಮನೆಗೆ ಬನ್ನಿ ಆಟಾಡೋಣ. ಯಾಕೆಂದ್ರೆ ನಂಗೆ ಮನೆಯಲ್ಲಿ ಟೈಂಪಾಸೇ ಆಗೋದಿಲ್ಲ… ತುಂಬಾ ಬೋರು…

ರಾಹುಲ್ ಅಂಕಲ್ ನೀವು ಮೊನ್ನೆ ಆರೆಸ್ಸೆಸ್ ಬಗ್ಗೆ ಒಂದು ಮಾತು ಹೇಳಿದ್ರಿ. ಈ ಮಾತನ್ನು ಕೇಳಿ ನಿಮ್ಮನ್ನು ಜಜ್ಜಿ ಬಿಡ್ಬೇಕೆನ್ನುವಷ್ಟು ಕೋಪ ಬರುತ್ತದೆ. ನಾನೂ ಒಬ್ಬಳು ಹುಡುಗಿ. ಹುಡುಗಿಯರ ಬಗ್ಗೆ ಹೇಳೋ ಮಾತಾ ಅದು… ಛೀ ನಿಮ್ಮ ಮಾತು ಕೇಳಿ ನನಗೆ ಎಷ್ಟು ಸಿಟ್ಟು ಬಂದಿದೆ ಎಂದ್ರೆ ನಾನು ನನ್ನ ಮಮ್ಮಿಯತ್ರ ರಾಹುಲ್‍ಗೆ ಹುಚ್ಚುಗಿಚ್ಚು ಏನಾದ್ರ್ರೂ ಹಿಡಿದಿದೆಯಾ ಅಮ್ಮಾ ಎಂದು ಕೇಳಿದ್ದೆ. ಅದಕ್ಕೆ ಅಮ್ಮ ಏನಂದ್ರೂ ಗೊತ್ತಾ… ಥೂ ನೀನು ಅದನ್ನೆಲ್ಲಾ ಯಾಕೆ ನೋಡ್ತೀಯಾ ಎಂದು ನನ್ನ ಕೈಯಿಂದ ರಿಮೋಟ್ ಎಳೆದು ಟಿವಿ ಬಂದ್ ಮಾಡಿ ಬೆನ್ನಿಗೆ ಎರಡು ಗುದ್ದಿದರು. ಆಮೇಲೆ ಎರಡು ದಿನ ರಿಮೋಟೇ ಕೊಟ್ಟಿಲ್ಲ. ನಿಮ್ಮಿಂದಾಗಿ ನನಗೆ ಶಿಕ್ಷೆ.

ನನಗೆ ನಿಮ್ಮ ಮೇಲೆ ಸಿಟ್ಯಾಕೆ ಗೊತ್ತಾ? ಮೊನ್ನೆ ನೀವು ಆರ್‍ಎಸ್‍ಎಸ್‍ನಲ್ಲಿ ಮಹಿಳೆಯರು ಯಾಕಿಲ್ಲ ಎಂದು ಕೇಳಿದ್ದೀರಿ… ಅಯ್ಯೋ ಅಂಕಲ್ ಆರ್‍ಎಸ್‍ಎಸ್‍ನಲ್ಲಿ
ಮಹಿಳೆಯರಿಲ್ಲ ಎಂದು ಯಾರು ಹೇಳಿದ್ದು? ನಾನೂ ಕೂಡಾ ಶಾಖೆಗೆ ಹೋಗುತ್ತಿದ್ದೇನೆ… ನಿಮ್ಮ ಅಜ್ಞಾನದ ಪರಮಾವಧಿಗೆ ಏನನ್ನಬೇಕು? ಲಕ್ಷ್ಮೀಬಾಯಿ ಕೇಳ್ಕರ್
ಅವರು 1936 ಅಕ್ಟೋಬರ್ 25ರ ವಿಜಯ ದಶಮಿಯ ಶುಭದಿನ ರಾಷ್ಟ್ರೀಯ, ಸಾಮಾಜಿಕ, ಸಾಂಸ್ಕøತಿಕ, ಚಿಂತನೆಯುಳ್ಳ ಮಹಿಳಾ ಸಂಘಟನೆಯಾದ `ರಾಷ್ಟ್ರ ಸೇವಿಕಾ ಸಮಿತಿ’ಯನ್ನು ಸ್ಥಾಪಿಸಿದರು. ಇದಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಡಾ. ಹೆಗ್ಡೇವಾರ್ ಮಾರ್ಗದರ್ಶನ ನೀಡಿದ್ದಾರೆ. ಇಂದು ಇದರ ಘಟಕ ದೇಶವಿದೇಶಗಳಲ್ಲೂ ಇದೆ. ಅಯ್ಯೋ ನಿಮ್ಮ ಬಾಲಿಶತನವನ್ನು ಕಂಡು ಮೊನ್ನೆ ನಾನು ಜೋರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದೆ.

