ಪ್ರಚಲಿತ

ದುಬೈಯಲ್ಲಿ ಮಾಲ್,ಬರ್ಮಿಂಗ್ ಹಾಮ್ ನಲ್ಲಿ ಮನೆ,ಮುಂಬೈಯಲ್ಲಿ 125 ಫ್ಲಾಟ್ ಗಳು:: ಭಾರತದ ಅತೀ ಭ್ರಷ್ಟ ರಾಜಕಾರಣಿ ಕುರಿತು ಅರಿಯಿರಿ

ತೆರಿಗೆ ಅಧಿಕಾರಿಗಳು ದಾಳಿ ಮಾಡಿದಾಗಿನಿಂದ ಕಾಂಗ್ರೆಸ್ ಚಡಪಡಿಸುತ್ತಲೇ ಇದೆ. ಅವರ ಬಂಡವಾಳ ಬಯಲಾಗುತ್ತಲೇ ಇವೆ. ನಿನ್ನೆ ಅಧಿಕಾರಿಗಳು 8.6 ಕೋಟಿ ನಗದನ್ನು ವಶಪಡಿಸಿಕೊಂಡಿದ್ದಾರೆ. ಒಟ್ಟಾರೆ ಭಾರತದಾದ್ಯಂತ 11 ಕೋಟಿಗಿಂತಲೂ ಅಧಿಕ‌ ನಗದು ಹೀಗೂ 4 ಕೋಟಿಯಷ್ಟು ಬೆಲೆಬಾಳುವ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ನೋಟು ನಿಷೇಧದ ಹೊರತಾಗಿಯೂ ಅಷ್ಟೊಂದು ಹಣ ಎಲ್ಲಿಂದ ಬಂತು?

ಭಾರತೀಯರಾದ ನಮಗೆ ಅತೀ ಕುತೂಹಲವನ್ನು ಮೂಡಿಸುವ ವಿಚಾರವಿದು. ಹಳೆ ನೋಟು ನಿಷೇಧವಾಗಿ ಹೊಸ ನೋಟು ಚಲಾವಣೆ ಪ್ರಾರಂಭ ಆದ‌ ಕೆಲವೇ ದಿನಗಳಲ್ಲಿ ನವ ನೋಟುಗಳು ಅಷ್ಟೊಂದು ಸಂಖ್ಯೆಯಲ್ಲಿ ಹೇಗೆ ಲಭಿಸಿತ್ತು?

ಹೌದು. ಹಳೆ ನೋಟು ನಿಷೇಧದ ಕುರಿತು ಮಾತನಾಡುವಾಗ ಸೋನಿಯಾ ಗಾಂಧಿಯವರು ಜನರಿಗೆ ಮೂಲಭೂತ ಸೌಕರ್ಯವನ್ನು ಒದಗಿಸಲು ಕಷ್ಟವಾಗುತ್ತಿದೆಂದೆಲ್ಲಾ ಸಿಡಿದಿದ್ದರು. ಇಷ್ಟೆಲ್ಲಾ ನೋಟುಗಳು ಬಂಗಲೆಗಳಲ್ಲಿ, ಅಪಾರ್ಟ್ಮೆಂಟ್ ಗಳಲ್ಲಿ ಶಿವಕುಮಾರ್ ಅವರು ಅಡಗಿಸಿದರೆ ,ಪಾಪ . ಸಾಮಾನ್ಯ ಜನರಿಗೆ ಹೇಗೆ ತಾನೆ ಹಣ ಸಿಗಬೇಕು ?

