ಅಂಕಣಇತಿಹಾಸದೇಶಪ್ರಚಲಿತ

ದಾರ್ – ಉಲ್ – ಇಸ್ಲಾಂ ನ ಸಿದ್ಧಾಂತವೊಂದು ಸ್ವಾಮಿ ಶ್ರದ್ಧಾನಂದರನ್ನೂ ಹತ್ಯೆ ಮಾಡಿಸಿತ್ತು! ಅವರ ಧರ್ಮ ಬದಲಾಗುವುದೂ ಇಲ್ಲ, ಬದಲಾಗುವ ಅವಕಾಶವೂ ಅಲ್ಲಿಲ್ಲ!

ಒಂದನೇ ಜಾಗತಿಕ ಯುದ್ಧದಲ್ಲಿ (1914-1918) ಟರ್ಕಿಯ ಸುಲ್ತಾನ ಖಲೀಫ ಅಬ್ದುಲ್ ಮಜೀದ್ ಸೋತು ಅವನ ಸಿಂಹಾಸನ ,ಅಧಿಕಾರವನ್ನು ಕಳೆದುಕೊಂಡ. ಯಾವುದೋ ದೇಶದಲ್ಲಿ ಯಾವುದೋ ಖಲೀಫನ ಅಧಿಕಾರ ಹೋಗಿದ್ಕೆ ಇಲ್ಲಿನ ಮುಸಲ್ಮಾನರು ಖಂಡಿಸುವ ಆಂದೋಲನ ಮಾಡಿದರು ಅದಕ್ಕೆ ಖಿಲಾಪತ್ ಚಳುವಳಿ ಎಂದು ಹೆಸರಿಟ್ಟರು. ಈ ಚಳುವಳಿಗೆ ಕಾಂಗ್ರೆಸ್ ಬೆಂಬಲ ನೀಡಿತು. ಈ ಖಿಲಾಪತ್ ಚಳುವಳಿಗೆ ಗಾಂಧೀಜಿಯೇ ಮುಂದಾಳತ್ವ ವಹಿಸಿದ್ದರು. ಕಾಂಗ್ರೆಸ್ಸಿನ ಈ ಮುಸ್ಲಿಂ ತುಷ್ಟೀಕರಣ ಮುಂದೆ ಲೆಕ್ಕವಿಲ್ಲದಷ್ಟು ಹಿಂದುಗಳ ಬಲಿ ತೆಗೆದುಕೊಂಡಿತು. ಇವಾಗಲೂ ಈ ಕಾಂಗ್ರೆಸ್ಸಿಗರ ಮುಸ್ಲಿಂ ತುಷ್ಟೀಕರಣ ನಿಂತಿಲ್ಲ ಹಾಗೆಯೇ ಹಿಂದುಗಳು ಬಲಿಯಾಗೋದು ನಿಂತಿಲ್ಲ. ಇವಾಗಲೂ ಯಾವುದೋ ದೇಶದಲ್ಲಿ ಯಾವುದೋ ಮುಸಲ್ಮಾನನಿಗೆ ಯಾರೋ ಹೊಡೆದರೆ ಭಾರತದ ಮುಸಲ್ಮಾನರು ಹಿಂದುಗಳ ಮೇಲೆ ಹಲ್ಲೆ ಮಾಡ್ತಾರೆ.

ಕೇರಳದೆಲ್ಲೆಡೆ ಖಿಲಾಪತ್ ಧ್ವಜಗಳು ಕಾಂಗ್ರೆಸ್ ಕಚೇರಿಗಳ ಮೇಲೆ ಹಾರಾಡತೊಡಗಿದವು. ಕಾಂಗ್ರೆಸ್ಸಿಗರೇ ಖಿಲಾಪತ್ ಚಳುವಳಿಯ ಮುಂದಾಳತ್ವವನ್ನು ವಹಿಸಿಕೊಂಡರು. ಎಲ್ಲಿ ನೋಡಿದರೂ ಖಿಲಾಪತ್ ಚಳುವಳಿಯ ವಿಜೃಂಭಣೆ,ಖಿಲಾಪತ್ ಪರ ಘೋಷಣೆ,ಟೋಪಿ ಧರಿಸಿದ ಕಾಂಗ್ರೆಸ್ಸಿಗರು.

