ಪ್ರಚಲಿತ

ತನ್ನ ಅಧಿಕಾರದ ಮದದಿಂದ ಮಂಗಳೂರು ಮೇಯರ್ ಕವಿತಾ ಸನಿಲ್ ಮೊಲೆಯುಣುತ್ತಿರುವ ಒಂದು ವರ್ಷದ ಕಂದಮ್ಮನನ್ನು ತಾಯಿಯಿಂದ ದೂರ ಮಾಡುತ್ತಿರುವುದು ಹೇಗೆ ಗೊತ್ತಾ?!

ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಜನರು ಇನ್ನೇನು ನಿರೀಕ್ಷಿಸಲು ಸಾಧ್ಯ? ಇಲ್ಲಿ ಜನರಿಗೊಂದು ನ್ಯಾಯ, ಕಾಂಗ್ರೆಸ್‍ನ ಜನ ಪ್ರತಿನಿಧಿಗಳಿಗೊಂದು ನ್ಯಾಯ ಎಂದು
ಮತ್ತೊಮ್ಮೆ ಸಾಬೀತಾಗಿದೆ.

ಮಂಗಳೂರು ಮೇಯರ್ ಕವಿತಾ ಸನಿಲ್!! ಮೊನ್ನೆ ತಾನೇ ಈಕೆ, ತಾನು ವಾಸಿಸುತ್ತಿದ್ದ ಅಪಾರ್ಟ್‍ಮೆಂಟ್‍ನ ವಾಚ್ ಮ್ಯಾನ್ ಪತ್ನಿಗೆ ಯದ್ವಾ ತದ್ವ ಬಾರಿಸಿ, ಆಕೆಯ ಒಂದೂವರೆ ವರ್ಷದ ಮಗುವನ್ನು ಎತ್ತಿ ಬಿಸಾಕಿ ತನ್ನ ರೌದ್ರಾವತಾರವನ್ನು ಪ್ರದರ್ಶಿಸಿದ್ದ ವಿಷಯ ಎಲ್ಲರಿಗೂ ಗೊತ್ತಿರುವ ಸಂಗತಿ. ತಾನೊಬ್ಬ ಮಹಾ ಕರಾಟೆ ಚಾಂಪಿಯನ್ ಎಂದು ನಿರೂಪಿಸಲು ಆಕೆ ತನ್ನ ವಾಚ್ ಮ್ಯಾನ್ ಕುಟುಂಬದ ಮೇಲೆ ಹಲ್ಲೆ ಮಾಡಿ ರಾಕ್ಷಸರಂತೆ ವರ್ತಿಸಿದ ವಿಸ್ಕøತ ವರದಿಯನ್ನು ನಮ್ಮ ಮಾಧ್ಯಮ, ಸಮಾಜದ ಮುಂದೆ ತೆರೆದಿಟ್ಟಿತ್ತು. ಯಾವಾಗ ಈಕೆಯ ನಿಜಮುಖ ಅನಾವರಣ ಗೊಂಡಿತ್ತೋ ಆವಾಗ ಮಂಗಳೂರು ಜನತೆ ಎಚ್ಚೆತ್ತುಕೊಂಡಿದ್ದರು. ಸಾಮಾಜಿಕ ಜಾಲತಾಣ ಸಹಿತ ಅನೇಕ ಕಡೆಗಳಲ್ಲಿ ಈಕೆಯ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದರು. ಕೆಲವೇ ಕ್ಷಣಗಳಲ್ಲಿ ಮೇಯರ್ ಕವಿತಾ ಸನಿಲ್ ಮೇಲೆ ಆ ಬಡಪಾಯಿ ವಾಚ್‍ಮ್ಯಾನ್ ಪತ್ನಿ ನ್ಯಾಯ ಕೇಳಲು ಮಂಗಳೂರಿನ ಬರ್ಕೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು.

