ಪ್ರಚಲಿತ

ಥರ್ಡ್ ಗ್ರೇಡ್ ಚಮಚಾಗಳಿಗೆ ಗಡ ಗಡ ನಡುಗುವ ಚಳಿಗಾಲದಲ್ಲೂ ಬಿಸಿಮುಟ್ಟಿಸಿದ ಪ್ರಧಾನಿ ಮೋದಿ!!

ಮೋದಿ ಎನ್ನುವ ಹೆಸರೆಂದರೇ ಕನಸಲ್ಲೂ ಬೆಚ್ಚಿಬೀಳುವ ಕಾಂಗ್ರೆಸ್ಸಿಗರಿಗೆ ಈಗ ಆತನಿಗೆ ಜಗತ್ತಿನಾದ್ಯಂತ ಸಿಗುತ್ತಿರುವ ಜಗತ್ಪ್ರಸಿದ್ಧಿಯನ್ನ ನೋಡಲೂ ಆಗುತ್ತಿಲ್ಲ.

ಇಷ್ಟೇ ಯಾಕೆ ಇಲ್ಲೀವರೆಗೂ ಅಂದರೆ 2014 ರಿಂದ ನಡೆದ ಬಹುತೇಕ ಚುನಾವಣೆಗಳಲ್ಲಿ ಕಾಂಗ್ರೆಸ್ ನೆಲಕಚ್ಚಿದೆ, ಹಲವು ರಾಜ್ಯಗಳಲ್ಲಿ ತನ್ನ ಕೈಲಿದ್ದ ಅಧಿಕಾರಗಳನ್ನ ಕಳೆದುಕೊಂಡು ಕಂಗಾಲಾಗಿರುವ ಕಾಂಗ್ರೆಸ್ ಹೇಗಾದರೂ ಮಾಡಿ ಮೋದಿಯನ್ನ ಜನರಿಗೆ ವಿಲನ್ ಎಂಬ ರೀತಿಯಲ್ಲಿ ಚಿತ್ರಿಸಲು ದಿನಬೆಳಗಾದರೆ ಒಂದಿಲ್ಲೊಂದು ಕಿತಾಪತಿ, ನೀಚ ಕೃತ್ಯ ಕಾಂಗ್ರೆಸ್ ಮಾಡುತ್ತಲೇ ಇರ್ತಾರೆ.

ಮೋದಿ ಚಿಕ್ಕವಯಸ್ಸಿನಲ್ಲಿ ಕಡು ಬಡತನದ ಕಾರಣ ಗುಜರಾತಿನ ವಡನಗರ್ ರೇಲ್ವೆ ಸ್ಟೇಷನ್ನಿನಲ್ಲಿ ತಂದೆಯ ಜೊತೆ ಚಹಾ ಮಾರಿದ್ದರು. ಹೊಟ್ಟೆ ಪಾಡಿಗಾಗಿ ಚಹಾ ಮಾರುವುದು ತಪ್ಪೇ? ಮೋದಿ ಚಾಯ್ ಮಾರುವವನು ಅಂತ ಕಾಂಗ್ರೆಸ್ ಹೋದಲ್ಲೆಲ್ಲ ಮೋದಿಯನ್ನ ತೆಗಳುತ್ತ ಹೊರಟಿದೆ, ಇದೇ ಕಾಂಗ್ರೆಸ್ಸಿನ ನಾಯಕ ಮಣಿಶಂಕರ್ ಅಯ್ಯರ್ 2014 ರ ಲೋಕಸಭಾ ಚುನಾವಣೆಗೂ ಮುನ್ನ ಏನು ಹೇಳಿದ್ದ ಗೊತ್ತಾ?

“ಮೋದಿ ಚಿಕ್ಕವರಿದ್ದಾಗ ಚಾಯ್ ಮಾರಿದಾರೆ, ಈ ಚುನಾವಣೆಯ ನಂತರ ಬಂದು ನಮ್ಮ ಕಾಂಗ್ರೆಸ್ ಪಕ್ಷದ ಆಫೀಸಿ ಬಳಿ ಚಾಯ್ ಮಾರಲಿ” ಯಾಕ್ ಸ್ವಾಮಿ ಇಷ್ಟು ಹೊಟ್ಟೆ ಉರಿ? ಚಾಯ್ ಮಾರೋರು, ಮೂಟೆ ಹೊರೋರು, ಲೇಬರ್ ಕೆಲಸ ಮಾಡೋರು, ಕಡುಬಡತನದಿಂದ ಬೆಳೆದು ಬಂದ ಜನರು ರಾಜಕೀಯದಲ್ಲಿ ಬರಲೇಬಾರದಾ?