ಟರ್ಕಿ ಅಧಿಕಾರಿಯ ಅಧಿಕಾರ ಹೋಗಿದ್ಕೆ ಇಲ್ಲಿಯ ಮುಸಲ್ಮಾನರು ಅಂದೋಲನ ಮಾಡ್ತಾರೆ ಅಂದ್ರೆ ಏನಾದ್ರೂ ಅರ್ಥವಿದೆಯಾ? ಅದಕ್ಕೆ ಕಾಂಗ್ರೆಸ್ಸಿಗರ ಬೆಂಬಲ ಬೇರೆ. ಖಿಲಾಪತ್ ಚಳುವಳಿಯ ಸಂದರ್ಭದಲ್ಲಿ ಅಲ್ಲಾ ಹೋ ಅಕ್ಬರ್ ಘೋಷಣೆಯೇ ಭಾರತ ಮಾತಾ ಕಿ ಜೈ ಘೋಷಣೆಗಿಂತಲೂ ಶ್ರೇಷ್ಠವೆಂದು ಗಾಂಧಿ ಹೇಳ್ತಾರೆ. ಆದರೆ ಅದೇ ಮಾಪಿಳ್ಳೆ ಮುಸಲ್ಮಾನರು ಹಿಂದುಗಳ ಮೇಲೆ ದಾಳಿ ಮಾಡಿದಾಗ ಅಲ್ಲಿಯ ಜನ ಗಾಂಧೀಜಿಯ ಹೆಸರನ್ನ ಹೇಳಿ ಬೇಡಿಕೊಂಡಾಗ ಆ ಮತಾಂಧರು ಗಾಂಧೀಜಿಯು ನಮ್ಮ ಪ್ರಕಾರ ಕಾಫಿರನೇ ಅಂತಾರೆ. ಗಾಂಧೀಜಿಗೆ ಅಲ್ಲಾ ಹೋ ಅಕ್ಬರ್ ಶ್ರೇಷ್ಠವಾಗಿರಬಹುದು ಆದರೆ ಸರ್ವಸಾಧಾರಣ ಮುಸಲ್ಮಾನನಿಗೆ ಅದು ಕಾಫಿರರ ವಿರುದ್ಧದ ಯುದ್ಧ ಘೋಷಣೆಯಾಗಿತ್ತು.

ಆ್ಯನಿ ಬೆಸೆಂಟರು ಹೇಳುವಂತೆ ,ಗಾಂಧಿ ಬೆಂಬಲದಿಂದ ಉತ್ತೇಜಿತರಾದ ಮಾಪಿಳ್ಳೆ ಮುಸಲ್ಮಾನರು ಹಿಂದುಗಳ ತಲೆಗಳನ್ನು ಕತ್ತರಿಸಿ ಎಸೆದರು. ಸ್ತ್ರೀಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡುತ್ತಿದ್ದರು,ನಂತರ ಎಲ್ಲರೆದುರೇ ಅತ್ಯಾಚಾರ. ಗರ್ಭಿಣಿಯರ ಗರ್ಭವನ್ನು ಸೀಳಿ ಶಿಶುವನ್ನು ಕತ್ತರಿಸಿ ಎಸೆಯುತ್ತಿದ್ದರು. ಗರ್ಭಿಣಿ,ಹಸುಳೆ,ವೃದ್ಧೆ ಯಾರನ್ನೂ ಬಿಡದೆ ಅತ್ಯಾಚಾರ ಮಾಡುತ್ತಿದ್ದರು. ಮತಾಂತರಕ್ಕೆ ವಿರೋಧಿಸಿದವರನ್ನು ಕೊಂದರು. ಸುಮಾರು ಲಕ್ಷ ಮಂದಿ ಮೈಮೇಲಿನ ಉಟ್ಟ ಬಟ್ಟೆಯಿಂದಲೇ ಮನೆ ಮಠ ಬಿಟ್ಟು ನಿರಾಶ್ರಿತರಾಗಿ ಓಡಿಹೋದರು. ಅದೆಷ್ಟೋ ಗರ್ಭಿಣಿ ಸ್ತ್ರೀಯರು ಮಾರ್ಗ ಮಧ್ಯೆಯೇ ಶಿಶುಗಳಿಗೆ ಜನ್ಮ ನೀಡಿದರು.

ಅದೇ ಸಮಯದಲ್ಲಿ ಮುಸ್ಲಿಂ ಲೀಗ್ ನ ಅಧಿವೇಶನದ ಭಾಷಣದಲ್ಲಿ ಒಬ್ಬ ಮತಾಂಧ ಮುಸ್ಲಿಂ ಈ ಕೃತ್ಯವನ್ನು ಸಮರ್ಥಿಸುತ್ತಾ ಹಿಂದುಗಳು ಜಿಹಾದ್ ಸ್ವೀಕರಿಸಿ ಮತಾಂತರಗೊಳ್ಳದಿದ್ದರೆ ಅವರು ನಮ್ಮ ಶತ್ರುಗಳೇ ಅಂದ (ಅಹಮದಾಬಾದ್ ನಲ್ಲಿ ನಡೆದ ಅಧಿವೇಶನ). ಆ ಸಭೆಯಲ್ಲಿ ಗಾಂಧಿ ಸಹ ಇದ್ದರು ಆದರೆ ಗಾಂಧಿ ತುಟಿ ಬಿಚ್ಚಲೇ ಇಲ್ಲ. ಇದನ್ನೆಲ್ಲಾ ನೋಡಿದರೆ ಗಾಂಧೀಜಿಯನ್ನು ಮುಸ್ಲಿಂ ತುಷ್ಟೀಕರಣದ ಪಿತಾಮಹ ಅನ್ನಬಹುದು.