ಆದರೆ ಮೇಯರ್ ಕವಿತಾರಿಂದ ಹಲ್ಲೆಗೊಳಗಾಗಿ ನ್ಯಾಯ ಕೇಳಲು ಠಾಣೆ ಮೆಟ್ಟಿಲು ಹತ್ತಿದರೆ ಅಲ್ಲಿ ನಡೆದದ್ದೇ ಬೇರೆ. ವಾಚ್ ಮ್ಯಾನ್ ಪತ್ನಿ ಕಮಲಾರಿಂದ
ಸ್ಟೇಟ್‍ಮೆಂಟ್ ಪಡೆದು ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದ ಪೊಲೀಸರು ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ.

ಬಡಪಾಯಿ ಮೇಲೆಯೇ ಕೇಸ್…!!!

ಇಷ್ಟೆಲ್ಲಾ ಬೆಳವಣಿಗೆ ನಡೆದ ನಂತರ ಮೇಯರ್ ಕವಿತಾ ಸನಿಲ್ ತನ್ನ ಮೇಲೆ ಕೇಸ್ ದಾಖಲಿಸಿದ್ದ ಬಡಪಾಯಿ ವಾಚ್ ಮ್ಯಾನ್ ಪತ್ನಿ ಕಮಲಾ ಮೇಲೆ ಹತ್ಯೆಗೆ ಯತ್ನ ಎಂದು ಕೇಸು ದಾಖಲಿಸಿದ್ದಾರೆ. ಅದೇ ಬರ್ಕೆ ಪೊಲೀಸ್ ಠಾಣೆಯಲ್ಲಿ ವಾಚ್ ಮ್ಯಾನ್ ಪತ್ನಿ ಕಮಲಾ ಮೇಲೆ 307 ಪ್ರಕರಣವನ್ನು ದಾಖಲಿಸಿದ್ದಾರೆ.

ಮೊನ್ನೆ ಮೊನ್ನೆ ತಾನೇ ಸುದ್ಧಿಗೋಷ್ಟಿ ನಡೆಸಿ ಸುಳ್ಳುಗಳ ಸುರಿಮಳೆಯನ್ನೇ ಹರಿಸಿದ ಮೇಯರ್ ಕವಿತಾ ಸನಿಲ್, ಸಿಸಿಟಿವಿ ದೃಶ್ಯಾವಳಿಗಳನ್ನು ಮಾಧ್ಯಮಗಳ
ಮುಂದಿಟ್ಟಿದ್ದರು. ಆ ದೃಶ್ಯಾವಳಿಗಳಲ್ಲಿ ಆ ಬಡಪಾಯಿ ವಾಚ್‍ಮ್ಯಾನ್ ಪತ್ನಿಯ ಯಾವುದೇ ತಪ್ಪುಗಳು ಕಾಣಲೇ ಇಲ್ಲ. ಅದೇ ಸುದ್ಧಿಗೋಷ್ಟಿಯಲ್ಲಿ ತನ್ನ ಮೇಲೆಯೂ ಆಕೆ ಹಲ್ಲೆ ಮಾಡಿದ್ದಳು ಎಂದು ಹೇಳಿದ್ದ ಕವಿತಾ ಸನಿಲ್‍ರ ವರಸೆ ನಂತರ ಶೀಘ್ರ ಬದಲಾವಣೆಯಾಗಿ, “ನನ್ನ ಮೇಲೆ ಹತ್ಯೆಗೆ ಯತ್ನಿಸಿದ್ದಳು” ಎಂದು ಸುಳ್ಳು ಕೇಸ್
ದಾಖಲಿಸಿದ್ದಳು.

