ಪ್ರಚಲಿತರಾಜ್ಯ

ಡಿವೈ ಎಸ್ ಪಿ ಗಣಪತಿಯ ಆತ್ಮಹತ್ಯೆ ಪ್ರಕರಣದಲ್ಲಿ ಮತ್ತೊಂದು ತಿರುವು! ಕೆ.ಜೆ.ಜಾರ್ಜ್ ನೀಡುವರೇ ರಾಜೀನಾಮೆ?! ಸಂಕಷ್ಟದಲ್ಲಿರುವ ಸಿದ್ಧರಾಮಯ್ಯನ ಬಲಗೈ ಬಂಟ!

ರಾಜಕೀಯ ನಾಯಕರ ಕೈವಾಡದಲ್ಲಿ ಹತ್ಯೆಯಾಗಿದ್ದ ಡಿವೈಎಸ್ ಪಿ ಗಣಪತಿಯವರ ತನಿಖೆಯನ್ನು ಕೊನೆಗೂ ಸಿಬಿಐ ವಶಕ್ಕೆ ತೆಗೆದುಕೊಂಡಿದೆ! ಬಹುಷಃ ಒಬ್ಬ ದಕ್ಷ ಪೋಲಿಸ್ ಅಧಿಕಾರಿಯ ಆತ್ಮಹತ್ಯೆಗೆ ನ್ಯಾಯ ದೊರಕಿಸಿಕೊಡಲು ಇನ್ನೆಷ್ಟು ದಿನಗಳು ಕಾಯಬೇಕೋ!?

ಆತ್ಮಹತ್ಯೆಯ ನಂತರ ನ್ಯಾಯಾಲಯದ ಮೆಟ್ಟಿಲೇರಿದ್ದ ಗಣಪತಿ ಕುಟುಂಬಕ್ಕೆ ಅದೆಷ್ಟು ಕಡೆಯಿಂದ ಬೆದರಿಕೆ ಬಂದವೋ! ಸಿದ್ಧರಾಮಯ್ಯನ ಸರಕಾರದ ಅಸ್ತಿತ್ವದಲ್ಲಿಯೇ ನಡೆದ ಇಂತಹ ಅದೆಷ್ಟೋ ಹತ್ಯೆಗಳಲ್ಲಿ ಅದೆಷ್ಟೋ ಸಾಕ್ಷಿಗಳು ನಾಶವಾಗಿವೆ! ಅದೇ ರೀತಿ, ಗಣಪತಿಯವರ ಸಾವಿನ ತನಿಖೆಯ ವೇಳೆಯಲ್ಲಿಯೇ ಡಿಸ್ಕ್, ದಾಖಲೆ, ಪತ್ರಗಳೆಲ್ಲ ನಾಶವಾಗಿರುವುದು ಇತ್ತೀಚೆಗಷ್ಟೇ ವರದಿಯಾಗಿತ್ತು!

ಕೆ.ಜೆ.ಜಾರ್ಜ್ ಗೆ ಸಂಕಷ್ಟ!?

ಬಿಡಿ! ಕ್ರೈಸ್ತನೆನ್ನುವ ಕಾರಣಕ್ಕೋ ಅಥವಾ ಕ್ರಿಸ್ತನ ಮೇಲಿನ ಮೋಹಕ್ಕೋ, ಕಂಕುಳಲ್ಲಿಯೇ ಕೆ.ಜೆ.ಜಾರ್ಜ್ ನನ್ನು ಇಟ್ಟುಕೊಂಡು ಸಲಹುತ್ತಿರುವ ಸಿದ್ಧರಾಮಯ್ಯರವರ ಅದ್ಭುತ ಉಪಾಯಗಳಿಗೆಲ್ಲ ‘ಬ್ರೇಕ್’ ಬೀಳುವಂತೆ ಸಿಬಿಐ ಪ್ರಕರಣವನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ!

ಸರ್ವೋಚ್ಛ ನ್ಯಾಯಾಲಯ ಪ್ರಕರಣದ ಬಗ್ಗೆ ರಾಜ್ಯ ಸರಕಾರಕ್ಕೆ ತರಾಟೆ ತೆಗೆದುಕೊಂಡಿದ್ದೂ ಅಲ್ಲದೇ, ರಾಜ್ಯ ಸರಕಾರ ಪೂರ್ಣ ಪ್ರಮಾಣದ ತನಿಖೆ ನಡೆಸದಿರುವ ಬಗ್ಗೆ ಅನುಮಾನವನ್ನೂ ವ್ಯಕ್ತ ಪಡಿಸಿದೆ!

