ಅಂಕಣ

ದೀಪಾವಳಿ ಆಯ್ತು, ಹೋಳಿ ಆಯ್ತು, ಜಲ್ಲಿಕಟ್ಟು ಆಯ್ತು, ಈಗ ಹಿಂದೂಗಳ ಶವಸಂಸ್ಕಾರಕ್ಕೂ ಬೀಳಲಿದೆಯೇ ಕಡಿವಾಣ?! ಹಿಂದೂಗಳ ವಿರುದ್ಧ ನಡೆಯುತ್ತಿರುವ ವ್ಯವಸ್ಥಿತ ಷಡ್ಯಂತ್ರ!!

ಮೊನ್ನೆ ಮೊನ್ನೆಯಷ್ಟೇ ದೀಪಾವಳಿಯಲ್ಲಿ ಪಟಾಕಿಗಳನ್ನ ದೆಹಲಿಯಲ್ಲಿ ಬ್ಯಾನ್ ಮಾಡಿ ಆದೇಶ ಹೊರಡಿಸಿದ್ದ ತೀರ್ಪಿನ ಬಗ್ಗೆ ನಿಮಗೆಲ್ಲಾ ತಿಳಿದಿರಬಹುದು.

ಯಾಕೆ ಬ್ಯಾನ್ ಆಯ್ತು ಪಟಾಕಿ? ಹಿಂದೂಗಳ ಬೆಳಕಿನ ಹಬ್ಬವಾದ ದೀಪಾವಳಿಯಂದು ಪಟಾಕಿ ಸಿಡಿಸಿ, ಸುರು ಸುರು ಬತ್ತಿ ಹಚ್ಚಿ ಆಟವಾಡುವ ಮಕ್ಕಳನ್ನ ನೋಡಿ ಬಹುಶಃ ಅನ್ಯಮತೀಯರಿಗೆ ಅಥವ ನಮ್ಮೊಳಗೆ ಇರೋ ಧರ್ಮ ದ್ರೋಹಿಗಳಿಗೆ ಉರಿ ತಡ್ಕೊಳ್ಳೋಕೆ ಆಗ್ಲಿಲ್ಲ ಅನಿಸುತ್ತೆ. ಹೇಗಾದರೂ ಮಾಡಿ ಇವರ ಸಂಸ್ಕೃತಿಯ ಮೇಲೆ ದಾಳಿ ಮಾಡಬೇಕಲ್ಲಾ ಅಂತ ಕೋರ್ಟಿನಲ್ಲಿ ದೀಪಾವಳಿಯಂದು ಹಚ್ಚುವ ಪಟಾಕಿಗಳು “ಪರಿಸರ ಮಾಲಿನ್ಯ” ಉಂಟು ಮಾಡುತ್ತೆ ಅಂತ ಪೆಟಿಷನ್ ಒಂದನ್ನ ಹಾಕೇಬಿಟ್ಟಿದ್ದರು ವಿರೋಧಿಗಳು.

ಅಷ್ಟಕ್ಕೂ ವರ್ಷದ 365 ದಿನಗಳಲ್ಲಾಗದ ಪರಿಸರ ಮಾಲಿನ್ಯ ಕೇವಲ ದೀಪಾವಳಿಯಂದೇ ಅದೂ ಪಟಾಕಿ ಹಾರಿಸಿದರೇ ಆಗುತ್ತಾ?

