ಪ್ರಚಲಿತ

ಡಿ.ಕೆ.ಶಿವಕುಮಾರ್ ಪಿಎ ಬಾಯ್ಬಿಟ್ಟ ಸ್ಫೋಟಕ ಮಾಹಿತಿ : ಸಂಕಷ್ಟದಲ್ಲಿ ಸೋನಿಯಾ ಮತ್ತು ಗ್ಯಾಂಗ್!!

ಈಗಾಗಲೇ ಇಂಧನ ಸಚಿವ ಡಿ.ಕೆ.ಶಿವಕುಮಾರ್ ದೇಶದಲ್ಲಿ ಐಟಿ ದಾಳಿಯಿಂದ ಸುದ್ದಿಯಲ್ಲಿದ್ದು ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ!! ಇಂಧನ ಸಚಿವ
ಡಿ.ಕೆ.ಶಿವಕುಮಾರ್ ಅವರ ತಾಯಿ ನೀಡಿದ ಹೇಳಿಕೆ, ರಾಜ್ಯ ರಾಜಕೀಯದಲ್ಲಿ ಹೊಸ ಸಂಚನಲ ಮೂಡಿಸಿದ್ದು ಎಲ್ಲರಿಗೂ ಗೊತ್ತಿರುವ ವಿಷಯವಾಗಿದೆ. ಆದರೆ ಈ
ಬೆನ್ನಲ್ಲೇ, ಡಿಕೆಶಿ ಆಪ್ತ ಸಹಾಯಕ ಆಂಜನೇಯ ಹೇಳಿಕೆ ನೀಡಿದ್ದಾರೆ ಎನ್ನಲಾಗುತ್ತಿರುವ ಮಾಹಿತಿ ಇದೀಗ ವೈರಲ್ ಆಗಿದೆ.

ಆದಾಯ ತೆರಿಗೆ ಇಲಾಖೆಯ ರೈಡ್ ಆಗಿರುವುದರ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ಸಿನ ಹಿರಿಯ ನಾಯಕರ ಮತ್ತು ಬಿಜೆಪಿ ಮುಖಂಡರ
ಕೈವಾಡವಿದೆ ಎಂದು ಡಿ.ಕೆ.ಶಿವಕುಮಾರ್ ಅವರ ತಾಯಿ ಗೌರಮ್ಮ ನೇರವಾಗಿ ಆರೋಪಿಸಿರುವುದನ್ನು ಪಬ್ಲಿಕ್ ಟಿವಿ ವರದಿ ಮಾಡಿತ್ತು. ಹಾಗಾಗಿ ಡಿಕೆಶಿ ವಿರುದ್ದ ಬತ್ತಿ ಇಟ್ಟಿರುವುದು ರಾಜ್ಯ ಕಾಂಗ್ರೆಸ್ಸಿನ ಮುಖಂಡರೇ ಎನ್ನುವ ಗುಸುಗುಸು ಸುದ್ದಿಗೆ ಮತ್ತಷ್ಟು ಪುಷ್ಠಿ ನೀಡಿದಂತಾಗಿತ್ತು!!!

ಇಂಧನ ಸಚಿವ ಡಿ.ಕೆ.ಶಿವಕುಮಾರ್ ದೇಶದಲ್ಲೇ 2ನೇ ಶ್ರೀಮಂತ ರಾಜಕಾರಣಿ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಇವರ ಮನೆ ಮೇಲೆ ಐಟಿ
ಅಧಿಕಾರಿಗಳು ದಾಳಿ ನಡೆಸುವ ವೇಳೆ ಸಿಕ್ಕಿರುವ ಹಣದ ಮೂಲದ ಬಗ್ಗೆ ಕಾಂಗ್ರೆಸ್ ನಾಯಕರು ಸ್ಪಷ್ಟನೆ ನೀಡುವಲ್ಲಿ ವಿಫಲರಾಗಿದ್ದು, ಈ ಬಗ್ಗೆ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆದ್ದವು. ಆದರೆ ಇದೀಗ ಡಿಕೆಶಿ ಆಪ್ತ ಸಹಾಯಕ ಆಂಜನೇಯ ನೀಡಿದ್ದಾರೆ ಎನ್ನಲಾಗುತ್ತಿರುವ ಹೇಳಿಕೆ ಡಿ.ಕೆ.ಶಿವಕುಮಾರ್ ಅವರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುವ ಸಾಧ್ಯತೆ ಒಂದೆಡೆಯಾದರೆ, ಕಾಂಗ್ರೆಸ್ ಹೈಕಮಾಂಡಿಗೆ ಭಾರೀ ಮುಜುಗರ ತರುವ ಸಂಭವವಿರುವುದಂತೂ ಖಚಿತ!!!