ಹಾಗಿದ್ದರೆ ನೆಹರು, ಇಂದಿರಾಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಯಂತಹ ಚಿನ್ನದ ಚಮಚ ಬಾಯಲ್ಲಿಟ್ಟುಕೊಂಡು ಹುಟ್ಟಿದವರಷ್ಟೇ ಈ ದೇಶದಲ್ಲಿ ಅಧಿಕಾರದಲ್ಲಿರಬೇಕಾ? ಅಷ್ಟಕ್ಕೂ ಮೋದಿ ಕಡು ಬಡಕುಟುಂಬದಿಂದ ಪ್ರಧಾನಿಯಾಗುವ ಮಟ್ಟಿಗೆ ಬೆಳೆದದ್ದೇ ತಪ್ಪಾ?

ಈಗ ಗುಜರಾತಿನ ಚುನಾವಣೆಯ ಕಾವು ಜೋರಾಗೇ ಏರಿತ್ತಿದೆ, ಈ ಬಾರಿ ಗುಜರಾತಿನಲ್ಲಿ ನಾವೇ ಅದಿಕಾರಕ್ಕೇರುತ್ತೇವಂತ ರಾಹುಲ್ ಬಾಬಾ ಗುಜರಾತಿನ ಗುಡಿ ಗುಂಡಾರ ಸುತ್ತುತ್ತಿದ್ದರೆ ಇತ್ತ ಕಾಂಗ್ರೆಸ್ ಚಮಚಾಗಳು ಮತ್ತೆ ತಮ್ಮ ಕೀಳುಮಟ್ಟದ ಪ್ರಚಾರ ಮಾಡಿದ್ದಲ್ಲಿ ಬ್ಯುಸಿಯಾಗಿದ್ದಾರೆ.

ಮೋದಿ ಅಂತಾರಾಷ್ಟ್ರೀಯ ನಾಯಕರ ಮುಂದೆ ಚಹಾ ಮಾರುತ್ತಿದ್ದಾರೆ ಎನ್ನುವ ರೀತಿಯಲ್ಲಿ ಚಿತ್ರಿಸಿ ಟ್ವೀಟ್ ಮಾಡಿದ್ದ ಕಾಂಗ್ರೆಸ್‌ ಯುವ ಘಟಕದ ದರಿದ್ರ ಕೆಲಸಕ್ಕೆ ಟ್ಟಿಟ್ಟರ್ ನಲ್ಲಷ್ಟೇ ಯಾಕೆ ದೇಶಾದ್ಯಂತ ವಿರೋಧಿಸಿದ್ದರು.

ಇಡೀ ಜಗತ್ತೇ ಮೋದಿಯೊಬ್ಬ ಸಮರ್ಥ ನಾಯಕ, ಕೆಚ್ಚೆದೆಯ ನಾಯಕ, ಗ್ಲೋಬಲ್ ಲೀಡರ್ ಅಂತೆಲ್ಲಾ ಹೊಗಳುತ್ತಿದ್ದರೆ ಕಾಂಗ್ರೆಸ್ ಮಾತ್ರ ಪ್ರಧಾನಿ ಎಂಬುದನ್ನೂ ನೋಡದೆ ಮೋದಿಯವರನ್ನ ಅತ್ಯಂತ ಕೀಳುಮಟ್ಟದಲ್ಲಿ ಟೀಕಿಸುತ್ತ ತಮ್ಮ ಮಾನ ತಾವೇ ಹರಾಜು ಹಾಕಿಕೊಳ್ಳುತ್ತಿದ್ದಾರೆ.