ಆಯ್ತು ಸರಿ ಸ್ವಾಮಿ ನಮ್ಮಿಂದ ನಮ್ಮ ಹಬ್ಬದಿಂದ ಪರಿಸರ ಮಾಲಿನ್ಯ ಉಂಟಾಗುತ್ತಿದೆ, ನಾವು ಪಟಾಕಿಯನ್ನ ಬಂದ್ ಮಾಡ್ತೀವಿ, ಪರಿಸರ ಮಾಲಿನ್ಯದ ಬಗ್ಗೆ ಊಳಿಡುತ್ತಿರೋ ನರಿಗಳು ನಾಳೆಯಿಂದ ರಸ್ತೆಯ ಮೇಲೆ ಸಂಚರಿಸುತ್ತಿರೋ ಕೋಟ್ಯಾಂತರ ವಾಹನಗಳು & ಅದರಿಂದ ದಿನಂಪ್ರತಿ ಹೊರ ಬರೋ ಹೊಗೆಯಿಂದ ಪರಿಸರ ಮಾಲಿನ್ಯ ಆಗ್ತಿದೆಯಂತ ಅದಕ್ಕೂ ಒಂದು ಪೆಟಿಷನ್ ಹಾಕಿಬಿಡಿ. ನಿಜವಾದ ಪರಿಸರ ಕಾಳಜಿಯಿದ್ದರೆ ಅದನ್ನೂ ಮಾಡಿ ನೋಡೋಣ.

ಊಹುಂ, ಅದನ್ನ ಮಾಡೋಕ್ಕಾಗಲ್ಲ, ಯಾಕಂದ್ರೆ ದಿನಬೆಳಗಾದರೆ ಎ.ಸಿ.ಕಾರಿನಲ್ಲಿ ಝಮ್ಮಂತ ಓಡಾಡುತ್ತ ಹಿಂದೂಗಳ ವಿರುದ್ಧ ಪೆಟಿಷನ್ ಫೈಲ್ ಮಾಡೋದು ಈ ಮೂರ್ಖರೇ.

ಇವರಿಗೆ ದೀಪಾವಳಿಯ ಬಗ್ಗೆಯಷ್ಟೇ ತಕರಾರಿಲ್ಲ, ಇವರಿಗೆ ಹೋಳಿ ಹಬ್ಬದಂದು ಹಿಂದೂಗಳು ಬಳಸುವ ನೀರಿನ ಕುರಿತಾಗಿಯೂ ಆಕ್ಷೇಪಣೆಯಿದೆ, ಕರವಾ ಚೌತ್ ದಂದು ಸ್ತ್ರೀಯರು ತಮ್ಮ ಗಂಡನ ಸಲುವಾಗಿ ಉಪವಾಸ ಮಾಡೋದ್ರಿಂದಾನೂ ಅಕ್ಷೇಪಣೆಯಿದೆ, ದೇವರ ಮೂರ್ತಿಗಳಿಗೆ ಅಭಿಷೇಕ ಮಾಡುವುದರಿಂದಲೂ ಆಕ್ಷೇಪವಿದೆ, ದೇವಸ್ಥಾನದ ಗಂಟೆಗಳಿಂದಲೂ ಆಕ್ಷೇಪವಿದೆ, ಕಂಬಳ, ಜಲ್ಲಿಕಟ್ಟು ಆಟಗಳಿಂದಲೂ ಆಕ್ಷೇಪವಿದೆ. ಮಹಾರಾಷ್ಟ್ರದಲ್ಲಿ ಕುಡಿಕೆ ಒಡೆಯುವ ದಹಿ ಹಂಡಿ ಆಟದ ಬಗ್ಗೆಯೂ ಆಕ್ಷೇಪವಿದೆ, ರಾತ್ರಿ ನಡೆಯೋ ಗಾರ್ಭಾ ಬಗ್ಗೆಯೂ ಆಕ್ಷೇಪವಿದೆ, ಜಾತ್ರೆಗಳಲ್ಲಿ ಬಲಿ ಕೊಡುವ ಕುರಿಗಳ ಬಗ್ಗೆ ಆಕ್ಷೇಪವಿದೆ. ಹೀಗೆ ಇನ್ನೂ ಆಕ್ಷೇಪಣೆಗಳು ಇವರಿಗಿರುವ ಕಾರಣವೇನು ಗೊತ್ತಾ? ಅದೇ ಪರಿಸರ ಮಾಲಿನ್ಯ, ಶಬ್ದ ಮಾಲಿನ್ಯ, ಅಮಾಯಕ ಪ್ರಾಣಿಗಳನ್ನ ಹತ್ಯೆ ಮಾಡುವ ಕ್ರೂರತನ. ಇದಕ್ಕೂ ಭಯಾನಕವಾದ ಇವರ ಆಕ್ಷೇಪಣೆಯೆಂದರೆ ಹಿಂದೂಗಳು ಶವಸಂಸ್ಕಾರ ಮಾಡೋದೂ ಆಗಿದೆ!!