ಬುದ್ಧಿ ತಿಳಿಯದ ತನ್ನ ಮಗಳು ಅದೇನೋ ಸುಳ್ಳು ಹೇಳಿದಳೆಂದು ವಾಚ್ ಮ್ಯಾನ್ ಪತ್ನಿಗೆ ಮನಬಂದಂತೆ ಭಾರಿಸಿದ್ದ ಈ ಕವಿತಾ ಎಂಬ ಕ್ರೂರಿ ಮೇಯರ್, ಇನ್ನು
ಅವಳ ಮೇಲೆ ಹತ್ಯೆಗೆ ಯತ್ನಿಸಿದ್ದರೆ ಸುಮ್ಮನಿರುತ್ತಿದ್ದಳೇ..? “ನಾನು ಕರಾಟೆ ಚಾಂಪಿಯನ್. ನಾನು ಆಕೆಗೆ ಒಂದು ಬಾರಿಸಿದರೆ ಆಕೆ ಸತ್ತೇ ಹೋಗುತ್ತಾಳೆ” ಎಂದು ಮಾಧ್ಯಮದಲ್ಲೇ ಅಹಂಕಾರದಿಂದ ಮಾತನಾಡುತ್ತಿದ್ದ ಈ ಮೇಯರ್, ಇನ್ನು ವಾಚ್ ಮ್ಯಾನ್ ಪತ್ನಿ ಕವಿತಾ ಹತ್ಯೆಗೆ ಯತ್ನಿಸಿದ್ದಾಳೆ ಎನ್ನುವ ಆರೋಪ ಎಷ್ಟು ಸರಿ..?

ಈಕೆಯನ್ನು ಹೆಣ್ಣು ಎಂಬುದಕ್ಕಿಂತ, ಹೆಣ್ಣು ರಾಕ್ಷಸಿ ಎಂದರೆ ತಪ್ಪಾಗಲಾರದು. ತನ್ನ ಅಧಿಕಾರದ ಮದದಲ್ಲಿ ಎದುರಾಳಿಗಳನ್ನು ಮಟ್ಟಹಾಕುತ್ತಿರುವ ಕವಿತಾ ಸನಿಲ್ ಮೇಯರ್ ಸ್ಥಾನದಲ್ಲಿ ಮುಂದುವರೆಯಲು ಯಾವ ನೈತಿಕತೆಯನ್ನು ಹೊಂದಿದ್ದಾಳೆ..?

ಇದೆಲ್ಲದರ ಮಧ್ಯೆ ವಾಚ್ ಮ್ಯಾನ್ ಪತ್ನಿ ಕಮಲಾ ದಾಖಲಿಸಿದ್ದ ಕೇಸಿನ ಫೈಲನ್ನು ಕನಿಷ್ಠ ಎಫ್‍ಐಆರ್ ಕೂಡಾ ದಾಖಲಿಸದೆ ಟೇಬಲ್‍ನ ಅಡಿಯಲ್ಲಿಟ್ಟು, ಮೇಯರ್
ಕವಿತಾ ಸನಿಲ್ ದಾಖಲಿಸಿದ್ದ “ಹತ್ಯೆಗೆ ಯತ್ನ” ಎಂಬ ಆರೋಪಕ್ಕೆ 307 ಪ್ರಕರಣ ದಾಖಲಿಸಿ ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ.

ಎಲ್ಲಿದೆ ನ್ಯಾಯ..? ಹಾಗಾದರೆ ಅನ್ಯಾಯಕ್ಕೊಳಗಾದ ಸಾಮಾನ್ಯ ಜನರಿಗೊಂದು ನ್ಯಾಯ, ಹಣ ಮತ್ತು ಅಧಿಕಾರದ ಅಮಲಿನಲ್ಲಿ ತೇಲುತ್ತಿರುವ ಸಾಮಾನ್ಯ
ಜನರಿಗೊಂದು ನ್ಯಾಯವೇ..? ಒಂದು ಕಣ್ಣಿಗೆ ಸುಣ್ಣ, ಮತ್ತೊಂದು ಕಣ್ಣಿಗೆ ಬೆಣ್ಣೆಯೇ..? ರಾಜ್ಯ ಕಾಂಗ್ರೆಸ್ ಸರ್ಕಾರ ಯಾವ ರೀತಿ ನಡೆದುಕೊಳ್ಳುತ್ತಿದೆಯೋ ಅದೇ ರೀತಿ ಇಲ್ಲಿನ ಕಾಂಗ್ರೆಸ್‍ನಿಂದ ಆಯ್ಕೆಯಾದ ಮಂಗಳೂರು ಮೇಯರ್ ಕೂಡಾ ನಡೆದುಕೊಳ್ಳುತ್ತಿದ್ದಾರೆ. ತನ್ನ ವಿರುದ್ಧ ನಿಂತವರನ್ನು ಪೊಲೀಸ್ ಇಲಾಖೆಯ ಮೂಲಕ ಅವರ ಬಾಯಿ ಮುಚ್ಚಿಸುವ ಕೆಲಸ ಮಾಡುತ್ತಿದೆ ಕಾಂಗ್ರೆಸ್ ಸರ್ಕಾರ.

