ಪ್ರಚಲಿತ

ತಾನು ದಲಿತ ಸ್ನೇಹಿ ಎಂದು ಬೋಂಗು ಬಿಟ್ಟ ಸಮಾಜವಾದಿ ಸಿದ್ದರಾಮಯ್ಯನಿಗೆ ದಲಿತ ಸ್ವಾಮೀಜಿಗಳ ಜೊತೆ ಊಟಮಾಡಲು ಮೈಲಿಗೆಯಾಯಿತೇ?

ದಲಿತ ಸ್ನೇಹಿ ಎಂದೇ ಬಿಂಬಿತರಾಗಿರುವ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ಓಲೈಕೆಗೆ ಸಾಕಷ್ಟು ತಂತ್ರ ನಡೆಸುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ!! ಆದರೆ ದಲಿತರ ಬಗ್ಗೆ ಅಪಾರ ಕಾಳಜಿ ವಹಿಸಿರುವ ಸಿಎಂ ಸಿದ್ದರಾಮಯ್ಯನವರ ದಲಿತ ಪ್ರೇಮ ಕೊನೆಗೂ ಬಯಲಾಗಿದೆ. ಹೇಗೆ ಗೊತ್ತೇ? ದಲಿತ ಸ್ವಾಮೀಜಿಗಳಿಗೆ ಆಯೋಜಿಸಿದ್ದ ಭೋಜನ ಕೂಟದಲ್ಲಿ ಸಮಾಜವಾದಿ ಸಿದ್ದರಾಮಯ್ಯ ಮಾತ್ರ ಸ್ವಾಮೀಜಿಗಳ ಜೊತೆ ಕೂತು ಊಟ ಮಾಡದೆ ಅಲ್ಲಿಂದ ತಪ್ಪಿಸಿಕೊಂಡು ಸ್ವಾಮೀಜಿಗಳಿಗೆ ಅವಮಾನ ಮಾಡಿದ್ದಾರೆ.

ಏನು ವಿಪರ್ಯಾಸ ಸ್ವಾಮಿ!! ದಲಿತರ ಸ್ನೇಹಿ, ಸಮಾಜವಾದಿ ಎಂದೇ ಕರೆಯಲ್ಪಡುವ ಸಿಎಂ ಸಿದ್ದರಾಮಯ್ಯ ಅವರು ದಲಿತರ ಸ್ವಾಮೀಜಿಗಳೊಂದಿಗೆ ಊಟ ಮಾಡಲು ಒಲ್ಲೆ ಎಂದಿರುವುದಾದರೂ ಯಾಕೆ?? ಮೊನ್ನೆ ಮೊನ್ನೆಯಷ್ಟೇ ಸಿದ್ದರಾಮಯ್ಯ ಅವರು ಧರ್ಮಸ್ಥಳಕ್ಕೆ ಮೀನು ತಿಂದು ದೇವಸ್ಥಾನಕ್ಕೆ ಹೋಗಿದ್ದಲ್ಲದೇ ತಾನು ಮಾಡಿದ್ದು ಸರಿ ಎಂದು ಸಮರ್ಥಿಸಿಕೊಂಡು ತನ್ನನ್ನು ಬೇಡರಗಣ್ಣಪ್ಪನಿಗೆ ಹೋಲಿಸಿ ಕೊಂಡಿದ್ದರು. ಆದರೆ ದಲಿತರ ಜೊತೆ ಊಟ ಮಾಡಬೇಕಾದ ಪ್ರಮೇಯ ಬಂದಾಗ ಅಲ್ಲಿಂದ ತಪ್ಪಿಸಿಕೊಂಡರು.

