ಪ್ರಚಲಿತ

ತನ್ನ ಎರಡು ಹೆಣ್ಣು ಮಕ್ಕಳಿಗೆ ಸೆಕ್ಸ್ ಶಿಕ್ಷಣ ಕೊಟ್ಟ ಡೋಂಗಿ ಜಾತ್ಯಾತೀತ! ವೈರಲ್ ಆಗಿದೆ ಈ ವೀಡಿಯೋ!

ಭಾರತದಲ್ಲಿನ್ನೂ ಮಕ್ಕಳಿಗೆ ಲೈಂಗಿಕ ಶಿಕ್ಷಣ ಬೇಕೇ ಬೇಡವೇ ಎಂಬ ವಿಚಾರದ ಬಗ್ಗೆಯೇ ಚರ್ಚೆ ನಡೆಯುತ್ತಿದ್ದರೆ ಇತ್ತ ಅಮೆರಿಕದಲ್ಲಿ ‘ಯಾವ ಮಾದರಿಯ ಲೈಂಗಿಕ ಶಿಕ್ಷಣ ಅಗತ್ಯ?’ ಎಂಬ ಚರ್ಚೆ ನಡೆಯುತ್ತಿರುವ ವಿಚಾರ ಗೊತ್ತೇ ಇದೆ!! ಆದರೆ ದೇಶಾದ್ಯಂತ ಲೈಂಗಿಕ ಶಿಕ್ಷಣದ ಬಗ್ಗೆ ಚರ್ಚೆಯಾಗುತ್ತಿರಬೇಕಾದರೆ ಅಪ್ಪ-ಅಮ್ಮನೇ ಮನೆಯೊಳಗೆ ತಮ್ಮ ಮಕ್ಕಳಿಗೆ “ಸೆಕ್ಸ್ ಎಜುಕೇಶನ್” ನೀಡಬೇಕೆಂದು ಒತ್ತಡ ಹೇರಿರುವ ಬುದ್ದಿಜೀವಿಯೊಬ್ಬರು ತಮ್ಮ ಮಕ್ಕಳಿಗೆ ಸೆಕ್ಸ್ ಎಜುಕೇಷನ್ ನೀಡಿ, ಆ ಬಗೆಗಿನ ಚರ್ಚೆಯ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದು, ಇದೀಗ ಆ ವಿಡಿಯೋ ವೈರಲ್ ಆಗಿದೆ.

ದೇಶಾದ್ಯಂತ ಮಕ್ಕಳಿಗೆ ಸೆಕ್ಸ್ ಎಜುಕೇಷನ್ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯುತ್ತಿರಬೇಕಾದರೆ, ಯೋಗೀಶ್ ಮಾಸ್ಟರ್ ತಮ್ಮ ಮಕ್ಕಳಿಗೆ ಸೆಕ್ಸ್ ಎಜುಕೇಷನ್ ಬಗ್ಗೆ ಪಾಠ ಮಾಡಿದ್ದಾರೆ. ಅಷ್ಟೇ ಅಲ್ಲದೇ, ಮಕ್ಕಳು ಸೆಕ್ಸ್ ಎಜುಕೇಷನ್ ಬಗ್ಗೆ ಮಾತನಾಡುವ ವಿಡಿಯೋವನ್ನು ಸ್ವತಃ ಯೋಗೀಶ್ ಮಾಸ್ಟರೇ ರೆಕಾರ್ಡ್ ಮಾಡಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ!! ಅಷ್ಟೇ ಅಲ್ಲದೇ, ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡಿರೋದರ ಬಗ್ಗೆ ಪರ ವಿರೋಧದ ಚರ್ಚೆ ಕೂಡ ಜೋರಾಗಿ ನಡೆತಿದೆ!!

ಯಾರಿದು ಯೋಗೀಶ್ ಮಾಸ್ಟರ್?

