ಅಂಕಣದೇಶಪ್ರಚಲಿತ

ತಲಾಖ್ ನಿಷೇಧವಾದರೆ ಸಾಕೇ?! ಇನ್ನೊಂದಿಷ್ಡು ಅನಿಷ್ಠಕ್ಕೆ ತಡೆ ಹಾಕುವರಾರು?!

ಭಾರತದ ಮುಸ್ಲಿಂ ಮಹಿಳೆಯರ ಪಾಲಿಗೆ ಅನಿಷ್ಠವಾಗಿದ್ದ ತ್ರಿವಳಿ ತಲಾಖ್‍ನ ಕುರಿತಾಗಿ ಇಂದು ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯ ಮೂರ್ತಿ ಜೆ.ಎಸ್. ಖೆಹರ್ ಅವರ ನೇತೃತ್ವದ ಐದು ಸದಸ್ಯರ ಪೀಠ, ಈ ಆಚರಣೆ ಸಂವಿಧಾನ ಬಾಹಿರ ಎಂದು ಅಭಿಪ್ರಾಯಿಸಿ ಇನ್ನು ಮುಂದೆ ತ್ರಿವಳಿ ತಲಾಖೆ ಮೂಲಕ ಪಡೆಯುವ ವಿಚ್ಛೇದನ ಅಸಿಂಧುವಾಗಲಿದೆ ಎಂದು ಆದೇಷ ನೀಡಿದೆ. ಆಗಸ್ಟ್ 22ರಿಂದ ತ್ರಿವಳಿ ತಲಾಖ್ ಪದ್ಧತಿಗೆ ಭಾರತದಲ್ಲಿ ಯಾವುದೇ ಮಾನ್ಯತೆ ಇರುವುದಿಲ್ಲ. ಈ ತೀರ್ಪಿನಿಂದ ಮುಸ್ಲಿಂ ಮಹಿಳೆಯರ ಪಾಲಿಗೆ ನಿಜವಾಗಿಯೂ ಸ್ವಾತಂತ್ರ್ಯ ಸಿಕ್ಕಿದಂತಾಗಿದ್ದು, ಪುರುಷರು ಮಹಿಳೆಯರ ವಿರುದ್ಧ ಮಾಡುವ ದೌರ್ಜನ್ಯ ಕೊನೆಗೊಳ್ಳಲಿದೆ. 
ಆದರೆ ಮುಸ್ಲಿಂ ಮಹಿಳೆಯರಿಗೆ ಇವಿಷ್ಟೇ ಸಮಸ್ಯೆಗಳಲ್ಲ. ಇನ್ನೂ ಅನೇಕ ಸಮಸ್ಯೆಗಳಿಂದ ಮಹಿಳೆಯರು ಮುಕ್ತರಾಗಬೇಕಾಗಿದೆ. ಮುಸ್ಲಿಂ ಮಹಿಳೆಯರ ಮೇಲೆ ಕೆಲವು ಮೂಲಭೂತವಾದಿಗಳು ಸಂಪ್ರದಾಯ, ಧರ್ಮದ ಹೆಸರಲ್ಲಿ ದೌರ್ಜನ್ಯ ನಡೆಸುವುದು ಕಡಿಮೆಯಾಗಬೇಕಾಗಿದೆ. ಇಂದು ಮುಸ್ಲಿಂ ಮಹಿಳೆಯರು ಬುರ್ಖಾ ಧರಿಸುವುದು ಅನಿವಾರ್ಯವಾಗಿದೆ. ಇಡೀ ದೇಹವನ್ನು ಬಟ್ಟೆಯಿಂದ ಸುತ್ತಿ ಮಹಿಳೆಯರ ಸಹಜ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗುತ್ತಿದೆ. ಕೆಲವು ಪಂಗಡಗಳಲ್ಲಿ ಮುಖ ಕಾಣುತ್ತಿದ್ದರೆ ಇನ್ನು ಕೆಲವು ಪಂಗಡಗಳಲ್ಲಿ ಕಣ್ಣು ಬಿಟ್ಟು ಮುಖವನ್ನು ಮುಚ್ಚಲಾಗುತ್ತದೆ. ಅರಬ್ ರಾಷ್ಟ್ರಗಳಲ್ಲಿ ಆಚರಣೆಗೆ ಬಂದ ಈ ಪದ್ಧತಿ ಆ ಮೇಲೆ ಇಸ್ಲಾಂ ಬೆಳೆಯುತ್ತಿದ್ದಂತೆ ಬುರ್ಖಾ ಪದ್ಧತಿಯೂ ಬೆಳೆಯಲಾರಂಭಿಸಿತು. 