ರಾಹುಲ್ ನೀವು ಆರ್‍ಎಸ್‍ಎಸ್‍ನಲ್ಲಿ ಮಹಿಳೆಯರಿಲ್ಲ ಎಂದು ಸುಳ್ಳು ಹೇಳುತ್ತೀರಲ್ಲಾ? ನನಗೆ ಮೊನ್ನೆ ಒಂದು ಡೌಟ್ ಬಂದಿತು. ನನ್ನ ಕ್ಲಾಸ್‍ನಲ್ಲಿ ಮುಸ್ಲಿಂ ಹುಡುಗಿಯರೂ ಇದ್ದಾರೆ. ನನ್ನ ಕ್ಲಾಸ್‍ನ ರುಕಿಯಾ ಭಾನುವಲ್ಲಿ, ಮುಸ್ಲಿಮರಲ್ಲಿ ಹುಡುಗಿಯರ್ಯಾಕೆ ಮಸೀದಿಗೆ ಹೋಗುವುದಿಲ್ಲ ಎಂದು ಕೇಳಿದೆ. ಅದಕ್ಕೆ ಅವಳು ನಂಗೂ ಗೊತ್ತಿಲ್ಲ, ನಂಗೂ ಆಸೆ ಇದೆ ಹೋಗೋಕೆ ಆದ್ರೆ ಮನೆಯಲ್ಲಿ ಬಿಡ್ತಾ ಇಲ್ಲ. ಕೇಳಿದ್ರೆ ಬೈಯ್ತಾರೆ. ಹೆಂಗಸರು ಮಸೀದಿಗೆ ಬರಬಾರದೆಂದು ದೇವರ ಆಜ್ಞೆಯಾಗಿದೆ ಎಂದು ಹೇಳಿದಳು. ರಾಹುಲ್ ಅಂಕಲ್ ಭಾಷಣ ಮಾಡುತ್ತಾ…. ಮುಸ್ಲಿಮರೇ ನಿಮ್ಮಲ್ಲಿ ಹುಡುಗಿಯರ್ಯಾಕೆ ಮಸೀದಿಗೆ ಹೋಗಲು ಬಿಡ್ತಿಲ್ಲ ಎಂದು ಕೇಳಿ ಭಾಷಣ ಹೊಡೆಯಿರಿ…