ಮಂಗಳೂರಿನ ಬರ್ಕೆ ಪೊಲೀಸ್ ಠಾಣೆಯಲ್ಲಿಯೇ ಇಬ್ಬರ ಪ್ರಕರಣಗಳೂ ದಾಖಲಾಗಿವೆ. ಮೊದಲು ಹಲ್ಲೆಗೊಳಗಾದ ಬಗ್ಗೆ ಆಸ್ಪತ್ರೆಯ ದಾಖಲೆ ಸಹಿತ ಪ್ರಕರಣ
ದಾಖಲಿಸಿದ ವಾಚ್ ಮ್ಯಾನ್ ಪತ್ನಿ ಕಮಲಾ ಅವರ ಪ್ರಕರಣವನ್ನು ಪಕ್ಕಕ್ಕಿಟ್ಟ ಪೊಲೀಸರು ದಿನಗಳ ನಂತರ ಮಂಗಳೂರು ಮೇಯರ್ ಕವಿತಾ ಸನಿಲ್ ದಾಖಲಿಸಿರುವ ಸುಳ್ಳು ಕೇಸಿನ ಮೇಲೆ ಎಫ್‍ಐಆರ್ ದಾಖಲಿಸಿದ್ದಾರೆ. ಇದು ಇಬ್ಬಗೆ ನೀತಿಯನ್ನು ತೋರಿಸದೆ ಮತ್ತೇನು..?

ಕಾಂಗ್ರೆಸ್ ಸರ್ಕಾರದ ಜನ ಪ್ರತಿನಿಧಿಗಳ ಒತ್ತಡಕ್ಕೆ ಮಣಿದಿರುವ ಪೊಲೀಸ್ ಇಲಾಖೆಯ ವಿರುದ್ಧ ಸಂಘಟನೆಗಳು ಬೀದಿಗಿಳಿದಿದ್ದು, ಪೊಲೀಸರು ಕೆಲವರನ್ನು
ಸಂಪರ್ಕಿಸಿ ತಮ್ಮ ಅಳಲನ್ನು ತೋಡಿಕೊಂಡು ಸಹಾಯ ಹಸ್ತವನ್ನು ಬೇಡಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಪೊಲೀಸ್ ಇಲಾಖೆಗೆ ಸ್ವಾತಂತ್ರ್ಯ ಇಲ್ಲ ಎಂಬುವುದು
ಗೊತ್ತಿರುವ ಸಂಗತಿ. ಜಿಲ್ಲಾ ಪೊಲೀಸ್ ಅಧಿಕಾರಿಯವರನ್ನೇ ಎದುರು ಕುಳ್ಳಿರಿಸಿ ಕಾನೂನು ಪಾಠ ಮಾಡಿದ್ದ ಉಸ್ತುವಾರಿ ಸಚಿವ ರಮಾನಾಥ ರೈಗೆ, ಬರ್ಕೆ ಪೊಲೀಸ್ ಠಾಣೆಯ ಸಾಮಾನ್ಯ ಪೊಲೀಸ್ ಅಧಿಕಾರಿಗಳನ್ನು ಹಿಡಿತದಲ್ಲಿಟ್ಟುಕೊಳ್ಳುವುದು ಯಾವ ಮಹಾ ವಿಷಯವೇ ಅಲ್ಲ ಬಿಡಿ. ಆದರೆ ನ್ಯಾಯವನ್ನು ನಂಬಿಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ಆ ಬಡಪಾಯಿ ಮಹಿಳೆಯ ಮಾತ್ರ ಈಗ ಅನಾಥ ಸ್ಥಿತಿ.

ಕಾಂಗ್ರೆಸ್ಸಿಗರೇ… ಎಲ್ಲಿ ಹೋಯ್ತು ನಿಮ್ಮ ಜಾತಿ ಪ್ರೇಮ..?

