ಹಿಂದೂಸ್ಥಾನದಲ್ಲಿ ಹಿಂದೂಗಳೇ ಅಲ್ಪಸಂಖ್ಯಾತರಾಗುತ್ತಿದ್ದಾರೆ. ಇಂಥದೊಂದು ದೌರ್ಭಾಗ್ಯ ಹಿಂದೂಗಳಿಗೆ ಬಂದೊದಗಿದೆ. ದೇಶದ ಹಲವು ರಾಜ್ಯಗಳಲ್ಲಿ ಹಿಂದೂಗಳ ಜನಸಂಖ್ಯೆ ದಿನೇದಿನೆ ಕಡಿಮೆಯಾಗುತ್ತಲೇ ಇದ್ದು, ಇದರಿಂದ ಹಿಂದೂಗಳ ಮೇಲೆ ದೌರ್ಜನ್ಯ ಹೆಚ್ಚುತ್ತಲೇ ಇದೆ. ಹಿಂದೂಸ್ಥಾನದಲ್ಲಿ ಅಲ್ಪಸಂಖ್ಯಾತರೆಂಬ ಕಾರಣಕ್ಕೆ ಮುಸ್ಲಿಮರು ಮತ್ತು ಕ್ರೈಸ್ತರಿಗೆ ಸಾಕಷ್ಟು ಸರಕಾರಿ ಸವಲತ್ತುಗಳು ಸಿಗುತ್ತಿವೆ. ದುರದೃಷ್ಟವೆಂದರೆ ಇಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದರೂ ಬಹುಸಂಖ್ಯಾತರಾಗಿರುವ ಕ್ರೈಸ್ತ, ಮುಸಲ್ಮಾನರಿಗೆ ಸಾಕಷ್ಟು ಸರಕಾರಿ ಸವಲತ್ತುಗಳು ಸಿಗುತ್ತಲೇ ಇದೆ. ದೌರ್ಜನ್ಯ, ನಿರ್ಲಕ್ಷ್ಯದಿಂದ ನಲುಗಿರುವ ಹಿಂದೂಗಳು ಕೊನೆಗೂ ತನಗೂ ಅಲ್ಪಸಂಖ್ಯಾತ ಸ್ಥಾನಮಾನ ನೀಡುವಂತೆ ಕೋರಿ ಸುಪ್ರೀಂಕೋರ್ಟಿಗೆ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಸಲ್ಲಿಸಿದ್ದಾರೆ.
ಭಾರತದ 8 ರಾಜ್ಯಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದಾರೆ. ಇತಿಹಾಸದ ಪುಟಗಳನ್ನು ಅವಲೋಕಿಸಿದರೆ ಈ ರಾಜ್ಯಗಳಲ್ಲಿ ಹಿಂದೂಗಳು
ಬಹುಸಂಖ್ಯಾತರಾಗಿದ್ದರು. ಆದರೆ ಅನ್ಯಮತೀಯರ ದೌರ್ಜನ್ಯದಿಂದ ಒಂದಷ್ಟು ಮಂದಿ ಹಿಂದೂಗಳು ವಲಸೆಹೋಗಿದ್ದರೆ, ಒಂದಷ್ಟು ಮಂದಿ ನಾಶವಾಗಿದ್ದರೆ, ಹಲವರು ಮಂದಿ ಮತಾಂತರಗೊಂಡಿದ್ದಾರೆ. ಇನ್ನು ಅಳಿದುಳಿದ ಹಿಂದೂಗಳಿಗೆ ಗತಿ ಇಲ್ಲದಂತಾಗಿದೆ. ಇದರಿಂದ ಬಸವಳಿದ ಹಿಂದೂಗಳು ತಮಗೂ ಅಲ್ಪಸಂಖ್ಯಾತ ಸ್ಥಾನಮಾನ ನೀಡಬೇಕೆಂದು ಸುಪ್ರೀಂನ ಮೊರೆ ಹೋಗಿದ್ದಾರೆ. ಹಿಂದೂಗಳ ಜನಸಂಖ್ಯೆ ಕಡಿಮೆಯಾಗುತ್ತಿರುವುದನ್ನು ಮನಗಂಡು ಎಚ್ಚೆತ್ತುಕೊಂಡಿರುವ ದೆಹಲಿಯ ಬಿಜೆಪಿ ನಾಯಕ ಮತ್ತು ವಕೀಲ ಅಶ್ವನಿ ಉಪಾಧ್ಯಾಯ ಈ ರೀತಿ ಅಲ್ಪಸಂಖ್ಯಾತ ಸ್ಥಾನಮಾನ ನೀಡುವಂತೆ ಸುಪ್ರೀಂಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
ರಾಜ್ಯದಲ್ಲಿ ಅಲ್ಪಸಂಖ್ಯಾತರಿರುವ ಆ ಎಂಟು ರಾಜ್ಯಗಳು ಯಾವುದು, ಅಲ್ಲಿರುವ ಹಿಂದೂಗಳ ಜನಸಂಖ್ಯೆ ಎಷ್ಟು ಗೊತ್ತೇ? ಲಕ್ಷದೀಪದಲ್ಲಿ ಶೇ. 2.5, ಮಿಜೊರಾಂನಲ್ಲಿ ಶೇ.2.75, ನಾಗಾಲ್ಯಾಂಡ್‍ನಲ್ಲಿ ಶೇ.8.75, ಮೇಘಾಲಯದಲ್ಲಿ ಶೇ. 11.53, ಜಮ್ಮುವಿನಲ್ಲಿ ಶೇ. 38, ಕಾಶ್ಮೀರದಲ್ಲಿ ಶೇ.28.44, ಅರುಣಾಚಲದಲ್ಲಿ ಶೇ.29, ಮಣಿಪುರದಲ್ಲಿ ಶೇ.31.39, ಪಂಜಾಬ್‍ನಲ್ಲಿ ಶೇ. 38.40 ಹಿಂದೂಗಳಿದ್ದಾರೆ.
2011ರ ಜನಗಣತಿಯಲ್ಲಿ ಈ 8 ರಾಜ್ಯಗಳಲ್ಲಿ ಹಿಂದೂಗಳ ಜನಸಂಖ್ಯೆ ಕಡಿಮೆ ಇರುವುದು ಬೆಳಕಿಗೆ ಬಂದಿತು. ಆದರೆ ಇದುವರೆಗೂ ಕೇಂದ್ರವಾಗಲೀ,
ರಾಜ್ಯಸರಕಾರವಾಗಲೀ ಹಿಂದೂಗಳನ್ನು ಅಲ್ಪಸಂಖ್ಯಾತರೆಂದು ಪರಿಗಣಿಸಿರಲೇ ಇಲ್ಲ. ಪರಿಣಾಮವಾಗಿ ಬಹುಸಂಖ್ಯಾತರು ಅಕ್ರಮವಾಗಿ ಹಾಗೂ ಏಕಪಕ್ಷೀಯವಾಗಿ ಹಿಂದೂಗಳ ಹಕ್ಕುಗಳನ್ನು ಸ್ವಾಧೀನಪಡಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ಹಿಂದೂಗಳಿಗೆ ಸಂವಿಧಾನದಲ್ಲಿ ನೀಡಲಾದ 25ರಿಂದ 30ನೇ ವಿಧಿಯೊಳಗೆ ನೀಡಲಾದ ಮೂಲಭೂತ ಹಕ್ಕುಗಳನ್ನು ನಿರಾಕರಿಸಲಾಗಿದೆ ಎನ್ನುವುದನ್ನು ಅಶ್ವನಿ ಉಪಾಧ್ಯಾಯ ಅವರು ಅರ್ಜಿಯಲ್ಲಿ ವಿವರಿಸಿದ್ದಾರೆ.
ಮುಸ್ಲಿಮರು ಬಹುಸಂಖ್ಯಾತರಾಗಿದ್ದರೂ ಸರಕಾರಿ ಸವಲತ್ತು…!
