ಅಂಕಣ

ಡಿಯರ್ ಸಿದ್ದರಾಮಯ್ಯನವರೇ, ಅರವಿಂದ ಲಿಂಬಾವಳಿಯವರ ಕೆಲಸ ಕಾರ್ಯಗಳ ಅರ್ಧದಷ್ಟಾದರೂ ನೀವು ಮಾಡಿದ್ದೀರಾ???

ಅರವಿಂದ ಲಿಂಬಾವಳಿ, ಕರ್ನಾಟಕ ರಾಜ್ಯ ಬಿಜೆಪಿಯ ಪ್ರಶ್ನಾತೀತ ನಾಯಕ. ಮಹದೇವಪುರ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಹಲವು ಬಾರಿ ಆಯ್ಕೆಯಾದ ಅರವಿಂದ ಲಿಂಬಾವಳಿಯವರ ಬಗ್ಗೆ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ ಇಂತಹ ಕ್ಲಿಷ್ಟಕರ ಸಮಯದಲ್ಲೂ ತಮ್ಮ ರಾಜಕೀಯ ತೋರಿಸಿದ್ದರು. ಅಷ್ಟಕ್ಕೂ ಅರವಿಂದ ಲಿಂಬಾವಳಿಯವರ ಕೆಲಸಗಳ ಬಗ್ಗೆ ಸಿದ್ದರಾಮಯ್ಯನವರಿಗೆ ಏನು ಗೊತ್ತು? ಈ ಬಗ್ಗೆ ಸಮಾಜಕ್ಕೆ ಹಾಗೂ ಸಿದ್ದರಾಮಯ್ಯನವರಿಗೆ ಬೆಳಕು ಚೆಲ್ಲುವ ಕಾರ್ಯ ಅಗತ್ಯವಾಗಿ ಮಾಡಬೇಕಾಗಿತ್ತು ಹೀಗಾಯೀ ಲೇಖನ.

ಸರ್ಕಾರಕ್ಕಿಂತ ಮುನ್ನವೇ ಫೀಲ್ಡಿಗಿಳಿದಿದ್ದ ಅರವಿಂದ ಲಿಂಬಾವಳಿ!

ಜಗತ್ತಿಗೆ ಕೊರೊನಾ ಎಂಬ ಮಹಾಮಾರಿ ಅಪ್ಪಳಿಸಿ ಜನ ಜೀವನ ಅಸ್ತವ್ಯಸ್ತಗೊಳಿಸಿದ್ದು ಗೊತ್ತೇ ಇದೆ. ಇಂತಹ ಸಂದರ್ಭಗಳಲ್ಲಿ ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿತ್ತು.ಹಲವಾರು ಜನರು,ವಲಸೆ ಕಾರ್ಮಿಕರು ಊಟ ಇಲ್ಲದೆ ಬೀದಿಗೆ ಬೀಳುವ ಪರಿಸ್ಥಿತಿ. ಅದರಲ್ಲೂ ಬೆಂಗಳೂರು ಅಂದಮೇಲೆ ವಲಸೆ ಕಾರ್ಮಿಕರು ಹೆಚ್ಚೇ ಇರುತ್ತಾರೆ. ಇಂತಹ ಸಂದರ್ಭದಲ್ಲಿ ಅವರ ಸಂಕಷ್ಟಕ್ಕೆ ಧಾವಿಸಿದ್ದು ಇದೇ ಅರವಿಂದ ಲಿಂಬಾವಳಿಯವರು.

ಸರ್ಕಾರ ರೇಷನ್ ವಿತರಿಸುವ ನಿರ್ಧಾರ ತೆಗೆದುಕೊಳ್ಳುವ ಮುನ್ನವೇ ಅರವಿಂದ ಲಿಂಬಾವಳಿಯವರು ತಮ್ಮ ಕ್ಷೇತ್ರದ ಜನರಿಗೆ ಆಹಾರ ಸಾಮಾಗ್ರಿಗಳ ವ್ಯವಸ್ಥೆ ಮಾಡಿಯಾಗಿತ್ತು.ನಿರ್ಗತಿಕರಿಗೆ ಊಟದ ವ್ಯವಸ್ಥೆ ಮಾಡಿಯಾಗಿತ್ತು.ನಿಜಕ್ಕೂ ಅರವಿಂದ ಲಿಂಬಾವಳಿಯವರ ಈ ಒಂದು ಕಾರ್ಯ ರಾಜ್ಯಕ್ಕೇ ಮಾದರಿಯಾಗಿತ್ತು ಮಾತ್ರವಲ್ಲದೆ ಅನೇಕ ಶಾಸಕರು ಇವರನ್ನು ಹಿಂಬಾಲಿಸಿದರು.

