ಪ್ರಚಲಿತ

ತನ್ನ ಕಾಮದಾಹಕ್ಕೆ ಹೆಣ್ಣಿನ ಸೊಂಟ ಮುರಿದು ಐದು ದಿನ ನಡೆಯಲಾರದ ಹಾಗೆ ಮಾಡಿದನೇ ಕರ್ನಾಟಕದ ಕಾಂಗ್ರೆಸ್ ಉಸ್ತುವಾರಿ?!

ಕೇರಳದಲ್ಲಿ ನಡೆದ ಬಹುಕೋಟಿ ಸೋಲಾರ್ ಹಗರಣದ ತನಿಖಾ ವರದಿ ಬಹಿರಂಗಗೊಂಡಿದ್ದು, ಇದರಲ್ಲಿ ಕರ್ನಾಟಕ ಕಾಂಗ್ರೆಸ್ ಚುನಾವಣಾ ಉಸ್ತುವಾರಿ ಹೊತ್ತಿರುವ ಕೆ.ಸಿ. ವೇಣುಗೋಪಾಲನ ಹೆಸರೂ ಕೂಡ ಉಲ್ಲೇಖಗೊಂಡಿದೆ. ಈ ವರದಿಯಲ್ಲಿ ವೇಣುಗೋಪಾಲ ಬಹುಕೋಟಿ ಸೋಲಾರ್ ಹಗರಣದ ಆರೋಪಿ ಸರಿತಾ ನಾಯರ್‍ಗೆ ಲೈಂಗಿಕ ದೌರ್ಜನ್ಯ ಎಸಗಿರುವುದು ಬಹಿರಂಗಗೊಂಡಿದೆ. ಈ ಕೈ ನಾಯಕ ಎಲ್ಲೆಲ್ಲಿ ಕೈ ಇಡಬಾರದೋ ಅಲ್ಲೆಲ್ಲಾ ಕೈ ಇಟ್ಟು ಈಗ ಮರ್ಯಾದೆ ಕಳೆದುಕೊಂಡಿದ್ದಾನೆ. ವೇಣುಗೋಪಾಲನ ಮೇಲೆ ಅತ್ಯಾಚಾರ, ಬೆದರಿಕೆ, ಫೋನ್ ಕರೆ ಹಾಗೂ ಎಸ್‍ಎಂಎಸ್ ಸೆಕ್ಸ್ ಮುಂತಾದ ಆರೋಪ ಕೇಳಿಬಂದಿದೆ.

ಕೇರಳದ ನ್ಯಾಯಮೂರ್ತಿ ಜಿ. ಶಿವರಾಜನ್ ಆಯೋಗ ಸಲ್ಲಿಸಿದ ಸೋಲಾರ್ ಹಗರಣದ 1073 ಪುಟಗಳ ವರದಿಯನ್ನು ಕೇರಳ ಮುಖ್ಯಮಂತ್ರಿ ಪಿಣರಾಯ್
ವಿಜಯನ್ ಅವರು ಗುರುವಾರ ರಾಜ್ಯ ವಿಧಾನ ಸಭೆಯ ವಿಶೇಷ ಅಧಿವೇಶನದಲ್ಲಿ ಮಂಡಿಸಿದರು. ಈ ವರದಿಯಲ್ಲಿ ವೇಣುಗೋಪಾಲನ ಕಾಮಲೀಲೆಯೂ
ಬಹಿರಂಗಗೊಂಡಿದ್ದು, ಕಾಂಗ್ರೆಸ್‍ನ ಮರ್ಯಾದೆ ಮೂರಾಬಟ್ಟೆಯಾಗಿದೆ. ಸರಿತಾ ನಾಯರ್ ಹೇಳಿಕೆಯನ್ನು ಆಧರಿಸಿ ತಯಾರಿಸಲಾದ ವರದಿಯಲ್ಲಿ ಕೆಸಿ
ವೇಣುಗೋಪಾಲ `ಕೈ’ಚಳಕದ ಬಗ್ಗೆ ಸವಿಸ್ತಾರವಾಗಿ ಪ್ರಸ್ತಾಪಗೊಂಡಿದ್ದು, ಸರಿತಾ ಮಾಡಿದ ಆರೋಪದ ವರದಿ ಬಹಿರಂಗಗೊಂಡಿದೆ. ವೇಣುಗೋಪಾಲನ
ಕಾಮಲೀಲೆಯಿಂದ ಸರಿತಾಗೆ 5 ದಿನ ನಡೆಯಲೂ ಸಾಧ್ಯವಾಗಲಿಲ್ಲ. ಎದ್ದುನಿಂತುಕೊಳ್ಳಲೂ ಸಾಧ್ಯವಾಗಿರಲಿಲ್ಲ ಎಂಬುವುದಾಗಿ ಉಲ್ಲೇಖಗೊಂಡಿದೆ.