ನನ್ನ ಕ್ಲಾಸಲ್ಲಿ ಇನ್ನೊಬ್ಬಳು ಹುಡುಗಿಯಿದ್ದಾಳೆ.. ಅವಳ ಹೆಸರು ಸಾಯಿರಾಬಾನು. ಪಾಪ ಅವಳ ಡ್ಯಾಡಿಗೆ ನಾಲ್ಕು ಮದುವೆಯಾಗಿದೆಯಂತೆ. ಸಾಯಿರಾಳ ತಾಯಿಗೆ ತಲಾಖ್ ನೀಡಿ ಆಕೆಯ ಡ್ಯಾಡಿ ಇವರನ್ನೆಲ್ಲಾ ಬಿಟ್ಟಿದ್ದಾನಂತೆ. ಮೊದಲಾದ್ರೆ ಸಾಯಿರಾಳ ಡ್ಯಾಡಿ ಪ್ರತೀದಿನ ತಿಂಡಿ ತರ್ತಿದ್ದನಂತೆ. ಆದ್ರೆ ಸಾಯಿರಾಳ ಅಮ್ಮನಿಗೆ ಮೊದಲೇ ಇಬ್ಬರು ಹೆಣ್ಮಕ್ಕಳಿದ್ದು, ಮತ್ತೊಂದು ಹುಡುಗಿ ಸಾಯಿರಾ ಹುಟ್ಟಿದ್ದರಿಂದ ಅವಳ ಡ್ಯಾಡಿ ಮಮ್ಮಿಗೆ ತಲಾಖ್ ನೀಡಿ ಬಿಟ್ಟುಹೋದನಂತೆ. ಸಾಯಿರಾಳನ್ನು ಕಂಡಾಗ ಪಾಪ ಕಾಣ್ತದೆ ರಾಹುಲ್… ಮೊನ್ನೆ ಪ್ರಧಾನಿ ಮೋದಿ ತಲಾಖ್ ನಿಷೇಧಗೊಳಿಸಿದರು. ಆದರೆ ರಾಹುಲ್ ನಿಮ್ಮ ಅಜ್ಜ ಅಜ್ಜಿ ಎಲ್ಲರೂ ದೇಶವನ್ನು 60 ವರ್ಷ ಆಳಿದ್ದಾರೆ. ನಿಮ್ಗ್ಯಾಕೆ ತಲಾಖ್ ನಿಷೇಧಿಸಲಾಗಿಲ್ಲ? ಸಾಯಿರಾಳ ಮುಖ ನೋಡುವಾಗ ಮುಖ ನೋಡುವಾಗ ತುಂಬಾ ಬೇಜಾರಾಗುತ್ತದೆ. ನೀವು ಆರ್‍ಎಸ್‍ಎಸ್ ಬಗ್ಗೆ ಕೇಳೋ ಬದಲು ದುಃಖದಲ್ಲಿರೋ ಮುಸ್ಲಿಂ ಮಹಿಳೆಯರ ಬಗ್ಗೆ ಕೇಳಿ. ಆಗ ಸಾಯಿರಾಳಂತಹಾ ಅನೇಕ ಮುಸ್ಲಿಂ ಹುಡುಗಿಯರಿಗೆ ಖುಷಿ ಆಗುತ್ತದೆ. ನಮ್ಮ ಸಾಯಿರಾಳಿಗೆ ತಲಾಖ್ ನಿಷೇಧಿಸಿದ ಮೋದಿಯನ್ನು ಕಂಡ್ರೆ ಭಾರೀ ಖುಷಿ. ಜೀವನದಲ್ಲಿ ಒಮ್ಮೆಯಾದ್ರೂ ಮೋದಿಗೆ ರಕ್ಷಾ ಬಂಧನ ಕಟ್ಟೇ ಕಟ್ತೀನಿ ಎಂದು ಸಾಯಿರಾ ನನ್ನಲ್ಲಿ ಪ್ರಾಮಿಸ್ ಮಾಡಿದ್ದಾಳೆ.

ಆರ್‍ಎಸ್‍ಎಸ್‍ನಲ್ಲಿ ಮಹಿಳೆಯರು ಚಡ್ಡಿ ಹಾಕುವುದನ್ನು ನೋಡಿದ್ದೀರಾ ಎಂದು ನೀವು ಕೇಳಿದ್ದೀರಿ. ಛೀ ಎಂಥಾ ಪ್ರಶ್ನೆ ನಿಮ್ದು. ಮೊನ್ನೆ ನೀವು ಚಡ್ಡಿಯ ವಿಚಾರ ಹೇಳಿದ್ದೀರಿ ಎಂದು ಪ್ರತಿಯೊಂದು ಚಾನೆಲ್‍ನಲ್ಲೂ ನಿಮ್ಮನ್ನೇ ತೋರಿಸುತ್ತಿದ್ದರು. ಅಂದು ನಮ್ಮ ಟಿವಿ ಬಂದ್. ಆಕ್ಚುವಲಿ ನಾನು ನ್ಯೂಸ್ ಚಾನೆಲ್ ಬಿಟ್ಟು ಕಾರ್ಟೂನ್ ನೋಡ್ತೀನಿ. ಅಂದು ನನ್ನ ಮಮ್ಮಿ ಮಕ್ಕಳೆಲ್ಲಾ ಟಿ.ವಿ ನೋಡಿ ಹಾಳಾಗ್ತಾರೆ ಅಂತ ಟಿ.ವಿ ನೋಡೋಕೇ ಬಿಡ್ಲಿಲ್ಲ.

