ಪ್ರಚಲಿತ

ಡಿ.ಕೆ. ರವಿಯ ಶವ ಪರೀಕ್ಷಾ ಕೊಠಡಿಗೆ ಹಿಂಬಾಗಿಲಿನಿಂದ ಸಿಎಂ ಹೋಗಿದ್ದೇಕೆ?

ದಕ್ಷ ಪೊಲೀಸ್ ಅಧಿಕಾರಿ ಡಿ.ಕೆ. ರವಿಯವರನ್ನು ಕೊಂದಿರುವುದು ಯಾರು? ಇಂಥದೊಂದು ಕುತೂಹಲ ಹಲವಾರು ವರ್ಷಗಳಿಂದ ಕಾಡುತ್ತಲೇ ಇದೆ. ಆದರೆ ಇದುವರೆಗೂ ಕೊಲೆಗಾರರು ಯಾರೆಂದು ಇದುವರೆಗೂ ಬಹಿರಂಗಗೊಂಡಿಲ್ಲ. ಆದರೆ ಇದೀಗ ಕೆಲವೊಂದು ಅಂಶಗಳು ಡಿ.ಕೆ. ರವಿಯವರದ್ದು ವ್ಯವಸ್ಥಿತ ಕೊಲೆ ಎನ್ನುವ ಶಂಕೆ ದಟ್ಟವಾಗಿದೆ. ಯಾಕೆಂದರೆ ಡಿ.ಕೆ ರವಿಯವರ ತಾಯಿ ಮಾಡಿರುವ ಗಂಭೀರ ಆರೋಪವೊಂದು ಈ ರೀತಿಯ ಚಿಂತನೆಗೆ ಇಂಬು ನೀಡಿದೆ.

ಹೌದು ಅದೇ… ಡಿ.ಕೆ. ರವಿಯ ಶವ ಪರೀಕ್ಷಾ ಕೊಠಡಿಗೆ ಹಿಂಬಾಗಿಲಿನಿಂದ ಸಿಎಂ ಹೋಗಿದ್ದೇಕೆ?

ಇಂಥದೊಂದು ಗಂಭೀರ ಪ್ರಶ್ನೆಯನ್ನು ಡಿ.ಕೆ. ರವಿಯವರ ತಾಯಿ ಗೌರಮ್ಮ ಎತ್ತಿದ್ದಾರೆ… ಅವರು ಮಾಡಿರುವ ಗಂಭೀರ ಆರೋಪವನ್ನು ಮೆಲುಕುತ್ತಾ ಹೋದರೆ ಕೊಲೆ ಹಿಂದಿನ ಮಜಲುಗಳು ಒಂದೊಂದಾಗಿಯೇ ಬಿಡಿಸುತ್ತಾ ಹೋಗುತ್ತದೆ.

ಡಿ.ಕೆ. ರವಿ ಆತ್ಮಹತ್ಯೆ ಪ್ರಕರಣದ ಮರಯ ತನಿಖೆ ನಡೆಸುವಂತೆ ಹೋರಾಟ ನಡೆಸಲು ಅಗತ್ಯ ದಾಖಲೆಗಳನ್ನು ಸಂಬಂಧಪಟ್ಟ ಅಧಿಕಾರಿಗಳು ನೀಡುತ್ತಿಲ್ಲ. ಇದಲ್ಲದೆ ಒಬ್ಬ ಮುಖ್ಯಮಂತ್ರಿಯಾಗಿರುವವರು ಶವ ಪರೀಕ್ಷಾ ಕೊಠಡಿಗೆ ಹಿಂಬಾಗಿಲಿನಿಂದ ಹೋಗಿದ್ಯಾಕೆ? ಕೊಲೆಯಾದ ಸ್ಥಳಕ್ಕೆ ಸಚಿವ ಜಾರ್ಜ್ ಭೇಟಿಯಾಗಿದ್ದು ಯಾಕೆ? ಆದ್ದರಿಂದ ಈ ಪ್ರಕರಣದಲ್ಲಿ ಕೆಲವು ಸಚಿವರು ಸೇರಿದಂರೆ ರಾಜಕಾರಣಿಗಳ ಪಾತ್ರ ಇದೆ ಎಂದು ಗಂಭೀರವಾದ ಆರೋಪವೊಂದನ್ನು ಮಾಡಿದ್ದಾರೆ. ಶುಕ್ರವಾರ ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ ಗೌರಮ್ಮ ನನ್ನ ಮಗನ ಕೊಲೆ ನಡೆದಿದ್ದು ಇದಕ್ಕೆ ಪೂರಕವಾದ ಸಾಕ್ಷ್ಯಗಳ ಬಗ್ಗೆ ನಮಗೆ ಮಾಹಿತಿ ಇತ್ತು. ಆದರೆ ನಮ್ಮ ಹೇಳಿಕೆಗಳನ್ನು ತನಿಖಾಧಿಕಾರಿಗಳು ಪರಿಗಣಿಸಿಲ್ಲ. ಈ ಹಿನ್ನೆಲೆಯಲ್ಲಿ ಪ್ರಕರಣದ ಮರುತನಿಖೆ ನಡೆಸುವಂತೆ ಕಾನೂನು ಹೋರಾಟ ನಡೆಸಬೇಕಾಗಿದೆ. ಅದಕ್ಕೆ ಇನ್ನಿತರ ದಾಖಲೆಗಳು ನೀಡುವಂತೆ ಕೇಳಿದರೂ ಅಧಿಕಾರಿಗಳು ಕೊಡುತ್ತಿಲ್ಲ ಎಂದು ಗಂಭೀರವಾದ ಆರೋಪವನ್ನು ಮಾಡಿದ್ದಾರೆ.

