ಅಂಕಣ

ತಾಜ್ ಮಹಲ್ ಒಂದು ವೈದಿಕ ದೇವಾಲಯವಾಗಿತ್ತೇ? ಹೌದೆನ್ನುತ್ತದೆ ಇತಿಹಾಸದ ನಿಗೂಢ ಸಾಕ್ಷಿಗಳು!

ಪ್ರೊಫೆಸರ್ ಪಿ.ಎನ್. ಓಕ್ ಹೊರತುಪಡಿಸಿ ಯಾರೊಬ್ಬರೂ ತಾಜ್ ಮಹಲ್ ಬಗ್ಗೆ ಎಂದಿಗೂ ಪ್ರಶ್ನಿಸಲಿಲ್ಲ, ವೈದಿಕ ದೇವಾಲಯವನ್ನಯ ತಾಜ್ ಮಹಲ್ ಎಂದು ಇಡೀ ವಿಶ್ವವನ್ನೇ ಮೋಸಗೊಳಿಸಿದ್ದಾರೆ ಅಂತ ಪ್ರೊಫೆಸರ್ ಪಿ.ಎನ್. ಓಕ್ ಅವರು ತಮ್ಮ ತಾಜ್ ಮಹಲ್ ಎಂಬ ಪುಸ್ತಕದಲ್ಲಿ ಹೇಳುತ್ತಾರೆ.

ಪ್ರೊಫೆಸರ್ ಪಿ.ಎನ್. ಓಕ್ ತಾವು ಬರೆದ ” ತಾಜ್ ಮಹಲ್” ಎಂಬ ಪುಸ್ತಕದಲ್ಲಿ ತಾಜ್ ಮಹಲಿನ ರಹಸ್ಯವನ್ನು ಬಯಲು ಮಾಡುತ್ತಾ ಹೋಗುತ್ತಾರೆ. ಅವರು ಹೇಳಿರುವಂತೆ ತಾಜ್ ಮಹಲ್ ರ ಮುಮ್ತಾಜಳ ಗೋರಿಯಾಗಿರಲಿಲ್ಲ ಬದಲಿಗೆ ಅದೊಂದು ಸನಾತನ ಹಿಂದೂಗಳ ಪವಿತ್ರ ದೇವಾಲಯವಾಗಿತ್ತು.ಅದನ್ನು “ತೇಜೋ ಮಹಾಲಯ” ಎ೦ದು ಕರೆಯುತ್ತಿದ್ದರು.ಅದೊಂದು ಶಿವನ ದೇವಾಲಯವಾಗಿತ್ತು.

ಪ್ರೊಫೆಸರ್ ಪಿ.ಎನ್. ಓಕ್ ತಮ್ಮ ಸ೦ಶೋಧನೆಯ ಪ್ರಕಾರ ತೇಜೋ ಮಹಾಲಯವನ್ನು ಅಂದಿನ ಜೈಪುರದ ರಾಜನಾಗಿದ್ದ ಜೈಸಿಂಗನಿಂದ ಕಿತ್ತುಕೊಳ್ಳಲಾಗಿತ್ತು ಎಂದು ಹೇಳುತ್ತಾರೆ.

ಶಹ ಜಹಾನ್ ತನ್ನ “ಬಾದಶಹನಾಮ“ದಲ್ಲಿ ರಾಜಾ ಜೈಸಿಂಗನಿಂದ ಆಗ್ರಾದ ಅಸಾಧಾರಣವಾದ ಸುಂದರ ಭವ್ಯ ಮಹಲು ಮತ್ತು ಸುಂದರ ಅರಮನೆಯನ್ನು ಮುಮ್ತಾಜಳ ಶವಸಂಸ್ಕಾರಕ್ಕೆ ಪಡೆದದ್ದನ್ನು ಉಲ್ಲೇಖಿಸಿದ್ದಾನೆ.

ತಾಜ್ ಕಟ್ಟಡವನ್ನು ತನಗೆ ಒಪ್ಪಿಸಿ ಶರಣಾಗುವಂತೆ ಶಹ ಜಹಾನ್ ಎರಡು ಆಜ್ಞಾ ಪತ್ರಗಳನ್ನು ಅಂದಿನ ರಾಜನಿಗೆ ಕಳಿಸಿದ್ದನಂತೆ. ಜೈಪುರದ ಮಾಜಿ ಮಹಾರಾಜರು ಈಗಲೂ ತನ್ನ ರಹಸ್ಯ ಸಂಗ್ರಹಣೆಯಲ್ಲಿ ಎರಡು ಆದೇಶಗಳನ್ನು ಉಳಿಸಿಕೊಂಡಿದ್ದಾರೆ.