ಇಸ್ಲಾಮೀ ಮತಾಂಧರ ಈ ಕೃತ್ಯವನ್ನು ತಡೆಗಟ್ಟಲು ಕ್ರಮ ಕೈಗೊಳ್ಳದಿದ್ದಲ್ಲಿ ಹಿಂದು ಧರ್ಮಕ್ಕೆ ಕರಾಳ ಭವಿಷ್ಯ ಕಾದಿದೆ ಎಂದು ಆಲೋಚಿಸಿ ಮರಳಿಮಾತೃ ಧರ್ಮಕ್ಕೆ ಬರುವಂತೆ ಶುದ್ಧಿಕರಣ ಕಾರ್ಯವನ್ನು ಶುರು ಮಾಡಿದರು.

ತಪ್ಪಿಲ್ಲದ ಜನತೆಯ ಮೇಲೆ ಗುಂಡು ಹಾರಿಸುವುದಕ್ಕಿಂತ , ಮೊದಲು ನನ್ನ ಎದೆಗೆ ನಿಮ್ಮ ಬಂದೂಕುಗಳಿಂದ ಗುಂಡು ಹಾರಿಸಿರಿ ಎಂದು ಘರ್ಜಿಸಿ ಎದುರಿದ್ದವರ ಎದೆಗಂದುವಂತೆ ಮಾಡಿದ ವೀರ ಸನ್ಯಾಸಿಯ ಹೆಸರು ಸ್ವಾಮಿ ಶ್ರದ್ಧಾನಂದ. ಇಡೀ ಭಾರತಕ್ಕೆ ನಿರ್ಭಿತಿಯ ಮತ್ತು ಶೌರ್ಯದ ಸಂದೇಶವನ್ನು ಕೊಟ್ಟ ಮಹಾ ಸಂತ ಸ್ವಾಮಿ ಶ್ರದ್ಧಾನಂದರು. ಭಯ,ಬಲಾತ್ಕಾರ,ಆಮಿಷಗಳಿಗೆ ಸಿಲುಕಿ ಮತಾಂತರವಾದವರನ್ನು ಶದ್ಧಿಕಾರ್ಯದೊಂದಿ ಮರಳಿ ಮಾತೃ ಧರ್ಮಕ್ಕೆ ಕರೆತಂದವರು ಸ್ವಾಮಿ ಶ್ರದ್ಧಾನಂದರು. ಮರಳಿ ಮಾತೃಧರ್ಮಕ್ಕೆ ತರುವ ಶುದ್ಧಿಕಾರ್ಯವನ್ನು ಆರಂಬಿಸಿದರು. ಭಯ,ಬಲಾತ್ಕಾರ,ಆಮಿಷಕ್ಕೆ ಸಿಲುಕಿದವರು ಮರಳಿ ಮಾತೃಧರ್ಮಕ್ಕೆ ಬರಲಾರಂಭಿಸಿದರು. ಉತ್ತರ ಪ್ರದೇಶ ಒಂದರಲ್ಲೇ ಒಂದು ವರ್ಷದಲ್ಲಿ ಸುಮಾರು 18,000ಕ್ಕೂ ಅಧಿಕ ಜನ ಮರಳಿ ಮಾತೃಧರ್ಮಕ್ಕೆ ಬಂದರು. ಇದನ್ನು ಸಹಿಸದ ಮತಾಂಧ ಮೌಲ್ವಿಗಳು ಅವರನ್ನು ಹೀಗಳೆಯಲು ಆರಂಭಿಸಿದರು. ಕಾಂಗ್ರೆಸ್ಸಿಗರೂ ಆ ಮೌಲ್ವಿಗಳ ಧ್ವನಿಗೆ ಧ್ವನಿಗೂಡಿಸಿ ಶ್ರದ್ಧಾನಂದರನ್ನು ಖಂಡಿಸತೊಡಗಿದರು.