ಮುಂಬರುವ ಚುನಾವಣೆಯಲ್ಲಿ ನಿಲ್ಲುವ ಆಸಕ್ತಿ ನಮಗಿಲ್ಲ ಎಂದು ಸ್ಪಷ್ಟಪಡಿಸಿದ ಗೌರಮ್ಮ ಅವರು ನಮ್ಮ ಮಗನ ಸಾವಿಗೆ ನ್ಯಾಯ ದೊರಕಿಸಿ ಕೊಡುವವರಿಗೆ ನಮ್ಮ ಬೆಂಬಲ ಇದೆ ಎಂದು ಪ್ರಕಟಿಸಿದ್ದಾರೆ. ಬೆಂಗಳೂರು ದಕ್ಷಿಣ ವಿಭಾಗದ ಉಪ ವಿಭಾಗಾಧಿಕಾರಿಗಳು ಘಟನೆ ಸಂಬಂಧ 40 ಪುಟಗಳ ವರದಿ ಮಾತ್ರ ನೀಡಿದ್ದಾರೆ. ಆದರೆ ವೈದ್ಯ ಪರೀಕ್ಷೆಗೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳನ್ನು ನೀಡುತ್ತಿಲ್ಲ. ಇದರಿಂದ ಕಾನೂನು ಹೋರಾಟಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನನ್ನ ಮಗ ಆತ್ಮಹತ್ಯೆ ಮಾಡಿಕೊಂಡಿಲ್ಲ. ನನ್ನ ಮಗನನ್ನು ಸಿಎಂ ಸಿದ್ದರಾಮಯ್ಯ, ಸಚಿವ ಕೆಜೆ ಜಾರ್ಜ್, ವರ್ತೂರು ಪ್ರಕಾಶ್ ಹಾಗೂ ಮಾವ ಹನುಮಂತರಾಯಪ್ಪ ಸೇರಿ ಕೊಲೆ ಮಾಡಿಸಿದ್ದಾರೆ. ಷಡ್ಯಂತ್ರದಿಂದ ನನ್ನ ಮಗನ ಕೊಲೆ ನಡೆದಿದೆ. ನನಗೆ ನ್ಯಾಯ ಕೊಡಿಸುತ್ತೇನೆ ಎಂದು ಹೇಳಿದರೂ ಕೂಡಾ ನ್ಯಾಯ ಸಿಕ್ಕಿಲ್ಲ. ನನ್ನ ಮಗ ಆತ್ಮಹತ್ಯೆ ಮಾಡಿಕೊಳ್ಳುವವನಲ್ಲ, ಎಲ್ಲಾ ಸೇರಿ ಷಡ್ಯಂತ್ರದಿಂದ ಕೊಲೆ ಮಾಡಿಸಿದ್ದಾರೆ ಎಂದು ಕಣ್ಣೀರಿಟ್ಟಿದ್ದಾರೆ.