ಧರ್ಮಸ್ಥಳಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮೀನು ಊಟ ಸೇವಿಸಿ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿದ್ದರು ಎಂದು ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಈ ಕುರಿತು ಸಿಎಂ
ಪ್ರತಿಕ್ರಿಯಿಸಿ, ದೇವರು ಮಾಂಸಾಹಾರ ತಿಂದು ಬರಬೇಡ ಅಂತ ಎಲ್ಲೂ ಹೇಳಿಲ್ಲ ಎಂದು ಬೇಡರ ಕಣ್ಣಪ್ಪನ ಉದಾಹರಣೆ ಕೊಟ್ಟು ತಮ್ಮ ನಡೆಯನ್ನು
ಸಮರ್ಥಿಸಿಕೊಂಡಿದ್ದರು!! ಅಷ್ಟೇ ಅಲ್ಲದೇ, ನಿನ್ನೆಯಷ್ಟೇ ಸಿಎಂ ಸಿದ್ದರಾಮಯ್ಯ ಅವರು ” ನಾನು ಕೇವಲ ಮೀನು ಮಾತ್ರ ಸೇವಿಸಿಲ್ಲ ಕೋಳಿಯೂ ಸೇವಿಸಿದ್ದೇ ಎಂದು ಹೇಳಿ ಈ ವಿಚಾರಕ್ಕೆ ಇನ್ನಷ್ಟು ತುಪ್ಪ ಸುರಿದಿದ್ದರು.

ಹಿಂದುಳಿದ ವರ್ಗಕ್ಕೆ ಸೇರಿದ ಸುಮಾರು 30ಕ್ಕೂ ಹೆಚ್ಚು ಸ್ವಾಮಿಗಳು ಮಂಗಳವಾರ ಸಿಎಂ ಸಿದ್ದರಾಮಯ್ಯ ಅವರನ್ನು ಗೃಹಕಛೇರಿ ಕೃಷ್ಣಾದಲ್ಲಿ ಭೇಟಿಯಾಗಲು
ಬಯಸಿದ್ದರು. ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಅವರು ಇದಕ್ಕೆ ವೇದಿಕೆ ಕಲ್ಪಿಸಿದ್ದರು. ಈ ವೇಳೆ ಸ್ವಾಮಿಗಳು ನಗರದಲ್ಲಿ ಎಲ್ಲಾ ಮಠಗಳಿಗೆ ನಿವೇಶನ ಮತ್ತು ಬಜೆಟ್‍ನಲ್ಲಿ ಅನುದಾನ ಕಲ್ಪಿಸಲು ಮನವಿ ಸಲ್ಲಿಸಿದರು. ಈ ಮನವಿಗೆ ಸಿಎಂ ಸಿದ್ದರಾಮಯ್ಯ ಸೂಕ್ತವಾಗಿ ಸ್ಪಂದಿಸಿದ್ದರು.

ಇದಾದ ಬಳಿಕ ಎಚ್. ಆಂಜನೇಯ ನಿವಾಸದಲ್ಲಿ ಹಿಂದುಳಿದ ವರ್ಗ ಮತ್ತು ದಲಿತ ಸ್ವಾಮೀಜಿಗಳಿಗೆ ಸಸ್ಯಾಹಾರಿ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಹಾಗಾಗಿ ಊಟದಲ್ಲಿ ಹೋಳಿಗೆ-ತುಪ್ಪ, ಕಡುಬು ಅಂತೆಲ್ಲ ನಾನಾ ವಿಧದ ಭಕ್ಷ ಭೋಜನಗಳು ಇತ್ತು!! ಅಷ್ಟೇ ಅಲ್ಲದೇ, “ಸಿದ್ದರಾಮಯ್ಯ ವಡೆ”ಯೂ ಇತ್ತು!! ಇಷ್ಟೆಲ್ಲಾ ವ್ಯವಸ್ಥೆಗಳು ಇತ್ತಾದರೂ ನಮ್ಮ ಸಿದ್ದರಾಮಯ್ಯ , ಅಂದರೆ ಸಮಾಜವಾದಿ ಸಿದ್ದರಾಮಯ್ಯ ಅವರು ದಲಿತ ಸ್ವಾಮೀಜಿಗಳೊಂದಿಗೆ ಊಟ ಸವಿಯಲು ಹೋಗಲಿಲ್ಲ. ಬದಲಿಗೆ ಸಚಿವರಾದ ಆರ್.ಬಿ.ತಿಮ್ಮಾಪುರ ಹಾಗೂ ಎಚ್.ಎಂ ರೇವಣ್ಣ ಅವರ ಜತೆಯಲ್ಲಿ, ಅದೂ ಕೂಡ ಪ್ರತ್ಯೇಕ ಕೋಣೆಯಲ್ಲಿ ಊಟ ಮಾಡಿ ಸ್ವಾಮೀಜಿಗಳ ಕೆಂಗಣ್ಣಿಗೆ ತುತ್ತಾದರು. ತನ್ನನ್ನು ತಾನು ದಲಿತಪರ ಎಂದು ಸಮರ್ಥಿಸಿಕೊಳ್ಳುವ ಸಿದ್ದರಾಮಯ್ಯ ಅವರು ದಲಿತರ ಜೊತೆ ಊಟಮಾಡಬೇಕಾದ ಸಂದರ್ಭ ಬಂದಾಗ ಮಾತ್ರ ಅಲ್ಲಿಂದ ತಪ್ಪಿಸಿಕೊಂಡು ವಿವಾದ ಸೃಷ್ಟಿಸಿದ್ದಾರೆ.