ವರದಿಯಲ್ಲೇನಿದೆ ಗೊತ್ತೇ?

ಸೋಲಾರ್ ಬ್ರಾಂಚ್ ಉದ್ಘಾಟನೆಗೆ ಆಹ್ವಾನಿಸಲು ಆಲೆಪ್ಪಿಯಲ್ಲಿರುವ ವೇಣುಗೋಪಾಲ್ ನಿವಾಸ `ರಾಜೀವಂ’ಗೆ ಸರಿತಾ ಆಗಮಿಸಿದ್ದರು. ಈ ವೇಳೆ
ವೇಣುಗೋಪಾಲನಿಗೆ ಸರಿತಾ ಪರಿಚಯವಾಗಿತ್ತು. ಉದ್ಘಾಟನೆಯ ದಿನಾಂಕ, ಸಮಯ ನಿಗದಿಯಾದ ಬಳಿಕ ಹೊರಡಲು ಸಜ್ಜಾಗಿದ್ದ ವೇಳೆ ಕೆ.ಸಿ. ವೇಣುಗೋಪಾಲ್ ಸರಿತಾ ಹಿಂಭಾಗವನ್ನು ಸವರಿದ್ದಾರೆ. ಇದೇ ವೇಳೆ ಕೈಯಲ್ಲಿದ್ದ ಫೈಲ್‍ನಲ್ಲಿ ವೇಣುಗೋಪಾಲ್‍ಗೆ ಹೊಡೆದ ಸರಿತಾ, `ಹಾಗೆ ಮಾಡಬೇಡಿ’ ಎಂದು ಹೇಳಿದ್ದರು. ಈ ಘಟನೆಗೆ ಸರಿತಾ ಜೊತೆಗಿದ್ದ ಜನರಲ್ ಮ್ಯಾನೇಜರ್ ಸಾಕ್ಷಿಯಾಗಿದ್ದಾರೆ. ಈ ವೇಳೆ ಜನರಲ್ ಮ್ಯಾನೇಜರ್ ಮಧ್ಯಪ್ರವೇಶಿಸಿ ಸರಿತಾ ಅವರನ್ನು ಸುಮ್ಮನಾಗಿಸಿದ್ದರು.

ಇದಾದ ಕೆಲ ಸಮಯದ ಬಳಿಕ ಸರಿತಾ ಮೊಬೈಲ್‍ಗೆ ವೇಣುಗೋಪಾಲ್ `ತುಂಬಾ ಮೃದುವಾಗಿತ್ತು’ ಎಂದು ಎಸ್‍ಎಂಎಸ್ ಸಂದೇಶ ಕಳುಹಿಸಿದ್ದಾರೆ. ಇದರಿಂದ
ಸಿಟ್ಟಾಗಿ ಸರಿತಾ ಫೋನ್ ಮಾಡಿ ಬೈದಾಗ `ಸ್ಟಿಲ್ ಲವ್ ಯೂ’ ಎಂದು ಹೇಳಿದ್ದಾರೆ. ಫೋನ್ ಕರೆಯಲ್ಲಿ ನೀನು ದೆಹಲಿಗೆ ಬಂದ್ರೆ ಮಾತ್ರ ಬ್ರಾಂಚ್ ಉದ್ಘಾಟನೆಗೆ
ಬರುತ್ತೇನೆ ಎಂದು ಷರತ್ತು ವಿಧಿಸಿದ್ದರು. ಕೊನೆಗೆ ದೆಹಲಿಗೆ ಬಂದು ಸರಿತಾ ಹಾಗೂ ವೇಣುಗೋಪಾಲ್ ರಾಜಿಯಾಗಿದ್ದರು. ಇದಾದ ಬಳಿಕ ರಾತ್ರಿ ವೇಳೆ ಪದೇ ಪದೇ ವೇಣುಗೋಪಾಲ್ ಫೋನ್ ಮಾಡುತ್ತಿದ್ದರು. ಅನಿಲ್ ಕುಮಾರ್ ಹಾಗೂ ನಜರುಲ್ಲಾ ಅವರು ಕೆ.ಸಿ. ವೇಣುಗೋಪಾಲ್‍ಗೆ ಪಿಂಪ್‍ಗಳಾಗಿ ಕಾರ್ಯನಿರ್ವಹಿಸುತ್ತಿದ್ದರು.