ಸಿದ್ದರಾಮಯ್ಯನವರ ಸಲ್ಲದ ಆರೋಪಗಳು ಬೇಸರ ತರಿಸಿದೆ!

ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿ. ಆದರೆ ತಮ್ಮ ಅವಧಿಯಲ್ಲಿ ಅವರು ಮಾಡಿರುವ ಘನಕಾರ್ಯ ಮರೆತು ಈಗ ಬಿಜೆಪಿ ಶಾಸಕರ ಬಗ್ಗೆ ಮಾತನಾಡುತ್ತಿದ್ದಾರೆ. ಅರವಿಂದ ಲಿಂಬಾವಳಿಯವರು ತಾವು ಹಾಗೂ ತಮ್ಮ ಪಕ್ಷದ ಪ್ರಮುಖರಿಂದ ಸಂಗ್ರಹಿಸಿದ ಆಹಾರ ಸಾಮಾಗ್ರಿಗಳ ಕಿಟ್ ನಲ್ಲಿ ಅರವಿಂದ ಲಿಂಬಾವಳಿಯವರ ಹಾಗೂ ಪಕ್ಷದ ಫೋಟೋ ಹಾಕಲಾಗಿತ್ತು. ಆದರೆ ಇದನ್ನು ಸಹಿಸಲಾಗದ ಸಿದ್ದರಾಮಯ್ಯನವರು ಟ್ವೀಟ್ ಮಾಡಿ ಪ್ರಚಾರ ಗಿಟ್ಟಿಸಿಕೊಂಡರು.ಮಹಾ ಸ್ಟ್ರಿಂಗ್ ಆಪರೇಷನ್ ಎಂಬಂತೆ ಟ್ವೀಟ್ ಮಾಡಿದ್ದರು. ಆದರೆ ಸತ್ಯ ಸದಾ ಕಹಿಯಾಗಿರುತ್ತೆ.

ಅರವಿಂದ ಲಿಂಬಾವಳಿಯವರು ಸರ್ಕಾರದಿಂದ ಬಂದಂತಹ ಯಾವುದೇ ಕಿಟ್ ಗಳಲ್ಲಿ ಅವರ ಹೆಸರನ್ನು ಹಾಕಲಿಲ್ಲ. ರಾಜ್ಯ ಸರ್ಕಾರ, ಬಿಬಿಎಂಪಿ, ಶಾಸಕರ ಕಛೇರಿ, ಪಕ್ಷದ ನಾಯಕರು ಹೀಗೆ ಇತರೆ ತೆರನಾದ ಮೂಲಗಳಿಂದ ಆಹಾರ ಕಿಟ್ ಗಳು ಹಾಗೂ ಇತರೆ ಸಾಮಾಗ್ರಿಗಳು ಬಂದಿತ್ತು. ಇದರಲ್ಲಿ ಪಕ್ಷದಿಂದ ಹಾಗೂ ಶಾಸಕರ ಕಚೇರಿಯಿಂದ ಬಂದ ಕಿಟ್ ಗಳಲ್ಲಿ ಮಾತ್ರವೇ ಶಾಸಕರ ಫೋಟೋ ಹಾಕಲಾಗಿತ್ತು.

ಮಹದೇವಪುರಕ್ಕೆ ಬಂದ ದಿನಸಿಗಳನ್ನು ದೋಚಿದ್ದು ಯಾರು?