ಬಿಜೆಪಿ ನಾಯಕರು ದಲಿತರ ಮನೆಯಲ್ಲಿ ಊಟ ಮಾಡುವುದಿಲ್ಲ ಎಂದೆಲ್ಲಾ ಅಪಪ್ರಚಾರವನ್ನು ಮಾಡಿದ ನೀವು ದಲಿತರೊಂದಿಗೆ ಸಮಾನ ಪಂಕ್ತಿಯಲ್ಲಿ
ಕುಳಿತುಕೊಳ್ಳುವಾಗ ಜಾತಿ ವ್ಯವಸ್ಥೆ ಊಟಕ್ಕೆ ಅಡ್ಡವಾಯಿತೇ?? ಅಷ್ಟೊಂದು ನಿಮ್ಮಲ್ಲಿ ದಲಿತ ಹಾಗೂ ಹಿಂದುಳಿದವರ ಬಗ್ಗೆ ಪ್ರೇಮ ಉಕ್ಕಿ ಹರಿಯುತ್ತಿದ್ದರೆ ನಿಮಗೆ
ಊಟದಲ್ಲೂ ಬೇರೆ ಕೋಣೆ ಬೇಕಿತ್ತೇ??!! ಧರ್ಮಸ್ಥಳಕ್ಕೇ ಮೀನು ಊಟ ಸೇವಿಸಿ ಹೋಗುವ ನೀವು ಬೇಡರ ಕಣ್ಣಪ್ಪನನ್ನು ಸಮರ್ಥಿಸಿಕೊಂಡಿದ್ದೀರಿ!! ಇನ್ನೂ ಇದಕ್ಕೇ ಯಾವ ಪುರಾಣದ ಪುರುಷರ ಸಮರ್ಥನೆಯನ್ನು ನೀಡುತ್ತಿರೋ ನಾ ಕಾಣೆ!!