ರಾಹುಲ್ ಜೀ ನೀವು ಇದೇ ಮಾತನ್ನು ನಿಮ್ಮ ಮಮ್ಮಿ ಸೋನಿಯಾ ಅಜ್ಜಿಯಲ್ಲೂ ಕೇಳಿ. ಆರ್‍ಎಸ್‍ಎಸ್‍ನಲ್ಲಿ ಮಹಿಳೆಯರು ಚಡ್ಡಿ ಹಾಕುವುದನ್ನು ಗಮನಿಸಿದ್ದೀರಾ ಎಂದು ನಿಮ್ಮ ಮಮ್ಮಿಯಲ್ಲಿ ಕೇಳಿ. ಯಾಕೆಂದರೆ ನಿಮ್ಮ ಮಮ್ಮಿನೂ ಕೂಡಾ ಬಾರ್‍ನಲ್ಲಿ ಬರೇ ಚಡ್ಡಿ ಹಾಕಿ ಡ್ಯಾನ್ಸ್ ಮಾಡುತ್ತಿದ್ದರಂತೆ ಅಲ್ವಾ? ನಿಮ್ಮ ಡ್ಯಾಡಿ ರಾಜೀವ್ ಗಾಂಧಿ ಇಟಲಿಯ ಬಾರ್‍ಗೆ ಹೋದಾಗ ನಿಮ್ಮ ಮಮ್ಮಿ ಬಾರ್‍ನಲ್ಲಿ ಡ್ಯಾನ್ಸ್ ಮಾಡುತ್ತಿದ್ದರಂತೆ. ಬಾರ್‍ನಲ್ಲಿ ಮದ್ಯ ಕುಡಿದು ನಿಮ್ಮ ಮಮ್ಮಿ-ಡ್ಯಾಡಿಗೆ ಲವ್ ಆಯಿತಂತೆ. ಆರ್‍ಎಸ್‍ಎಸ್ ಚಡ್ಡಿ ಬಗ್ಗೆ ಮಾತಾಡುವ ನೀವು ನಿಮ್ಮ ಮಮ್ಮಿ ಬಿಕಿನಿ ಬಾರ್ ಡ್ಯಾನ್ಸರ್ ಆಗಿದ್ದರಂತೆ. ಇದೆಲ್ಲಾ ಹೌದಾ ಅಲ್ವಾ ಅಂತಾ ಡೈರೆಕ್ಟಾಗಿ ನಿಮ್ ಮಮ್ಮಿಲೇ ಕೇಳಿ…