ದೇಶದಲ್ಲಿ ಓಟ್‍ಬ್ಯಾಂಕ್ ರಾಜಕಾರಣ ಹಿಂದೂಗಳ ಅಸ್ತಿತ್ವಕ್ಕೆ ಅವಸಾನದ ಮೊಳೆ ಹೊಡೆಸುತ್ತಿದೆ. ಬಹುಸಂಖ್ಯಾತರಾಗಿರುವ ಮುಸ್ಲಿಮರಿಗೆ ಸಾಕಷ್ಟು ಸರಕಾರಿ
ಸವಲತ್ತುಗಳನ್ನು ನೀಡಿ ಹಿಂದೂಗಳನ್ನು ತುಳಿಯುವ ಕೆಲಸವನ್ನು ಸರಕಾರ ಮಾಡುತ್ತಲೇ ಬಂದಿದೆ. ಲಕ್ಷದೀಪದಲ್ಲಿ ಮುಸ್ಲಿಮರ ಸಂಖ್ಯೆ ಶೇ. 96.20, ಜಮ್ಮು ಮತ್ತು ಕಾಶ್ಮೀರದಲ್ಲಿ ಶೇ. 68.30, ಅಸ್ಸಾಂನಲ್ಲಿ ಶೇ. 34.20, ಪ.ಬಂಗಾಳದಲ್ಲಿ ಶೇ.27.5, ಕೇರಳದಲ್ಲಿ ಶೇ. 26.60, ಉತ್ತರ ಪ್ರದೇಶದಲ್ಲಿ ಶೇ.19.30, ಬಿಹಾರದಲ್ಲಿ ಶೇ. 18ರಷ್ಟಿದೆ.
ಆದರೂ ಮುಸ್ಲಿಮರಿಗೆ ಅಲ್ಪಸಂಖ್ಯಾತರ ಸ್ಥಾನಮಾನದಿಂದಾಗಿ ಸಾಕಷ್ಟು ಸರಕಾರಿ ಸವಲತ್ತುಗಳು ಸಿಗುತ್ತಿದೆ. ಇನ್ನು ಮಿಜೋರಾಂ, ಮೇಘಾಲಯ, ನಾಗಾಲ್ಯಾಂಡ್‍ನಲ್ಲಿ ಕ್ರೈಸ್ತರ ಸಂಖ್ಯೆ ಅಧಿಕ. ಜೊತೆಗೆ ಕೇರಳ, ಮಣಿಪುರ, ತಮಿಳುನಾಡು, ಪಶ್ಚಿಮ ಬಂಗಾಳದಲ್ಲಿ ಕ್ರೈಸ್ತರ ಸಂಖ್ಯೆ ಅಧಿಕವಾಗಿದೆ. ಆದರೂ ಇವರಿಗೆ ಅಲ್ಪಸಂಖ್ಯಾತರ ಸವಲತ್ತು ಸಿಗುತ್ತಿದೆ. ಪಂಜಾಬ್‍ನಲ್ಲಿ ಸಿಖ್ಖರ ಸಂಖ್ಯೆ ಜಾಸ್ತಿ, ದೆಹಲಿ, ಚಂಡೀಗಢ, ಹರ್ಯಾಣಾದಲ್ಲೂ ಸಾಕಷ್ಟು ಸಿಖ್ಖರಿದ್ದು ಅವರೆಲ್ಲಾ ಅಲ್ಪಸಂಖ್ಯಾತರ ಸವಲತ್ತುಗಳನ್ನು ಪಡೆಯುತ್ತಿದ್ದಾರೆ. ಆದರೂ ಹಿಂದೂಗಳಿಗೆ ಯಾವುದೇ ಸ್ಥಾನಮಾನ ಸಿಗುತ್ತಿಲ್ಲ ಎನ್ನುವುದು ಅಶ್ವನಿ ಉಪಾಧ್ಯಾಯ ಅವರ ವಾದ.