ಹಿಂದೂ ದೇವರ ಬಗ್ಗೆ ಅವಹೇಳನಕಾರಿಯಾಗಿ ಹಾಗೂ ವಿವಾದಾತ್ಮಕವಾಗಿ ಮಾತಾನಾಡುವ ವ್ಯಕ್ತಿಯಾಗಿರುವ ಯೋಗೀಶ್ ಮಾಸ್ಟರ್ ತನ್ನ ಮಕ್ಕಳೊಂದಿಗೆ ಸೆಕ್ಸ್ ಎಜುಕೇಶನ್ ಬಗ್ಗೆ ಚರ್ಚೆ ನಡೆಸಿದ ವ್ಯಕ್ತಿಯಾಗಿದ್ದಾರೆ. ಅಷ್ಟೇ ಅಲ್ಲದೇ, ಡುಂಡಿ ಎಂಬ ಪುಸ್ತಕದಿಂದ ಹೆಸರುವಾಸಿಯಾದ ಯೋಗೀಶ್ ಮಾಸ್ಟರ್ ಈಗ ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದಾರೆ. 16 ವರ್ಷಗಳ ಕಾಲ ಶಿಕ್ಷಕರಾಗಿ ಕೆಲಸ ಮಾಡಿದ್ದ ಇವರು 25 ವರ್ಷಗಳ ಕಾಲ ಕೌನ್ಸಿಲರ್ ಆಗಿದ್ದರು. ಅಷ್ಟೇ ಅಲ್ಲದೇ, 10 ವರ್ಷಗಳ ಕಾಲ ಆಧಾತ್ಮ ಪ್ರವಾಚಕರಾಗಿದ್ದು, 25 ವರ್ಷಗಳ ಕಾಲ ನಾಟಕಾಕಾರರಾಗಿ ಕಾಲ ಸೇವೆ ಸಲ್ಲಿಸಿದ ಇವರು ಇದೀಗ ತಮ್ಮ ಇಬ್ಬರು ಮಕ್ಕಳಿಗೆ ಸೆಕ್ಸ್ ಆರ್ಗನ್ಸ್ ಹಾಗೂ ಸೆಕ್ಸ್ ಎಜುಕೇಷನ್ ಬಗ್ಗೆ ಪಾಠ ಮಾಡಿದ್ದಾರೆ.

ಈ ವಿಡಿಯೋದಲ್ಲಿ ಮಕ್ಕಳಿಗೆ ಸೆಕ್ಸ್ ಎಜುಕೇಶನ್ ಕಡ್ಡಾಯವಾಗಿ ಕೊಡಬೇಕೋ, ಬೇಡವೋ ಎಂದು ಕೇಳುತ್ತಿರುವ ಯೋಗೀಶ್ ಮಾಸ್ಟರ್ ಗೆ ಆತನ ಮಕ್ಕಳು ಮುಜುಗರ ಪಡಬಾರದು ಎನ್ನುವ ದೃಶ್ಯವಿರುವ ಈ ವಿಡೀಯೋದಲ್ಲಿ ಗಂಡು ಮತ್ತು ಹೆಣ್ಣಿನ ಗುಪ್ತಾಂಗಗಳ ಬಗ್ಗೆಯೂ ತನ್ನ ಸಣ್ಣಪ್ರಾಯದ ಮಕ್ಕಳಲ್ಲಿ ಈ ಬಗ್ಗೆ ಹೇಳಿಸುತ್ತಿದ್ದಾರೆ!!

ವಿಡಿಯೋದಲ್ಲಿ ನಡೆದ ಸಂಭಾಷಣೆಯ ವಿವರ:

ಮಾಸ್ಟರ್: ಸೆಕ್ಸ್ ಎಜುಕೇಷನ್ ಬೇಕು ಅಥವಾ ಬೇಡ ಎಂದು ಒಬ್ಬೊಬ್ಬರು ಒಂದೊಂದು ಥರಾ ಹೇಳ್ತಾರೆ. ನೀವೇನು ಹೇಳ್ತೀರಿ?

ಇಬ್ಬರೂ: ಬೇಕು

ಮಾಸ್ಟರ್: ಸೆಕ್ಸ್ ಎಜುಕೇಷನ್ ಬೇಕು ಅಂತೀರಿ. ಸೆಕ್ಸ್ ಅಂದರೆ ಏನು? ಸೆಕ್ಸ್ ಎಜುಕೇಷನ್ ಅಂದ್ರೆ ಏನು?

ದೇವಿ (ಮಗಳು): ಹುಡುಗ, ಹುಡುಗಿ ಅಂತ ಐಡೆಂಟಿಫೈ ಮಾಡೋದು, ಗುರುತಿಸೋದು ಅವರವರ ಸೆಕ್ಸ್ ಆರ್ಗನ್ಸ್ ಮೇಲೆ. ಈ ಸೆಕ್ಸ್ ಆರ್ಗನ್ ಏನು ಕೆಲಸ ಮಾಡುತ್ತೆ ಅಂತ ತಿಳಿದುಕೊಳ್ಳೋದೇ ಸೆಕ್ಸ್ ಎಜುಕೇಷನ್.

ಮಾಸ್ಟರ್: ಸರಿ ಸೆಕ್ಸ್ ಎಜುಕೇಷನ್ ಎಲ್ಲಿಂದ ಶುರು ಮಾಡೋದು?

ದೇವಿ (ಮಗಳು): ನಮಗೆ ಅದರ ಹೆಸರೇಳಿ? ಅದೇನು ಕೆಲಸ ಮಾಡುತ್ತೆ ಅಂತಾನೆ ಶುರು ಮಾಡ್ಬೇಕು.

ಮಾಸ್ಟರ್: ನಿಮಗೆ ಅದರ ಹೆಸರು ಗೊತ್ತಾ?.?