ಆತ್ಮಹತ್ಯೆಗೂ ಮುನ್ನ ಕೆ.ಜೆ.ಜಾರ್ಜ್ ನ ಹೆಸರು ಹೇಳಿದ್ದ ಡಿವೈ ಎಸ್ ಪಿ ಗಣಪತಿಯದು ಆತ್ಮಹತ್ಯೆಯಲ್ಲ ಬದಲಿಗೆ ‘ಹತ್ಯೆ’ ಎಂಬ ಅನುಮಾನ ಇನ್ನಿರುವಾಗಲೇ, ಈಗ ಮತ್ತೆ ಸಿಕ್ಕಿರುವ ಒಂದಷ್ಟು ದಾಖಲೆಗಳು ಧೃಢೀಕರಿಸುತ್ತಿವೆ!!

ಅನುಮಾನದ ಹುತ್ತಗಳು!!!

1. ಆತ್ಮಹತ್ಯೆಗೂ ಮುನ್ನ ಕೆ.ಜೆ.ಜಾರ್ಜ್ ನ ಹೆಸರನ್ನು ಪದೇ ಪದೇ ಹೇಳಿದ್ಯಾಕೆ?!

2. ಖಿನ್ನತೆಗೊಳಗಾಗಿದ್ದರೆಂದ ರಾಜ್ಯ ಸರಕಾರ ಸಿಐಡಿ ತನಿಖೆಗೂ ಅಡ್ಡಗಾಲು ಹಾಕಿದ್ಯಾಕೆ?!

3. ಡಿವೈಎಸ್ ಪಿಯದು ‘ಆತ್ಮಹತ್ಯೆ’ ಎಂದೇ ಬಿಂಬಿಸಿದ್ದ ರಾಜ್ಯ ಸರಕಾರ ಸಾಕ್ಷಿಗಳನ್ನು ಯಾಕೆ ಧೃಢೀಕರಿಸಲಿಲ್ಲ?!

4. ಇದ್ದಕ್ಕಿದ್ದ ಹಾಗೆ, ಗಣಪತಿಯವರ ಡಿಸ್ಕ್, ಪತ್ರಗಳು,,ಮುಂತಾದ ಅಮೂಲ್ಯ ದಾಖಲೆಗಳು ನಾಶವಾಗಿದ್ಯಾಕೆ?!

5. ರಾಜ್ಯ ಸರಕಾರದ ಕಡೆಯಿಂದ ಗಣಪತಿಯವರ ಕುಟುಂಬಕ್ಕೆ ಬೆದರಿಕೆ ಕರೆ ಬಂದಿದ್ಯಾಕೆ?!

6. ಫ್ಲೋರೆನ್ಸಿಕ್ ಲ್ಯಾಬ್ ವರದಿ ಬರುವ ಮುಂಚೆಯೇ ಸಿಐಡಿ ತನಿಖಾ ವರದಿಯನ್ನು ಪ್ರಕಟಿಸಿದ್ಯಾಕೆ?!

7. ಆತ್ಮಹತ್ಯೆಗೆ ಬಳಸಿದ್ದು ಹಗ್ಗವೋ ಬೆಲ್ಟೋ ಎನ್ನುವುದೂ ಖಾತ್ರಿಯಿಲ್ಲ ಯಾಕೆ?!

8. ಆತ್ಮಹತ್ಯೆಯೆ ವೇಳೆ ಗಣಪತಿಯವರ ಪಿಸ್ತೂಲಿನಿಂದ ಎರಡು ಗುಂಡುಗಳು ಹಾರಿದ್ದನ್ನು ಸಿಐಡಿ ತನಿಖೆಯಲ್ಲಿ ವರದಿ ಮಾಡದಿರುವ ಹಿಂದಿನ ಉದ್ದೇಶ?!

9. ಗುಂಡು ಹಾರಿದ್ದು ಯಾಕಾಗಿ?! ಯಾರ ಮೇಲೆ?!

10. ಆತ್ಮಹತ್ಯೆಯ ನಂತರ ಪ್ರತಿ ನಡೆಯಲ್ಲಿಯೂ ಸಹ ಕೆ.ಜೆ.ಜಾರ್ಜ್ ನನ್ನು ಸಮರ್ಥಿಸಿದ ಸಿದ್ಧರಾಮಯ್ಯ ಯಾವ ತನಿಖೆಗೂ ಎಡೆ ಮಾಡಿಕೊಡಲಿಲ್ಲವೇಕೆ?!

11. ಶವಪರೀಕ್ಷೆಯ ವರದಿಯನ್ನೂ ಸಹ ತಿರುಚಿದ್ಯಾಕೆ?!