ಮುಸ್ಲಿಮರ ಸಂಖ್ಯೆ ಹೆಚ್ಚಾಗಿರುವ ರಾಜ್ಯಗಳಾದ ಜಮ್ಮು ಮತ್ತು ಕಾಶ್ಮೀರ, ಅಸ್ಸಾಂ, ಪ.ಬಂಗಾಳ, ಕೇರಳ, ಉತ್ತರ ಪ್ರದೇಶ ಹಾಗೂ ಬಿಹಾರದಲ್ಲಿ ಹಿಂಸಾತ್ಮಕ
ಚಟುವಟಿಕೆಗಳು ಮಿತಿ ಮೀರಿದೆ. ಹಿಂದೂಗಳ ಮೇಲೆ ಮಿತಿಮೀರಿ ದೌರ್ಜನ್ಯ ನಡೆಯುತ್ತಿದೆ. ಈ ರಾಜ್ಯಗಳಲ್ಲಿ ಒಂದು ಕಾಲದಲ್ಲಿ ಹಿಂದೂಗಳ ಸಂಖ್ಯೆ ಅಧಿಕವಾಗಿತ್ತು. ಆದರೆ ಮತಾಂತರ, ದೌರ್ಜನ್ಯ, ಇತ್ಯಾದಿಗಳಿಂದ ಹಿಂದೂಗಳ ಸಂಖ್ಯೆ ಕಡಿಮೆಯಾಗುತ್ತಾ ಬಂದಿದೆ. ಕಾಂಗ್ರೆಸ್ ಪ್ರೇರಿತ ಸರಕಾರಗಳು ಮುಸ್ಲಿಮರನ್ನು ಪೋಷಿಸಿ, ಅವರಿಗೆ ಮಿತಿಮೀತಿ ಸವಲತ್ತು ನೀಡಿದ ಕಾರಣ ಇಂತವರ ಸಂಖ್ಯೆ ಹೆಚ್ಚುತ್ತಿದೆ. ಎಲ್ಲಿ ಮುಸ್ಲಿಮರ ಸಂಖ್ಯೆ ಜಾಸ್ತಿ ಇದೆಯೋ ಅಲ್ಲಿ ಹಿಂಸಾತ್ಮಕ ಚಟುವಟಿಕೆಗಳೂ ಹೆಚ್ಚುತ್ತವೆ ಎನ್ನುವುದು ಈ ರಾಜ್ಯಗಳಲ್ಲಿ ಸಾಬೀತಾಗಿದೆ.
ಉದಾಹರಣೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂದೂಗಳ ಸಂಖ್ಯೆ ಅಧಿಕವಾಗಿತ್ತು. ಕಾಶ್ಮೀರಿ ಪಂಡಿತರು ಅಲ್ಲಿನ ಮೂಲನಿವಾಸಿಗಳಾಗಿದ್ದರು. ಆದರೆ ಅಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚುತ್ತಾ ಹೋದಂತೆ ಭಯೋತ್ಪಾದನೆಯೂ ಹೆಚ್ಚಿತ್ತಲ್ಲದೆ ಕಾಶ್ಮೀರಿ ನಿವಾಸಿಗಳನ್ನು ಕೊಚ್ಚಿ ಕೊಚ್ಚಿ ಕೊಲೆ, ಅತ್ಯಾಚಾರ ಮಾಡಲಾಯಿತು. ಅಲ್ಲಿ ಭಯೋತ್ಪಾದನೆ ಹೆಚ್ಚಿತ್ತಲ್ಲದೆ ಇಡೀ ದೇಶಕ್ಕೆ ಕಂಟಕಪ್ರಾಯವಾಗಿದೆ. ನಮ್ಮ ದೇಶದ ಬಹುಮೊತ್ತ ಹಣ ಅಲ್ಲಿನ ಉಗ್ರನಿಗ್ರಹಕ್ಕೇ ಖರ್ಚಾಗುತ್ತಿದೆ.
ಇನ್ನು ಅಸ್ಸಾಂನಲ್ಲಿ ಬೋಡೋ ಉಗ್ರರ ಸಂಖ್ಯೆ ಮಿತಿ ಮೀರಿದ್ದು, ಅನೇಕ ಕಡೆಗಳಲ್ಲಿ ಸ್ಫೋಟಗಳನ್ನು ನಡೆಸಿ ಹಲವರನ್ನು ಕೊಂದು ಹಾಕಿದ್ದಾರೆ. ಬೋಡೋ ಉಗ್ರರು ಅಲ್ಲಿನ ಆದಿವಾಸಿಗಳನ್ನು ಉಗ್ರರಾಗಿ ಪರಿವರ್ತಿಸಿ ದೇಶದಲ್ಲಿ ವಿದ್ವಂಸಕ ಕೃತ್ಯಗಳನ್ನು ನಡೆಸುತ್ತಿದ್ದಾರೆ.