ಜಾತಿ ಜಾತಿ ಎಂದು ಬಡಿದಾಡಿಕೊಳ್ಳುತ್ತಿರುವ ಕಾಂಗ್ರೆಸ್ಸಿಗರ ಜಾತಿ ಪ್ರೇಮ ಈಗ ಎಲ್ಲಿ ಹೋಯ್ತು? ಸದಾ ಜಾತಿಗಳ ಮಧ್ಯೆ ಸಂಘರ್ಷ ಹುಟ್ಟುಹಾಕಿ, ಅವುಗಳನ್ನು
ಬೇರ್ಪಡಿಸುವ ಕೆಲಸದಲ್ಲಿ ಸಕ್ರಿಯರಾಗಿ, ತನ್ನ ಮುಖ್ಯಮಂತ್ರಿಯ ಪದವಿಗಿಂತಲೂ ಹೆಚ್ಚು ಜವಬ್ಧಾರಿಯುತವಾಗಿ ಕೆಲಸ ಮಾಡುತ್ತಿರುವ ಸಿದ್ಧರಾಮಯ್ಯನವರೇ, ಎಲ್ಲಿ ಹೋಯ್ತು ನಿಮ್ಮ ಜಾತಿ ಪ್ರೇಮ..? ನಿಮ್ಮದೇ ಕಾಂಗ್ರೆಸ್‍ನ ಮೇಯರ್‍ನಿಂದ, ನಿಮ್ಮದೇ ಜಾತಿಯ ಮಹಿಳೆಯ ಮೇಲೆ ದೌರ್ಜನ್ಯವಾಗಿದೆ. ಮಂಗಳೂರು ಮೇಯರ್ ಕವಿತಾ ಸನಿಲ್‍ರಿಂದ ಹಲ್ಲೆಗೊಳಗಾಗಿ ನರಕಯಾತನೆಯನ್ನು ಅನುಭವಿಸುತ್ತಿರುವ ವಾಚ್ ಮ್ಯಾನ್ ಪತ್ನಿ ಮತ್ತು ಕುಟುಂಬ ನಿಮ್ಮದೇ ಕುರುಬ ಜನಾಂಗಕ್ಕೆ ಸೇರಿದವರಾಗಿದ್ದಾರೆ. ಜಾತಿ ಜಾತಿ ಬೊಬ್ಬೆ ಬಿಡುವ ನಿಮಗೆ ಇದು ಯಾಕೆ ಕಾಣಿಸುತ್ತಿಲ್ಲ. ಕುರುಬ ಜಾತಿಯ ಆ ಮಹಿಳೆಯ ಕುಟುಂಬದಲ್ಲಿ ಹಣವಿಲ್ಲ ಅಂತಾನೋ ಅಥವಾ ಹಲ್ಲೆ ಮಾಡಿದ ಮೇಯರ್ ನಿಮ್ಮ ಪಕ್ಷದವರು ಅಂತಾನೋ..? ಯಾಕೆ ಸುಮ್ಮನಿರುವಿರಿ. ಪ್ರಶ್ನಿಸಬೇಕಲ್ವೇ..?

ಮೇಯರ್ ಕವಿತಾ ಸನಿಲ್ ಅಹಂಕಾರ ಇದೇ ಮೊದಲೇನಲ್ಲ..!!!