ಕರ್ನಾಟಕದ ಸಚಿವ, ಆದರೆ ಆಸ್ತಿ ವಿಶ್ವದಾದ್ಯಂತ

ಪ್ರಸ್ತುತ ಭಾರತದ ಪ್ರಧಾನಿಮಂತ್ರಿಯ ಕುರಿತಾಗಿ ನಾವೆಲ್ಲ ಹೆಮ್ಮೆ ಪಡಬೇಕು. ಯಾಕಂದರೆ ತಮ್ಮ ಸ್ವಂತಕ್ಕಾಗಿ ಅವರು ತಮಗೆ ಸಿಗುವ ಸಂಬಳವನ್ನೂ ಸರಿಯಾಗಿ ಬಳಸದೇ ರಾಷ್ಟ್ರಕ್ಕಾಗಿ ವಿನಿಯೋಗಿಸುತ್ತಿದ್ದಾರೆ. ಆದರೆ ಕರ್ನಾಟಕದ ಓರ್ವ ಸಚಿವನ ಬಳಿ ಇಷ್ಟೊಂದು ಆಸ್ತಿಯಿದೆಯೆಂದು ಅರಿಯುವಾಗ ಆಶ್ಚರ್ಯವಾಗುತ್ತದೆ. ಮೂಲಗಳ ಪ್ರಕಾರ ಸಿಂಗಾಪೂರ್ ನಲ್ಲಿ ಆಸ್ತಿ, ದುಬೈಯಲ್ಲಿ ಮಾಲ್ ಹಾಗೂ ಬರ್ಮಿಂಗ್ ಹಾಮ್ ನಲ್ಲಿ ಒಂದು ಮನೆಯನ್ನೂ ಡಿಕೆಶಿಯವರು ಹೊಂದಿದ್ದಾರೆ. ಒಂದು ಕಟ್ಟಡದಲ್ಲಿ 125 ತಮ್ಮದೇ ಫ್ಲಾಟ್ ಗಳು ಕೂಡ‌ಇವರ ಒಡೆತನದಲ್ಲಿಯೆಂದು ಹೇಳಲಾಗಿದೆ.

ಒಂದು ಮನೆಯಲ್ಲಿ ಸುಮಾರು 8 ಕೋಟಿಯಷ್ಟು ಇದ್ದರೆ, ಇನ್ನು ಉಳಿದ ಮನೆಗಳಲ್ಲಿ ಅದೆಷ್ಟು ಇರಬಹುದೆಂದು ಊಹಿಸಲೂ ಸಾಧ್ಯವಿಲ್ಲ. ಒರ್ವ ಸಚಿವನ ಸಂಬಳ ಸಾವಿರದಷ್ಟು ಮಾತ್ರ, ಆದರೆ ಅವರ ಆಸ್ತಿ ಮಾತ್ರ ಕೋಟಿ ಬೆಲೆಯಷ್ಟು. ವಿಪರ್ಯಾಸವೆಂದರೆ ಇದೇ ಅಲ್ವೇ??

ತಾವು ಪ್ರಾಮಾಣಿಕರಾಗಿದ್ದರೆ ಅದನ್ನು ನಿರೂಪಿಸಲಿ.

ಕಾಂಗ್ರೆಸ್ ತೆರಿಗೆ ಅಧಿಕಾರಿಗಳ ಮೇಲೆಯೇ ಹರಿಹಾಯುತ್ತಿದ್ದಾರೆ. ಈ ವರ್ತನೆ ನಿರೀಕ್ಷಿಸುವದ್ದೇ. ಆದರೆ ಡಿಕಿಶಿ ಯವರ ಬಳಿ ಇಷ್ಟೊಂದು ಆಸ್ತಿ ಎಲ್ಲಿಂದ ಬಂತು ಅನ್ನುವ ಸ್ಪಷ್ಟನೆಯನ್ನು ಕೊಡಬಹುದೇ ?

ಜನರನ್ನು ಮಂಗ ಮಾಡಲು ನೋಟು ನಿಷೇದದ ಸಮಯದಲ್ಲಿ 4000 ರುಪಾಯಿ ಯನ್ನು ಸರದಿ ಸಾಲಲ್ಲಿ ನಿಂತು ಎಟಿಎಮ್ ನಿಂದ ಪಡೆದು ನಾಟಕವಾಡಿದ್ದಾರೆ. ಆದರೆ ಕೆಲವೇ ದಿವಸಗಳಲ್ಲಿ ವಿದೇಶೀ ಪ್ರವಾಸ ಮಾಡಿ ಬಂದ ಸಾಹಸಿ ಅವರು. ಇದರಿಂದ ನೋಟು ನಿಷೇಧದ ಸಂದರ್ಭದಲ್ಲಿ ಯಾವ ರೀತಿಯಲ್ಲಿ ಕಾಂಗ್ರೆಸ್ ಅವ್ಯವಹಾರವನ್ನು ಮಾಡುದೆಯೆಂಬುದು ಸ್ಪಷ್ಟವಾಗಿ ತೋರುತ್ತದೆ. ಇದರಿಂದಾಗಿಯೇ ಸಾಮಾನ್ಯ ಜನರು ಹಣ ಲಭಿಸದೇ ಇನ್ನಷ್ಟು ಪರದಾಡುವಂತೆ ಆಯಿತು.

