ಅಂಕಣಜಿಲ್ಲಾ ಸುದ್ದಿಪ್ರಚಲಿತರಾಜ್ಯ

ದಕ್ಷಿಣ ಕನ್ನಡದಲ್ಲಿ ಮತ್ತೊಮ್ಮೆ ಸಂಚಲನ! ಶರತ್ ಮಡಿವಾಳ ಹತ್ಯೆಗೆ ಸಂಬಂಧಿಸಿದಂತೆ ಮತ್ತೆ ಮೂವರ ಬಂಧನ!!!!

ರಾಷ್ಟ್ರೀಯ ಸ್ವಯಂ ಸೇವಕದ ಶರತ್ ಮಡಿವಾಳ ಪ್ರಕರಣದ ಮತ್ತೆರಡು ರೂವಾರಿಗಳನ್ನು ಬಂಧಿಸುವಲ್ಲಿ ಪೋಲಿಸರು ಯಶಸ್ವಿಯಾಗಿದ್ದು ಆರೋಪಿಗಳನ್ನು ‘ರಿಯಾಜ್ ಪರಂಕಿ, ಸಾದಿಕ್ ನೆಲ್ಯಾಡಿ ಹಾಗೂ ಕಲೀಮ್’ ಎಂದು ಗುರುತಿಸಿದ್ದಾರೆ!

ಸಂಘದವರನ್ನು ಗುರಿಯಾಗಿಸಿದರೇ?

ಇದು ಹೊಸದೇನಲ್ಲ! ಕಮ್ಯುನಿಸ್ಟ್ ಆಡಳಿತವಿರುವ ಕೇರಳದಲ್ಲಿಯೂ ಕೂಡ ಸಂಘ ಪರಿವಾರದವರ ಕೊಲೆ ನಡೆಯುತ್ತಲೇ ಇದೆ. ಎಗ್ಗಿಲ್ಲದೇ ನಡೆಯುವ ಈ ಹತ್ಯೆಗೆ ಅಲ್ಲಿನ ಸರಕಾರವೂ ಕುಮ್ಮಕ್ಕು ಕೊಡುವ ಹಾಗೆ, ಕರ್ನಾಟಕದಲ್ಲಿಯೂ ಕೂಡ ಕಾಂಗ್ರೆಸ್ ಸರಕಾರ ಬಂದಾಗಲೇ ಈ ರೀತಿಯ ಹತ್ಯೆಗಳಿಗೆ ಇನ್ನಷ್ಟು ಬೆಂಬಲ ಕೊಟ್ಟಂತಾಗಿದೆ!

ಅತಿಶಯೋಕ್ತಿಯಲ್ಲವೇ ಅಲ್ಲ ಸ್ವಾಮಿ! ಕಾಂಗ್ರೆಸ್ ‘ಹಿಂದೂ ವಿರೋಧಿ’ ಎನ್ನುವುದು ಎಲ್ಲರಿಗೂ ಗೊತ್ತೇ ಇರುವ ಸಂಗತಿ. ಇಡೀ ನೆಹರೂ ಪರಂಪರೆಯೇ ಹಿಂದೂಗಳನ್ನು ವಿರೋಧಿಸುತ್ತಿದ್ದದ್ದು ಎಲ್ಲರಿಗೂ ಗೊತ್ತಿದೆ. ಅದೂ ಬಿಡಿ! ಶರತ್ ಮಡಿವಾಳರವರ ಸಾವಿನ ಸುದ್ದಿಯನ್ನೂ ಮುಚ್ಚಿಟ್ಟ ಸರಕಾರ ಈಗ ಸಿಕ್ಕಿಬಿದ್ದ ಅಪರಾಧಿಗಳನ್ನು ಶಿಕ್ಷೆಗೊಳಪಡಿಸುತ್ತದೆಯೋ ಇಲ್ಲವೋ ಎಂಬುದೇ ಅನುಮಾನವಾಗಿದೆ!

ಪ್ರತೀಕಾರ!!

ಸಿಕ್ಕಿಬಿದ್ದ ಆರೋಪಿಗಳೆಲ್ಲರೂ ‘ಕಲಾಯಿ ಅಶ್ರಫ್’ ಹತ್ಯೆಗೆ ಪ್ರತೀಕಾರವಾಗಿ ಶರತ್ ಮಡಿವಾಳರವರನ್ನು ಹತ್ಯೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆಂದು ಮಂಗಳೂರು ಪೋಲಿಸ್ ಇಲಾಖೆ ತಿಳಿಸಿದೆ. ಶರತ್ ಮಡಿವಾಳರವರ ಹತ್ಯೆಗೆ ಪೂರ್ವಯೋಜಿತವಾಗಿಯೇ ತಯಾರಿ ಮಾಡಿಕೊಂಡಿದ್ದರೆನ್ನಲಾದ ಆರೋಪಿಗಳು ಕೊನೆಗೂ ಸಿಕ್ಕಿಬಿದ್ದಿರುವುದು ಪ್ರಕರಣಕ್ಕೊಂದು ತಿರುವು ನೀಡಿದೆ.

ನಾಲ್ಕು ದಿನಗಳ ಹಿಂದಷ್ಟೇ ಪೋಲಿಸರು ಶಫಿ, ಖಲಂದರ್ ಹಾಗೂ ಶರೀಫ್ ಎನ್ನುವವರನ್ನು ಬಂಧಿಸಿದ್ದರು. ಬೆಳ್ತಂಗಡಿ ಹಾಗೂ ಬಂಟ್ವಾಳದವರಾದ ಆರೋಪಿಗಳಿಗೆ 15 ದಿನ ನ್ಯಾಯಾಂಗ ಬಂಧನವನ್ನೊದಗಿಸಲಾಗಿದೆ!!!!