ಶಿವಕುಮಾರ್ ಒಬ್ಬ ಅಗರ್ಭ ಶ್ರೀಮಂತ ರಾಜಕಾರಣಿ ಎಂಬುದು ಎಲ್ಲರಿಗೂ ಗೊತ್ತು!! ಆದರೆ ಇವರ ಆಪ್ತ ಸಹಾಯಕ ಆಂಜನೇಯ ಹೇಳಿದ್ದಾರೆ ಎನ್ನುವ ಹೇಳಿಕೆಯನ್ನು ಮಾಧ್ಯಮಗಳು ವರದಿ ಮಾಡುತ್ತಿದ್ದು, ಈ ವಿಚಾರ ಸದ್ಯಕ್ಕೆ ವೈರಲ್ ಆಗುತ್ತಿದೆ!!! ಡಿ.ಕೆ.ಶಿಯವರ ದೆಹಲಿಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಆಂಜನೇಯ, ಆದಾಯ ತೆರಿಗೆ ಅಧಿಕಾರಿಗಳ ಸತತ ವಿಚಾರಣೆಯ ವೇಳೆ, ಸಿಎಂ ಸಂಸದೀಯ ಕಾರ್ಯದರ್ಶಿ ಗೋವಿಂದರಾಜ್ ಅವರ ಡೈರಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಅಧಿಕಾರಿಗಳ ಮುಂದೆ ಬಾಯ್ಬಿಟ್ಟಿದ್ದಾರೆಂದು ಮಾಧ್ಯಮಗಳು ವರದಿ ಮಾಡುತ್ತಿವೆ!!!

ಟಿವಿ ಮಾಧ್ಯಮಗಳ ಪ್ರಕಾರ ಆಂಜನೇಯ ನೀಡಿದ ಹೇಳಿಕೆಗಳಲ್ಲಿ ಕಾಂಗ್ರೆಸ್ ಹೈಕಮಾಂಡಿಗೆ ‘ಕಪ್ಪಸಲ್ಲಿಕೆ’ಯಾಗಿರುವ ವಿಚಾರಗಳು ಸೇರಿದಂತೆ ಡಿ.ಕೆ.ಶಿವಕುಮಾರ್ ಅವರ ಬೇನಾಮಿ ಆಸ್ತಿ, ಹಣಕಾಸು ವ್ಯವಹಾರಗಳ ಬಗ್ಗೆ ಫಿಲ್ಟರ್ ಇಲ್ಲದೇ ಎಲ್ಲವನ್ನು ಹೇಳಿ, ಅಧಿಕಾರಿಗಳಿಗೆ ‘ಕೈ’ ಮುಗಿದಿದ್ದಾರೆ ಎನ್ನಲಾಗುತ್ತಿದೆ. ಅಷ್ಟೇ ಅಲ್ಲದೇ ಆದಾಯ ತೆರಿಗೆ ಅಧಿಕಾರಿಗಳು ಬರುತ್ತಿದ್ದಂತೆಯೇ ಡಿ.ಕೆ.ಶಿವಕುಮಾರ್ ಮಹತ್ವದ ದಾಖಲೆಗಳನ್ನು ಹರಿದು ಹಾಕಿದ್ದಾರೆ ಎಂದು ಹೇಳಿದ್ದಾರೆ!! ಹೈಕಮಾಂಡಿಗೆ ಮತ್ತು ತಮ್ಮದೇ ಪಕ್ಷದ ಮುಖಂಡರಿಗೆ ಕಪ್ಪ ಸಂದಾಯವಾದ ಬಗ್ಗೆ ‘ಗೋವಿಂದರಾಜ್’ ಅವರ ಡೈರಿಯಲ್ಲಿ ಬರೆಯಲಾಗಿದ್ದು, ಈ ಡೈರಿಯ ಪುಟಗಳನ್ನು ಹರಿದು ಹಾಕಲಾಗಿದೆ ಎಂದು ಆಂಜನೇಯ ಹೇಳಿಕೆ ನೀಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿ ಮಾಡಿದೆ.

