ಅಂಕಣಪ್ರಚಲಿತ

ದಕ್ಷಿಣ ಕನ್ನಡದಲ್ಲಿ ಸಂಚಲನ! ಶರತ್ ಮಡಿವಾಳ ಹತ್ಯೆ ಪ್ರಕರಣ ಭೇಧಿಸಿದ ಪೋಲಿಸರು! ಹತ್ಯೆಯ ರೂವಾರಿಗಳಾರು ಗೊತ್ತೇ?

ಕೊನೆಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಾಗಿದ್ದ ಶರತ್ ಮಡಿವಾಳ ಹತ್ಯೆ ಪ್ರಕರಣವನ್ನು ಭೇಧಿಸುವಲ್ಲಿ ಪೋಲಿಸರು ಯಶಸ್ವಿಯಾಗಿದ್ದಾರೆ. ಜುಲೈ ನಾಲ್ಕರಂದು ಹತ್ಯೆಗೀಡಾಗಿದ್ದ ಶರತ್ ಮಡಿವಾಳರವರು ಮಂಗಳೂರಿನ ಏಜೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಬಂಟ್ವಾಳದ ಸಮೀಪ ನಡೆದ ಈ ಹತ್ಯೆಗೆ ಇಡಿಯ ದಕ್ಷಿಣ ಕನ್ನಡವೇ ಬೆಚ್ಚಿ ಬಿದ್ದಿತ್ತು.

ಸಿದ್ದರಾಮಯ್ಯ ಸರಕಾರದ ‘ಸಾವಿನ ರಾಜಕೀಯ’.

ಶರತ್ ಕೊನೆಯುಸಿರೆಳೆದು ಎರಡು ದಿನವಾದರೂ ಸರಕಾರದ ಅಣತಿಯಂತೆ ವೈದ್ಯಕೀಯ ಸಿದ್ಧಾಂತವನ್ನೂ ಮರೆತ ಏಜೆಆಸ್ಪತ್ರೆಯ ವೈದ್ಯ ಸಿಬ್ಬಂದಿಗಳು ಸಾವಿನ ಸುದ್ದಿಯನ್ನು ಹೆತ್ತವರಿಗೂ ತಿಳಿಸಿರಲಿಲ್ಲ. ಕಾಂಗ್ರೆಸ್ ಪಕ್ಷದವರ ಜೊತೆ ಭೇಟಿಯಾಗಲು ಸಿದ್ಧರಾಮಯ್ಯ ಮಂಗಳೂರಿಗಾಗಮಿಸಿದ ಹಿನ್ನೆಲೆಯಲ್ಲಿ ಸತ್ಯವನ್ನು ಮುಚ್ಚಿಟ್ಟ ಆಸ್ಪತ್ರೆಯ ಸಿಬ್ಬಂದಿ ತದನಂತರ ತಿಳಿಸಿ ಅಮಾನವೀಯತೆಗೊಂದು ತಾಜಾ ಉದಾಹರಣೆಯಾಗಿದ್ದರು. ಮಂಗಳೂರು ಬೆಂದ ಕೆಂಡವಾಗಿರುವಾಗಲೇ ಶರತ್ ಮಡಿವಾಳರವರ ಹತ್ಯೆ ಭೀಕರವಾದ ಸ್ಥಿತಿ ಸೃಷ್ಟಿಸಿದ್ದು ಸುಳ್ಳಲ್ಲ.

ಶರತ್ ಮಡಿವಾಳರವರ ತಂದೆ ಮಗನ ಅಂಗಾಗ ದಾನ ಮಾಡಬೇಕೆಂದು ಯೋಚಿಸಿದ್ದರೂ ವೈದ್ಯಕೀಯ ತಂಡದ ಅಮಾನವೀಯತೆಯೊಂದು ಅದನ್ನೂ ಕಳೆದಿದೆ.

ಮನೆಗೊಬ್ಬನೇ ಆಧಾರಸ್ಥಂಭವಾಗಿದ್ದ ಮಗನನ್ನು ಕಳೆದುಕೊಂಡ ಮೇಲೆ ತಂದೆ ಹೇಳಿದ್ದೇನು ಗೊತ್ತೇ?!
” ನಾನು ಕೇಶವ ಗುರೂಜಿಯಿಂದ ಪ್ರೇರಿತರಾಗಿ ಸಂಘದಲ್ಲಿದ್ದವನು. ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ನನ್ನ ಮಗನನ್ನೂ ನೀಡಿದ್ದೇನೆ. ಈಗವನು ಹುತಾತ್ಮನಾಗಿದ್ದಾನೆ.”
ಅವರ ಸ್ಥೈರ್ಯ ಎಂತಹವರನ್ನೂ ದಂಗು ಬಡಿಸಿತ್ತು.