ಮಗನ ಸಾವಿಗೆ ಸಚಿವ ಕೆ.ಜೆ.ಜಾರ್ಜ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಶಾಸಕ ವರ್ತೂರು ಪ್ರಕಾಶ್ ಮತ್ತು ಮಾವ ಹನುಮಂತರಾಯಪ್ಪ ನೇರ ಹೊಣೆ. ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸುವಂತೆ ಒತ್ತಾಯಿಸಿದ್ದೆವು. ಆದರೆ ಮಾಡಿಲ್ಲ ಎಂದು ಗೌರಮ್ಮ ಹೇಳಿದರು. ಡಿ.ಕೆ.ರವಿ ಅಭಿಮಾನಿಗಳ ಸಂಘದ ಅಧ್ಯಕ್ಷ ಮುರಳಿ, `ಮಂಗಳವಾರದೊಳಗೆ ವರದಿಯ ಪ್ರತಿಯನ್ನು ನೀಡುವುದಾಗಿ ಉಪವಿಭಾಗಾಧಿಕಾರಿ ತಿಳಿಸಿದ್ದಾರೆ. ಒಂದು ವೇಳೆ ನೀಡದಿದ್ದರೆ ಬುಧವಾರ ಕೋಲಾರದಲ್ಲಿ ಪ್ರತಿಭಟನಾ ರ?ಯಾಲಿ ನಡೆಸುತ್ತೇವೆ’ ಎಂದು ಎಚ್ಚರಿಸಿದರು.

2015 ಮಾರ್ಚ್ 16ರಂದು ಬೆಂಗಳೂರಿನ ಮಡಿವಾಳದಲ್ಲಿರುವ ಅವರ ಫ್ಲ್ಯಾಟ್‍ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ರವಿ ಅವರ ಮೃತದೇಹ ಪತ್ತೆಯಾಗಿತ್ತು. ಸೇವೆಯಲ್ಲಿರುವಾಗಲೇ ಅವರು ನಿಗೂಢವಾಗಿ ಸಾವನ್ನಪ್ಪಿದ್ದರು. ಅವರು ಯಾಕಾಗಿ ಆತ್ಮಹತ್ಯೆ ಮಾಡಿಕೊಂಡರು ಎಂದು ಇಂದಿಗೂ ನಿಗೂಢವಾಗಿಯೇ ಉಳಿದುಕೊಂಡಿದೆ.

ಉತ್ತರ ಕೊಡಿ ಸಿಎಂ ಸಾಹೇಬ್ರೇ…

ಡಿ.ಕೆ. ರವಿ ಅವರ ತಾಯಿ ಗೌರಮ್ಮ ಅವರ ಆರೋಪದ ಪ್ರಕಾರ ಶವ ಪರೀಕ್ಷಾ ಸಂದರ್ಭ ಸಿ.ಎಂ ಸಿದ್ದರಾಮಯ್ಯ ಅವರು ಶವಪರೀಕ್ಷಾ ಕೊಠಡಿಯ ಹಿಂಬಾಗಿಲಿನ ಮೂಲಕ ಪ್ರವೇಶಿಸಿದ್ದುಯಾಕೆ? ಇದರ ಹಿಂದಿನ ಉದ್ದೇಶವಾದ್ರೂ ಏನು? ಶವ ಪರೀಕ್ಷೆ ನಡೆಸುವ ವೈದ್ಯರ ಮೇಲೆ ಒತ್ತಡ ಹೇರಿ ಆತ್ಮಹತ್ಯೆ ಎಂದು ಬಿಂಬಿಸಲು ನಾಟಕವಾಡಿದ್ದರೇ? ಒಟ್ಟಾರೆ ಈ ಪ್ರಕರಣದಲ್ಲಿ ಏನಾಗಿದೆ? ಕೆ.ಜೆ. ಜಾರ್ಜ್ ಅವರನ್ನು ಉಳಿಸುವ ಸಲುವಾಗಿ ಈ ಕೃತ್ಯವನ್ನು ಎಸಗಿದ್ದರೇ? ಡಿ.ಕೆ ರವಿಯಂಥಾ ವ್ಯಕ್ತಿ ನಿಜವಾಗಿಯೂ ಆತ್ಮಹತ್ಯೆ ಮಾಡಿಕೊಳ್ಳುವಂತಹಾ ವ್ಯಕ್ತಿಯಲ್ಲ. ಸರಕಾರದ ವಿರುದ್ಧ ಯಾವುದೋ ಸ್ಫೋಟಕ ತನಿಖೆಗೆ ಮುಂದಾಗಿದ್ದ ಡಿ.ಕೆ. ರವಿಯವರನ್ನು ಕೊಲೆ ಮಾಡಲಾಗಿದೆಯೇ ಎನ್ನುವ ಪ್ರಶ್ನೆ ಮೂಡಿದೆ. ಈ ಪ್ರಕರಣದ ತನಿಖೆಯ ವರದಿ ಸಿಗದಂತೆ ನೋಡಿಕೊಳ್ಳುವುದು ಯಾಕೆ? ಅಧಿಕಾರಿಗಳು ಈ ಬಗ್ಗೆ ಗೌರಮ್ಮ ಅವರನ್ನು ಸತಾಯಿಸುತ್ತಿರುವುದು ಯಾಕೆ? ಇದನ್ನೆಲ್ಲಾ ನೋಡುವಾಗ ಡಿ.ಕೆ ಅವರನ್ನು ವ್ಯವಸ್ಥಿತವಾಗಿ ಮುಗಿಸಿ, ಎಲ್ಲಾ ಸಾಕ್ಷ್ಯಗಳನ್ನು ನಾಶಪಡಿಸಿ ಆತ್ಮಹತ್ಯೆ ಎಂದು ಬಿಂಬಿಸುವ ಕೆಲಸ ನಡೆಯುತ್ತಿದೆಯೇ?