ಡಿಕೆಶಿ ಹರಿದು ಹಾಕಿದ ಎಲ್ಲಾ ಕಾಗದಗಳನ್ನು ಜೋಡಿಸಿ ಆದಾಯ ತೆರಿಗೆ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆಂದು ಕನ್ನಡ ಮಾಧ್ಯಮ ಸೇರಿ, ರಾಷ್ಟ್ರೀಯ
ವಾಹಿನಿಗಳು ವರದಿ ಮಾಡಿತ್ತು. ಈ ಮಧ್ಯೆ ಡಿ.ಕೆ.ಶಿವಕುಮಾರ್ ಅವರ ವಿರುದ್ದ ಜಾರಿ ನಿರ್ದೇಶನಾಲಯದಲ್ಲಿ (ಇಟಿಜಿoಡಿಛಿemeಟಿಣ ಆiಡಿeಛಿಣoಡಿಚಿಣe) ದೂರು ದಾಖಲಾಗಿದೆ. ಇದರ ಬಗ್ಗೆ ಪಿಎ ಆಂಜನೇಯ ಹೇಳಿದ್ದೇನು ಗೊತ್ತಾ??

ರಾಹುಲ್ ಗಾಂಧಿ ಭಾಗವಹಿಸಬೇಕಾಗಿದ್ದ ಕಾಂಗ್ರೆಸ್ ಸಮಾವೇಶ ರದ್ದು!! ರೈಡ್ ಆಗಿರುವುದರ ಹಿಂದೆ ಸಿಎಂ ಕೈ!!

ಡಿ.ಕೆ.ಶಿವಕುಮಾರ್ ಅವರ ನಿವಾಸ ಹಾಗೂ ಕಚೇರಿಯ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸುತ್ತಿದ್ದಂತೆಯೇ, ರಾಯಚೂರಿನಲ್ಲಿ ಕಾಂಗ್ರೆಸ್
ಸಮಾವೇಶದಲ್ಲಿ ಭಾಗವಹಿಸಬೇಕಾಗಿದ್ದ ರಾಹುಲ್ ಗಾಂಧಿ ತಮ್ಮ ಅಂದಿನ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದಾರೆ. ಡಿಕೆಶಿ ಮೇಲೆ ಐಟಿ ಅಧಿಕಾರಿಗಳ ದಾಳಿಯ ವೇಳೆ ಹೊರಬರಬಹುದಾದ ಮಾಹಿತಿಯನ್ನು ಅರಿತೇ, ಮುಂಜಾಗೃತ ಕ್ರಮವಾಗಿ ರಾಹುಲ್ ಈ ನಡೆಯಿಟ್ಟಿದ್ದಾರೆಂದೇ ಹೇಳಲಾಗುತ್ತಿದೆ!!!! ಅಷ್ಟೇ ಅಲ್ಲದೇ ರೈಡ್ ಆಗಿರುವುದರ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ಸಿನ ಹಿರಿಯ ನಾಯಕರ ಮತ್ತು ಬಿಜೆಪಿ ಮುಖಂಡರ ಕೈವಾಡವಿದೆ ಎಂದು ಡಿ.ಕೆ.ಶಿವಕುಮಾರ್ ಅವರ ತಾಯಿ ಗೌರಮ್ಮ ನೇರವಾಗಿ ಆರೋಪಿಸಿದ್ದಾರೆ ಎನ್ನುವುದು ಗೊತ್ತಿರುವ ವಿಚಾರ!!!

ಆದರೆ ಡಿಕೆಶಿ ಪಿಎ ಆಂಜನೇಯ ನೀಡಿದ್ದಾರೆ ಎನ್ನುವ ಮಾಧ್ಯಮಗಳ ಹೇಳಿಕೆಯ ಪ್ರಕಾರ, ರಾಜಧಾನಿ ದೆಹಲಿಯ ಐಷಾರಾಮಿ ಸಫ್ದರ್ ಜಂಗ್ ಮಾರ್ಗದಲ್ಲಿ ಎರಡು ಮನೆಯನ್ನು ಶಿವಕುಮಾರ್ ಹೊಂದಿದ್ದಾರೆ. ಜೊತೆಗೆ, ಡಿಕೆಶಿ ಏನು ಹೇಳುತ್ತಾರೋ ಅದನ್ನು ಚಾಚೂ ತಪ್ಪದೇ ನಾನು ಮಾಡುತ್ತಿದ್ದೆ ಎಂದು ಐಟಿ ಅಧಿಕಾರಿಗಳ ಮುಂದೆ ಆಂಜನೇಯ ಹೇಳಿದ್ದಾರೆಂದು ಮಾಧ್ಯಮಗಳು ವರದಿ ಮಾಡುತ್ತಿವೆ. ಅಷ್ಟೇ ಅಲ್ಲದೇ ಡಿಕೆಶಿ ಹರಿದುಹಾಕಿದ್ದು ಹೈಕಮಾಂಡಿಗೆ ಕೊಟ್ಟಿದ್ದ ಕಪ್ಪಕಾಣಿಕೆಯ ‘ರಸೀದಿ’ಯನ್ನು ಎಂದು ಆಂಜನೇಯ ಹೇಳಿರುವುದು, ಈ ಎಲ್ಲಾ ವಿದ್ಯಮಾನಕ್ಕೆ ಮಹತ್ವದ ತಿರುವನ್ನು ನೀಡಿದಂತಾಗಿದೆ!! ಗೋವಿಂದರಾಜ್ ಡೈರಿಯನ್ನು ಡಿಕೆಶಿ ಹರಿದುಹಾಕಿದ್ದರು, ಅದರಲ್ಲಿ ‘ಆರ್‍ಜಿ’ ಸೇರಿದಂತೆ ದೆಹಲಿ ಮಟ್ಟದ ಕಾಂಗ್ರೆಸ್ ಪ್ರಭಾವಿ ಮುಖಂಡರ ಹೆಸರು ಉಲ್ಲೇಖವಾಗಿತ್ತಂತೆ!!!