ಇದೆಲ್ಲದಕ್ಕೂ ಕಾಂಗ್ರೆಸ್ ಸ್ಪಷ್ಟನೆಯನ್ನು ಕೊಡಬಹುದೇ? ಅದು ರಾಜಕೀಯ‌ ದ್ವೇಷದಿಂದ ಮಾಡಿದ ದಾಳಿಯೇ ಆಗಿದ್ದರೆ ಪ್ರಥಮವಾಗಿ ಡಿಕೆಶಿಯವರ ಬಳಿ ಇರುವ ಸರ್ವ ಆಸ್ತಿಗಳ ಕುರಿತಾಗಿ ಸ್ಪಷ್ಟಡಿಸಲಿ. ಮೂಲಗಳ ಪ್ರಕಾರ ದೇಶದ 2ನೆಯ ಅತೀ ಶ್ರೀಮಂತ ರಾಜಕಾರಣಿ ಡಿಕೆಶಿ. ಓರ್ವ ಸಾಮಾನ್ಯ ಸಚಿವ ಇಷ್ಟೊಂದು ಗಳಿಸಲು ಹೇಗೆ ಸಾಧ್ಯವಾಯಿತು? 2008 ರಲ್ಲಿ 171 ಕೋಟಿಯಿದ್ದದ್ದು ಈಗ 251 ಕೋಟಿ. ಇದನ್ನೆಲ್ಲಾ ಗಮನಿಸಿದರೆ ಅವರ ರಾಜಕೀಯ‌ ಜೀವನ ಮುಕ್ತಾಯ ಆಗುವ ಸಂಭವಗಳೇ ಗೋಚರಿಸುತ್ತಿದೆ.

ಮುಂದೆ ಏನು?

ಇಡಿ ನಿರ್ದೇಶಕರು ತೆರಿಗೆ ಅಧಿಕಾರಿಗಳಲ್ಲಿ ದಾಳಿಯ ಕುರಿತು ವರದಿಯನ್ನು ಕೇಳಿದ್ದಾರೆ. ತೆರಿಗೆ ಅಧಿಕಾರಿಗಳು ಡಿಕೆಶಿ ಮನೆಯ ಹಾಗೂ ಆಸ್ತಿಗಳ ಕುರಿತು ಸಂಪೂರ್ಣ ತನಿಖೆಯಾದ ನಂತರ ವರದಿಯನ್ನು ಸಲ್ಲಿಸಲಿದ್ದಾರೆ. ಕೇವಲ ತೆರಿಗೆಯನ್ನು ತಪ್ಪಿಸುವ ಸಲುವಾಗಿ ತೆರಿಗೆ ನಿಯಮಗಳನ್ನು ಮುರಿದು 30 ಕಂಪನಿಗಳನ್ನು ಪ್ರಾರಂಭಿಸಿದ ಕುರಿತಾಗಿ ದೂರೂ ಕೇಳಿಬರುತ್ತಿದೆ. ಈ ಮೊದಲೇ ಲೋಕಾಯಕ್ತ ಕೇಸ್ ಕೂಡ ಇವರ ಮೇಲೆ ದಾಖಲಾಗಿತ್ತು. ಆದರೆ ನಂತರ ಉಚ್ಛನ್ಯಾಯಾಲಯ ಅದನ್ನು ಖುಲಾಸೆಗೊಳಿಸಿತ್ತು.

Tags

Related Articles

Close