ಮುಸಲ್ಮಾನ ದೊರೆಗಳು ತಾವು ವಶಪಡಿಸಿಕೊಂಡ ದೇವಾಲಯಗಳು ಮತ್ತು ಅರಮನೆಗಳನ್ನು ಸತ್ತ ಪ್ರಜೆಗಳ ಶವಸಂಸ್ಕಾರಕ್ಕೆ ಬಳಸುತ್ತಿದ್ದರು. ಈ ಪದ್ದತಿ ಮುಸ್ಲಿಂ ಆಡಳಿತಗಾರರಲ್ಲಿ ಸಾಮಾನ್ಯವಾದ ಅಭ್ಯಾಸವಾಗಿತ್ತು.

ಉದಾಹರಣೆಗೆ ಹುಮಾಯೂನ್, ಅಕ್ಬರ್, ಇತ್ಮುದ್-ಉದ್-ದೌಲಾ ಮತ್ತು ಸಫ್ದರ್ ಜಂಗ್ ಮುಂತಾದವರ ಶವಸಂಸ್ಕಾರಗಳನ್ನು ವಶಪಡಿಸಿಕೊಂಡ
ಅರಮನೆಗಳಲ್ಲಿಯೇ ಮಾಡಿದ್ದರು ಎಂಬುದನ್ನು ಇತಿಹಾಸದಿಂದ ತಿಳಿಯಬಹುದು.

ಪ್ರೊಫೆಸರ್ ಪಿ.ಎನ್. ಓಕ್ ಅವರ ವಿಚಾರಣೆಯು ತಾಜ್ ಮಹಲ್ ಹೆಸರಿನೊಂದಿಗೆ ಪ್ರಾರಂಭವಾಗುತ್ತದೆ. “ಮಹಲ್” ಎಂಬ ಪದವು ಅವರ ಪ್ರಕಾರ ಆಫ್ಘಾನಿಸ್ಥಾನದಿ೦ದ ಆಲ್ಜೀರಿಯಾವರೆಗಿನ ಯಾವ ಮುಸ್ಲಿಂ ರಾಷ್ಟ್ರಗಳಲ್ಲಿಯೂ ಕಟ್ಟಡವನ್ನು “ಮಹಲ್ “ ಎ೦ದು ಕರೆಯುವುದಿಲ್ಲ. “ತಾಜ್ ಮಹಲ್ “ ಎನ್ನುವ ಪದವು “ “ಮುಮ್ತಾಜ್ ಮಹಲ್ “ ಎನ್ನುವ ಪದದಿಂದ ಉತ್ಪತ್ತಿಯಾದುದೆಂಬ ಇತಿಹಾಸಕಾರರ ಹೇಳುವುದನ್ನು ಎರಡು ರೀತಿಯಲ್ಲಿ ಪ್ರೊಫೆಸರ್ ಓಕ್ ಅವರು ತರ್ಕಕ್ಕೆ ಒಳಪಡಿಸುತ್ತಾರೆ.

1. ಮುಮ್ತಾಜಳ ನಿಜವಾದ ಹೆಸರು “ಮುಮ್ತಾಜ್-ಉಲ್- ಝಮಾನಿ“ ಹಾಗಾದರೆ ಇತಿಹಾಸಕಾರು ಮುಮ್ತಾಜ್ ಮಹಲ್ ಹೆಸರಿನಿಂದ ತಾಜ ಮಹಲ್ ಎಂಬ ಹೆಸರು ಬಂತು ಅಂತ ಹೇಳಿ ಇತಿಹಾಸಕ್ಕೆ ತಿಪ್ಪೆ ಸವರಿದ್ದಾರೆ.