15 ದಿನ ಬಂಧನ! ಕೊನೆಗೆ ಸ್ವಚ್ಛಂದ ಹಕ್ಕಿಗಳು!

ಸದ್ಯಕ್ಕೆ ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳಿಗೆ ಶಿಕ್ಷೆಯಾಗುವ ಯಾವ ಲಕ್ಷಣವೂ ಕಾಣುತ್ತಿಲ್ಲ. ಕಾಂಗ್ರೆಸ್ ಸರಕಾರದ ಅಧೀನಕ್ಕೊಳಪಟ್ಟಿರುವ ಕರ್ನಾಟಕ, ಮುಂದಿನ ಚುನಾವಣೆಯಲ್ಲೂ ಅಧಿಕಾರದ ಚುಕ್ಕಾಣಿ ಹಿಡಿದರೆ ಕರ್ನಾಟಕ ಕೇರಳವನ್ನೂ ಮೀರಿಸಿ ಬೆಳೆಯುವುದರಲ್ಲಿ ಸಂಶಯವಿಲ್ಲ.

ಕಲಾಯಿ ಅಶ್ರಫ್ ಕೊಲೆಯಾದಾಗ ಬೊಬ್ಬೆ ಹಾಕಿದ್ದ ಯಾವ ಎಡ ಪಂಥದವರೂ ಈಗ ನಾಲಿಗೆಯಿಲ್ಲದಂತವರಾಗಿದ್ದಾರೆ. ಅದ್ಯಾವುದೋ ಮಾನವೀಯತೆಯ ಬಗೆಗೆ ಭಾಷಣ ಕುಟ್ಟಿ ನ್ಯಾಯ ಕೇಳುವ ಕಮ್ಯುನಿಸಂ ನ ಕರಾಳತೆಗೆ ಬಲಿಯಾಗುತ್ತಿರುವುದು ಹಿಂದೂ ಯುವಕರೇ ಹೊರತು ಬೇರೆ ಯಾರೂ ಅಲ್ಲ.

ಇಷ್ಟು ದಿನವೂ ಅಲ್ಪಸಂಖ್ಯಾತರೆಂಬ ನಿಟ್ಟಿನಲ್ಲಿ ಸಿದ್ಧರಾಮಯ್ಯ ಕಾಂಗ್ರೆಸ್ ಕೊಟ್ಟಿದ್ದ ಸ್ವಾತಂತ್ರ್ಯವೊಂದು ಸಂಘದವರನ್ನು ಹತ್ಯೆ ಮಾಡುವುದಕ್ಕೂ ಹೇಸದಷ್ಟು ಧೈರ್ಯ ನೀಡುತ್ತದೆಯೆಂದರೆ ಯೋಚಿಸಲೇಬೇಕಾದ ವಿಷಯವಲ್ಲವೇ?!

ರಾಜ್ಯ ಸರಕಾರದ ತಾಕತ್ತು!!!!

ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಮಕ್ಕಳ ಅನ್ನ ಕಿತ್ತುಕೊಂಡ ಸರಕಾರ ಹಿಂದೂ ಹತ್ಯೆಗೆ ಪ್ರೇರಣೆ ನೀಡುತ್ತಿರುವ ಅದೆಷ್ಟೋ ಸಾಮಾಜಿಕ ಜಾಲತಾಣಗಳನ್ನು ನೋಡುತ್ತಾ ಕುಳಿತಿದೆಯಷ್ಟೇ ವಿನಃ ನಿಷೇಧಗೊಳಿಸುವ ತಾಕತ್ತು ತೋರದಿರುವುದು ವಿಪರ್ಯಾಸವೇ ಸರಿ! ಅದ್ಯಾವುದೋ ಕನ್ಹಯ್ಯನ ಬಗ್ಗೆ ಉದ್ದುದ್ದ ಭಾಷಣ ಬಿಗಿದ ಸಿದ್ಧರಾಮಯ್ಯರವರಿಗೆ ತನ್ನದೇ ರಾಜ್ಯದ ಪ್ರಜೆ ಹತ್ಯೆಯಾಗಿದ್ದರ ಬಗ್ಗೆ ಧ್ವನಿ ಎತ್ತಲೂ ಆಗದಷ್ಟು ದುರ್ಬಲರಾಗಿರುವುದನ್ನು ನೋಡಿದರೆ ನಗಬೇಕೋ ಅಳಬೇಕೋ ಎನ್ನುವುದೇ ತಿಳಿಯದಂತಾಗಿದೆ!

ಸಿದ್ಧರಾಮಯ್ಯ ಸರಕಾರದ ಇಷ್ಟು ವರ್ಷದ ಆಡಳಿತದಲ್ಲಿ ದಕ್ಷ ಅಧಿಕಾರಿಗಳಿಗೆ ಸಿಕ್ಕ ‘ಮರಣ ಭಾಗ್ಯ’ ಬಹುಷಃ ಕರ್ನಾಟಕದ ಇತಿಹಾಸದಲ್ಲಿಯೇ ಇರಲಿಕ್ಕಿಲ್ಲವೇನೋ. ಶರತ್ ಮಡಿವಾಳ ಹತ್ಯೆಗೆ ಸಂಬಂಧಿಸಿದಂತೆ ತನಿಖೆ ಮಾಡುತ್ತಿರುವ ಪೋಲೀಸರು ಇನ್ನೂ ಹೆಚ್ಚಿನ ವಿಷಯವನ್ನು ಬಯಲು ಮಾಡು ವುದಾಗಿ ಹೇಳಿದ್ದಾರೆ.

– ತಪಸ್ವಿ

Tags

Related Articles

Close