ಸ್ವತಃ ಡಿ.ಕೆ ಅವರ ತಾಯಿಯೇ ಸಿ.ಎಂ ವಿರುದ್ಧ ಗಂಭೀರವಾದ ಆರೋಪವನ್ನು ಮಾಡುತ್ತಿರುವಾಗ ಸಿದ್ದು ಈ ಬಗ್ಗೆ ಖಂಡಿತಾ ಉತ್ತರ ನೀಡಬೇಕಾಗಿದೆ. ಆದರೆ ಅವರು ಉತ್ತರ ನೀಡುವ ಮೂಡ್‍ನಲ್ಲಿಲ್ಲ. ಈ ಬಗ್ಗೆ ಸಿಬಿಐ ಗಂಭೀರವಾಗಿ ಪರಿಗಣಿಸಿ ಗೌರಮ್ಮ ಹೆಸರು ಎತ್ತಿದ ಮುಖ್ಯಮಂತ್ರಿ ಹಾಗೂ ಸಚಿವರನ್ನು ಗಂಭೀರವಾಗಿ ತನಿಖೆ ನಡೆಸಿ ಕೊಲೆ ರಹಸ್ಯವನ್ನು ಭೇದಿಸಬೇಕಿದೆ. ಯಾಕೆಂದರೆ ರಾಜ್ಯದಲ್ಲಿ ಡಿ.ಕೆ ರವಿಯಂತೆ ಅನೇಕ ಮಂದಿ ದಕ್ಷಿ ಅಧಿಕಾರಿಗಳು ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಪ್ರಕರಣವೂ ವ್ಯವಸ್ಥಿತ ಕೊಲೆಯಂತೆಯೇ ಕಂಡುಬರುತ್ತಿದ್ದು, ಸಚಿವ ಕೆ.ಜೆ. ಜಾರ್ಜ್ ಮೇಲೆ ಆರೋಪ ಕೇಳಿಬಂದಿದೆ. ಒಟ್ಟಾರೆ ದಕ್ಷ ಅಧಿಕಾರಿಗಳನ್ನು ಮುಗಿಸಲಾಗುತ್ತಿದ್ದು, ಇಂತವರಿಗೆಲ್ಲಾ ಕರ್ನಾಟಕದಲ್ಲಿ ಉಳಿಗಾಲವಿಲ್ಲದಂತಾಗಿದೆ.