ಆದರೆ ಹಲವಾರು ರಾಷ್ಟ್ರಗಳು ಈ ಬುರ್ಖಾ ಪದ್ಧತಿಯನ್ನು ನಿಷೇಧಗೊಳಿಸಿದೆ. ರಿಪಬ್ಲಿಕ್ ಆಫ್ ಕಾಂಗೋ ಉಗ್ರವಾದವನ್ನು ಹತ್ತಿಕ್ಕುವ ನಿಟ್ಟಿನಲ್ಲಿ 2015ರಲ್ಲಿ ಮುಖ ಮುಚ್ಚುವುದನ್ನು ನಿಷೇಧಿಸಿತು. ಗಾಬನ್ ರಾಷ್ಟ್ರವು ದೇಶದಲ್ಲಿ ಉಗ್ರವಾದವನ್ನು ನಿಗ್ರಹಿಸಲು ಸಾರ್ವಜನಿಕ ಸ್ಥಳದಲ್ಲಿ ಬುರ್ಕಾವನ್ನು ನಿಷೇಧಿಸಿದೆ.  ಇನ್ನು ಮೊರಕ್ಕೋ ರಾಷ್ಟ್ರ 2017ರ ಜನವರಿ 9ರಂದು ಪತ್ರವೊಂದನ್ನು ಹೊರಡಿಸಿ ಉಗ್ರವಾದವನ್ನು ಹತ್ತಿಕ್ಕುವ ಸಲುವಾಗಿ ದೇಶದಲ್ಲಿ ಸಂಪೂರ್ಣವಾಗಿ ಬುರ್ಖಾವನ್ನು ನಿಷೇಧಿಸುವಂತೆ ಆದೇಶಿಸಿದಲ್ಲದೆ, ಅದರ ಆಮದು ಮತ್ತು ರಫ್ತಿಗೂ ನಿಷೇಧ ಹೇರಿತು.
ಇನ್ನು ಅಫಘಾನಿಸ್ತಾನದಲ್ಲಿ ಉಗ್ರರ ಅಟ್ಟಹಾಸ ಕಡಿಮೆಯಾಗುತ್ತಿದ್ದಂತೆ ಬುರ್ಖಾದಿಂದ ಸಂಪೂರ್ಣ ಮೈಮುಚ್ಚುವುದು ನಿಲ್ಲುತ್ತಿದೆ. ಜೊತೆಗೆ ಬಣ್ಣಬಣ್ಣದ ಬುರ್ಖಾ ಧರಿಸುವ ಮೂಲಕ ತನ್ನ ಅದಮ್ಯ ಆಸೆಯನ್ನು ಅಪಘಾನಿಸ್ತಾನದ ಮಹಿಳೆಯರು ಬೆಳೆಸಿದ್ದಾರೆ.