2. ಕಟ್ಟಡದ ಹೆಸರು ಎಂದು ಉಳಿದ ಹೆಸರನ್ನು ಮಹಿಳಾ ಹೆಸರಿನಿಂದ ‘ಮುಮ್’ ಎಂಬ ಮೊದಲ ಮೂರು ಅಕ್ಷರಗಳು ಬಿಟ್ಟುಬಿಡುವುದಿಲ್ಲ. ಮುಮ್- ತಾಜ್ ಗಳಲ್ಲಿ ಮುಖ್ಯವಾದದ್ದೇ “ಮುಮ್“ ಅದನ್ನೇ ಕತ್ತರಿಸಿ ಕೇವಲ “ತಾಜ್ ಮಹಲ್“ ಎಂದಿಡುತ್ತಾರೆಯೇ? ಎಂಬುದು ಪ್ರೊಫೆಸರ್ ಓಕ್ ಅವರ ಪ್ರಶ್ನೆ. ಅವರ ಪ್ರಕಾರ ಈ ತಾಜ್ ಮಹಲ್ ಎನ್ನುವ ಪದವು “ ತೇಜೋ ಮಹಾಲಯ“ ಎಂಬ ನಿಜವಾದ ಪದದ ವಿಕೃತ ರೂಪವಷ್ಟೆ. ತೇಜೋ ಮಹಾಲಯ ಎಂಬುದು ತಾಜ್ ಮಹಲ್ ಎಂದು ವಿಕೃತಿಗೊಂಡಿತು.

ಮುಮ್ತಾಜ್ ಮತ್ತು ಷಹ ಜಹಾನ್ ಅವರ ಪ್ರೇಮ ಕಥೆಯು ಷಾಹಜಹಾನನ ಆಸ್ಥಾನ ಕವಿಗಳ,ಲೇಖಕರ, ಇತಿಹಾಸಕಾರರ ಮತ್ತು ಅವ್ಯವಸ್ಥೆಯ ಪುರಾತತ್ತ್ವಜ್ಞರ ಕಟ್ಟುಕಥೆ ಎಂದು ಪ್ರೊಫೆಸರ್ ಓಕ್ ಅವರು ಹೇಳುತ್ತಾರೆ.

ಶಹ ಜಹಾನನ ಕಾಲದ ಅವನ ಆಸ್ಥಾನದ ಯಾವುದೇ ದಾಖಲೆಗಳಲ್ಲಿ ಅವರಿಬ್ಬರ ಪ್ರೇಮಕಥೆಯ ಬಗ್ಗೆ ಉಲ್ಲೇಖವಿಲ್ಲದ್ದನ್ನು ಪ್ರೊಫೆಸರ್ ಓಕ್ ಅವರು ಒತ್ತಿ ಹೇಳುತ್ತಾರೆ. ಅಲ್ಲದೆ ಪ್ರೊಫೆಸರ್ ಓಕ್ ಅವರು ತಾಜ್ ಮಹಲ್ ಕಟ್ಟಡವು ಶಹ ಜಹಾನನ ಕಾಲಕ್ಕಿಂತಲೂ ಎಷ್ಟೋ ವರ್ಷಗಳ ಮುಂಚಿನದ್ದೆಂದೂ,ಅಲ್ಲಿ ಆಗ್ರಾದ ರಜಪೂತರಿ೦ದ ಪೂಜಿಸಲ್ಪಡುತ್ತಿದ್ದ, ಈಶ್ವರ (ಶಿವನ) ದೇವಾಲಯವಿತ್ತು ಎಂಬುದಕ್ಕೆ ಹಲವಾರು ದಾಖಲೆಗಳನ್ನು ಪ್ರೊಫೆಸರ್ ಓಕ್ ಅವರು ನೀಡುತ್ತಾರೆ. ಉದಾಹರಣೆಗೆ,

1. ನ್ಯೂಯಾರ್ಕಿನ ಪ್ರೊಫೆಸರ್ ಮರ್ವಿನ್ ಮುಲ್ಲರ್ ತಾಜ್ ಮಹಲ್ ಕಟ್ಟಡದ ನದಿ ದಡದ ಕಡೆಗೆ ಇರುವ ಬಾಗಿಲಿನ ಅವಶೇಷಗಳನ್ನು ತೆಗೆದುಕೊಂಡು ಕಾರ್ಬನ್ ಟೆಸ್ಟ್ ಗೆ ಒಳಪಡಿಸಿದಾಗ ಆ ಅವಶೇಷಗಳು ತಾಜ್ ಮಹಲಿನ ಕಾಲಕ್ಕಿಂತ 300 ವರ್ಷ ಪುರಾತನದ್ದು ಎಂದು ಸಾಬೀತು ಮಾಡಿವೆ.