ಸಿಐಡಿ ಕೊಟ್ಟಿತ್ತು ಕ್ಲೀನ್ ಚಿಟ್!!!!!

ಕೆ.ಜೆ.ಜಾರ್ಜ್ ಗೆ ಕ್ಲೀನ್ ಚಿಟ್ ಕೊಟ್ಟ ಸಿಐಡಿಯನ್ನು ತರಾಟೆಗೆ ತೆಗೆದುಕೊಂಡ ಸಿಬಿಐ ಮತ್ತೆ ತನಿಖೆಯನ್ನು ಆರಂಭಿಸಿದೆ! ಸರ್ವೋಚ್ಛ ನ್ಯಾಯಾಲಯದ ಆಜ್ಞೆಯ ಮೇರೆಗೆ ಸಿಬಿಐ ಮಧ್ಯ ಪ್ರವೇಶಿಸಿದೆ ಎನ್ನುವ ವಾಸ್ತವವೊಂದು ಈಗಾಗಲೇ ಕಾಂಗ್ರೆಸ್ ನಿದ್ದೆಗೆಡಿಸಿರುವುದು ಸುಳ್ಳಲ್ಲ!

ರಾಜೀನಾಮೆ ನೀಡ್ತಾರಾ ಕೆ.ಜೆ.ಜಾರ್ಜ್?!

ಸುಪ್ರೀಮ್ ನಿಂದ ಆದೇಶ ಪ್ರತಿ ಪಡೆಯುವ ಸಿಬಿಐ ದಾಖಲಿಸುವ ಎಫ್ ಆರ್ ಐ ನಿಂದ ಬಲೆಗೆ ಯಾರ್ಯಾರು ಬೀಳುವರೋ ಆ ಸಿದ್ಧನಿಗೇ ಗೊತ್ತು ಬಿಡಿ! ! ಸಿಐಡಿನಿಂದ ದಾಖಲಾತಿಗಳನ್ನು ಪಡೆದ ನಂತರ ಸೂಕ್ಷ್ಮವಾಗಿ ಒಂದೊಂದೇ ಎಳೆಯ ಮೂಲಕ ಮಾಹಿತಿ ಕಲೆಹಾಕುವ ವಿಶೇಷ ಸಿಬಿಐ ತಂಡವಾದರೂ ನ್ಯಾಯ ದೊರಕಿಸಿಕೊಡುವಲ್ಲಿ ಮಹತ್ವದ ಪಾತ್ರ ವಹಿಸುವುದೋ ಎಂದು ಕಾದು ನೋಡಬೇಕಿದೆ.

ಸಿಎಮ್ ಸೂಚಿಸಿದರೆ ರಾಜಿನಾಮೆ ನೀಡುವೆ ಎಂದಿರುವ ಕೆ.ಜೆ.ಜಾರ್ಜ್ ಗೆ ಸ್ವಂತಿಕೆ ಎಂಬುವುದಿಲ್ಲವೇ?! ಇವರ ರಾಜೀನಾಮೆಯ ನಿರ್ಧಾರಕ್ಕೆ ಸಿದ್ಧರಾಮಯ್ಯರವರ ಅನುಮತಿ ಯಾಕೆ?! ಎಲ್ಲಾ ಹತ್ಯೆಯ ವಿಚಾರದಲ್ಲಿಯೂ ಸಹ ಹಾಗಾದರೆ ಸಿಎಮ್ ಸಾಹೇಬರಿಗೆ ಅರಿವಿತ್ತೇ?!

ತನಿಖೆಗೆ ಸಂಬಂಧಪಟ್ಟ ಹಾಗೆ ಈಗಾಗಲೇ ಸಂಕಷ್ಟರಾಗಿರುವ ಸಚಿವ ಜಾರ್ಜ್ ರಾಜೀನಾಮೇ ನೀಡುವ ಪರಿಸ್ಥಿತಿ ಬರಬಹುದೆಂದು ಕಾಂಗ್ರೆಸ್ ವಲಯ
ಮಾತನಾಡುತ್ತಿದೆ! ಅಲ್ಲದೇ, ಕಳುವಾಗಿರುವ ಎಲ್ಲಾ ದಾಖಲೆಗಳು ಸಿಕ್ಕರೆ ಕರ್ನಾಟಕ ಕಾಂಗ್ರೆಸ್ ಮುಕ್ತವಾಗುವ ಬಹುತೇಕ ಶುಭ ಸೂಚನೆಯೂ ಎದ್ದು ಕಾಣುತ್ತಿದೆ!!

– ತಪಸ್ವಿ

Tags

Related Articles

Close