ಕಾಂಗ್ರೆಸ್ ಯುವಘಟಕದಿಂದ ದುಷ್ಪ್ರಚಾರ ನಡೆಸಿ ಕ್ಯಾಕರಿಸಿ ಉಗಿಸಿಕೊಂಡಿದ್ದ ಕಾಂಗ್ರೆಸ್ ಗೆ ಮೋದಿ ಮತ್ತೆ ಮಂಗಳಾರತಿ ಮಾಡಿದ್ದಾರೆ. ಹೌದು, ಚಹಾ ಮಾರುವವ ಎಂದು ಟೀಕಿಸಿದ್ದ ಕಾಂಗ್ರೆಸ್‌ಗೆ ಮೋದಿ ತಮ್ಮದೇ ಧಾಟಿಯಲ್ಲಿ ಪ್ರತ್ಯುತ್ತರ ನೀಡಿದ್ದಾರೆ.

ರಾಜ್‌ಕೋಟ್‌ನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಮೋದಿ, “ನಾನು ಚಹಾ ಮಾರಿದ್ದು ನಿಜ. ಚಹಾ ಮಾರುವವ ಕೂಡ ಹೌದು, ಆದರೆ ಎಂದಿಗೂ ದೇಶವನ್ನು ಮಾರಾಟ ಮಾಡಿಲ್ಲ. ಪ್ರತಿಪಕ್ಷಗಳಂತೆ ಇಂಥ ಕೀಳು ಮಟ್ಟಕ್ಕೆ ಇಳಿದಿಲ್ಲ” ಎಂದು ಕಾಂಗ್ರೆಸ್ ಗೆ ಟಾಂಗ್ ಕೊಟ್ಟರು.

“ಕಾಂಗ್ರೆಸ್‌ಗೆ ನನ್ನನ್ನು ಕಂಡರೆ ಆಗಲ್ಲ. ನಾನು ಬಡತನದ ಮೂಲದಿಂದ ಬಂದವನು ಎಂಬುದು ಅವರ ಕೋಪಕ್ಕೆ ಕಾರಣ. ಬಡ ವ್ಯಕ್ತಿಯೊಬ್ಬ ಪ್ರಧಾನಿ ಹುದ್ದೆಗೇರಿದ್ದು ಅವರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಒಂದು ರಾಷ್ಟ್ರೀಯ ಪಕ್ಷ ಇಷ್ಟೊಂದು ಕೀಳುಮಟ್ಟಕ್ಕೆ ಹೇಗೆ ಇಳಿದುಬಿಡುತ್ತೆ ಅನ್ನೋದೇ ನನಗೆ ಅರ್ಥವಾಗ್ತಿಲ್ಲ,

ಕಾಂಗ್ರೆಸ್‌ ಪಕ್ಷ ನನ್ನನ್ನಷ್ಟೇ ಅಲ್ಲ ನಮ್ಮ ಪಕ್ಷದ ಹಿಂದಿನ ಹಿರಿಯ ನಾಯಕರನ್ನೂ ಇದೇ ರೀತಿಯಲ್ಲಿ ಟೀಕಿಸಿದ್ದಾರೆ. ಕಾಂಗ್ರೆಸ್ಸಿನವರಿಗೆ ಮರ್ಯಾದೆ ಕೊಟ್ಟು ಮರ್ಯಾದೆ ತಗೊಳ್ಳೋದು ಗೊತ್ತಿಲ್ಲ” ಅಂತಲೂ ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮಾಡಿದರು.

ಮಾತೆತ್ತಿದರೆ ನಮ್ಮದು 125 ವರ್ಷ ಇತಿಹಾಸವಿರೋ ಪಕ್ಷ, ನಮ್ಮ ಮುತ್ತಜ್ಜ, ಅಜ್ಜಿ, ಅಪ್ಪ ಈ ದೇಶದಕ್ಕಾಗಿ ಬಲಿದಾನಿಗಳಾದ್ರು ಅಂತ ಬೊಬ್ಬೆಯಿಡೋ ರಾಹುಲ್ ಹಾಗು ಕಾಂಗ್ರೆಸ್ಸಿನ ಚೇಲಾಗಳಿಗೆ ಆ 125 ವರ್ಷಗಳ ಇತಿಹಾಸ ಉಳಿಸಿಕೊಂಡು ಹೋಗೋಕಾಗದೆ ಇಡೀ ದೇಶದಲ್ಲಿ ಮುಳುಗುವ ಹಡಗಾಗಿ ಆಗಿರೋದರ ಪರಿವೇ ಇಲ್ಲ ಪಾಪ!!

ಬಾಯಿ ತೆರೆದರೆ ಸಾಕು ಮೀಡಿಯಾಗಳಲ್ಲಿ, ಚುನಾವಣಾ ಭಾಷಣಗಳಲ್ಲಿ ಥರ್ಡ್ ಗ್ರೇಡ್ ಲೋಫರ್ಸ್ ಗಳ ರೀತಿ ಸ್ಟೇಟಮೆಂಟ್ ಗಳನ್ನ ಕೊಟ್ರೆ ಯಾವ ಜನ ಇವರನ್ನ ಮೂಸಿ ನೋಡ್ತಾರ್ರಿ?

ಆ ಕಡೆ ಕೈ ಪಕ್ಷದ ನಾಯಕರು, ಚೇಲಾಗಳು ಮೋದಿಯವರನ್ನ ಜರಿಯುತ್ತಿದ್ದರೆ ಇತ್ತ ನಮ್ಮ ರಾಜ್ಯದ ಥೂ ನಮ್ಮ ರಾಜ್ಯದವಳು ಅನ್ನೋಕು ನಾಚಿಕೆಯಾಗುವ ರಮ್ಯಾ ಕೂಡ ಮೋದಿ ವಿರೋಧಿ ಟ್ವೀಟ್ ಮಾಡಿ ಇಂಗು ತಿಂದ ಮಂಗನಾಗಿ ಟ್ಟಿಟ್ಟರ್ ನಲ್ಲಿ ಟ್ವಿಟ್ಟಾರತಿ ಬೆಳಗಿಸಿಕೊಂಡು ಸೋಶಿಯಲ್ ಮೀಡಿಯಾಗಳಲ್ಲೂ ಉಗಿಸಿಕೊಂಡಿದ್ದೂ ತಮಗೆಲ್ಲಾ ಗೊತ್ತೆ ಇರಬಹುದು.

ಮೇಲೆ ಆಕಾಶಕ್ಕೆ ಮುಖ ಮಾಡಿ ಉಗುಳಿದರೆ ಅದು ಆಕಾಶಕ್ಕೆ ತಾಗುತ್ತೆ ಅಂತ ಕಾಂಗ್ರೆಸ್ ಅಂದುಕೊಂಡು ಉಗುಳುತ್ತಿದೆ ಆದರೆ ಮೇಲೆ ನೋಡಿ ಉಗುಳಿದವನ ಪರಿಸ್ಥಿತಿ ಏನಾಗುತ್ತೋ ಅದೇ ಈಗ ಕಾಂಗಿಗಳ ಪರಿಸ್ಥಿತಿಯಾಗಿಬಿಟ್ಟಿದೆ.

60 ವರ್ಷ ಗಡತ್ತಾಗಿ ದೇಶವನ್ನ ಬ್ರಿಟಿಷರೂ ಲೂಟಿ ಮಾಡದಿದ್ದಷ್ಟು ಕಂಡಕಂಡಲ್ಲಿ ಲೂಟಿ ಮಾಡಿದ ಪಕ್ಷ ಗುಜರಾತ್ ಚುನಾವಣೆಯಲ್ಲಿ ಗೆಲುವು ನಮ್ಮದೇ ಅಂತ ಹಾರಾಡ್ತಾ ಚೀರಾಡ್ತೀದೆ.

ಇದೇ ರೀತಿಯ ಇವರ ಅಟ್ಟಹಾಸ ಕಳೆದ ವರ್ಷಗಳಲ್ಲಿ ನಡೆದ ಒಟ್ಟು 27 ಚುನಾವಣೆಗಳಲ್ಲಿ ಸಾಬೀತಾಗಿದೆ, ಇನ್ನು ಮುಂದೂ ಮತ್ತೊಮ್ಮೆ ಸಾಬೀತಾಗಬೇಕಿದೆ. ಚುನಾವಣೆ ಮುಗಿದ ನಂತರ ಇವರ 125 ವರ್ಷಗಳ ಇತಿಹಾಸವಿರೋ ಪಕ್ಷ ಏನ್ ಕಿತ್ತು ದಬ್ಬಾಕತ್ತೆ ಅಂತ ನೋಡೋಕೆ ನಾವೂ ಇರ್ತೇವೆ!!!

– Vinod Hindu Nationalist

Tags

Related Articles

Close