ಇನ್ನು ಪಶ್ಚಿಮ ಬಂಗಾಳದಲ್ಲಿ ಬಾಂಗ್ಲಾ ಉಗ್ರರು ಒಳನುಸುಳಿ ವಿದ್ವಂಸಕ ಕೃತ್ಯಗಳನ್ನು ನಡೆಸುತ್ತಿದ್ದಾರೆ. ಬಾಂಗ್ಲಾದೇಶದಿಂದ ಒಳನುಸುಳುವ ಉಗ್ರರಿಗೆ ಮಮತಾ ಬ್ಯಾನರ್ಜಿ ಸರಕಾರ ಆಶ್ರಯ ನೀಡಿ, ಸಕಲ ಸವಲತ್ತುಗಳನ್ನು ನೀಡಿ ಓಟುಬ್ಯಾಂಕ್‍ಗಳಾಗಿ ಪರಿವರ್ತಿಸುತ್ತಿದೆ. ಇದರ ಜೊತೆಗೆ ಇಲ್ಲಿನ ಬಹುಸಂಖ್ಯಾತ ಮುಸ್ಲಿಮರಿಗೆ ಸಕಲ ಸರಕಾರಿ ಸೌಲಭ್ಯ ನೀಡಲಾಗುತ್ತಿದೆ.
ಇನ್ನು ಕೇರಳದಲ್ಲಿ ನೋಡುವುದಾದದರೆ ಅಲ್ಲಿ ಹೆಚ್ಚು ಕಾಲ ಕಮ್ಯುನಿಸ್ಟ್ ಸರಕಾರ ಆಳ್ವಿಕೆ ನಡೆಸುತ್ತಿದೆ. ಕಮ್ಯುನಿಸ್ಟರಿಗೆ ಮುಸ್ಲಿಮರೆಂದರೆ ಮೊದಲೇ ದೊಡ್ಡದೊಂದು ಓಟ್‍ಬ್ಯಾಂಕ್. ಅಲ್ಲಿನ ಮುಸ್ಲಿಮರಿಗೆ ಅಧಿಕವಾಗಿ ಸರಕಾರಿ ಸವಲತ್ತುಗಳನ್ನು ನೀಡುತ್ತಿದೆ. ಈ ಸವಲತ್ತಿನಿಂದ ಕೊಬ್ಬಿದ ಮುಸ್ಲಿಮರು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಹೆಸರಿನಲ್ಲಿ ಸಾಕಷ್ಟು ಅನಾಚಾರಗಳಲ್ಲಿ ತೊಡಗಿದೆ. ಉದಾಹರಣೆಗೆ ಲವ್ ಜಿಹಾದ್, ಟೆರರ್ ಕ್ಯಾಂಪ್ ನಿರ್ವಹಣೆ ಇತ್ಯಾದಿ ಕೃತ್ಯಗಳಲ್ಲಿ ತೊಡಗಿದೆ.
ಒಟ್ಟಾರೆ ಮುಸ್ಲಿಮರ ಸಂಖ್ಯೆ ಜಾಸ್ತಿಯಾಗುತ್ತಿದ್ದಂತೆ ಅವರದ್ದೇ ಕಾನೂನು, ಭಾಷೆ, ಧಾರ್ಮಿಕತೆಯನ್ನು ಹೇರಲು ಮುಂದಾಗುತ್ತಾರೆ. ಇಸ್ಲಾಂನಲ್ಲಿ ಶಾಂತಿ ಎನ್ನುವುದು ಕೇವಲ ಮುಸ್ಲಿಮರಿಗಷ್ಟೇ ಮೀಸಲು. ಒಟ್ಟಾರೆ ಮುಸ್ಲಿಮರ ಸಂಖ್ಯೆ ಹೆಚ್ಚಾದ ರಾಜ್ಯಗಳಲ್ಲಿ ಅಲ್ಪಸಂಖ್ಯಾತ ಹಿಂದೂಗಳನ್ನು ತುಳಿದು ಬಹುಸಂಖ್ಯಾತ ಮುಸ್ಲಿಮರಿಗೆ ಸಾಕಷ್ಟು ಸರಕಾರಿ ಸವಲತ್ತುಗಳನ್ನು ನೀಡಿ ಇನ್ನಷ್ಟು ಕೊಬ್ಬುವಂತೆ ಸರಕಾರ ಮಾಡುತ್ತಿದೆ. ಸುಪ್ರೀಂ ಕೋರ್ಟು ಇದಕ್ಕೆ ಇತಿಶ್ರೀ ಹಾಕುವ ಕಾಲ ಸನ್ನಿಹಿತವಾಗಿದೆ.
-ಚೇಕಿತಾನ