ದೇಶದ ನ್ಯಾಷನಲ್ ಗ್ರೀನ್ ಟ್ರಿಬ್ಯೂನಲ್(NGT) ಹಿಂದುಗಳು ಮಾಡುವ ಶವಸಂಸ್ಕಾರ(ಶವವನ್ನ ಸುಡುವುದು)ವನ್ನೂ ಪ್ರಶ್ನೆ ಮಾಡಿ “ಇದರಿಂದ ಪರಿಸರ ಮಾಲಿನ್ಯ ಆಗುತ್ತೆ, ಗಾಳಿಯಲ್ಲಿ ವಿಷವಾಗುತ್ತೆ, ನೀರು ಕಲುಷಿತವಾಗುತ್ತೆ, ಆದ ಕಾರಣ ಇದರ ವಿರುದ್ಧ ಕ್ರಮ ಕೈಗೊಳ್ಳಿ” ಅಂತ ದೆಹಲಿ ಸರ್ಕಾರಕ್ಕೆ ಹಾಗು ಪರಿಸರ ಸಚಿವಾಲಯಕ್ಕೂ ಸೂಚಿಸಿದೆ.

ಎಲ್ಲಿಗ್ ಬಂತಪ್ಪಾ ಈ ದೇಶದಲ್ಲಿ ಹಿಂದುಗಳ ಸ್ಥಿತಿ, ಮರಣದ ನಂತರ ಶವಸಂಸ್ಕಾರ ಮಾಡೋಕೂ ಸರ್ಕಾರದ ಪರ್ಮಿಷನ್ ತಗೊಳ್ಳೋ ಸ್ಥಿತಿಗೆ ಬಂದುಬಿಟ್ಟೆವಾ ನಾವು!!

ನಿಜಕ್ಕೂ ಇವರು ಹೇಳ್ತಿರೋದು ಸತ್ಯವಾ? ಶವಸಂಸ್ಕಾರದಿಂದಲೂ ಪರಿಸರ ಮಾಲಿನ್ಯವಾಗುತ್ತ? ಅಷ್ಟಕ್ಕೂ ಹಿಂದೂ ಧರ್ಮದ ಪ್ರಕಾರ ಶವವನ್ನ ಸುಡುವುದರ ಹಿಂದಿನ ಉದ್ದೇಶವಾದರೂ ಏನು ಅನ್ನೋದನ್ನ ತಿಳಿಯೋಣ ಬನ್ನಿ :