ಅಂದು ಕೇರಳದಲ್ಲಿ ಬಿಜೆಪಿ ಬಂದ್‍ಗೆ ಕರೆ ನೀಡಿತ್ತು. ಈ ವೇಳೆ ಇಕೋ ಟೂರಿಸಂ ಯೋಜನೆಯ ಪೇಪರ್ ರೆಡಿಯಿದೆ ಎಂದು ರೋಸ್ ಹೌಸ್‍ಗೆ ಬರಲು ವೇಣುಗೋಪಾಲ್ ಸರಿತಾಗೆ ಆಹ್ವಾನ ನೀಡಿದ್ದರು. ಇಕೋಟೂರಿಸಂ ಯೋಜನೆ ನಂಬಿ ಸರಿತಾ ಆಗಮಿಸಿದಾಗ ರೋಸ್ ಹೌಸ್‍ನಲ್ಲಿ ಬಂದಾಗ ಸಚಿವರೂ ಇರಲಿಲ್ಲ, ಸಚಿವರ ಆಪ್ತ ಸಿಬ್ಬಂದಿಯೂ ಇರಲಿಲ್ಲ. ಇಬ್ಬರು ಪೆÇಲೀಸರು ಮಾತ್ರ ಗೇಟ್‍ನಲ್ಲಿ ನಿಂತಿದ್ದರು. ಫೋನ್ ಮಾಡಿದಾಗ ಹಾಲ್‍ನಲ್ಲಿದ್ದೇನೆ ಎಂದು ವೇಣುಗೋಪಾಲ್ ಹೇಳಿದ್ದರು. ಕುಡಿದ ಅಮಲಿನಲ್ಲಿ ತೇಲಾಡುತ್ತಿದ್ದ ವೇಣುಗೋಪಾಲ್ ಸರಿತಾ ಕೊಠಡಿಗೆ ಬಂದಾಗ ಒತ್ತಾಯಪೂರ್ವಕವಾಗಿ ಅಪ್ಪಿಕೊಂಡಿದ್ದಾರೆ. ಈ ವೇಳೆ ಇಬ್ಬರೂ ಪರಸ್ಪರ ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ವೇಣುಗೋಪಾಲ್ ಬಲವಂತವಾಗಿ ದೈಹಿಕವಾಗಿ ದೌರ್ಜನ್ಯ ನಡೆಸಿದ್ದಾರೆ. ದೌರ್ಜನ್ಯ ನಡೆದ ಬಳಿಕ ಸರಿತಾಗೆ 5 ದಿನ ನಡೆಯಲೂ ಸಾಧ್ಯವಾಗಲಿಲ್ಲ. ಎದ್ದುನಿಂತುಕೊಳ್ಳಲೂ ಸಾಧ್ಯವಾಗಿರಲಿಲ್ಲ. ಈ ಘಟನೆಗೆ ಸಂಬಂಧಿಸಿದಂತೆ ಸರಿತಾ ಬಳಿ ಸಾಕ್ಷ್ಯಳಿದ್ದು, ಇದಾದ ಬಳಿಕವೂ ಫೋನ್ ಕಾಲ್ ಹಾಗೂ ಎಸ್‍ಎಂಎಸ್ ಮೂಲಕ ದೌರ್ಜನ್ಯ ನಡೆಯುತ್ತಿತ್ತು. ಕೆ.ಸಿ. ವೇಣುಗೋಪಾಲ್ ಬೆದರಿಸಿ ನನ್ನನ್ನು ಸೆಕ್ಸ್‍ಗೆ ಬಳಸಿಕೊಂಡಿದ್ದಾರೆ. ಟೆಲಿಫೋನ್ ಕಾಲ್, ಎಸ್‍ಎಂಎಸ್ ಮಾಡಿ ದೌರ್ಜನ್ಯ ಎಸಗಿದ್ದಾರೆ. ಇದಕ್ಕೆ ಎಲ್ಲ ನನ್ನ ಬಳಿ ಸಾಕ್ಷ್ಯವಿದೆ ಎಂದು ಆಯೋಗದ ಮುಂದೆ ಸರಿತಾ ನಾಯರ್ ಹೇಳಿಕೆ ನೀಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

Image result for k c venugopal

ಏನಿದು ಸೋಲಾರ್ ಹಗರಣ?