ಹಿರಿಯ ಕಾರ್ಮಿಕ ನಿರೀಕ್ಷಕರಾದ ಶ್ರೀ ಸುರೇಶ್ ಎಂಬವರ ಜವಾಬ್ದಾರಿಯಲ್ಲಿ ಮಹದೇವ ಪುರ ಕ್ಷೇತ್ರದ ಕೆಲ ವಾರ್ಡುಗಳಿಗೆ ದಿನಸಿ ಸಾಮಾಗ್ರಿಗಳು ಬಂದಿದ್ದವು.ಆದರೆ ಹೀಗೆ ಬರುತ್ತಿದ್ದ ದಿನಸಿ ಸಾಮಾಗ್ರಿಗಳನ್ನು ದಾರಿ ಮಧ್ಯೆಯೇ ಅಡ್ಡ ಗಟ್ಟಿ ಅದನ್ನು ಕಾನೂನು ಬಾಹಿರವಾಗಿ ಬೇರೆ ಊರುಗಳಿಗೆ ಹಂಚಿದ್ದು ಕಾಂಗ್ರೆಸ್ ಕಾರ್ಯಕರ್ತರು?ಕರ್ತವ್ಯ ನಿರತ ಅಧಿಕಾರಿಯನ್ನು ಅಡ್ಡಗಟ್ಟಿ ಬೆದರಿಸಿ,ಕಾನೂನಿಗೆ ಅಡ್ಡಿಪಡಿಸಿದ್ದು ಕಾಂಗ್ರೆಸ್ ಕಾರ್ಯಕರ್ತರು. ಇಂತಹ ಆಹಾರ ಸಾಮಾಗ್ರಿಗಳನ್ನು ದೋಚುವ ಮನಸ್ಥಿತಿ ಬಗ್ಗೆ ಸಿದ್ದರಾಮಯ್ಯ ತುಟಿ ಬಿಚ್ಚಲ್ಲ.?

ಮಾನ್ಯ ಶಾಸಕರಾದ ಅರವಿಂದ ಲಿಂಬಾವಳಿಯವರು ತಮ್ಮ ಕ್ಷೇತ್ರದ ನಿರ್ಗತಿಕರಿಗೆ ನಿರಂತರ ಉಚಿತ ಊಟದ ವ್ಯವಸ್ಥೆ ಮಾಡಿದ್ದರು. ಏಳು ಲಕ್ಷಕ್ಕೂ ಅಧಿಕ ಊಟ ತಯಾರಿಸಿ ಲಾಕ್ ಡೌನ್ ಸಂದರ್ಭದಲ್ಲಿ ಹಂಚಿದ್ದರು. ಇದರ ಜೊತೆಗೆ ಕಿಟ್ ವಿತರಣೆ. ಈ ಎಲ್ಲಾ ಸಾಹಸಗಳು ಕೇವಲ ಸರ್ಕಾರದಿಂದ ಸಾಧ್ಯವಿಲ್ಲ.ಇದಕ್ಕೆ ಸ್ವ ಸಾಮರ್ಥ್ಯವೂ ಬೇಕು.ಅರವಿಂದ ಲಿಂಬಾವಳಿಯವರು ಸ್ವ ಸಾಮಾರ್ಥ್ಯದಿಂದ ಈ ಕೆಲಸ ಮಾಡಿದ್ದಾರೆ.