ಹಿಂದೂ ಧರ್ಮದಲ್ಲಿ ವ್ಯಕ್ತಿಯೊಬ್ಬನ ಮರಣವಾದರೆ ಮೊದಲು ಆತನ ಶವವನ್ನ ಸ್ನಾನ ಮಾಡಿಸಿ ಹೊಸ ಬಟ್ಟೆ ತೊಡಿಸಿ ಶವಸಂಸ್ಕಾರ ಮುಂಚೆ ಕೆಲ ರೀತಿ ರಿವಾಜುಗಳನ್ನ ಪೂರ್ಣಗೊಳಿಸಲಾಗುತ್ತೆ. ಶಾಸ್ತ್ರೋಕ್ತವಾಗಿ, ಗಂಧದ ಕಟ್ಟಿಗೆಯನ್ನೂ ಹಾಕಿ ತುಪ್ಪ ಹಾಗು ಇತ್ಯಾದಿ ವಸ್ತುಗಳನ್ನ ಚಿತೆಗೆ ಹಾಕಿ ನಂತರ ಶವಕ್ಕೆ ಅಗ್ನಿಸ್ಪರ್ಶ ಮಾಡಿ ಶವಸಂಸ್ಕಾರವನ್ನ ಮಾಡ್ತಾರೆ. ಹಿಂದೂ ಧರ್ಮದ ಪ್ರಕಾರ ಮನುಷ್ಯ ಸತ್ತ ಮೇಲೆ ಆತನ ಆತ್ಮ ಭೌತಿಕವಾದ ದೇಹದಿಂದ ಬೇರ್ಪಡುತ್ತದೆ. ಆತ್ಮ ದೇಹದಿಂದ ಬೇರ್ಪಟ್ಟ ನಂತರವೂ ಆತ್ಮ ಇನ್ನೂ ದೇಹದಲ್ಲೇ ಇದೆ ಅನ್ನುವ ಕಲ್ಪನೆ ಆತ್ಮಕ್ಕಿರುತ್ತದೆ, ಶವಕ್ಕೆ ಅಗ್ನಿಸ್ಪರ್ಶ ಮಾಡಿದಾಗ ಆತ್ಮಕ್ಕೂ ಮುಕ್ತಿ ಸಿಗುತ್ತದೆಅಂತ ಗರುಡ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಹೀಗೆ ಶವವನ್ನ ಹೂಳುವ ಬದಲು ಅದನ್ನು ಅಗ್ನಿಗಾಹುತಿಪಡಿಸಲಾಗುತ್ತೆ. ನಂತರ ಅಸ್ತಿಯನ್ನ ತೆಗೆದುಕೊಂಡು ಹಿಂದೂ ಧರ್ಮದಲ್ಲಿ ಪವಿತ್ರ ಸ್ಥಾನ ಹೊಂದಿರುವ ಪುಣ್ಯ ನದಿಗಳಲ್ಲಿ ವಿಸರ್ಜನೆ ಮಾಡಲಾಗುತ್ತೆ.

ಶವವನ್ನ ಅಗ್ನಿಗಾಹುತಿ ಕೊಡುವುದಕ್ಕೂ ಕೆಲವೊಂದು ವೈಜ್ಞಾನಿಕ ಕಾರಣಗಳೂ ಇವೆ, ಶವವನ್ನ ಹೂತರೆ ಆ ಶವಕ್ಕೆ ಕ್ರಿಮಿಗಳು ಆವರಿಸಿ ಪರಿಸರದಲ್ಲಿ ಕೆಟ್ಟ ವಾತಾವರಣವೂ ಉಂಟಾಗುತ್ತೆ ಹಾಗು ಶವವನ್ನ ಹೂತರೆ ಆ ಜಾಗ ನಿಷ್ಪ್ರಯೋಜಕವಾಗೂ ಹೋಗುತ್ತೆ ಅನ್ನೋ ಕಾರಣಕ್ಕೆ ಶವವನ್ನ ಸುಡುತ್ತಾರೆ. ಹೀಗೆ ಪರಿಸರದ ಬಗ್ಗೆ ಕಾಳಜಿಯನ್ನಿಟ್ಟುಕೊಂಡೇ ಸಾವಿರಾರು ವರ್ಷಗಳಿಂದ ಹಿಂದೂಗಳು ತಮ್ಮ ಆಚರಣೆಗಳನ್ನ ಪಾಲಿಸುತ್ತ ಬಂದಿದ್ದಾರೆ.

ಆದರೆ ಇದರಿಂದ ಪರಿಸರ ಮಾಲಿನ್ಯ ಆಗುತ್ತೆ, ಜಲಮಾಲಿನ್ಯ ಆಗುತ್ತೆ ಅನ್ನೋ ಅಸಂಬದ್ಧ ಐಡಿಯಾ ಈ ಸೋ ಕಾಲ್ಡ್ ಪರಿಸರವಾದಿಗಳಿಗೆ ಅದ್ಹೇಗೆ ಬಂತೋ?