2. 1638ರಲ್ಲಿ ಆಗ್ರಾಕ್ಕೆ ಭೇಟಿ ನೀಡಿದ ಯುರೋಪ್ ಪ್ರವಾಸಿಗ( ಮುಮ್ತಾಜಳ ಸಾವಿನ ಕೇವಲ ಏಳು ವರ್ಷಗಳ ನಂತರ) ತನ್ನ ಪ್ರವಾಸದ ಟಿಪ್ಪಣಿಯಲ್ಲಿ
ಅಲ್ಲಿಯ ಪ್ರವಾಸದ ಬಗ್ಗೆ,ಸ್ಥಳದ ಬಗ್ಗೆ, ಜನ-ಜೀವನದ ಬಗ್ಗೆ ವಿವರಣೆ ನೀಡಿದ್ದಾನೆ. ಆದರೆ ಎಲ್ಲಿಯೂ ಅವನು ತನ್ನ ಟಿಪ್ಪಣಿಯಲ್ಲಿ ತಾಜ್ ಮಹಲ್ ಕಟ್ಟಡದ ನಿರ್ಮಾಣದ ಬಗ್ಗೆ ಉಲ್ಲೇಖಿಸಿಲ್ಲ.

3.ಮುಮ್ತಾಜ್ ಮರಣದ ಒಂದು ವರ್ಷದೊಳಗೆ ಆಗ್ರಾಕ್ಕೆ ಪೀಟರ್ ಮು೦ಡೆ ಎನ್ನುವ ಬ್ರಿಟೀಷ್ ಪ್ರವಾಸಿಗ ಭೇಟಿ ಕೊಟ್ಟಿದ್ದ. ಶಹ ಜಹಾನ್
ಸಮಯಕ್ಕಿಂತಲೂ ಮೊದಲಿನಿಂದಲೇ ತಾಜ್ ಕಟ್ಟಡವು ಆಗ್ರಾದ ಆಕರ್ಷಣೀಯ ಸ್ಥಳವೆಂಬುದನ್ನು ತನ್ನ ಟಿಪ್ಪಣೆಯಲ್ಲಿ ಉಲ್ಲೇಖಿಸುತ್ತಾನೆ.

4.ಪ್ರೊಫೆಸರ್ ಓಕ್ ಅವರು ತಾಜ್ ಕಟ್ಟಡವು ಮೊದಲು ಒಂದು ಹಿಂದೂ ಕಟ್ಟಡವಾಗಿತ್ತು ಎಂದು ಖಚಿತ ಪಡಿಸಲು, ಓಕ್ ಅವರು ತಾಜ್ ಕಟ್ಟಡದಲ್ಲಿ ಕಂಡ ಹಲವು ಕಟ್ಟಡ ನಿರ್ಮಾಣ ಗೊಂದಲಗಳನ್ನು ಉಲ್ಲೇಖಿಸುತ್ತಾರೆ. ತಾಜ್ ಕಟ್ಟಡದ ಗೊಮ್ಮಟದ ಮೇಲಿನ ಕಲಶದ ಚಿತ್ರ,ರಾಜ ಸಭಾಂಗಣದ ಗೋಡೆಯಲ್ಲಿ ಬಿಡಿಸಲಾಗಿರುವ ಕಲಶದ ಚಿತ್ರ, ಪ್ರವೇಶ ದ್ವಾರದ ಗೋಡೆಯ ಮೇಲಿನ ಕೆಂಪು ಕಮಲದ ಚಿತ್ರ, ಸೀಲ್ ಮಾಡಲಾಗಿರುವ ಕೋಣೆಗಳ ಹಿಂಬದಿಯ ಚಿತ್ರ, ಪುರಾತನ ವೈದಿಕ ಶೈಲಿಯಲ್ಲಿ ನಿರ್ಮಾಣಗೊಂಡ ಕಾರಿಡಾರ್ ಗಳು,ಸೀಲ್ ಮಾಡಲಾದ ಕೊಠಡಿಗಳ ಚಿತ್ರ, ಗೋಡೆಗಳ ಮೇಲೆ ಬರೆಯಲಾದ ಹೂಗಳ ನಡುವಿನ “ ಓಂ“ ಸಂಕೇತ, ಸೀಲ್ ಮಾಡಲಾದ ಕೋಣೆಗಳ ಮೇಲ್ಛಾವಣಿಗಳ ಮೇಲೆ ಬಿಡಿಸಲಾದ ವೈದಿಕ ಶೈಲಿಯ ಚಿತ್ತಾರಗಳು ತಾಜ್ ಮಹಲ್ ಹಿಂದೂಗಳ ತೇಜೋ ಮಹಾಲಯವಾಗಿತ್ತು ಎಂಬುದನ್ನು ಸಾಬೀತುಪಡಿಸುತ್ತವೆ.