ಸರಿತಾ ನಾಯರ್ ಮತ್ತು ಬಿಜು ರಾಧಾಕೃಷ್ಣನ್ ಎಂಬವರು 2013ರಲ್ಲಿ ಟೀಮ್ ಸೋಲಾರ್ ರಿನೀವೆಬಲ್ ಸೋಲಾರ್ ಎನರ್ಜಿ ಸೊಲ್ಯೂಷನ್ಸ್ ಎಂಬ ನಕಲಿ ಕಂಪನಿ ಸ್ಥಾಪಿಸಿದ್ದರು. ಸಿಎಂ ಕಚೇರಿಯ ಸಿಬ್ಬಂದಿಯನ್ನು ಬಳಸಿ ಸಿಎಂ ಸೇರಿದಂತೆ ಪ್ರಭಾವಿ ರಾಜಕಾರಣಿಗಳ ಜತೆ ಸಂಪರ್ಕ ಬೆಳೆಸಿ ಸೋಲಾರ್ ಫಲಕ ಒದಗಿಸುವ ಹೆಸರಿನಲ್ಲಿ ಹಣ ಸಂಗ್ರಹಿಸಿ ಕೋಟ್ಯಂತರ ರೂ. ವಂಚಿಸಿದ್ದರು. ಸರಿತಾ ಅವರು ಸಿಎಂ ಸೇರಿದಂತೆ ಹಲವರಿಗೆ 2.16 ಕೋಟಿ ರೂ. ಲಂಚ ನೀಡಿದ್ದಾಗಿ ಹೇಳಲಾಗಿದೆ. ಇದು ಕೇವಲ ಹಣಕಾಸಿನ ವ್ಯವಹಾರವಾಗಿರಲಿಲ್ಲ. ಬದಲಾಗಿ ಸರಿತಾ ನಾಯರ್ ಅವರು ಮತ್ತು ಪ್ರಭಾವಿಗಳ ನಡುವೆ ನಡೆದ ಸೆಕ್ಸ್ ಸ್ಕ್ಯಾಂಡಲ್ ಕೂಡಾ ಆಗಿತ್ತು.

ಯಾರ ಮೇಲೆಲ್ಲ ಆರೋಪ?

ಕೇರಳದಲ್ಲಿ ನಡೆದ ಬಹುಕೋಟಿ ಸೋಲಾರ್ ಹಗರಣದಲ್ಲಿ ಕೇರಳದ ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್‍ನ ಉಮ್ಮನ್ ಚಾಂಡಿ ಸೇರಿ ಹಲವರ ವಿರುದ್ಧ ಆರೋಪಗಳಿವೆ. ಮುಖ್ಯಮಂತ್ರಿ ಉಮನ್ ಚಾಂಡಿ, ಅವರ ಕಚೇರಿಯ ಸಿಬ್ಬಂದಿಗಳಾದ ಟೆನ್ನಿ ಜೋಪ್ಪನ್, ಜಿಕ್ಕುಮೋನ್ ಜಾಕೊಬ್, ಗನ್ ಮ್ಯಾನ್ ಸಲೀಮ್ ರಾಜ್ ಮತ್ತು ದಿಲ್ಲಿಯಲ್ಲಿರುವ ಥೋಮಸ್ ಕುರುವಿಲ್ಲ ಅವರು ಸರಿತಾ ಮತ್ತವರ ಕಂಪನಿಯ ಮೋಸಕ್ಕೆ ಬೆಂಗಾವಲಾಗಿದ್ದರು ಎಂದು ವರದಿ ನೇರವಾಗಿ ಆರೋಪಿಸಿದೆ.

ಸರಿತಾ ನಾಯರ್ ಜತೆಗಿದ್ದ ಬಿಜು ರಾಧಾಕೃಷ್ಣನ್, ನಟ ಶಾಲು ಮೆನನ್, ಸಿಎಂ ಉಮನ್ ಚಾಂಡಿ(ಅತ್ಯಾಚಾರ, ಕಮಿಷನ್‍ಗೆ ಬೇಡಿಕೆ), ಮಾಜಿ ಮಂತ್ರಿ ಆರ್ಯದನ್ ಮುಹಮ್ಮದ್, ಎ.ಪಿ. ಅನಿಲ್ ಕುಮಾರ್, ಅಡೂರ್ ಪ್ರಕಾಶ್ (ಸರಿತಾಳನ್ನು ಬೆಂಗಳೂರಿನ ಹೋಟೆಲ್‍ಗೆ ಆಹ್ವಾನ), ಶಾಸಕ ಹಿಬಿ ಈಡನ್, ಕೆ.ಸಿ. ವೇಣುಗೋಪಾಲ್, ಮಾಜಿ ಕೇಂದ್ರ ಮಂತ್ರಿ ಪಳನಿಮಾಣಿಕಂ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್. ಸುಬ್ರಹ್ಮಣ್ಯನ್, ಐಜಿ ಕೆ. ಪದ್ಮಕುಮಾರ್, ಮಾಜಿ ಫೋಲೀಸ್ ಕಮೀಷನರ್ ಅಜಿತ್ ಕುಮಾರ್, ಮಾಜಿ ಶಾಸಕ, ವಿಷ್ಣುನಾತ್, ರಮೇಶ್ ಚೆನ್ನಿತ್ತಲ ಅವರ ಪಿಎ ಪ್ರದೀಶ್ ನಾಯರ್, ಸಂಸದ ಜೋಸ್ ಕೆ. ಮಾಣಿ ಇಷ್ಟು ಮಂದಿಯ ಹೆಸರುಗಳಿವೆ.