ಹೌದು. ಬಡಪಾಯಿ ಜನಸಾಮಾನ್ಯರ ಮೇಲೆ ಹಲ್ಲೆ ಮಾಡುವ ಮೇಯರ್ ಕವಿತಾ ಸನಿಲ್ ದರ್ಪದ ನಡವಳಿಕೆ ಇದು ಮೊದಲೇನಲ್ಲ. ಈ ಹಿಂದೆ, ಅಂದರೆ 2016ರಲ್ಲಿ ತನ್ನದೇ ಜಾತಿಯ ಸಾಮಾನ್ಯ ಹುಡುಗನಿಗೆ ಜೀವಬೆದರಿಕೆ ಹಾಕಿದ್ದ ಪ್ರಕರಣವೊಂದರಲ್ಲಿ ತನ್ನ ಅಹಂಕಾರವನ್ನು ಆಗಲೇ ಪ್ರದರ್ಶಿಸಿದ್ದರು. ತನ್ನದೇ ಜಾತಿಯ (ಬಿಲ್ಲವ) ಹಿತೇಶ್ ಪೂಜಾರಿ ಎಂಬಾತ ಮಂಗಳೂರು ಬಿಜೈ ಬಳಿಯ ಮೆಸ್ಕಾಂ ಕಛೇರಿ ಸಮೀಪ ಮೊಬೈಲ್ ಕ್ಯಾಂಟೀನ್‍ಒಂದನ್ನು ಇಟ್ಟುಕೊಂಡಿದ್ದರು. ಆವಾಗ ಮಂಗಳೂರು ಮಹಾ ನಗರ ಪಾಲಿಕೆಯ ಆರೋಗ್ಯ ಸಮಿತಿಯ ಅಧ್ಯಕ್ಷೆಯಾಗಿದ್ದ ಕವಿತಾ ಸನಿಲ್ ಅಂಗಡಿಯಲ್ಲಿ ವ್ಯವಹಾರ ನಡೆಸದಂತೆ ತಡೆಯೊಡ್ಡುತ್ತಿದ್ದರು. ಆದರೆ ಅವರ ಮಾತನ್ನು ನಿರ್ಲಕ್ಷಿಸಿದ ಎಂಬ ಕಾರಣಕ್ಕೆ ಗೂಂಡಾಗಳನ್ನು ಕರೆ ತಂದು ಆತನಿಗೆ ಜೀವ ಬೆದರಿಕೆ ಹಾಕಿದ್ದರು. ಅವಾಚ್ಯ ಪದಗಳಿಂದ ನಿಂದಿಸಿ, “ಅಂಗಡಿ ಖಾಲಿ ಮಾಡು, ಇಲ್ಲದಿದ್ದರೆ ನಿನ್ನನ್ನು ಜೀವಸಹಿತ ಬಿಡುವುದಿಲ್ಲ” ಎಂದು ಧಮ್ಕಿ ಹಾಕಿದ್ದ ಪ್ರಕರಣವೊಂದು ದಾಖಲಾಗಿದೆ.

 

ಮೇಯರ್ ಆಗುವ ಮುನ್ನವೇ ಸಾಮಾನ್ಯ ಬಡಪಾಯಿಗಳ ಮೇಲೆ ತನ್ನ ದರ್ಪವನ್ನು ತೋರಿಸಿದ್ದ ಕವಿತಾ ಸನಿಲ್, ಮೇಯರ್ ಆದಮೇಲಂತೂ ಹಿಂದೆ ಮಾಡಿದ್ದ
ಹಗೆತನವನ್ನು ತೀರಿಸುತ್ತಲೇ ಬರುತ್ತಿದ್ದಾರೆ. ತಾನೊಬ್ಬ ಬಿಲ್ಲವ ಜಾತಿ ಮುಖಂಡೆ ಎಂದು ಬಿಂಬಿಸಿಕೊಂಡು ಶಾಸಕ ಸ್ಥಾನದ ಟಿಕೆಟ್ ಆಕಾಂಕ್ಷಿಯಾಗಿರುವ ಕವಿತಾ
ಸನಿಲ್, ಅದೇ ಬಿಲ್ಲವ ಜಾತಿಯವರಲ್ಲಿ ನಡೆಸಿಕೊಂಡ ರೀತಿ ನೋಡಿದರೆ ಯಾರಿಗೂ ಬೇಡ. ಈಕೆಗೆ ಜಾತಿ, ಪಕ್ಷಕ್ಕಿಂತ ತಾನೊಬ್ಬ ಕರಾಟೆ ಚಾಂಪಿಯನ್ ಎಂದು
ಅಹಂಕಾರದಿಂದ ವರ್ತಿಸುವ ಧೋರಣೆಯೇ ಹೆಚ್ಚಾಗಿ ಹೋಯಿತು.