ಇವತ್ತಿಗೂ ತಾಜ್ ಕಟ್ಟಡದ ಕೆಲವು ಕೋಣೆಗಳ ಬೀಗ ಹಾಕಲಾಗಿದೆ. ಅವುಗಳು ಶಹ ಜಹಾನನ ಕಾಲದಿಂದಲೂ ಬೀಗ ಹಾಕಲ್ಪಟ್ಟಿದ್ದು,ಇವಾಗಲೂ ಬೀಗ ಹಾಗೆಯೇ ಇವೆ. ಇವತ್ತಿಗೂ ಸಾರ್ವಜನಿಕರಿಗೆ ಕೋಣೆಗಳ ಒಳಗೆ ಇರುವುದನ್ನು ತೋರಿಸುವ ಪ್ರಯತ್ನ ಮಾಡಲಾಗಿಲ್ಲ. ಆ ಕೋಣೆಯೊಳಗಿನ ರಹಸ್ಯ ಇಂದಿಗೂ ರಹಸ್ಯವಾಗಿಯೇ ಇದೆ. ಆ ಕೋಣೆಗಳಲ್ಲಿ ಭಗ್ನಗೊಂಡ ಶಿವನ ಮೂರ್ತಿ ಹಾಗೂ ಹಿಂದೂಗಳ ದೇವರ ಪೂಜಾ ಸಾಮಗ್ರಿಗಳನ್ನು ಇರಬಹುದೆಂದು ಪ್ರೊಫೆಸರ್ ಓಕ್ ಅವರು ಸಂಶಯ ವ್ಯಕ್ತಪಡಿಸುತ್ತಾರೆ.

ಇಂದಿರಾ ಗಾಂಧಿಯವರ ರಾಜಕೀಯ ಕಾಲಘಟ್ಟದಲ್ಲಿ ಓಕ್ ಅವರ ತಾಜ್ ಮಹಲ್ ಬಗೆಗಿನ ಸತ್ಯದ ಪುಸ್ತಕವನ್ನು ನಿಷೇಧಿಸಲು ಪ್ರಯತ್ನಿಸಿದ್ದರು. ಆ ಪುಸ್ತಕದ ಪ್ರಕಾಶಕರಿಗೂ ಖಡಕ್ ಆಗಿ ಪ್ರಕಟಣಾ ಕಾರ್ತ ನಿಲ್ಲಿಸುವಂತೆ ಹೇಳಿದ್ದರು. ಎಷ್ಟೇ ಆಗಲಿ ನೆಹರೂ ಮನೆತನದವರು ಅಲ್ವಾ? ಇವರ ಅಪ್ಪನೆ ಅಲ್ವಾ ಭಾರತದ ಇತಿಹಾಸಕ್ಕೆ ತಿಪ್ಪೆ ಸವರಿ,ಟೊಳ್ಳು ಇತಿಹಾಸವನ್ನು ತುಂಬೊಸಿದ್ದು. ಅಪ್ಪನ ಬುದ್ಧಿ ಎಲ್ಲಿ ಹೋಗುತ್ತೆ ಹೇಳಿ. ನೆಹರೂ ಮನೆತನದವರು ಮತ್ತು ಕಾಂಗ್ರೆಸ್ಸಿಗರು ಮುಸ್ಲಿಂ ತುಷ್ಟೀಕರಣದಲ್ಲಿ ಮೊದಲ ಸಾಲಿನಲ್ಲಿದ್ದು,ಹಿಂದು ವಿರೋಧಿಗಳಾಗಿದ್ದಾರೆ. ಆದ ಕಾರಣ ಇತಿಹಾಸವನ್ನು ಮುಚ್ಚಿಟ್ಟು ಮುಸ್ಲಿಂ ಓಲೈಕೆಗೆ ಮುಂದಾಗಿದ್ದಾರೆ.

Source : MissionISI – Blog

Stephen Knapp – Vedic temple

Hindu Net – History of Taj

 

-ಮಹೇಶ್

Tags

Related Articles

Close