ಈ ಹಗರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸುವ ಸಂದರ್ಭದಲ್ಲಿ ಲೈಂಗಿಕ ಹಗರಣ ತನಿಖೆಯ ವಿಷಯವಲ್ಲ ಎಂದು ಸರಕಾರದ ಪ್ಲೀಡರ್ ಹೇಳಿದ್ದರು. ಆದರೆ,
ಸಿಎಂನಂಥ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿ, ಸಾರ್ವಜನಿಕ ಸೇವಕ ಅಥವಾ ಇತರರು ತಮ್ಮ ಅಧಿಕೃತ ಕೆಲಸ ಮಾಡಲು ಲೈಂಗಿಕತೆ ಮತ್ತು ಲೈಂಗಿಕ ತೃಪ್ತಿಯನ್ನು
ಬಯಸುವುದು ಅಪರಾಧವಾಗುತ್ತದೆ ಎಂಬ ಅಭಿಪ್ರಾಯದೊಂದಿಗೆ ತನಿಖೆಗೆ ಸೇರಿಸಿಕೊಂಡಿತ್ತು. ಇದೀಗ ಸೆಕ್ಸ್ ಹಗರಣವೇ ದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿದ್ದು,
ಯುಡಿಎಫ್ ನಾಯಕರಿಗೆ ನುಂಗಲಾರದ ತುತ್ತಾಗಿದೆ. ತನಿಖಾ ಆಯೋಗದ ವರದಿಯನ್ನು ಮಂಡಿಸಲು ರಾಜ್ಯ ವಿಧಾನಸಭೆಯ ವಿಶೇಷ ಅಧಿವೇಶನವನ್ನು ಕರೆದಿರುವುದು ರಾಜ್ಯದ ಇತಿಹಾಸದಲ್ಲೇ ಮೊದಲು ಎಂದು ಹೇಳಲಾಗಿದೆ. ಈ ನಡುವೆ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ರಮೇಶ್ ಚೆನ್ನಿತ್ತಲ ಅವರು, ನ್ಯಾಯಾಂಗ ವರದಿಯನ್ನು ರಾಜಕೀಯ ದ್ವೇಷದ ಅಸ್ತ್ರವಾಗಿ ಬಳಸುವ ಸರಕಾರದ ಕ್ರಮವನ್ನು ವಿರೋಧಿಸುವುದಾಗಿ ಹೇಳಿದರು.

ಕಾಂಗ್ರೆಸಿಗರು ನಕಲಿ ಹೆಸರಲ್ಲಿ ಕಂಪೆನಿ ಸ್ಥಾಪಿಸಿ ಅದರಿಂದ ಕೋಟಿಗಟ್ಟಲೆ ಬಾಚಿಕೊಂಡಿರುವುದು ಬೆಳಕಿಗೆ ಬಂದಿದೆ. ಈ ಹಿಂದೆ 2ಜಿ ಹಗರಣ, ಕಾಮನ್‍ವೆಲ್ತ್ ಗೇಮ್ ಹಗರಣ, ಏರ್ಸೆಲ್ ಮಾಕ್ಸಿಸ್ ಡೀಲ್ ಹಗರಣ, ಕಲ್ಲಿದ್ದಲು ಹಗರಣ, ಭೋಪೋರ್ಸ್ ಹಗರಣ ಹೀಗೆ ಬಿಲಿಯನ್ ಗಟ್ಟಲೆ ಹಗರಣದಲ್ಲಿ ಸಿಲುಕಿ ಸಿಕ್ಕಿಬಿದ್ದಿದೆ. ಇದೀಗ ಸೋಲಾರ್ ಹಗರಣದಲ್ಲಿ ಸಿಕ್ಕಿಬಿದ್ದಿದ್ದು, ಖ್ಯಾತನಾಮರೆಲ್ಲಾ ಜೈಲಿಗೆ ಹೋಗುವ ಕಾಲ ಬಂದಿದೆ.

-ಚೇಕಿತಾನ

Tags

Related Articles

Close