ವಾಚ್ ಮ್ಯಾನ್ ಮೇಲಿನ ದರ್ಪವೂ ಮೊದಲಲ್ಲ..!!!

ಹೌದು… ಕವಿತಾ ಸನಿಲ್‍ರ ವಾಚ್‍ಮ್ಯಾನ್‍ಗಳ ಮೇಲಿನ ದರ್ಪ ಇದೇ ಮೊದಲಲ್ಲ. ತಾನು ಇರುವ ಅಪಾರ್ಟ್‍ಮೆಂಟ್‍ಗೆ ಬರುವ ಹಲವಾರು ವಾಚ್‍ಮ್ಯಾನ್‍ಗಳನ್ನು ಬೆದರಿಸಿ ಓಡಿಸಿದ್ದಾರೆ ಇದೇ ಮೇಯರಮ್ಮ. ವಾಚ್‍ಮ್ಯಾನ್‍ಗಳೆಂದ ಮೇಲೆ ಅವರೆಷ್ಟು ಬಡವರೆಂದು ಎಲ್ಲರಿಗೂ ಗೊತ್ತಿರುವ ಸಂಗತಿ. ಅದೆಲ್ಲೆಲ್ಲಿಂದಲೋ ಅನ್ನಕ್ಕಾಗಿ ಕೆಲಸವನ್ನು ಅರಸಿಕೊಂಡು ಬರುವ ಬಡವರಿಗೆ ಈಕೆ ಮಾಡುವ ದೌರ್ಜನ್ಯ ಹೇಳತೀರದಷ್ಟಿದೆ. ಪಾಪದ ಕೊಡ ತುಂಬಿ ಹೋಗಿ ಈಗ ನಡೆದಿರುವ ಕಮಲಾ ಮೇಲಿನ ಹಲ್ಲೆ ಪ್ರಕರಣ ಬೆಳಕಿಗೆ ಬಂದಿದೆಯಷ್ಟೆ.

ಮೇಯರ್ ಹೇಳಿದ ಮತ್ತೊಂದು ಸುಳ್ಳು…

ಮೊನ್ನೆ ತಾನೇ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ್ದ ಮೇಯರಮ್ಮ, ತನ್ನ ಅಪಾರ್ಟ್‍ಮೆಂಟ್‍ನಲ್ಲಿದ್ದ ರಾಧಾ ಎನ್ನುವ ಮಹಿಳೆ ಕಮಲಾರವರಿಗೆ ಕರೆ ಮಾಡಿದ್ದಾಗ,
ಕಮಲಾರವರು ತಾನು ಬಿಜೆಪಿ ಕಛೇರಿಯಲ್ಲಿದ್ದೇನೆ ಎಂದು ಹೇಳಿದ್ದರು ಎಂದು ಸುಳ್ಳು ಹೇಳಿದ್ದ ಮುಖವಾಡ ಮತ್ತೊಮ್ಮೆ ಬಯಲಾಗಿದೆ. ನಮ್ಮ ವರದಿಗಾರರು ಈ ಬಗ್ಗೆ ರಾಧಾ ಅವರನ್ನು ಸಂಪರ್ಕಿಸಿದಾಗ, “ನಾನು ಆ ರೀತಿ ಹೇಳಿಯೇ ಇಲ್ಲ. ಮಹಿಳಾ ಆಯೋಗದ ಬಳಿ ಇದ್ದಾರೆಂದು ಹೇಳಿದ್ದೆ ಅಷ್ಟೆ” ಎಂದು ಹೇಳಿದ್ದರು. ಮೇಯರ್ ಹೇಳಿರುವ ಒಂದೊಂದೇ ಸುಳ್ಳುಗಳು ಬಯಲಾಗುತ್ತಿದ್ದಂತೆ ದಾರಿ ತೋಚದ ಮೇಯರ್ ಕವಿತಾ ಸನಿಲ್ ಆ ಬಡಪಾಯಿ ಮಹಿಳೆಯ ಮೇಲೆ ಹತ್ಯೆಗೆ ಯತ್ನ ಎಂದು ಸುಳ್ಳು ಕೇಸು ದಾಖಲಿಸಿದ್ದಾರೆ.