ಮೇಲೆ ಉಲ್ಲೇಖಿಸಿರುವ ಪ್ರತಿಯೊಂದು ಇವರ ಆಕ್ಷೇಪಣೆಯೂ ಕೇವಲ ಹಿಂದೂ ಹಬ್ಬ ಅಥವ ಸಂಪ್ರದಾಯದ ವಿರುದ್ಧವೇ ಇವೆ ಹೊರತು, ಇವರ್ಯಾರೂ ಮೊಹರ್ರಂನಲ್ಲಿ ಎದೆಯನ್ನ ಬ್ಲೇಡ್ಗಳಿಂದ ಬಡಿದುಕೊಂಡು ರಕ್ತ ಸುರಿಸುವ ಮುಸಲ್ಮಾನರ ವಿರುದ್ಧ ಇಲ್ಲ, ಇವರ್ಯಾರಿಗೂ ದಿನಕ್ಕೆ 5 ಬಾರಿ ಊರಿನ ಜನಕ್ಕೆಲ್ಲಾ ಕೇಳೋ ಹಾಗೆ ಮೈಕಿನಲ್ಲಿ ಒದರುವ ಅಜಾನ್ ಶಬ್ದ ಮಾಲಿನ್ಯದ ರೀತಿಯಲ್ಲಿ ಕಂಡಿಲ್ಲ, ಇವರ್ಯಾರಿಗೂ ಬಕ್ರೀದ್ ಸಂದರ್ಭದಲ್ಲಿ ಕೋಟ್ಯಾಂತರ ಕುರಿ, ಹಸುಗಳ ಬಗ್ಗೆ ಅದು ಮೂಕ ಪ್ರಾಣಿಗಳ ವಿರುದ್ಧದ ಕ್ರೌರ್ಯ ಅನ್ನಿಸಲಿಲ್ಲ. ಬಕ್ರೀದ್ ನ ಮರುದಿನ ಪರಿಸರ ಎಷ್ಟು ಗಬ್ಬೆದ್ದು ಹೋಗಿರುತ್ತೆ ಅನ್ನೋದು ಇವರ ಕಣ್ಣಿಗೆ ಕಾಣಲ್ಲ.

ಅದಕ್ಕೆ ತಾಜಾ ಉದಾಹರಣೆ ಮೊನ್ನೆ ಮೊನ್ನೆಯಷ್ಟೇ ಬಕರೀದ್ ಆದ ಎರಡು ದಿನಗಳ ನಂತರ ನಮ್ಮ ಊರಿನ ಪಾಲಿಕೆಯವರು ಏರಿಯಾ ಒಂದರ ಸ್ವಚ್ಛತೆ ಮಾಡಲು ಹೋದಾಗ ಅಲ್ಲಿ ಅವರಿಗೆ ಸಿಕ್ಕದ್ದು ಗರ್ಭವತಿ ಗೋವಿನ ಹೊಟ್ಟೆ ಸೀಳಿ ಅದರಲ್ಲಿನ ನವಜಾತ ಗೋವಿನ ಶಿಶು. ನಾಲೆಯಲ್ಲಿ ಹರಿಯುತ್ತಿದ್ದ ರಕ್ತ, ಕಂಡ ಕಂಡಲ್ಲಿ ಎಲುಬುಗಳು, ಮಾಂಸದ ತುಂಡುಗಳು, ಆಕಳ ಹೊಟ್ಟೆಯಲ್ಲಿನ ಬೇಡವಾಗದ ಮಾಂಸ. ಕಂಡಕಂಡಲ್ಲಿ ಚಿಕನ್, ಮಟನ್ ಶಾಪ್ ಹಾಕಿಕೊಂಡು ಅದರ ತ್ಯಾಜ್ಯವನ್ನೆಲ್ಲಾ ತಂದು ಜನನಿಬಿಡ ಪ್ರದೇಶದಲ್ಲಿ ಎಸೆದು ಹೋಗ್ತಾರಲ್ಲ ಅದು ಪರಿಸರ ಮಾಲಿನ್ಯವಲ್ಲವಾ? ಪರಿಸರದ ಬಗ್ಗೆ ಪುಂಖಾನುಪುಂಖವಾಗಿ ಮಾತಾಡೋ ಸೋ ಕಾಲ್ಡ್ ಪರಿಸರವಾದಿಗಳ ಕಣ್ಣಿಗೆ ಇವುಗಳೆಲ್ಲಾ ಕಾಣಲಿಲ್ಲವೇ?

ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ದೆಹಲಿಯಲ್ಲಿ ಪರಿಸರ ಮಾಲಿನ್ಯ ಆಗುತ್ತಿದೆ ಅದನ್ನ ತಡೆಯಲೇಬೇಕಂತ ಅಮೆರಿಕಾದ ನ್ಯೂಯಾರ್ಕ್’ನ NGO ಒಂದು ದೆಹಲಿಯಲ್ಲಿ ಕೆಲಸ ಮಾಡುತ್ತಿದೆ. ಅಷ್ಟಕ್ಕೂ ತಮ್ಮ ದೇಶದಲ್ಲಿ ಹೊಸ ವರ್ಷಾಚರಣೆಗೆ ಪಟಾಕಿ ಸಿಡಿಸುವಾಗ ಅಲ್ಲಿ ಪರಿಸರ ಮಾಲಿನ್ಯ ಉಂಟಾಗುತ್ತೆ ಅಂತ ಇವರಿಗನಿಸಲಿಲ್ಲವಾ?

ಕ್ರಿಸ್ಮಸ್ ಸಂದರ್ಭದಲ್ಲಿ ಲಕ್ಷಾಂತರ ಗಿಡಗಳನ್ನ ಕಡಿದು ಅದರಿಂದ ಕ್ರಿಸ್ಮಸ್ ಟ್ರೀ ಮಾಡುವಾಗ ಇವರಿಗೆ ಪರಿಸರದ ಬಗ್ಗೆ ಎಳ್ಳಷ್ಟೂ ಕಾಳಜಿ ಬರಲಿಲ್ಲವೇ?

ಅಷ್ಟಕ್ಕೂ ಈ ಹೊರ ದೇಶದ NGO ಗಳು ತಮ್ಮ ದೇಶದಲ್ಲಿರೋ ಮಾಲಿನ್ಯವನ್ನ ತಡೆಗಟ್ಟೋದನ್ನ ಬಿಟ್ಟು ಭಾರತದಲ್ಯಾಕೆ ತಮ್ಮ ಸೋ ಕಾಲ್ಡ್ ಪರಿಸರ ಕ್ಯಾಂಪೇನ್ ಶುರು ಮಾಡಿದ್ದಾರೆ?

ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ, ಕ್ರಿಶ್ಚಿಯನ್ ಮಿಷ’ನರಿ’ಗಳು ಭಾರತದ ಸಂಸ್ಕೃತಿಯನ್ನ ಖಂಡತುಂಡವಾಗಿ ನೆಲಸಮ ಮಾಡೋಕೆ ಹಾಗು ಇಲ್ಲಿನ ಹಿಂದುಗಳಿಗೆ ತಮ್ಮ ಸಂಸ್ಕೃತಿ ಆಚಾರ ವಿಚಾರಗಳ ಬಗ್ಗೆಯೇ ಅಸಹ್ಯ ಮೂಡಿಸಿ ತಮ್ಮ ಧರ್ಮ ಕೆಟ್ಟ ಧರ್ಮ ಅಂತ ಬಿಂಬಿಸಿ ಅದರಿಂದ ತಮ್ಮ ಮಿಷ’ನರಿ’ ಕೆಲಸಗಳಿಗೆ ಮೈಲೇಜ್ ತೆಗೆದುಕೊಳ್ಳೋದೇ ಇವರ ಮುಖ್ಯ ಅಜೆಂಡಾ. ಇಂತಹ NGO ಗಳಿಂದ ಗಂಜಿ ಬರುತ್ತಿರೋ ಕಾರಣ ಇಲ್ಲಿನ ಧರ್ಮದ್ರೋಹಿ ಹಿಂದುಗಳೂ ಇವರ ಕೈ ಜೋಡಿಸಿ ತಮ್ಮ ಧರ್ಮದ ವಿರುದ್ಧವೇ ತಿರುಗಿಬಿದ್ದಿವೆ.