ಮುಸಲ್ಮಾನರ ದಾರ್-ಉಲ್-ಇಸ್ಲಾಂ ಕನಸು ನುಚ್ಚು ನೂರಾದೀತೆಂದು 1926 ಡಿಸೆಂಬರ್ 26ರಂದು ಅಬ್ದುಲ್ ರಶೀದ್ ಎಂಬ ಮತಾಂಧ ಸ್ವಾಮಿ ಶ್ರಧ್ದಾನಂದರನ್ನು ಗುಂಡಿಟ್ಟುಕೊಂದ.ಶ್ರದ್ಧಾನಂದರ ಕೊಲೆಯ ಬಗ್ಗೆ ಗಾಂಧೀಜಿಗೆ ಪ್ರತಿಕ್ರಿಯೆ ಕೇಳಿದಾಗ ಗಾಂಧೀ ಹೇಳ್ತಾರೆ. ನಾನು ರಶೀದ್ ನನ್ನು ಸಹೋದರನೆಂದು ಭಾವಿಸಿದ್ದೇನೆ ಎಂದರು. ಬರೀ ಅಷ್ಟೇ ಅಲ್ಲ ಅವನ ಪರ ವಾದಿಸಲು ಸಿದ್ಧರಾಗಿದ್ದರು. ಇವತ್ತಿನ ಈ ಗಂಜಿ ಗಿರಾಕಿಗಳಿಗೂ ಆವತ್ತಿನ ಗಾಂಧೀಜಿಗೂ ಯಾವುದೇ ವ್ಯತ್ಯಾಸ ಕಾಣಿಸೊಲ್ಲ.

ಸರ್ವೆಂಟ್ ಆಫ್ ಇಂಡಿಯಾ ಸೊಸೈಟಿಯ ಉಲ್ಲೇಖದ ಪ್ರಕಾರ ಆ ಸಮಯದಲ್ಲಿ ಕೊಲೆಗೀಡಾದ ಹಿಂದುಗಳ ಸಂಖ್ಯೆ 1500, ಬಲಾತ್ಕಾರದಿಂದ
ಮತಾಂತರಗೊಂಡವರು 20,000. ಹಿಂದು ಸ್ತ್ರೀಯರ ಮಾನಭಂಗ,ಅಪಹರಣಗಳ ಸಂಖ್ಯೆಗಳ ಬಗ್ಗೆ ಲೆಕ್ಕವೇ ಇಲ್ಲ.

ಅವರೆಂದಿಗೂ ಬದಲಾಗಲ್ಲ ,ಬದಲಾಗಲೂ ಅವರ ಧರ್ಮದಲ್ಲಿ ಅವಕಾಶವೇ ಇಲ್ಲವೆಂಬುದು ಜಗಜ್ಜಾಹಿರವಾದರೂ ಗಾಂಧೀಜಿಗೆ ಏಕೆ ಅರ್ಥವಾಗಲಿಲ್ಲ? ಅರ್ಥವಾಗಿದ್ದರೂ ಏಕೆ ಬೆಂಬಲ ಕೊಟ್ಟರು?

ಇವಾಗಲೂ ಈ ಮುಸ್ಲಿಂ ತುಷ್ಟೀಕರಣ ಹೇಗಿದೆಯೆಂದರೆ ಕರ್ನಾಟಕದಲ್ಲಿ ಸರಣಿ ಹಿಂದುಗಳ ಹತ್ಯೆಯಾದರೂ ಯಾರನ್ನೂ ಬಂಧಿಸಿಲ್ಲ ಇದೇ ಅಲ್ಲವೇ ಮುಸ್ಲೀ ತುಷ್ಟೀಕರಣ.ಆವಾಗಿನ ಆ ಖಿಲಾಪತ್ ಚಳುವಳಿಗೂ ಇವಾಗಿನ PFI,SDPI ಮತಾಂಧ ಸಂಘಟನೆಗಳಿಗೂ ಯಾವುದೇ ವ್ಯತ್ಯಾಸವಿಲ್ಲ.

ಶರತ್ ಮಡಿವಾಳ್, ರುದ್ರೇಶ್ , ಕುಟ್ಟಪ್ಪ, ಪ್ರಶಾಂತ ಪೂಜಾರಿ ಹೀಗೆ ಹಲವಾರು ಹಿಂದೂ ಕಾರ್ಯಕರ್ತರ ಸರಣಿ ಹತ್ಯೆಗೆ PFI,SDPIನಂತಹ ಸಂಘಟನೆಗಳೆ ಎಂಬುದು ಎಲ್ಲರಿಗೂ ಗೊತ್ತಿದ್ದರೂ ಆ ಸಂಘಟನೆಗಳ ಮೇಲೆ ಇಲ್ಲಿನ ಕಾಂಗ್ರೆಸ್ ಸರ್ಕಾರ ಕೇಸ್ ಹಾಕಲ್ಲ ಯಾಕಂದ್ರೆ ಮುಸ್ಲಿಂ ತುಷ್ಟೀಕರಣ‌.

-ಮಹೇಶ್ ⁠⁠

Tags

Related Articles

Close