ನನ್ನ ಕ್ಲಾಸ್‍ಮೇಟ್, ನನ್ನ ಕ್ಲೋಸ್ ಆಶ್ರತ್ ಕ್ಲಾಸ್‍ಗೆ ಬುರ್ಖಾ ಹಾಕದೆ ಕ್ಲಾಸ್‍ಗೆ ಬರುತ್ತಿದ್ದಳು. ಆದ್ರೆ ಮೊನ್ನೆ ಏನ್ ನಡೆಯಿತು ಗೊತ್ತಾ ರಾಹುಲ್ ಅಂಕಲ್?? ಆಕೆ ಬುರ್ಕಾ ಹಾಕೋದಿಲ್ಲ ಅಂತಾ ಅವಳ ಜಮಾತ್‍ಗೆ ಯಾರೋ ದೂರು ಕೊಟ್ರಂತೆ. ಮಸೀದಿಯಲ್ಲಿ ಮೀಟಿಂಗ್ ನಡೆದು ಅಶ್ರತ್ ಬುರ್ಖಾ ಹಾಕದಿದ್ರೆ ಅವರ ಕುಟುಂಬವನ್ನು ಜಮಾತ್‍ನಿಂದ ಹೊರಗಡೆ ಹಾಕೋದಾಗಿ ಹೇಳಿದ್ರಂತೆ.. ಕೊನೆಗೆ ಹೆದರಿದ ಅಶ್ರತ್ ಇದೀಗ ಬುರ್ಖಾ ಹಾಕಿಕೊಂಡು ಬರ್ತಾಳೆ. ಅವಳಿಗೆ ಬುರ್ಖಾ ಹಾಕಿಕೊಂಡು ಬಂದ್ರೆ ಮೈಯ್ಯಲ್ಲೆಲ್ಲಾ ಅಲರ್ಜಿ ಆಗ್ತದೆ. ಪಾಪ ಆಕೆ ಮೊನ್ನೆ ಒಂದುವಾರ ರಜೆ ಮಾಡಿದ್ದಳು. ಪ್ಲೀಸ್ ಅಂಕಲ್ ಈ ಬುರ್ಖಾ ಬೇಡ ಅಂತ ಒಂದು ಸ್ಟೇಟ್‍ಮೆಂಟ್ ಕೊಡಿ. ಪ್ಲೀಸ್…

ರಾಹುಲ್ ಅಂಕಲ್ ನಿನ್ನ ಮಮ್ಮಿಯ ಹೆಸರೇನು? ಸೋನಿಯಾ ಅಂತ ಹೆಸರು ಅಲ್ವಂತೆ ಹೌದಾ? ಅಂಟೊನಿಯಾ ಅಲ್ವನಿಯಾ ಮೊನೋ ಅಂತೆ ಅಲ್ವಾ ನಿಮ್
ಮಮ್ಮಿಯ ಹೆಸರು? ಸೋನಿಯಾ ಅಂತ ಎಲ್ಲಿಂದ ಬಂತು? ನಿಮ್ಮ ಹೆಸರಿನ ಮುಂದೆ ಗಾಂಧಿ ಅಂತ ಬಂದ್ದದ್ದು ಹೇಗೆ? ನಿಮ್ಮ ಫ್ಯಾಮಿಲಿಯ ಬಗ್ಗೆ ಹಲವಾರು ನಿಗೂಢ ವಿಷ್ಯಗಳಿವೆ. ಜನರಿಗೆ ನಿಮ್ಮ ಬಗ್ಗೆ ಎಷ್ಟೊಂದು ಡೌಟಿದೆ ಗೊತ್ತಾ? ಈ ಎಲ್ಲಾ ಡೌಟನ್ನೂ ಒಮ್ಮೆ ಕ್ಲಿಯರ್ ಮಾಡಿಬಿಡಿ ಅಂಕಲ್‍ಜೀ….

ರಾಹುಲ್ ಅಂಕಲ್ ನೀವ್ಯಾಕೆ ಯಾವಾಗ್ಲೂ ಆರೆಸ್ಸೆಸ್‍ಗೆ ಬೈಯುತ್ತಾ ಇರ್ತೀರಿ? ಆರೆಸ್ಸೆಸ್ ನಿಮ್ಗೆ ಏನು ಮಾಡಿದೆ? ಆರೆಸ್ಸೆಸ್ ದೇಶಭಕ್ತ ಸಂಘಟನೆ.. ಅದು ಬಿಟ್ಟು
ದೇಶದ್ರೋಹಿ ಸಂಘಟನೆಗಳ ಬಗ್ಗೆ ಮಾತಾಡಿ ಅಂಕಲ್. ಸುಮ್ನೆ ಟೈಂ ವೇಸ್ಟ್ ಮಾಡ್ಬೇಡಿ. ಈ ಪಿಎಫ್‍ಐ, ಐಎಸ್‍ಐ, ಲಷ್ಕರ್ ಇ ತೈಬಾದಂತಹಾ ಹಲವಾರು
ಸಂಘಟನೆಗಳಿವೆ. ಇವುಗಳ ಬಗ್ಗೆ ಮಾತಾಡಿ. ಖಂಡಿತಾ ಜನ ನಿಮ್ಮನ್ನು ಮೆಚ್ತಾರೆ. ಅಷ್ಟಕ್ಕೂ ಆರೆಸ್ಸೆಸ್ ನಿಮ್ಗೆ ಏನು ಮಾಡಿದೆ? ನಿಮ್ಗ್ಯಾಕೆ ಅಷ್ಟೊಂದು ಹಗೆ? ಪ್ಲೀಸ್ ಅಂಕಲ್ ಕೆಲಸಕ್ಕೆ ಬಾರದ ವಿಷ್ಯಕ್ಕೆ ಕೈ ಹಾಕ್ಬೇಡಿ… ನಿಮ್ಮ ಮುಂದಿನ ಭಾಷಣದಲ್ಲಿ ವಂದೇ ಮಾತರಂ ಹಾಡ್ಬೇಡಿ ಅಂದ ಓವೈಸಿ ಬಗ್ಗೆ, ಉಗ್ರಗಾಮಿಗಳನ್ನು ಪ್ರಚೋದಿಸುವ ಝಾಕಿರ್ ನಾಯಿಕ್ ವಿರುದ್ಧ ಮಾತಾಡಿ….