ಕೈವಲ್ಯ (ಮಗಳು): ಗೊತ್ತು. ತಿ??..!

ದೇವಿ (ಮಗಳು): ತಿ..ಅಲ್ಲ. ತಿ.. ಅಂದ್ರೆ ಹಿಂದೆ ಇರೋದು. ಸೆಕ್ಸ್ ನ ಐಡೆಂಟಿಫೈ ಮಾಡೋ ಆರ್ಗನ್ನು ಹುಡುಗಿಯರಿಗೆ…. ಅಂತ ಇಂಗ್ಲಿಷ್ ನಲ್ಲಿ. ಕನ್ನಡದಲ್ಲಿ…. ಅಂತೀವಿ. ಹುಡುಗರದಕ್ಕೆ….ಅಂತ ಅಂತೀವಿ

ಮಾಸ್ಟರ್: ನೀವು ಹೀಗೆಲ್ಲಾ ಓಪನ್ನಾಗಿ ಸೆಕ್ಸ್ ಬಗ್ಗೆ ಮಾತಾಡ್ಬೋದಾ?

ಕೈವಲ್ಯ (ಮಗಳು): ಹೌದು. ಕಣ್ಣು ಮೂಗು ಬಾಯಿ ಇದ್ದಂತೆ ಅದೂನೂ ಪಾರ್ಟ್ ಆಫ್ ದಿ ಬಾಡಿ.

ಮಾಸ್ಟರ್: ಸರಿ, ನಿಮ್ಮ ಸ್ಕೂಲಲ್ಲಿ ಪಾರ್ಟ್ ಆಫ್ ದಿ ಬಾಡಿನೆಲ್ಲಾ ಹೇಳ್ಕೊಟ್ರಾ?

ಕೈವಲ್ಯ (ಮಗಳು): ಇಲ್ಲ. ಪಾರ್ಟ್ ಆಫ್ ದಿ ಬಾಡಿ ಪಿಕ್ಚರ್ ನಲ್ಲಿ ಏನೂ ಹೇಳಿಕೊಟ್ಟಿಲ್ಲ

ಮಾಸ್ಟರ್: ಅವೆಲ್ಲಾ ಹೇಳಲೇಬೇಕಾ?

ಕೈವಲ್ಯ (ಮಗಳು): ಹೌದಲ್ವಾ ದಿನಾನು ನಾವು ಅದನೆಲ್ಲಾ ನೋಡ್ತೀವಿ. ಅದರ ಫಂಕ್ಷನ್ಸ್ ನೆಲ್ಲಾ ನೋಡ್ತಾ ಇರ್ತೀವಿ

ಮಾಸ್ಟರ್: ಇದೆನೆಲ್ಲಾ ಯಾರು ಹೇಳಿದ್ದು?

ದೇವಿ (ಮಗಳು): ನೀನು ಮತ್ತು ಅಮ್ಮ

ಮಾಸ್ಟರ್: ಸೆಕ್ಸ್ ಎಜುಕೇಷನ್ ಯಾರು ಕೊಡಬೇಕು?

ದೇವಿ (ಮಗಳು): ಪೇರೆಂಟ್ಸ್ ಮತ್ತು ಟೀಚರ್ಸ್

ಮಾಸ್ಟರ್: ಮತ್ತೆ ಸೆಕ್ಸ್ ಎಜುಕೇಷನ್ ಸಪರೇಟ್ ಲೆಸನ್ ಬೇಕಾ?

ದೇವಿ (ಮಗಳು): ಏನೂ ಬೇಡ ಅನ್ಸುತ್ತೆ. ಪಾರ್ಟ್ ಆಫ್ ದಿ ಬಾಡಿ ಹೇಳಿಕೊಟ್ರೆ ಅದನ್ನೂ ಹೇಳಿಕೊಟ್ರೆ ಸಾಕು.

ಕೈವಲ್ಯ (ಮಗಳು): ಮತ್ತೆ ಅದನ್ನು ನೋಡ್ದಾಗ ಮಕ್ಕಳಿಗೆ ಶೇಮ್ ಶೇಮ್ ಅನ್ನಬಾರದು. ಶೇಮ್ ಶೇಮ್ ಅಂದ್ರೆ ಮಕ್ಕಳು ಅದರ ಬಗ್ಗೆ ಯಾರತ್ರನೂ ಮಾತಾಡದೇ ಇಲ್ಲ

ನೋಡಿದ್ರಲ್ಲ.. ಮಕ್ಕಳು ಸೆಕ್ಸ್ ಎಜುಕೇಷನ್ ಬಗ್ಗೆ ಹೇಗೆಲ್ಲ ಮಾತನಾಡಿದ್ದಾರೆ ಎಂದು. “ಇಂತಹ ಎಜುಕೇಷನ್ ಮನೆಯಲ್ಲೇ ಹೇಳಿಕೊಟ್ಟರೆ ಮಕ್ಕಳು ಮುಂದೆ ತಪ್ಪು ಮಾಡುವುದು ಶೇಕಡಾ 90 ರಷ್ಟು ಕಡಿಮೆಯಾಗುತ್ತೆ” ಎಂದು ಯೋಗೀಶ್ ಮಾಸ್ಟರ್ ಹೇಳುತ್ತಾರೆ.