ಕೊನೆಗೂ ಪ್ರಕರಣ ಭೇಧಿಸಿದರು ಪೋಲೀಸರು!

ಹತ್ಯೆಯಾದ 43 ದಿನಗಳ ನಂತರ ಪೋಲಿಸರು ಬಂಟ್ವಾಳ ಹಾಗೂ ಬೆಳ್ತಂಗಡಿ ಮೂಲದ ಮೂವರನ್ನು ಬಂಧಿಸಿದ್ದಾರೆ. ಶಫಿ, ಶರೀಫ್ ಹಾಗೂ ಖಲಂದರ್ ಎಂಬ ಮೂವರು ಅಪರಾಧಿಗಳನ್ನು ಪೋಲಿಸರು ಬಂಧಿಸಿದ್ದಾರೆ. ‘ಕಲಾಯಿ ಅಶ್ರಫ್’ ಹತ್ಯೆಗೆ ಪ್ರತೀಕಾರವಾಗಿ ಶರತ್ ಮಡಿವಾಳರವರನ್ನು ಹತ್ಯೆ ಮಾಡಿದ್ದಾಗಿ ಒಪ್ಪಕೊಂಡಿರುವ ಮೂವರೂ ಶರತ್ ಮಡಿವಾಳರವರ ಹತ್ಯೆಗೆ ತಯಾರಿ ಮಾಡಿಕೊಂಡಿದ್ದರೆನ್ನಲಾಗಿದೆ.

ನಿಜಕ್ಕೂ ಅಪರಾಧಿಗಳಿಗೆ ಶಿಕ್ಷೆಯಾಗಬಹುದೇ?!

ಮುಂಚೆಯಿಂದಲೂ ಮಾನವತೆಯ ಹೆಸರಿನಲ್ಲಿ ಕಮ್ಯುನಿಸಂ ವಾದ ಮಾಡುತ್ತಾ ಉಗ್ರರನ್ನು, ಮುಸಲ್ಮಾನ ಅಪರಾಧಿಗಳನ್ನೆಲ್ಲ ಪೋಷಿಸುತ್ತಾ, ಹಿಂದೂ ಸಮಾಜಕ್ಕೆ ರಕ್ತ ಸಿಕ್ತ ಉಡುಗೊರೆಯನ್ನೇ ನೀಡುತ್ತಾ ಬಂದ ಕಾಂಗ್ರೆಸ್ ಸರಕಾರ ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳುತ್ತದೆಯೋ ಇಲ್ಲವೋ ಎಂಬುದು ಎಲ್ಲರಲ್ಲಿರುವ ಪ್ರಶ್ನೆ.
ಅಶ್ರಫ್ ಹತ್ಯೆಯಾದಾಗ ಬೊಬ್ಬೆಯಿಟ್ಟಿದ್ದ ಗಂಜಿ ಕೇಂದ್ರದ ಗಿರಾಕಿಗಳೆಲ್ಲ ಈ ಹತ್ಯೆಯ ಪರವಾಗೇ ಉಳಿದು ‘ಕ್ಷಮಾಪಣೆ ಅರ್ಜಿ’ ಸಲ್ಲಿಸಲಿದೆಯೋ ಎಂಬುದೂ ಯಕ್ಷ- ಪ್ರಶ್ನೆಯಾಗಿಯೇ ಉಳಿದಿದೆ.
ಕೊನೆಗೂ, ಹತ್ಯೆಯ ರೂವಾರಿಗಳನ್ನು ಭೇಧಿಸುವಲ್ಲಿ ಯಶಸ್ವಿಯಾದ ಪೋಲಿಸರ ಶ್ರಮಕ್ಕೆ ರಾಜ್ಯ ಸರಕಾರ ಏನು ಕ್ರಮ ತೆಗೆದುಕೊಳ್ಳಬಹುದು ಎಂಬುದನ್ನು ನೋಡಬೇಕಾಗಿದೆ.

– ತಪಸ್ವಿ

Tags

Related Articles

Close