ನಮ್ಮ ಮನೆ ಸಮೀಪದ ಒಂದು ಮಸೀದಿ ಇದೆ. ಬೆಳಿಗ್ಗೆ ನಾಲ್ಕು ಗಂಟೆಗೆ ಶುರುವಾಗುತ್ತದೆ ಬೊಬ್ಬೆ. ಬೊಬ್ಬೆ ಹೊಡೀಬೇಡಿ ಅನ್ನೋಲ್ಲ. ಆದ್ರೆ ಮೈಕ್ ಇಟ್ಟು ಯಾಕೆ ಬೊಬ್ಬೆ ಹೊಡೀಬೇಕು? ನನಗೆ ಕಿರಿಕಿರಿಯಿಂದ ನಿದ್ದೆನೇ ಬರ್ತಿಲ್ಲ. ರಾಹುಲ್ ಅಂಕಲ್ ಪ್ಲೀಸ್ ನೀವು ಮೈಕ್ ಇಡ್ಬೇಡಿ ಅಂತ ಒಮ್ಮೆ ಹೇಳ್ಬಿಡಿ. ನಿಮ್ಮ ಮಾತನ್ನು ಮುಸ್ಲಿಮರು ಕೇಳಿದ್ರೂ ಕೇಳಿಯಾರು?

ರಾಹುಲ್ ಅಂಕಲ್ ನೀವು ಗೋರಕ್ಷಕರನ್ನು ಕಿಡಿಗೇಡಿಗಳು ಅಂದಿದ್ದಿರಿ. ನಮ್ಮ ಮನೆಯ ಪ್ರೀತಿಯ ಗೋವು ಗೌರಿಯನ್ನು ಮುಸ್ಲಿಮರು ಕದ್ದುಕೊಂಡು ಹೋದ್ರು. ಆಮೇಲೆ ನಮ್ಮ ಮನೆಯ ಮತ್ತೊಂದು ಗೋವು ಆಕೆ ಗೌರಿಯ ಮಗಳು ಚಿನ್ನು.. ಈಕೆಯನ್ನು ಕದಿಯಲು ಬಂದಾಗ ನಮ್ಮ ಊರಿನ ಹಿಂದೂ ಕಾರ್ಯಕರ್ತರು ತಡೆದರು. ನೀವು ಯಾವ ಅರ್ಥದಲ್ಲಿ ಗೋರಕ್ಷಕರನ್ನು ಕಿಡಿಗೇಡಿಗಳು ಅಂದಿರಿ? ನಮ್ಮ ಮನೆಯಿಂದ ಕಳವಾದ ಗೌರಿಯನ್ನು ನೀವು ತಂದುಕೊಡ್ತೀರಾ?