2/23040346_287265025100606_6886794671167635456_n.mp4?efg=eyJ2ZW5jb2RlX3RhZyI6InN2ZV9zZCJ9&oh=40e82c07c4380745b2b0f1b54420fb53&oe=5A1834CCnbsp;

ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವಿರುದ್ಧ ಭಾರೀ ಆಕ್ರೋಶ!!!

“ಮನೆಯ ನಾಲ್ಕು ಗೋಡೆಗಳ ಮಧ್ಯೆ ಈ ವಿಚಾರವನ್ನು ಚರ್ಚೆ ನಡೆಸುವುದೋ ಅಥವಾ ಬಿಡುವುದೋ ಆತನ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬಿಟ್ಟ ವಿಚಾರ. ಆದರೆ ನಾಲ್ಕು ಗೋಡೆಗಳ ಮಧ್ಯೆ ಮಾತನಾಡುವ ವಿಚಾರಗಳನ್ನು ಎಳೆ ತಲೆಗಳಿಗೆ ತುಂಬಿ ಈತ ಏನು ಸಾಧಿಸ ಹೊರಡಿದ್ದಾರೆ ಎನ್ನುವುದು ಮಾತ್ರ ತಿಳಿಯುತ್ತಿಲ್ಲ. ಇವತ್ತು ಎಲ್ಲರಿಗೂ ಸೆಕ್ಸ್ ಎಜುಕೇಶನ್ ಬೇಕು ಎನ್ನುವ ಈತ ನಾಳೆ ರಸ್ತೆಯಲ್ಲಿ ನಡೆಯುತ್ತಿರುವ ಹುಡುಗಿಯೊಂದಿಗೆ ಸೆಕ್ಸ್ ಗೆ ಬರುವಂತೆ ಕರೆದರೂ ಕರೆಯಬಹುದು. ಇದನ್ನು ಪ್ರಶ್ನಿಸಿದರೂ ಅದು ತನ್ನ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಎಂದೂ ಈತ ವಾದಿಸಲೂ ಸಾಧ್ಯವಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ!!

ಅಷ್ಟೇ ಅಲ್ಲದೇ, ಕೆಲವರು “ಪುಸ್ತಕದಲ್ಲಿ, ಕ್ಲಾಸ್ ರೂಂನಲ್ಲಿ ಕಲಿಸಿದರೆ ಮಾತ್ರ ಅದು ತಿಳಿಯುತ್ತದೆ ಎನ್ನುವುದು ಯೋಗೀಶ್ ಮಾಸ್ಟರ್ ಎಂದು ಕರೆಸಿಕೊಳ್ಳುವ ವ್ಯಕ್ತಿಯ ಮೂರ್ಖತನ” ಎಂದಿದ್ದಾರೆ. ಇನ್ನು, ” ಸೆಕ್ಸ್ ಎಜುಕೇಶನ್ ಇಲ್ಲದೆಯೇ ಸಮಾಜ ಇಲ್ಲಿ ತನಕ ನಡೆದಿದೆ, ಮುಂದೆಯೂ ನಡೆಯುತ್ತೆ” ಎನ್ನುವಂತಹ ಕಮೆಂಟ್ ಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂಥಹ ಕ್ಷುಲಕ ವಿಚಾರವನ್ನಿಟ್ಟುಕೊಂಡು ವಿವಾದಾತ್ಮಕ ವಿಚಾರದಲ್ಲಿ ಮುಗ್ದ ಮಕ್ಕಳ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡುವುದು ಮಕ್ಕಳ ಹಕ್ಕುಗಳ ಉಲ್ಲಂಘನೆಯೂ ಆಗಿದೆ!! ಹೀಗಿರಬೇಕಾದರೆ ಎಳೆಯ ಪ್ರಾಯದ ಕಂದಮ್ಮಗಳಿಗೆ,ಲೈಂಗಿಕ ಶಿಕ್ಷಣವನ್ನು ನೀಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುವಂತಹ ಅವಶ್ಯಕತೆಯಾದರೂ ಏನಿತ್ತು ಎನ್ನುವುದು ಮಾತ್ರ ತಿಳಿಯುತ್ತಿಲ್ಲ!!

source:http://publictv.in/yogesh-master-teaches-about-sex-education-to-his-daughters-video-goes-viral/
-ಅಲೋಖಾ

Tags

Related Articles

Close