ಇದಿಷ್ಟೇ ಅಲ್ಲದೇ ಪಿಎ ಆಂಜನೇಯ ಹೇಳಿರುವ ಪ್ರಕಾರ, ಒಂದು ಮನೆಯಿಂದ ಇನ್ನೊಂದು ಮನೆಗೆ ಹಣ ಸಾಗಾಣೆ ಮಾಡುವುದಕ್ಕಾಗಿ ಶೈಲೇಂದರ್ ಎನ್ನುವ ವ್ಯಕ್ತಿ
ಮೂರು ಬಾರಿ (1, 1.5 ಮತ್ತು 2.5 ಕೋಟಿ) ಡಿಕೆಶಿ ಮನೆಗೆ ಬಂದು ಹಣ ನೀಡಿದ್ದಾರೆ. ಹಾಗಾಗಿ ನಾನೇ ನನ್ನ ಕೈಯಾರೇ ಐದು ಕೋಟಿ ರೂಪಾಯಿಯನ್ನು
ಸಾಗಿಸಿದ್ದೇನೆಂದು ಶಿವಕುಮಾರ್ ಪಿಎ ಹೇಳಿದ್ದಾರೆ ಎಂದು ಪಬ್ಲಿಕ್ ಟಿವಿ ವರದಿ ಮಾಡಿದೆ. ಆದರೆ ಕಾಂಗ್ರೆಸ್ ಹೈಕಮಾಂಡ್‍ಗೆ ಕಪ್ಪ ಕೊಟ್ಟಿರುವ ಮಾಹಿತಿ
ಗೋವಿಂದರಾಜ್ ಡೈರಿಯಲ್ಲಿತ್ತು. ಹಾಗಾಗಿ ಈ ಡೈರಿಯಲ್ಲಿನ ಕೆಲ ಕಾಗದಗಳನ್ನು ಡಿಕೆಶಿ ಹರಿದು ಹಾಕಿದರೆ ಎನ್ನಲಾಗಿದೆ. ಜನವರಿ 5ರಂದು ಎಐಸಿಸಿಗೆ 3 ಕೋಟಿ ರೂ ಹಣ ಸಂದಾಯವಾಗಿರುವ ಬಗ್ಗೆ ಈ ಡೈರಿಯಲ್ಲಿ ಬರೆಯಲಾಗಿದೆ ಎಂದು ಟೈಮ್ಸ್ ನೌ ವಾಹಿನಿ ಕೂಡ ಈ ಡೈರಿಯ ಬಗ್ಗೆ ವಿಸ್ತøತವಾದ ವರದಿಯನ್ನು ನೀಡಿತ್ತು!!!

ಕಾಂಗ್ರೆಸ್ ಪಕ್ಷದ ಕೆಲ ನಾಯಕರುಗಳು ಹಣವನ್ನು ಮಾಡಲು ಏನೆಲ್ಲಾ ಕಸರತ್ತುಗಳನ್ನು ನಡೆಸುತ್ತೋ ಗೊತ್ತಿಲ್ಲ. ಆದರೆ ತಮ್ಮ ಬೊಕ್ಕಸವನ್ನು ತುಂಬಿಸುವಲ್ಲಿ
ಹರಸಾಹಸವನ್ನು ಮಾಡುತ್ತಿದ್ದಾರೆ ಎನ್ನುವುದೂ ಮಾತ್ರ ಖಚಿತ!!

– ಅಲೋಖಾ

ಮೂಲ:DK Shivakumar Secrets

Related Articles

Close