ರಾಹುಲ್‍ಜೀ ನೀವು ಹಿಂದೂ ವಿರೋಧಿಯಂತೆ ಯಾಕೆ ವರ್ತಿಸ್ತೀರಿ… ನಮ್ಮ ಮನೆಯ ಪಕ್ಕದ ಮೋಹನ್ ಅಂಕಲ್, ನಾರಾಯಣ ಮಾಮಾ, ವೆಂಕಟೇಶಣ್ಣ ಇವರೆಲ್ಲಾ ಕಾಂಗ್ರೆಸ್‍ಗೆ ಓಟು ಕೊಡಿ ಅಂತ ಹೋದ ವರ್ಷ ನಮ್ಮ ಮನೆಗೂ ಬಂದಿದ್ದರು. ಇವರೆಲ್ಲಾ ಹಿಂದೂಗಳಲ್ವಾ? ರಾಹುಲ್ ಅಂಕಲ್ ನೀವು ಹಿಂದೂಗಳ ವಿರುದ್ಧ ಮಾತಾಡ್ತೀರಲ್ವಾ ಮುಂದಿನ ಭಾಷಣದಲ್ಲಿ ನೀವು ಹಿಂದೂಗಳ ಓಟ್ ಬೇಡ ಅಂತ ಡೈರೆಕ್ಟಾಗಿ ಹೇಳಿ. ಯಾಕೆಂದ್ರೆ ಮೋಹನ್ ಅಂಕಲ್, ನಾರಾಯಣ ಮಾಮಾ, ವೆಂಕಟೇಶಣ್ಣ ಇವರೆಲ್ಲರ ಕೆಲಸನೂ ಉಳಿಯುತ್ತೆ.

ಹಿಂದೂಗಳು ಪಟಾಕಿ ಹೊಡಿಬಾರದಂತೆ… ಯಾರೇ ಏನೋ ಆರ್ಡರ್ ಮಾಡ್ಲಿ ಬಿಡ್ಲಿ. ಈ ಸಲ ಡ್ಯಾಡಿ ಬಳಿ ಪಟಾಕಿ ತರ್ಲಿಕ್ಕೆ ಹೇಳಿದ್ದೇನೆ. ರಾಹುಲ್ ಅಂಕಲ್ ಈ ಸಲ ನೀವು ಪಟಾಕಿ ಹೊಡೆಯುವವರಿಗೆ ಖಂಡಿತಾ ಸಪೋರ್ಟ್ ಮಾಡ್ತೀರಾ? ಈ ಬಾರಿ ದೀಪಾವಳಿಗೆ ನಮ್ಮ ಮನೆಗೆ ಬನ್ನಿ ಒಟ್ಟಿಗೆ ಪಟಾಕಿ ಸಿಡಿಸೋಣ ಆಯ್ತಾ?

ನನಗೆ ಮನೆಯಲ್ಲಿ ವಿವೇಕಾನಂದರು, ಸುಭಾಷ್ ಚಂದ್ರ ಬೋಸ್, ಎಪಿಜೆ ಅಬ್ದುಲ್ ಕಲಾಂ ಮುಂತಾದವರನ್ನು ಆದರ್ಶವನ್ನಾಗಿಸಲು ಹೇಳುತ್ತಾರೆ. ಆದರೆ ಪಾಕಿಸ್ಥಾನಕ್ಕೆ ಜೈಕಾರ ಹಾಕಿದ ಕನ್ಹಯ್ಯಾ ನಿಮಗೆ ಆದರ್ಶ ಪುರುಷ ಆಗಿದ್ದು ಹೇಗೆ ಅಂಕಲ್? ಪ್ರತಿ ಬಾರಿಯೂ ಹಿಂದೂಗಳನ್ನು ದೂರುತ್ತಾ ಹಿಂದೂಗಳ ವಿರೋಧ ಕಟ್ಟಿಕೊಳ್ಳುವ ನಿಮಗೆ ಹಿಂದೂಗಳು ಏನು ಅನ್ಯಾಯ ಮಾಡಿದ್ದಾರೆ? ಪ್ಲೀಸ್ ಅನ್ಸರ್ ಮೀ… ರಾಹುಲ್ ಅಂಕಲ್…