ಇನ್ನು ಕಟ್ಟರ್ ಪಾಕಿಸ್ತಾನದಲ್ಲೂ ಮಹಿಳೆಯರು ಸಾರ್ವಜನಿಕ ಸ್ಥಳದಲ್ಲಿ ಬುರ್ಖಾ ಧರಿಸುವುದಿಲ್ಲ.  ಕೆಲವೊಂದು ಪ್ರಮುಖ ಪ್ರದೇಶಗಳಲ್ಲಿ ಅಂದರೆ ಬುಡಕಟ್ಟು ಪ್ರದೇಶ, ಖೈಬರ್ ಪಖ್ತುನ್ಖಾ, ಬಲೂಚಿಸ್ತಾನದಲ್ಲಿ ಬುರ್ಖಾ ಧರಿಸುವುದು ಕಂಡುಬರುತ್ತದೆ. ಬುರ್ಖಾ ಧರಿಸದಿದ್ದರೂ ಅಲ್ಲಿನ ಮೂಲಭೂತವಾದಿಗಳು ಅಷ್ಟೊಂದು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಕೇವಲ ತಲೆಗೆ ಒಂದು ಬಟ್ಟೆ ಸುತ್ತಿ ಸಾಮಾನ್ಯ ದಿರಿಸಲ್ಲೇ ಸಂಚರಿಸುವ ಮಹಿಳೆಯರನ್ನು ಪಾಕಿಸ್ತಾನದಲ್ಲಿ ಎಲ್ಲೆಲ್ಲೂ ಕಾಣಬಹುದು.
ಇನ್ನು ಇಸ್ರೇಲ್‍ನಲ್ಲಿ ನೋಡುವುದಾದದರೆ, ಕೆಲವು ವರ್ಷಗಳ ಹಿಂದೆ ಕೆಲವೊಂದು ಯಹೂದಿ ಮಹಿಳೆಯರು ಧಾರ್ಮಿಕತೆಯ ಸಂಕೇತವಾಗಿ ಬುರ್ಖಾ ಧರಿಸುತ್ತಿದ್ದರು. ಲೈಂಗಿಕವಾಗಿ ಅನ್ಯರಿಗೆ ಪ್ರಚೋದಿಸುತ್ತದೆ ಎಂಬ ಕಾರಣಕ್ಕಾಗಿ ಈ ಕಾರ್ಯಕ್ಕೆ ಕೆಲವು ಮಹಿಳೆಯರು ಇಳಿದಿದ್ದರು. ಇಂದು ದಿರಿಸಿನ ಶೈಲಿ ಬದಲಾಗಿದ್ದು, ದೇಹವನ್ನು ಸಂಪೂರ್ಣವಾಗಿ ಮುಚ್ಚುವುದಕ್ಕೆ ನಿಷೇಧ ಹೇರಲಾಗಿದೆ.
ಸಿರಿಯಾದಲ್ಲಿ ಐಸಿಸ್ ಉಗ್ರರು ಅಟ್ಟಹಾಸ ಮೆರೆಯುದರ ಮುಂಚೆ ತಲೆಗೆ ಬಟ್ಟೆ ಸುತ್ತಿಕೊಂಡರೆ ಸಾಕಿತ್ತು. ಆದರೆ ಐಸಿಸ್ ಉಗ್ರರಿಗೆ ನಲುಗಿದ ಮೇಲೆ ಸೆರೆ ಸಿಕ್ಕ ಮಹಿಳೆಯರನ್ನು ಬುರ್ಖಾ ಧರಿಸುವಂತೆ ಹಿಂಸಿಸತೊಡಗಿತು. ಆದರೂ ಸಿರಿಯಾದ ಶಿಕ್ಷಣ ಸಂಸ್ಥೆಗಳಲ್ಲಿ ಬುರ್ಖಾ ಧರಿಸದಂತೆ ನಿಷೇಧ ಹೇರಲಾಗಿತ್ತು.