ದಲಿತರಿಗೆ ವಿಶೇಷವಾಗಿ ಮೀಸಲಾತಿಯನ್ನು ಕಲ್ಪಿಸುವ ನಿಮಗೆ ಕರ್ನಾಟಕದಲ್ಲಿರುವ ರೈತರ ಕೂಗು ಕೇಳಲಿಲ್ಲವೇ??? ಸರಿ, ನಿಮ್ಮನ್ನು ದಲಿತ ಪ್ರೇಮಿ ಎಂದು
ಒಪ್ಪಿಕೊಳ್ಳುವ! ಆದರೆ ದಲಿತರ ಜೊತೆ ಊಟ ಮಾಡಲು ನಿಮಗೆ ಸಾಧ್ಯವಾಗಲಿಲ್ಲವೇ?? ಹಾಗಾದರೆ, ನಿಮಗೇನಾದರೂ ಸ್ಪೇಷಲ್ ಊಟ ಇತ್ತೋ ಹೇಗೆ??
ಇನ್ನೂ ಎಚ್. ಆಂಜನೇಯ ಅವರೇ, ” ಮಠಾಧೀಶರ ಊಟಕ್ಕೆ ರಾಜಕೀಯ ಲೇಪಬೇಡ. ಈ ಹಿಂದೆ ವೀರಶೈವ ಸ್ವಾಮೀಜಿಗಳೂ ಸಿದ್ದರಾಮಯ್ಯ ಅವರನ್ನು ಭೇಟಿ
ಮಾಡಿದ್ದರು. ಧರ್ಮಸ್ಥಳ ಬೇಟಿ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಮೀನು ಊಟ ಮಾಡಿದ್ದನ್ನು ವಿವಾದಗೊಳಿಸಿದ್ದು ಮೂರ್ಖತನ. ದೇವರ ಮುಂದೆ ಭಕ್ತಿ ಮುಖ್ಯವೇ ಹೊರತು ಊಟವಲ್ಲ. ಸಿದ್ದರಾಮಯ್ಯ ಹಂದಿ ಮಾಂಸ ತಿಂದು ಮಸೀದಿಗೆ ಹೋಗಲಿ ಎನ್ನುವವರು ಮೂರ್ಖರು” ಎಂದಿದ್ದೀರಿ!! ಹಾಗಾದರೆ ದಲಿತ ಸ್ವಾಮೀಜಿಗಳೊಂದಿಗೆ ಊಟ ಮಾಡಲು ನಿಮ್ಮ ಸಿದ್ದರಾಮಯ್ಯ ಅವರಿಗೆ ಯಾಕೆ ಸಾಧ್ಯವಾಗಲಿಲ್ಲ?? ದೇವರಲ್ಲಿ ಭಕ್ತಿ ಇದ್ದರೆ ಸಾಕು ಎಂದವರಿಗೆ, ದಲಿತರೊಂದಿಗೆ ಸಮಾನ ಪಂಕ್ತಿಯಲ್ಲಿ ಭೋಜನ ಮಾಡಲು ಏನು ಬೇಕು ಸ್ವಾಮಿ?

ಸುಳ್ಳು, ಪೆÇಳ್ಳು ಭರವಸೆಗಳನ್ನು ನೀಡುತ್ತಾ, ಪ್ರಜೆಗಳನ್ನು ಮರುಳು ಮಾಡುತ್ತಾ, ತಮ್ಮ ಬೊಕ್ಕಸದ ಹಣವನ್ನು ಏರಿಕೆಯ ಗತಿಯಲ್ಲಿ ನಿಯಂತ್ರಣ ಮಾಡುತ್ತಾ ಸಾಗುವ ನಿಮ್ಮಂಥವರಿಗೆ ಸಮಾನತೆ ಎಲ್ಲಿಂದ ಬರಬೇಕು!! ರೈತರ ಸಾಲಮನ್ನ ಮಾಡಲು ಹಣವಿಲ್ಲ. ಆದರೆ ದುಬಾರಿ ವಾಚ್‍ಗಾಗಿ ಲಕ್ಷಾಂತರ ಖರ್ಚುಮಾಡುತ್ತಿರಿ.. ಇನ್ನೂ ಟೀ ಕಾಫಿ ಬಿಸ್ಕೆಟ್ ವಿಚಾರವನ್ನು ಹೇಳಬೇಕಿಂದಿಲ್ಲ!! ಹೀಗಿರಬೇಕಾದರೆ ನಿಮ್ಮ ಹಣ, ಅಂತಸ್ತು ದಲಿತರೊಂದಿಗೆ ಊಟ ಮಾಡುವಲ್ಲಿ ಇದೆಲ್ಲಾ ಅಡ್ಡಿಯಾಯಿತೇ ಹೇಗೆ?

ಸಿದ್ದರಾಮಯ್ಯನವರ ದಲಿತ ಪ್ರೇಮ ಕೇವಲ ಓಟ್‍ಬ್ಯಾಂಕಿಗೋಸ್ಕರ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ!!

ಮೂಲ:https://vijaykarnataka.indiatimes.com/state/karnataka/swamiji-lunch/articleshow/61375346.cms

– ಅಲೋಖಾ

Tags

Related Articles

Close