ರಾಹುಲ್ ಅಂಕಲ್ ನೀವ್ಯಾಕೆ ಪೆದ್ದುಪೆದ್ದಾಗಿ ಆಡುವುದು? ನಿಮ್ಮನ್ಯಾಕೆ ಪಪ್ಪು ಪಪ್ಪು ಅನ್ನುವುದು? ಲೇಡೀಸ್ ಟಾಯ್ಲೆಟ್‍ಗೆ ನುಗ್ಗುವಷ್ಟು ಅರ್ಜೆಟ್ ಏನಿತ್ತು? ನೀವು
ಭಾಷಣದಲ್ಲಿ ಸುಳ್ಳು ಹೇಳುತ್ತೀರಿ ಎಂದು ನನ್ನಂತಹಾ ಚಿಕ್ಕ ಮಕ್ಕಳಿಗೂ ಗೊತ್ತಾಗಿ ಬಿಡುತ್ತದೆ. ಆದರೆ ನಿಮಗ್ಯಾಕೆ ಗೊತ್ತಾಗೋಲ್ಲ? ಅದಕ್ಕೆ ಹೇಳಿದ್ದು ನೀವು ಥೇಟ್
ಮಿಸ್ಟರ್ ಬೀನ್ ನಂತೆ ಕಾಣ್ತೀರಿ. ನಿಮಗೆ ರಾಜಕೀಯ ಬೇಡ ಅಂತ ಅನಿಸುತ್ತದೆ. ನಿಮಗೆ ರಾಜಕೀಯಕ್ಕಿಂತ ಸಿನಿಮಾ ಒಳ್ಳೆ ಮ್ಯಾಚ್ ಆಗುತ್ತದೆ. ಟ್ರೈ ಮಾಡಿದ್ರೆ ನೀವು ಒಳ್ಳೆ ಕಾಮಿಡಿಯನ್ ಆಗಬಹುದು. ಆದ್ದರಿಂದ ನೀವು ರಾಜಕೀಯ ಬಿಟ್ಟು ಸಿನಿಮಾಕ್ಕೆ ಬನ್ನಿ…

ರಾಹುಲ್ ಅಂಕಲ್ ಪತ್ರ ತುಂಬಾ ಉದ್ದವಾಯಿತೆಂದು ಅನಿಸುತ್ತದಾ? ನಿಧಾನಕ್ಕೆ ಓದಿ. ಅವಸರವಸರವಾಗಿ ಓದಿ ಮುಗಿಸಬೇಡಿ. ಅರ್ಜೆಂಟ್ ಇದ್ರೆ ನಾಳೆಗೂ ಕಂಟಿನ್ಯೂ ಮಾಡಿ. ಹಾ ಮರೆತೆ ನಿಮ್ಗೆ ಮದುವೆ ಯಾವಾಗ? ಹುಡುಗಿ ಏನಾದ್ರೂ ನೋಡಿದ್ದೀರಾ? ನಿಮ್ಮ ಮದುವೆಗೆ ಬರ್ಲಿಕ್ಕೆ ತುಂಬಾ ಮನಸ್ಸಿದೆ. ಆದಷ್ಟು ಬೇಗ ನಿಮ್ಮ ವೆಡ್ಡಿಂಗ್ ಕಾರ್ಡ್ ನನ್ನ ಅಡ್ರೆಸ್‍ಗೆ ಕಳುಹಿಸಿ… ಖಂಡಿತಾ ಬರ್ತೀವಿ…

ಇವತ್ತಿಗೆ ಇಷ್ಟು ಸಾಕು.. ಟೈಂ ಇದ್ರೆ ಮತ್ತೊಂದು ಪತ್ರ ಬರೆಯುತ್ತೇನೆ…. ಅಲ್ಲಿಯ ತನಕ ನಮಸ್ಕಾರ…

ಇತೀ ನಿಮ್ಮ ಪ್ರೀತಿಯ ಪುಟ್ಟಿ,

ಪ್ರಣೀತಾ,
9ನೇ ತರಗತಿ,
ಸರಕಾರಿ ಪ್ರೌಢ ಶಾಲೆ
ಬೆಂಗಳೂರು.

Tags

Related Articles

Close