ಅಬಕಾರಿ ಪೆÇೀಲಿಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಲಾರಂಭಿಸಿದ ಡಿ.ಕೆ. ರವಿ ಅವರು ಕೋಲಾರ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಕೋಲಾರದ ಡಿಸಿಯಾಗಿ ಸೇವೆ ಸಲ್ಲಿಸಿದ್ದ ಅವರು ಕೋಲಾರದಲ್ಲಿನ ಅಕ್ರಮ ಭೂ ಒತ್ತವರಿದಾರರ ವಿರುದ್ಧ ಸಮರವನ್ನೇ ಸಾರಿ ಸರ್ಕಾರಿ ಗೋಮಾಳ, ಸರ್ಕಾರಿ ಭೂಮಿ ಮತ್ತು ಕೆರೆಗಳ ಒತ್ತುವರಿಯನ್ನುತೆರವುಗೊಳಿಸಿದ್ದರು. ಹೀಗಾಗಿ ಕೋಲಾರ ಜಿಲ್ಲೆಯಾದ್ಯಂತ ರವಿ ಅವರು ಪ್ರಮಾಣಿಕ ಅಧಿಕಾರಿ ಎಂದೇ ಖ್ಯಾತಿ ಗಳಿಸಿದ್ದರು. ಇವಿಷ್ಟೇ ಅಲ್ಲದೇ ನೀರಿನ ಸಮಸ್ಯೆಯಿಂದ ಬಳಲುತ್ತಿದ್ದ ಕೋಲಾರ ಜನತೆಗೆ ರವಿ ಆಧುನಿಕ ಭಗೀರಥರಾಗಿದ್ದರು. ಕೋಲಾರದ ಸಾಕಷ್ಟು ಕೆರೆಗಳಿಗೆ ನೀರು ತುಂಬಿಸುವ ಮೂಲಕ ಕೋಲಾರದ ಜನತೆಯ ನೀರಿನ ದಾಹವನ್ನು ತಮ್ಮ ಕೈಲಾದ ಮಟ್ಟಿಗೆ ನೀಗಿಸಿದ್ದರು. ಅಷ್ಟೇ ಅಲ್ಲ ಅಕ್ರಮವಾಗಿ ಕೆರೆಗಳನ್ನು ಒತ್ತುವರಿ ಮಾಡಿಕೊಂಡು ಲೇಔಟ್ ಗಳನ್ನು ಮಾಡಿಕೊಂಡಿದ್ದ ಭೂಗಳ್ಳರನ್ನು ಯಾವುದೇ ಮುಲಾಜಿಲ್ಲದೇ ತೆರವುಗೊಳಿಸಿ ಕೋಲಾರದ ಟೈಗರ್ ಎಂದೇ ಪ್ರಸಿದ್ದರಾಗಿದ್ದರು.

ಕರ್ನಾಟಕ ರಾಜ್ಯ ವಾಣಿಜ್ಯ ತೆರಿಗೆ ಹೆಚ್ಚುವರಿ ಆಯುಕ್ತರಾಗಿ, ವಾಣಿಜ್ಯ ತೆರಿಗೆ ಇಲಾಖೆ ಹೆಚ್ಚುವರಿ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದ ಡಿ.ಕೆ. ರವಿ, ಇಲಾಖೆ ಅಧಿಕಾರಿಗಳ ಸಭೆ ನಡೆಸಿ ತೆರಿಗೆ ಕಳ್ಳರನ್ನು ಕಾನೂನಿನ ಜಾಲದಲ್ಲಿ ಸಿಕ್ಕಿಸಬೇಕಾದರೆ, ಹೇಗೆ ನೋಟಿಸ್ ನೀಡಬೇಕೆಂಬ ಮಾರ್ಗಸೂಚಿ ಹಾಕಿಕೊಟ್ಟಿದ್ದರು. ಸಾಯುವ ಮುಂಚೆ ಕಚೇರಿ ಆಗಮಿಸಿದ್ದ ಅವರು, 11 ಗಂಟೆಯಿಂದ ವಾಣಿಜ್ಯ ತೆರಿಗೆ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ, ಸೂಕ್ತ ನಿರ್ದೇಶನ ನೀಡಿದ್ದರು. ಇಂತಹಾ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರೆ ನಂಬಲು ಸಾಧ್ಯವೇ ಇಲ್ಲ. ಭ್ರಷ್ಟರಿಗೆ ಬಿಸಿ ಮುಟ್ಟಿಸಿದ್ದ ಡಿ.ಕೆ ರವಿಯವರನ್ನು ವ್ಯವಸ್ಥಿತವಾಗಿ ಕೊಲೆ ಮಾಡಲಾಗಿದೆ ಎನ್ನುವ ಸಂಶಯ ಇಂದಿನವರೆಗೆ ಕಾಡುತ್ತಲೇ ಇದ್ದು ಉತ್ತರ ಇನ್ನೂ ಸಿಕ್ಕಿಲ್ಲ. ಇದೀಗ ಈ ಪ್ರಕರಣ ಸಿದ್ದರಾಮಯ್ಯಮ ಸಿ.ಎಂ ಕುರ್ಚಿಯನ್ನೇ ಅಲ್ಲಾಡುವಂತೆ ಮಾಡಲಾರಂಭಿಸಿದೆ. ಇನ್ನಾದರೂ ಈ ಸಾವಿಗೆ ನ್ಯಾಯ ಸಿಗಬಹುದೇ ಎಂಬ ಕುತೂಹಲ ಕಾಡಲಾರಂಭಿಸಿದೆ.

source:https://www.udayavani.com/kannada/news/state-news/253810/who-is-behind-the-death-of-the-ias-officer-dk-ravi

ಚೇಕಿತಾನ

Tags

Related Articles

Close