ಇನ್ನು ಆಸ್ಟ್ರೇಲಿಯಾ, ಬೆಲ್ಜಿಯಂ, ಫ್ರಾನ್ಸ್, ಜರ್ಮನಿ, ಇಟಲಿ, ಆಸ್ಟ್ರೇಲಿಯಾ ಮುಂತಾದ ಕಡೆಗಳಲ್ಲಿ ಬುರ್ಖಾಕ್ಕೆ ಸಂಪೂರ್ಣ ನಿಷೇಧ ಹೇರಲಾಗಿದೆ. ಆದರೆ ಭಾರತದಲ್ಲಿ ಮಾತ್ರ ಬುರ್ಖಾದ ಬಗ್ಗೆ ಯಾರೂ ಸೊಲ್ಲೆತ್ತಿಲ್ಲ. ಇಷ್ಟೆಲ್ಲಾ ಭಯೋತ್ಪಾದಕ ಕೃತ್ಯ ನಡೆದರೂ ಬುರ್ಖಾದ ಬಗ್ಗೆ ಮಾತಾಡಿಲ್ಲ. ಇನ್ನು ಭಾರತದ ಹವಾಗುಣ ಕಪ್ಪು ಬಟ್ಟೆಗೆ ಸೂಕ್ತವಲ್ಲ. ಬುರ್ಖಾದಿಂದ ಸಂಪೂರ್ಣವಾಗಿ ಮೈಮುಚ್ಚಿದರೆ ಅನಾರೋಗ್ಯ ಸಮಸ್ಯೆಗಳೂ ಕಾಡುತ್ತದೆ. ಆದ್ದರಿಂದ ಭಾರತದಲ್ಲೂ ಇಂಥಾ ಪದ್ದತಿಯನ್ನು ನಿಗ್ರಹಿಸಲು ಮುಸ್ಲಿಂ ಮಹಿಳೆಯರು ಉಗ್ರ ಹೋರಾಟ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. 
ಇಂದು ಭಾರತದಲ್ಲಿ ಮುಸ್ಲಿಂ ಮಹಿಳೆಯರಿಗೆ ಶಿಕ್ಷಣ ನೀಡುತ್ತಿಲ್ಲ. ಅವರ ಶಿಕ್ಷಣವನ್ನು ಮೊಟಕುಗೊಳಿಸಲಾಗುತ್ತಿದೆ. ಮನೆಯಲ್ಲಿ ಮನೆಕೆಲಸ ಮಾಡುತ್ತಾ ಚಾಕರಿ ಮಾಡಿಸಿ ಶೋಷಣೆ ಮಾಡಲಾಗುತ್ತದೆ. ಅವರನ್ನು ಸಮಾರಂಭ, ಮದುವೆ ಇತ್ಯಾದಿ ಕಡೆಗಳಿಗೆ ಕರೆದೊಯ್ಯುತ್ತಿಲ್ಲ. ಅಲ್ಲದೆ ಮಸೀದಿಗಳಿಗೂ ಮಹಿಳೆಯರಿಗೆ ನಿಷೇಧ ಹೇರಲಾಗಿದೆ. ಆದ್ದರಿಂದ ಕೇವಲ ತಲಾಖ್ ನಿಷೇಧದಿಂದ ಮುಸ್ಲಿಂ ಮಹಿಳೆಯರ ಶೋಷಣೆ ನಿಲ್ಲುತ್ತದೆ ಎಂದು ಹೇಳಲಾಗುವುದಿಲ್ಲ. ಜೊತೆಗೆ ಅವರ ಇತರ ಸಾಮಾಜಿಕ ಸಮಸ್ಯೆಗಳೂ ನಿಂತರೆ ಮುಸ್ಲಿಂ ಮಹಿಳೆಯರು ಸ್ವತಂತ್ರ್ಯವಾಗಿ ಜೀವನ ನಡೆಸಬಹುದಾಗಿದೆ. ಮುಸ್ಲಿಂ ಮಹಿಳೆಯರೇ ಸ್ವತಃ ಚಿಂತಿಸುವ ಕಾಲ ಬಂದಿದೆ.
 
ಚೇಕಿತಾನ
Tags

Related Articles

Close