ಅಷ್ಟಕ್ಕೂ ಹಿಂದೂಗಳೇ ಯಾಕೆ ಟಾರ್ಗೇಟ್ ಆಗ್ತಿದಾರೆ? ಕೇವಲ ಹಿಂದುಗಳ ಹಬ್ಬಗಳಿಂದಲೇ ಪರಿಸರ ಮಾಲಿನ್ಯವಾಗುತ್ತಿದೆಯಾ? ಅನ್ಯಮತೀಯರ
ಆಚರಣೆಗಳಿಂ ಪರಿಸರ ಸಂರಕ್ಷಣೆಯಾಗಿ ಭಾರತ ಪ್ರಗತಿಯತ್ತ ಹೆಜ್ಜೆ ಹಾಕುತ್ತಿದೆಯಾ?

ಭಾರತ ಸೆಕ್ಯೂಲರ್ ರಾಷ್ಟ್ರ ಅಂತ ಬೊಬ್ಬೆ ಹಾಕುವ ಸೋ ಕಾಲ್ಡ್ ಸೆಕ್ಯೂಲರ್, ಪ್ರಗತಿಪರ, ಪರಿಸರವಾದಿ ಗಳಿಗೆ ತಾವು ನಿಜವಾದ ಸೆಕ್ಯೂಲರ್’ಗಳಂತ ಅನಿಸಿದ್ದರೆ ಅವರ್ಯಾಕೆ ಕೇವಲ ಹಿಂದುಗಳನ್ನ ಟಾರ್ಗೇಟ್ ಮಾಡ್ತಿದಾರೆ? ಅಥವ ಅವರಿಗೆ ಅನ್ಯಮತೀಯರಿಗೆ ಪ್ರಶ್ನೆ ಮಾಡುವ ಧಮ್ ಇಲ್ವಾ?

ಇವುಗಳನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿ ಹಿಂದುಗಳೇ, ಇಂದು ಇವರು ನಮ್ಮ ಹಬ್ಬಗಳನ್ನ ಟಾರ್ಗೇಟ್ ಮಾಡ್ತಾರೆ, ನಾಳೆ ಮನೆಯಲ್ಲಿ ನೀವು ಪೂಜೆ ಮಾಡಿ ಊದಿನಕಡ್ಡಿ ಬೆಳಗುವುದರಿಂದಲೂ ಪರಿಸರ ಮಾಲಿನ್ಯವಾಗುತ್ತೆ ಅಂತ ಹೇಳ್ತಾರೆ.

ಹಿಂದುಗಳೇ, ನಿಮಗೂ ಪರಿಸರ ಮಾಲಿನ್ಯ, ಶಬ್ದ ಮಾಲಿನ್ಯದ ಬಗ್ಗೆ ಕಾಳಜಿಯಿದ್ದರೆ ಈ ಸೋ ಕಾಲ್ಡ್ ಪರಿಸರವಾದಿಗಳು ಹೇಗೆ ನಮ್ಮ ಆಚರಣೆಗಳ ವಿರುದ್ಧ ಹರಿಹಾಯುತ್ತಿದ್ದಾರೋ ಹಾಗೆಯೇ ನೀವೂ ಪರಿಸರಕ್ಕೆ ಸಂಬಂಧಿಸಿದಂತೆ ಇವರು ಕೈಗೊಳ್ಳದಿರೋ ಕೆಲಸಗಳ ಬಗ್ಗೆ ಪ್ರಶ್ನೆ ಮಾಡಿ, ನೀವೂ ಕೋರ್ಟಿನಲ್ಲಿ ಪೆಟಿಷನ್ ದಾಖಲಿಸಿ, ಎಲ್ಲಿಯವರೆಗೆ ನಾವು ಮಲಗಿರುತ್ತೇವೋ ಅಲ್ಲಿಯವರೆಗೆ ಇವರ ಪ್ರಹಾರ ನಮ್ಮ ಮೇಲೆ ನಡೆಯುತ್ತಲೇ ಇರುತ್ತೆ.

ಜಾಗೋ ಹಿಂದೂ ಜಾಗೋ!!

– Vinod Hindu Nationalist

Tags

Related Articles

Close