ಆ ಸಣ್ಣ ಮಗು ತನ್ನ ತಾಯಿಯ ಎದೆ ಹಾಲು ಕುಡಿಯುತ್ತಿರುವಾಗಲೇ ಅಲ್ಲಿಗೆ ತೆರಳಿ, ಮಗುವನ್ನು ಎಳೆದು ಎಸೆದು, ತಾಯಿ ಮಗುವನ್ನು ಬೇರ್ಪಡಿಸಿದ್ದ ಮೇಯರ್
ಕವಿತಾ ಸನಿಲ್ ಈಗ ಆ ಮಹಿಳೆಯ ಮೇಲೆ 307 ಕೇಸು ದಾಖಲಿಸಿ ತಾಯಿ ಮಗುವನ್ನು ಶಾಶ್ವತವಾಗಿ ದೂರವಾಗುವಂತೆ ಮಾಡಿದ್ದಾಳೆ. ಪುರಾಣದಲ್ಲಿ ರಾಕ್ಷಸರು ಈ ರೀತಿ ವರ್ತಿಸುತ್ತಿದ್ದರು ಎಂಬ ಕಥೆ ಕೇಳಿದ್ದೆವು. ಆದರೆ ಈಗಿನ ಕಾಲದಲ್ಲಿಯೂ ಆಹಾರ ಕಿತ್ತುಕೊಳ್ಳುವ ಇಂತಹ ನರ ರಾಕ್ಷಸರು ಇದ್ದಾರೆಂಬುವುದಕ್ಕೆ ಈ ಮೇಯರ್ ಸ್ಪಷ್ಟ ಉದಾಹರಣೆ.

ತನ್ನ ರಾಕ್ಷಸೀ ಪ್ರವೃತ್ತಿಯಿಂದ, ಪಕ್ಷದ ಬಲದಿಂದ, ಅಧಿಕಾರದ ಅಮಲಿನಿಂದ, ಕರಾಟೆ ಚಾಂಪಿಯನ್ ಎಂಬ ಕ್ರೌರ್ಯದಿಂದ ದರ್ಪ ತೋರಿಸುತ್ತಿರುವ ಮೇಯರ್
ಕವಿತಾ ಸನಿಲ್ ಜನತೆಯ ಆಗ್ರಹದ ಮೇರೆಗೆ ರಾಜಿನಾಮೆಯನ್ನು ಕೊಡಲೇ ಬೇಕು. ಇಲ್ಲವಾದಲ್ಲಿ ಕವಿತಾ ಸನಿಲ್ ಜೊತೆ ಪೊಲೀಸ್ ಇಲಾಖೆಯ ವಿರುದ್ಧವೂ ಉಗ್ರ ಪ್ರತಿಭಟನೆಯನ್ನು ಎದುರಿಸಬೇಕಾಗಿರುವುದಂತು ಸುಳ್ಳಲ್ಲ!!

ಕರಾಟೆ ಚಾಂಪಿಯನ್ ಮಂಗಳೂರು ಮೇಯರ್ ಕವಿತಾ ಸನೀಲ್ ರವರಿಂದ ವಾಚ್ ಮೆನ್ ಮತ್ತು ಅವರ ಹೆಂಡತಿಯ ಮೇಲೆ ಹಲ್ಲೆ! ಮಗುವನ್ನು ಎತ್ತಿ ಬಿಸಾಡಿದ ಮೇಯರ್! https://postcardkannada.com/pc8355

ಮಂಗಳೂರು ಮೇಯರ್ ಕವಿತಾ ಸನಿಲ್ ಮಹಿಳೆ ಮತ್ತು ಮಗುವಿಗೆ ಹೊಡೆದ ತಪ್ಪಿಗೆ ಕ್ಷಮೆಯಾಚಿಸುವುದು ಬಿಟ್ಟು ಈಗ ಮಾಡಿರುವುದು ಇನ್ನೊಂದು ಘೋರ ಅಮಾನವೀಯ ಅಪರಾಧ! https://postcardkannada.com/pc8420

-ಸುನಿಲ್

Tags

Related Articles

Close