ಹೀಗಿದೆ ನೋಡಿ ವಿವಿಧ ರೀತಿಯ ಲೆಕ್ಕಗಳು…

ದಿನಸಿ ಸಾಮಾಗ್ರಿಗಳು…

ಶಾಸಕರ ಕಛೇರಿಯಿಂದ 43,359
ಬಿಜೆಪಿ ಮುಖಂಡರಿಂದ 33,566

ಇವರಿಂದ ಸಂಗ್ರಹವಾದ ಒಟ್ಟು ವಿವರ 76,925

ಸರ್ಕಾರ ಹಾಗೂ ಬಿಬಿಎಂಪಿ-33,872

ತಹಶಿಲ್ದಾರರು-3,584

ಕಾರ್ಮಿಕ ಇಲಾಖೆ-2760

ಒಟ್ಟು-40,216

ಇಸ್ಕಾನ್ ಸಹಯೋಗದೊಂದಿಗೆ-2676

ಇದು ಇಷ್ಟು ದಿನಸಿ ಸಾಮಾಗ್ರಿಗಳ ಲೆಕ್ಕವಾದರೆ ಇನ್ನು ಆಹಾರ ಪೊಟ್ಟಣಗಳನ್ನು ವಿತರಿಸಿದ ಲೆಲ್ಲ ಬೇರೆನೇ ಇದೆ.
ಲಾಕ್ ಡೌನ್ ಸಂದರ್ಭದಲ್ಲಿ ಒಟ್ಟು ವಿತರಣೆಯಾದ ಆಹಾರ ಪೊಟ್ಟಣಗಳು-7,64,830

ಇನ್ನು ತರಕಾರಿಗಳನ್ನು ಬೇರೆನೇ ಲೆಕ್ಕದಲ್ಲಿ ಹಂಚಲಾಗಿದೆ. ಅದರಲ್ಲೂ ಅರವಿಂದ ಲಿಂಬಾವಳಿಯವರ ಸ್ವ ಇಚ್ಛೆಯೇ ಪ್ರಧಾನ ಪಾತ್ರ ವಹಿಸುತ್ತದೆ…

ಶಾಸಕರ ಕಛೇರಿಯಿಂದ ಈರುಳ್ಳಿ-43,000kg

ಬಟಾಟೆ -43,000kg

ಬಿಜೆಪಿ ನಾಯಕರಿಂದ-26,030ಕಿಟ್ ಗಳು

ಮಾಸ್ಕ್..
ಶಾಸಕರ ಕಛೇರಿಯಿಂದ-70,750
ಇಲಾಖೆಯಿಂದ-11,500

ಸ್ಯಾನಿಟೈಸರ್…
ಶಾಸಕರ ಕಛೇರಿಯಿಂದ-24,090
ಇಲಾಖೆಯಿಂದ-550

ಥರ್ಮಲ್ ಸ್ಕಾನರ್..
ಶಾಸಕರ ಕಛೇರಿಯಿಂದ-04
ಇಲಾಖೆಯಿಂದ-60

ಈ ಎಲ್ಲಾ ಲೆಕ್ಕಗಳನ್ನು ಸರಿಯಾಗಿ ಗಮನಿಸಿ ಸಿದ್ದರಾಮಯ್ಯವರು ಮತ್ತೊಂದು ಟ್ವೀಟ್ ಮಾಡವೇಕಿದೆ.ಇದರಲ್ಲಿ ಸಿಂಹಪಾಲು ಇರುವುದೇ ಅರವಿಂದ ಲಿಂಬಾವಳಿಯವರ ಶಾಸಕರ ಕಛೇರಿಯಿಂದ ಹಾಗೂ ಬಿಜೆಪಿ ಮುಖಂಡರಿಂದ ಸಂಗ್ರಹಿಸಿದ ಆಹಾರ ಸಾಮಾಗ್ರಿಗಳು ಹಾಗೂ ಆಹಾರ ಪಟ್ಟಣದ ವ್ಯವಸ್ಥೆಗಳು. ಆದರೆ ಸರ್ಕಾರದ ಸಾಮಾಗ್ರಿಗಳಿಗೆ ತಮ್ಮ ಫೋಟೋ ಹಾಕಿದ್ದಾರೆ ಎಂದು ಅರವಿಂದ ಲಿಂಬಾವಳಿಯವರನ್ನು ಎಳೆದು ತಂದು ವಿಕೃತ ಆನಂದ ವ್ಯಕ್ತಪಡಿಸಿದ ಸಿದ್ದರಾಮಯ್ಯನವರು ತಮ್ಮ ಕ್ಷೇತ್ರದಲ್ಲಿ ಮಾಡಿದ ಇಂತಹಾ ಕಾರ್ಯಗಳ ಲೆಕ್ಕ ಎಷ್ಟು ಕೊಡುತ್ತಾರೆ ಎಂಬುದು ಪ್ರಶ್ನೆಯಾಗಿದೆ.

Tags

Related Articles

FOR DAILY ALERTS
Close